Tag: ರಫೆಲ್ ಯುದ್ಧ ವಿಮಾನ

  • ರಫೆಲ್ ಯುದ್ಧ ವಿಮಾನ ಖರೀದಿ – ಸುಸೇನ್ ಗುಪ್ತಾ  ಮೇಲೆ ಲಂಚ ಸ್ವೀಕಾರ ಆರೋಪ

    ರಫೆಲ್ ಯುದ್ಧ ವಿಮಾನ ಖರೀದಿ – ಸುಸೇನ್ ಗುಪ್ತಾ ಮೇಲೆ ಲಂಚ ಸ್ವೀಕಾರ ಆರೋಪ

    ನವದೆಹಲಿ: ಬಹುಕೋಟಿ ರಫೆಲ್ ಯುದ್ಧ ವಿಮಾನ ಖರೀದಿಗಾಗಿ ಮಧ್ಯವರ್ತಿ ಸುಸೇನ್ ಗುಪ್ತಾಗೆ ಫ್ರಾನ್ಸ್ ನ ಡಸಾಲ್ಟ್ ಏವಿಯೇಷನ್ 64 ಕೋಟಿ ರೂಪಾಯಿ ಲಂಚ ನೀಡಿತ್ತು ಎಂಬ ಸ್ಫೋಟಕ ವರದಿಯನ್ನು ಫ್ರಾನ್ಸ್ ನ ಮೀಡಿಯಾಪಾರ್ಟ್ ಸಂಸ್ಥೆ ಬಿಚ್ಚಿಟ್ಟಿದೆ.

    ಈ ಲಂಚ ಸಂದಾಯದ ಬಗ್ಗೆ ಮಾರಿಷಸ್‍ನ ಅಟಾರ್ನಿ ಜನರಲ್ ಅವರೇ ಖುದ್ದು ಪತ್ರ ಬರೆದಿದ್ದರೂ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ತನಿಖೆ ನಡೆಸಲಿಲ್ಲ ಎಂಬ ಅಂಶ ವರದಿಯಲ್ಲಿ ಉಲ್ಲೇಖವಾಗಿದೆ. 36 ರಫೆಲ್ ಯುದ್ಧ ವಿಮಾನಗಳ ಡೀಲ್ ಕುದುರಿಸುವ ಸಲುವಾಗಿ 2009ರಿಂದ 2012ರ ಅವಧಿಯಲ್ಲಿ ಮಾರಿಷಸ್‍ನಲ್ಲಿರುವ ಗುಪ್ತಾಗೆ ಸೇರಿದ ಕಂಪನಿ ಇಂಟರ್‍ಸ್ಟೆಲರ್ ಮೂಲಕ ಕಮಿಷನ್ ಪಾವತಿ ಮಾಡಲಾಗಿತ್ತು ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಇದನ್ನೂ ಓದಿ: 60 ಸಾವಿರ ಕೋಟಿ ರಫೇಲ್ ಡೀಲ್‍ನಲ್ಲಿ ಕೋಟಿ ಕೋಟಿ ಗಿಫ್ಟ್ ಸಿಕ್ಕಿದ್ಯಾರಿಗೆ – ಕಾಂಗ್ರೆಸ್ ಪ್ರಶ್ನೆ

    ಬೋಗಸ್ ಬಿಲ್‍ಗಳ ಮೂಲಕ ಈ ಹಣ ವರ್ಗಾವಣೆ ಮಾಡಲಾಗಿತ್ತು. ರಫೆಲ್ ಡೀಲ್ ಮೇಲೆ ಪ್ರಭಾವ ಬೀರುವ ಸಲುವಾಗಿ ಫ್ರಾನ್ಸ್ ಥೇಲ್ಸ್ ಕಂಪನಿ ಕೂಡಾ ಗುಪ್ತಾಗೆ ಕಮಿಷನ್ ಸಂದಾಯ ಮಾಡಿತ್ತು. 2018ರಲ್ಲೇ ಈ ಅಕ್ರಮದ ಬಗ್ಗೆ ದಾಖಲೆಗಳಿದ್ದರೂ ಸಿಬಿಐ ಮತ್ತು ಇಡಿ ತನಿಖೆ ನಡೆಸಲಿಲ್ಲ ಎಂದು ಮೀಡಿಯಾ ಪಾರ್ಟ್ ವರದಿಯಲ್ಲಿ ಉಲ್ಲೇಖೆಸಿದೆ. ಇದನ್ನೂ ಓದಿ: ರಫೇಲ್ ಡೀಲ್‍ನಲ್ಲಿ ನಿಮಗೆ ಎಷ್ಟು ಕಮೀಷನ್ ಸಿಕ್ಕಿದೆ: ಮೋದಿಗೆ ಸಿದ್ದರಾಮಯ್ಯ ಪ್ರಶ್ನೆ

    ಈ ಹಿಂದೆ ಕೂಡ  ಮೀಡಿಯಾಪಾರ್ಟ್ ವರದಿ ಮಾಡಿರುವ ಪ್ರಕಾರ, 2016ರಲ್ಲಿ ಭಾರತ ಮತ್ತು ಫ್ರಾನ್ಸ್ ನಡುವೆ ಯುದ್ಧ ವಿಮಾನ ಖರೀದಿ ವ್ಯವಹಾರ ನಡೆದಿತ್ತು. ಆ ವೇಳೆ ಫ್ರಾನ್ಸಿನ ಡಸಾಲ್ಟ್ ಏವಿಯೇಷನ್ ಭಾರತದ ಓರ್ವ ಮಧ್ಯವರ್ತಿಗೆ 1.1 ಮಿಲಿಯನ್ ಯುರೋ ಗಿಫ್ಟ್ ರೂಪದಲ್ಲಿ ನೀಡಿದೆ. 2017ರ ಡಸಾಲ್ಟ್ ಸಮೂಹದ ಲೆಕ್ಕ ಪತ್ರಗಳನ್ನ ಪರಿಶೀಲಿಸಿದಾಗ ಮಧ್ಯವರ್ತಿ ಗ್ರಾಹಕರಿಗೆ ಗಿಫ್ಟ್ ರೂಪದಲ್ಲಿ 1.1 ಮಿಲಿಯನ್ ವರ್ಗಾವಣೆ ಆಗಿರೋದು ಬೆಳಕಿಗೆ ಬಂದಿದೆ ಎಂದು ತಿಳಿಸಿತ್ತು. ಇದನ್ನೂ ಓದಿ: ಕೈ ಅವರದು, ಕಾಲು ಅವರದು, ಎಲ್ಲಾದರೂ ಇಟ್ಟುಕೊಳ್ಳಲಿ: ಹ್ಯಾರಿಸ್

  • ಮೋದಿ ಕಳ್ಳನೆಂದು ಫ್ರಾನ್ಸ್ ಮಾಜಿ ರಾಷ್ಟ್ರಾಧ್ಯಕ್ಷ ಕರೆದಿದ್ರು- ರಾಹುಲ್ ಗಾಂಧಿ

    ಮೋದಿ ಕಳ್ಳನೆಂದು ಫ್ರಾನ್ಸ್ ಮಾಜಿ ರಾಷ್ಟ್ರಾಧ್ಯಕ್ಷ ಕರೆದಿದ್ರು- ರಾಹುಲ್ ಗಾಂಧಿ

    ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಒಬ್ಬ ಕಳ್ಳ ಅಂತಾ ಫ್ರಾನ್ಸ್ ನ ಮಾಜಿ ರಾಷ್ಟ್ರಾಧ್ಯಕ್ಷ ಫ್ರಾಂಕೋಯಿಸ್ ಹೊಲ್ಯಾಂಡ್ ಕರೆದಿದ್ದರು ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋಲ್ಯಾಂಡ್ ಅವರ ಹೇಳಿಕೆಗೆ ಮೋದಿ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ. ಹೀಗಾಗಿ ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿದೆ ಎನ್ನವುದು ಸತ್ಯ. ರಫೆಲ್ ವಿಮಾನ ಖರೀದಿ ದೇಶ ಭದ್ರತೆ, ಸೈನಿಕರ ಭವಿಷ್ಯ, ವಾಯುಪಡೆಗೆ ಸಂಬಂಧಿಸಿದ್ದಾಗಿದೆ. ಆದರೂ ಯಾವುದೇ ಮಾಹಿತಿ ನೀಡದೆ ಕೇಂದ್ರ ಸರ್ಕಾರ ಎಲ್ಲವನ್ನೂ ಮುಚ್ಚಿಡುತ್ತಿದೆ ಎಂದು ಆರೋಪಿಸಿದರು.

    ರಫೆಲ್ ವಿಮಾನ ಖರೀದಿಯಲ್ಲಿ ಪ್ರಧಾನಿ ಮೋದಿ ಉದ್ಯಮಿ ಅನಿಲ್ ಅಂಬಾನಿಗೆ 30 ಸಾವಿರ ಕೋಟಿ ರೂ.ವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹೀಗಾಗಿ ಅನಿಲ್ ಅವರ ಆಸ್ತಿಯ ಮೊತ್ತ 45 ಸಾವಿರ ಕೋಟಿ ರೂ. ಗೆ ಏರಿಕೆಯಾಗಿದೆ ಎಂದು ತಿಳಿಸಿದರು.

    ರಫೆಲ್ ವಿಮಾನ ಖರೀದಿ ಒಪ್ಪಂದಕ್ಕೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಸಚಿವ ಅರುಣ್ ಜೆಟ್ಲಿ ಅವರು ಸಹಿ ಹಾಕಿಲ್ಲ. ಇತ್ತ ನಿರ್ಮಲಾ ಸೀತಾರಾಮನ್ ಅವರು ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಪ್ರಯತ್ನಿಸುತ್ತಿದ್ದಾರೆ. ರಕ್ಷಣಾ ಸಚಿವೆ ಸೇರಿದಂತೆ ಅನೇಕ ಅಧಿಕಾರಿಗಳು, ಬಿಜೆಪಿ ನಾಯಕರು ಸುಳ್ಳು ಮಾಹಿತಿ ನೀಡುತ್ತಿದ್ದಾರೆ. ಯಾರನ್ನು ರಕ್ಷಿಸಲು ಹೀಗೆ ಹೇಳುತ್ತಿದ್ದಾರೆ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv