Tag: ರಣಬೀರ್

  • ಆಲಿಯಾ-ರಣಬೀರ್ ಮದುವೆ ಮುಂದೂಡಿಕೆ: ಕಾರಣ ವಿಚಿತ್ರ

    ಆಲಿಯಾ-ರಣಬೀರ್ ಮದುವೆ ಮುಂದೂಡಿಕೆ: ಕಾರಣ ವಿಚಿತ್ರ

    ಅಂದುಕೊಂಡಂತೆ ಆಗಿದ್ದರೆ ಇದೇ ಎಪ್ರೀಲ್ 15ರಂದು ಬಾಲಿವುಡ್ ತಾರಾ ಜೋಡಿ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಜೋಡಿ ಮದುವೆ ಆಗಬೇಕಿತ್ತು. ಕಳೆದ ಮೂರ್ನಾಲ್ಕು ವರ್ಷಗಳಿಂದ ಹೀಗೆ ಮದುವೆ ವಿಷಯವನ್ನು ಅಲ್ಲಗಳೆಯುತ್ತಲೇ ಬಂದಿದ್ದು ಈ ಜೋಡಿ, ಈ ಬಾರಿ ಮದುವೆ ಆಗಲೇಬೇಕು ಎಂದು ನಿರ್ಧರಿಸಿ, ದಿನಾಂಕ ನಿಗದಿಮಾಡಿಕೊಂಡಿದ್ದರು. ಆದರೆ, ಅಂದುಕೊಂಡ ದಿನಾಂಕದಂದು ಮದುವೆ ನಡೆಯುತ್ತಿಲ್ಲ ಎಂದಿದ್ದಾರೆ ಆಲಿಯಾ ಭಟ್ ಸಹೋದರ ರಾಹುಲ್ ಭಟ್. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ನಾಳೆಯಿಂದ ಆಲಿಯಾ ಮತ್ತು ರಣಬೀರ್ ಮದುವೆಯ ಕಾರ್ಯಗಳು ನಡೆಯಬೇಕಿತ್ತು. ನಾಳೆಯಿಂದ ಎಪ್ರಿಲ್ 17ರವರೆಗೂ ಬಗೆ ಬಗೆಯ ಕಾರ್ಯಗಳು ನಿಗದಿಯಾಗಿದ್ದವು. ಅವು ಯಾವವೂ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ ರಾಹುಲ್ ಭಟ್. ಮದುವೆ ದಿನಾಂಕ ಸೇರಿದಂತೆ ಇತರ ಕಾರ್ಯಗಳ ದಿನಾಂಕವನ್ನು ಶೀಘ್ರದಲ್ಲೇ ತಿಳಿಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ranbir alia

    ಮದುವೆಯ ದಿನಾಂಕವನ್ನು ಬದಲಿಸಲು ಅವರು ಕೊಟ್ಟಿರುವ ಕಾರಣ, ಭದ್ರತೆ. ಮದುವೆ ದಿನಾಂಕ ಮತ್ತು ಅತಿಥಿಗಳ ವಿಚಾರವನ್ನು ನಾವು ಗುಟ್ಟಾಗಿ ಇಟ್ಟಿದ್ದೇವೆ. ಕೆಲವೇ ಕೆಲವು ಜನರಿಗೆ ಆಹ್ವಾನ ನೀಡಲಾಗಿತ್ತು. ಆಹ್ವಾನಿತರು ಕೂಡ ಬೆರಳೆಣಿಕೆಯಲ್ಲಿದ್ದರು. ಅಷ್ಟರಲ್ಲಿ ಮದುವೆ ದಿನಾಂಕ, ಸ್ಥಳ ಮತ್ತು ಇತರ ವಿಷಯಗಳು ಮಾಧ್ಯಮಗಳಿಗೆ ಲೀಕ್ ಆದವು. ಹಾಗಾಗಿ ಅನಿವಾರ್ಯವಾಗಿ ನಾವು ಮದುವೆಯನ್ನು ಮುಂದೂಡಿದ್ದೇವೆ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ ರಾಹುಲ್.

    ಮತ್ತೊಂದು ಮೂಲಗಳ ಪ್ರಕಾರ, ಈಗಾಗಲೇ ಮದುವೆ ಫಿಕ್ಸ್ ಆದ ದಿನವೇ ಆಲಿಯಾ ಮತ್ತು ರಣಬೀರ್ ಹಸಮಣೆ ಏರಲಿದ್ದಾರೆ. ಮಾಧ್ಯಮಗಳಿಗೆ ಮತ್ತು ಅಭಿಮಾನಿಗಳಿಗೆ ದಿಕ್ಕು ತಪ್ಪಿಸುವುದಕ್ಕಾಗಿಯೇ ಮದುವೆ ದಿನಾಂಕ ಬದಲಾಯಿಸಿದ್ದೇವೆ ಎಂದು ಹೇಳಿಸಲಾಗಿದೆ ಎನ್ನುವ ಮಾತೂ ಕೂಡ ಇದೆ. ಮದುವೆ ಖಾಸಗಿಯಾಗಿದ್ದರಿಂದ, ಆದಷ್ಟು ಕುಟುಂಬದವರಷ್ಟೇ ಪಾಲ್ಗೊಳ್ಳಲು ಮತ್ತು ಮಾಧ್ಯಮಗಳ ಕ್ಯಾಮೆರಾದಿಂದ ತಪ್ಪಿಸಿಕೊಳ್ಳಲು ಈ ರೀತಿ ಸುದ್ದಿಯನ್ನು ಹರಿಬಿಡಲಾಗುತ್ತಿದೆ ಎನ್ನುವ ಮಾತೂ ಇದೆ.

  • ಆಲಿಯಾ-ರಣಬೀರ್ ಮದ್ವೆ : ಕೆಜಿಎಫ್ 2 ಅಧೀರನಿಗೆ ಗೊತ್ತೇ ಇಲ್ಲವಾ?

    ಆಲಿಯಾ-ರಣಬೀರ್ ಮದ್ವೆ : ಕೆಜಿಎಫ್ 2 ಅಧೀರನಿಗೆ ಗೊತ್ತೇ ಇಲ್ಲವಾ?

    ಬಾಲಿವುಡ್ ನ ಪ್ರಣಯ ಪಕ್ಷಿಗಳಾದ ಆಲಿಯಾ ಭಟ್ ಮತ್ತು ರಣವೀರ್ ಕಪೂರ್ ಎಪ್ರಿಲ್ 15 ರಂದು ಹಸಮಣೆ ಏರಲಿದ್ದಾರೆ. ನಾಳೆಯಿಂದಲೇ ಮದುವೆಗೆ ಸಂಬಂಧಿಸಿದ ಕಾರ್ಯಗಳು ನಡೆಯುತ್ತಿದ್ದು, ಬಾಲಿವುಡ್ ನಲ್ಲಿ ಈ ಜೋಡಿಯ ಮದುವೆ ಗಪ್ ಚುಪ್ ಎನ್ನುವಂತಾಗಿದೆ. ಇದನ್ನೂ ಓದಿ : ಗ್ರೌಂಡ್ ರಿಪೋರ್ಟ್ : ರಿಲೀಸ್ ಹಿಂದಿನ ಪಕ್ಕಾ ಲೆಕ್ಕಾಚಾರ, ಆರ್.ಆರ್.ಆರ್ ದಾಖಲೆ ಮುರಿದ ಕೆಜಿಎಫ್ 2

    ಮಾಧ್ಯಮಗಳಲ್ಲಿ ಮದುವೆ ಬಗ್ಗೆ ಪ್ರಸ್ತಾಪವಾಗುತ್ತಿದ್ದರೂ, ಅಧಿಕೃತವಾಗಿ ಬಾಲಿವುಡ್ ಅನೇಕ ಕಲಾವಿದರಿಗೆ ಮತ್ತು ತಂತ್ರಜ್ಞರಿಗೆ ಇವರ ಮದುವೆ ಮಾಹಿತಿ ಗೊತ್ತಿಲ್ಲ. ಕೇವಲ 28 ಜನರಿಗೆ ಮಾತ್ರ ಮದುವೆಗೆ ಆಹ್ವಾನ ನೀಡಲಾಗಿದೆ ಎನ್ನುವ ಸುದ್ದಿಯಿದೆ. ಅದೂ ಖಚಿತವಾಗಿಲ್ಲ. ‘ನಾವು ಮದುವೆ ಆಗುತ್ತಿದ್ದೇವೆ’ ಎಂದು ಈ ಜೋಡಿ ಹೇಳಿದ್ದರೂ, ಮದುವೆ ಕುರಿತಾದ ಯಾವುದೇ ಮಾಹಿತಿಯನ್ನು ಎರಡೂ ಕುಟುಂಬಗಳು ಬಿಟ್ಟು ಕೊಟ್ಟಿಲ್ಲ. ಹಾಗಾಗಿ ಮದುವೆಯ ಫೋಟೋ ಆಚೆ ಬಂದ ನಂತರವೇ ಅಧಿಕೃತಗೊಳ್ಳಲಿದೆ. ಹಾಗಾಗಿ ಕೆಲವರಿಗೆ ಮದುವೆ ವಿಚಾರವೇ ಗೊತ್ತಿಲ್ಲ. ಇದನ್ನೂ ಓದಿ:  ಕೊನೆಗೂ ಮದುವೆಯ ವಿಚಾರ ಖಚಿತಪಡಿಸಿದ ಆಲಿಯಾ!

    ಸದ್ಯ ಬಾಲಿವುಡ್ ಖ್ಯಾತ ನಟ ಸಂಜಯ್ ದತ್ ‘ಕೆಜಿಎಫ್ 2’ ಸಿನಿಮಾದ ಪ್ರಚಾರದ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಪ್ರಚಾರ ಕೈಗೊಂಡ ಸಂದರ್ಭದಲ್ಲಿ ಮಾಧ್ಯಮಗಳು ಆಲಿಯಾ-ರಣಬೀರ್ ಮದುವೆ ಬಗ್ಗೆ ಸಂಜಯ್ ದತ್ ಅವರನ್ನು ಪ್ರಶ್ನೆ ಮಾಡಿವೆ. ಅದಕ್ಕೆ ಅಚ್ಚರಿ ಎನ್ನುವಂತೆ ಪ್ರತಿಕ್ರಿಯೆ ನೀಡಿದ್ದಾರೆ ಸಂಜಯ್ ದತ್. ‘ಅವರಿಬ್ಬರೂ ಮದುವೆ ಆಗುತ್ತಿದ್ದಾರಾ? ಒಂದು ವೇಳೆ ಅವರು ಮದುವೆ ಆಗುತ್ತಿದ್ದರೆ, ಅವರಿಗೆ ಒಳ್ಳೆಯದಾಗಲಿ. ಆಲಿಯಾ ನನ್ನ ಮುಂದೆ ಬೆಳೆದಿರುವ ಹುಡುಗಿ. ಆಕೆಗೂ ಒಳ್ಳೆದಾಗಲಿ’ ಎಂದು ಹಾರೈಸಿದ್ದಾರೆ. ಇದನ್ನೂ ಓದಿ: ಬೆಂಕಿ ಬಿರುಗಾಳಿ ಎಬ್ಬಿಸಿದ ಕಂಗನಾ ಶೋ: ಪತಿ ಜತೆ ಮಲಗಿದವರ ಲಿಸ್ಟ್ ಹೇಳಿದ ನಟಿ ಮಂದರಾ

    ಆಲಿಯಾ ಭಟ್ ಮತ್ತು ರಣಬೀರ್ ಮದುವೆ ಇಡೀ ಬಾಲಿವುಡ್ ನಲ್ಲೇ ಸೌಂಡ್ ಮಾಡುತ್ತಿದ್ದರೂ, ಈ ಕೆಜಿಎಫ್ 2 ಅಧೀರನಿಗೆ ಮದುವೆ ವಿಚಾರವೇ ಗೊತ್ತಿಲ್ಲವಾ? ಎನ್ನುವ ಅನುಮಾನ ಮಾಧ್ಯಮಗಳಿಗೆ ಮೂಡಿತ್ತು. ಸುದ್ದಿ ಗೊತ್ತಿದ್ದರೆ, ಸಂಜಯ್ ದತ್ ಅವರ ಉತ್ತರವೇ ಬೇರೆಯಾಗಿರುತ್ತಿತ್ತು.