Tag: ರಬ್ಬರ್

  • ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್ ಮಿಶ್ರಣದ ರೇಷನ್

    ಪಡಿತರ ಅಕ್ಕಿಯಲ್ಲಿ ಪ್ಲಾಸ್ಟಿಕ್, ರಬ್ಬರ್ ಮಿಶ್ರಣದ ರೇಷನ್

    ಮಂಡ್ಯ: ಬಡವರ ಹಸಿವು ನೀಗಿಸಲು ಸರ್ಕಾರ ಉಚಿತ ಪಡಿತರ ವಿತರಣೆ ಮಾಡುತ್ತಿದೆ. ಸಾಮಾನ್ಯವಾಗಿ ಸೊಸೈಟಿಗಳು ಕಳಪೆ ಹಾಗೂ ಹುಳು ಬಂದ ಅಕ್ಕಿ ನೀಡುತ್ತಿವೆ ಎಂಬ ಆರೋಪಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಪ್ಲಾಸ್ಟಿಕ್ ಮತ್ತು ರಬ್ಬರ್ ಉಚಿತ ಅಕ್ಕಿ ಜೊತೆ ಮಿಶ್ರಣವಾಗಿರುವ ಪ್ರಕರಣ ಮಂಡ್ಯದಲ್ಲಿ ಬೆಳಕಿಗೆ ಬಂದಿದೆ.

    ಮಂಡ್ಯದ ಮದ್ದೂರು ತಾಲೂಕಿನ ಗುರುದೇವರಹಳ್ಳಿಯಲ್ಲಿ ಬಹುತೇಕ ಜನ ಕೂಲಿಕಾರ್ಮಿಕರು ಇದ್ದಾರೆ. ಒಂದೊತ್ತಿನ ಊಟಕ್ಕೆ ಸರ್ಕಾರ ನೀಡುವ ಉಚಿತ ಪಡಿತರವನ್ನೇ ನಂಬಿಕೊಂಡಿದ್ದಾರೆ. ಆದರೆ ಅವರ ಜೀವಕ್ಕೆ ಆಪತ್ತು ಎದುರು ಮಾಡಿದೆ. ಚಿಕ್ಕರಸಿನಕೆರೆ ಸೊಸೈಟಿಯಿಂದ ತಂದ ಪಡಿತರ ಅಕ್ಕಿಯಲ್ಲಿ ಹಳದಿ ಬಣ್ಣದ ಕಾಳುಗಳು ಮಿಕ್ಸ್ ಆಗಿದ್ದು, ಅಕ್ಕಿ ಬೇಯಿಸಿದಾಗ ಇದು ಪ್ಲಾಸ್ಟಿಕ್ ಮತ್ತು ರಬ್ಬರ್ ಮಿಶ್ರಣದ ಅಕ್ಕಿ ಎಂದು ತಿಳಿದುಬಂದಿದೆ.

    ಪ್ರತಿ ತಿಂಗಳಂತೆ ಈ ತಿಂಗಳು ಕೂಡ ಚಿಕ್ಕರಸಿನಕೆರೆ ಸೊಸೈಟಿಯಿಂದ ರೇಷನ್ ತಂದಿದ್ದರು. ಮನೆಗೆ ಬಂದು ಚೀಲ ಬಿಚ್ಚಿ ನೋಡಿದಾಗ ಅಕ್ಕಿಯ ಜೊತೆ ಹಳದಿ ಬಣ್ಣದ ಕಾಳುಗಳು ಮಿಕ್ಸ್ ಆಗಿರೋದು ಕಂಡು ಬಂದಿದೆ. ಇದನ್ನು ಬೇಯಿಸಿದಾಗ ಜನರಿಗೆ ಇದು ಪ್ಲಾಸ್ಟಿಕ್ ಮತ್ತು ರಬ್ಬರ್ ಮಿಶ್ರಣದ ಅಕ್ಕಿ ಎಂದು ತಿಳಿದಿದೆ.

    ಈ ಹಳದಿ ಕಾಳುಗಳನ್ನು ನೀರಿನಲ್ಲಿ ನೆನೆಸಿದರೆ ಕೆಲವೇ ನಿಮಿಷದಲ್ಲಿ ಬಣ್ಣ ಬಿಟ್ಟುಕೊಳ್ಳುತ್ತಿದೆ. ಈ ಅಕ್ಕಿಯಲ್ಲಿ ಅನ್ನ ಮಾಡಿಕೊಂಡು ತಿಂದರೆ ಆರೋಗ್ಯ ಏನಾಗಬೇಕು? ಪ್ರಾಣಕ್ಕೆ ಹೆಚ್ಚು ಕಡಿಮೆಯಾದರೆ ಯಾರು ಹೊಣೆ ಎಂದು ಗ್ರಾಮದ ಮಹಿಳೆ ಸುನಿತಾ ಪ್ರಶ್ನಿಸಿದ್ದಾರೆ.

    ಬಡವರು ಹಸಿವಿನಿಂದ ಬಳಲಬಾರದು. ಹೊಟ್ಟೆ ತುಂಬಾ ಊಟ ಮಾಡಬೇಕು ಎಂಬ ಕಾರಣದಿಂದ ಸರ್ಕಾರ ಉಚಿತ ಅಕ್ಕಿ ನೀಡುತ್ತಿದೆ. ಆದರೆ ಅಕ್ಕಿಯಲ್ಲಿ ವಿಷವಾಗಿ ಬದಲಾಗುವ ಪ್ಲಾಸ್ಟಿಕ್ ಹಾಗೂ ರಬ್ಬರ್ ಅಂಶಗಳು ಸೇರಿರುವುದು ಜನರನ್ನು ಆತಂಕಕ್ಕೆ ದೂಡಿದೆ.

  • ಮಗನ ಮರ್ಮಾಂಗಕ್ಕೆ ರಬ್ಬರ್ ಕಟ್ಟಿದ ಕ್ರೂರಿ ತಂದೆ

    ಮಗನ ಮರ್ಮಾಂಗಕ್ಕೆ ರಬ್ಬರ್ ಕಟ್ಟಿದ ಕ್ರೂರಿ ತಂದೆ

    ಮೈಸೂರು: ರಾತ್ರಿ ಮಲಗಿದ್ದಾಗ ಮಗ ಹಾಸಿಗೆಯಲ್ಲಿಯೇ ಮೂತ್ರ ಮಾಡುತ್ತಾನೆಂದು ಆತನ ಮರ್ಮಾಂಗಕ್ಕೆ ಕ್ರೂರಿ ತಂದೆಯೊಬ್ಬ ರಬ್ಬರ್ ಕಟ್ಟಿದ್ದಾನೆ.

    ಜಿಲ್ಲೆಯ ಪಿರಿಯಾಪಟ್ಟಣದಲ್ಲಿ ವಾಸವಾಗಿರುವ 50 ವರ್ಷದ ಕೂಲಿ ಕಾರ್ಮಿಕ ವ್ಯಕ್ತಿ ತನ್ನ 5 ವರ್ಷದ ಸ್ವಂತ ಮಗನಿಗೆ ಚಿತ್ರಹಿಂಸೆ ನೀಡಿದ್ದಾನೆ. ಒಂದು ವಾರದ ಹಿಂದೆ ನಡೆದಿರುವ ಪ್ರಕರಣ ಇದಾಗಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಬಾಲಕ ಅಂಗನವಾಡಿ ಶಾಲೆಗೆ ಬಂದಾಗ ಆತನ ಸ್ಥಿತಿ ನೋಡಿದ ಸಿಬ್ಬಂದಿ ಆತನನ್ನು ವಿಚಾರಿಸಿದ್ದಾರೆ. ಈ ವೇಳೆ ಮಗು ತನ್ನ ತಂದೆಯ ಕ್ರೂರತ್ವವನ್ನು ಬಿಚ್ಚಿಟ್ಟಿದೆ. ಮಹಿಳಾ ಸಾಂತ್ವನ ಸಹಾಯವಾಣಿ ಸಿಬ್ಬಂದಿ ಬಾಲಕನ ನೆರವಿಗೆ ಬಂದಿದ್ದು, ಆತನಿಗೆ ಸೂಕ್ತ ಚಿಕಿತ್ಸೆ ಕೊಡಿಸಿದ್ದಾರೆ. ಚಿಕಿತ್ಸೆಯ ಬಳಿಕ ಬಾಲಕನನ್ನು ಬಾಲಮಂದಿರ ಆಶ್ರಯದಲ್ಲಿ ಇರಿಸಲಾಗಿದೆ.

    ಬಾಲಕನ ತಂದೆ ವಿರುದ್ಧ ಬಾಲ ನ್ಯಾಯ ಕಾಯ್ದೆ ಅಡಿ ದೂರು ದಾಖಲಿಸಲಾಗಿದೆ.

    ಇದನ್ನೂ ಓದಿ:ಗಂಡನ ಮರ್ಮಾಂಗ ಕತ್ತರಿಸಿ ಪರ್ಸಲ್ಲಿ ಹಾಕಿ ತವರು ಮನೆಗೆ ಹೋಗ್ತಿದ್ದ ಪತ್ನಿ!