Tag: ರಣ್ ದೀಪ್ ಹೂಡ

  • ‘ಸಾವರ್ಕರ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ: ಬಾಕ್ಸ್ ಆಫೀಸಿಗೆ ಬಂದಿದ್ದೆಷ್ಟು?

    ‘ಸಾವರ್ಕರ್’ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ: ಬಾಕ್ಸ್ ಆಫೀಸಿಗೆ ಬಂದಿದ್ದೆಷ್ಟು?

    ನಾನಾ ಕಾರಣಗಳಿಂದ ಅತೀ ನಿರೀಕ್ಷೆ ಮೂಡಿಸಿದ್ದ ‘ಸ್ವಾತಂತ್ರ ವೀರ್ ಸಾವರ್ಕರ್’ (Savarkar) ಸಿನಿಮಾ ನಿನ್ನೆಯಷ್ಟೇ ಬಿಡುಗಡೆ ಆಗಿದೆ. ಆದರೆ, ಅಂದುಕೊಂಡಷ್ಟು ಚಿತ್ರಕ್ಕೆ ಪ್ರತಿಕ್ರಿಯೆ ಸಿಕ್ಕಿಲ್ಲ ಎನ್ನುವುದು ಬಾಕ್ಸ್ ಆಫೀಸಿಗೆ (Box Office) ಹರಿದು ಬಂದ ಹಣವೇ ಹೇಳುತ್ತಿದೆ. ಮೊದಲ ದಿನದ ಕಲೆಕ್ಷನ್ 1.15 ಲಕ್ಷ ರೂಪಾಯಿ ಬಂದಿದೆ ಎಂದು ಅಂದಾಜಿಸಲಾಗಿದೆ.

    ವಿವಾದಿತ ಚಿತ್ರಗಳು ಬಂದಾಗ ಜನರು ಅದನ್ನು ಮುಗಿಬಿದ್ದು ನೋಡಿ ಬಾಕ್ಸ್ ಆಫೀಸ್ ಕೂಡ ತುಂಬಿಸಿದ್ದಾರೆ. ಅದರಲ್ಲೂ ದಿ ಕಾಶ್ಮೀರ ಫೈಲ್ಸ್, ದಿ ಕೇರಳ ಸ್ಟೋರಿ ಚಿತ್ರಗಳನ್ನು ಸಖತ್ತಾಗಿಯೇ ಪ್ರೇಕ್ಷಕರಿಗೆ ಪ್ರಮೋಟ್ ಮಾಡಿದರು. ಆದರೆ, ವೀರ ಸಾವರ್ಕರ್ ಚಿತ್ರವನ್ನು ಅಷ್ಟಾಗಿ ಪ್ರೇಕ್ಷಕರು ಅಪ್ಪಿಕೊಂಡಿಲ್ಲ.

     

    ರಣ್ ದೀಪ್ ಹೂಡ (Randeep Hooda) ನಿರ್ದೇಶನದ ಹಾಗೂ ನಟನೆಯಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರ್ದೇಶಕರ ಕೆಲಸವನ್ನು ಪ್ರೇಕ್ಷಕ ಮೆಚ್ಚಿಕೊಂಡಿದ್ದಾನೆ.  ರಣ್ ದೀಪ್ ಈ ಸಿನಿಮಾದಲ್ಲಿ ಸಾವರ್ಕರ್ ಪಾತ್ರ ಮಾಡಿದ್ದರೆ, ಅವರ ಪತ್ನಿಯಾಗಿ ಅಂಕಿತಾ ಲೋಖಂಡೆ ನಟಿಸಿದ್ದಾರೆ. ಕಲಾ ನಿರ್ದೇಶಕರು ಆ ಕಾಲವನ್ನು ಚಿತ್ರದಲ್ಲಿ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ. ಆದರೂ, ಪ್ರೇಕ್ಷಕ ಮಾತ್ರ ತುಂಬಿದ ಪ್ರದರ್ಶನಕ್ಕೆ ಸಾಕ್ಷಿಯಾಗಿಲ್ಲ.

  • ಥೇಟ್ ಸಾವರ್ಕರ್ ರೀತಿಯಲ್ಲೇ ಕಾಣುವ ರಣ್ ದೀಪ್ : ಸಾವರ್ಕರ್ ಸಿನಿಮಾದ ಫಸ್ಟ್ ಲುಕ್

    ಥೇಟ್ ಸಾವರ್ಕರ್ ರೀತಿಯಲ್ಲೇ ಕಾಣುವ ರಣ್ ದೀಪ್ : ಸಾವರ್ಕರ್ ಸಿನಿಮಾದ ಫಸ್ಟ್ ಲುಕ್

    ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಜೀವನವನ್ನು ಆಧರಿಸಿದ ಸಿನಿಮಾವೊಂದು ಬಾಲಿವುಡ್ ನಲ್ಲಿ ಬರುತ್ತಿದೆ. ಸಾವರ್ಕರ್ ಜೀವನ ಸಾಧನೆಯನ್ನು ಬಿಂಬಿಸುವಂತಹ ಈ ಸಿನಿಮಾವನ್ನು ಮಹೇಶ್ ಮಂಜ್ರೇಕರ್ ನಿರ್ದೇಶನ ಮಾಡುತ್ತಿದ್ದು, ಸಾವರ್ಕರ್ ಪಾತ್ರದಲ್ಲಿ ರಣ್ ದೀಪ್ ಹೂಡ ಕಾಣಿಸಿಕೊಳ್ಳುತ್ತಿದ್ದಾರೆ. ಇದನ್ನೂ ಓದಿ : ಶಾರುಖ್ ಖಾನ್ ಮನೆ ‘ಮನ್ನತ್’ ನೇಮ್ ಪ್ಲೇಟ್ ನಾಪತ್ತೆ: ಇದರ ಹಿಂದಿದೆ ಭಾರೀ ರಹಸ್ಯ

    ಶನಿವಾರ ವೀರ ಸಾವರ್ಕರ್ ಅವರ ಹುಟ್ಟು ಹಬ್ಬದ ಪ್ರಯುಕ್ತ ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದ್ದು, ರಣ್ ದೀಪ್ ಹೂಡ ಥೇಟ್ ಸಾವರ್ಕರ್ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟರ ಮಟ್ಟಿಗೆ ಫಸ್ಟ್ ಲುಕ್ ಜನರ ಮನಸ್ಸು ಗೆದ್ದಿದೆ. ಮೊದಲ ಲುಕ್ ಹೀಗೆಯೇ ಬರಬೇಕು ಎಂದು ಶ್ರಮವಹಿಸಿ ಫಸ್ಟ್ ಲುಕ್ ತಯಾರಿಸಿದ್ದು, ಥೇಟ್ ಸಾವರ್ಕರ್ ಅವರ ಮುಖಭಾವವನ್ನೇ ಹೂಡ ಹೋಲುತ್ತಿದ್ದಾರೆ. ಇದನ್ನೂ ಓದಿ : ನಯನತಾರಾ ಮದುವೆ ದಿನಾಂಕ ಬದಲು, ರೆಸಾರ್ಟ್ ನಲ್ಲಿ ಸಪ್ತಪದಿ ತುಳಿಯಲಿದೆ ಜೋಡಿ

    ಫಸ್ಟ್ ಲುಕ್ ರಿಲೀಸ್ ಆಗುತ್ತಿದ್ದಂತೆಯೇ ಸಾಮಾಜಿಕ ಜಾಲತಾಣದಲ್ಲಿ ಅದು ವೈರಲ್ ಆಗಿದೆ, ಭಾರೀ ಮೆಚ್ಚುಗೆಗೂ ಪಾತ್ರವಾಗಿದೆ. ತಲೆಯ ಮೇಲಿನ ಟೋಪಿ, ಅವರು ಧರಿಸಿರುವ ಕನ್ನಡಕ, ಸುಮ್ಮಾ, ಮೀಸೆ ಮುಖಭಾವ ಹೀಗೆ ಎಲ್ಲವೂ ಸಾವರ್ಕರ್ ರೀತಿಯಲ್ಲಿ ತಯಾರಿಸಲಾಗಿದೆ. ಇದನ್ನೂ ಓದಿ : ರಜನಿಕಾಂತ್ ನನ್ನ ವೈರಿಯಲ್ಲ ಎಂದ ಕಮಲ್ ಹಾಸನ್

    ಸದ್ಯ ಫಸ್ಟ್ ಲುಕ್ ಮಾತ್ರ ತಯಾರಾಗಿದ್ದು, ಇನ್ನೂ ಶೂಟಿಂಗ್ ಶುರುವಾಗಿಲ್ಲ. ಸದ್ಯದಲ್ಲೇ ಚಿತ್ರೀಕರಣವನ್ನೂ ಪ್ರಾರಂಭಿಸುವುದಾಗಿ ಮಹೇಶ್ ಮಂಜ್ರೆಕರ್ ತಿಳಿಸಿದ್ದಾರೆ. ಈಗ ಅದಕ್ಕಾಗಿ ಸಕಲ ಸಿದ್ಧತೆಯನ್ನೂ ಮಾಡಿಕೊಳ್ಳಲಾಗುತ್ತಿದೆ.