Tag: ರಣದೀಪ್ ಹೂಡಾ

  • ‘ಜಾಟ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಸನ್ನಿ ಡಿಯೋಲ್ ಸೇರಿ 7 ಮಂದಿ ವಿರುದ್ಧ FIR

    ‘ಜಾಟ್’ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ – ಸನ್ನಿ ಡಿಯೋಲ್ ಸೇರಿ 7 ಮಂದಿ ವಿರುದ್ಧ FIR

    ಬಾಲಿವುಡ್ ನಟ ಸನ್ನಿ ಡಿಯೋಲ್ (Sunny Deol) ನಟನೆಯ ‘ಜಾಟ್’ (Jaat) ಸಿನಿಮಾಗೆ ಕಾನೂನು ಸಂಕಷ್ಟ ಎದುರಾಗಿದೆ. ಈ ಚಿತ್ರದಲ್ಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂಬ ಆರೋಪದ ಮೇರೆಗೆ ಸನ್ನಿ ಡಿಯೋಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಇದನ್ನೂ ಓದಿ:ನಿನ್ನ ಪ್ರೀತಿ, ತ್ಯಾಗ ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ: ಪತ್ನಿಗೆ ನಿಖಿಲ್ ಲವ್ಲಿ ವಿಶ್

    ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ‘ಜಾಟ್’ ಚಿತ್ರತಂಡದ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆ ಭಾರತೀಯ ನ್ಯಾಯ ಸಂಹಿತಾ 299ರ ಸೆಕ್ಷನ್ ಅಡಿಯಲ್ಲಿ ನಟ ಸನ್ನಿ ಡಿಯೋಲ್, ರಣದೀಪ್ ಹೂಡಾ (Randeep Hooda), ವಿನೀತ್ ಕುಮಾರ್ ಸಿಂಗ್, ಡೈರೆಕ್ಟರ್ ಗೋಪಿಚಂದ್ ಮಲಿನೇನಿ, ನಿರ್ಮಾಪಕರಾದ ಟಿ.ಜಿ ವಿಶ್ವ ಪ್ರಸಾದ್, ನವೀನ್ ಯೆರ್ನೇನಿ, ವೈ ರವಿಶಂಕರ್ ವಿರುದ್ಧ ಜಲಂಧರ್ ಠಾಣೆ ಪೊಲೀಸರು ಎಫ್‌ಐಆರ್ ದಾಖಲಿಸಲಿಸಿದ್ದಾರೆ. ಇದನ್ನೂ ಓದಿ: ಪೊಲೀಸ್ ರೈಡ್ ವೇಳೆ ಹೋಟೆಲ್ ಕಿಟಕಿಯಿಂದ ನಟ ಶೈನ್ ಟಾಮ್ ಚಾಕೊ ಪರಾರಿ

    ಈ ಚಿತ್ರದ ಒಂದು ದೃಶ್ಯವು ಇಡೀ ಕ್ರಿಶ್ಚಿಯನ್ ಸಮುದಾಯದ ಧಾರ್ಮಿಕ ಭಾವನೆಗಳಿಗೆ ತೀವ್ರ ನೋವುಂಟು ಮಾಡಿದೆ ಎಂದು ನೀಡಿರುವ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಯೇಸುಕ್ರಿಸ್ತನ ಬಗ್ಗೆ ಅಗೌರವ ತೋರಿಸಲಾಗಿದೆ ಎಂದು ದೂರುದಾರರು ಆರೋಪಿಸಿದ್ದಾರೆ.

    ಇನ್ನೂ ಚಿತ್ರತಂಡ ಉದ್ದೇಶಪೂರ್ವಕವಾಗಿ ಈ ಚಿತ್ರವನ್ನು ಗುಡ್ ಪ್ರೈಡೇ ಮತ್ತು ಈಸ್ಟರ್ ತಿಂಗಳಲ್ಲಿ ಬಿಡುಗಡೆ ಮಾಡಿದ್ದಾರೆ. ‘ಜಾಟ್’ ಸಿನಿಮಾವು ಧಾರ್ಮಿಕ ಭಾವನೆಯನ್ನು ಕೆರಳಿಸುವ ಉದ್ದೇಶ ಹೊಂದಿದೆ. ಹಾಗಾಗಿ ನಿಷೇಧಿಸಿಬೇಕು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಅಂದಹಾಗೆ, ‘ಜಾಟ್’ ಚಿತ್ರ ಏ.10ರಂದು ರಿಲೀಸ್ ಆಗಿತ್ತು. ಸನ್ನಿ ಡಿಯೋಲ್ ಹಾಗೂ ರಣದೀಪ್ ಹೂಡಾ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಇದೀಗ ಜಾರ್ಟ್ ಪಾರ್ಟ್ 2 ಬರುವ ಬಗ್ಗೆಯೂ ಚಿತ್ರತಂಡ ಅಧಿಕೃತವಾಗಿ ತಿಳಿಸಿದೆ.

  • ಸಾವರ್ಕರ್ ಪಾತ್ರಕ್ಕೆ ಭಾರೀ ತೂಕ ಇಳಿಸಿಕೊಂಡ ರಣದೀಪ್ ಹೂಡಾ

    ಸಾವರ್ಕರ್ ಪಾತ್ರಕ್ಕೆ ಭಾರೀ ತೂಕ ಇಳಿಸಿಕೊಂಡ ರಣದೀಪ್ ಹೂಡಾ

    ಬಾಲಿವುಡ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ತಮ್ಮ ಪಾತ್ರಕ್ಕಾಗಿ ಬರೋಬ್ಬರಿ 30 ಕೆಜಿ ತೂಕವನ್ನು ಇಳಿಸಿಕೊಂಡಿದ್ದಾರಂತೆ ನಟ, ನಿರ್ದೇಶಕ ರಣದೀಪ್ ಹೂಡಾ (Randeep Hooda). ಈ ಸಿನಿಮಾದಲ್ಲಿ ಅವರು ಸಾವರ್ಕರ್ ಪಾತ್ರವನ್ನು ಮಾಡುತ್ತಿದ್ದು, ಜೈಲು ಸನ್ನಿವೇಶಗಳನ್ನು ಶೂಟ್ ಮಾಡುವುದಕ್ಕಾಗಿ ಈ ಪ್ರಮಾಣದಲ್ಲಿ ಅವರು ತೂಕ ಇಳಿಸಿಕೊಂಡಿದ್ದಾರೆ.

    ಈ ನಡುವೆ ಸಿನಿಮಾ ಬಗ್ಗೆ ಅಪಸ್ವರ ಕೇಳಿ ಬಂದಿದೆ. ನಿರ್ದೇಶಕರ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಕುಟುಂಬ ಅಸಮಾಧಾನಗೊಂಡಿದೆ. ರಣದೀಪ್ ನಿರ್ದೇಶಿಸಿ, ನಟಿಸುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಕುರಿತಾದ ಪೋಸ್ಟರ್ ನಲ್ಲಿ ನೇತಾಜಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನೇತಾಜಿ ಮರಿ ಮೊಮ್ಮಗ ಚಂದ್ರಕುಮಾರ್ ಬೋಸ್ (Chandrakumar Bose) ಗರಂ ಆಗಿದ್ದಾರೆ.

    ಸಾವರ್ಕರ್ (Veer Savarkar) ಹುಟ್ಟು ಹಬ್ಬದ ದಿನದಂದು ರಣದೀಪ್ ತಮ್ಮ ಸಿನಿಮಾದ ಪೋಸ್ಟರ್ ನ್ನು ಹಂಚಿಕೊಂಡಿದ್ದರು. ಆ ಪೋಸ್ಟರ್ ಪೋಸ್ಟ್ ಮಾಡುವಾಗ ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಖುದಿರಾಮ್ ಬೋಸ್ ಇವರೆಲ್ಲರಿಗೂ ಸಾವರ್ಕರ್ ಸ್ಫೂರ್ತಿಯಾಗಿದ್ದರು ಎನ್ನುವ ಅರ್ಥದಲ್ಲಿ ಬರೆದಿದ್ದರು. ಈ ಬರಹವೇ ನೇತಾಜಿ ಕುಟುಂಬಕ್ಕೆ ಕೋಪ ತರಿಸಿದೆ.

    ನೇತಾಜಿ ಮರಿ ಮೊಮ್ಮಗ ಈ ಕುರಿತು ಮಾತನಾಡಿ, ‘ಸುಳ್ಳು ಇತಿಹಾಸವನ್ನು ಯಾರೂ ಹೇಳಬಾರದು. ಸಾವರ್ಕರ್ ಸಿದ್ಧಾಂತಕ್ಕೆ ನೇತಾಜಿ ವಿರೋಧಿಯಾಗಿದ್ದರು. ನೇತಾಜಿ ಜಾತ್ಯಾತೀತ  ಗುಣಗಳನ್ನು ಹೊಂದಿದವರು. ನಿಮ್ಮ ಸಿನಿಮಾ ಪ್ರಚಾರಕ್ಕೆ, ಗಿಮಿಕ್ ಗಾಗಿ ಸುಳ್ಳು ಹೇಳಬೇಡಿ. ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿ. ಇಲ್ಲವೇ ಸುಮ್ಮನಿದ್ದು ಬಿಡಿ’ ಎಂದು ಹೇಳಿದ್ದಾರೆ.

    ನೇತಾಜಿಗೆ ಪ್ರೇರಣೆ ಕಂಡಿತಾ ಸಾವರ್ಕರ್ ಅಲ್ಲ. ಅವರಿಗೆ ಪ್ರೇರಣೆ ಸ್ವಾಮಿ ವಿವೇಕಾನಂದರು. ಅವರು ಅಧ್ಯಾತ್ಮದ ಗುರು ಕೂಡ ಆಗಿದ್ದರು. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್. ಇವರ ಹೊರತಾಗಿ ಯಾರೂ ಅವರಿಗೆ ಸ್ಫೂರ್ತಿ ಆಗಿರಲಿಲ್ಲವೆಂದು ನೇತಾಜಿ ಮರಿಮೊಮ್ಮಗ ಹೇಳಿದ್ದಾರೆ. ಸಾವರ್ಕರ್ ಅವರನ್ನು ನೇತಾಜಿ ವಿರೋಧಿಸುತ್ತಲೇ ಬಂದಿದ್ದರು ಎಂದು ಗಟ್ಟಿಯಾಗಿ ಹೇಳಿದ್ದಾರೆ.

  • ಸಾವರ್ಕರ್ ಪತ್ನಿ ಪಾತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿ ಅಂಕಿತಾ

    ಸಾವರ್ಕರ್ ಪತ್ನಿ ಪಾತ್ರದಲ್ಲಿ ಬಿಗ್ ಬಾಸ್ ಸ್ಪರ್ಧಿ ಅಂಕಿತಾ

    ಬಾಲಿವುಡ್ ನಲ್ಲಿ ಮೂಡಿ ಬರುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಪ್ರೊಮೋ ರಿಲೀಸ್ ಆಗಿದ್ದು, ಸಾರ್ವಕರ್ ಪತ್ನಿಯಾಗಿ ಬಿಗ್ ಬಾಸ್ ಸ್ಪರ್ಧಿ ಅಂಕಿತಾ ಲೋಕಂಡೆ  (Ankita Lokande) ಕಾಣಿಸಿಕೊಂಡಿದ್ದಾರೆ. ಬಾಲಿವುಡ್ ನಟ ರಣದೀಪ್ ಹೂಡಾ ಈ ಚಿತ್ರವನ್ನು ನಿರ್ದೇಶನ ಮಾಡಿದ್ದು, ಅವರೇ ಸಾವರ್ಕರ್ ಪಾತ್ರವನ್ನೂ ನಿರ್ವಹಿಸಿದ್ದಾರೆ.

    ಈ ನಡುವೆ ಸಿನಿಮಾ ಬಗ್ಗೆ ಅಪಸ್ವರ ಕೇಳಿ ಬಂದಿದೆ. ನಿರ್ದೇಶಕರ ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಕುಟುಂಬ ಅಸಮಾಧಾನಗೊಂಡಿದೆ. ರಣದೀಪ್ ನಿರ್ದೇಶಿಸಿ, ನಟಿಸುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಕುರಿತಾದ ಪೋಸ್ಟರ್ ನಲ್ಲಿ ನೇತಾಜಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನೇತಾಜಿ ಮರಿ ಮೊಮ್ಮಗ ಚಂದ್ರಕುಮಾರ್ ಬೋಸ್ (Chandrakumar Bose) ಗರಂ ಆಗಿದ್ದಾರೆ.

    ಸಾವರ್ಕರ್ (Veer Savarkar) ಹುಟ್ಟು ಹಬ್ಬದ ದಿನದಂದು ರಣದೀಪ್ ತಮ್ಮ ಸಿನಿಮಾದ ಪೋಸ್ಟರ್ ನ್ನು ಹಂಚಿಕೊಂಡಿದ್ದರು. ಆ ಪೋಸ್ಟರ್ ಪೋಸ್ಟ್ ಮಾಡುವಾಗ ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಖುದಿರಾಮ್ ಬೋಸ್ ಇವರೆಲ್ಲರಿಗೂ ಸಾವರ್ಕರ್ ಸ್ಫೂರ್ತಿಯಾಗಿದ್ದರು ಎನ್ನುವ ಅರ್ಥದಲ್ಲಿ ಬರೆದಿದ್ದರು. ಈ ಬರಹವೇ ನೇತಾಜಿ ಕುಟುಂಬಕ್ಕೆ ಕೋಪ ತರಿಸಿದೆ.

    ನೇತಾಜಿ ಮರಿ ಮೊಮ್ಮಗ ಈ ಕುರಿತು ಮಾತನಾಡಿ, ‘ಸುಳ್ಳು ಇತಿಹಾಸವನ್ನು ಯಾರೂ ಹೇಳಬಾರದು. ಸಾವರ್ಕರ್ ಸಿದ್ಧಾಂತಕ್ಕೆ ನೇತಾಜಿ ವಿರೋಧಿಯಾಗಿದ್ದರು. ನೇತಾಜಿ ಜಾತ್ಯಾತೀತ  ಗುಣಗಳನ್ನು ಹೊಂದಿದವರು. ನಿಮ್ಮ ಸಿನಿಮಾ ಪ್ರಚಾರಕ್ಕೆ, ಗಿಮಿಕ್ ಗಾಗಿ ಸುಳ್ಳು ಹೇಳಬೇಡಿ. ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿ. ಇಲ್ಲವೇ ಸುಮ್ಮನಿದ್ದು ಬಿಡಿ’ ಎಂದು ಹೇಳಿದ್ದಾರೆ.

    ನೇತಾಜಿಗೆ ಪ್ರೇರಣೆ ಕಂಡಿತಾ ಸಾವರ್ಕರ್ ಅಲ್ಲ. ಅವರಿಗೆ ಪ್ರೇರಣೆ ಸ್ವಾಮಿ ವಿವೇಕಾನಂದರು. ಅವರು ಅಧ್ಯಾತ್ಮದ ಗುರು ಕೂಡ ಆಗಿದ್ದರು. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್. ಇವರ ಹೊರತಾಗಿ ಯಾರೂ ಅವರಿಗೆ ಸ್ಫೂರ್ತಿ ಆಗಿರಲಿಲ್ಲವೆಂದು ನೇತಾಜಿ ಮರಿಮೊಮ್ಮಗ ಹೇಳಿದ್ದಾರೆ. ಸಾವರ್ಕರ್ ಅವರನ್ನು ನೇತಾಜಿ ವಿರೋಧಿಸುತ್ತಲೇ ಬಂದಿದ್ದರು ಎಂದು ಗಟ್ಟಿಯಾಗಿ ಹೇಳಿದ್ದಾರೆ.

  • ಸಾವರ್ಕರ್  ಸಿನಿಮಾ: ನಿರ್ದೇಶಕನ ವಿರುದ್ಧ ನೇತಾಜಿ ಫ್ಯಾಮಿಲಿ ಕಿಡಿಕಿಡಿ

    ಸಾವರ್ಕರ್ ಸಿನಿಮಾ: ನಿರ್ದೇಶಕನ ವಿರುದ್ಧ ನೇತಾಜಿ ಫ್ಯಾಮಿಲಿ ಕಿಡಿಕಿಡಿ

    ಬಾಲಿವುಡ್ ನಟ, ನಿರ್ದೇಶಕ ರಣದೀಪ್ ಹೂಡಾ (Randeep Hooda) ವಿರುದ್ಧ ನೇತಾಜಿ ಸುಭಾಷ್ ಚಂದ್ರ ಬೋಸ್ (Netaji Subhash Chandra Bose) ಕುಟುಂಬ ಅಸಮಾಧಾನಗೊಂಡಿದೆ. ರಣದೀಪ್ ನಿರ್ದೇಶಿಸಿ, ನಟಿಸುತ್ತಿರುವ ‘ಸ್ವಾತಂತ್ರ್ಯ ವೀರ್ ಸಾವರ್ಕರ್’ ಸಿನಿಮಾದ ಕುರಿತಾದ ಪೋಸ್ಟರ್ ನಲ್ಲಿ ನೇತಾಜಿ ಬಗ್ಗೆ ತಪ್ಪು ಮಾಹಿತಿ ನೀಡಿದ್ದಕ್ಕಾಗಿ ನೇತಾಜಿ ಮರಿ ಮೊಮ್ಮಗ ಚಂದ್ರಕುಮಾರ್ ಬೋಸ್ (Chandrakumar Bose) ಗರಂ ಆಗಿದ್ದಾರೆ.

    ಸಾವರ್ಕರ್ (Veer Savarkar) ಹುಟ್ಟು ಹಬ್ಬದ ದಿನದಂದು ರಣದೀಪ್ ತಮ್ಮ ಸಿನಿಮಾದ ಪೋಸ್ಟರ್ ನ್ನು ಹಂಚಿಕೊಂಡಿದ್ದರು. ಆ ಪೋಸ್ಟರ್ ಪೋಸ್ಟ್ ಮಾಡುವಾಗ ನೇತಾಜಿ ಸುಭಾಷ್ ಚಂದ್ರ ಬೋಸ್, ಭಗತ್ ಸಿಂಗ್ ಹಾಗೂ ಖುದಿರಾಮ್ ಬೋಸ್ ಇವರೆಲ್ಲರಿಗೂ ಸಾವರ್ಕರ್ ಸ್ಫೂರ್ತಿಯಾಗಿದ್ದರು ಎನ್ನುವ ಅರ್ಥದಲ್ಲಿ ಬರೆದಿದ್ದರು. ಈ ಬರಹವೇ ನೇತಾಜಿ ಕುಟುಂಬಕ್ಕೆ ಕೋಪ ತರಿಸಿದೆ.

    ನೇತಾಜಿ ಮರಿ ಮೊಮ್ಮಗ ಈ ಕುರಿತು ಮಾತನಾಡಿ, ‘ಸುಳ್ಳು ಇತಿಹಾಸವನ್ನು ಯಾರೂ ಹೇಳಬಾರದು. ಸಾವರ್ಕರ್ ಸಿದ್ಧಾಂತಕ್ಕೆ ನೇತಾಜಿ ವಿರೋಧಿಯಾಗಿದ್ದರು. ನೇತಾಜಿ ಜಾತ್ಯಾತೀತ  ಗುಣಗಳನ್ನು ಹೊಂದಿದವರು. ನಿಮ್ಮ ಸಿನಿಮಾ ಪ್ರಚಾರಕ್ಕೆ, ಗಿಮಿಕ್ ಗಾಗಿ ಸುಳ್ಳು ಹೇಳಬೇಡಿ. ಸತ್ಯವನ್ನು ಜನರಿಗೆ ತಿಳಿಸುವ ಪ್ರಯತ್ನ ಮಾಡಿ. ಇಲ್ಲವೇ ಸುಮ್ಮನಿದ್ದು ಬಿಡಿ’ ಎಂದು ಹೇಳಿದ್ದಾರೆ. ಇದನ್ನೂ ಓದಿ:ಚೆನ್ನೈ ಟೀಮ್ ಗೆದ್ದ ಖುಷಿಯಲ್ಲಿ ಸಾಕ್ಷಿ ಧೋನಿ ಜೊತೆ ವಿಘ್ನೇಶ್ ಶಿವನ್ ಪೋಸ್

    ನೇತಾಜಿಗೆ ಪ್ರೇರಣೆ ಕಂಡಿತಾ ಸಾವರ್ಕರ್ ಅಲ್ಲ. ಅವರಿಗೆ ಪ್ರೇರಣೆ ಸ್ವಾಮಿ ವಿವೇಕಾನಂದರು. ಅವರು ಅಧ್ಯಾತ್ಮದ ಗುರು ಕೂಡ ಆಗಿದ್ದರು. ಮತ್ತೊಬ್ಬರು ಸ್ವಾತಂತ್ರ್ಯ ಹೋರಾಟಗಾರ ದೇಶಬಂಧು ಚಿತ್ತರಂಜನ್ ದಾಸ್. ಇವರ ಹೊರತಾಗಿ ಯಾರೂ ಅವರಿಗೆ ಸ್ಫೂರ್ತಿ ಆಗಿರಲಿಲ್ಲವೆಂದು ನೇತಾಜಿ ಮರಿಮೊಮ್ಮಗ ಹೇಳಿದ್ದಾರೆ. ಸಾವರ್ಕರ್ ಅವರನ್ನು ನೇತಾಜಿ ವಿರೋಧಿಸುತ್ತಲೇ ಬಂದಿದ್ದರು ಎಂದು ಗಟ್ಟಿಯಾಗಿ ಹೇಳಿದ್ದಾರೆ.

  • ಬಾಲಿವುಡ್ ಖ್ಯಾತನಟ ರಣದೀಪ್ ಹೂಡಾಗೆ ಅಪಘಾತ: ಸ್ಥಿತಿ ಗಂಭೀರ

    ಬಾಲಿವುಡ್ ಖ್ಯಾತನಟ ರಣದೀಪ್ ಹೂಡಾಗೆ ಅಪಘಾತ: ಸ್ಥಿತಿ ಗಂಭೀರ

    ಕುದುರೆ ಸವಾರಿ ಮಾಡುವಾಗ ಪ್ರಜ್ಞಾಹೀನರಾಗಿ ಬಿದ್ದ ಪರಿಣಾಮ ಬಾಲಿವುಡ್ ನಟ ರಣದೀಪ್ ಹೂಡಾ ಗಾಯಗೊಂಡಿದ್ದಾರೆ. ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗುತ್ತಿದೆ. ಸದ್ಯ ರಣದೀಪ್ ಅವರಿಗೆ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, ಚಿಕಿತ್ಸೆಗೆ ನಟ ಸ್ಪಂದಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ಕುದುರೆ ಮೇಲಿಂದ ಬಿದ್ದ ಪರಿಣಾಮವಾಗಿ ಕಾಲಿಗೆ ತೀವ್ರ ಪೆಟ್ಟಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಅವರು ಸಿಕ್ಕಿದ್ದರಿಂದ ಕೆಲ ಕಾಲ ಆತಂಕದ ವಾತಾವರಣ ಸೃಷ್ಟಿಯಾಗಿತ್ತು. ಕೂಡಲೇ ಅವರನ್ನು ಕೋಕಿಲಾಬೆನ್ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಇದೀಗ ವೈದ್ಯರು ಬೆಡ್ ರೆಸ್ಟ್ ತಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಅವರು ಸಾವರ್ಕರ್ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದು, ಆ ಸಿನಿಮಾ ದೃಶ್ಯಕ್ಕಾಗಿ ಅವರು ಕುದುರೆ ಸವಾರಿ ಮಾಡುತ್ತಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    ಸಾವರ್ಕರ್ ಪಾತ್ರ ಮಾಡುವುದಕ್ಕಾಗಿಯೇ ಅವರು 22 ಕೆಜಿ ತೂಕವನ್ನು ಇಳಿಸಿಕೊಳ್ಳುತ್ತಿದ್ದರು. ಈ ನೆಪದಲ್ಲಿ ಕುದುರೆ ಸವಾರಿ ಕೂಡ ಅವರು ಮಾಡುತ್ತಿದ್ದರು. ಈ ಸಮಯದಲ್ಲಿ ಕುದುರೆ ಮೇಲಿಂದ ಬಿದ್ದು ತೀವ್ರಗಾಯಗೊಂಡಿದ್ದಾರೆ. ಬಿದ್ದಿರುವ ಹೊಡೆತಕ್ಕೆ ಪ್ರಜ್ಞೆ ಕೂಡ ಕಳೆದುಕೊಂಡಿದ್ದರು. ಈ ಹಿಂದೆಯೂ ರಾಧೆ ಸಿನಿಮಾದ ಶೂಟಿಂಗ್ ವೇಳೆಯೂ ರಣದೀಪ್ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ಸಾವರ್ಕರ್’ ಸಿನಿಮಾದ ಶೂಟಿಂಗ್ ಶುರು: ನಿರ್ದೇಶನದ ಜೊತೆ ನಟಿಸಲಿರುವ ರಣದೀಪ್

    ‘ಸಾವರ್ಕರ್’ ಸಿನಿಮಾದ ಶೂಟಿಂಗ್ ಶುರು: ನಿರ್ದೇಶನದ ಜೊತೆ ನಟಿಸಲಿರುವ ರಣದೀಪ್

    ಕೆಲವು ತಿಂಗಳ ಹಿಂದೆ ವೀರ ಸಾವರ್ಕರ್ (Savarkar) ಬದುಕಿನ ಕುರಿತಾದ ಸಿನಿಮಾವೊಂದು ಬಾಲಿವುಡ್ ನಲ್ಲಿ ಮೂಡಿ ಬರಲಿದೆ ಎಂದು ಪಬ್ಲಿಕ್ ಟಿವಿ ಡಿಜಿಟಲ್ ಸುದ್ದಿ ಮಾಡಿತ್ತು. ಈ ಸಿನಿಮಾದಲ್ಲಿ ಸಾವರ್ಕರ್ ಪಾತ್ರವನ್ನು ಬಾಲಿವುಡ್ ನಟ ರಣದೀಪ್ ಹೂಡ ಮಾಡಲಿದ್ದಾರೆ ಎಂದೂ ಹೇಳಲಾಗಿತ್ತು. ಇದೀಗ ಆ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಸಿನಿಮಾದ ಮುಹೂರ್ತ ಮುಗಿಸಿಕೊಂಡು ಶೂಟಿಂಗ್ ಶುರು ಮಾಡಿರುವುದಾಗಿ ಚಿತ್ರತಂಡ ತಿಳಿಸಿದೆ.

    ಈ ಸಿನಿಮಾ (Cinema) ತಂಡದಿಂದ ಸಿಕ್ಕಿರುವ ಮತ್ತೊಂದು ಅಪ್ ಡೇಟ್ ಏನೆಂದರೆ, ಸಾವರ್ಕರ್ ಅವರ ಪಾತ್ರವನ್ನು ನಿರ್ವಹಿಸುತ್ತಿರುವ ರಣದೀಪ್ ಹೂಡಾ (Randeep Hooda) ಅವರೇ ಈ ಸಿನಿಮಾದ ನಿರ್ದೇಶನದ ಹೊಣೆಯನ್ನೂ ಹೊತ್ತಿದ್ದಾರೆ. ರಣದೀಪ್ ನಟಿಸಿ, ನಿರ್ದೇಶನ ಮಾಡುತ್ತಿರುವ ಸಿನಿಮಾ ಇದಾಗಿದೆ. ಈ ಕುರಿತು ಸ್ವತಃ ಹೂಡಾ ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ತಾವು ಈ ಸಿನಿಮಾವನ್ನು ನಿರ್ದೇಶನ ಮಾಡುತ್ತಿರುವುದು ನಿಜ ಎಂದು ಖಚಿತ ಪಡಿಸಿದ್ದಾರೆ.

    ಕೈಯಲ್ಲಿ ಕ್ಲಾಪ್ ಬೋರ್ಡ್ ಹಿಡಿದುಕೊಂಡು ನಿರ್ಮಾಪಕರ ಜೊತೆ ಫೋಟೋ ತಗೆಸಿಕೊಂಡಿರುವ ರಣದೀಪ್, ಸಾವರ್ಕರ್ ಚಿತ್ರಕ್ಕೆ ಚಾಲನೆ ನೀಡಲಾಗಿದೆ. ಈ ಸಿನಿಮಾದ ನಿರ್ದೇಶನದ ಜವಾಬ್ದಾರಿ ನನ್ನ ಹೆಗಲ ಮೇಲೆ ಬಿದ್ದಿದೆ ಎಂದೂ ಬರೆದುಕೊಂಡಿದ್ದಾರೆ. ಈ ಸಿನಿಮಾ ನನ್ನಷ್ಟೇ ಎಲ್ಲರನ್ನೂ ಪ್ರಭಾವಿಸಲಿದೆ ಎಂದೂ ಹೇಳಿಕೊಂಡಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ @30: ಹ್ಯಾಪಿ ಬರ್ತ್‌ಡೇ ರಚ್ಚು ಅಂದ್ರು ಫ್ಯಾನ್ಸ್

    ಬಾಲಿವುಡ್ ಸಿನಿಮಾ ರಂಗದಲ್ಲಿ ಅನೇಕ ಬಯೋಪಿಕ್ ಗಳು ಬರುತ್ತಿವೆ. ಒಂದು ಕಡೆ ಸಾವರ್ಕರ್ ಸಿನಿಮಾ ಸೆಟ್ಟೇರಿದ್ದರೆ, ಮತ್ತೊಂದು ಕಡೆ ಕಂಗನಾ ರಾಣಾವತ್ (Kangana Ranaut) ಎಮರ್ಜನ್ಸಿ (Emergency) ಘಟನೆಯನ್ನಿಟ್ಟುಕೊಂಡು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಇಂದಿರಾ ಗಾಂಧಿ ಆಗಿ ಅವರು ನಟಿಸುತ್ತಿದ್ದಾರೆ. ರಾಜಕೀಯ ನಾಯಕರ ಬದುಕನ್ನೇ ಆಧಾರಾವಾಗಿಟ್ಟುಕೊಂಡು ಹಲವು ಸಿನಿಮಾಗಳು ಬರುತ್ತಿವೆ. ಈ ಎಲ್ಲದರ ನಡುವೆ ಸದ್ಯ ಸಾವರ್ಕರ್ ಸಿನಿಮಾ ಸೆಟ್ಟೇರಿದೆ.

    Live Tv
    [brid partner=56869869 player=32851 video=960834 autoplay=true]