Tag: ರಣವಿಕ್ರಮ

  • ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ‘ರಣವಿಕ್ರಮ’ ನಟಿ- ವರ ಯಾರು?

    ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ‘ರಣವಿಕ್ರಮ’ ನಟಿ- ವರ ಯಾರು?

    ನ್ನಡದ ಸ್ಟಾರ್ ನಟ ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ‘ರಣವಿಕ್ರಮ’ (Rana Vikrama) ಚಿತ್ರದ ಮೂಲಕ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ತೆಲುಗು ನಟಿ ಅಂಜಲಿ (Anjali) ಎಂಟ್ರಿ ಕೊಟ್ಟಿದ್ದರು. ಇದೀಗ ಮದುವೆಯ ಬಗ್ಗೆ ಸುದ್ದಿ ನೀಡುವ ಮೂಲಕ ಅಭಿಮಾನಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ.

    ಸದ್ದಿಲ್ಲದೇ ನಟಿ ಅಂಜಲಿ ಮದುವೆ ಮ್ಯಾಟರ್ ಹರಿದಾಡುತ್ತಿದೆ. ಈಗಾಗಲೇ ಒಂದು ಮದುವೆ ಆಗಿ ಡಿವೋರ್ಸ್ ಆಗಿರುವ ತೆಲುಗು ನಿರ್ಮಾಪಕರೊಬ್ಬರನ್ನು (Producer) ನಟಿ ಪ್ರೀತಿಸುತ್ತಿದ್ದು, ಶೀಘ್ರದಲ್ಲೇ ಅವರ ಜೊತೆ ನಟಿ ಮದುವೆ (Wedding) ಆಗಲಿದ್ದಾರೆ ಎನ್ನಲಾಗುತ್ತಿದೆ. ಈ ಸುದ್ದಿ ನಿಜನಾ ಎಂಬುದರ ಬಗ್ಗೆ ಅಂಜಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

    ಕಳೆದ ಕೆಲ ವರ್ಷಗಳಿಂದ ತೆಲುಗು ನಿರ್ಮಾಪಕನ ಜೊತೆ ಅಂಜಲಿ ಡೇಟಿಂಗ್ ಮಾಡುತ್ತಿದ್ದಾರೆ ಎನ್ನಲಾಗಿದೆ. ಈಗ ಮದುವೆ ಮಾತುಕತೆಯಾಗಿದ್ದು, ಎರಡು ಕುಟುಂಬದ ಸಮ್ಮತಿ ಕೂಡ ಸಿಕ್ಕಿದೆ. ಹಾಗಾಗಿ ಮದುವೆ ದಿನಾಂಕ ಕೂಡ ನಿಗದಿಯಾಗಿದೆ ಎನ್ನಲಾಗುತ್ತಿದೆ. ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿಲ್ಲ. ಇದನ್ನೂ ಓದಿ:ಸೆಲೆಬ್ರಿಟಿಗಳ ಬೆಂಬಲದೊಂದಿಗೆ ಕಳೆಗಟ್ಟಿಕೊಂಡ ಕೆರೆಬೇಟೆ!

    ‘ರಣವಿಕ್ರಮ’ ಚಿತ್ರದ ಬಳಿಕ ಬೈರಾಗಿ ಚಿತ್ರದಲ್ಲಿ ಶಿವರಾಜ್‌ಕುಮಾರ್‌ಗೆ (Shivarajkumar) ನಟಿ ಅಂಜಲಿ ನಾಯಕಿಯಾಗಿ ನಟಿಸಿದ್ದರು. ಈ ಚಿತ್ರದಲ್ಲಿ ಡಾಲಿ, ಪೃಥ್ವಿ ಅಂಬರ್ ಕೂಡ ನಟಿಸಿದ್ದರು.

  • ‘ದಿ ಕೇರಳ ಸ್ಟೋರಿ’ ಅದಾ ಶರ್ಮಾಗೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ‘ದಿ ಕೇರಳ ಸ್ಟೋರಿ’ ಅದಾ ಶರ್ಮಾಗೆ ಆರೋಗ್ಯದಲ್ಲಿ ಏರುಪೇರು- ಆಸ್ಪತ್ರೆಗೆ ದಾಖಲು

    ನ್ನಡದ ‘ರಣವಿಕ್ರಮ’ (Ranavikrama) ಬ್ಯೂಟಿ ಅದಾ ಶರ್ಮಾ (Adah Sharma) ಅವರು ಇತ್ತೀಚಿಗೆ ‘ದಿ ಕೇರಳ ಸ್ಟೋರಿ’ (The Kerala Story) ಸಿನಿಮಾ ಮೂಲಕ ಬಿಗ್ ಹಿಟ್ ನೀಡಿದ್ದರು. ಮತ್ತೆ ಸಿನಿಮಾಗಳಲ್ಲಿ ಆಕ್ಟೀವ್ ಆಗಿದ್ದ ನಟಿ ಈಗ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಅಂದರೆ ‘ದಿ ಕೇರಳ ಸ್ಟೋರಿ’ ಸಿನಿಮಾ. ಈ ಚಿತ್ರದ ಮೂಲಕ ಅಭಿಮಾನಿಗಳ ಮನಗೆದ್ದ ಬೆಡಗಿ ಅದಾಗೆ ಅನಾರೋಗ್ಯ ಕಾಡ್ತಿದೆ. ಫುಡ್ ಅಲರ್ಜಿಯಿಂದ ಆರೋಗ್ಯ ವ್ಯತ್ಯಾಸವಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ವೈದ್ಯರು ಈಗ ಆಕೆಯ ಸ್ಥಿತಿ ಉತ್ತಮವಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ:ಮೆಗಾಸ್ಟಾರ್ ಮನೆಮಗಳು ನಿಹಾರಿಕಾ ಜೊತೆಗಿನ ಮದುವೆ ಬಗ್ಗೆ ತರುಣ್ ಸ್ಪಷ್ಟನೆ

    ಅದಾ ಶರ್ಮಾ ನಟನೆಯ ಮುಂಬರುವ ಸಿನಿಮಾ ‘ಕಮಾಂಡೋ’ ಪ್ರಚಾರಕ್ಕಾಗಿ ಎಲ್ಲಾ ಸಿದ್ಧತೆ ಮಾಡಲಾಗಿತ್ತು. ಭಾವನಾ ರೆಡ್ಡಿ ಎಂಬ ಖಡಕ್ ಪೊಲೀಸ್ ಆಧಿಕಾರಿಯಾಗಿ ಅದಾ ಜೀವ ತುಂಬಿದ್ದರು. ಇನ್ನೇನು ಪ್ರಚಾರ ಕಾರ್ಯ ಶುರು ಮಾಡಬೇಕು. ಈ ಸಂದರ್ಭದಲ್ಲಿ ಅದಾ ಆರೋಗ್ಯ ಕೈಕೊಟ್ಟಿದೆ. ಹಾಗಾಗಿ ಚಿತ್ರದ ಪ್ರಚಾರ ಕಾರ್ಯವನ್ನು ಸದ್ಯಕ್ಕೆ ರದ್ದು ಮಾಡಲಾಗಿದೆ. ಆತಂಕದಲ್ಲಿದ್ದ ಅದಾ ಅಭಿಮಾನಿಗಳು, ಆಕೆಯ ಸದ್ಯ ಹೆಲ್ಡ್ ಅಪ್‌ಡೇಟ್ ತಿಳಿದು ನಿಟ್ಟುಸಿರು ಬಿಟ್ಟಿದ್ದಾರೆ.

    ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ಪುನೀತ್‌ ರಾಜ್‌ಕುಮಾರ್‌ (Puneeth Rajkumar) ನಾಯಕಿಯಾಗಿ ಅದಾ ಶರ್ಮಾ ನಟಿಸಿದ್ದರು. ಈ ಚಿತ್ರ ಫ್ಯಾನ್ಸ್‌ಗೆ ಮನರಂಜನೆ ನೀಡಿತ್ತು. ದಿ ಕೇರಳ ಸ್ಟೋರಿ ಬಿಗ್‌ ಬ್ರೇಕ್‌ ನಂತರ ಒಳ್ಳೆಯ ಕಥೆಗಳು ನಟಿಗೆ ಅರಸಿ ಬರುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ದಿ ಕೇರಳ ಸ್ಟೋರಿ’ ಸಕ್ಸಸ್ ಬೆನ್ನಲ್ಲೇ ಮದುಮಗಳಾದ ಅದಾ ಶರ್ಮಾ

    ‘ದಿ ಕೇರಳ ಸ್ಟೋರಿ’ ಸಕ್ಸಸ್ ಬೆನ್ನಲ್ಲೇ ಮದುಮಗಳಾದ ಅದಾ ಶರ್ಮಾ

    ಬಾಲಿವುಡ್ ನಟಿ ಅದಾ ಶರ್ಮಾ (Adah Sharma) ಅವರು ‘ದಿ ಕೇರಳ ಸ್ಟೋರಿ’ (The Kerala Story)  ಸಿನಿಮಾ ಸೂಪರ್ ಸಕ್ಸಸ್ ನಂತರ ಕೈ ತುಂಬಾ ಅವಕಾಶಗಳು ಅರಸಿ ಬರುತ್ತಿದೆ. ಈ ನಡುವೆ ಮದುಮಗಳಾಗಿ ನಟಿ ಮಿಂಚ್ತಿದ್ದಾರೆ. ಈ ಕುರಿತ ವೀಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಹೌದಾ.? ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ್ರಾ ಅದಾ ಶರ್ಮಾ?

    ಬಹುಭಾಷಾ ನಟಿಯಾಗಿ ಗಮನ ಸೆಳೆಯುತ್ತಿರೋ ಈ ಮುದ್ದು ಮುಖದ ಚೆಲುವೆ ಅದಾ, ಕನ್ನಡದ ‘ರಣವಿಕ್ರಮ’ ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಪುನೀತ್ ರಾಜ್‌ಕುಮಾರ್‌ಗೆ (Puneeth Rajkumar) ನಾಯಕಿಯಾಗಿ ನಟಿಸಿದ್ದ ಅದಾ ಶರ್ಮಾ ಇತ್ತೀಚಿಗೆ ದಿ ಕೇರಳ ಸ್ಟೋರಿ ಸಿನಿಮಾದಲ್ಲಿ ನಟಿಸಿ ದೇಶದೆಲ್ಲೆಡೆ ಸಂಚಲನ ಮೂಡಿಸಿದ್ರು. ಮೀನಾಕ್ಷಿ ಎಂಬ ಪಾತ್ರದ ಮೂಲಕ ಮನೆ ಮಾತಾದರು. ಲವ್ ಜಿಹಾದ್ ಕುರಿತ ಈ ಕಥೆಯನ್ನ ಅಭಿಮಾನಿಗಳು ಮೆಚ್ಚಿಕೊಂಡಿದ್ರು. ಇದನ್ನೂ ಓದಿ:ಕಾರವಾರದಲ್ಲಿ ಬದುಕಿದ್ದ ವಿಲಕ್ಷಣ ವ್ಯಕ್ತಿಯ ಕಥೆಯೇ ‘ಟೋಬಿ’ : ಗುಟ್ಟು ರಟ್ಟು

    ‘ದಿ ಕೇರಳ ಸ್ಟೋರಿ’ ಸಕ್ಸಸ್ ನಂತರ ಬಂಪರ್ ಆಫರ್ಸ್‌ಗಳು ನಟಿ ಅದಾಗೆ ಅರಸಿ ಬರುತ್ತಿದೆ. ಈ ಚಿತ್ರದ ಯಶಸ್ಸಿನಿಂದ ಚಿತ್ರರಂಗದಲ್ಲಿ ಗಟ್ಟಿ ನೆಲೆ ಗಿಟ್ಟಿಸಿಕೊಳ್ಳುವ ಅವಕಾಶ ಸಿಗುತ್ತಿದೆ. ಹೀಗಿರುವಾಗ ವೈವಾಹಿಕ ಜೀವನಕ್ಕೆ ಅದಾ ಕಾಲಿಡುವ ತಾಲೀಮು ನಡೆಸುತ್ತಿದ್ದಾರೆ. ಹಸಿರು ಬಣ್ಣದ ಸೀರೆಯುಟ್ಟು ಸ್ಲೀವ್‌ಲೆಸ್ ಬ್ಲೌಸ್ ಧರಿಸಿ ಮದುಮಗಳಾಗಿ ಬೈಕ್ ಮೇಲೆ ಕುಳಿತು ಪೋಸ್ ನೀಡುತ್ತಿರುವ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ಅಯ್ಯೋ.. ಅದಾ ಶರ್ಮಾ ಮದುವೆಯಾಗುತ್ತಿದ್ದಾರಾ.? ಅಂತಾ ಗಾಬರಿಯಾಗಬೇಡಿ. ಜಾಹಿರಾತು ಶೂಟ್‌ವೊಂದಕ್ಕಾಗಿ ನಟಿ ಅದಾ ಮದುಮಗಳ ಗೆಟಪ್‌ನಲ್ಲಿ ಕಂಗೊಳಿಸಿದ್ದಾರೆ. ಮದುಮಗಳ ಲುಕ್‌ನಲ್ಲಿ ನಟಿ ಮುದ್ದಾಗಿ ಕಾಣಿಸಿಕೊಂಡಿದ್ದಾರೆ. ಆ್ಯಡ್ ಶೂಟ್‌ಗೆ ಎಂದು ತಿಳಿದ ಮೇಲೆ ಮೇಲ್ ಫ್ಯಾನ್ಸ್ ನಿಟ್ಟುಸಿರು ಬಿಟ್ಟಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]