Tag: ರಥ

  • ಸುತ್ತೂರು ತೇರಿಗೆ ಬಣ್ಣ ಬಳಿದು ಮೋಸ – ಸಾಹಿತ್ಯ ಸಮ್ಮೇಳನದಲ್ಲಿ 5 ಲಕ್ಷ ರೂ. ಗುಳುಂ?

    ಸುತ್ತೂರು ತೇರಿಗೆ ಬಣ್ಣ ಬಳಿದು ಮೋಸ – ಸಾಹಿತ್ಯ ಸಮ್ಮೇಳನದಲ್ಲಿ 5 ಲಕ್ಷ ರೂ. ಗುಳುಂ?

    ಮೈಸೂರು: ಜಿಲ್ಲೆಯಲ್ಲಿ ಇದೇ ತಿಂಗಳು ನಡೆಯುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬಳಸುತ್ತಿರುವ ಕನ್ನಡ ತೇರು ನಕಲಿ ಅನ್ನೋ ಮಾತು ಕೇಳಿ ಬರುತ್ತಿದ್ದು, ಹಳೆ ರಥಕ್ಕೆ ಹೊಸ ಬಣ್ಣ ಬಳಿದು ಬಳಕೆ ಮಾಡಲಾಗುತ್ತಿದೆ ಎಂಬ ಆರೋಪ ಮಾಡಲಾಗಿದೆ.

    ಕನ್ನಡ ಸಾಹಿತ್ಯ ಸಮ್ಮೇಳನದ ಪ್ರಚಾರಕ್ಕೆ ಬಳಸುವ ಹಿನ್ನೆಲೆಯಲ್ಲಿ ಸುಮಾರು 5 ಲಕ್ಷ ರೂ. ವೆಚ್ಚದಲ್ಲಿ ರಥ ನಿರ್ಮಾಣ ಮಾಡಲಾಗಿತ್ತು. ಆದರೆ ಈ ರಥವು ಸುತ್ತೂರು ಮಠದ ಶ್ರೀ ಶಿವರಾತ್ರಿ ರಾಜೇಂದ್ರ ಶ್ರೀಗಳ ಶತಮಾನೋತ್ಸವಕ್ಕೆ ತಯಾರಿಸಲಾಗಿದ್ದ ರಥ ಎನ್ನಲಾಗಿದೆ. ಸುತ್ತೂರು ಮಠದ ರಥ ರೂಪಿಸಿದ ಕಲಾವಿದರೇ ಕನ್ನಡ ರಥ ರೂಪಿಸಿದ್ದು ತಾವು ಈ ಹಿಂದೆ ಮಾಡಿದ್ದ ರಥವನ್ನು ಬದಲಾಯಿಸಿ ಹೊಸ ಬಿಲ್ ಮಾಡಿಕೊಂಡಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.

    ಸುತ್ತೂರು ಮಠಕ್ಕೆ ರೂಪಿಸಲಾಗಿದ್ದ ರಥವನ್ನು ಕನ್ನಡ ರಥವಾಗಿ ಬದಲಾಯಿಸಲಾಗಿದೆ. ಹಳೆಯ ರಥದಲ್ಲಿ ಮುಂಭಾಗದಲ್ಲಿದ್ದ ನಂದಿಗಳು ಹೊಸ ರಥದಲ್ಲಿ ಹಿಂಭಾಗಕ್ಕೆ ಸ್ಥಳಾಂತರ ಮಾಡಲಾಗಿದೆ. ಅಲ್ಲದೇ ಹಿಂದೆ ಇದ್ದ ಜೋಡಿ ಆನೆಗಳು ಮುಂದಕ್ಕೆ ಸ್ಥಳಾಂತರವಾಗಿವೆ. ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ ಪ್ರತಿಮೆ ಇದ್ದ ಸ್ಥಳಕ್ಕೆ ಪರದೆ ಬಿಟ್ಟು ಎರಡೂ ಕಡೆ ತಾಯಿ ಭುವನೇಶ್ವರಿಯ ಪ್ರತಿಮೆ ಹಾಕಿ ಹೊಸ ಬಣ್ಣ ಲೇಪಿಸಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತಿದೆ.

    ನವೆಂಬರ್ 24ರಿಂದ ಮೂರು ದಿನಗಳ ಕಾಲ ಮೈಸೂರಿನಲ್ಲಿ ನಡೆಯಲಿರುವ ಸಮ್ಮೇಳನದ ಪ್ರಚಾರಾರ್ಥವಾಗಿ ಮೂರು ದಿನಗಳಿಂದ ರಥ ಯಾತ್ರೆ ನಡೆಯುತ್ತಿದ್ದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ರಥಯಾತ್ರೆ ಆಯೋಜನೆ ಆಗಿದೆ.

     

  • ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

    ವೀಡಿಯೋ: ಕೊಟ್ಟೂರೇಶ್ವರ ಜಾತ್ರೆಯಲ್ಲಿ ರಥ ಬೀಳೋ ಮೊದ್ಲೇ ನಡೆದಿತ್ತು ಅಚ್ಚರಿ

    – ಭಕ್ತರನ್ನ ಹೆದರಿಸಿ ಓಡಿಸಿದ್ದ ಬಸವಣ್ಣ

    ಬಳ್ಳಾರಿ: ಕಳೆದು ತಿಂಗಳು ಜಿಲ್ಲೆಯಲ್ಲಿ ನಡೆದ ಕೊಟ್ಟೂರೇಶ್ವರ ಜಾತ್ರೆಯಲ್ಲಿ ದೇವರ ರಥ ಬಿದ್ದು ಭಕ್ತರನ್ನು ಆತಂಕಕ್ಕೀಡು ಮಾಡಿತ್ತು. ಆದ್ರೆ ರಥ ಬೀಳುವ ಮೊದಲೇ ಅದರ ಬಗ್ಗೆ ಸೂಚನೆ ಸಿಕ್ಕಿತ್ತು ಅಂತ ಭಕ್ತರು ಇದೀಗ ಮಾತನಾಡಿಕೊಳ್ತಿದ್ದಾರೆ.

    ಇದಕ್ಕೆ ಸಾಕ್ಷಿ ಎಂಬಂತೆ ರಥ ಬೀಳುವ ಮೂರು ನಿಮಿಷಗಳ ಮೊದಲು ದೇವಸ್ಥಾನಕ್ಕೆ ಸೇರಿದ್ದ ಗೂಳಿಯೊಂದು ಭಕ್ತರನ್ನ ಓಡಿಸಿದೆ. ಆಶ್ಚರ್ಯ ಅಂದ್ರೆ ರಥ ಬೀಳುವ ಜಾಗದಲ್ಲಿದ್ದ ಭಕ್ತರನ್ನೇ ಚದುರಿಸಿದ್ದು, ಬಸವಣ್ಣ ಯಾರಿಗೂ ಸಣ್ಣ ಗಾಯವನ್ನೂ ಮಾಡಿಲ್ಲ. ಬಸವಣ್ಣನ ಎಚ್ಚರಿಕೆಯಿಂದಲೇ 60 ಅಡಿ ರಥ ನೆಲಕ್ಕೆ ಉರುಳಿದ್ರೂ ಯಾವುದೇ ಸಾವು ಸಂಭವಿಸಿಲ್ಲ ಅಂತಾ ಜನ ಹೇಳ್ತಿದ್ದಾರೆ.

    ಕಳೆದ ಫೆಬ್ರವರಿ 22ರಂದು ಜಿಲ್ಲೆಯ ಕೂಡ್ಲಗಿ ತಾಲೂಕಿನ ಕೊಟ್ಟೂರು ಗುರುಬಸವೇಶ್ವರ ರಥೋತ್ಸವದ ವೇಳೆಯಲ್ಲಿ ಚಕ್ರದ ಅಚ್ಚು ಮುರಿದು ರಥ ಮಗುಚಿ ಬಿದ್ದಿತ್ತು. ಪ್ರತಿ ವರ್ಷ ನಡೆಯುವ ಗುರು ಬಸವೇಶ್ವರ ರಥೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುತ್ತಾರೆ. ಈ ವರ್ಷವೂ ಭಾರೀ ಸಂಖ್ಯೆಯಲ್ಲಿ ಜನ ಆಗಮಿಸಿದ್ದರು.

    ಇದನ್ನೂ ಓದಿ: ಬಳ್ಳಾರಿ ಕೊಟ್ಟೂರೇಶ್ವರ ಜಾತ್ರೆಯಲ್ಲಿ ಉರುಳಿ ಬಿದ್ದ ರಥ

    https://www.youtube.com/watch?v=ixTDEO3xgk4&feature=youtu.be

  • ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿಯಿಟ್ಟ ವ್ಯಕ್ತಿಯ ಬಂಧನ

    ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿಯಿಟ್ಟ ವ್ಯಕ್ತಿಯ ಬಂಧನ

    ಚಾಮರಾಜನಗರ: ಜಿಲ್ಲೆಯ ಚಾಮರಾಜೇಶ್ವರ ದೇವಸ್ಥಾನದ ರಥಕ್ಕೆ ಬೆಂಕಿ ಹಚ್ಚಿದ್ದ ವ್ಯಕ್ತಿಯನ್ನು ಬಂಧಿಸುವಲ್ಲಿ ಚಾಮರಾಜನಗರ ಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ.

    ಮೋಹನ್ ಕುಮಾರ್ ರಥಕ್ಕೆ ಬೆಂಕಿ ಹಚ್ಚಿದವನು. ಮೋಹನ್ ಕುಮಾರ್ ನಗರ ಸಭೆ ಮಾಜಿ ಅಧ್ಯಕ್ಷೆಯೊಬ್ಬರ ಸಂಬಂಧಿಯಾಗಿದ್ದಾನೆ ಎಂದು ತಿಳಿದು ಬಂದಿದೆ. ಈತ ಕಳೆದ ಭಾನುವಾರ ತಡರಾತ್ರಿ ರಥಕ್ಕೆ ಬೆಂಕಿ ಹಚ್ಚಿ ಅಲ್ಲಿಂದ ಕಾಲ್ಕಿತ್ತಿದ್ದನು.

    ಪೊಲೀಸರು ಮೋಹನ್ ಕುಮಾರ್‍ನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ಆತ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಇಂದು ಮೋಹನ್ ಕುಮಾರನನ್ನು ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.