Tag: ರನ್ಯಾರಾವ್‌ ಗೋಲ್ಡ್‌ ಸ್ಮಗ್ಲಿಂಗ್‌ ಕೇಸ್‌

  • ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಡಿಆರ್‌ಐ ಅಧಿಕಾರಿಗಳಿಂದ ರಾಮಚಂದ್ರ ರಾವ್ ವಿಚಾರಣೆ

    ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ – ಡಿಆರ್‌ಐ ಅಧಿಕಾರಿಗಳಿಂದ ರಾಮಚಂದ್ರ ರಾವ್ ವಿಚಾರಣೆ

    – ಮತ್ತೆ ನೋಟಿಸ್ ನೀಡಲು ತಯಾರಿ

    ಬೆಂಗಳೂರು: ಸ್ಯಾಂಡಲ್‌ವುಡ್ ನಟಿ ರನ್ಯಾರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ (Ranya Rao Gold Smuggling Case) ಮತ್ತೆ ಸದ್ದು ಮಾಡುತ್ತಿದೆ. ಈಗಾಗಲೇ ಕಾಫಿಪೋಸಾ ಕಾಯ್ದೆಯಡಿ ಜೈಲು ಸೇರಿರೋ ರನ್ಯಾರಾವ್ ವಿರುದ್ಧ ಡಿಆರ್‌ಐ ತನ್ನ ತನಿಖೆಯನ್ನು ಮುಂದುವರೆಸಿದೆ. ಇದು ಕೇವಲ ರನ್ಯಾರಾವ್‌ಗೆ ಮಾತ್ರ ಅಲ್ಲ ಅವರ ತಂದೆ ರಾಮಚಂದ್ರರಾವ್‌ಗೂ ಬಿಸಿ ತಟ್ಟಿದೆ.

    ರಾಮಚಂದ್ರರಾವ್ ಅವರಿಗೆ ನೋಟಿಸ್ ಮಾಡಿದ್ದ ಡಿಆರ್‌ಐ (DRI) ಅಧಿಕಾರಿಗಳು ಒಂದೆರಡು ದಿನದ ಹಿಂದೆ ಅವರ ವಿಚಾರಣೆ ನಡೆಸಿದೆ. ಮ್ಯಾರಥಾನ್ ವಿಚಾರಣೆ ಮಾಡಿದ ಡಿಆರ್‌ಐ ಅಧಿಕಾರಿಗಳು ರನ್ಯಾರಾವ್‌ಗೆ ಮತ್ತು ರಾಮಚಂದ್ರರಾವ್‌ಗೆ ಇರೋ ಸಂಬಂಧ, ಚಿನ್ನ ಸಾಗಾಟ ಮಾಡೋ ಸಂದರ್ಭದಲ್ಲಿ ಸಹಾಯ ಮಾಡಲಾಗಿತ್ತಾ? ಪ್ರೋಟೋ ಕಾಲ್ ದುರ್ಬಳಕೆ ಮಾಡಿಕೊಂಡಿದ್ದರ ಬಗ್ಗೆ, ಜೊತೆಗೆ ಎರಡೇ ತಿಂಗಳಲ್ಲಿ 20ಕ್ಕೂ ಹೆಚ್ಚು ಬಾರಿ ದುಬೈಗೆ ಹೋಗಿ ಬಂದ ವಿಚಾರವನ್ನು ಸವಿರವಾಗಿ ವಿಚಾರಣೆ ನಡೆಸಿದ್ದಾರೆ. ಇದನ್ನೂ ಓದಿ: ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ – ಮಹೇಶ್ ಶೆಟ್ಟಿ ತಿಮರೋಡಿ ಅರೆಸ್ಟ್‌

    ಆದರೆ ಮೂಲಗಳ ಮಾಹಿತಿ ಪ್ರಕಾರ, ಇವೆಲ್ಲಾ ಆರೋಪವನ್ನು ರಾಮಚಂದ್ರರಾವ್ ತಳ್ಳಿ ಹಾಕಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಡಿಆರ್‌ಐ ಮತ್ತೆ ನೋಟಿಸ್ ನೀಡಲು ತಯಾರಿ ನಡೆಸಿದೆ. ಇದನ್ನೂ ಓದಿ: ಟೈರ್ ಬ್ಲಾಸ್ಟ್ ಆಗಿ ಕಾಂಪೌಂಡ್ ಗೋಡೆಗೆ ಖಾಸಗಿ ಬಸ್ ಡಿಕ್ಕಿ – 10 ಮಂದಿಗೆ ಗಂಭೀರ ಗಾಯ

  • Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    Exclusive | ರನ್ಯಾ ಗೋಲ್ಡ್ ಸ್ಮಗ್ಲಿಂಗ್‌ ಕೇಸ್‌ – ಮೊದಲು ಚಿನ್ನ ಸಾಗಿಸಿದ್ದು ದಕ್ಷಿಣಾ ಆಫ್ರಿಕಾದಿಂದ ದುಬೈಗೆ!

    ಬೆಂಗಳೂರು: ರನ್ಯಾ ರಾವ್‌ (Ranya Rao) ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಗೆದಷ್ಟೂ ರಹಸ್ಯಗಳು ಬಯಲಾಗುತ್ತಿವೆ. ಈ ನಡುವೆ ಟಾಲಿವುಡ್ ನಟ ತರುಣ್ ಬಂಧನಕ್ಕೆ ಡಿಆರ್‌ಐ ನೀಡಿದ ಕಾರಣಗಳೇನು ಅನ್ನೋ ಮಾಹಿತಿ ದಾಖಲೆಗಳ ಸಮೇತ ʻಪಬ್ಲಿಕ್‌ ಟಿವಿʼಗೆ (Public TV) ಲಭ್ಯವಾಗಿದೆ.

    ಹೌದು. ತರುಣ್ ಹಿನ್ನೆಲೆ ಏನು? ರನ್ಯಾ ಚಿನ್ನ. ತಂದಿದ್ದಕ್ಕೆ ತರುಣ್ ಬಂಧಿಸಿದ್ದು ಏಕೆ? ಈ ಎಲ್ಲ ಕಾರಣಗಳನ್ನು ಉಲ್ಲೇಖಿಸಿ ಡಿಆರ್‌ಐ (DRI) ಕೋರ್ಟ್‌ಗೆ ಸಲ್ಲಿಸಿದ ದಾಖಲೆಯ ಮಾಹಿತಿ ʻಪಬ್ಲಿಕ್‌ ಟಿವಿʼಗೆ ಲಭ್ಯವಾಗಿದೆ.

    ಒಮ್ಮೆ 4 ಕೆಜಿ ಒಮ್ಮೆ ಇನ್ಮೊಮ್ಮೆ 2 ಕೆಜಿ ಚಿನ್ನ, ಇದೆ ರೀತಿ ಸಾಗಿಸಿರುವುದಾಗಿ ತರುಣ್‌ (Tarun Konduru Raju) ಒಪ್ಪಿಕೊಂಡಿದ್ದಾರೆ. ತನ್ನ ಪಾಸ್ ಪೋರ್ಟ್ ಬಳಸಿ ಜಿನೀವಾಗೆ ಹೋಗುವುದಾಗಿ ಹೇಳಿ ಭಾರತಕ್ಕೆ ಚಿನ್ನ ತರುತ್ತಿದ್ದರು ಎಂಬುದಾಗಿ ಖುದ್ದು ತರುಣ್ ಕೊಂಡೂರು ರಾಜು ಹೇಳಿಕೆ ನೀಡಿದ್ದಾರೆ ಎಂದು ಡಿಆರ್‌ಐ ತನ್ನ ದಾಖಲೆಯಲ್ಲಿ ಉಲ್ಲೇಖಿಸಿದೆ.

    ತರುಣ್‌ ಬಂಧನವಾಗಿದ್ದು ಹೇಗೆ?
    ರನ್ಯಾ ರಾವ್ ಬಂಧನವಾದ ಬಳಿಕ ರನ್ಯಾ ಅಪಾರ್ಟ್ಮೆಂಟ್ ಮೇಲೆ ದಾಳಿ ಮಾಡಿದ್ದ ಡಿಆರ್‌ಐ ಹಲವು ರಹಸ್ಯಗಳನ್ನ ಪತ್ತೆಹಚ್ಚಿತ್ತು. ಇದೇ ವೇಳೆ ತರುಣ್‌ ಸಂಪರ್ಕದಲ್ಲಿರೋದು ಪತ್ತೆಯಾಗಿತ್ತು. ಕೂಡಲೇ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿ ತರುಣ್‌ನನ್ನ ಡಿಆರ್‌ಐ ಹದರಾಬಾದ್‌ನಲ್ಲಿ ಬಂಧಿಸಿತ್ತು.

    ಇದು ಬರೀ ಭಾರತದ ಕಥೆಯಲ್ಲ:
    ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ಬರೀ ದುಬೈ, ಭಾರತದ ಕಥೆಯಲ್ಲ. ಮೊದಲು ದಕ್ಷಿಣಾ ಅಫ್ರಿಕಾದಿಂದ ದುಬೈಗೆ ಚಿನ್ನ ಸಾಗಾಟ ಮಾಡುತ್ತಿದ್ದರಂತೆ. ನಂತರ ಅದನ್ನ ಜಿನೀವಾಗೆ ಸಾಗಿಸುವ ನೆಪದಲ್ಲಿ ಭಾರತಕ್ಕೆ ರವಾನೆ ಮಾಡುತ್ತಿದ್ದಂತೆ.

    ಅಷ್ಟೇ ಅಲ್ಲ ದಕ್ಷಿಣ ಅಫ್ರಿಕಾಗೆ ಹೋಗಲು ಅಲ್ಲಿಯ ಗೃಹ ಮಂತ್ರಾಲಯದಿಂದಲೂ ಆರೋಪಿಗಳು ಅನುಮತಿ ಪಡೆದಿದ್ದರು. ದುಬೈನಲ್ಲಿ ಇವರು ಶುರು ಮಾಡಿದ್ದ ವೈರಾ ಡೈಮಂಡ್ ಕಂಪನಿಗೆ ಮೊದಲು ಚಿನ್ನ ಸಾಗಾಟ ಮಾಡಿದ್ದರಂತೆ. ನಂತರ ಅಲ್ಲಿಂದ ಇದನ್ನ ಭಾರತಕ್ಕೆ ತರುಣ್ ಅಮೇರಿಕ ಪಾಸ್ ಪೋರ್ಟ್ ಹಾಗೂ ರನ್ಯಾಗಿದ್ದ ಪ್ರೊಟೋಕಾಲ್ ಬಳಸಿ ರವಾನೆ ಮಾಡಿದ್ದರಂತೆ. ಖುದ್ದು ಈ ಬಗ್ಗೆ ತರುಣ್ ಕೊಂಡೂರು ರಾಜು ಹೇಳಿಕೆ ದಾಖಲಿಸಿದ್ದಾರೆ ಎಂದು ಡಿಆರ್‌ಐ ತನ್ನ ವರದಿಯಲ್ಲಿ ತಿಳಿಸಿದೆ ಎಂಬ ಮಾಹಿತಿ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.