Tag: ರಣ್ವಿತ್ ಶೆಟ್ಟಿ

  • ರಿಷಬ್ ಮಗನಿಗೆ ಕೂಸುಮರಿ ಮಾಡಿದ ʻಕಾಂತಾರʼ ನಟಿ ಸಪ್ತಮಿ

    ರಿಷಬ್ ಮಗನಿಗೆ ಕೂಸುಮರಿ ಮಾಡಿದ ʻಕಾಂತಾರʼ ನಟಿ ಸಪ್ತಮಿ

    ಸ್ಯಾಂಡಲ್‌ವುಡ್‌ನ (Sandalwood) ಮೂಗುತಿ ಸುಂದರಿ ಸಪ್ತಮಿ ಗೌಡ (Saptami Gowda) ಮತ್ತೆ ಸುದ್ದಿಯಲ್ಲಿದ್ದಾರೆ. `ಕಾಂತಾರ’ (Kantara Film) ಸೂಪರ್ ಸಕ್ಸಸ್ ನಂತರ ನಾಯಕಿ ಸಪ್ತಮಿ, ರಿಷಬ್ ಶೆಟ್ಟಿ (Rishab Shetty) ಮಗನನ್ನು ಕೂಸುಮರಿ ಮಾಡಿ ಮುದ್ದಾಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

     

    View this post on Instagram

     

    A post shared by Sapthami Gowda ???? (@sapthami_gowda)

    `ಕಾಂತಾರ’ ಸಿನಿಮಾ ಮೂಲಕ ಪ್ಯಾನ್ ಸ್ಟಾರ್ ನಟಿ ಆಗಿ ಮಿರ ಮಿರ ಅಂತಾ ಮಿಂಚ್ತಿರುವ ಸಪ್ತಮಿ ಗೌಡ ಇದೀಗ ರಿಷಬ್ ಮಗ ರಣ್ವಿತ್ ಶೆಟ್ಟಿನ (Ranvit Shetty) ಭೇಟಿ ಆಗಿದ್ದಾರೆ. ಕೂಸುಮರಿ ಮಾಡಿ ರಿಷಬ್ ಮಗನ ಜೊತೆ ಒಂದೊಳ್ಳೆಯ ಸಮಯ ಕಳೆದಿದ್ದಾರೆ. ರಣ್ವಿತ್‌ಗೆ ಕೂಸುಮರಿ ಮಾಡ್ತಾ ಮುದ್ದಾಡಿದ್ದಾರೆ. ಈ ಫೋಟೋಗಳು ಇದೀಗ ಅಭಿಮಾನಿಗಳ ಗಮನ ಸೆಳೆದಿದೆ. ಇದನ್ನೂ ಓದಿ: ಬಿಗ್ ಬಾಸ್ ವೇದಿಕೆಯಲ್ಲಿ ಸಾನ್ಯಗೆ ಖಡಕ್ ಉತ್ತರ ಕೊಟ್ಟ ಕಿಚ್ಚ

    ತಮ್ಮ ಪೋಸ್ಟ್‌ಗೆ ಫನ್ ಡೇ ಔಟ್ ಫಾರ್ ಚಿನ್ನೀಸ್ ಎಂದು ಬರೆದುಕೊಂಡಿದ್ದಾರೆ. ಹಚ್ಚ ಹಸಿರಿನ ಪ್ರದೇಶದಲ್ಲಿ ಸಪ್ತಮಿ ಮತ್ತು ರಣ್ವಿತ್ ಎಂಜಾಯ್ ಮಾಡ್ತಿದ್ದಾರೆ. ಇದು ಚಿಕು-ಚಿನ್ನು ಸ್ಟೋರಿ, ಚಿಕ್ಕು- ಚಿನ್ನಿಗೆ ದೃಷ್ಟಿ ತಾಕಿಸಬೇಡಿ ಪ್ಲೀಸ್ ಎಂದು ನಟಿ ಅಡಿಬರಹ ನೀಡಿದ್ದಾರೆ.

     

    View this post on Instagram

     

    A post shared by Sapthami Gowda ???? (@sapthami_gowda)

    ಇನ್ನೂ `ಕಾಂತಾರ’ ಸಕ್ಸಸ್ ನಂತರ ನಟಿ ಸಪ್ತಮಿ ಗೌಡ ಇದೀಗ ಅಭಿಷೇಕ್ ಅಂಬರೀಶ್ (Abhishek Ambreesh) ನಟನೆಯ `ಕಾಳಿ’ (Kali) ಸಿನಿಮಾಗೆ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಂಬಿ ಪುತ್ರನಿಗೆ ಜೋಡಿಯಾಗಿ ನಟಿಸಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಹೆಣ್ಣು ಮಗುವಿನ ತಂದೆಯಾದ ರಿಷಬ್ ಶೆಟ್ಟಿ

    ಹೆಣ್ಣು ಮಗುವಿನ ತಂದೆಯಾದ ರಿಷಬ್ ಶೆಟ್ಟಿ

    ಬೆಂಗಳೂರು: ಸ್ಯಾಂಡಲ್‍ವುಡ್ ನಟ ಕಮ್ ನಿರ್ಮಾಪಕ ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು 2ನೇ ಮಗುವಿಗೆ ಜನ್ಮ ನೀಡಿದ್ದಾರೆ. ಈ ವಿಚಾರವನ್ನು ರಿಷಬ್ ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಮತೋಷವನ್ನು ವ್ಯಕ್ತಪಡಿಸಿದ್ದಾರೆ.

    ಇಷ್ಟೇ ಚಂದದ ಮಗಳು ಹುಟ್ಟಿದ್ದಾಳೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ಬರೆದುಕೊಂಡು ದಂಪತಿ ಇಬ್ಬರು ಒಟ್ಟಿಗೆ ಇರುವ ಪೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ರಿಷಬ್ ಶೆಟ್ಟಿ ಹಂಚಿಕೊಂಡಿದ್ದಾರೆ. ಈ ಫೋಟೋವನ್ನು ನೋಡಿದ ಅಭಿಮಾನಿಗಳು ಕಾಮೆಂಟ್ ಮಾಡುವ ಮೂಲಕವಾಗಿ ಶುಭಕೋರುತ್ತಿದ್ದಾರೆ. ಹೊಸ ವರ್ಷಕ್ಕೆ ಹೊಸ ಸಂತಸದ ಸುದ್ದಿ ಹಂಚಿಕೊಂಡ ರಿಷಬ್ ಶೆಟ್ಟಿ

    2019 ಏಪ್ರಿಲ್ 7 ರಂದು ರಿಷಬ್ ಶೆಟ್ಟಿ ಅವರ ಪತ್ನಿ ಪ್ರಗತಿ ಅವರು ಗಂಡು ಮಗುವಿಗೆ ಜನ್ಮ ನೀಡಿದ್ದರು. ರಣ್ವಿತ್ ಶೆಟ್ಟಿ ಎಂದು ನಾಮಕರಣವನ್ನು ಮಾಡಿದ್ದಾರೆ. ಇದೀಗ ಈ ಕುಟುಂಬ 2ನೇ ಸದಸ್ಯನ ಆಗಮ ಮಾಡಿಕೊಂಡಿರುವ ಸಂತೋಷದಲ್ಲಿದೆ. ಇದನ್ನೂ ಓದಿ: ಯುಗಾದಿ ಹಬ್ಬದಂದೇ ರಿಷಬ್ ಶೆಟ್ಟಿ ಮನೆಗೆ ಪುಟಾಣಿ ಹೀರೋ ಎಂಟ್ರಿ

    ರಿಷಬ್ ಶೆಟ್ಟಿ ಅವರು ಫ್ರೆಬವರಿ 9 ರಂದು 2017 ರಲ್ಲಿ ಮೂಲತಃ ಶಿವಮೊಗ್ಗದ ರಿಪ್ಪನ್ ಪೇಟೆಯ ಪ್ರಗತಿ ಅವರನ್ನು ಮದುವೆಯಾಗಿದ್ದರು. ರಿಷಬ್ ಶೆಟ್ಟಿ ಅವರು ಹಿಟ್ ಸಿನಿಮಾಗಳನ್ನು ನೀಡಿತ್ತಾ ಸ್ಯಾಂಡಲ್‍ವುಡ್‍ನಲ್ಲಿ ತಮ್ಮದೇ ಆಗಿರುವ ಚಾಪನ್ನು ಮೂಡಿಸಿದ್ದಾರೆ.

  • ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ: ರಿಷಬ್ ಶೆಟ್ಟಿ

    ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ: ರಿಷಬ್ ಶೆಟ್ಟಿ

    ಬೆಂಗಳೂರು: ವರ್ಷದ ಹಿಂದೆ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ ಎಂದು ಹೇಳುವ ಮೂಲಕ ನಟ ಮತ್ತು ನಿರ್ದೇಶಕ ರಿಷಬ್ ಶೆಟ್ಟಿ ಅವರು ತನ್ನ ಮುದ್ದು ಮಗನ ಹುಟ್ಟುಹಬ್ಬಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ.

    ಚಂದನವನದ ಕಿಲಾಡಿ ನಿರ್ದೇಶಕ ರಿಷಬ್ ಶೆಟ್ಟಿ ಅವರ ಪುತ್ರ ರಣ್ವಿತ್ ಶೆಟ್ಟಿ ಹುಟ್ಟಿ ಇಂದಿಗೆ ಒಂದು ವರ್ಷವಾಗಿದೆ. ಲಾಕ್‍ಡೌನ್ ಮಧ್ಯೆಯೂ ಮಗನ ಹುಟ್ಟುಹಬ್ಬಕ್ಕಾಗಿ ವಿಶೇಷವಾಗಿ ವಿಡಿಯೋ ಸಾಂಗ್‍ವೊಂದನ್ನು ತಯಾರಿ ಮಾಡಿರುವ ರಿಷಬ್, ಅದನ್ನು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ವಿಶ್ ಮಾಡಿದ್ದಾರೆ.

    ಈ ವಿಚಾರವಾಗಿ ಟ್ವೀಟ್ ಮಾಡಿರುವ ರಿಷಬ್, ವರುಷದ ಹಿಂದೆ ಹುಟ್ಟಿದ ಈ ಪುಟ್ಟ ಕಂದನ ಜೊತೆ ನನ್ನಲ್ಲೊಬ್ಬ ಅಪ್ಪನೂ ಹುಟ್ಟಿದ. ಅಂದಿನಿಂದ ಇಂದಿನವರೆಗೆ ನಿತ್ಯ ಹಬ್ಬದಂತಿರುವ ಇವನ ಮುಗ್ಧತೆ ಮನೆಗೆ ದೀಪ, ತೊದಲು ಮಾತೇ ತಳಿರು ತೋರಣ, ಹಾಲುಗಲ್ಲದ ನಗು ಹೋಳಿಗೆಯ ಹೂರಣ. ಮೊದಲ ವರ್ಷ ತುಂಬಿದ ಸಡಗರದಲ್ಲಿ ನಿಮ್ಮೆಲ್ಲರ ಆಶೀರ್ವಾದ ಇವನಿಗಿರಲಿ ಎಂದು ಬರೆದುಕೊಂಡಿದ್ದಾರೆ.

    ಸಿಂಪಲ್ ಸ್ಟಾರ್ ರಕ್ಷಿತ್ ಅವರು ಕೂಡ ಸ್ನೇಹಿತ ರಿಷಬ್ ಶೆಟ್ಟಿ ಮಗನ ಹುಟ್ಟುಹಬ್ಬಕ್ಕೆ ವಿಶ್ ಮಾಡಿದ್ದು, ರಣ್ವಿತ್ ಜೊತೆ ಇರುವ ಎರಡು ಮುದ್ದು ಫೋಟೋಗಳನ್ನು ಟ್ವೀಟ್ ಮಾಡಿದ್ದಾರೆ. ಜೊತೆಗೆ ಹ್ಯಾಪಿ ಬರ್ತ್ ಡೇ ಎಂದು ಬರೆದು ಮೂರು ಮುತ್ತು ಕೊಡುವ ಇಮೋಜಿಗಳನ್ನು ಹಾಕಿದ್ದಾರೆ. ಇದರ ಜೊತೆಗೆ ರಿಷಬ್ ಅವರ ಸಾವಿರಾರು ಅಭಿಮಾನಿಗಳು ರಣ್ವಿತ್ ಹುಟ್ಟುಹಬ್ಬಕ್ಕೆ ಟ್ವಿಟ್ಟರ್ ಮೂಲಕ ಶುಭ ಕೋರಿ ಆಶೀರ್ವಾದಿಸಿದ್ದಾರೆ.

    https://twitter.com/shetty_rishab/status/1240672139495108613

    ಸದ್ಯ ಲಾಕ್‍ಡೌನ್ ಸಮಯವನ್ನು ತಮ್ಮ ಮಗ ಹಾಗೂ ಮಡದಿಯ ಜೊತೆ ಕಳೆಯುತ್ತಿರುವ ರಿಷಬ್ ಇತ್ತೀಚೆಗಷ್ಟೇ ತನ್ನ ಮಗನಿಗೆ ಎಣ್ಣೆ ಹಚ್ಚುತ್ತಿರುವ ಕ್ಯೂಟ್ ಫೋಟೋವೊಂದನ್ನು ಹಂಚಿಕೊಂಡಿದ್ದರು. ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ ಎಂದು ಬರೆದುಕೊಂಡಿದ್ದರು.

    ರಿಷಬ್ ಶೆಟ್ಟಿ ಅವರು 2017 ಫೆಬ್ರವರಿ 9 ರಂದು ಪ್ರಗತಿ ಅವರನ್ನು ಮದುವೆಯಾಗಿದ್ದರು. ರಿಕ್ಕಿ ಚಿತ್ರದ ಸಮಯದಲ್ಲಿ ಭೇಟಿಯಾಗಿದ್ದ ಇಬ್ಬರಿಗೆ ನಂತರ ಪರಿಚಯವಾಗಿತ್ತು. ಪರಿಚಯ ಪ್ರೀತಿಗೆ ತಿರುಗಿ, ಬಳಿಕ ಇಬ್ಬರು ಪ್ರೇಮ ಬಲೆಯಲ್ಲಿ ಸಿಲುಕಿ ಇಬ್ಬರ ಮನೆಯವರಿಗೂ ತಿಳಿಸಿ ಪರಸ್ಪರ ಎರಡು ಕುಟುಂಬಗಳ ಒಪ್ಪಿಗೆ ಮೇರೆಗೆ ಮದುವೆಯಾಗಿದ್ದರು. ಈ ಜೋಡಿಗೆ 2019 ಏಪ್ರಿಲ್ 7ರಂದು ಗಂಡು ಮಗು ಜನಿಸಿತ್ತು. ಈ ಮಗುವಿಗೆ ರಣ್ವಿತ್ ಶೆಟ್ಟಿ ಎಂದು ಹೆಸರಿಟ್ಟಿದ್ದರು.

  • ಶೆಟ್ರು ಮನೇಲಿ ‘ವರ್ಕ್ ಫ್ರಂ ಹೋಂ’ ಬಲು ಜೋರು – ಎಲ್ಲಾ ಕೊರೊನಾ ಮಹಿಮೆ

    ಶೆಟ್ರು ಮನೇಲಿ ‘ವರ್ಕ್ ಫ್ರಂ ಹೋಂ’ ಬಲು ಜೋರು – ಎಲ್ಲಾ ಕೊರೊನಾ ಮಹಿಮೆ

    ಬೆಂಗಳೂರು: ಕೊರೊನಾ ವೈರಸ್ ಪರಿಣಾಮ ಬಹುತೇಕ ಮಂದಿ ‘ವರ್ಕ್ ಫ್ರಂ ಹೋಂ’ ಮೊರೆ ಹೋಗಿದ್ದಾರೆ. ಹೀಗಾಗಿ ನಟ, ನಿರ್ದೇಶಕ ರಿಷಬ್ ಶೆಟ್ಟಿ ಮನೆಯಲ್ಲೂ ಕೂಡ ‘ವರ್ಕ್ ಫ್ರಂ ಹೋಂ’ ಬಲು ಜೋರಾಗಿದ್ದು, ಮಗನೊಂದಿಗೆ ಸಮಯ ಕಳೆಯೋದ್ರಲ್ಲಿ ಶೆಟ್ರು ಫುಲ್ ಬ್ಯುಸಿಯಾಗಿದ್ದಾರೆ.

    ಹೌದು. ಹೆಚ್ಚಾಗಿ ಸಿನಿಮಾ ಕೆಲಸದಲ್ಲಿ ಬ್ಯುಸಿ ಇರುತ್ತಿದ್ದ ರಿಷಬ್ ಅವರಿಗೆ ಸದ್ಯ ಕೊರೊನಾ ಎಫೆಕ್ಟ್ ನಿಂದ ಕೊಂಚ ಬ್ರೇಕ್ ಸಿಕ್ಕಿದೆ. ಆದ್ದರಿಂದ ತಮ್ಮ ಹುಟ್ಟೂರಿನಲ್ಲಿ ಕುಟುಂಬದ ಜೊತೆ ರಿಷಬ್ ಖುಷಿಯಿಂದ ಸಮಯ ಕಳೆಯುತ್ತಿದ್ದು, ತಮ್ಮ ಮಗ ರಣ್ವಿತ್‍ಗೆ ಸ್ನಾನ ಮಾಡಿಸುವ ಮುನ್ನ ಎಣ್ಣೆ ಹಚ್ಚುತ್ತಿರುವ ಕ್ಯೂಟ್ ಫೋಟೋವೊಂದನ್ನು ರಿಷಬ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    https://twitter.com/shetty_rishab/status/1240672139495108613

    ‘ಊರೂರೇ ಖಾಲಿಯಾಗಿದೆ, ಆಫೀಸ್ ಬೀಗ ಹಾಕಿದೆ, ಸಿನಿಮಾದಿಂದ ಚಿಕ್ಕ ಬ್ರೇಕ್ ಸಿಕ್ಕಿದೆ. ಎಲ್ಲಾ ಆತಂಕಗಳನ್ನ ಹಿಂದೆ ಬಿಟ್ಟು ಹುಟ್ಟೂರಲ್ಲಿ, ನಾನು ಬೆಳೆದಿದ್ ಮನೇಲಿ, ಮಗರಾಯನಿಗೆ ಮಜ್ಜನ ನೀಡೋ ನೆಮ್ಮದಿನೇ ಬೇರೆ. ಒಟ್ಟಾರೆ ಎಲ್ಲರ ತರ ನಮ್ದೂ `ವರ್ಕ್ ಫ್ರಂ ಹೋಂ’ ಜೋರಾಗ್ ನಡೀತಿದೆ’ ಎಂದು ಬರೆದು ಮಗನಿಗೆ ಎಣ್ಣೆ ಹಚ್ಚುತ್ತಿರುವ ಫೋಟೋವನ್ನು ರಿಷಬ್ ಟ್ವೀಟ್ ಮಾಡಿದ್ದಾರೆ.

    https://twitter.com/rakshitshetty/status/1240653722989899776

    ಈ ಟ್ವೀಟ್ ನೋಡಿದ ನೆಟ್ಟಿಗರು ಅಪ್ಪ, ಮಗನ ಕ್ಯೂಟ್ ಫೋಟೋಗೆ ಫಿದಾ ಆಗಿದ್ದಾರೆ. ಕೆಲವರು ತಮಾಷೆಯಾಗಿ ಕಮೆಂಟ್ ಮಾಡಿದರೆ, ಇನ್ನೂ ಕೆಲವರು ಕಮೆಂಟ್‍ನಲ್ಲೇ ಅಪ್ಪ, ಮಗನ ಕ್ಯೂಟ್ ಫೋಟೋ ಬಗ್ಗೆ ಕವನ ಬರೆದಿದ್ದಾರೆ. ಇತ್ತ ಗೆಳೆಯನ ಟ್ವೀಟ್ ನೋಡಿ ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ ಕೂಡ ಒಂದು ಕವನ ಬರೆದು ಟ್ವೀಟ್ ಮಾಡಿದ್ದಾರೆ.

    ‘ರಿಷಬ್ ಇದು ನಿನಗಾಗಿ, ನನ್ನ ಮುಗ್ಧತೆಯ ಅರಿವು ನನಗಿಲ್ಲ. ನನ್ನ ಹೆತ್ತವನೊಮ್ಮೆ ನೋಡು, ಅವನ ಮುಗ್ಧತೆಯಲ್ಲವೆ ನನಗೆಲ್ಲ’ ಎಂದು ಕವನ ಹೆಣೆದು ರಿಷಬ್ ಹಾಗೂ ರಣ್ವಿತ್‍ನ ಮುದ್ದಾದ ಫೋಟೋವನ್ನು ರಕ್ಷಿತ್ ವರ್ಣಿಸಿದ್ದಾರೆ.

    ರಿಷಬ್, ರಣ್ವಿತ್ ಫೋಟೋಗೆ ಅನೇಕರು ಕಮೆಂಟ್ ಮಾಡಿದ್ದಾರೆ. ಮಗನಿಗೆ ಸ್ನಾನ ಮಾಡಿಸೋದ್ರಲ್ಲಿ ತಂದೆಗೆ ಸಿಗೋ ಖುಷಿನೇ ಬೇರೆ, ಮಗ ದೊಡ್ಡವನಾದ ಮೇಲೆ ನಿಮ್ಮ ಮೇಲೆ ಮಾನನಷ್ಟ ಕೇಸ್ ಹಾಕದಿದ್ದರೆ ಸಾಕು ಎಂದು ನೆಟ್ಟಿಗರೊಬ್ಬರು ರಿಷಬ್ ಕಾಲೆಳೆದಿದ್ದಾರೆ. ಇನ್ನೊಬ್ಬರು ಕಮೆಂಟ್‍ನಲ್ಲಿ, ಕೊರೊನಾ ತಂದ ಸೌಭಾಗ್ಯ ಈಗ. ರಿಷಬ್ ಅಣ್ಣನ ಪುತ್ರಮಜ್ಜನ ಯಾಗ. ವಕ್ ಫ್ರಂ ಹೋಮ್ ಲೋಕ ಕಲ್ಯಾಣಕ್ಕೆ. ಗೋ ಬ್ಯಾಕ್ ಟು ಹೋಮ್ ನೆಮ್ಮದಿಯ ತಾಣಕ್ಕೆ ಎಂದು ಕವನ ಬರೆದಿದ್ದಾರೆ. ಮತ್ತೊಬ್ಬರು ಕಮೆಂಟ್‍ನಲ್ಲಿ ಶೆಟ್ರೆ ನೀವು ನಿಜವಾದ ಸುಖ ಅನುಭವಿಸುತ್ತಿದ್ದೀರಿ, ಈ ಅವಕಾಶ ಕಲ್ಪಿಸಿಕೊಟ್ಟ ಕೊರೊನಾಗೆ ಥ್ಯಾಂಕ್ಸ್ ಹೇಳಿ ಎಂದಿದ್ದಾರೆ.

    ಒಟ್ಟಾರೆ ಕೊರೊನಾ ಭೀತಿಗೆ ಬ್ಯುಸಿ ಶೂಟಿಂಗ್ ಕೆಲಸದಿಂದ ರೆಸ್ಟ್ ಪಡೆದಿರುವ ರಿಷಬ್ ಮಾತ್ರ ಮನೆಯಲ್ಲಿ ಕುಟುಂಬದ ಜೊತೆ ಖುಷಿಯಾಗಿ ಕಾಲ ಕಳೆಯುತ್ತಿದ್ದಾರೆ. ಅಪ್ಪ, ಮಗನ ಈ ಕ್ಯೂಟ್ ಫೋಟೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದೆ.