ಬೆಂಗಳೂರು: ಆಡಳಿತಾರೂಢ ಕಾಂಗ್ರೆಸ್‌ನಲ್ಲೇ ಸಿಎಂ ಕುರ್ಚಿ ಕದನ ಕುರಿತು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ (Nikhil Kumaraswamy) ವ್ಯಂಗ್ಯವಾಡಿದ್ದಾರೆ. ಕರ್ನಾಟಕದ ಅಸಲಿ ಮುಖ್ಯಮಂತ್ರಿ ನೋಡಲು ಸ್ಕ್ಯಾನ್ ಮಾಡಿ ಎಂದು ‘ಕೈ’ ನಾಯಕರಿಗೆ ಟಾಂಗ್ ಕೊಟ್ಟಿದ್ದಾರೆ.
ನಿಖಿಲ್ ಕುಮಾರಸ್ವಾಮಿ ಈ ಕುರಿತು ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ. ಪೋಸ್ಟ್‌ನಲ್ಲಿ ಸ್ಕ್ಯಾನರ್ ಕೂಡ ಹಂಚಿಕೊಂಡಿದ್ದಾರೆ. ಸ್ಕ್ಯಾನ್ ಮಾಡಿದರೆ ರಣದೀಪ್ ಸುರ್ಜೇವಾಲಾರ ಫೇಸ್‌ಬುಕ್ ಖಾತೆ ತೆರೆದುಕೊಳ್ಳುತ್ತದೆ. ಪರೋಕ್ಷವಾಗಿ ‘ಇದು ಸುರ್ಜೇವಾಲ ಸರ್ಕಾರ’ ಎಂದು ನಿಖಿಲ್ ತಿವಿದಿದ್ದಾರೆ. ಇದನ್ನೂ ಓದಿ: ಧರ್ಮಸ್ಥಳ ಶವಗಳ ಹೂತಿಟ್ಟ ಪ್ರಕರಣ – ಇಂದಿನಿಂದ ಎಸ್‌ಐಟಿ ತನಿಖೆ ಆರಂಭ
ಕರ್ನಾಟಕವು ಕನ್ನಡಿಗ ಸಿಎಂಗೆ ಮತ ಹಾಕಿದೆ. ಆದರೆ ಹರಿಯಾಣದ ಸೂಪರ್ ಸಿಎಂ ನಮ್ಮನ್ನು ಆಳುತ್ತಿದ್ದಾರೆ!
ಅವರು ಈಗ ಮಂತ್ರಿಗಳೊಂದಿಗೆ ಮಾತ್ರವಲ್ಲ, ಸರಕಾರದ ಅಧಿಕಾರಿಗಳೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ!!
ಕನ್ನಡಿಗ ಹೆಮ್ಮೆಯ ಸ್ವಯಂಘೋಷಿತ ಚಾಂಪಿಯನ್ ಶ್ರೀ ಸಿದ್ದರಾಮಯ್ಯನವರು ರಾಜ್ಯದ ಆಡಳಿತವನ್ನು ಸದ್ದಿಲ್ಲದೆ ಹೊರಗುತ್ತಿಗೆ ನೀಡಿದ್ದಾರೆ.… pic.twitter.com/zHSuotiKRx
ಎಕ್ಸ್ ಖಾತೆಯಲ್ಲೇನಿದೆ?
ಕರ್ನಾಟಕವು ಕನ್ನಡಿಗ ಸಿಎಂಗೆ ಮತ ಹಾಕಿದೆ. ಆದರೆ, ಹರಿಯಾಣದ ಸೂಪರ್ ಸಿಎಂ ನಮ್ಮನ್ನು ಆಳುತ್ತಿದ್ದಾರೆ!. ಅವರು ಈಗ ಮಂತ್ರಿಗಳೊಂದಿಗೆ ಮಾತ್ರವಲ್ಲ, ಸರ್ಕಾರದ ಅಧಿಕಾರಿಗಳೊಂದಿಗೆ ಸಭೆಗಳನ್ನೂ ನಡೆಸುತ್ತಿದ್ದಾರೆ!!. ಕನ್ನಡಿಗ ಹೆಮ್ಮೆಯ ಸ್ವಯಂಘೋಷಿತ ಚಾಂಪಿಯನ್ ಸಿದ್ದರಾಮಯ್ಯನವರು ರಾಜ್ಯದ ಆಡಳಿತವನ್ನು ಸದ್ದಿಲ್ಲದೆ ಹೊರಗುತ್ತಿಗೆ ನೀಡಿದ್ದಾರೆ. ನಮ್ಮ ಹೆಮ್ಮೆ ಎಲ್ಲಿದೆ ಎಂದು ಪ್ರಶ್ನಿಸಿದ್ದಾರೆ.
ಸಿಎಂ ಕುರ್ಚಿ ವಿಚಾರವಾಗಿ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಗುದ್ದಾಟ ನಡೆಯುತ್ತಿದೆ. ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ಸಿಗಬೇಕು ಎಂಬುದು ಅವರ ಆಪ್ತರ ಒತ್ತಾಯವಾಗಿದೆ. ಆದರೆ, ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಮುಂದುವರಿಯುತ್ತಾರೆಂದು ಅವರ ಆಪ್ತರು ತಿರುಗೇಟು ನೀಡುತ್ತಿದ್ದಾರೆ. ಈ ಗದ್ದಲ ಹೈಕಮಾಂಡ್ ವರೆಗೂ ತಲುಪಿ, ಕೊನೆಗೆ ರಾಜ್ಯ ಉಸ್ತುವಾರಿ ಸುರ್ಜೇವಾಲ ಅವರು ರಾಜ್ಯಕ್ಕೆ ಬಂದು ಪರಿಸ್ಥಿತಿ ಅವಲೋಕಿಸಿದ್ದಾರೆ. ಇದನ್ನೂ ಓದಿ: ಕಾಂಬೋಡಿಯಾ-ಥೈಲ್ಯಾಂಡ್ ಘರ್ಷಣೆ – ಗಡಿ ಪ್ರದೇಶಗಳಿಗೆ ತೆರಳದಂತೆ ಭಾರತೀಯ ಪ್ರಜೆಗಳಿಗೆ ಸಲಹೆ
ಬೆಂಗಳೂರು: ಬಹಿರಂಗ ಹೇಳಿಕೆ ನೀಡುವ ಕಾಂಗ್ರೆಸ್ (Congress) ಶಾಸಕರೇ ಹುಷಾರ್. ಕೈ ಕಟ್ಟಿ ಬಾಯಿ ಮುಚ್ಚಿ. ಇದು ರಾಜ್ಯ ಕಾಂಗ್ರೆಸ್ ನಾಯಕರಿಗೆ ಹೈಕಮಾಂಡ್ ಎಚ್ಚರಿಕೆ. ಹೈಕಮಾಂಡ್ ಆದೇಶದ ಬೆನ್ನಲ್ಲೇ ಕೆಲ ಶಾಸಕರು ಸೈಲೆಂಟ್ ಆಗಿದ್ದು, ಸಿಎಂ, ಡಿಸಿಎಂ ಅಲರ್ಟ್ ಆಗಿದ್ದಾರೆ.
ಭ್ರಷ್ಟಾಚಾರ ಆರೋಪ, ಕಮಿಷನ್ ಕಿತ್ತಾಟ, ಸಚಿವರ ಅಸಹಕಾರದ ಬಗ್ಗೆ ಕಾಂಗ್ರೆಸ್ ಶಾಸಕರ ಅಸಹನೆ ಜೋರಾಗಿತ್ತು. ಇದು ಕಾಂಗ್ರೆಸ್ ಪಕ್ಷಕ್ಕೆ ನುಂಗಲಾರದ ತುತ್ತಾಗಿತ್ತು. ಹಾಗಾಗಿ ಮಂಗಳವಾರ ಡೆಲ್ಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಹಾಗೂ ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರು ಸಿಎಂ ಮೂಲಕ ವಾರ್ನಿಂಗ್ ಕಾಲ್ ರವಾನಿಸಿದ್ದಾರೆ. ಇವತ್ತು ವೇಣುಗೋಪಾಲ್ ಭೇಟಿ ವೇಳೆಯಲ್ಲೂ ಸಿಎಂಗೆ ಸಂದೇಶ ರವಾನೆಯಾಗಿದೆ ಎನ್ನಲಾಗಿದೆ. ಇದನ್ನೂ ಓದಿ: PUBLiC TV Impact | ಅಳಿವಿನಂಚಿನಲ್ಲಿದ್ದ ಸರ್ಕಾರಿ ಶಾಲೆಗೆ `ಪಬ್ಲಿಕ್’ ಪ್ರೋತ್ಸಾಹ – ಸರ್ಕಾರಿ ಶಾಲೆಗೆ ಹೆಚ್ಚಾಯ್ತು ಡಿಮ್ಯಾಂಡ್
ಇದು ಒಳ್ಳೆ ಬೆಳವಣಿಗೆಯಲ್ಲ. ಇದು ಪಕ್ಷದ ಇಮೇಜ್‌ಗೆ ಡ್ಯಾಮೇಜ್, ಸರ್ಕಾರಕ್ಕೂ ಕೆಟ್ಟ ಹೆಸರು. ಮೊದಲು ಬಾಯಿ ಬಂದ್ ಮಾಡಿ ಎಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಈ ನಡುವೆ ಇವತ್ತು ಬಿ.ಆರ್.ಪಾಟೀಲ್ ಕರೆದು ಸಿಎಂ ಎಚ್ಚರಿಕೆ ಕೊಡುವ ಸಾಧ್ಯತೆ ಇದ್ದು, ಜಮೀರ್ ಉಪಸ್ಥಿತಿಯಲ್ಲಿ ಸಮಸ್ಯೆ ಬಗೆಹರಿಸಲು ಪ್ಲ್ಯಾನ್ ಮಾಡಿದ್ದಾರೆ. ಅಲ್ಲದೇ ಜುಲೈ ಮೊದಲ ವಾರದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಕರೆಯಲು ಚಿಂತಿಸಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಇಸ್ರೇಲ್ ಪರ ಬೇಹುಗಾರಿಕೆ – ಮೂವರನ್ನು ಗಲ್ಲಿಗೇರಿಸಿದ ಇರಾನ್
ಬೆಳಗಾವಿ: ಯಾವ ಸಚಿವರಿಗೂ, ಯಾವ ವ್ಯಕ್ತಿಗೂ ನೋಟಿಸ್ ನೀಡುವುದಿಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಸ್ಪಷ್ಟಪಡಿಸಿದ್ದಾರೆ.
ಬೆಳಗಾವಿಯ (Belagavi) ಸಾಂಬ್ರಾ ಏರ್‌ಪೋರ್ಟ್‌ನಲ್ಲಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ಸಚಿವ ಸತೀಶ್ ಜಾರಕಿಹೊಳಿಗೆ ಕಾಂಗ್ರೆಸ್ ಪಕ್ಷದಿಂದ ನೋಟಿಸ್ ವದಂತಿ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದರು. ಯಾರಿಗೂ ನೋಟಿಸ್ ನೀಡಲು ಯಾವುದೇ ಕಾರಣವಿಲ್ಲ. ಬಿಜೆಪಿ ಪ್ರಾಯೋಜಿತ ಆಧಾರ ರಹಿತ ಮಾತುಗಳ ಮೇಲೆ ವಿಶ್ವಾಸವಿಡಬೇಡಿ ಎಂದಿದ್ದಾರೆ.
ಈ ವದಂತಿಗಳನ್ನೆಲ್ಲ ಯಾರು ಹಬ್ಬಿಸುತ್ತಿದ್ದಾರೆ ಎಂದು ನನಗೆ ಗೊತ್ತಿಲ್ಲ. ಇನ್ನೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ವಿಚಾರವಾಗಿ, ಅಧ್ಯಕ್ಷರ ಬದಲಾವಣೆ ಆಗುತ್ತಿದ್ರೆ ಇಲ್ಲೇಕೆ ಬರುತ್ತಿದ್ದರು ಎಂದು ಪ್ರಶ್ನಿಸಿದ್ದಾರೆ.
ಈ ಮೂಲಕ ಕಾಂಗ್ರೆಸ್‌ನಲ್ಲಿ ಪವರ್ ಶೇರಿಂಗ್ ವಿಚಾರ ಸೇರಿದಂತೆ, ಸಿಎಂ ಸೀಟಿನ ಬಗ್ಗೆ ಮಾತಾಡುತ್ತಿದ್ದ ಸಚಿವರಿಗೆ ನೋಟಿಸ್ ನೀಡುವ ವದಂತಿಗೆ ತೆರೆ ಎಳೆದಿದ್ದಾರೆ.
ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಹೇಳಿದರು.
ನಗರದ ಕೆಪಿಸಿಸಿ ಕಚೇರಿ ಭಾರತ್ ಜೋಡೋ ಭವನದಲ್ಲಿ ಪ್ರತಿಕ್ರಿಯಿಸಿದ ಅವರು, ರಾಜ್ಯ ಕಾಂಗ್ರೆಸ್ ಕಿತ್ತಾಟ, ಪವರ್ ಶೇರಿಂಗ್ ವಿಚಾರಕ್ಕೆ ಪ್ರತಿಕ್ರಿಯಿಸಿ, ನೀವು ಒಗ್ಗಟ್ಟಿನ ಸರ್ಕಾರದ ಬಗ್ಗೆ ಪ್ರಶ್ನೆ ಕೇಳುತ್ತಿದ್ದೀರಿ, ನಮ್ಮದು ಒಗ್ಗಟ್ಟಿನ ಸರ್ಕಾರ. ನಮ್ಮಲ್ಲಿ ಒಗ್ಗಟ್ಟಿದೆ, ಏನೇ ಇದ್ದರೂ ಹೈಕಮಾಂಡ್ ಬಿಗ್‌ಬಾಸ್‌ನಿಂದ ಸಂದೇಶ ಬರುತ್ತದೆ. ಇದೆಲ್ಲಾ ಒಂದು ಗುಂಪಿನ ಮಾಧ್ಯಮಗಳ ಸೃಷ್ಟಿಯಷ್ಟೇ. ಕರ್ನಾಟಕ ಸರ್ಕಾರದ ಗ್ಯಾರಂಟಿಗಳು ಜನರಲ್ಲಿ ವಿಶ್ವಾಸ ಮೂಡಿಸಿದೆ. ಆದರೆ ಬಿಜೆಪಿಯಲ್ಲಿ ಎಲ್ಲ ನಾಯಕರು ಭಿನ್ನಾಭಿಪ್ರಾಯ ಹೊಂದಿದ್ದಾರೆ. ಅವರು ತಮ್ಮ ಭಿನ್ನಾಭಿಪ್ರಾಯ ಮುಚ್ಚಿಕೊಳ್ಳಲು ಕಾಂಗ್ರೆಸ್ ಗ್ಯಾರಂಟಿಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ಅವರು ಕಾಂಗ್ರೆಸ್ ಸರ್ಕಾರ, ಸಿದ್ದರಾಮಯ್ಯ, ಡಿಕೆಶಿ ವಿರುದ್ಧ ಅಟ್ಯಾಕ್ ಮಾಡಲು ಆಗ್ತಿಲ್ಲ. ಹಾಗಾಗಿ ಕರ್ನಾಟಕದ ಜನರ ಮೇಲೆ ರಾಜಕೀಯ ದಾಳಿ ಮಾಡ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.ಇದನ್ನೂ ಓದಿ: ಜಮ್ಮು-ಕಾಶ್ಮೀರ | ವರ್ಷಪೂರ್ತಿ ಸಂಪರ್ಕ ಕಲ್ಪಿಸುವ ಝಡ್-ಮೋರ್ಹ್ ಸುರಂಗ ಮಾರ್ಗ ಉದ್ಘಾಟಿಸಿದ ಮೋದಿ
ಇಂದು (ಜ.13) ಸಂಜೆ 6 ಗಂಟೆಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ, ಸಭೆಯಲ್ಲೂ ಹೈಕಮಾಂಡ್ ಅಧಿಕೃತ ಸಂದೇಶ ರವಾನಿಸುವ ಸಾಧ್ಯತೆಯಿದೆ ಎಂದು ಎಲ್ಲ ಬಣಗಳಿಗೂ ಬಿಸಿ ಮುಟ್ಟಿಸಿದರು. ಇವತ್ತಿನ ಸಭೆ ಜೈ ಬಾಪೂ, ಜೈ ಭೀಮ್, ಜೈ ಸಂವಿಧಾನ ಸಮಾವೇಶದ ಸಿದ್ಧತಾ ಸಭೆಯಾಗಲಿದೆ. ಅಮಿತ್ ಷಾ ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದ್ದಾರೆ. ದೇಶದ ಎಸ್‌ಸಿ, ಎಸ್‌ಟಿ, ಒಬಿಸಿ ಜನರಿಗೆ ಅಪಮಾನ ಮಾಡಿದ್ದಾರೆ. ದೇಶದಲ್ಲಿ ಅಮಿತ್ ಷಾ ಅವರ ರಾಜೀನಾಮೆ ಕೇಳ್ತಿದ್ದೇವೆ, ಬೆಳಗಾವಿ ಸಮಾವೇಶದಲ್ಲೂ ಕೇಳುತ್ತಿದ್ದೇವೆ ಎಂದರು.
58 ಸಾವಿರ ಕೋಟಿ ರೂ. ಯೋಜನೆಯ ಲಾಭ ಜನತೆಗೆ ಸಿಗುತ್ತಿದೆ. ಕರ್ನಾಟಕ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳ ದೇಶದ ದೊಡ್ಡ ಯೋಜನೆಗಳು. ಇದರಿಂದ ಬಿಜೆಪಿಗೆ ಹತಾಶೆ ಶುರುವಾಗಿದೆ. ಯತ್ನಾಳ ವಿಜಯೇಂದ್ರ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ, ಅವರಿಗೆ ರಮೇಶ್ ಜಾರಕಿಹೊಳಿ ಸಾಥ್ ನೀಡುತ್ತಿದ್ದಾರೆ. ಬಿಜೆಪಿಯಲ್ಲಿಯೇ ಕಿತ್ತಾಟ ಜೋರಾಗಿ ನಡೆಯುತ್ತಿದೆ. ಜೆಡಿಎಸ್ ಕೂಡ ಬಿಜೆಪಿಗೆ ಬೆಂಬಲ ನೀಡಿ ಕಾಂಗ್ರೆಸ್ ವಿರುದ್ಧ ಆರೋಪ ಮಾಡ್ತಿದೆ. ಅವರ ವೈಪಲ್ಯವನ್ನ ಮುಚ್ಚಿಕೊಳ್ಳಲು ಕಾಂಗ್ರೆಸ್ ಮೇಲೆ ಆರೋಪ ಮಾಡ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.ಇದನ್ನೂ ಓದಿ: ಹಸುವಿನ ಕೆಚ್ಚಲು ಕೊಯ್ದವರಿಗೆ ಕೆರದಲ್ಲಿ ಹೊಡೀಬೇಕು: ನಿರ್ದೇಶಕ ಪ್ರೇಮ್
ಬೆಂಗಳೂರು: ಡಿನ್ನರ್ ಸಭೆ ರದ್ದಾಗಿಲ್ಲ, ಪ್ರಧಾನ ಕಾರ್ಯದರ್ಶಿ ಸುರ್ಜೇವಾಲಾ ಕರೆ ಮೇರೆಗೆ ಮುಂದೂಡಿಕೆಯಾಗಿದೆ ಅಷ್ಟೇ, ಸಭೆಗೆ ಯಾರ ವಿರೋಧವೂ ಇಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G.Parameshwar) ಎಂದು ಹೇಳಿದರು.
ಸದಾಶಿವನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್‌ಸಿ, ಎಸ್‌ಟಿ ಸಮಾವೇಶದ ಕುರಿತು ಚರ್ಚೆ ಮಾಡುವುದನ್ನು ಸಹಿಸುವುದಿಲ್ಲ ಎಂಬುದಾಗಿ ನನಗೆ ಯಾರು ಹೇಳಿಲ್ಲ. ಆ ರೀತಿಯಾಗಿ ಯಾರಾದರೂ ಹೇಳಿದರೆ, ನಾವು ತಲೆ ಕೆಡಿಸಿಕೊಳ್ಳುವುದಿಲ್ಲ. ಒಂದು ವೇಳೆ ಸಭೆ ಮಾಡಿದರೆ ಸಹಿಸುವುದಿಲ್ಲ ಎಂದು ಯಾರಾದರೂ ಹೇಳಿದರೆ ಅದಕ್ಕೆ ಸರಿಯಾಗಿ ಉತ್ತರ ಕೊಡುತ್ತೇವೆ. ಆ ಶಕ್ತಿ ನಮಗಿದೆ. ವಿಧಾನಸಭೆ ಚುನಾವಣೆಗೂ ಮೊದಲು ಚಿತ್ರದುರ್ಗದಲ್ಲಿ ಎಸ್‌ಸಿ, ಎಸ್‌ಟಿ ಸಮಾವೇಶ ಮಾಡಲಾಗಿತ್ತು. ಸರ್ಕಾರ ಅಧಿಕಾರಕ್ಕೆ ಬಂದರೆ ಅನೇಕ ಸಮಸ್ಯೆಗಳನ್ನು ಬಗೆಹರಿಸುವುದಾಗಿ ಹೇಳಿಕೊಂಡಿದ್ದೆವು. ಚಿತ್ರದುರ್ಗ ರೆಸ್ಯುಲ್ಯೂಷನ್ ಅಂತ ಹೆಸರು ಕೊಟ್ಟು ಬೇಡಿಕೆಗಳನ್ನು ಇಟ್ಟಿದ್ದರು. ಅದರಂತೆಯೇ ಸರ್ಕಾರ ಅಧಿಕಾರಕ್ಕೆ ಬಂತು. ಅನೇಕ ಭರವಸೆಗಳನ್ನು ಈಡೇರಿಸುವ ಕೆಲಸಗಳನ್ನು ಸರ್ಕಾರ ಮಾಡಿದೆ ಎಂದು ಹೇಳಿದರು.ಇದನ್ನೂ ಓದಿ: ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿಗೆ ಕುಂಭಮೇಳದ ಆಹ್ವಾನ
ಕೇಂದ್ರ ಸರ್ಕಾರದಿಂದ ಪೋಸ್ಟ್ ಮ್ಯಾಟ್ರಿಕ್ ಸ್ಕಾಲರ್‌ಶಿಪ್ ಬರುತ್ತಿಲ್ಲ. ಕೇಂದ್ರದಿಂದ ಎಸ್‌ಸಿಪಿ ಮತ್ತು ಟಿಎಸ್‌ಪಿ ಅನುದಾನದ ಪಾಲು ಸಹ ರಾಜ್ಯಕ್ಕೆ ಬರುತ್ತಿಲ್ಲ. ಎಲ್ಲವನ್ನು ಚರ್ಚೆ ಮಾಡಬೇಕಿದೆ. ಒಗ್ಗಟ್ಟಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸಭೆ ಸೇರಲು ತೀರ್ಮಾನಿಸಲಾಗಿತ್ತು. ಈ ವಿಚಾರವನ್ನು ದೆಹಲಿ ನಾಯಕರ ಗಮನಕ್ಕೆ ತಂದಿರಲಿಲ್ಲ. ನಮ್ಮದೆ ಆಂತರಿಕ ವಿಚಾರ ಆಗಿರುವುದರಿಂದ ಹೇಳುವ ಅವಶ್ಯಕತೆ ಇಲ್ಲ ಎಂಬ ಕಾರಣದಿಂದ ಹೇಳಿರಲಿಲ್ಲ. ಪಕ್ಷದ ವಿಚಾರಗಳು ಹಾಗೂ ಸರ್ಕಾರದ ತೀರ್ಮಾನಗಳು ನಡೆದಾಗ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ ಅವರ ಗಮನಕ್ಕೆ ಹೋಗುತ್ತದೆ. ಅವರು ನನಗೆ ಕರೆ ಮಾಡಿ ಸಮಾವೇಶದಲ್ಲಿ ನಾನು ಭಾಗವಹಿಸಬೇಕು ಎಂದು ತಿಳಿಸಿದರು. ರಾಜಕೀಯ ಪ್ರೇರಿತ ಅಥವಾ ರಾಜಕೀಯಕ್ಕಾಗಿ ಮಾಡುತ್ತಿರುವ ಸಮಾವೇಶ ಅಲ್ಲ. ನೀವು ಭಾಗವಹಿಸುವಂತೆ ಆಹ್ವಾನಿಸಿದೆ. ಈಗ ಆಗುವುದಿಲ್ಲ. ಮುಂದೆ ಸಮಯ ನೀಡುತ್ತೇನೆ. ಆಗ ಸಮಾವೇಶ ಮಾಡಿ ಭಾಗವಹಿಸುತ್ತೇನೆ ಎಂದು ತಿಳಿಸಿದರು. ಪ್ರಧಾನ ಕಾರ್ಯದರ್ಶಿಗಳು ಹೇಳಿದ್ದರಿಂದ ಮುಂದೂಡಿದ್ದೇವೆ. ಸಮಾವೇಶ ಏರ್ಪಡಿಸುತ್ತಿರುವುದರನ್ನು ರದ್ದು ಮಾಡಿಲ್ಲ. ಅವರ ಸಮಯ ತೆಗೆದುಕೊಂಡು ಚರ್ಚೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.
ಡಿನ್ನರ್ ಬಗ್ಗೆ ಏನೇನೋ ವ್ಯಾಖ್ಯಾನ ಮಾಡಲಾಗುತ್ತಿದೆ. ಡಿನ್ನರ್ ಅಂದರೆ ಊಟ. 7 ಗಂಟೆಗೆ ಸಭೆಗೆ ಕರೆಯಲಾಗಿತ್ತು. ಎರಡು ಅಥವಾ ಮೂರು ತಾಸು ಚರ್ಚೆ ಆಗಬಹುದು. ಊಟದ ಸಮಯ ಆಗುವುದರಿಂದ, ನಿಮ್ಮ ಮನೆಗೆ ಹೋಗಿ ಊಟ ಮಾಡಿಕೊಂಡು ಬಿಡಿ ಅಂತ ಹೇಳುವುದರ ಬದಲು, ಊಟಕ್ಕೆ ಏರ್ಪಾಟು ಮಾಡಲಾಗಿತ್ತು ಎಂದರು.
ಈ ಹಿಂದೆ ನಡೆದ ಚಿತ್ರದುರ್ಗ ಸಭೆಯಲ್ಲಿ ಹೈಕಮಾಂಡ್ ಭಾಗವಹಿಸಿತ್ತು. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ದರ್ಶಿಗಳು ಭಾಗವಹಿಸಿದ್ದರು. ಸಮಾವೇಶ ನಡೆಸಲು ಹೈಕಮಾಂಡ್ ವಿರೋಧ ವ್ಯಕ್ತಪಡಿಸಿಲ್ಲ. ವಿರೋಧ ಮಾಡಿದ್ದರೆ ನಿಲ್ಲಿಸಿ ಎಂದು ಹೇಳುತ್ತಿದ್ದರು. ಆ ರೀತಿ ಬೆಳವಣಿಗೆ ಏನೂ ಆಗಿಲ್ಲ. ಸಭೆ ಬೇರೆ ರೀತಿಯ ಆಯಾಮ ಪಡೆದುಕೊಳ್ಳುತ್ತದೆ ಎಂದು ಹೈಕಮಾಂಡ್‌ಗೆ ದೂರು ನೀಡಿರುವ ಬಗ್ಗೆ ನನಗೆ ಗೊತ್ತಿಲ್ಲ. ಸುರ್ಜೇವಾಲಾ ಅವರು ಕರೆ ಮಾಡಿ ಕೇಳಿದಾಗ ರಾಜಕೀಯ ಲೇಪನ ಇಲ್ಲ ಎಂಬುದನ್ನು ಹೇಳಿದ್ದೇನೆ ಎಂದರು.
ಪೂರ್ವಭಾವಿ ಸಭೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಆಹ್ವಾನಿಸಬೇಕು ಎನ್ನುವುದರ ಬಗ್ಗೆಯೂ ಚರ್ಚಿಸಲಾಗಿತ್ತು. ಇದರಲ್ಲಿ ಮುಚ್ಚಿಡುವಂತದ್ದು ಏನು ಇಲ್ಲ. ಮುಚ್ಚಿಟ್ಟುಕೊಂಡು ರಾಜಕಾರಣ ಮಾಡುವಂತದ್ದು ಏನಿದೆ. ಯಾವ ವಿಷಯದ ಬಗ್ಗೆ ಚರ್ಚೆ ಮಾಡಬೇಕು, ಬಹಿರಂಗವಾಗಿ ಚರ್ಚೆ ಮಾಡುತ್ತೇವೆ. ಅದನ್ನು ಯಾರಿಗೂ ಗೊತ್ತಾಗದಂತೆ ನಾಲ್ಕು ಗೋಡೆ ಮಧ್ಯೆ ಚರ್ಚಿಸುವಂತ ಅನಿವಾರ್ಯತೆ ಇಲ್ಲ. ಅನೇಕ ಜ್ವಲಂತ ಸಮಸ್ಯೆಗಳಿವೆ. ದಲಿತ ಸಮುದಾಯಕ್ಕೆ ಆಗುತ್ತಿರುವ ತೊಂದರೆಗಳ ಬಗ್ಗೆ ಚರ್ಚೆ ಮಾಡಬೇಕಲ್ಲವೇ? ಅಟ್ರಾಸಿಟಿ ಕೇಸ್ ದಾಖಲಾಗುತ್ತಿವೆ. ಸಮಾವೇಶದಲ್ಲಿ ಹೈಕಮಾಂಡ್‌ನವರು ಭಾಗವಹಿಸುತ್ತೇವೆ ಎಂದಾಗ ಒಳ್ಳೆಯದಲ್ಲವೇ. ಹೈಕಮಾಂಡ್ ಪ್ರತಿನಿಧಿಗಳು ಸಮಾವೇಶದಲ್ಲಿದ್ದಾಗ ಅನೇಕ ತೀರ್ಮಾನಗಳು ಅಲ್ಲೇ ಆಗುತ್ತವೆ ಎಂದರು.
ಸಮಾವೇಶ ನಡೆಯದಿರಲು ಹೈಕಮಾಂಡ್ ಸಮಾಜಾಯಿಷಿ ನೀಡುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದನ್ನು ಮುಂದಿನ ದಿನಗಳಲ್ಲಿ ನೋಡೋಣ. ಸ್ವಲ್ಪ ದಿನ ಮುಂದಕ್ಕೆ ಹಾಕುವುದಾಗಿ ತಿಳಿಸಿದ್ದೇವೆ. ಮತ್ತೆ ಏರ್ಪಡಿಸುತ್ತೇವೆ ಆಗ ಗೊತ್ತಾಗುತ್ತದೆ ಎಂದರು.
ನಕ್ಸಲರ ಶರಣಾಗತಿಯ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಕ್ಸಲರು ಶರಣಾಗುತ್ತಿದ್ದಾರೆ ಎಂಬುದನ್ನು ಮಾತ್ರ ಹೇಳಬಲ್ಲೆ. ವಿಕ್ರಂಗೌಡ ಸಾವು ಆದಾಗ, ಶರಣಾಗುವಂತೆ ನಕ್ಸಲರಿಗೆ ಕರೆ ಕೊಡಲಾಗಿತ್ತು. ಜೀವನದಲ್ಲಿ ಯಾಕೆ ಈ ದಾರಿ ಹಿಡಿದಿದ್ದೀರಿ. ಸಮಾಜದ ಮುನ್ನೆಲೆಗೆ ಬನ್ನಿ ಎಂದು ಆಹ್ವಾನ ನೀಡಿದ್ದೆ. ಅದೇ ರೀತಿಯಾಗಿ ಎಎನ್‌ಎಫ್ ಹಿರಿಯ ಅಧಿಕಾರಿಗಳು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಕರೆ ಕೊಟ್ಟಿದ್ದರು. ಅನೇಕ ಪ್ರಕರಣಗಳಿರುವುದು ನಿಜ. ಶರಣಾದ ನಂತರ ಯಾವ ರೀತಿ ಚರ್ಚೆ ಮಾಡಬೇಕು, ಕಾನೂನಿನಲ್ಲಿ ಏನು ಅವಕಾಶವಿದೆ ಎಂಬುದನ್ನು ನೋಡುತ್ತೇವೆ ಎಂದು ಹೇಳಿದರು.ಇದನ್ನೂ ಓದಿ: ಸರೆಂಡರ್ ಆಗುವವರಿಗೆ ಕೊಡೋ ಪರಿಹಾರ ನಮಗೂ ಕೊಡಿ – ನಕ್ಸಲ್ ವಿಕ್ರಂ ಗೌಡ ಸಹೋದರಿ ಮನವಿ
ಬೆಂಗಳೂರು: ಲೋಕಸಭೆ ಚುನಾವಣೆಗೆ (Lok Sabha Election) ಸಚಿವರ ಸ್ಪರ್ಧೆ ಬಗ್ಗೆ ಸೂಚನೆ ಇನ್ನೂ ಬಂದಿಲ್ಲ. ಲೋಕಸಭಾ ಚುನಾವಣೆಗೆ ಪಕ್ಷದಲ್ಲಿ ಸಿದ್ಧತೆ ನಡೆಯುತ್ತಿದ್ದು, ಈ ಹಿನ್ನೆಲೆಯಲ್ಲಿ ರಣದೀಪ್ ಸಿಂಗ್ ಸುರ್ಜೇವಾಲ (Randeep Singh Surjewala) ಅವರು ರಾಜ್ಯಕ್ಕೆ ಆಗಮಿಸುವ ಸಾಧ್ಯತೆ ಇದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ (G Parameshwar) ಹೇಳಿದ್ದಾರೆ.
ಸದಾಶಿವನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣಾ ದೃಷ್ಟಿಯಿಂದ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿ, ಎಲ್ಲಾ ಜಿಲ್ಲೆಗಳ ಅಧ್ಯಕ್ಷರು ಹಾಗೂ ಪ್ರಮುಖ ನಾಯಕರ ಜೊತೆ ಸುರ್ಜೇವಾಲ ಅವರು ಚರ್ಚೆ ನಡೆಸುವ ಸಾಧ್ಯತೆ ಇದೆ. ಲೋಕಸಭೆ ಚುನಾವಣೆಯಲ್ಲಿ ಹೆಚ್ಚು ಸೀಟು ಗೆಲ್ಲಬೇಕು. ರಾಜ್ಯದ ಎಲ್ಲಾ ನಾಯಕರ ಮೇಲೆ ಜವಾಬ್ದಾರಿ ಹೆಚ್ಚಿದೆ. ಕಳೆದ ಚುನಾವಣೆಗಿಂತ ಈ ಬಾರಿ ನಮ್ಮ ಪಕ್ಷ ಉತ್ತಮ ಸ್ಥಿತಿಯಲ್ಲಿದೆ. ಬಡ ಜನರ ಹಾಗೂ ಮಹಿಳೆಯರ ಆರ್ಥಿಕ ಮಟ್ಟ ಹೆಚ್ಚಿಸುವ ಉದ್ದೇಶದಿಂದ ನಮ್ಮ ಸರ್ಕಾರ ಅನುಷ್ಠಾನಗೊಳಿಸಿದ ಗ್ಯಾರಂಟಿ ಯೋಜನೆಗಳು ಹೆಚ್ಚು ಇಂಪ್ಯಾಕ್ಟ್ ಆಗಲಿದೆ. ಲೋಕಸಭಾ ಚುನಾವಣೆಯಲ್ಲಿ ಸಚಿವರು ಸ್ಪರ್ಧಿಸುವ ಬಗ್ಗೆ ಈವರೆಗೂ ಚರ್ಚೆಯಾಗಿಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರಕ್ಕೆ ನನ್ನ ಹೆಸರು ಕೇಳಿಬಂದಿತ್ತು. ಈ ಸಲ ಕೋಲಾರ ಕ್ಷೇತ್ರಕ್ಕೆ ಕೇಳಿಬರುತ್ತಿದೆ. ಆದರೆ, ಈ ಬಗ್ಗೆ ಎಲ್ಲಿಯೂ ಚರ್ಚೆ ನಡೆದಿಲ್ಲ. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸಲು ಹಿಂದೇಟು ಹಾಕುವ ಪ್ರಶ್ನೆ ಉದ್ಭವಿಸುವುದಿಲ್ಲ. ಸಚಿವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸುವ ಕುರಿತು ಕೆಪಿಸಿಸಿ ಅಧ್ಯಕ್ಷರು ಹೇಳಿದರೆ ಅಧಿಕೃತ ಎಂದರು. ಇದನ್ನೂ ಓದಿ: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತೇನೆ: ಹಿ. ಪ್ರದೇಶದ ಕೈ ಸಚಿವ
ಹೆಚ್.ಡಿ.ಕುಮಾರಸ್ವಾಮಿ ಅವರು ದೊಡ್ಡವರು. ಅವರು ಸರ್ಕಾರದ ಅಭಿವೃದ್ಧಿ, ಜವಾಬ್ದಾರಿ ಕುರಿತು ಹೇಳಿಕೆ ನೀಡಿದರೆ ಪ್ರತಿಕ್ರಿಯಿಸಬಹುದು. ಅವರು ಬಳಸುವ ಅನಗತ್ಯ ಪದಗಳ ಬಗ್ಗೆ ಹೇಗೆ ಪ್ರ‍್ರತಿಕ್ರಿಯಿಸಬೇಕು. ನಾನು ಅವರೊಂದಿಗೆ 14 ತಿಂಗಳು ಕೆಲಸ ಮಾಡಿದ್ದೇನೆ. ಈ ರೀತಿ ಏಕೆ ಮಾತನಾಡುತ್ತಿದ್ದಾರೋ ನನಗೆ ಗೊತ್ತಿಲ್ಲ. ಅವರ ರೀತಿ ನನಗೆ ಮಾತನಾಡಲು ಬರುವುದಿಲ್ಲ. ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಗೊಳಿಸಿರುವುದರಿಂದ ಸರ್ಕಾರಕ್ಕೆ ಕಷ್ಟವಾಗಿಲ್ಲ. ಅನುದಾನ ಹೊಂದಿಕೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ 1.50 ಲಕ್ಷ ಕೋಟಿ ರೂ. ಬರಬೇಕು. ಈವರೆಗೂ ಬಂದಿಲ್ಲ. ಕೇಂದ್ರದಿಂದ ಅನುದಾನ ಬಂದಿದ್ದರೆ ಮತ್ತಷ್ಟು ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚು ಅನುಕೂಲವಾಗುತ್ತಿತ್ತು ಎಂದು ಹೇಳಿದರು. ಇದನ್ನೂ ಓದಿ: ದೇಶಕ್ಕೆ ಕ್ಯಾ. ಅಬ್ದುಲ್ ಹಮೀದ್ ಅವರಂಥವರು ಬೇಕು, ಜಿನ್ನಾ ಅಲ್ಲ: ನಿತ್ಯಾನಂದ್ ರೈ
ನಾರಾಯಣಗೌಡ ಅವರು ಬಿಡುಗಡೆ ನಂತರ ಮತ್ತೆ ಪ್ರತಿಭಟನೆ ನಡೆಸುತ್ತಾರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪ್ರತಿಭಟನೆ ನಡೆಸುವುದು ಹಕ್ಕು. ಕಾನೂನಿಗೆ ವಿರುದ್ಧವಾಗಿ ನಡೆದುಕೊಳ್ಳುವುದು, ಸಾರ್ವಜನಿಕ ಆಸ್ತಿ ಹಾನಿ ಮಾಡುವುದು ತಪ್ಪು. ಕಾನೂನು ಕೈಗೆತ್ತಿಗೊಳ್ಳದೆ ಶಾಂತಿಯುವಾಗಿ ಪ್ರತಿಭಟನೆ ನಡೆಸಲಿ ಎಂದು ಹೇಳಿದರು. ಇದನ್ನೂ ಓದಿ: ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಮಹತ್ವದ ಸಭೆ- ಕಾಂಗ್ರೆಸ್ ವೈಫಲ್ಯಗಳೇ ಕಮಲಕ್ಕೆ ಅಸ್ತ್ರ
ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ನಾನು ಸಹ ದೇಣಿಗೆ ಕೊಟ್ಟಿದ್ದೇನೆ. ಇದು ನನ್ನ ವೈಯಕ್ತಿಕ ವಿಚಾರ. ಎಷ್ಟು ದೇಣಿಗೆ ನೀಡಿದ್ದೇನೆ ಎಂದು ಹೇಳಿಕೊಳ್ಳಬಾರದು. ಅಯೋದ್ಯೆ ಪೂಜೆಯಲ್ಲಿ ಭಾಗಿಯಾಗುವ ಬಗ್ಗೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳಲಿದೆ. ಪ್ರತ್ಯೇಕ ದಿನ ಹೋಗಿ ಪೂಜೆ ಸಲ್ಲಿಸುವ ಬಗ್ಗೆ ಹೈಕಮಾಂಡ್ ನಿರ್ಧರಿಸಿದರೆ ಅದಕ್ಕು ಸಿದ್ಧ. ವಿಶೇಷ ಪೂಜೆ ಸಲ್ಲಿಸುತ್ತೇವೆ. ನಾವು ಹಿಂದುಗಳಲ್ವಾ? ನಮ್ಮ ಪಕ್ಷದಲ್ಲಿಯೂ ಹಿಂದುಗಳಿಲ್ಲವೇ? ಅದರಲ್ಲೇನು ತಪ್ಪಿದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ಮುಚ್ಚಿಹೋಗಿದ್ದ ರಾಮಮಂದಿರದ ಗರ್ಭಗುಡಿ ತೆರೆಸಿದ್ದು ರಾಜೀವ್ ಗಾಂಧಿ: ಡಾ.ಎಂ.ಸಿ ಸುಧಾಕರ್
-ಕಾಂಗ್ರೆಸ್ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು -ಹೆಚ್ಡಿಕೆ ತೀಕ್ಷ್ಣ ವಾಗ್ದಾಳಿ
ಬೆಂಗಳೂರು: ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಸಭೆಯಲ್ಲಿ ಕಾಂಗ್ರೆಸ್ (Congress) ಉಸ್ತುವಾರಿ ರಣದೀಪ್ ಸುರ್ಜೇವಾಲ (Randeep Surjewala) ಪಾಲ್ಗೊಂಡ ವಿಚಾರವಾಗಿ ಬಿಜೆಪಿ (BJP) ರಾಜಭವನದ ಕದ ತಟ್ಟಿದೆ.
ಈ ವಿವಾದ ಸೃಷ್ಟಿಯಾಗುತ್ತಿದ್ದಂತೆ ಕೈ ನಾಯಕರು ಒಬ್ಬೊಬ್ಬರು ಒಂದೊಂದು ಸ್ಪಷ್ಟನೆ ಕೊಡುತ್ತಿದ್ದಾರೆ. ವಿಪಕ್ಷಗಳು ಈ ವಿಚಾರವಾಗಿ ಕಾಂಗ್ರೆಸ್ ವಿರುದ್ಧ ಸಿಡಿದೆದ್ದಿದ್ದಾರೆ. ಅಲ್ಲದೇ ಸಾರ್ವಜನಿಕವಾಗಿಯೂ ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಬಿಟ್ ಕಾಯಿನ್ ಹಗರಣ ತನಿಖೆ ಪುನಾರಂಭ ಮಾಡ್ತೀವಿ: ಜಿ.ಪರಮೇಶ್ವರ್
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಒಂದೇ ತಿಂಗಳಲ್ಲಿ ಗಂಭೀರ ವಿವಾದವೊಂದನ್ನು ಈ ಮೂಲಕ ಮೈಮೇಲೆ ಎಳೆದುಕೊಂಡಿದೆ. ಮಂಗಳವಾರ ಸುರ್ಜೇವಾಲಾ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡಿದ್ದರು. ಈ ವಿಚಾರ ಬಿಜೆಪಿ, ಜೆಡಿಎಸ್‍ಗೆ ಈಗ ಭರ್ಜರಿ ಆಹಾರವಾಗಿದೆ. ಸರ್ಕಾರದ ಸಭೆಯಲ್ಲಿ ಸುರ್ಜೇವಾಲ ಭಾಗವಹಿಸಿರುವುದೇಕೆ? ಇದು ಹೈಕಮಾಂಡ್ ಹಂಗಿನ ಸರ್ಕಾರವೇ ಎಂದು ಕಾಂಗ್ರೆಸ್‍ನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ರಾಜ್ಯ ಸರ್ಕಾರಕ್ಕಾಗಲಿ, ಬಿಬಿಎಂಪಿಗಾಗಲಿ ಯಾವುದೇ ರೀತಿಯ ಅಧಿಕೃತ ಸಂಬಂಧವಿರದ ಸುರ್ಜೇವಾಲ ಅವರಿಗೆ ಬಿಬಿಎಂಪಿ (BBMP) ಉನ್ನತ ಅಧಿಕಾರಿಗಳೊಂದಿಗೆ ಏನು ಕೆಲಸ ಎಂದು ವಿಪಕ್ಷಗಳು ಹರಿಹಾಯ್ದಿವೆ.
ಈ ಬಗ್ಗೆ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ (H.D.Kumaraswamy), ರಾಜ್ಯ ಸರ್ಕಾರ ಹೈಕಮಾಂಡ್ ಹಂಗಿನ ಸರ್ಕಾರವಾಗಿದೆ. ರಾಜ್ಯ ಸರ್ಕಾರಕ್ಕೆ ಸಂಬಂಧವಿಲ್ಲದ ದೆಹಲಿಯ ಪ್ರತಿನಿಧಿ ಅಧಿಕಾರಗಳ ಜೊತೆ ಸಭೆ ಮಾಡಿದ್ದಾರೆ. ಇದನ್ನ ನೋಡಿದರೆ ಉಪಮುಖ್ಯಮಂತ್ರಿಗಳು ಎಷ್ಟು ಸುಳ್ಳು ಹೇಳಿದ್ದಾರೆ ಎಂದು ಗೊತ್ತಾಗುತ್ತದೆ. ನಾಡಿನ ಜನತೆಯ ಮುಂದೆ ಅವರ ನಾಟಕೀಯವಾದ ಮಾತುಗಳಿಗೆ ಇದು ಒಂದು ಸಾಕ್ಷಿಯಾಗಿದೆ. ಎಷ್ಟು ದಿನ ಈ ರೀತಿಯ ಸುಳ್ಳುಗಳನ್ನು ಹೇಳಿಕೊಂಡು ಬದುಕುತ್ತೀರಾ ಎಂದು ಆಕ್ರೋಶ ಹೊರಹಾಕಿದ್ದಾರೆ.
ನಮ್ಮ ರಾಜ್ಯದ ಜನರ ಮತವನ್ನು ನಿಮ್ಮ ದೆಹಲಿ ಹೈಕಮಾಂಡ್‍ಗೆ ಗುಲಾಮರಾಗಿ ಇಟ್ಟುಕೊಂಡಿದ್ದೀರಾ? ಅಧಿಕಾರಿಗಳಿಗೆ, ಮಂತ್ರಿಗಳಿಗೆ ಸುರ್ಜೇವಾಲ ಏನು ಸೂಚನೆ ಕೊಟ್ಟಿದ್ದಾರೆ ಎಂಬುದು ಗೊತ್ತಿದೆ. ಜನ ಮತ ಹಾಕಿರುವುದು ನಿಮಗೋ ಅಥವಾ ಕಾಂಗ್ರೆಸ್ ಹೈಕಮಾಂಡ್‍ಗೋ? ಸರ್ಕಾರದ ತಿರ್ಮಾನಗಳನ್ನ ಯಾರೋ ಬೀದಿಯಲ್ಲಿ ಹೋಗುವವರ ಜೊತೆ ಮೀಟಿಂಗ್ ಮಾಡುವುದನ್ನ ನೋಡಿದರೆ ರಾಜ್ಯ ಎಂತಹ ದುರ್ಗತಿಗೆ ಬಂದಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ.
ಈ ಬಗ್ಗೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿ, ಕಾಂಗ್ರೆಸ್ ಪಕ್ಷದಿಂದ ಅಧಿಕಾರ ದುರ್ಬಳಕೆ ಆಗಿದೆ. ನಾವು ಈ ಸಂಬಂಧ ರಾಜ್ಯಪಾಲರಿಗೆ ದೂರು ನೀಡಿದ್ದೇವೆ. ರಾಜ್ಯಪಾಲರು ಕಾಂಗ್ರೆಸ್ ಕಿವಿ ಹಿಂಡುವ ಕೆಲಸ ಮಾಡಬೇಕು. ಖಾಸಗಿ ಹೋಟೆಲ್‍ನಲ್ಲಿ ಬಿಬಿಎಂಪಿ ಅಧಿಕಾರಿಗಳ ಜೊತೆ ಸುರ್ಜೇವಾಲ ಅವರ ಸಭೆ ಉದ್ದೇಶ ಏನೆಂಬುದು ಗೊತ್ತಿಲ್ಲ. ಸರ್ಕಾರದ ಸಭೆಯಲ್ಲಿ ಪಕ್ಷದ ಪದಾಧಿಕಾರಿಗಳು ಸಭೆಯಲ್ಲಿ ಭಾಗವಹಿಸಬಾರದು. ಇದರಲ್ಲಿ ಕಾನೂನು ಉಲ್ಲಂಘನೆಯಾಗಿದೆ. ಕಾಂಗ್ರೆಸ್‍ಗೆ ಕಾನೂನು ಉಲ್ಲಂಘನೆ ಮಾಡುವುದೇ ಕೆಲಸ. ಈ ಬಗ್ಗೆ ಕ್ರಮ ಆಗಬೇಕು ಅಂತ ಒತ್ತಾಯಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ನಡೆದಿರುವುದು ಅಧಿಕೃತ ಸಭೆಯಲ್ಲ. ಬೆಂಗಳೂರು ನಗರಕ್ಕೆ ಸಂಬಂಧಿಸಿದಂತೆ ಕರೆದಿದ್ದ ಸಭೆಯಲ್ಲಿ ಬಿಬಿಎಂಪಿ ಚುನಾವಣೆ ಬಗ್ಗೆಯೂ ಮಾತನಾಡಿದ್ದಾರೆ. ಹೆಬ್ಬಾಳ ಫ್ಲೈಓವರ್ ನೋಡಲು ಹೊರಟಿದ್ದ ವೇಳೆ ಅಲ್ಲಿಗೆ ಬಂದಿದ್ದರು. ಈ ವೇಳೆ ಉಪಮುಖ್ಯಮಂತ್ರಿಗಳು ಶಾಸಕರನ್ನು ಭೇಟಿ ಮಾಡಿದ್ದು, ಕಾನೂನು ಅಭಿಪ್ರಾಯ ಪಡೆಯಲು ನಡೆದ ಸಭೆಯಲ್ಲಿ ಪಾಲ್ಗೊಂಡಿದ್ದರು. ಕುಮಾರಸ್ವಾಮಿಯವರು ಸುಮ್ಮನೆ ಆರೋಪ ಮಾಡುತ್ತಾರೆ ಎಂದು ಕುಟುಕಿದ್ದಾರೆ.
ದಾವಣಗೆರೆ: ರಾಜ್ಯ ಬಿಜೆಪಿ (BJP) ನಾಯಕರು ಮಠದ ಅನುದಾನದಲ್ಲಿ, ಗುತ್ತಿಗೆದಾರರ ಬಳಿ ಸೇರಿದಂತೆ ಎಲ್ಲದರಲ್ಲೂ 40% ಕಮಿಷನ್ ಹೊಡೆಯುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಇವರು ಸಿಎಂ ಸ್ಥಾನವನ್ನು ಮಾರಾಟ ಮಾಡ್ತಾರೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ (Randeep Singh Surjewala) ವಾಗ್ದಾಳಿ ನಡೆಸಿದರು.
ದಾವಣಗೆರೆಯ (Davanagere) ಎಂಬಿಎ ಕಾಲೇಜಿನ ಆವರಣದಲ್ಲಿ ನಡೆದ ಆಕಾಂಕ್ಷಿಗಳ ಸಭೆಯಲ್ಲಿ ಮಾತನಾಡಿದ ಅವರು, 40% ಸರ್ಕಾರ ಎಂದರೆ ಅದು ರಾಜ್ಯ ಬಿಜೆಪಿ ಸರ್ಕಾರ. ಚಿಕ್ಕ ಮಗುವಿಗೂ ಸಿಎಂ ಬೊಮ್ಮಾಯಿಯವರು (Basavaraj Bommai) ಯಾರೆಂದು ಕೇಳಿದ್ರೇ 40% ಸಿಎಂ, ಪೇ ಸಿಎಂ ಎಂದು ಹೇಳ್ತಾರೆ. ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ 40% ಕಮಿಷನ್ ಬಗ್ಗೆ ಪತ್ರ ಬರೆದ 6 ತಿಂಗಳ ಕಳೆದ್ರು, ಮೋದಿಯಿಂದ ಯಾವುದೇ ಉತ್ತರ ಬಂದಿಲ್ಲ ಎಂದು ಕಿಡಿಕಾರಿದರು.
ಗುತ್ತಿಗೆದಾರ ಸಂತೋಷ್ ಪಾಟೀಲ್ ಕುಟುಂಬಕ್ಕೆ ಸಾಂತ್ವನ ಹೇಳುವ ಕೆಲಸ ಮೋದಿ ಮಾಡಲಿಲ್ಲ. ಸಂತೋಷ್ ಪಾಟೀಲ್ ಅವರದ್ದೇ ಪಕ್ಷದವರಾಗಿದ್ದರೂ, ಅವರು ಆತ್ಮಹತ್ಯೆ ಮಾಡಿಕೊಂಡಾಗ ಯಾರೊಬ್ಬ ಬಿಜೆಪಿ ಮುಖಂಡನು ಅವರ ಮನೆಗೆ ಹೋಗಲಿಲ್ಲ. ಆದರೆ ಸಿದ್ದರಾಮಯ್ಯ, ಡಿಕೆಶಿ ನಾನು ಹೋಗಿ ಸಾಂತ್ವನ ಹೇಳಿದ್ದೇವೆ ಎಂದರು.
ಸಿಎಂ ಬಸವರಾಜ ಬೊಮ್ಮಾಯಿ, ಕಟೀಲ್, ನಡ್ಡಾ ಅವರಿಗೆ ಹಣದ ವ್ಯಾಮೋಹ ಹೆಚ್ಚಿದೆ. ಎಷ್ಟು ಹಣ ಬೇಕು ಹೇಳಿ ಆ ಹಣವನ್ನು ನಾವು ನಿಮಗೆ ಕೊಟ್ಟು ನಿಮ್ಮ ವ್ಯಾಮೋಹವನ್ನು ಪೂರ್ಣಗೊಳಿಸುವೆವು, ಬದಲಾಗಿ ನೀವು ಸಂತೋಷ್ ಪಾಟೀಲ್, ಪ್ರಸಾದ್ ಅವರನ್ನು ಅವರ ಕುಟುಂಬಸ್ಥರಿಗೆ ಕೊಡ್ತಿರಾ ಎಂದು ಪ್ರಶ್ನಿಸಿದರು.
ಸಾಕಷ್ಟು ಬಾರಿ ಪಿಎಂ ಮೋದಿಯವರು ಕರ್ನಾಟಕಕ್ಕೆ ಬಂದ್ರು ಭ್ರಷ್ಟಾಚಾರದ ಬಗ್ಗೆ ತುಟಿಬಿಚ್ಚಿಲ್ಲ, ದಿಂಗಲೇಶ್ವರ ಶ್ರೀಯವರು ಕೂಡ ಕಮಿಷನ್ ಬಗ್ಗೆ ಆರೋಪ ಮಾಡಿದರು. ಶಾಸಕ ಮಾಡಾಳ್ ಮಗನ ಕಚೇರಿಯಲ್ಲಿ 40 ಲಕ್ಷ ಹಣ ಪಡೆಯುವುದು ಜಗತ್ ಜಾಹಿರ್ ಆಗಿದೆ. ಮೈಸೂರು ಸ್ಯಾಂಡಲ್‌ನಲ್ಲಿ ಅಲ್ಪಸ್ವಲ್ಪ ಸುವಾಸನೆ ಇತ್ತು. ಅದನ್ನು ಈ ಬಿಜೆಪಿಯರು ಕಮಿಷನ್ ಪಡೆದು ಹೊಗಲಾಡಿಸಿದರು ಎಂದು ಗುಡುಗಿದರು. ಇದನ್ನೂ ಓದಿ: ಮಂಗಳೂರು ಕುಕ್ಕರ್ ಸ್ಫೋಟ ಕೇಸ್ – ಎರಡೂವರೆ ತಿಂಗಳ ಬಳಿಕ ಶಾರೀಕ್ ಡಿಸ್ಚಾರ್ಜ್
ಇದೇ ಜಿಲ್ಲೆಯ ಶಾಸಕ ಮಾಡಾಳ್ ವಿರೂಪಾಕ್ಷಪ್ಪನವರ ಮನೆಯಲ್ಲಿ ಕೋಟಿ ಕೋಟಿ ಹಣ ಸಿಕ್ಕಿದೆ. ಎಂಟಿಬಿ ನಾಗರಾಜ್ ಹೇಳ್ತಾರೆ ವರ್ಗಾವಣೆಗೆ ಲಕ್ಷಾಂತರ ಹಣ ಕೊಡ್ಬೇಕು ಎಂದು ಹೇಳಿದ್ದಾರೆ. ಪಿಎಸ್ಐ ಸ್ಕ್ಯಾಮ್‌ನಲ್ಲಿ ಎಡಿಜಿಪಿ ಜೈಲಿಗೆ ಕಳಿಸಲಾಗಿದೆ. ಇದು ನಡೆದಿದ್ದು, ಬಸವರಾಜ ಬೊಮ್ಮಾಯಿ, ಯಡಿಯೂರಪ್ಪ ಸಿಎಂ ಆಗಿದ್ದಾಗ, ಅವರು ಕೂಡ ಇದರಲ್ಲಿ ಭಾಗಿಯಗಿಲ್ವಾ? ಇಂಜಿನಿಯರ್, ಪ್ರೊಫೆಸರ್ ಪೋಸ್ಟ್‌ಗಳು ಇವರು ಮಾರಾಟ ಮಾಡ್ತಿದ್ದು, ಮುಂದಿನ ದಿನಗಳಲ್ಲಿ ಇವರು ಪೌರ ಕಾರ್ಮಿಕ ಪೋಸ್ಟ್ ಕೂಡ ಮಾರಾಟ ಮಾಡ್ತಾರೆ. ನೀವು ರಾಜ್ಯ ಉಳಿಸಿ ಇಲ್ಲವದಾಲ್ಲಿ ಬಿಜೆಪಿಯವರು ಕರ್ನಾಟಕ ವನ್ನು ಮಾರಾಟ ಮಾಡ್ತಾರೆ ಹುಷಾರ್ ಎಂದು ಎಚ್ಚರಿಕೆ ನೀಡಿದರು. ಇದನ್ನೂ ಓದಿ: ಈ ಬಾರಿ ಕಿಚಡಿ ಸರ್ಕಾರ ಬರಲ್ಲ, ಬಿಜೆಪಿ ಬಹುಮತದಿಂದ ಅಧಿಕಾರಕ್ಕೆ ಬರಲಿದೆ: ಸುಧಾಕರ್