Tag: ರಫೆಲ್

  • Aero India 2023: ಇಂದು ಕೊನೆಯ ದಿನದ ಏರ್‌ಶೋ ಕಣ್ತುಂಬಿಕೊಳ್ಳಿ

    Aero India 2023: ಇಂದು ಕೊನೆಯ ದಿನದ ಏರ್‌ಶೋ ಕಣ್ತುಂಬಿಕೊಳ್ಳಿ

    ಬೆಂಗಳೂರು: ಏರ್ ಶೋ (Air Show) ಅಂದ್ರೆ ಅದರ ಮಜಾನೇ ಬೇರೆ. ಮುಗಿಲೆತ್ತರಕ್ಕೆ ಹಾರಿ ಬಗೆ ಬಗೆಯ ಸ್ಟಂಟ್ ಮಾಡೋ ಜೆಟ್‌ಗಳ (Jets) ಹಾರಾಟ ನೋಡೋದೆ ಒಂಥರಾ ಖುಷಿ. ಇಷ್ಟು ದಿನ ಬರೀ ಗೆಸ್ಟ್‌ಗಳಿಗೆ ಸೀಮಿತವಾಗಿದ್ದ ಏರ್ ಶೋನಲ್ಲಿ ನಾಲ್ಕನೇ ದಿನವಾದ ಗುರುವಾರ ಸಾಮಾನ್ಯ ಜನರು ಸಹ ಸಖತ್ ಎಂಜಾಯ್ ಮಾಡಿದ್ದಾರೆ.

    ಏರೋ ಇಂಡಿಯಾ 2023 (Aero India 2023) ಶುಕ್ರವಾರ ಅಂತಿಮ ದಿನಕ್ಕೆ ಕಾಲಿಟ್ಟಿದ್ದು, ಜನಸಾಮಾನ್ಯರಿಗೆ ಕಣ್ತುಂಬಿಕೊಳ್ಳಲು ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯ ಜನರು ಧಾವಿಸುವ ನಿರೀಕ್ಷೆಯಿದೆ. ಏರೋ ಇಂಡಿಯಾ ಪ್ರದರ್ಶನ ವೀಕ್ಷಿಸಲು ತುದಿಗಾಲಲ್ಲಿ ನಿಂತಿದ್ದ ಲಕ್ಷಾಂತರ ಜನರು ಶುಕ್ರವಾರ (ಫೆ.17) ಬೆಳ್ಳಂಬೆಳಗ್ಗೆ ಯಲಹಂಕ ವಾಯುನೆಲೆಯತ್ತ ಬರಲು ಶುರು ಮಾಡಿದ್ದಾರೆ. ಇದನ್ನೂ ಓದಿ: ಯುದ್ಧ ವಿಮಾನದ ಹಿಂದಿದ್ದ ಹನುಮಂತನ ಚಿತ್ರ ತೆಗೆದ ಹೆಚ್‌ಎಎಲ್

    ಜನಸಾಮಾನ್ಯರು ಹಾಗೂ ಪಾಸ್ ಹೋಲ್ಡರ್‌ಗಳಿಗಾಗಿಯೇ 2 ವೈಮಾನಿಕ ಪ್ರದರ್ಶನಗಳ ಆಯೋಜನೆ ಮಾಡಲಾಗಿದೆ. ಬೆಳಗ್ಗೆ 9.30ರಿಂದ 11ರ ವರೆಗೆ ಒಂದು ಪ್ರದರ್ಶನ, ಮಧ್ಯಾಹ್ನ 2 ರಿಂದ 3.30ರ ವರೆಗೆ ಮತ್ತೊಂದು ವೈಮಾನಿಕ ಪ್ರದರ್ಶನ ಆಯೋಜನೆ ಮಾಡಲಾಗಿದೆ. ಇದನ್ನೂ ಓದಿ: Aero India-2023 ಏರ್‌ಶೋಗೆ ಪ್ರಧಾನಿ ಮೋದಿ ಅದ್ಧೂರಿ ಚಾಲನೆ

    ಸಾರಂಗ್, ಸೂರ್ಯಕಿರಣ್ ಚಮತ್ಕಾರ: ಗುರುವಾರ ಏರ್ ಶೋಗೆ ಬಂದ ಜನರು ಯುದ್ಧ ವಿಮಾನಗಳ ಹಾರಾಟ ಕಂಡು ಖುಷ್ ಆಗಿದ್ರು. ಜೆಟ್‌ಗಳ ಮುಂದೆ ಸೆಲ್ಫಿ ಕ್ಲಿಕ್ಕಿಸಿಕೊಂಡ ಜನರು, ಆಗಸದಲ್ಲಿ ಲೋಹದ ಹಕ್ಕಿಗಳ ನೋಡಿ ಖುಷಿ ಪಟ್ರು. ಸೂರ್ಯ ಕಿರಣ್, ಸಾರಂಗ್, ರಫೆಲ್‌ಗಳ ಸ್ಟಂಟ್ ಜನರನ್ನ ಮಂತ್ರಮುಗ್ಧವಾಗಿಸಿತ್ತು.

    ಏರ್ ಶೋನಲ್ಲಿರೋ ಸ್ಟಾಲ್‌ಗಳಿಗೂ ಜನರು ಭೇಟಿ ನೀಡಿ ಅಲ್ಲಿನ ಸಾಧನಗಳನ್ನ ಕಣ್ತುಂಬಿಕೊಂಡರು. ಏರ್ ಶೋ ನಡೆಯುವ ಯಲಹಂಕ ವಾಯುನೆಲೆಯಲ್ಲಿ ಎತ್ತ ನೋಡಿದ್ರೂ ಜನಸಾಗರವೇ ತುಂಬಿ ತುಳುಕುತ್ತಿತ್ತು. ಕೊನೆಯ ದಿನವಾದ ಶುಕ್ರವಾರವೂ ಎರಡು ಏರ್ ಶೋಗಳನ್ನ ಆಯೋಜನೆ ಮಾಡಲಾಗಿದೆ. ಸಾರ್ವಜನಿಕರ ವೀಕ್ಷಣೆಗೆ ಹಾಗೂ ಪಾರ್ಕಿಂಗ್ ವ್ಯವಸ್ಥೆಗೂ ವ್ಯವಸ್ಥೆ ಮಾಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

    ಕನಸು ನನಸು.. ಗೇಮ್‌ ಚೇಂಜರ್‌ ರಫೇಲ್‌ ಭಾರತದಲ್ಲಿ ಲ್ಯಾಂಡ್‌

    ಅಂಬಾಲ: ವಾಯು ಸೇನೆಗೆ ಬಲ ತುಂಬಬಲ್ಲ ಅತ್ಯಾಧುನಿಕ ಗೇಮ್‌ ಚೇಂಜರ್‌ ಯುದ್ಧ ವಿಮಾನ ರಫೇಲ್‌ ಭಾರತದಲ್ಲಿ ಲ್ಯಾಂಡ್‌ ಆಗಿದೆ. 5 ರಫೇಲ್‌ ವಿಮಾನಗಳು ಹರ್ಯಾಣದ ಅಂಬಾಲ ವಾಯುನೆಲೆಯಲ್ಲಿ ಮಧ್ಯಾಹ್ನ 3.10ರ ವೇಳೆಗೆ ಲ್ಯಾಂಡ್‌ ಆಯ್ತು.

    ಯುದ್ಧ ವಿಮಾನಗಳು ಆಗಮಿಸುವ ಹಿನ್ನೆಲೆ ಇವುಗಳ ಸ್ವಾಗತಕ್ಕೆ ಹರ್ಯಾಣದಲ್ಲಿರುವ ಅಂಬಾಲ ವಾಯುನೆಲೆ ಮೊದಲೇ ಸಜ್ಜುಗೊಂಡಿತ್ತು. ರಫೇಲ್‌ ಭಾರತದ ವಾಯುಸೀಮೆಯನ್ನು ಪ್ರವೇಶಿಸುತ್ತಿದ್ದಂತೆ ಎರಡು ಸುಖೋಯ್‌ ವಿಮಾನಗಳು ಸ್ವಾಗತಿಸಿ ಬೆಂಗಾವಲಾಗಿ ಅಂಬಾಲಕ್ಕೆ ಕರೆದುಕೊಂಡು ಬಂದಿತ್ತು.

    ಕೊರೊನಾ ಇರುವುದರಿಂದ ಹಾಗೂ ಬಿಗಿ ಭದ್ರತೆ ಕೈಗೊಳ್ಳುವ ಉದ್ದೇಶದಿಂದ ಅಂಬಾಲದ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಅಂಬಾಲ ವಾಯುನೆಲೆಗೆ ಹೊಂದಿಕೊಂಡಿರುವ ನಾಲ್ಕು ಹಳ್ಳಿಗಳಲ್ಲಿ ಸೆಕ್ಷನ್‌ 144 ಜಾರಿಗೊಂಡಿದೆ.

    ಮನೆಯ ಮೇಲ್ಛಾವಣೆಯಲ್ಲಿ ಸೇರುವುದು ಹಾಗೂ ಯುದ್ಧ ವಿಮಾನಗಳ ಫೋಟೋ ತೆಗೆಯುವುದನ್ನ ಈ ಸುತ್ತ ಮುತ್ತಲ ಪ್ರದೇಶದಲ್ಲಿ ನಿಷೇಧಿಸಲಾಗಿದೆ. ಇದನ್ನೂ ಓದಿ: ರಫೇಲ್‌ ಭಾರತಕ್ಕೆ ಬರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಕಾಶ್ಮೀರದ ಹಿಲಾಲ್‌ ಅಹ್ಮದ್

    ಭಾರತ ಫ್ರಾನ್ಸ್‌ನ ಡಸಾಲ್ಟ್‌ ಸಂಸ್ಥೆ ಜೊತೆ ಒಟ್ಟು 36 ರಫೇಲ್‌ ಯುದ್ಧ ವಿಮಾನಗಳ ಖರೀದಿಸುವ ಸಂಬಂಧ ಒಪ್ಪಂದ ನಡೆದಿತ್ತು. ಇದೀಗ ಈ ಪೈಕಿ ಮೊದಲ ಬ್ಯಾಚ್‌ನ ಐದು ವಿಮಾನಗಳು ಸೋಮವಾರ ಫ್ರಾನ್ಸ್‌ನಿಂದ ಟೇಕಾಫ್‌ ಆಗಿ ಮಂಗಳವಾರ ಯುಎಇಯಲ್ಲಿರುವ ದಫ್ರಾ ವಾಯುನೆಲೆಯಲ್ಲಿ ಲ್ಯಾಂಡ್‌ ಆಗಿತ್ತು. ಅಲ್ಲಿಂದ ಹೊರಟ ವಿಮಾನ ಈಗ ಭಾರತದಲ್ಲಿ ಲ್ಯಾಂಡ್‌ ಆಗಿದೆ.

    ಸ್ವದೇಶಿ ಐಎನ್‌ಎಸ್‌ ನೌಕೆ ರಫೇಲ್‌ ಲೀಡರ್‌ಗೆ ಭಾರತಕ್ಕೆ ಸ್ವಾಗತ ಎಂದು ಹೇಳಿ ಹ್ಯಾಪಿ ಲ್ಯಾಂಡಿಂಗ್‌ ಸಂದೇಶ ಕಳುಹಿಸಿತು. ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಅವರು ವಿಡಿಯೋ ಟ್ವೀಟ್‌ ಮಾಡಿ ಸ್ವಾಗತ ಕೋರಿದ್ದರು. ಇದನ್ನೂ ಓದಿ: ರಫೇಲ್‌ ಲ್ಯಾಂಡ್‌ ಆಗಿದ್ದ ವಾಯುನೆಲೆಯ ಸಮೀಪವೇ ಬಿತ್ತು ಇರಾನ್‌ ಕ್ಷಿಪಣಿ

    2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್‌ ವಿಮಾನಗಳನ್ನು(28 ಸಿಂಗಲ್‌ ಸೀಟರ್‌, 8 ಡಬಲ್‌ ಸೀಟರ್‌) ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್‌ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್‌ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್‌ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ  ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ. ಎಲ್ಲ ವಿಮಾನಗಳು 2021ರ ಡಿಸೆಂಬರ್‌ ಕೊನೆಯಲ್ಲಿ ಭಾರತಕ್ಕೆ ಹಸ್ತಾಂತರವಾಗಲಿದೆ.

  • ಕೇಕ್‍ನಲ್ಲಿ ಅರಳಿದ ವಿಂಗ್ ಕಮಾಂಡರ್ ಅಭಿನಂದನ್

    ಕೇಕ್‍ನಲ್ಲಿ ಅರಳಿದ ವಿಂಗ್ ಕಮಾಂಡರ್ ಅಭಿನಂದನ್

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಕ್ರಿಸ್ಮಸ್ ಸೆಲೆಬ್ರೆಷನ್ ಶುರುವಾಗಿದೆ. ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ ಕೇಕ್‍ಗಳ ಲೋಕ ಧರೆಗಿಳಿದಿದೆ. ವಿಶೇಷ ಎಂದರೆ ಕೇಕ್‍ನಲ್ಲಿ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪ್ರತಿರೂಪದ ಮೂಡಿದೆ.

    ನಗರದ ವಿಠಲ್ ಮಲ್ಯ ರಸ್ತೆಯಲ್ಲಿರುವ ಸೆಂಟ್ ಜೋಸೆಫ್ ಹೈಸ್ಕೂಲ್ ಗ್ರೌಂಡ್‍ನಲ್ಲಿ 45ನೇ ವರ್ಷದ ಕೇಕ್ ಶೋ ಆಯೋಜಿಸಿದ್ದು, ತನ್ನ ವಿಶಿಷ್ಟತೆಯ ಮೂಲವೇ ಗಮನ ಸೆಳೆಯುತ್ತಿದೆ. ಜೊತೆಗೆ ರಾಷ್ಟ್ರಭಕ್ತಿಯನ್ನು ಮೆರೆಯುತ್ತಿದೆ.

    ಈ ಶೋನಲ್ಲಿ ರಕ್ಷಣಾ ವಲಯಕ್ಕೆ ಸಂಬಂಧಿಸಿದಂತೆ ಮಾಡಿಕೊಂಡ ರಫೇಲ್ ಯುದ್ಧ ವಿಮಾನ, ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಪ್ರತಿರೂಪದ ಮೂಡಿದ್ದು, ಎಲ್ಲರ ಗಮನ ತನತ್ತ ಸೆಳೆಯುತ್ತಿದೆ. ಇದನ್ನೂ ಓದಿ: ಬೆಂಗ್ಳೂರಿನಲ್ಲಿ ಧರೆಗಿಳಿದ ಕೇಕ್‍ಗಳ ಲೋಕ

    ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪವನ್ನು 3.5 ಅಡಿ ಎತ್ತರ, 2 ಫೀಟ್ ಅಗಲ ಹಾಗೂ 2 ಫೀಟ್ ಉದ್ದದಲ್ಲಿ 225 ಕೆಜಿ ಕೇಕ್‍ನಲ್ಲಿ ತಯಾರಿಸಲಾಗಿದೆ. ಹಾಗೆಯೇ ರಫೇಲ್ ಯುದ್ಧ ವಿಮಾನ 4 ಅಡಿ ಉದ್ದ, 3 ಅಡಿ ಅಗಲ, 1.5 ಫೀಟ್ ಎತ್ತರ ಹಾಗೂ 125 ಕೆ.ಜಿ ಕೇಕ್ ನಲ್ಲಿ ತಯಾರಾಗಿದೆ.

    ಜನರು ರಫೇಲ್ ಯುದ್ಧ ವಿಮಾನ ಹಾಗೂ ವಿಂಗ್ ಕಮಾಂಡರ್ ಅಭಿನಂದನ್ ಪ್ರತಿರೂಪದ ಕೇಕ್ ಎದುರು ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡು ಎಂಜಾಯ್ ಮಾಡುತ್ತಿದ್ದಾರೆ.

  • ರಾಹುಲ್ ಗಾಂಧಿ ರಫೇಲ್ ಅಂದ್ರೆ ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ: ಸಚಿವ ಹೆಗ್ಡೆ

    ರಾಹುಲ್ ಗಾಂಧಿ ರಫೇಲ್ ಅಂದ್ರೆ ಮೂರು ಚಕ್ರದ ಸೈಕಲ್ ಅಂದುಕೊಂಡಿದ್ದಾರೆ: ಸಚಿವ ಹೆಗ್ಡೆ

    ಕಾರವಾರ: ರಾಹುಲ್ ಗಾಂಧಿ ರಫೇಲ್ ಯುದ್ಧ ವಿಮಾನವನ್ನು ಮೂರು ಚಕ್ರದ ಸೈಕಲ್ ಎಂದು ಕೊಂಡಿದ್ದಾರೆ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗ್ಡೆ ವ್ಯಂಗ್ಯವಾಡಿದ್ದಾರೆ.

    ಇಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ನಂತರ ಮಾಧ್ಯಮದೊಂದಿಗೆ ಮಾತನಾಡಿದ ಅನಂತ್ ಕುಮಾರ್ ಹೆಗಡೆ, “ರಾಹುಲ್ ಪಾಂಡಿತ್ಯದ ಬಗ್ಗೆ ತಾನು ಚರ್ಚೆ ಮಾಡಲು ಬರುವುದಿಲ್ಲ. ಈ ಬಾರಿ ಚುನಾವಣೆಯಲ್ಲಿ ನಾವು ಅಭಿವೃದ್ಧಿ ಮತ್ತು ದೇಶ ರಕ್ಷಣೆ ವಿಚಾರವನ್ನು ಇಟ್ಟುಕೊಂಡು ಜನರ ಮುಂದೆ ಹೋಗುತ್ತೇವೆ” ಎಂದು ತಿಳಿಸಿದರು.

    ತಮ್ಮ ಪಕ್ಷ ಸೈನ್ಯವನ್ನು ಇಟ್ಟುಕೊಂಡು ಚುನಾವಣೆ ಎದುರಿಸುತ್ತಿಲ್ಲ. ದೇಶದ ಸೈನ್ಯವನ್ನು ಪ್ರಶ್ನೆ ಮಾಡುವ ನೈತಿಕತೆ ಯಾರಿಗೂ ಇಲ್ಲ. ರಾಜಕೀಯ ಇಟ್ಟುಕೊಂಡು ಯಾರೇ ಚರ್ಚೆ ಮಾಡಿ, ಸೈನ್ಯಕ್ಕೆ ಬಿಜೆಪಿ ನೇತೃತ್ವದ ಸರ್ಕಾರ ಸಂಪೂರ್ಣ ಅಧಿಕಾರವನ್ನು ಕೊಟ್ಟಿದೆ ಎಂದು ಅನಂತ್ ಕುಮಾರ್ ಹೆಗಡೆ ಹೇಳಿದರು.

    ಉತ್ತರ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ತನ್ನ ವಿರುದ್ಧ ಸಮರ್ಥ ಅಭ್ಯರ್ಥಿಯನ್ನು ನಿಲ್ಲಿಸುತ್ತಾರೆ ಎನ್ನುವ ವಿಶ್ವಾಸ ತನಗಿದೆ ಎಂದರು. ಇದಲ್ಲದೇ ಸಾಮಾಜಿಕ ಜಾಲತಾಣದಲ್ಲಿ ತನ್ನ ವಿರುದ್ಧ ಟೀಕೆ ಮಾಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅನಂತ್ ಎಲ್ಲರಿಗೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಸ್ವಾತಂತ್ರ್ಯವಿದೆ. ಆದರೆ ಚುನಾವಣೆ ಆಯೋಗ ಎಲ್ಲವನ್ನು ವೀಕ್ಷಿಸುತ್ತಿದೆ ಎಂದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv