Tag: ರಥಂ ಸಿನಿಮಾ

  • ಮಗಳು ಅಗಲಿ 9 ದಿನಗಳ ಬಳಿಕ ಸಿನಿಮಾ ಪ್ರಚಾರಕ್ಕೆ ಮರಳಿದ ವಿಜಯ್ ಆಂಥೋನಿ

    ಮಗಳು ಅಗಲಿ 9 ದಿನಗಳ ಬಳಿಕ ಸಿನಿಮಾ ಪ್ರಚಾರಕ್ಕೆ ಮರಳಿದ ವಿಜಯ್ ಆಂಥೋನಿ

    ಮಿಳು ನಟ ವಿಜಯ್ ಆಂಥೋನಿ (Vijay Antony) ಮಗಳು ಮೀರಾ (Meera) ಅಗಲಿಕೆ ನೋವಿನ ನಡುವೆ ಸಿನಿಮಾ ಕೆಲಸದತ್ತ ಮುಖ ಮಾಡಿದ್ದಾರೆ. ಕೆಲಸದ ಮೇಲಿರುವ ಬದ್ಧತೆಯಿಂದ ಮಗಳು ಅಗಲಿ 9 ದಿನಗಳ ಬಳಿಕ ‘ರಥಂ’ (Ratham) ಚಿತ್ರದ ಪ್ರಚಾರ ಕಾರ್ಯದಲ್ಲಿ ವಿಜಯ್ ಭಾಗಿಯಾಗುವ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ. ಇದನ್ನೂ ಓದಿ:ಕಾವೇರಿ ಹೋರಾಟಕ್ಕೆ ಜಗ್ಗೇಶ್‌ ಗೈರಾಗಿದ್ದೇಕೆ? ಅನಾರೋಗ್ಯದ ಬಗ್ಗೆ ಅಪ್‌ಡೇಟ್‌ ಕೊಟ್ಟ ನಟ

    ವಿಜಯ್ ಆಂಥೋನಿ ಮಗಳು ಮೀರಾ ಆತ್ಮಹತ್ಯೆಗೆ ಶರಣಾಗಿದ್ದರು. ಮಗಳ ಹಠಾತ್ ನಿಧನ ವಿಜಯ್‌ಗೆ ಶಾಕ್ ಕೊಟ್ಟಿತ್ತು. ಮಗಳ ನಿಧನದ ನೋವಿನ ನಡುವೆಯೇ ‘ರಥಂ’ ಚಿತ್ರದ ಪ್ರಚಾರಕ್ಕೆ ಭಾಗಿಯಾಗಿದ್ದಾರೆ. ನಟನ ವೃತ್ತಿಪರತೆ ನೋಡಿ, ಚಿತ್ರದ ನಿರ್ಮಾಪಕ ಜಿ ಧನಂಜಯನ್ ಮೆಚ್ಚುಗೆ ಸೂಚಿಸಿದ್ದಾರೆ. ಜೊತೆಗೆ ಸಂದರ್ಶನದ ಫೋಟೋ ಹಂಚಿಕೊಂಡಿದ್ದಾರೆ.

    ತನ್ನ ತಂಡವನ್ನು ಬೆಂಬಲಿಸಲು ತನ್ನ ವೈಯಕ್ತಿಕ ದುರಂತವನ್ನು ಬದಿಗಿಟ್ಟು ಪ್ರಚಾರದಲ್ಲಿ ಭಾಗವಹಿಸುತ್ತಿರುವ ವ್ಯಕ್ತಿಯಿಂದ ಉದ್ಯಮಕ್ಕೆ ಉತ್ತಮ ಸ್ಪೂರ್ತಿ ಧನ್ಯವಾದಗಳು ಸರ್ ಎಂದು ಪೋಸ್ಟ್‌ನಲ್ಲಿ ನಿರ್ಮಾಪಕ ಬರೆದುಕೊಂಡಿದ್ದಾರೆ. ಈ ಪೋಸ್ಟ್ ನೋಡಿ ಫ್ಯಾನ್ಸ್ ಕೂಡ ಮೆಚ್ಚುಗೆ ಸೂಚಿಸಿದ್ದಾರೆ.

    ರಥಂ ಸಿನಿಮಾ ಅಕ್ಟೋಬರ್ 6ಕ್ಕೆ ರಿಲೀಸ್ ಆಗುತ್ತಿದೆ. ವಿಜಯ್ ಆಂಥೋನಿಗೆ ನಾಯಕಿಯಾಗಿ ಕನ್ನಡದ ನಟಿ ನಂದಿತಾ ಶ್ವೇತಾ ಮತ್ತು ಮಹಿಮಾ ಕಾಣಿಸಿಕೊಂಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]