Tag: ರಥಾಯಾತ್ರೆ

  • ಬಿಜೆಪಿ ರಥಯಾತ್ರೆಯ ಬಸ್ ಮೇಲೆ ದಾಳಿ – ಚಾಲಕನಿಗೆ ಗಾಯ

    ಬಿಜೆಪಿ ರಥಯಾತ್ರೆಯ ಬಸ್ ಮೇಲೆ ದಾಳಿ – ಚಾಲಕನಿಗೆ ಗಾಯ

    ಕೋಲ್ಕತ್ತಾ: ಭಾರತೀಯ ಜನತಾ ಪಕ್ಷ (ಬಿಜೆಪಿ)ದ ರಥ ಯಾತ್ರೆಯಲ್ಲಿ ಪಾಲ್ಗೊಂಡು ಹಿಂದಿರುಗುತ್ತಿದ್ದ ಬಸ್ ಮೇಲೆ ಪಶ್ಚಿಮ ಬಂಗಾಳದ ಪುರುಲಿಯಾ ಬಳಿ ದಾಳಿ ಮಾಡಿದ ಕಿಡಿಗೇಡಿಗಳು ಬಸ್ ನ ಗಾಜು ಒಡೆದು ಪರಾರಿಯಾಗಿದ್ದಾರೆ.

    ಬಸ್ ಗೆ ದಾಳಿ ಮಾಡುವ ಮುಂಚೆ ಪುರುಲಿಯಾ ಜಿಲ್ಲೆಯಲ್ಲಿ ತೃಣಮೂಲ ಕಾಂಗ್ರೆಸ್ ಸಂಸದ ಅಭಿಷೇಕ್ ಬ್ಯಾನರ್ಜಿ ತಮ್ಮ ಪಕ್ಷದ ಪರ ಪ್ರಚಾರ ರ‍್ಯಾಲಿ  ಮಾಡಿದ್ದರು. ಹಾಗಾಗಿ ಬಿಜೆಪಿ ರಥಯಾತ್ರೆ ಬಸ್ ದಾಳಿಯಲ್ಲಿ ಟಿಎಂಸಿ ಪಕ್ಷದ ಕೈವಾಡವಿದೆ ಎಂದು ಬಿಜೆಪಿ ನಾಯಕರು ದೂರಿದ್ದಾರೆ.

    ಬಿಜೆಪಿ ರಥಯಾತ್ರೆಗೆ ತೆರಳಿ ಮರಳಿ ಬರುತ್ತಿದ್ದ ವೇಳೆ ಪುರುಲಿಯಾ ಸಮೀಪ ರಥಯಾತ್ರೆಯ ಬಸ್ ಮೇಲೆ ಕಿಡಿಗೇಡಿಗಳು ದಾಳಿ ನಡೆಸಿದ್ದು ಇದರಿಂದ ಬಸ್ ಚಾಲಕ ಗಾಯಗೊಂಡಿದ್ದಾನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಈಗಾಗಲೇ ರಥಯಾತ್ರೆಗೆ ಚಾಲನೆ ನೀಡಿದ್ದು, ಇದೀಗ ಕೋಟುಲ್ಪರ ತಲುಪಿದೆ. ಇದನ್ನು ತಡೆಯಲು ಟಿಎಂಸಿ ಪಕ್ಷದಿಂದ ಸಾಧ್ಯವಿಲ್ಲ ಎಂದು ಬಿಜಿಪಿ ಮುಖಂಡ ಅಮಿತ್ ಮಾಳವೀಯ ಟ್ಟಿಟ್ಟರ್‍ ನಲ್ಲಿ ಆಕ್ರೋಶ ಹೊರಹಾಕಿದ್ದಾರೆ. ಹಾಗೆ ಈ ಘಟನೆಯ ಹಿಂದಿರುವ ಕಿಡಿಗೇಡಿಗಳನ್ನು ಕೂಡಲೇ ಬಂಧಿಸಬೇಕಾಗಿ ಪೊಲೀಸರಿಗೆ ಮನವಿ ಮಾಡಿಕೊಂಡಿದ್ದಾರೆ.

    ಪಶ್ಚಿಮ ಬಂಗಾಳದಲ್ಲಿ ಚುನಾವಣಾ ಪ್ರಚಾರ ಜೋರಾಗಿದ್ದು, ಮುಖ್ಯಮಂತ್ರಿ, ತೃಣಮೂಲ ಕಾಂಗ್ರೆಸ್ ನಾಯಕಿ ಮಮತಾ ಬ್ಯಾನರ್ಜಿ, ಬಿಜೆಪಿಗೆ ಮತನೀಡಿ ಗೆಲ್ಲಿಸಿದರೆ ರಾಜ್ಯದ ಬ್ಯಾಂಕ್ ಎಲ್ಲವನ್ನು ಅವರು ಮುಚ್ಚಿಸುತ್ತಾರೆ ಮತ್ತು ಜನರು ಅವರ ಅಧಿಕಾರವನ್ನು ಕಳೆದುಕೊಳ್ಳುವ ಪರಿಸ್ಥಿತಿಗೆ ಬರುತ್ತದೆ ಎಂದು ಬಿಜೆಪಿ ವಿರುದ್ಧ ಗುಡುಗಿದ್ದಾರೆ.