Tag: ರತನ್ ಲಾಲ್

  • ಜ್ಞಾನವಾಪಿ ಕೇಸ್ – ಅವಹೇಳನಕಾರಿ ಪೋಸ್ಟ್ ಹಾಕಿದ್ದ ದೆಹಲಿ ಪ್ರಾಧ್ಯಾಪಕನಿಗೆ ಜಾಮೀನು

    ಜ್ಞಾನವಾಪಿ ಕೇಸ್ – ಅವಹೇಳನಕಾರಿ ಪೋಸ್ಟ್ ಹಾಕಿದ್ದ ದೆಹಲಿ ಪ್ರಾಧ್ಯಾಪಕನಿಗೆ ಜಾಮೀನು

    ನವದೆಹಲಿ: ಜ್ಞಾನವಾಪಿ ಮಸೀದಿಯಲ್ಲಿ ದೊರೆತ ಶಿವಲಿಂಗದ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದ ದೆಹಲಿ ವಿಶ್ವವಿದ್ಯಾಲಯದ ಪ್ರಾಧ್ಯಾಪಕನಿಗೆ ದೆಹಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. 50,000 ರೂ. ಬಾಂಡ್ ನೀಡಿದ ಬಳಿಕ ಪ್ರಾಧ್ಯಾಪಕ ಜಾಮೀನಿನ ಮೇಲೆ ಹೊರಬರಬಹುದು ಎಂದಿದೆ.

    ಪ್ರಾಧ್ಯಾಪಕ ರತನ್ ಲಾಲ್ ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಕಂಡುಬಂದ ಶಿವಲಿಂಗದ ಬಗ್ಗೆ ಅವಹೇಳನಕಾರಿ ಕಾಮೆಂಟ್‌ಗಳನ್ನು ಮಾಡಿದ್ದ. ಈ ಹಿನ್ನೆಲೆಯಲ್ಲಿ ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಮಂಗಳವಾರ ರತನ್ ಲಾಲ್ ವಿರುದ್ಧ ದೂರು ನೀಡಿದ್ದು, ಪೊಲೀಸರು ಎಫ್‌ಐಆರ್ ದಾಖಲಿಸಿದ್ದರು. ಇದನ್ನೂ ಓದಿ: 12 ಜ್ಯೋತಿರ್ಲಿಂಗಗಳಲ್ಲಿ ಜ್ಞಾನವಾಪಿಯಲ್ಲಿ ಸಿಕ್ಕ ಶಿವಲಿಂಗವೂ ಒಂದು: ವಿಹೆಚ್‌ಪಿ

    ರತನ್ ಲಾಲ್‌ನನ್ನು ಶುಕ್ರವಾರ ರಾತ್ರಿ ಪೊಲೀಸರು ಬಂಧಿಸಿದ್ದರು. ಬಳಿಕ ರತನ್ ಲಾಲ್ ಜಾಮೀನು ಹಾಗೂ ರಕ್ಷಣೆಯನ್ನು ಕೋರಿ ದೆಹಲಿ ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ದೆಹಲಿ ನ್ಯಾಯಾಲಯ 50,000 ರೂ. ಬಾಂಡ್ ವಿಧಿಸಿ, ಜಾಮೀನು ಮಂಜೂರು ಮಾಡಿದೆ. ಇದನ್ನೂ ಓದಿ: ವಾಹನ ಸವಾರರಿಗೆ ಕೇಂದ್ರ ಸರ್ಕಾರದಿಂದ ಗುಡ್‌ನ್ಯೂಸ್‌ – ಪೆಟ್ರೋಲ್‌, ಡೀಸೆಲ್‌ ಅಬಕಾರಿ ಸುಂಕ ಇಳಿಕೆ

    ರತನ್ ಲಾಲ್ ವಿರುದ್ಧ ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡಸAಹಿತೆ 153ಎ(ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವ ಹಾಗೂ ಸೌಹಾರ್ದದ ಮೇಲೆ ಪರಿಣಾಮ ಬೀರುವ ಕೃತ್ಯಗಳು) ಹಾಗೂ 295ಎ(ಉದ್ದೇಶಪೂರ್ವಕವಾಗಿ ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಮೂಲಕ ಅವರ ಧಾಮಿಕ ಭಾವನೆಯನ್ನು ಉದ್ರೇಕಿಸುವುದು) ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

  • ಜ್ಞಾನವಾಪಿ ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ – ದೆಹಲಿ ಪ್ರಾಧ್ಯಾಪಕ ಅರೆಸ್ಟ್

    ಜ್ಞಾನವಾಪಿ ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ – ದೆಹಲಿ ಪ್ರಾಧ್ಯಾಪಕ ಅರೆಸ್ಟ್

    ನವದೆಹಲಿ: ವಾರಣಾಸಿಯ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಪತ್ತೆಯಾದ ‘ಶಿವಲಿಂಗ’ದ ಬಗ್ಗೆ ಆಕ್ಷೇಪಾರ್ಹ ಹೇಳಿಕೆಗಳನ್ನು ಉಲ್ಲೇಖಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಕ್ಕಾಗಿ ದೆಹಲಿ ವಿಶ್ವವಿದ್ಯಾಲಯದ ಹಿಂದೂ ಕಾಲೇಜಿನ ಸಹ ಪ್ರಾಧ್ಯಾಪಕ ರತನ್ ಲಾಲ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿದೆ.

    ಸದ್ಯ ರತನ್ ಲಾಲ್ ವಿರುದ್ಧ ಉತ್ತರ ಸೈಬರ್ ಪೊಲೀಸ್ ಠಾಣೆಯಲ್ಲಿ ಭಾರತೀಯ ದಂಡ ಸಂಹಿತೆ 153ಎ (ಧರ್ಮ, ಜನಾಂಗ, ಹುಟ್ಟಿದ ಸ್ಥಳ, ವಾಸಸ್ಥಳ, ಭಾಷೆ ಇತ್ಯಾದಿಗಳ ಆಧಾರದ ಮೇಲೆ ವಿವಿಧ ಗುಂಪುಗಳ ನಡುವೆ ದ್ವೇಷವನ್ನು ಉತ್ತೇಜಿಸುವುದು ಮತ್ತು ಸೌಹಾರ್ದತೆ ಕಾಪಾಡಲು ದುಷ್ಪರಿಣಾಮ ಬೀರುವ ಕೃತ್ಯಗಳು) ಮತ್ತು 295ಎ (ಉದ್ದೇಶಪೂರ್ವಕವಾಗಿ ಯಾವುದೇ ವರ್ಗದ ಧರ್ಮವನ್ನು ಅವಮಾನಿಸುವ ಮೂಲಕ ಅವರ ಧಾರ್ಮಿಕ ಭಾವನೆಗಳನ್ನು ಉದ್ರೇಕಿಸುವುದು) ಸೆಕ್ಷನ್‌ಗಳಡಿ ಪ್ರಕರಣ ದಾಖಲಾಗಿದೆ.

    ದೆಹಲಿ ಮೂಲದ ವಕೀಲ ವಿನೀತ್ ಜಿಂದಾಲ್ ಅವರು ನೀಡಿದ ದೂರಿನ ಆಧಾರದ ಮೇಲೆ ಮಂಗಳವಾರ ರಾತ್ರಿ ರತನ್ ಲಾಲ್ ವಿರುದ್ಧ ಪೊಲೀಸರು ಎಫ್‍ಐಆರ್ ದಾಖಲಿಸಿದ್ದರು. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

    ಇತ್ತೀಚೆಗಷ್ಟೇ ರತನ್ ಲಾಲ್ ಶಿವಲಿಂಗದ ಬಗ್ಗೆ ಅವಹೇಳನಕಾರಿ, ಪ್ರಚೋದಿಸುವ ಮತ್ತು ಪ್ರಚೋದನಕಾರಿ ಟ್ವೀಟ್‍ನನ್ನು ಪೋಸ್ಟ್ ಮಾಡಿರುವುದನ್ನು ವಿನೀತ್ ಜಿಂದಾಲ್ ತಮ್ಮ ಟ್ವಿಟ್ಟರ್‌ನಲ್ಲಿ  ಹಂಚಿಕೊಂಡಿದ್ದರು. ಜೊತೆಗೆ ಜ್ಞಾನವಾಪಿ ಮಸೀದಿ ಸಂಕೀರ್ಣದಲ್ಲಿ ಸಿಕ್ಕಿರುವ ಶಿವಲಿಂಗದ ಬಗ್ಗೆ ಈ ರೀತಿಯ ಹೇಳಿಕೆಯನ್ನು  ಪೋಸ್ಟ್ ಮಾಡಲಾಗಿದ್ದು, ಇದು ಅತ್ಯಂತ ಸೂಕ್ಷ್ಮ ವಿಚಾರವಾಗಿದ್ದು, ಈ ವಿಷಯ ಕುರಿತಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ ಎಂದು ತಮ್ಮ ದೂರಿನಲ್ಲಿ ವಕೀಲರು ತಿಳಿಸಿದ್ದರು. ಇದನ್ನೂ ಓದಿ: ಶಿವಲಿಂಗದ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ್ದ AIMIM ನಾಯಕ ಅರೆಸ್ಟ್

    ಈ ಹಿಂದೆ ತಮ್ಮ ಪೋಸ್ಟ್ ಅನ್ನು ಸಮರ್ಥಿಸಿಕೊಂಡಿರುವ ರತನ್ ಲಾಲ್, ಭಾರತದಲ್ಲಿ, ನೀವು ಯಾವುದೇ ವಿಷಯದ ಬಗ್ಗೆ ಮಾತನಾಡಿದರೂ, ಯಾರಿಗಾದರೂ ಅಥವಾ ಇನ್ನೊಬ್ಬರ ಭಾವನೆಗೆ ಧಕ್ಕೆಯಾಗುತ್ತದೆ. ಹಾಗಾಗಿ ಇದು ಹೊಸದೇನಲ್ಲ. ನಾನು ಇತಿಹಾಸಕಾರನಾಗಿದ್ದು, ಹಲವಾರು ಅವಲೋಕನಗಳನ್ನು ಮಾಡಿದ್ದೇನೆ. ನಾನು ಅವುಗಳ ಬಗ್ಗೆ ಕೂಡ ಬರೆದಿದ್ದೇನೆ. ನಾನು ನನ್ನ ಪೋಸ್ಟ್‌ನಲ್ಲಿ ಬಹಳ ಸಭ್ಯ ಭಾಷೆ ಬಳಸಿದ್ದೇನೆ. ಈಗಲೂ ಸಭ್ಯವಾಗಿಯೇ ಬರೆದಿದ್ದೇನೆ. ನನ್ನನ್ನು ನಾನು ರಕ್ಷಿಸಿಕೊಳ್ಳುತ್ತೇನೆ ಎಂದಿದ್ದಾರೆ.