Tag: ರಥ

  • ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

    ಶ್ರೀ ಭೋಗ ನಂದೀಶ್ವರನಿಗೆ 2 ಕೋಟಿ ಮೌಲ್ಯದ ಭವ್ಯ ರಥ ಮಾಡಿಸಿದ ಭಕ್ತ!

    ಚಿಕ್ಕಬಳ್ಳಾಪುರ: ಜಿಲ್ಲೆಯ ನಂದಿ ಗ್ರಾಮದಲ್ಲಿರುವ ಇತಿಹಾಸ ಪ್ರಸಿದ್ಧ ಶ್ರೀ ಭೋಗನಂಧೀಶ್ವರನ ಶ್ರೀ ಭೋಗ ನಂದೀಶ್ವರ ದೇವಾಲಯಕ್ಕೆ (Bhoga Nandishwara Gudi) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ಹುರುಳಗುರ್ಕಿ ಗ್ರಾಮದ ವೆಂಕಟೇಗೌಡ ಹಾಗೂ ಕುಟುಂಬಸ್ಥರು ಬರೋಬ್ಬರಿ 2 ಕೋಟಿಗೂ ಅಧಿಕ ಮೊತ್ತದ ಹಣ ಖರ್ಚು ಮಾಡಿ ಭವ್ಯವಾದ ರಥ (Chariot) ಮಾಡಿಸಿ ಅರ್ಪಿಸಿದ್ದಾರೆ.

    ಅಂದಹಾಗೆ ಮಹಾಶಿವರಾತ್ರಿ ಹಬ್ಬದ ಮರುದಿನ ಶ್ರೀ ಭೋಗನಂದೀಶ್ವರ ಸ್ವಾಮಿ ಹಾಗೂ ಅರುಣಾಚಲೇಶ್ವರ ಸ್ವಾಮಿಯ ಜೋಡಿ ಬ್ರಹ್ಮರಥೋತ್ಸವ ಪ್ರತಿ ವರ್ಷವೂ ವಿಜೃಂಭಣೆಯಿಂದ ನೆರವೇರುತ್ತದೆ. ಆದ್ರೆ ಪುರಾತನ ಕಾಲದ ಹಳೆಯ ಕಾಲದ ರಥ ಬಳಕೆಗೆ ಯೋಗ್ಯವಾಗಿರಲಿಲ್ಲ. ರಥೋತ್ಸವದ ವೇಳೆ ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿತ್ತು. ಇನ್ನೂ ಕಳೆದ ಬಾರಿ ರಥದ ಅಚ್ಚು ಮುರಿದು ರಥ ಕದಲೇ ಇಲ್ಲ. ಇದ್ರಿಂದ ಭಕ್ತರಿಗೆ ಸಾಕಷ್ಟು ಬೇಸರ ಸಹ ಆಗಿತ್ತು. ಹಾಗಾಗಿ ಶಿವನ ಭಕ್ತನೂ ಆಗಿರುವ ಉದ್ಯಮಿ ವೆಂಕಟೇಗೌಡ ಎಂಬುವವರು ಈಗ ಕುಂದಾಪುರ ಕುಂಭಾಶಿಯ ವಿಶ್ವಕರ್ಮ ಕರಕುಶಲ ಕೇಂದ್ರದಲ್ಲಿ ಸಾಗುವಾನಿ ಹಾಗೂ ಭೋಗಿ ಮರ ಬಳಸಿ ಭವ್ಯವಾದ ರಥ ನಿರ್ಮಾಣ ಮಾಡಿಸಿದ್ದಾರೆ. ಇದನ್ನೂ ಓದಿ: ಉಪಚುನಾವಣೆ ಮೂಲಕ ಬಿಜೆಪಿಯವರಿಗೆ ಜನ ಮಂಗಳಾರತಿ ಮಾಡಿದ್ದಾರೆ- ಹೆಚ್.ಕೆ ಪಾಟೀಲ್

    ರಥ ನೋಡಲು ಬಲು ಅಕರ್ಷಕವಾಗಿದ್ದು, ಭಕ್ತರ ಕಣ್ಮನ ಸೆಳೆಯುತ್ತಿದೆ. ನೂತನ ರಥವನ್ನ ಇದೇ ಕಾರ್ತಿಕ ಸೋಮವಾರದಂದು ಅಧಿಕೃತವಾಗಿ ಬ್ರಹ್ಮರಥೋತ್ಸವ ಮಾಡುವ ಮೂಲಕ ಚಾಲನೆ ಕೊಡಲಾಗುತ್ತಿದೆ. ಇದಕ್ಕೂ ಮುನ್ನ ಭಾನುವಾರದಂದು ಹೋಮ ಹವನ ವಿಶೇಷ ಪೂಜಾ ಕೈಂಕರ್ಯಗಳು ನೆರವೇರಲಿವೆ. ಈ ಬಗ್ಗೆ ದೇವಾಲಯದ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ಹಂಚಿಕೊಂಡ ರಥದಾನಿ ವೆಂಕಟೇಗೌಡ, ನಾನು ನಂದಿ ಗ್ರಾಮದಲ್ಲೇ ಓದಿದವನಾಗಿದ್ದು ಬಹಳಷ್ಟು ವರ್ಷಗಳಿಂದ ಜಾತ್ರೆ ಹಾಗೂ ರಥೋತ್ಸವವನ್ನ ಕಣ್ತುಂಬಿಕೊಂಡಿದ್ದೇನೆ. ನಾನು ಶಿವರಾತ್ರಿ ಸಮಯದಲ್ಲೂ ಈ ದೇವಾಲಯಕ್ಕೆ ಬಂದು ಹೋಗುತ್ತಿದ್ದೆ, ದೇವಾಲಯಕ್ಕೆ ಬಂದಾಗ ಭಗವಂತ ನನಗೆ ಶಕ್ತಿ ಕೊಡು ಅಂತ ಬೇಡಿಕೊಂಡಿದ್ದೆ. ಹಾಗೆಯೇ ಧರ್ಮಸ್ಥಳ ಮಂಜುನಾಥಸ್ವಾಮಿ ದೇವರ ದರ್ಶನ ಪಡೆದು ಶ್ರೀ ಭೋಗ ನಂದೀಶ್ವರ ರಥ ಮಾಡಿಸುವ ಶಕ್ತಿ ಕೊಡಪ್ಪ ಅಂತ ಕೈ ಮುಗಿದು ಬೇಡಿಕೊಂಡಿದ್ದೆ. ಆ ದೇವರ ಪ್ರೇರಣೆ ಎಂಬಂತೆ ಈಗ ರಥ ನಿರ್ಮಾಣವಾಗಿದೆ ಎಂದು ಸ್ಮರಿಸಿದ್ದಾರೆ.

    ಸೋಮವಾರ (ನ.25) ವಿಜೃಂಭಣೆಯಿಂದ ಬ್ರಹ್ಮರಥೋತ್ಸವ ನಡೆಯಲಿದ್ದು ಭಕ್ತಾದಿಗಳು ಭಾಗವಹಿಸುವಂತೆ ರಥದಾನಿ ವೆಂಕಟೇಗೌಡ ಮನವಿ ಮಾಡಿಕೊಂಡಿದ್ದಾರೆ. ಇನ್ನೂ ಈ ಬಗ್ಗೆ ಮಾತನಾಡಿದ ರಥ ಶಿಲ್ಪಿ ರಾಜಗೋಪಾಲ್ ಆಚಾರ್. ವೆಂಕಟೇಗೌಡರು ರಥ ಮಾಡಿಸಲು ನಮ್ಮ ಬಳಿ ಬಂದಾಗ ಬಹಳಷ್ಟು ರಥಧ ಮಾದರಿಗಳನ್ನ ತೋರಿಸಿದ್ದೆವು. ಆಗ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿನ ರಥ ಕಂಡ ವೆಂಕಟೇಗೌಡರು ಅದೇ ಮಾದರಿಯ ರಥ ಬೇಕು ಅಂತ ತಿಳಿಸಿದರು. ಈಗ ಅದೇ ಮಾದರಿಯಲ್ಲೇ ರಥ ಸುಂದರವಾಗಿ ಮೂಡಿ ಬಂದಿದೆ.

    ಇದು ಶೈವಾಗಮ ಶೈಲಿಯಲ್ಲಿದ್ದು, ಶಿವನಿಗೆ ಸಂಬಂಧಪಟ್ಟ ಕಥಾ ಪ್ರಾಕಾರಗಳನ್ನ ಕೆತ್ತನೆ ಮಾಡಲಾಗಿದೆ. ರಥದ ಚಕ್ರಗಳು 8 ಅಡಿ ಎತ್ತರವಿದೆ, ರಥದ ಜಿಡ್ಡೆ ಭಾಗ 15 ಅಡಿ ಇದ್ದು, ದೇವರ ಪೀಠ 3 ಅಡಿ ಎತ್ತರವಿದೆ. 5 ಅಡಿಯ ಕಳಶ ಹೊಂದಿದೆ. ಒಟ್ಟು 54 ಅಡಿ ಎತ್ತರ ಇರಲಿದೆ. 6 ಚಕ್ರ ಹೊಂದಿರುವ ರಥವನ್ನ ಬ್ರಹ್ಮರಥ ಎಂದು ಕರೆಯಲಾಗುತ್ತದೆ. ಇದನ್ನೂ ಓದಿ: ಅಭಿವೃದ್ಧಿ, ಉತ್ತಮ ಆಡಳಿತ ಗೆದ್ದಿದೆ: ಮಹಾರಾಷ್ಟ್ರದಲ್ಲಿ ಮಹಾಯುತಿ ಗೆಲುವಿಗೆ ಮೋದಿ ಕೃತಜ್ಞತೆ

    ಭಾನುವಾರ ವಿಶೇಷ ಪೂಜೆ ಹೋಮ-ಹವನ ನಡೆಸಿದ ನಂತರ ಧರ್ಮಸ್ಥಳದ ಪ್ರಧಾನ ಅರ್ಚಕರು ತಮ್ಮ ತಂಡದೊಂದಿಗೆ ದೇವಾಲಯಕ್ಕೆ ರಥ ಸಮರ್ಪಣೆ ಮಾಡಲಿದ್ದಾರೆ. ಸೋಮವಾರ ಬೆಳಗ್ಗೆ 11 ಗಂಟೆಗೆ ರಥಕ್ಕೆ ಚಾಲನೆ ನೀಡಲಾಗುತ್ತದೆ. ಕಾರ್ತಿಕ ಸೋಮವಾರದಂದು ಆಗಮಿಸುವ ಭಕ್ತಾಧಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಸಹ ಮಾಡಲಾಗಿದೆ. ಇದನ್ನೂ ಓದಿ: ಮಂಗಳೂರು | ಎದುರಾಳಿ ವಿರುದ್ಧ ಸಂಚು ಮಾಡ್ತಿದ್ದಾಗ್ಲೇ ನಟೋರಿಯಸ್ ರೌಡಿಶೀಟರ್ ಅರೆಸ್ಟ್!

  • ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ

    ಜಾತ್ರೆಯಲ್ಲಿ ರಥದ ಚಕ್ರಕ್ಕೆ ಸಿಲುಕಿ ಯುವಕ ದುರ್ಮರಣ

    ವಿಜಯಪುರ: ಜಾತ್ರಾ ರಥೋತ್ಸವದ (Rathotsava) ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ (Youth) ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆಯ ದೇವರಹಿಪ್ಪರಗಿ (Devara Hipparagi) ತಾಲೂಕಿನ ಬಿಬಿ ಇಂಗಳಗಿ ಗ್ರಾಮದಲ್ಲಿ ನಡೆದಿದೆ.

    ದೇವೇಂದ್ರ ಬಡಿಗೇರ್ (24) ಮೃತ ದುರ್ದೈವಿ. ಘನ ಗುರುಸಿದ್ದೇಶ್ವರ ದೇವರ ಜಾತ್ರೆಯಲ್ಲಿ ಅವಘಡ ಸಂಭವಿಸಿದ್ದು, ದುರಂತದ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಎನ್‌ಆರ್‌ಸಿಗೆ ಅರ್ಜಿ ಸಲ್ಲಿಸದಿದ್ರೆ ಆಧಾರ್‌ ಕಾರ್ಡ್‌ ಇಲ್ಲ: ಅಸ್ಸಾಂ ಸಿಎಂ ಘೋಷಣೆ

    ರಥವನ್ನು ಎಳೆಯುವ ವೇಳೆ ಯುವಕ ಆಯತಪ್ಪಿ ಚಕ್ರದ ಅಡಿಗೆ ಸಿಲುಕಿದ್ದಾನೆ. ಆಸ್ಪತ್ರೆಗೆ ಸಾಗಿಸುವ ದಾರಿ ಮಧ್ಯೆ ದೇವೇಂದ್ರ ಕೊನೆಯುಸಿರೆಳೆದಿದ್ದಾನೆ. ಈ ಕುರಿತು ಕಲಕೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಗಣೇಶ ಮೂರ್ತಿ ಮೆರವಣಿಗೆ ವೇಳೆ ಡೊಳ್ಳು ಬಾರಿಸುವ ವಿಚಾರಕ್ಕೆ ಗಲಾಟೆ; 2 ಗುಂಪಿನ ನಡುವೆ ಮಾರಾಮಾರಿ

  • ರಥಕ್ಕೆ ಕಳಸ ಕಟ್ಟುತ್ತಿದ್ದಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು – ಜಾತ್ರೆ ಮುಂದೂಡಿದ ಗ್ರಾಮಸ್ಥರು

    ರಥಕ್ಕೆ ಕಳಸ ಕಟ್ಟುತ್ತಿದ್ದಾಗ ಆಯತಪ್ಪಿ ಬಿದ್ದು ವ್ಯಕ್ತಿ ಸಾವು – ಜಾತ್ರೆ ಮುಂದೂಡಿದ ಗ್ರಾಮಸ್ಥರು

    ವಿಜಯಪುರ: ರಥದ (Ratha) ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿರುವ ಘಟನೆ ವಿಜಯಪುರ (Vijayapura) ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದಲ್ಲಿ ನಡೆದಿದೆ.

    ಗುರುವಾರ ಸಂಜೆ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಶ್ರೀ ಗೋಲ್ಲಾಳೇಶ್ವರ ರಥದ ಮೇಲಿಂದ ಬಿದ್ದು ವ್ಯಕ್ತಿ ಸಾವನ್ನಪ್ಪಿದ್ದಾರೆ. ಗೋಲಗೇರಿ ಗ್ರಾಮದ ಮುದಕಪ್ಪ ಕಾಚಾಪುರ ಸಾವನ್ನಪ್ಪಿದ ದುರ್ದೈವಿ. ರಥಕ್ಕೆ ಕಳಸ ಕಟ್ಟಿ, ಛತ್ರಿ ಕಟ್ಟುತ್ತಿದ್ದಾಗ ಅವರು ಆಯತಪ್ಪಿ ಬಿದ್ದು ಸಾವನ್ನಪ್ಪಿದ್ದಾರೆ.

    ಮುದಕಪ್ಪ 15 ವರ್ಷಗಳಿಂದ ರಥಕ್ಕೆ ಕಳಸ ಕಟ್ಟುವ ಕೆಲಸ ಮಾಡುತ್ತಿದ್ದರು. ಮುದಕಪ್ಪ ಕಳಸ ಕಟ್ಟುತ್ತಿದ್ದಾಗಲೇ ಬಿದ್ದು ಸಾವನ್ನಪ್ಪಿರುವ ಹಿನ್ನೆಲೆ ಊರಿನ ಜಾತ್ರೆಯನ್ನು ಗ್ರಾಮಸ್ಥರು ಮುಂದೂಡಿದ್ದಾರೆ. ಇದನ್ನೂ ಓದಿ: ಧ್ರುವನಾರಾಯಣ ಪತ್ನಿ ವೀಣಾ ನಿಧನ

  • ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

    ರಥೋತ್ಸವ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವು

    ವಿಜಯಪುರ: ರಥೋತ್ಸವದ ವೇಳೆ ರಥದ ಚಕ್ರಕ್ಕೆ ಸಿಲುಕಿ ಯುವಕ ಸಾವನ್ನಪ್ಪಿದ ಘಟನೆ ವಿಜಯಪುರ (Vijayapura) ಜಿಲ್ಲೆ ಮುದ್ದೇಬಿಹಾಳ ತಾಲೂಕಿನ ಬಸರಕೋಡ ಗ್ರಾಮದಲ್ಲಿ ಘಟನೆ ನಡೆದಿದೆ.

    ಪವಾಡ ಬಸವೇಶ್ವರ ಜಾತ್ರೆ ಅಂಗವಾಗಿ ರಥೋತ್ಸವ ಹಮ್ಮಿಕೊಳ್ಳಲಾಗಿತ್ತು. ರಥೋತ್ಸವ ನಡೆಯುತ್ತಿದ್ದ ವೇಳೆ ಚಕ್ರಕ್ಕೆ ಸಿಲುಕಿ ಯುವಕ ಬಸವರಾಜ್ ಸಾವಿಗೀಡಾಗಿದ್ದಾನೆ.

    ಬಸವರಾಜ್‍ಗೆ ಗಂಭೀರ ಗಾಯಗಳಾಗಿದ್ದವು. ನಂತರ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿ ಆಗದೆ ಬಸವರಾಜ್ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದ್ದಾನೆ. ಇದನ್ನೂ ಓದಿ: ಕಾಂಗ್ರೆಸ್-ಬಿಜೆಪಿ ಘರ್ಷಣೆ, 15 ಕಾರು ಜಖಂ – ಸುರಪುರದಲ್ಲಿ ಶನಿವಾರದವರೆಗೆ ನಿಷೇಧಾಜ್ಞೆ ಜಾರಿ

    ಬಸವರಾಜ್ ಎರಡೂ ಕಾಲುಗಳ ಮೇಲೆ ರಥದ ಕಲ್ಲಿನ ಚಕ್ರಗಳು ಹಾದಿದ್ದವು. ಕಾರಣ ತೀವ್ರವಾಗಿ ಬಸವರಾಜ್ ಗಾಯಗೊಂಡಿದ್ದ. ಮುದ್ದೇಬಿಹಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ದೇವಾಲಯದ ರಥ ಉರುಳಿ ಬಿದ್ದು ಇಬ್ಬರು ಸಾವು – ನಾಲ್ವರಿಗೆ ಗಾಯ

    ದೇವಾಲಯದ ರಥ ಉರುಳಿ ಬಿದ್ದು ಇಬ್ಬರು ಸಾವು – ನಾಲ್ವರಿಗೆ ಗಾಯ

    ಚೆನ್ನೈ: ತಮಿಳುನಾಡಿನ ಧರ್ಮಪುರಿ ಜಿಲ್ಲೆಯ ಜನಪ್ರಿಯ ದೇವಸ್ಥಾನದ ಬೃಹತ್ ರಥ ಸೋಮವಾರ ಉರುಳಿಬಿದ್ದು ಇಬ್ಬರು ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ.

    ಮೃತ ದುರ್ದೈವಿಯನ್ನು ಸಿ. ಮನೋಹರನ್ (57) ಮತ್ತು ಜಿ. ಸರವಣನ್ (50) ಎಂದು ಗುರುತಿಸಲಾಗಿದೆ. ವೈಕಾಶಿ ಹಬ್ಬದ ಅಂಗವಾಗಿ ಕಾಳಿಯಮ್ಮನ ದೇವಸ್ಥಾನದ 30 ಅಡಿ ಅಲಂಕೃತ ರಥವನ್ನು ದೇವಾಲಯದ ಸುತ್ತಮುತ್ತಲಿನ ಪ್ರಮುಖ ಬೀದಿಗಳಲ್ಲಿ ಎಳೆಯುವ ವೇಳೆ ಈ ಘಟನೆ ಸಂಭವಿಸಿದೆ. ಇದನ್ನೂ ಓದಿ: ಸ್ಟಾಲಿನ್‌ ರಾಜಕೀಯ ಸ್ಟಂಟ್‌ ಮಾಡುತ್ತಿದ್ದಾರೆ: ತಮಿಳುನಾಡು ಸಿಎಂ ವಿರುದ್ಧ ಬೊಮ್ಮಾಯಿ ಕಿಡಿ

    POLICE JEEP

    ರಥ ಕೆಳಗುರುಳಿ ಬಿದ್ದಾಗ ರಥದ ಚಕ್ರದಡಿ ಸಿಲುಕಿದ ಇಬ್ಬರನ್ನು ರಕ್ಷಿಸಲು ಮೆರವಣಿಗೆ ವೀಕ್ಷಿಸುತ್ತಿದ್ದವರು ತಕ್ಷಣ ಧಾವಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ರಥವನ್ನು ಎಳೆಯುತ್ತಿದ್ದ ವೇಳೆ ಇದ್ದಕ್ಕಿದ್ದಂತೆ ರಥದ ಚಕ್ರವು ಕೆಳಗುರುಳಿ ಬಿದ್ದಿದ್ದು, ರಥದ ಚಕ್ರದಡಿ ಸಿಲುಕಿ ಇಬ್ಬರು ಸಾವನ್ನಪ್ಪಿದ್ದಾರೆ ಮತ್ತು ಘಟನೆಯಲ್ಲಿ ಗಾಯಗೊಂಡ ಮೂವರನ್ನು ಧರ್ಮಪುರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಪಿಜ್ಜಾ ಉದ್ಯೋಗಿಯನ್ನು ಮನಬಂದಂತೆ ಥಳಿಸಿದ ನಾಲ್ವರು ಯುವತಿಯರ ಗುಂಪು

    ಇದೀಗ ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್ ಅವರು ಘಟನೆಯಲ್ಲಿ ಸಾವನ್ನಪ್ಪಿರುವವವರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.

  • ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಲಿ- ರಥಕ್ಕೆ ಬಾಳೆಹಣ್ಣು ಎಸೆದ ಪ್ರೇಮಿ

    ಪ್ರೀತಿಸಿದ ಹುಡುಗಿ ಜೊತೆ ಮದುವೆಯಾಗಲಿ- ರಥಕ್ಕೆ ಬಾಳೆಹಣ್ಣು ಎಸೆದ ಪ್ರೇಮಿ

    ತುಮಕೂರು: ಯುವಕ, ಯುವತಿಯರು ತಾವು ಪ್ರೀತಿಸಿದಾತ ಅಥವಾ ಆಕೆಯನ್ನು ಮದುವೆಯಾಗಲು ಅವಿರತ ಪ್ರಯತ್ನ ಮಾಡುತ್ತಿರುತ್ತಾರೆ. ಅಂತೆಯೇ ತುಮಕೂರಿನಲ್ಲಿ ಯುವಕನೊಬ್ಬ ರಥಕ್ಕೆ ಬಾಳೆಹಣ್ಣು ಎಸೆದ ಘಟನೆ ನಡೆದಿದೆ.

    ಹೌದು. ತಿಪಟೂರಿನ ಕೆಂಪಮ್ಮ ದೇವಿ ಜಾತ್ರೆಯಲ್ಲಿ ತಾನು ಪ್ರೀತಿಸಿದ ಹುಡುಗಿಯ ಜೊತೆ ಮದುವೆಯಾಗಲಿ ಎಂದು ಬಾಳೆಹಣ್ಣಿನಲ್ಲಿ ಬರೆದು ಪ್ರೇಮಿ ರಥಕ್ಕೆ ಎಸೆದಿದ್ದಾನೆ. ಈ ಮೂಲಕ ಪ್ರಿಯತಮೆಯನ್ನು ಮದುವೆಯಾಗಲು ದೇವಿ ಮೊರೆ ಹೋಗಿದ್ದಾನೆ. ಇದನ್ನೂ ಓದಿ: ಬುಡಕಟ್ಟು ಸಮುದಾಯದ ಬಾಲಕಿಗೆ ಹಿಗ್ಗಾಮುಗ್ಗ ಥಳಿಸಿದ ಬಾಲಕ – ಕ್ರಮಕ್ಕೆ ಸಿಎಂ ಸೂಚನೆ

    “ನಮ್ಮುಡುಗಿ ಜೊತೆ ಮದುವೆ ಆಗಲಿ” ಪಿ ಲವ್ ಎಲ್ ಅಂತಾ ಬಾಳೆಹಣ್ಣಿನಲ್ಲಿ ಬರೆದಿದ್ದಾನೆ. ನಂತರ ಅದನ್ನು ರಥಕ್ಕೆ ಎಸೆಯುವ ಮೂಲಕ ದೇವಿಯಲ್ಲಿ ಬೇಡಿಕೊಂಡಿದ್ದಾನೆ.

  • ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಚಂಡಮಾರುತ ಎಫೆಕ್ಟ್- ಸಮುದ್ರದಲ್ಲಿ ತೇಲಿ ಬಂತು ಚಿನ್ನದ ರಥ!

    ಅಮರಾವತಿ: ಅಸನಿ ಚಂಡಮಾರುತದ ಪ್ರಭಾವದಿಂದಾಗಿ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸುನ್ನಪಲ್ಲಿಯ ಕರಾವಳಿ ಪ್ರದೇಶಕ್ಕೆ ಬಂಗಾರ ಬಣ್ಣದ ರಥವೊಂದು ತೇಲಿ ಬಂದಿದೆ.

    ಸಮುದ್ರದಲ್ಲಿ ತೇಲುತ್ತಿದ್ದ ರಥವನ್ನು ನೋಡಿದ ಗ್ರಾಮಸ್ಥರು ಅದನ್ನು ಹಗ್ಗ ಕಟ್ಟಿ ಎಳೆದು ದಡಕ್ಕೆ ತಂದಿದ್ದಾರೆ. ಚಂಡಮಾರುತದ ತೀವ್ರತೆ ಹೆಚ್ಚಾಗಿರುವುದರಿಂದಾಗಿ ಇದು ಮಯನ್ಮಾರ್, ಮಲೇಷಿಯಾ ಅಥವಾ ಥೈಲೆಂಡ್‍ನಿಂದ ಬಂದಿರಬಹುದೆಂದು ಶಂಕಿಸಲಾಗಿದೆ.

    ಈ ರಥವು ನೋಡಲು ಏಷ್ಯಾ ರಾಷ್ಟ್ರಗಳ ಮಠದ ಆಕಾರವನ್ನು ಹೊಂದಿದೆ. ಚಂಡಮಾರುತದ ಪ್ರಭಾವದಿಂದಾಗಿ ಉಂಟಾದ ಎತ್ತರದ ಅಲೆಗಳ ಕಾರಣದಿಂದಾಗಿ ರಥವು ಕರಾವಳಿಗೆ ಕೊಚ್ಚಿ ಹೋಗಿರಬಹುದು ಎಂದು ಗ್ರಾಮಸ್ಥರು ಹೇಳಿದ್ದಾರೆ. ಈ ರಥವನ್ನು ನೋಡಲು ಸುತ್ತಮುತ್ತಲಿನ ಜನರೆಲ್ಲರೂ ಸಮದ್ರದ ದಡದಲ್ಲಿ ಸೇರಿದ್ದರು. ಜೋತೆಗೆ ಈನ ರಥವನ್ನು ಕೌತುಕದಿಂದ ವೀಕ್ಷಿಸಿದರು. ಇದನ್ನೂ ಓದಿ: ಲಿವ್ ಇನ್ ರಿಲೇಶನ್‍ಶಿಪ್‍ನಲ್ಲಿದ್ದು ಮದುವೆ ಅಂದಾಗ ಮನೆಯಿಂದ ಹೊರಹಾಕ್ದ!

    ಈ ಬಗ್ಗೆ ಸಂತೆಬೊಮ್ಮಾಳಿ ತಹಸೀಲ್ದಾರ್ ಜೆ.ಚಲಮಯ್ಯ ಮಾತನಾಡಿ, ಯಾವುದೇ ದೇಶದಿಂದ ಬಂದಿರದಿರಬಹುದು ಅಥವಾ ಭಾರತೀಯ ಕರಾವಳಿಯಲ್ಲಿ ಎಲ್ಲೋ ಕೆಲವು ಚಲನಚಿತ್ರಗಳ ಚಿತ್ರೀಕರಣಕ್ಕಾಗಿ ರಥವನ್ನು ಬಳಸಲಾಗಿರಬಹುದು. ಇದು ಚಂಡಮಾರುತದ ಪ್ರಭಾವದಿಂದಾಗಿ ಶ್ರೀಕಾಕುಲಂ ತೀರಕ್ಕೆ ಬಂದಿರಬಹುದು ಎಂದು ಶಂಕಿಸಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಎರಡೇ ದಿನದಲ್ಲಿ ಸಿಕ್ಸ್ ಪ್ಯಾಕ್ – ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು

  • ಉರುಳಿ ಬಿದ್ದ ರಥ- ಐವರು ಭಕ್ತರಿಗೆ ಗಂಭೀರ ಗಾಯ

    ಉರುಳಿ ಬಿದ್ದ ರಥ- ಐವರು ಭಕ್ತರಿಗೆ ಗಂಭೀರ ಗಾಯ

    – ಕೋವಿಡ್ ನಿಯಮ ಉಲ್ಲಂಘಿಸಿ ಜಾತ್ರೆ

    ಯಾದಗಿರಿ: ರಥೋತ್ಸವ ವೇಳೆ ರಥದ ಮೇಲ್ಭಾಗ ಉರುಳಿ ಬಿದ್ದ ಘಟನೆ ಯಾದಗಿರಿ ತಾಲೂಕಿನ ಬಳಿಚಕ್ರದಲ್ಲಿ ನಡೆದಿದೆ. ಐವರು ಭಕ್ತರಿಗೆ ಗಂಭೀರ ಗಾಯಗಳಾಗಿದ್ದು, ಓರ್ವ ಭಕ್ತನ ಸ್ಥಿತಿ ಚಿಂತಾಜನಕವಾಗಿದೆ.

    ಕೊರೊನಾ ಭೀತಿ ಹಿನ್ನೆಲೆ ಜಾತ್ರೆ ಮತ್ತು ರಥೋತ್ಸವಕ್ಕೆ ಜಿಲ್ಲಾಡಳಿತ ಬ್ರೇಕ್ ಹಾಕಿದೆ. ಜಿಲ್ಲಾಡಳಿತದ ನಿಷೇಧದ ನಡುವೆಯೂ ಯಾದಗಿರಿ ತಾಲೂಕಿನ ಬಳಿಚಕ್ರ ಗ್ರಾಮದ ಆರಾಧ್ಯ ದೈವ ಆತ್ಮಲಿಂಗೇಶ್ವರ ರಥೋತ್ಸವಕ್ಕೆ ಗ್ರಾಮಸ್ಥರು ಮುಂದಾಗಿದ್ದರು. ಜಿಲ್ಲಾಡಳಿತ ಆದೇಶಕ್ಕೆ ಕ್ಯಾರೆ ಎನ್ನದ ಗ್ರಾಮಸ್ಥರು, ನೂರಾರು ಜನ ಸೇರಿ ರಥವನ್ನು ಎಳೆಯಲು ಮುಂದಾಗಿದ್ದಾರೆ.

    ರಭಸವಾಗಿ ರಥ ಎಳೆಯುವಾಗ ರಥ ಏಕಾಏಕಿ ಮೇಲ್ಭಾಗ ಅರ್ಧಕ್ಕೆ ಕಟ್ ಆಗಿ ಭಕ್ತರ ಮೇಲೆ ಉರುಳಿದೆ. ಕಬ್ಬಿಣದ ರಥ ಎಳೆಯುತ್ತಿದ್ದ ಭಕ್ತರ ಮೇಲೆ ಬಿದ್ದ ಪರಿಣಾಮ, ಭಕ್ತರ ಕೈ-ಕಾಲುಗಳು ಕಟ್ ಆಗಿವೆ. ಸದ್ಯ ಗಾಯಾಳು ಭಕ್ತರಿಗೆ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸೈದಾಪೂರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅವಘಡ ನಡೆದಿದೆ.

     

  • ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವು

    ರಥದ ಚಕ್ರದಡಿ ಸಿಲುಕಿ ಗಾಯಗೊಂಡಿದ್ದ ಭಕ್ತ ಸಾವು

    ಯಾದಗಿರಿ: ರಥದ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದ ಭಕ್ತ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಯಾದಗಿರಿ ಜಿಲ್ಲೆಯ ಹುಣಸಗಿ ತಾಲೂಕಿನ ಅಗ್ನಿ ಗ್ರಾಮದಲ್ಲಿ ಮಾರ್ಚ್ 5ರಂದು ಗ್ರಾಮ ದೇವತೆ ರಥೋತ್ಸವದ ವೇಳೆ ಭಕ್ತ ರಮೇಶ್ ಎಂಬವರು ರಥದ ಚಕ್ರದಡಿ ಸಿಲುಕಿ ಗಂಭೀರವಾಗಿ ಗಾಯಗೊಂಡಿದ್ದರು.

    ರಥಕ್ಕೆ ಮೇಕೆ ಬಲಿ ಕೊಡುವ ವೇಳೆ ನಡೆದ ಈ ಅವಘಡದಲ್ಲಿ ರಮೇಶ್ ಗಂಭೀರವಾಗಿ ಗಾಯಗೊಂಡಿದ್ದರು. ಭಕ್ತ ರಮೇಶ್ ರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿಜಯಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಒಂದು ವಾರ ಜೀವನ್ಮರಣ ಜೊತೆಗೆ ಹೋರಾಡಿದ ರಮೇಶ್ ಇಂದು ಮೃತಪಟ್ಟಿದ್ದಾರೆ.

    ಹುಣಸಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಘಟನೆಗೆ ಪೊಲೀಸರ ನಿರ್ಲಕ್ಷ್ಯ ಕಾರಣ ಎನ್ನಲಾಗುತ್ತಿದೆ. ಜಾತ್ರೆಯಲ್ಲಿ ಪ್ರಾಣಿಬಲಿ ನಿಷೇಧವಿದ್ದರು ಭಕ್ತರು ಪ್ರಾಣಿ ವಧೆ ನಡೆಸಿದ್ದಾರೆ. ರಥೋತ್ಸವದ ವೇಳೆಯಲ್ಲಿ ಸೂಕ್ತ ಬಂದೋಬಸ್ತ್ ಪೊಲೀಸರು ನೀಡದ ಹಿನ್ನೆಲೆ ಈ ಅವಘಡ ನಡೆದೆ ಎನ್ನುವುದು ಎಂದು ಸ್ಥಳೀಯರು ಆರೋಪಿಸಿದ್ದಾರೆ.

  • ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    ಒಂದೊತ್ತು ಊಟಕ್ಕೂ ಪರದಾಡ್ತಿದ್ದ ಭಕ್ತನಿಂದ 10 ಕೋಟಿ ಮೌಲ್ಯದ ಚಿನ್ನದ ತೇರು ಅರ್ಪಣೆ

    – ತನ್ನ ದುಡಿಮೆಯಲ್ಲಿ ಸಂಪಾದಿಸಿದ ಆಸ್ತಿ ಮಾರಾಟ
    – ಸಿದ್ಧಲಿಂಗೇಶ್ವರ ದೇವರಿಗೆ 10 ಕೋಟಿ ವೆಚ್ಚದ ಚಿನ್ನದ ತೇರು

    ತುಮಕೂರು: ಜಿಲ್ಲೆಯ ಕುಣಿಗಲ್ ತಾಲೂಕಿನ ಎಡೆಯೂರು ಸಿದ್ಧಲಿಂಗೇಶ್ವರ ಸ್ವಾಮಿ ದೇವರಿಗೆ ಭಕ್ತರೊಬ್ಬರು ಸುಮಾರು 10 ಕೋಟಿ ರೂ. ಮೌಲ್ಯದ  ಚಿನ್ನದ ತೇರನ್ನು ಕಾಣಿಕೆಯಾಗಿ ನೀಡಿದ್ದಾರೆ.

    ಕುಣಿಗಲ್ ತಾಲೂಕಿನ ದೇವಕನ್ನಸಂದ್ರದ ಶಿವಣ್ಣ ತೋಂಟದಾರ್ಯ ಎಂಬುವರು ದೇವರಿಗೆ ಚಿನ್ನದ ತೇರನ್ನ ಸಮರ್ಪಿಸಿದ್ದಾರೆ. ಚಿಕ್ಕ ವಯಸ್ಸಿನಲ್ಲಿ ಶಿವಣ್ಣ ಅವರಿಗೆ ಒಂದೊತ್ತಿನ ಊಟಕ್ಕೂ ಪರದಾಡುವ ಪರಿಸ್ಥಿತಿ ಇತ್ತಂತೆ. ಆಗ ಎಡೆಯೂರು ಸಿದ್ಧಲಿಂಗೇಶ್ವರ ದೇವರು ಕೈ ಹಿಡಿದು ಕೋಟ್ಯಂತರ ರೂ. ಸಂಪಾದನೆ ಮಾಡುವಂತೆ ಆಶೀರ್ವಾದ ಮಾಡಿದ್ದರಂತೆ. ಹೀಗಾಗಿ ದೇವರ ಕೃಪೆಯಿಂದ ತಾನು ಶ್ರೀಮಂತನಾಗಿದ್ದು, ದೇವರಿಗೆ ಕಾಣಿಕೆ ಕೊಡಬೇಕು ಎಂದು ಬಯಸಿ ಕುಟುಂಬ ಸಮೇತವಾಗಿ ಬಂದು ಚಿನ್ನದ ತೇರನ್ನ ಸಮರ್ಪಿಸಿದ್ದಾರೆ.

    ಶಿವಣ್ಣ 50 ವರ್ಷದ ಹಿಂದೆ ಉಟ್ಟ ಬಟ್ಟೆಯಲ್ಲಿ ಬೆಂಗಳೂರಿಗೆ ಹೋದರು. ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಕೂಲಿ ಮಾಡದೆ ಬದುಕಿಲ್ಲ ಎನ್ನುವ ಸ್ಥಿತಿಯಲ್ಲಿ ಕುಟುಂಬ ಇತ್ತು. ಅಂದಿನಿಂದ ಕೆಲ ಕಾಲ ಖಾಸಗಿ ಬಸ್ ಕಂಡಕ್ಟರ್ ಆಗಿ ಕೆಲಸ ಮಾಡಿದ್ದರು. ನಂತರ ತರಕಾರಿ ವ್ಯಾಪಾರ ಮಾಡಿದರು. ಬಳಿಕ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಟ್ಟರು. ಇದೀಗ ಶಿವಣ್ಣನವರು ಬೆಂಗಳೂರಿನ ಪ್ರಭಾವಿ ರಿಯಲ್ ಎಸ್ಟೇಟ್ ಉದ್ಯಮಿಗಳಲ್ಲಿ ಒಬ್ಬರು. ಅಂದು ಧೈರ್ಯ ತುಂಬಿದ ದೈವಕ್ಕೆ ಏನಾದರೂ ಮಾಡಬೇಕು ಎನ್ನುವ ಬಯಕೆಯ ಹಿನ್ನೆಲೆಯಲ್ಲಿ ತಮ್ಮ ಹೆಸರಿಗಿದ್ದ ಸೈಟ್‍ಗಳನ್ನ ಮಾರಿ ಎಡೆಯೂರು ಸಿದ್ಧಲಿಂಗೇಶ್ವರನಿಗೆ 10 ಕೋಟಿ ಮೌಲ್ಯದ ಚಿನ್ನದ ತೇರು ನೀಡಿದ್ದಾರೆ ಎಂದು ಪ್ರಧಾನ ಅರ್ಚಕರು ಶಿವಮೂರ್ತಿಯ್ಯ ತಿಳಿಸಿದ್ದಾರೆ.

    ಶಿವಣ್ಣ ತಾವು ಹಂತ ಹಂತವಾಗಿ ಜೀವನದಲ್ಲಿ ಮೇಲಕ್ಕೆ ಏರುತಿದ್ದಂತೆ ಎಡೆಯೂರು ಸಿದ್ಧಲಿಂಗೇಶ್ವರನಿಗೆ ವಿಶೇಷ ಕಾಣಿಕೆ, ದೇವಸ್ಥಾನದ ಸೇವಾಕಾರ್ಯ ಮಾಡುತ್ತಿದ್ದರು. ಈ ಹಿಂದೆ ಕಗ್ಗೆರೆ ಸಿದ್ಧಲಿಂಗೇಶ್ವರನಿಗೆ ಬೆಳ್ಳಿಯ ಮೂರ್ತಿ ಅರ್ಪಿಸಿದ್ದರು. ಇದೀಗ ಶಿವಣ್ಣ ಕೊಟ್ಟ ಚಿನ್ನದ ತೇರು ಶ್ರೀಕ್ಷೇತ್ರದ ಜಾತ್ರೆ ವೇಳೆ ರಥದಲ್ಲಿ ಅಲಂಕರಿಸಿ ಎಳೆಯಲಾಗುವುದು.