Tag: ರಬಿನ್ ಉತ್ತಪ್ಪ

  • ಕೊಹ್ಲಿಗೆ ‘ಲಿಟಲ್ ಬಿಸ್ಕತ್’ ಎಂದ ಎಬಿಡಿ

    ಕೊಹ್ಲಿಗೆ ‘ಲಿಟಲ್ ಬಿಸ್ಕತ್’ ಎಂದ ಎಬಿಡಿ

    ಬೆಂಗಳೂರು: ಐಪಿಎಲ್ 12ನೇ ಆವೃತ್ತಿಯ ಭಾಗವಾಗಿ ಆರ್ ಸಿಬಿ, ಕೆಕೆಆರ್ ನಡುವಿನ ಪಂದ್ಯದಲ್ಲಿ ಬೆಂಗಳೂರು ತಂಡ ಗೆದ್ದು ಸರಣಿಯಲ್ಲಿ 2ನೇ ಗೆಲುವು ಪಡೆದಿದೆ. ಈ ಸಂತಸದಲ್ಲಿ ತಂಡದ ಗೆಲುವಿಗೆ ಕಾರಣರಾದ ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಎಬಿ ಡಿವಿಲಿಯರ್ಸ್ ಟ್ವೀಟ್ ಮಾಡಿದ್ದಾರೆ.

    ಈಡನ್ ಗಾರ್ಡನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ ಶತಕ ಸಿಡಿಸಿ ಮಿಂಚಿದ್ದರು. ಐಪಿಎಲ್ ನಲ್ಲಿ ಕೊಹ್ಲಿ ಸಿಡಿಸಿದ 5ನೇ ಶತಕ ಇದಾಗಿದ್ದು, ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದರು. ಆ ಮೂಲಕ ತಂಡದ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಸಿದ್ದಾರೆ.

    ಈ ಕುರಿತು ಟ್ವೀಟ್ ಮಾಡಿರುವ ಎಬಿಡಿ, ವಿರಾಟ್! ಯೂ ಲಿಟಲ್ ಬಿಸ್ಕತ್. ಮೋಯಿನ್ ಅಲಿ ಸೇರಿದಂತೆ ಬೌಲರ್ ಗಳು ಹೆಚ್ಚಿನ ಶ್ರಮವಹಿಸುವಂತೆ ಮಾಡಿದೆ. ಉತ್ತಮ ಪ್ರದರ್ಶನ ನೀಡಿದ್ದೀರಿ ಎಂದು ಟ್ವೀಟ್ ಮಾಡಿದ್ದಾರೆ. ಇತ್ತ ಎಬಿಡಿ ಪ್ರಶಂಸೆಗೆ ಪ್ರತಿಕ್ರಿಯೆ ನೀಡಿರುವ ಅಭಿಮಾನಿಗಳು, ಕೊಹ್ಲಿ ನಿಕ್ ನೇಮ್ ಚೆನ್ನಾಗಿದೆ. ಲಿಟಲ್ ಬಿಸ್ಕತ್ ರಾಕಿಂಗ್ ಪ್ರದರ್ಶನ ಎಂದು ಕಾಮೆಂಟ್ ಮಾಡಿದ್ದಾರೆ.

    ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ತೋರಿದ ಕೊಹ್ಲಿ, ಬ್ಯಾಟಿಂಗ್ ಆರಂಭಿಸಿವ ವೇಳೆಗೆ ರಕ್ಷಣಾತ್ಮಕವಾಗಿ ಆಡಿ ಬಳಿಕ ಬೌಂಡರಿ, ಸಿಕ್ಸರ್ ಗಳೊಂದಿಗೆ ಮಿಂಚಿದರು. ಪಂದ್ಯದಲ್ಲಿ ಬೆಂಗಳೂರು 10 ರನ್ ಗೆಲುವು ಪಡೆದರೆ, ಕೊಹ್ಲಿ 58 ಎಸೆತಗಳಲ್ಲಿ 9 ಬೌಂಡರಿ, 4 ಸಿಕ್ಸರ್ ಗಳೊಂದಿಗೆ 100 ರನ್ ಗಳಿಸಿದರು. ಅಲ್ಲದೇ ಪಂದ್ಯದಲ್ಲಿ ಕೊಹ್ಲಿಗೆ ಉತ್ತಮ ಸಾಥ್ ನೀಡಿದ ಮೋಯಿನ್ ಅಲಿ 66 ರನ್(28 ಎಸೆತ, 5 ಬೌಂಡರಿ, 6 ಸಿಕ್ಸರ್) ಸಿಡಿಸಿ ಮಿಂಚಿದರು.

    https://twitter.com/Dtkp15/status/1119325777172938752

    ಇತ್ತ ಪಂದ್ಯದಲ್ಲಿ ಆರ್ ಸಿಬಿ ಗೆಲ್ಲಲು ಕಾರಣ ರಾಬಿನ್ ಉತ್ತಪ್ಪ ಎಂದು ಕೆಕೆಆರ್ ಅಭಿಮಾನಿಗಳು ಟ್ರೋಲ್ ಮಾಡಿದ್ದಾರೆ. ಪಂದ್ಯದಲ್ಲಿ ರಬಿನ್ ನಿಧಾನಗತಿ ಬ್ಯಾಟಿಂಗ್ ನಡೆಸಿದ್ದೆ ಅಭಿಮಾನಿಗಳ ಆರೋಪಕ್ಕೆ ಕಾರಣವಾಗಿದ್ದು, 20 ಎಸೆತ ಎದುರಿಸಿದ್ದ ರಬಿನ್ ಕೇವಲ 9 ರನ್ ಗಳಿಸಿದ್ರು. ಇದು ತಂಡದ ಮೇಲೆ ಒತ್ತಡ ಹೆಚ್ಚಾಗಲು ಕಾರಣವಾಗಿತ್ತು.