Tag: ರಣದೀಪ್ ಸುರ್ಜೇವಾಲಾ

  • ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ- ಇದು 85 ಪರ್ಸೆಂಟ್ ಫಿಕ್ಸಿಂಗ್ ಸಭೆನಾ ಅಂತಾ ಬಿಜೆಪಿ ಪ್ರಶ್ನೆ

    ಬಿಬಿಎಂಪಿ ಅಧಿಕಾರಿಗಳ ಸಭೆಯಲ್ಲಿ ಸುರ್ಜೇವಾಲ- ಇದು 85 ಪರ್ಸೆಂಟ್ ಫಿಕ್ಸಿಂಗ್ ಸಭೆನಾ ಅಂತಾ ಬಿಜೆಪಿ ಪ್ರಶ್ನೆ

    ಬೆಂಗಳೂರು: ನಗರದ ಖಾಸಗಿ ಹೋಟೆಲ್‍ನಲ್ಲಿ ಬಿಬಿಎಂಪಿ (BBMP) ಅಧಿಕಾರಿಗಳ ಜೊತೆ ಡಿಸಿಎಂ ಡಿಕೆ ಶಿವಕುಮಾರ್ (DK Shivakumar), ಸಚಿವರಾದ ಕೆಜೆ ಜಾರ್ಜ್ (K J George), ಜಮೀರ್ ಅಹ್ಮದ್ ಖಾನ್ (Zameer Ahmed Khan) ಸಭೆ ನಡೆಸಿದ್ರು. ಆದರೆ ಈ ಸಭೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲ ಪಾಲ್ಗೊಂಡಿರೋದು ನಾನಾ ಚರ್ಚೆಗೆ ಗ್ರಾಸವಾಗಿದೆ.

    ಬಿಜೆಪಿಯಂತೂ ಈ ಸಭೆಯ ಫೋಟೋ ಮುಂದಿಟ್ಕೊಂಡು ಕಾಂಗ್ರೆಸ್ ಸರ್ಕಾರದ ವಿರುದ್ಧ ಮುಗಿಬಿದ್ದಿದೆ. ಎಟಿಎಂ ಸರ್ಕಾರದ ನಡೆಸಿರುವ ಈ ಸಭೆಯ ರಹಸ್ಯವೇನು? ರಾಜ್ಯ ಸರ್ಕಾರದೊಟ್ಟಿಗಿರಲಿ. ಬಿಬಿಎಂಪಿ ಜೊತೆಯಾಗಲಿ ಯಾವುದೇ ರೀತಿಯಲ್ಲೂ ಅಧಿಕೃತವಾಗಿ ಸಂಬಂಧ ಹೊಂದಿಲ್ಲದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಗೆ ಈ ಸಭೆಯಲ್ಲಿ ಏನು ಕೆಲಸ..? ಇದು 85 ಪರ್ಸೆಂಟ್ ಡೀಲ್ ಫಿಕ್ಸಿಂಗ್ ಸಭೆಯೇ? ಸಿಎಂ, ಡಿಸಿಎಂ ಉತ್ತರಿಸಬೇಕು ಎಂದು ಬಿಜೆಪಿ ಸವಾಲ್ ಹಾಕಿದೆ. ಇದನ್ನೂ ಓದಿ: ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕಾ?, ಕೈಗೊಂಬೆ ಸರ್ಕಾರಕ್ಕಾ?: ಹೆಚ್‍ಡಿಕೆ

    ಈ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಕೂಡ ಸರಣಿ ಟ್ವೀಟ್ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಇದು ಸಿದ್ದರಾಮಯ್ಯ ಸರ್ಕಾರವೋ? 10 ಜನಪತ್ ಹಂಗಿನ ಸರ್ಕಾರವೋ? ಕನ್ನಡಿಗರು ಮತ ಹಾಕಿದ್ದು ಕೈ ಸರ್ಕಾರಕ್ಕಾ? ಅಥವಾ ಕೈಗೊಂಬೆ ಸರ್ಕಾರಕ್ಕಾ? ಎಂದು ಗರಂ ಆಗಿದ್ದಾರೆ. ಸರ್ಕಾರದ ಅಧಿಕೃತ ಸಭೆಗಳನ್ನು ಹೈಕಮಾಂಡ್ ನಿಲಯ ಕಲಾವಿದರೇ ನಡೆಸುವ ಕರ್ಮ ಕರ್ನಾಟಕದ್ದು, ಸುರ್ಜೇವಾಲಗೆ ಅಧಿಕಾರ ಕೊಟ್ಟವರು ಯಾರು? ಎಂದು ಆಕ್ರೋಶ ಹೊರಹಾಕಿದ್ದಾರೆ. ಸಭೆಯಲ್ಲಿ ಸುರ್ಜೇವಾಲ ಸೆಂಟರ್ ಸೀಟ್‍ನಲ್ಲಿದ್ದಾರೆ. ಸಚಿವರು ಸೈಡ್ ಕುರ್ಚಿಗಳ ಪಾಲಾಗಿದ್ದಾರೆ. ಇದೇನು ವಿಚಿತ್ರ.? ಮಾನ್ಯ ಮುಖ್ಯಮಂತ್ರಿಗಳೇ ಉತ್ತರಿಸಿ ಎಂದು ಟ್ವೀಟಿಸಿದ್ದಾರೆ.

    ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ ಡಿಕೆ ಶಿವಕುಮಾರ್, ನಾನು ಸುರ್ಜೇವಾಲ ಭೇಟಿಗೆ ಹೋಗಿದ್ದೆ. ನನ್ನನ್ನು ಬಿಡಿಎಗೆ ಕರೆದೊಯ್ಯಲು ಅಧಿಕಾರಿಗಳು ಬಂದಿದ್ರು ಅಷ್ಟೇ. ಯಾವ ಸಭೆಯೂ ಮಾಡಿಲ್ಲ ಎಂದು ಸಮಜಾಯಿಷಿ ನೀಡಿದ್ರು.

  • ಸಿದ್ದು-ಡಿಕೆಶಿಯನ್ನೇ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಪಿಚ್ ರಿಪೋರ್ಟ್ ತಯಾರಿಸಿದ್ಯಾ?

    ಸಿದ್ದು-ಡಿಕೆಶಿಯನ್ನೇ ಬಿಟ್ಟು ಕಾಂಗ್ರೆಸ್ ಹೈಕಮಾಂಡ್ ಪಿಚ್ ರಿಪೋರ್ಟ್ ತಯಾರಿಸಿದ್ಯಾ?

    ಬೆಂಗಳೂರು: ಕರ್ನಾಟಕದಲ್ಲಿ ಕಾಂಗ್ರೆಸ್ ಹೈಕಮಾಂಡ್ (Congress High Command) ಟೀಂ ರಹಸ್ಯ ಸಂಚಾರ ಮಾಡಿದ್ದು ಚರ್ಚೆಗೆ ಗ್ರಾಸವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ (Siddaramaiah) ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ (DK Shivakumar) ಅವರನ್ನು ಬಿಟ್ಟು ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ (Randeep Surjewala) ಹಲವು ಕ್ಷೇತ್ರಗಳನ್ನು ಸುತ್ತಿದ್ದು, ಕಾಂಗ್ರೆಸ್ ಹೈಕಮಾಂಡ್‌ಗೆ ವರದಿ ಸಲ್ಲಿಸಿದ್ದಾರೆ ಎನ್ನಲಾಗಿದೆ. ಹೈಕಮಾಂಡ್ ಪ್ರತ್ಯೇಕ ಸಂಚಾರದ ಗುಟ್ಟಿನ ಬಗ್ಗೆ ಕಾಂಗ್ರೆಸ್‌ನಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿದೆ.

    ಕರ್ನಾಟಕದಲ್ಲಿ ಹೈಕಮಾಂಡ್‌ಗೆ ಇರುವ ತಲೆನೋವು ಅಭ್ಯರ್ಥಿಗಳು ಹೆಚ್ಚಿರುವುದು. ಹೈಕಮಾಂಡ್ ಸರ್ವೇ ವೇಳೆ 4 ಎಚ್ಚರಿಕೆ ರವಾನೆಯಾಗಿದೆ ಎನ್ನಲಾಗಿದೆ. ಯಾವ ಕ್ಷೇತ್ರದಲ್ಲಿ ಯಾರಿಗೆ ಇದೆ ಬಲ, ಯಾವ ಅಭ್ಯರ್ಥಿ ಪ್ರಬಲ? ಸಿದ್ದರಾಮಯ್ಯ, ಡಿಕೆಶಿ ಗುಂಪಿನಲ್ಲಿ ಎಲ್ಲೆಲ್ಲಿ ಅಭ್ಯರ್ಥಿಗಳು ಇದ್ದಾರೆ? ಅಲ್ಲಿ ಯಾರು ಪ್ರಬಲ? ಯಾವ ಕ್ಷೇತ್ರಗಳಲ್ಲಿ ಬಿಜೆಪಿ ವಿರೋಧಿ ಅಲೆ ಹೆಚ್ಚಿದೆ? ಯಾವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ವಿರೋಧಿ ಅಲೆ ಇದೆ? ಎಂಬ ಬಗ್ಗೆ ಸುರ್ಜೇವಾಲಾ ಟೀಂ ಸರ್ವೇ ಮಾಡಿ ಅಭಿಪ್ರಾಯ ಸಂಗ್ರಹಿಸಿದ್ದು, ಅಂತಿಮವಾಗಿ ಹೈಕಮಾಂಡ್ ತಲುಪಿದೆ ಎಂಬುದು ಕಾಂಗ್ರೆಸ್ ಮೂಲಗಳ ಮಾಹಿತಿ. ಇದನ್ನೂ ಓದಿ: ಅಕ್ರಮ ಆಸ್ತಿ ಗಳಿಕೆ ಪ್ರಕರಣ – ಡಿಕೆಶಿಗೆ ಬಿಗ್ ರಿಲೀಫ್

    ಇದೇ ಮೊದಲ ಸಲ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ಘೋಷಣೆಗೂ ಮುನ್ನವೇ ಪಿಚ್ ರಿಪೋರ್ಟ್ ಸ್ಟಡಿ ಮಾಡಿದೆ. ಡಿಕೆಶಿ, ಸಿದ್ದು ಎರಡು ಟೀಂಗಳನ್ನು ಬಿಟ್ಟು ಸುರ್ಜೇವಾಲಾ ಪ್ರತ್ಯೇಕ ಟೀಂ ಮಾಡಿಕೊಂಡು ಪಿಚ್ ರಿಪೋರ್ಟ್ ತಯಾರು ಮಾಡಿದ್ದಾರೆ. ಟಿಕೆಟ್ ವಿಚಾರದಲ್ಲಿ ಈ ಸಲ ಎಚ್ಚರಿಕೆ ಹೆಜ್ಜೆ ಇಡಲು ಕಾಂಗ್ರೆಸ್ ಹೈಕಮಾಂಡ್ ಮಹಾ ಪ್ಲ್ಯಾನ್ ಮಾಡಿದ್ದು, ಯಾರ ಬೆಂಬಲಿಗನೇ ಇರಲಿ, ಯಾರೇ ಲಾಬಿ ಮಾಡಲಿ. ರಿಪೋರ್ಟ್ ಆಧಾರವೇ ಫೈನಲ್ ಎಂಬ ಸಂದೇಶ ರವಾನೆ ಮಾಡುವುದೇ ಈ ಪ್ರತ್ಯೇಕ ಸರ್ವೇಯ ಉದ್ದೇಶ ಎನ್ನಲಾಗಿದೆ. ಇದರಿಂದಾಗಿ ಡಿಕೆಶಿ ಹಾಗೂ ಸಿದ್ದು ಬಣದ ಅಭ್ಯರ್ಥಿಗಳಿಗೆ ನಡುಕ ಉಂಟಾಗಿದೆ. ಹೈಕಮಾಂಡ್ ರಿಪೋರ್ಟ್ನಲ್ಲಿ ಯಾರ ಹಣೆಬರಹ ಹೇಗಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ. ಇದನ್ನೂ ಓದಿ: ಕೇಸರಿ ಭದ್ರಕೋಟೆಗೆ ಚಾಣಕ್ಯ: ಮಂಗಳೂರಿನಲ್ಲಿ ಶಾ ಚುನಾವಣಾ ರಣತಂತ್ರ

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ‘ವೈಟ್ ಚಾಲೆಂಜ್’ ತೆಗೆದುಕೊಳ್ಳಿ ರಾಹುಲ್ ಗಾಂಧಿ – ಪೋಸ್ಟರ್ ವೈರಲ್

    ‘ವೈಟ್ ಚಾಲೆಂಜ್’ ತೆಗೆದುಕೊಳ್ಳಿ ರಾಹುಲ್ ಗಾಂಧಿ – ಪೋಸ್ಟರ್ ವೈರಲ್

    ಹೈದರಾಬಾದ್: ‘ವೈಟ್ ಚಾಲೆಂಜ್’ ಸ್ವೀಕರಿಸುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಸವಾಲು ಹಾಕುವ ಪೋಸ್ಟರ್‌ಗಳನ್ನು ತೆಲಂಗಾಣದಲ್ಲಿ ಹಾಕಲಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ.

    ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ(ಟಿಪಿಸಿಸಿ) ಎ.ರೇವಂತ್ ರೆಡ್ಡಿ ರಾಜಕಾರಣಿಗಳನ್ನು ‘ವೈಟ್ ಚಾಲೆಂಜ್’ ಸ್ವೀಕರಿಸುವಂತೆ ಪ್ರತಿಪಕ್ಷಗಳಿಗೆ ಸವಾಲು ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್‍ಎಸ್) ನಾಯಕ ಕ್ರಿಶನ್, ಈ ಪರೀಕ್ಷೆಯನ್ನು ಗಾಂಧಿ ವಂಶಸ್ಥರೂ ತೆಗೆದುಕೊಳ್ಳಲಿ. ಈ ಸವಾಲನ್ನು ರಾಹುಲ್ ಗಾಂಧಿ ಏಕೆ ಸ್ವೀಕರಿಸುವುದಿಲ್ಲ ಎಂದು ಪ್ರಶ್ನೆಯನ್ನು ಕೇಳಿದರು. ಇದನ್ನೂ ಓದಿ: ಅಶ್ವತ್ಥ ನಾರಾಯಣ್ ವಿರುದ್ಧ ಡಿಕೆಶಿ ಷಡ್ಯಂತ್ರ ಮಾಡುತ್ತಿದ್ದಾರೆ: ಎಸ್.ಟಿ.ಸೋಮಶೇಖರ್

    ರೆಡ್ಡಿ ಅವರು ದೇಶದಲ್ಲಿ ಹೆಚ್ಚುತ್ತಿರುವ ಮಾದಕ ದ್ರವ್ಯ ಹಾವಳಿ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ವೈಟ್ ಚಾಲೆಂಜ್’ ಆರಂಭಿಸಿದ್ದಾರೆ. ಪರಿಣಾಮ ಈ ಸವಾಲನ್ನು ಮಾಜಿ ಸಂಸದ ಕೆ.ವಿಶೇಶ್ವರ್ ರೆಡ್ಡಿ ಅವರು ಸ್ವೀಕರಿಸಿದ್ದಾರೆ. ರಾಮರಾವ್ ಅವರು ಸಹ ಈ ಸವಾಲನ್ನು ಸ್ವೀಕರಿಸಲು ಧೈರ್ಯ ಮಾಡಿದ್ದಾರೆ ಎಂದು ರೇವಂತ್ ರೆಡ್ಡಿ ಹೇಳಿದ್ದರು. ಕೆ.ಟಿ.ರಾಮರಾವ್ ಅವರು ತೆಲಂಗಾಣ ಸಿಎಂ ಕೆ.ಚಂದ್ರಶೇಖರ್ ರಾವ್ ಅವರ ಪುತ್ರ.

    ಡ್ರಗ್ಸ್ ದಂಧೆಯಲ್ಲಿ ಕೆಟಿಆರ್‌ಗೆ ನಂಟು ಇದೆ ಎಂದು ರೇವಂತ್ ರೆಡ್ಡಿ ಆರೋಪ ಮಾಡಿದ್ದರು. ರೆಡ್ಡಿ ಆರೋಪಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕೆಟಿಆರ್, ನನಗೆ ಈ ಡ್ರಗ್ಸ್ ಪ್ರಕರಣ ಹೇಗೆ ಸಂಪರ್ಕವಿದೆ. ನಾನು ರಕ್ತ, ಕೂದಲು ಮತ್ತು ಯಕೃತ್ತಿನ ಪರೀಕ್ಷೆ ಮಾಡಿಸಿಕೊಳ್ಳಲು ಸಿದ್ಧ. ರಾಹುಲ್ ಗಾಂಧಿ ಅವರು ಸಹ ಪರೀಕ್ಷೆ ಮಾಡಿಸಿಕೊಳ್ಳುತ್ತಾರಾ ಎಂದು ಮರು ಪ್ರಶ್ನೆಯನ್ನು ಕೇಳಿದರು. ಪ್ರಸ್ತುತ ರಾಹುಲ್ ಗಾಂಧಿ ‘ವೈಟ್ ಚಾಲೆಂಜ್’ ತೆಗೆದುಕೊಳ್ಳಿ ಎಂಬ ಪೋಸ್ಟರ್‌ ತೆಲಂಗಾಣದಲ್ಲಿ ಹರಿದಾಡುತ್ತದೆ. ಈ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

    rahul gandhi night club

    ಕಠ್ಮಂಡುವಿನ ನೈಟ್‍ಕ್ಲಬ್‍ನಲ್ಲಿ ರಾಹುಲ್ ಗಾಂಧಿ ಫೋಟೋ ವೈರಲ್ ಆಗಿದ್ದು, ವೀಡಿಯೋದಲ್ಲಿ ರಾಹುಲ್ ಅವರು ಕಾಣಿಸಿಕೊಂಡ ನಂತರ ಟಿಆರ್‍ಎಸ್ ‘ವೈಟ್ ಚಾಲೆಂಜ್’ ತೆಗೆದುಕೊಳ್ಳುವಂತೆ ಆಗ್ರಹ ಮಾಡುತ್ತಿವೆ. ಇದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಭಾರೀ ಮಾತಿನ ಸಮರ ಉಂಟು ಮಾಡುವಂತೆ ಮಾಡಿದೆ. ಇದನ್ನೂ ಓದಿ: ಅರಗ ಜ್ಞಾನೇಂದ್ರ, ಅಶ್ವತ್ಥ ನಾರಾಯಣ್ ಮೇಲಿನ ಆರೋಪಕ್ಕೆ ಹುರುಳು, ತಿರುಳು ಇಲ್ಲ: ಆರ್.ಅಶೋಕ್ 

    RAHUL GANDHI

    ಬಿಜೆಪಿಯ ಅಮಿತ್ ಮಾಳವೀಯ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅವರು ಈ ವೀಡಿಯೋವನ್ನು ಟ್ವೀಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮತ್ತು ಮುಖ್ಯ ವಕ್ತಾರ ರಣದೀಪ್ ಸುರ್ಜೇವಾಲಾ ಅವರು ಖಾಸಗಿ ವಿವಾಹ ಕಾರ್ಯಕ್ರಮಕ್ಕಾಗಿ ನೇಪಾಳಕ್ಕೆ ಭೇಟಿ ನೀಡಿದ್ದರು ಎಂದು ಗಾಂಧಿ ಅವರನ್ನು ಸಮರ್ಥಿಸಿಕೊಂಡಿದ್ದಾರೆ.

  • ಕಾಂಗ್ರೆಸ್ ಪಕ್ಷವನ್ನು ಸೇರಲು ನಿರಾಕರಿಸಿದ ಪ್ರಶಾಂತ್ ಕಿಶೋರ್

    ಕಾಂಗ್ರೆಸ್ ಪಕ್ಷವನ್ನು ಸೇರಲು ನಿರಾಕರಿಸಿದ ಪ್ರಶಾಂತ್ ಕಿಶೋರ್

    ನವದೆಹಲಿ: ಸರಣಿ ಸಭೆಗಳ ನಂತರವು ಚುನಾವಣಾ ಚಾಣಾಕ್ಷ ಪ್ರಶಾಂತ್ ಕಿಶೋರ್ ಕಾಂಗ್ರೆಸ್ ಪಕ್ಷವನ್ನು ಸೇರುವ ಪ್ರಸ್ತಾಪವನ್ನು ತಿರಸ್ಕರಿಸಿದ್ದಾರೆ.

    ಕೆಲವು ದಿನಗಳಿಂದ ಕುತೂಹಲ ಮೂಡಿಸಿದ್ದ ಪ್ರಶಾಂತ್ ಕಿಶೋರ್ ಮತ್ತು ಕಾಂಗ್ರೆಸ್ ನಡುವಿನ ಮಾತುಕತೆ ಈಗ ಅಂತ್ಯಕಂಡಿದೆ. 2024ರ ರಾಷ್ಟ್ರೀಯ ಚುನಾವಣೆಗೆ ಮುಂಚಿತವಾಗಿ ರಾಜಕೀಯ ಸವಾಲುಗಳನ್ನು ಎದುರಿಸಿ ಮುನ್ನಡೆ ಸಾಧಿಸಲು ಯೋಚಿಸಿದ್ದ ಕಾಂಗ್ರೆಸ್‍ಗೆ ಇದೀಗ ಹಿನ್ನಡೆಯಾಗಿದೆ. ಈ ಬಗ್ಗೆ ಪ್ರಶಾಂತ್ ಕಿಶೋರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ರಣದೀಪ್ ಸುರ್ಜೇವಾಲಾ ಸ್ಪಷ್ಟಪಡಿಸಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?
    ಚುನಾವಣಾ ತಂತ್ರಗಾರಿಕೆಯ ಭಾಗವಾಗಿ ಪಕ್ಷಕ್ಕೆ ಸೇರಲು ಮತ್ತು ಚುನಾವಣೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಕಾಂಗ್ರೆಸ್‍ನ ಪ್ರಸ್ತಾಪವನ್ನು ನಾನು ನಿರಾಕರಿಸಿದೆ. ನನ್ನ ಅಭಿಪ್ರಾಯದ ಪ್ರಕಾರ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸಲು ಕಾಂಗ್ರೆಸ್ ಪಕ್ಷಕ್ಕೆ ಮುಖ್ಯವಾಗಿ ಬೇಕಾಗಿರುವುದು ಸರಿಯಾದ ನಾಯಕತ್ವವಾಗಿದೆ ಎಂದು ತಿಳಿಸಿದ್ದಾರೆ.

    ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಸೇರಿದಂತೆ ಮತ್ತಿತರ ಕಾಂಗ್ರೆಸ್ ನಾಯಕರ ಜೊತೆಗೆ ಪ್ರಶಾಂತ್ ಕಿಶೋರ್ ಮಾತುಕತೆ ನಡೆಸಿದ್ದರು. ಹಲವು ಸುತ್ತಿನ ಮಾತುಕತೆಗಳ ನಂತರ ಪ್ರಶಾಂತ್ ಕಿಶೋರ್ ಕಾಂಗ್ರೆಸ್‍ಗೆ ಸೇರ್ಪಡೆಯಾಗುತ್ತಾರೆ ಎಂಬ ಸುದ್ದಿಹರಿದಾಡುತ್ತಿತ್ತು. ಆದರೆ ಇಂದು ಪ್ರಶಾಂತ್ ಕಿಶೋರ್ ಟ್ವೀಟ್ ಮಾಡಿ ಕಾಂಗ್ರೆಸ್‍ಗೆ ಸೇರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್ ಬಗೆಗಿನ ನಂಬಿಕೆ ಬದಲಾಗಿಲ್ಲ: ಮಸ್ಕ್‌ಗೆ ಕೇಂದ್ರ ಪ್ರತಿಕ್ರಿಯೆ

    ಕಾಂಗ್ರೆಸ್ ಜೊತೆ ಮಾತುಕತೆ ನಡೆಯುತ್ತಿರುವಾಗಲೇ ತೆಲಂಗಾಣದ ಮುಖ್ಯಮಂತ್ರಿ ಕೆಸಿಆರ್ ಜೊತೆಗೂ ಮಾತುಕತೆ ನಡೆಸಿದ್ದರು. ಪ್ರಶಾಂತ್ ಕಿಶೋರ್ ಮುಂದಿನ ನಡೆಯೇನು ಎಂಬ ಪ್ರಶ್ನೆ ಇದೀಗ ಕಾಡುತ್ತಿದೆ. ಇದನ್ನೂ ಓದಿ: ಚೀನಾದಿಂದ ಟೆಸ್ಲಾ ಕಾರುಗಳನ್ನ ಆಮದು ಮಾಡಿಕೊಂಡು ಭಾರತದಲ್ಲಿ ಮಾರುವ ಹಾಗಿಲ್ಲ: ಗಡ್ಕರಿ

  • Union Budget: ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ: ರಣದೀಪ್ ಸುರ್ಜೇವಾಲಾ ವ್ಯಂಗ್ಯ

    Union Budget: ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ: ರಣದೀಪ್ ಸುರ್ಜೇವಾಲಾ ವ್ಯಂಗ್ಯ

    ನವದೆಹಲಿ: ಕೇಂದ್ರ ಬಿಜೆಟ್‍ಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಟ್ವೀಟ್ ಮಾಡುವ ಮೂಲಕ ಬಜೆಟ್ ವಿರುದ್ಧ ವ್ಯಂಗ್ಯವಾಡಿದ್ದಾರೆ.

    ಟ್ವೀಟ್‍ನಲ್ಲಿ ಏನಿದೆ?: ದೇಶದಲ್ಲಿ ದುಡಿಯುವ ಮತ್ತು ಮದ್ಯಮ ವರ್ಗ ನಿರೀಕ್ಷೆ ಇಟ್ಟಿತ್ತು.ಕೋವಿಡ್ ನಿಂದ ನರಳಿದ ದುಡಿಯುವ ವರ್ಗ ಪರಿಹಾರ ಸಿಗುತ್ತದೆ ಎಂದು ನಿರೀಕ್ಷೆ ಮಾಡಿತ್ತು. ನೇರ ತೆರಿಗೆಯನ್ನು ಮುಂದುವರೆಸಿದೆ. ಕೋವಿಡ್ ಸಂದರ್ಭದಲ್ಲೂ ಯಥಾಸ್ಥಿತಿ ಮುಂದುವರಿಸಿದೆ. ದುಡಿಯುವ ವರ್ಗದ ನಿರೀಕ್ಷೆಯನ್ನು ಕೇಂದ್ರ ಸರ್ಕಾರ ಹುಸಿ ಮಾಡಿದೆ. ಹಣಕಾಸು ಸಚಿವರು ಮತ್ತು ಪ್ರಧಾನ ಮಂತ್ರಿ ಹುಸಿ ಮಾಡಿದ್ದಾರೆ ಎಂದು ಟ್ವೀಟ್ ಮಾಡಿ ಆಡಳಿತ ಸರ್ಕಾರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನೂ ಓದಿ: Budget: 2022-23ರ ಹೊತ್ತಿಗೆ 5G ಮೊಬೈಲ್‌ ಸೇವೆ

    ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2022-23ನೇ ಸಾಲಿನ ಬಜೆಟ್ ಮಂಡನೆ ಮಾಡಿದ್ದಾರೆ. 400 ಹೊಸ ತಲೆಮಾರಿನ ವಂಧೆ ಭಾರತ್ ರೈಲು, 2 ಲಕ್ಷ ಅಂಗನವಾಡಿಗಳನ್ನು ಮೇಲ್ದರ್ಜೆಗೆರಿಸುವ ಯೋಜನೆ, ಗ್ರಾಮೀಣ ಮಕ್ಕಳಿಗೆ ವನ್ ಕ್ಲಾಸ್ ವನ್ ಟಿವಿ, ಕೆನ್ ಬೆಟ್ಟಾ ನದಿ ಜೋಡಣೆ ಯೋಜನೆ, ಪಿಎಂ ಆವಾಸ್ ಯೋಜನೆಯಡಿ 80 ಲಕ್ಷ ಮನೆ ನಿರ್ಮಾಣ, ಜಿಎಸ್‍ಟಿ ಸಂಗ್ರಹ, 75 ಜಿಲ್ಲೆಗಳಲ್ಲಿ 75 ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ಹೀಗೆ ಹಲವು ಯೋಜನೆಗಳನ್ನು ಕೇಂದ್ರ ಬಜೆಟ್ ಒಳಗೊಂಡಿತ್ತು.

  • ರಾಮಮಂದಿರಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿ, ಇತರರ ಬಾಗಿಲು ಬಂದ್: ಸುರ್ಜೇವಾಲಾ

    ರಾಮಮಂದಿರಲ್ಲಿ ರಾಜಕೀಯ ಮಾಡಲು ಹೊರಟ ಬಿಜೆಪಿ, ಇತರರ ಬಾಗಿಲು ಬಂದ್: ಸುರ್ಜೇವಾಲಾ

    ನವದೆಹಲಿ: ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಗ್ರೀನ್ ಸಿಗ್ನಲ್ ನೀಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಅವರು, ನ್ಯಾಯಾಲಯದ ತೀರ್ಪನ್ನು ಸ್ವಾಗತಿಸಿದ್ದಾರೆ.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಸುಪ್ರೀಂ ಕೋರ್ಟ್ ಅಯೋಧ್ಯೆ ಕುರಿತು ನೀಡಿರುವ ತೀರ್ಪನ್ನು ಕಾಂಗ್ರೆಸ್ ಸ್ವಾಗತಿಸುತ್ತದೆ. ನಾವು ರಾಮಮಂದಿರ ನಿರ್ಮಾಣದ ಪರವಿದ್ದೇವೆ. ನ್ಯಾಯಾಲಯದ ಈ ತೀರ್ಪು ಕೇವಲ ರಾಮಮಂದಿರ ನಿರ್ಮಾಣಕ್ಕೆ ಬಾಗಿಲನ್ನು ತೆರೆದಿದ್ದು ಮಾತ್ರವಲ್ಲದೇ ಈ ವಿಚಾರವನ್ನು ರಾಜಕೀಯ ಮಾಡುವ ಬಿಜೆಪಿ ಹಾಗೂ ಇತರರ ಬಾಗಿಲನ್ನು ಬಂದ್ ಮಾಡಿದೆ ಎಂದರು.

    ನ್ಯಾಯಾಲಯದ ತೀರ್ಪನ್ನು ಗೌರವಿಸಿ ನಾವು ನಡೆಯಬೇಕಿದ್ದು, ಪಕ್ಷದ ಎಲ್ಲಾ ಕಾರ್ಯಕರ್ತರಿಗೂ ಹಾಗೂ ಸಮಯದಾಯಗಳಿಗೂ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಜಾತ್ಯತೀತ ಮೌಲ್ಯಗಳು, ಸೋದರತ್ವ ಮನೋಭಾವಕ್ಕೆ ಬದ್ಧರಾಗಿರುವಂತೆ ಮನವಿ ಮಾಡುತ್ತೇವೆ. ಅಲ್ಲದೇ ಶಾಂತಿಯನ್ನು ಕಾಪಾಡುವ ಮೂಲಕ ನಮ್ಮ ಸಂಸ್ಕೃತಿಯ ಮೌಲ್ಯಗಳನ್ನು ಪಾಲಿಸಬೇಕಿದೆ ಎಂದು ಸುರ್ಜೇವಾಲಾ ಕರೆ ನೀಡಿದರು.

    ನ್ಯಾಯಾಲಯ ಜನರ ನಂಬಿಕೆಯನ್ನು ಗೌರವಿಸಿದೆ. ಈ ತೀರ್ಪು ಜನರ ನಂಬಿಕೆಗಳ ಮೇಲೆ ರಾಜಕೀಯ ಮಾಡಲು ಮುಂದಾದ ಬಿಜೆಪಿಯ ಬಾಗಿಲನ್ನು ಬಂದ್ ಮಾಡಿದೆ. ಕಾಂಗ್ರೆಸ್ ಪಕ್ಷ ರಾಮಮಂದಿರ ನಿರ್ಮಾಣದ ಪರವಿದೆ. ಎಲ್ಲರೂ ನ್ಯಾಯಾಲದ ತೀರ್ಪನ್ನು ಗೌರವಿಸಬೇಕಿದೆ ಎಂದರು.