Tag: ರಜನಿ

  • ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ

    ತದ್ವಿರುದ್ಧ ಮನಸುಗಳ ಧಾರಾವಾಹಿ: ನೀ ಇರಲು ಜೊತೆಯಲ್ಲಿ

    ನ್ನಡ ಕಿರುತೆರೆ ವೀಕ್ಷಕರಿಗೆ ವಿಭಿನ್ನತೆಯ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿರುವ ಸ್ಟಾರ್ ಸುವರ್ಣ (Star Suvarna) ವಾಹಿನಿಯು ಇದೀಗ ನೀ ಇರಲು ಜೊತೆಯಲ್ಲಿ (Nee Iralu Jotheyalli) ಎಂಬ ಹೊಸ ಧಾರಾವಾಹಿಯನ್ನು ಪ್ರಸಾರ ಮಾಡಲು ಸಜ್ಜಾಗಿದೆ.

    ಮಾತಿನಲ್ಲಿ ತುಂಟತನವನ್ನೊಳಗೊಂಡ ಕಥಾನಾಯಕ ಕೃಷ್ಣನದ್ದು ಸ್ವಾತಂತ್ಯ ಹೋರಾಟಗಾರರ ಕುಟುಂಬ. ಕೆಲಸದಲ್ಲಿ ಜಾಣ್ಮೆ, ನಿಪುಣತೆ ಹೊಂದಿರುವ ಈತ, ತಂತ್ರದಲ್ಲಿ ಕಪಟಿಯಾಗಿದ್ದರೂ ಮಾಡಿದ ಸಹಾಯಕ್ಕೆ ಪ್ರತಿಫಲವನ್ನು ನಿರೀಕ್ಷಿಸದ ಅಧುನಿಕ ಯುಗದ ಶ್ರೀ ಕೃಷ್ಣ. ಆದರೆ ಈ ಕೃಷ್ಣನಿಗೆ ಪೂತನಿಯಂತೆ ಕಾಟ ಕೊಡೋಳು ಅತ್ತಿಗೆ ಊರ್ಮಿಳಾ ದಿವಾನ್. ನನ್ನದೇ ನಡಿಬೇಕು, ನನ್ನಿಂದಲೇ ಎಲ್ಲಾ ಎಂಬ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾ, ಅಹಂಕಾರವನ್ನೇ ಒಡವೆಯನ್ನಾಗಿಸಿಕೊಂಡು ಮನೆಮಂದಿಯನ್ನೆಲ್ಲಾ ತನ್ನ ಕೈಗೊಂಬೆಯಾಗಿಸಿರ್ತಾಳೆ.

    ಇನ್ನು ತಂದೆಯ ಮುದ್ದಿನ ಮಗಳು ಕಥಾನಾಯಕಿ ರಚನಾ ಪಟೇಲ್. ಓದಿನಲ್ಲಿ ಅತ್ಯಂತ ಪ್ರತಿಭಾವಂತೆ. ಯಾರನ್ನು ನೋಯಿಸದ ಮಾತೃ ಹೃದಯಿ. ಸೌಂದರ್ಯವನ್ನು ಮುಖದಲ್ಲಿ ಮಾತ್ರವಲ್ಲದೆ ನಡವಳಿಕೆಯಲ್ಲಿಯೂ ಒಗ್ಗೂಡಿಸಿರುವ ಈಕೆಗೆ, ಸಾಧನೆಯ ಶಿಖರವೇರಿರುವ ಊರ್ಮಿಳಾ ದಿವಾನೇ ಆದರ್ಶ. ಆಕೆಯಂತೆ ಏನನ್ನಾದರೂ ಸಾಧಿಸಬೇಕೆಂಬ ಛಲ ರಚನಾಳದ್ದು. ಹೀಗೆ ಸೊಕ್ಕಿನಿಂದ ಮೆರಿತಿರೋ ಊರ್ಮಿಳಾಗೆ ಮುಂದೆ ಕೃಷ್ಣ ತಕ್ಕ ಪಾಠ ಕಲಿಸ್ತಾನ? ತದ್ವಿರುದ್ಧ ಭಾವಗಳನ್ನು ಹೊಂದಿರುವ ಕೃಷ್ಣ,ರಚನಾ ಹೇಗೆ ಒಂದಾಗ್ತಾರೆ? ರಚನಾಗೆ ಆದರ್ಶವಾಗಿರೋ ಊರ್ಮಿಳಾ, ತನ್ನನ್ನೇ ಎದುರಾಳಿಯಾಗಿ ನೋಡಿದ್ರೆ ಮುಂದೇನಾಗಬಹುದು? ಎಂಬುದೇ ಮುಖ್ಯ ಕಥಾ ಹಂದರ. ಇದನ್ನೂ ಓದಿ: ‘ಮಾವೀರ’ನಾಗಿ ಎಂಟ್ರಿ ಕೊಟ್ಟ ಸು ಫ್ರಂ ಸೋ ಕರುಣಾಕರ ಗುರೂಜಿ

    ಕನ್ನಡ ಕಿರುತೆರೆಯಲ್ಲಿ ಸುವರ್ಣ ಇತಿಹಾಸ ಬರೆದಿರೋ `ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ, ವರ್ಷಗಳ ಬಳಿಕ ಈ ಕಥೆಯ ಮೂಲಕ ಸುವರ್ಣ ಪರಿವಾರಕ್ಕೆ ಕಮ್‌ಬ್ಯಾಕ್ ಆಗಿದ್ದು ಊರ್ಮಿಳಾ ದಿವಾನ್ ಎಂಬ ಮುಖ್ಯ ಖಳನಾಯಕಿಯ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ನಾಯಕನಾಗಿ ಪವನ್ ರವೀಂದ್ರ ಹಾಗೂ ನಾಯಕಿಯಾಗಿ ಸಲೋಮಿ ಡಿಸೋಜಾ ಬಣ್ಣ ಹಚ್ಚಿದ್ದಾರೆ. ಜೊತೆಗೆ ನಟ ಮೋಹನ್ ಸೇರಿದಂತೆ ಇನ್ನು ಅನೇಕ ಪ್ರತಿಭಾನ್ವಿತ ನಟ-ನಟಿಯರು ಅಭಿನಯಿಸುತ್ತಿದ್ದಾರೆ.

    ಮುದ್ದುಲಕ್ಷ್ಮಿ, ಮರಳಿ ಬಂದಳು ಸೀತೆ, ಮರಳಿ ಮನಸಾಗಿದೆ ಸೇರಿದಂತೆ ಇನ್ನೂ ಅನೇಕ ಧಾರಾವಾಹಿಗಳನ್ನು ನಿರ್ದೇಶಿಸಿರುವ ಧರಣಿ ಜಿ.ರಮೇಶ್ ಅವರ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ನೀ ಇರಲು ಜೊತೆಯಲ್ಲಿ ಧಾರಾವಾಹಿ ಮೂಡಿ ಬರಲಿದೆ. ಈ ಧಾರಾವಾಹಿ ಇದೇ ಆಗಸ್ಟ್ 11ರಿಂದ ಪ್ರತಿದಿನ ರಾತ್ರಿ 7 ಗಂಟೆಗೆ ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗಲಿದೆ.

  • ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

    ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿದ ಕಿರುತೆರೆ ನಟಿ ರಜಿನಿ

    ಬೆಂಗಳೂರು: 18ನೇ ಆವೃತ್ತಿಯ ಐಪಿಎಲ್‌ (IPL 2025) ಕೊನೇ ಹಂತಕ್ಕೆ ಬಂದು ನಿಂತಿದೆ. ಇಂದು ಪಂಜಾಬ್‌ ಕಿಂಗ್ಸ್‌ vs ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB vs PBKS) ತಂಡದ ಫೈನಲ್‌ಪಂದ್ಯಕ್ಕೆ ಇಲ್ಲಿ ನರೇಂದ್ರ ಮೋದಿ ಕ್ರೀಡಾಂಗಣ ಸಾಕ್ಷಿಯಾಗಲಿದೆ. ದಶಕಗಳಿಂದ ಚೊಚ್ಚಲ ಐಪಿಎಲ್‌ ಟ್ರೋಫಿಗಾಗಿ ಕಾದಿರುವ ಬೆಂಗಳೂರು ಮತ್ತು ಪಂಜಾಬ್‌ ತಂಡಕ್ಕೆ ವಿರಾಟ್‌ ಕೊಹ್ಲಿ (Virat Kohli) ಮತ್ತು ಶ್ರೇಯಸ್‌ ಅಯ್ಯರ್‌ ಇಬ್ಬರೂ ಪ್ರಶಸ್ತಿ ಗೆದ್ದುಕೊಡುವ ಉತ್ಸಾಹದಲ್ಲಿ ಎದುರಾಗುತ್ತಿದ್ದಾರೆ. 18 ವರ್ಷಗಳ ಪ್ರಶಸ್ತಿ ಬರ ನೀಗಿಸಿಕೊಳ್ಳುವ ಕಾತರದಲ್ಲಿವೆ ಎರಡೂ ತಂಡಗಳೂ ಇವೆ.

    ಆದ್ರೆ ಗೆಲ್ಲುವ ಫೇವರೆಟ್‌ ಆಗಿರುವ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡಕ್ಕೆ ಅಭಿಮಾನಿಗಳು (RCB Fans) ಗಣ್ಯರ ಶುಭಾಶಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಕಿರುತೆರೆಯ ಖ್ಯಾತ ನಟಿ ರಜಿನಿ ಆರ್‌ಸಿಬಿ ಗೆಲುವಿಗಾಗಿ ರಕ್ತದಾನ ಮಾಡಿ ಗಮನ ಸೆಳೆದಿದ್ದಾರೆ. ಇದನ್ನೂ ಓದಿ: ಆರ್‌ಸಿಬಿ ಅಭಿಮಾನಿಗಳಿಗೆ ಗುಡ್‌ನ್ಯೂಸ್ – ಐಪಿಎಲ್ ಫೈನಲ್‌ನಲ್ಲಿ ಆಡಲಿದ್ದಾರೆ ಫಿಲ್ ಸಾಲ್ಟ್

    ಆರ್‌ಸಿಬಿ ಅಭಿಮಾನಿಯೂ ಆಗಿರುವ ʻಅಮೃತ ವರ್ಷಿಣಿʼ ಧಾರಾವಾಹಿ ಖ್ಯಾತಿಯ ನಟಿ ರಜನಿ, ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಗೆಲ್ಲಲೆಂದು ರಕ್ತದಾನ ಮಾಡಿದ್ದಾರೆ. ಆ ಫೋಟೋವನ್ನ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ʻಆರ್‌ಸಿಬಿ ವಿನ್ ಆಗ್ಲಿ ಅಂತ ಬ್ಲಡ್ ಕೊಟ್ಟಿದ್ದೀವಿ, ಈ ಸಲ ಕಪ್ ನಮ್ದೇ.. ʻಜೈ ಆರ್‌ಸಿಬಿʼ ಅಂತ ತಮ್ಮ ಇನ್‌ಸ್ಟಾ ಖಾತೆಯಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: IPL 2025 Final – ಪಂದ್ಯಕ್ಕೂ ಮುನ್ನವೇ ಮೋದಿ ಸ್ಟೇಡಿಯಂ ಹೊರಗೆ ಸಿಲಿಂಡರ್ ಬ್ಲಾಸ್ಟ್

    ಇಂದು ಸಂಜೆ 7:30ಕ್ಕೆ ಪಂದ್ಯ ಶುರುವಾಗಲಿದ್ದು, ಜಿಯೋ ಸ್ಟಾರ್‌ನಲ್ಲಿ ನೇರಪ್ರಸಾರವಾಗಲಿದೆ. 2ನೇ ಅವಧಿಯಲ್ಲಿ ಇಬ್ಬನಿಯ ಪ್ರಭಾವದಿಂದಾಗಿ ಚೇಸಿಂಗ್ ಸುಲಭವಾಗುವ ಸಾಧ್ಯತೆ ಹೆಚ್ಚಿರುವುದರಿಂದ ಟಾಸ್‌ ಗೆಲುವು ನಿರ್ಣಾಯಕವಾಗಲಿದೆ. ಟಾಸ್‌ ಗೆದ್ದ ತಂಡ ಮೊದಲು ಫೀಲ್ಡಿಂಗ್‌ ಆಯ್ದುಕೊಳ್ಳುವ ಸಾಧ್ಯತೆಯೇ ಹೆಚ್ಚಾಗಿದೆ. ಇದನ್ನೂ ಓದಿ: RCB ಇಂಪ್ಯಾಕ್ಟ್ ಪ್ಲೇಯರ್ ಆಗಿ ಸಿಂಧನೂರಿನ ಮನೋಜ್ ಬಾಂಡಗೆ – ಕುಟುಂಬಸ್ಥರಿಂದ ಗೆಲುವಿನ ಶುಭಹಾರೈಕೆ

    ಆರ್‌ಸಿಬಿ ಗೆಲ್ಲುವ ಫೇವರೆಟ್
    ಕ್ವಾಲಿಫೈಯರ್‌-1ನೇ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡವನ್ನು 8 ವಿಕೆಟ್‌ಗಳಿಂದ ಮಣಿಸುವ ಮೂಲಕ ಆರ್‌ಸಿಬಿ ನೇರವಾಗಿ ಫೈನಲ್‌ ಪ್ರವೇಶಿಸಿದೆ. ಹಿಂದಿನ ಆವೃತ್ತಿಗಳಲ್ಲಿನ ನೀರಸ ಪ್ರದರ್ಶನ ಮೀರಿರುವ ಆರ್‌ಸಿಬಿ, ಈ ವರ್ಷ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಅರಂಭಿಕ ಕ್ರಮಾಂಕದಲ್ಲಿ ಕೊಹ್ಲಿ ಸ್ಥಿರ ಪ್ರದರ್ಶನ ನೀಡಿ ತಂಡಕ್ಕೆ ಭದ್ರ ಅಡಿಪಾಯ ಒದಗಿಸಿದ್ದಲ್ಲದೇ, ಈ ಬಾರಿ ಒಟ್ಟು 614 ರನ್‌ ಗಳಿಸಿದ್ದಾರೆ. ಇದನ್ನೂ ಓದಿ: ಸತತ 2ನೇ ವರ್ಷ ರಜತ್‌ Vs ಶ್ರೇಯಸ್‌ ತಂಡಗಳ ಮಧ್ಯೆ ಟಿ20 ಫೈನಲ್!‌

    ಮಳೆ ಸಾಧ್ಯತೆ ಇದೆಯೇ?
    ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಭಾನುವಾರ ನಡೆದ 2ನೇ ಕ್ವಾಲಿಫೈಯರ್‌ ಪಂದ್ಯ, ಮಳೆಯಿಂದಾಗಿ 2 ಗಂಟೆ ತಡವಾಗಿ ಆರಂಭಗೊಂಡಿತ್ತು. ಫೈನಲ್‌ಗೂ ಸಾಕ್ಷಿಯಾಗಲಿರುವ ಅಹಮದಾಬಾದ್‌ನಲ್ಲಿ ಸದ್ಯದ ಮಾಹಿತಿ ಪ್ರಕಾರ ಮಂಗಳವಾರ ಮಳೆಯ ಸಾಧ್ಯತೆ ಶೇ.62ರಷ್ಟಿದೆ. ಆದರೆ, ಬೆಳಗ್ಗೆ ಅಥವಾ ಮಧ್ಯಾಹ್ನ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ರಾತ್ರಿ ವೇಳೆ ಮಳೆಯ ಸಾಧ್ಯತೆ ಶೇ.5ರಷ್ಟು ಎಂದು ಹವಾಮಾನ ವರದಿ ತಿಳಿಸಿದೆ.

  • ಅನ್‌ಟೋಲ್ಡ್ ಕ್ರೈಂ ಸ್ಟೋರಿಯಲ್ಲಿ ಶುಭಾ ಪೂಂಜಾ

    ಅನ್‌ಟೋಲ್ಡ್ ಕ್ರೈಂ ಸ್ಟೋರಿಯಲ್ಲಿ ಶುಭಾ ಪೂಂಜಾ

    ಟಿ ಶುಭಾ ಪೂಂಜಾ, `ಅಮೃತವರ್ಷಿಣಿ’ ಧಾರಾವಾಹಿ ಖ್ಯಾತಿಯ ರಜಿನಿ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿರುವ `ಅಂಬುಜಾ'(Ambuja Film) ಸಿನಿಮಾ ಟೀಸರ್ ಬಿಡುಗಡೆಯಾಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರ ಗಮನ ಸೆಳೆಯುತ್ತಿದೆ. ನೈಜ ಘಟನೆ ಆಧಾರಿತ ಈ ಚಿತ್ರದ ಟೀಸರ್ ಇದೀಗ ಕುತೂಹಲವನ್ನು ಹುಟ್ಟು ಹಾಕಿದೆ, ಪ್ರೇಕ್ಷಕರಲ್ಲಿ ನಿರೀಕ್ಷೆಯನ್ನು ಹೆಚ್ಚಿಸಿದೆ.

    `ಅಂಬುಜಾ’ ಕ್ರೈಂ ಥ್ರಿಲ್ಲರ್ ಹಾರಾರ್ ಕಥಾಹಂದರ ಒಳಗೊಂಡಿದೆ. ನೈಜ ಘಟನೆ ಆಧಾರಿತ ಈ ಚಿತ್ರಕ್ಕೆ ಕಾಶಿನಾಥ್ ಡಿ ಮಡಿವಾಳರ್ ನಿರ್ಮಾಣ ಮಾಡಿದ್ದಾರೆ. ಮೊದಲ ಬಾರಿ ಸಿನಿಮಾ ನಿರ್ಮಾಣ ಸಾಹಸಕ್ಕೆ ಕೈ ಹಾಕಿರುವ ಇವರು ಚಿತ್ರಕ್ಕೆ ಕಥೆ, ಸಾಹಿತ್ಯ ಕೂಡ ಬರೆದಿದ್ದಾರೆ. ಶ್ರೀನಿ ಹನುಮಂತರಾಜು(Shrini Hanumanthraju) ಚಿತ್ರವನ್ನು ನಿರ್ದೇಶನದಲ್ಲಿ ಸಿನಿಮಾ ಮೂಡಿ ಬಂದಿದೆ.  ರಿಲೀಸ್‌ಗೂ ಮುನ್ನ ಟೀಸರ್‌ ನೋಡಿ ಫ್ಯಾನ್ಸ್‌ ಫಿದಾ ಆಗಿದ್ದಾರೆ. 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದು ಭರ್ಜರಿ ವಿವ್ಸ್‌ ಗಿಟ್ಟಿಸಿಕೊಳ್ಳುತ್ತಿದೆ. ಇದನ್ನೂ ಓದಿ:ಬಿಗ್ ಬಾಸ್ ಆಟಕ್ಕೆ ಫುಲ್ ಸ್ಟಾಪ್ ಇಡಲು ನಿರ್ಧರಿಸಿದ ಆರ್ಯವರ್ಧನ್ ಗುರೂಜಿ

    ಗೊತ್ತಿಲ್ಲದ ವಿಚಾರಗಳನ್ನು ಜನರಿಗೆ ಹೇಳಬೇಕು ಎನಿಸಿತು. ಅದಾದ ಮೇಲೆ ನಿರ್ದೇಶಕ ಶ್ರೀನಿ ಅವರ ಜೊತೆ ಮಾತನಾಡಿದಾಗ ಅವರು ಕೂಡ ಕಥೆ ತುಂಬಾ ಚೆನ್ನಾಗಿದೆ ಅಂದ್ರು. ಸಿನಿಮಾ ಮಾಡೋಣ ಎಂದು ನಿರ್ಧರಿಸಿದೆ. ಸಿನಿಮಾಗೆ ಬೇಕಾದ ಪಾತ್ರಗಳು ಸಿಗುತ್ತ ಹೋಯಿತು. ಫೈನಲಿ ಒಂದೊಳ್ಳೆ ಸಿನಿಮಾ ರೆಡಿಯಾಗಿದೆ. `ಅಂಬುಜಾ’  ಮನೆಮಂದಿಯೆಲ್ಲ ಕುಳಿತು ನೋಡಬಹುದು ಎಂದು ಚಿತ್ರದ ನಿರ್ಮಾಪಕ ಕಾಶಿನಾಥ್ ಡಿ ಮಡಿವಾಳರ್ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

    ನಟಿ ಶುಭಾ ಪೂಂಜಾ(Shubha Poonja) ಚಿತ್ರದ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ಎಂದೂ ಮಾಡಿರದ ಕ್ರೈಂ ರಿಪೋರ್ಟರ್ ಪಾತ್ರದಲ್ಲಿ ಶುಭಾ ನಟಿಸಿದ್ದಾರೆ. ನಟಿ ರಜನಿ (Rajani), ಲಂಬಾಣಿ ಪಾತ್ರಕ್ಕೆ ಜೀವ ತುಂಬಿದ್ದಾರೆ. ಚಿತ್ರದಲ್ಲಿ ಪದ್ಮಜಾ ರಾವ್, ಕಾಮಿಡಿ ಕಿಲಾಡಿ ಗೋವಿಂದೇಗೌಡ, ಕಾಮಿಡಿ ಕಿಲಾಡಿ ನಿರ್ದೇಶಕ ಶರಣಯ್ಯ, ಪ್ರಿಯಾಂಕ ಕಾಮತ್, ಸಂದೇಶ್ ಶೆಟ್ಟಿ ಅಜ್ರಿ ಸೇರಿದಂತೆ ಹಲವು ಕಲಾವಿದರು ತಾರಾಬಳಗದಲ್ಲಿದ್ದಾರೆ. ಬೆಂಗಳೂರು, ಗದಗ, ಉಡುಪಿ ಸುತ್ತಮುತ್ತ ಚಿತ್ರೀಕರಣ ನಡೆಸಲಾಗಿದೆ. ಎಸ್ ಕೆ ಸಿನಿಮಾಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣವಾಗಿದ್ದು, ವಿಜಯ್ ಎಂ ಕುಮಾರ್ ಸಂಕಲನ, ಮುರಳೀಧರ್ ಎಂ ಛಾಯಾಗ್ರಹಣ, ಪ್ರಸನ್ನ ಕುಮಾರ್ ಎಂ.ಎಸ್ ಸಂಗೀತ ನಿರ್ದೇಶನ ಚಿತ್ರಕ್ಕಿದೆ.

    Live Tv
    [brid partner=56869869 player=32851 video=960834 autoplay=true]

  • ರಜನಿಕಾಂತ್ ಖಳನಟನಿರುವಾಗಲೇ ಮೊದಲ ಫ್ಯಾನ್ಸ್ ಕ್ಲಬ್ ಮಾಡಿದ್ದ ಮುತ್ತುಮಣಿ ನಿಧನ

    ರಜನಿಕಾಂತ್ ಖಳನಟನಿರುವಾಗಲೇ ಮೊದಲ ಫ್ಯಾನ್ಸ್ ಕ್ಲಬ್ ಮಾಡಿದ್ದ ಮುತ್ತುಮಣಿ ನಿಧನ

    ಭಾರತೀಯ ಸಿನಿಮಾ ರಂಗದ ದಂತಕಥೆ, ಸೂಪರ್ ಸ್ಟಾರ್ ರಜನಿಕಾಂತ್ ಅವರ ಅಪ್ಪಟ ಅಭಿಮಾನಿ ಹಾಗೂ ರಜನಿಕಾಂತ್ ಅವರಿಗಾಗಿ ಮೊದಲ ಫ್ಯಾನ್ಸ್ ಕ್ಲಬ್ ತಗೆದಿದ್ದ ಮದುರೈ ಮೂಲದ ಮುತ್ತುಮಣಿ ಇಂದು ನಿಧನರಾಗಿದ್ದಾರೆ. ಇದನ್ನೂ ಓದಿ : ರಶ್ಮಿಕಾ ಮಂದಣ್ಣ ಅವರ ‘ಮಿಷನ್ ಮಜ್ನು’ ಬರ್ತಿದ್ದಾನೆ, ದಾರಿ ಬಿಡಿ

    ರಜನಿಕಾಂತ್ ಅವರು ಇನ್ನೂ ಹೀರೋ ಆಗಿ ಲಾಂಚ್ ಆಗದೇ ಇರುವ ವೇಳೆಯಲ್ಲಿ ಅಂದರೆ, ಖಳನಟನಾಗಿ ತೆರೆಯ ಮೇಲೆ ಮಿಂಚುತ್ತಿರುವ ಹೊತ್ತಿನಲ್ಲಿಯೇ ಮುತ್ತುಮಣಿ 45 ವರ್ಷಗಳ ಹಿಂದೆ ರಜನಿಕಾಂತ್ ಅಭಿಮಾನಿ ಸಂಘ ಶುರು ಮಾಡಿದ್ದರು. ಇದನ್ನೂ ಓದಿ : ಆಟಿಸಂ ಸಮಸ್ಯೆ ಕುರಿತಾದ ಕನ್ನಡದ ಮೊದಲ ಸಿನಿಮಾ ‘ವರ್ಣಪಟಲ’

    ಮುತ್ತುಮಣಿ ಕಂಡರೆ ರಜನಿಗೆ ಎಲ್ಲಿಲ್ಲದ ಪ್ರೀತಿ. ಇವರು ಅನಾರೋಗ್ಯಕ್ಕೆ ತುತ್ತಾದಾಗ ಸ್ವತಃ ರಜನಿ ಅವರೇ ಸಹಾಯ ಮಾಡಿದ್ದರು. ಕರೆ ಮಾಡಿ ಆರೋಗ್ಯ ವಿಚಾರಿಸುತ್ತಿದ್ದರು. ಅಲ್ಲದೇ, ರಜನಿ ನಟನೆಯ ಅಂಬುಲ್ಲ ರಜನಿಕಾಂತ್ ಸಿನಿಮಾದಲ್ಲಿ ‘ಮುತ್ತುಮಣಿ ಚೌದರೆ ವಾ’ ಹಾಡಿನಲ್ಲಿ ವಿಶೇಷವಾಗಿ ಮುತ್ತಮಣಿಯನ್ನು ಸ್ಮರಿಸಿದ್ದರು. ಇದನ್ನೂ ಓದಿ : ಸ್ಸಾರಿ.. ಈ ಬಾರಿ ಹುಟ್ಟು ಹಬ್ಬ ಆಚರಿಸಲ್ಲ : ಜಗ್ಗೇಶ್

    ರಜನಿಕಾಂತ್ ಅಭಿಮಾನಿಗಳ ಸಂಘದ ಹುಟ್ಟಿಗೆ ಕಾರಣರಾಗಿದ್ದ ಮುತ್ತುಮಣಿ ನಿಧನಕ್ಕೆ ರಜನಿ ಫ್ಯಾನ್ಸ್ ಮತ್ತು ರಜನಿಕಾಂತ್ ಕಂಬನಿ ಮಿಡಿದ್ದಾರೆ.

  • ಈ ನಟ ರಾಜಕೀಯ ಬಂದರೆ ಕೈ ಜೋಡಿಸಲು ಸಿದ್ಧ: ನಟ ಕಮಲ್ ಹಾಸನ್

    ಈ ನಟ ರಾಜಕೀಯ ಬಂದರೆ ಕೈ ಜೋಡಿಸಲು ಸಿದ್ಧ: ನಟ ಕಮಲ್ ಹಾಸನ್

    ಚೆನ್ನೈ: ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ರಾಜಕೀಯಕ್ಕೆ ಬಂದರೆ ನಾನು ಅವರೊಂದಿಗೆ ಕೈ ಜೋಡಿಸಲು ಸಿದ್ಧ ಎಂದು ನಟ ಕಮಲ್ ಹಾಸನ್ ಹೇಳಿದ್ದಾರೆ.

    ರಜನಿ ಮತ್ತು ನಾನು ಚಿತ್ರರಂಗದಲ್ಲಿ ಎದುರಾಳಿಗಾಗಿ ಕಂಡರೂ, ಪ್ರಮುಖ ವಿಚಾರಗಳ ಬಗ್ಗೆ ನಾವಿಬ್ಬರು ಚರ್ಚಿಸುತ್ತಿರುತ್ತೇವೆ. ಒಂದು ವೇಳೆ ರಜನಿ ರಾಜಕೀಯಕ್ಕೆ ಬರುವುದಾದರೆ ಅವರೊಂದಿಗೆ ರಾಜಕೀಯ ಕುರಿತು ಚರ್ಚೆ ನಡೆಸುವುದು ಕಷ್ಟವಾಗುವುದಿಲ್ಲ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

    ತಮ್ಮ ಸ್ವಂತ ಪಕ್ಷ ಪ್ರಾರಂಭಕ್ಕೆ ದಿನಾಂಕ ನಿಗದಿಯಾಗಿದೆಯೇ ಎಂಬ ಪ್ರಶ್ನೆಗೆ ಇದೇ ಸಂದರ್ಭದಲ್ಲಿ ಉತ್ತರಿಸಿದ ಕಮಲ್ ಹಾಸನ್, ಅದಕ್ಕಾಗಿ ಆತುರಪಡದೆ ನಿರ್ಧಾರ ತೆಗೆದುಕೊಳ್ಳಬೇಕು ಅಂದ್ರು. ಅಲ್ಲದೆ ತಮ್ಮ ಪಕ್ಷವನ್ನು ಘೋಷಣೆ ಮಾಡಲು ನಿರ್ಧರಿಸಿದ ದಿನ ಕಾಕತಾಳೀಯವಾಗಿ ಒಂದು ಕ್ರಾಂತಿಯೂ ಆಗಬಹುದು ಎಂದು ಹೇಳಿದ್ರು.

    ಕೆಲವು ತಿಂಗಳಿನಿಂದೀಚೆಗೆ ಕಮಲ್ ಹಾಸನ್ ತಮಿಳುನಾಡಿನ ರಾಜಕೀಯ ಸ್ಥಿತಿಗತಿಯ ಬಗ್ಗೆ ಮುಕ್ತವಾಗಿ ಮಾತನಾಡುತ್ತಿದ್ದಾರೆ. ರಾಜಕೀಯಕ್ಕೆ ಧುಮುಕುವ ಬಗ್ಗೆ ಸಾಕಷ್ಟು ಸುಳಿವು ನೀಡ್ತಿದ್ದಾರೆ. ಇದೇ ತಿಂಗಳ ಆರಂಭದಲ್ಲಿ ಕಮಲ್ ಹಾಸನ ಅವರು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಜೊತೆ ಮಾತುಕತೆ ನಡೆಸಿದ್ದರು. ತಮಿಳುನಾಡಿನ ರಾಜಕೀಯದ ಬಗ್ಗೆ ಅವರೊಂದಿಗೆ ಚರ್ಚೆ ನಡೆಸಿದ್ದಾಗಿ ವರದಿಗಾರರಿಗೆ ತಿಳಿಸಿದ್ದರು.

    ಯಾವುದಾದರೂ ಪಕ್ಷಕ್ಕೆ ಸೇರ್ಪಡೆಯಾಗ್ತೀರಾ ಎಂಬ ಪ್ರಶ್ನೆಗೆ, ಖಂಡಿತವಾಗಿಯೂ ನನ್ನ ಬಣ್ಣ ಕೇಸರಿಯಲ್ಲ ಎಂದು ಸ್ಪಷ್ಟಪಡಿಸಿದ್ದರು.