Tag: ರಜತ್‌ ಕಿಶನ್‌

  • ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು

    ಕೊಲೆ ಬೆದರಿಕೆ ಸಂದೇಶ – ಡಿಜಿಐಜಿಪಿಗೆ ರಜತ್ ದೂರು

    ಬಿಗ್ ಬಾಸ್ ಸ್ಪರ್ಧಿ ರಜತ್ ಕಿಶನ್ (Rajath Kishan) ಅನ್ನು ಕೊಲೆ ಮಾಡುವುದಾಗಿ ಪತ್ನಿ ಅಕ್ಷಿತಾಗೆ ಕೊಲೆ ಬೆದರಿಕೆ ಸಂದೇಶ ಬಂದ ಹಿನ್ನೆಲೆ ರಜತ್ ಡಿಜಿಐಜಿಪಿಗೆ (DGIGP) ದೂರು ನೀಡಿದ್ದಾರೆ.

    ಧರ್ಮಸ್ಥಳದಲ್ಲಿ (Dharmasthala) ಯೂಟ್ಯೂಬರ್ಸ್ ಮೇಲೆ ಹಲ್ಲೆ ನಡೆದ ವೇಳೆ ರಜತ್ ಕಿಶನ್ ಸ್ಥಳದಲ್ಲಿದ್ದರು. ಈ ಹಿನ್ನೆಲೆ ರಜತ್ ಪತ್ನಿ ಅಕ್ಷಿತಾಗೆ ಕೆಲವು ಕಿಡಿಗೇಡಿಗಳು ಕೊಲೆ ಬೆದರಿಕೆ ಸಂದೇಶ ಕಳುಹಿಸಿದ್ದಾರೆ. ದೂರು ನೀಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ರಜತ್, ನನ್ನ ಪತ್ನಿ ಅಕ್ಷಿತಾಗೆ, ಕೊಲೆ ಮಾಡ್ತೀವಿ ಅಂಥ ಬೆದರಿಕೆ ಸಂದೇಶ ಬಂದಿತ್ತು. ಇದು ಬಹಳ ಕೆಟ್ಟದ್ದು. ನಾವು ಯಾವುದೇ ಜಾತಿ, ಧರ್ಮ ಜಾಗ ದೇವಸ್ಥಾನ ಬಗ್ಗೆ ಮಾತಾಡಿಲ್ಲ. ನಾವು ಹೋಗಿದ್ದು ಸೌಜನ್ಯ ಪರ ನ್ಯಾಯಕ್ಕಾಗಿ. ಕತ್ತರಿಸ್ತೀನಿ ಅಂದ್ರೆ ಹೇಗೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: ವರಮಹಾಲಕ್ಷ್ಮೀ ಹಬ್ಬಕ್ಕೆ ತಾವರೆ ಹೂ ಕೀಳಲು ಹೋಗಿ ಸಾವು

    ಹಾಡಹಗಲೇ ನಮ್ಮ ಕಣ್ಣಮುಂದೆನೇ ಎಲ್ಲ ನಡೆದಿದ್ದು. ಹಲ್ಲೆ ಮಾಡಿದವರ ಮೇಲೆ ದೂರು ಕೊಟ್ಟಿದ್ದೇನೆ. ನನ್ನ ಪತ್ನಿಗೆ ಬೆದರಿಕೆ ಸಂದೇಶ ಹಾಕಿದವರ ವಿರುದ್ಧವೂ ದೂರು ಕೊಟ್ಟಿದ್ದೇವೆ. ನಾವು ಕೊಟ್ಟ ದೂರು ಸೈಬರ್ ಠಾಣೆಗೆ ವರ್ಗಾವಣೆ ಆಗಿದೆ. ಕರಾವಳಿ, ಮಂಡ್ಯ ಅಂತೆಲ್ಲ ಹೇಳುತ್ತಿದ್ದಾರೆ. ನಾವು ಮಂಡ್ಯದವರನ್ನ ಕರ್ಕೊಂಡು ಬರುತ್ತೇವೆ ಎಂದು ಹೇಳಿಲ್ಲ. ಬೆದರಿಕೆಗಳಿಗೆ ನಾವು ಹೆದರಲ್ಲ ಎಂದರು. ಇದನ್ನೂ ಓದಿ: ಸರ್ವಜ್ಞ ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚು ಮತ ಬಂದಿದೆ, ಅಲ್ಲೂ ಪರಿಶೀಲನೆ ಮಾಡಲಿ: ಪಿ.ಸಿ ಮೋಹನ್

    ಬಳಿಕ ಮಾತನಾಡಿದ ರಜತ್ ಪತ್ನಿ ಅಕ್ಷಿತಾ, ಸೋಷಿಯಲ್ ಮೀಡಿಯಾ ಸ್ಟೇಟಸ್‌ನಲ್ಲಿ ಮೆಸೇಜ್ ಹಾಕಿದ್ದಾರೆ. ನಿನ್ನ ಗಂಡನನ್ನ ವಾಪಸ್ ಕರೆಸಿಕೋ. ಕರಾವಳಿ ಬೇರೆ ಥರ, ಮಂಡ್ಯ ಅಲ್ಲ ಅಂತೆಲ್ಲ ಹಾಕಿದ್ದಾರೆ. ನಾವು ಹುಟ್ಟಿ ಬೆಳೆದಿದ್ದು ಮಂಡ್ಯ. ನಾವು ದೂರು ಕೊಟ್ಟಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಧರ್ಮಸ್ಥಳದಲ್ಲಿ ಉದ್ವಿಗ್ನತೆ – 150ಕ್ಕೂ ಹೆಚ್ಚು ಜನರ ವಿರುದ್ಧ ಪ್ರತ್ಯೇಕ FIR ದಾಖಲು

  • ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್

    ಯೂಟ್ಯೂಬರ್ಸ್ ಮೇಲೆ 50-60 ಜನ ಅಟ್ಯಾಕ್ ಮಾಡಿದ್ರು, ನನ್ನ ಬಳಿ ಸಾಕ್ಷಿ ಇದೆ: ರಜತ್

    ಮಂಗಳೂರು: ಧರ್ಮಸ್ಥಳದಲ್ಲಿ ಯೂಟ್ಯೂಬರ್ಸ್ ಮೇಲೆ ಹಲ್ಲೆ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಗ್ ಬಾಸ್ ಖ್ಯಾತಿಯ ರಜತ್ ಕಿಶನ್ ಪ್ರತಿಕ್ರಿಯೆ ನೀಡಿದ್ದಾರೆ.

    ನಾನು ಧರ್ಮಸ್ಥಳಕ್ಕೆ ಹೋಗಿದ್ದು, ಸೌಜನ್ಯ ಕೇಸ್‌ನಲ್ಲಿ ನ್ಯಾಯ ಕೇಳೋಕೆ ಮಾತ್ರ. ನಾನು ಯಾವತ್ತೂ ಧರ್ಮಸ್ಥಳದ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ನಾನು ಸೌಜನ್ಯ ಕುಟುಂಬಸ್ಥರನ್ನು ಭೇಟಿ ಮಾಡೋಕೆ ಹೋಗಿದ್ದೆ. ಈ ವೇಳೆ ಯೂಟ್ಯೂಬರ್ಸ್ಗೆ ಮಾತನಾಡುತ್ತಿದ್ದಾಗಲೇ ಗುಂಪು ಬಂತು. ಕಾರು ಮತ್ತು ಬೈಕ್‌ನಲ್ಲಿ ಬಂದವರಿಂದ ಹಲ್ಲೆ ನಡೆಯಿತು ಎಂದು ತಿಳಿಸಿದ್ದಾರೆ.

    ಏಕಾಏಕಿ ಯೂಟ್ಯೂಬರ್ಸ್ ಮೇಲೆ ಗುಂಪು ಎರಗಿತು. ಸುಮಾರು 50-60 ಜನ ಬಂದು ಅಟ್ಯಾಕ್ ಮಾಡಿದ್ದರು. ಅಲ್ಲಿ ನನ್ನ ಮೇಲೆ ಯಾರು ಬೆರಳೆತ್ತಿ ತೋರಿಸಿಲ್ಲ, ಏನೂ ಮಾಡಿಲ್ಲ. ಆದರೆ, ಯೂಟ್ಯೂಬರ್ಸ್ ಬಗ್ಗೆ ಮಾತ್ರ ಅವರು ಕೋಪ ತೋರಿಸಿದ್ದರು. ಸೌಜನ್ಯ ಕೇಸ್‌ನಲ್ಲಿ ನ್ಯಾಯ ಕೊಡಿಸಿ ಅಂತಾ ಕೇಳೋಕೆ ಹೋಗಿದ್ದೆ. ಸೌಜನ್ಯ ಬಗ್ಗೆ ಕೇಳಿದ್ದರೆ ಅವರೆಲ್ಲಾ ಧರ್ಮ ಅಂತಾ ಮಾತಾಡಿದ್ದರು ಎಂದು ಹೇಳಿದ್ದಾರೆ.

    ಯೂಟ್ಯೂಬರ್ಸ್‌ಗೆ ಹೊಡೆದು ಕ್ಯಾಮೆರಾ ಕಿತ್ತು ಬಿಸಾಡಿದರು. ಯೂಟ್ಯೂಬರ್ಸ್‌ಗೆ ಹಲ್ಲೆ ಮಾಡಿದ್ದರ ಬಗ್ಗೆ ನನ್ನ ಬಳಿ ಸಾಕ್ಷಿ ಇದೆ ಎಂದು ರಜತ್ ತಿಳಿಸಿದ್ದಾರೆ.

  • ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ಚ್ಚು ಹಿಡಿದು ರೀಲ್ಸ್ ಮಾಡಿದಕ್ಕೆ ಬಂಧನಕ್ಕೊಳಗಾಗಿರುವ ವಿನಯ್ (Vinay Gowda) ಮತ್ತು ರಜತ್‌ರನ್ನು (Rajath) ಬಸವೇಶ್ವರ ನಗರದ ಪೊಲೀಸರು ನಾಗರಬಾವಿಯ ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸಿದ್ದಾರೆ. ಇದನ್ನೂ ಓದಿ:ರೀಲ್ಸ್‌ ವಿವಾದ: ಬಿಡುಗಡೆಯಾಗಿದ್ದ ರಜತ್‌, ವಿನಯ್‌ರನ್ನು ಮತ್ತೆ ಬಂಧಿಸಿದ ಪೊಲೀಸರು

    ಅಕ್ಷಯ ಸ್ಟುಡಿಯೋದಲ್ಲಿ ಸ್ಥಳ ಮಹಜರು ನಡೆಸುವಾಗ ಯಾವ ಜಾಗದಲ್ಲಿ ವಿಡಿಯೋ ಮಾಡಿದ್ದು? ನಿಮಗೆ ಮಚ್ಚು ಕೊಟ್ಟೋರು ಯಾರು? ಅನ್ನೋದನ್ನು ವಿನಯ್ ಮತ್ತು ರಜತ್‌ರಿಂದ ಕೇಳಿ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ. ಈ ವೇಳೆ, ಮಹಜರಿನ ದೃಶ್ಯವನ್ನು ವಿಡಿಯೋ ರೆಕಾರ್ಡ್‌ ಮಾಡಿಕೊಂಡಿದ್ದಾರೆ.

    ಮಹಜರಿನ ಬಳಿಕ ರೀಲ್ಸ್‌ಗೆ ಬಳಸಿದ್ದ ಲಾಂಗ್ ಅನ್ನು ಪೊಲೀಸರು ವಶಕ್ಕೆ ಪಡೆಯಲಿದ್ದಾರೆ. ಬಳಿಕ ಕೋರ್ಟ್‌ಗೆ ಇಬ್ಬರನ್ನೂ ಹಾಜರು ಪಡಿಸಲಿದ್ದಾರೆ.

  • BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    BBK 11| ಹನುಮಂತು ಮುಂದೆ ಗಾಂಧೀಜಿ ನಿಂತಿದ್ರೂ ಹನುಮಂತುನೇ ಗೆಲ್ತಿದ್ರು: ರಜತ್ ಕಿಶನ್

    ಬೆಂಗಳೂರು: ಹನುಮಂತು (Hanumantha) ಮುಂದೆ ಗಾಂಧೀಜಿ ನಿಂತಿದ್ದರು ಹನುಮಂತುನೇ ಗೆಲ್ಲುತ್ತಿದ್ದರು ಎಂದು ಬಿಗ್ ಬಾಸ್ ಸೀಸನ್ 11ರ (Bigg Boss 11) ಸೆಕೆಂಡ್ ರನ್ನರ್ ಅಪ್ ರಜತ್ ಕಿಶನ್ (Rajath Kishan) ಸಂತಸ ವ್ಯಕ್ತಪಡಿಸಿದರು.

    ಬಿಗ್ ಬಾಸ್ 11ರ ಗ್ರ್ಯಾಂಡ್ ಫಿನಾಲೆ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಬಿಗ್ ಬಾಸ್ ಜರ್ನಿ ಚೆನ್ನಾಗಿತ್ತು. ಶಾರ್ಟ್ ಟೈಂನಲ್ಲಿ ಇಷ್ಟೊಂದು ಪ್ರೀತಿ ವಿಶ್ವಾಸ ಸಿಕ್ಕಿರೋದು ಖುಷಿ ಇದೆ ಎಂದು ಹರ್ಷ ವ್ಯಕ್ತಪಡಿಸಿದರು. ಇದನ್ನೂ ಓದಿ: ದೇವರಾಣೆ ಗೆಲ್ತೀನಿ ಅಂತ ಬಂದಿರಲಿಲ್ಲ, ಹೋಗಿ ಮಜಾ ಮಾಡಿ ಬರೋಣ ಅಂತ ಬಂದಿದ್ದೆ: ಹನುಮಂತ

    ಇನ್ನು ಮಾಜಿ ಪ್ರೇಯಸಿ ಜೊತೆ ಪೋಟೋ ವೈರಲ್ ಮಾಡಿ ಟ್ರೋಲ್ ಪೇಜ್‌ಗಳು ಬೆದರಿಕೆ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ನಾನು ಹೊರಗಡೆ ಬಂದಿದ್ದೀನಲ್ಲ, ನೋಡಿಕೊಳ್ಳುತ್ತೇನೆ ಬಿಡಿ ಎಂದರು. ಇದನ್ನೂ ಓದಿ: BBK 11: ಬಿಗ್‌ ಬಾಸ್‌ ಟ್ರೋಫಿ ಗೆದ್ದು ಸುದೀಪ್‌ ಕಾಲಿಗೆ ಬಿದ್ದ ಹನುಮಂತ

    ಬಿಗ್ ಬಾಸ್ ಸೀಸನ್ 11ರಲ್ಲಿ ಹನುಮಂತ ವಿನ್ನರ್ ಆಗಿ ಹೊರಹೊಮ್ಮಿದ್ರೆ, ತ್ರಿವಿಕ್ರಮ್ ರನ್ನರ್ ಅಪ್ ಆಗಿದ್ದಾರೆ. ಇನ್ನು ಬಿಗ್ ಬಾಸ್ 11ರ ಶೋಗೆ ವೈಲ್ಡ್ ಕಾರ್ಡ್ ಸ್ಪರ್ಧಿಯಾಗಿ ಬಂದಿದ್ದ ರಜತ್ ಅವರು ಮನೆಯಲ್ಲಿ ವೈಲ್ಡ್ ಆಗಿ ಆಟ ಆಡಿ ಸೆಕೆಂಡ್ ರನ್ನರ್ ಅಪ್ ಪಟ್ಟ ಸ್ವೀಕರಿಸಿದ್ದಾರೆ.‌ ಇದನ್ನೂ ಓದಿ: BBK 11: ಹನುಮಂತ ಟ್ರೋಫಿ ಗೆದ್ದಿರೋದು ಖುಷಿಯಿದೆ- ತ್ರಿವಿಕ್ರಮ್‌ ರಿಯಾಕ್ಷನ್‌

  • BBK 11: ಹನುಮಂತ ಪ್ರೊಫೆಷನಲ್ ಕಿಲಾಡಿ: ತಿವಿದ ರಜತ್

    BBK 11: ಹನುಮಂತ ಪ್ರೊಫೆಷನಲ್ ಕಿಲಾಡಿ: ತಿವಿದ ರಜತ್

    ‘ಬಿಗ್ ಬಾಸ್ ಕನ್ನಡ 11ರ’ (Bigg Boss Kannada 11) ಆಟದಲ್ಲಿ ಒಬ್ಬೊಬ್ಬರೇ ಮನೆ ಖಾಲಿ ಮಾಡುತ್ತಿದ್ದಾರೆ. ಕಳೆದ ವಾರ ಶೋಭಾ ಶೆಟ್ಟಿ ಹೋಗಿದ್ದರು. ಇವರ ಬೆನ್ನಲ್ಲೇ ಈ ವಾರ ಹೊರಗಡೆ ಹೋಗುವುದು ಯಾರು ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ. ಇದೆಲ್ಲದರ ನಡುವೆ ಮನೆಯ ಟಿಆರ್‌ಪಿ ಸ್ಪರ್ಧಿ ಯಾರು? ಎಂಬ ಪ್ರಶ್ನೆಯನ್ನು ಮನೆ ಮಂದಿಗೆ ಸುದೀಪ್ (Sudeep) ಭಾನುವಾರ ಎಪಿಸೋಡ್‌ನಲ್ಲಿ ಕೇಳಿದ್ದಾರೆ. ಇದರ ಪ್ರೋಮೋವನ್ನು ವಾಹಿನಿ ಹಂಚಿಕೊಂಡಿದೆ. ಈ ವೇಳೆ, ಹನುಮಂತ, ಸುರೇಶ್ ವಿರುದ್ಧ ರಜತ್ ತಿರುಗಿಬಿದ್ದಿದ್ದಾರೆ. ಇದನ್ನೂ ಓದಿ:ಶ್ರೀಲೀಲಾಗೆ ಮದುವೆ ಮಾಡುವ ಜವಾಬ್ದಾರಿ ನನ್ನದು: ಬಾಲಯ್ಯ

    ಸುದೀಪ್ ಅವರ ಸೂಪರ್ ಸಂಡೇಯ ವಿಡಿಯೋ ರಿಲೀಸ್ ಮಾಡಲಾಗಿದ್ದು, ಗೋಲ್ಡ್ ಸುರೇಶ್ ಹಾಗೂ ರಜತ್ ನಡುವೆ ಮಾತಿನ ಸಮರ ನಡೆದಿದೆ. ಸುದೀಪ್ ಮುಂದೆ ಇಬ್ಬರು ಒಬ್ಬರ ಮೇಲೆ ಒಬ್ಬರು ದೂರು ಹೇಳಿದ್ದಾರೆ. ಹನುಮಂತ (Hanumantha) ಮೇಲೆ ಎರಗಿದ್ದ ರಜತ್ ಅವರು ನಂತರ ಗೋಲ್ಡ್ ಸುರೇಶ್ ಮೇಲೆಯೂ ದೂರುಗಳನ್ನ ಹೇಳಿದ್ದಾರೆ. ಹನುಮಂತು ಪ್ರೊಫೆಷನಲ್ ಕಿಲಾಡಿ, ಎಲ್ಲ ಗೊತ್ತು, ಆದರೆ ಗೊತ್ತಿಲ್ಲ ಎನ್ನುವಂತೆ ಇರುತ್ತಾರೆ ಎಂದಿದ್ದರು. ಇದಾದ ಮೇಲೆ ರಜತ್ ಅವರ ಫೋಟೋ ತೆಗೆದುಕೊಂಡು ಗೋಲ್ಡ್ ಸುರೇಶ್ 2ನೇ ಸ್ಥಾನಕ್ಕೆ ಇಡುತ್ತಾರೆ. ಇದಕ್ಕೆ ಸುದೀಪ್ ಯಾಕೆ ಎಂದು ಗೋಲ್ಡ್ ಸುರೇಶ್‌ರನ್ನ ಪ್ರಶ್ನಿಸುತ್ತಾರೆ.

    ಆಗ ಮನೆಗೆ ಬಂದು 3 ವಾರ ಕಳೆದರೂ ರಜತ್ ಅಷ್ಟೇನು ಕೊಡುಗೆ ಕೊಟ್ಟಿಲ್ಲ ಎಂದು ಸುರೇಶ್ ಹೇಳಿದ್ದಾರೆ. ಇದಾದ ಮೇಲೆ ರಜತ್, ಫಸ್ಟ್ ಜಗಳ ಆಗಿದ್ದಕ್ಕೆ ಗಾಬರಿ ಬಿದ್ದು ಹೋಗಿ ಡೋರ್ ಬಡೆದವರು ಟಾಸ್ಕ್ ಬಿಟ್ಟು ಮತ್ತೆ ಏನೂ ಕೂಡ ಅವರ ಕೊಡುಗೆ ಕಾಣಿಸಿಲ್ಲ. ಅವರು ಹೆಂಗೇ ಕೊಡುತ್ತಾರೋ ನಾವು ಹಂಗೆ ಕೊಡುತ್ತೇವೆ. ನಾವು ಒಳ್ಳೆಯ ಮನುಷ್ಯರಲ್ಲ, ನಾವು ಕೆಟ್ಟೋರೇ ಎಂದು ಗೋಲ್ಡ್ ಸುರೇಶ್ ವಿರುದ್ಧ ಗುಡುಗಿದ್ದಾರೆ. ಈ ಮೂಲಕ ಸುರೇಶ್‌ಗೆ ರಜತ್‌ (Rajath) ಟಾಂಗ್ ಕೊಟ್ಟಿದ್ದಾರೆ.

  • BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    BBK 11: ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ- ಅವಾಚ್ಯ ಪದ ಬಳಸಿದ ರಜತ್‌ಗೆ ಕಿಚ್ಚನ ಕ್ಲಾಸ್

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್’ (Bigg Boss Kannada 11) ಆಟ ಶುರುವಾಗಿ 55 ದಿನಗಳನ್ನು ಪೂರೈಸಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳು ಆಗಮಿಸಿದ್ಮೇಲೆ ಆಟ ಮತ್ತಷ್ಟು ರೋಚಕವಾಗಿದೆ. ಗೋಲ್ಡ್ ಸುರೇಶ್‌ಗೆ (Gold Suresh) ಅವಾಚ್ಯ ಪದ ಬಳಸಿದ್ದ ರಜತ್ ಕಿಶನ್‌ಗೆ ಸುದೀಪ್ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸೋಶಿಯಲ್ ಮೀಡಿಯಾದಲ್ಲಿ ವಾಹಿನಿ ಹಂಚಿಕೊಂಡಿರುವ ಪ್ರೋಮೋದಲ್ಲಿ ಸುದೀಪ್ ಅವರು ರಜತ್‌ಗೆ ಕನ್ನಡದಲ್ಲಿ ತುಂಬಾ ಪದಗಳಿವೆ. ನಿಮ್ಮೆಲ್ಲರಿಗೂ ತೂಕಗಳಿವೆ ಎಂದ ಸುದೀಪ್ (Sudeep) ಮಾತಿಗೆ ಸುರೇಶ್ ಅವರು ಎದೆಗೆ ಕೊಟ್ರೋ ಅದನ್ನು ನನಗೆ ತಡೆದುಕೊಳ್ಳಲು ಆಗಲಿಲ್ಲ. ಆ ಪದಗಳೆಲ್ಲವೂ ಮಾತಿನ ಭರದಲ್ಲಿ ಬಂತು ಎಂದು ರಜತ್ ಸಮಜಾಯಿಸಿ ಕೊಡುತ್ತಾರೆ.

    ನನಗೆ ಕೋಪ ಬಂದಾಗ ಇಂತಹದ್ದೇ ಬಾಯಲ್ಲಿ ಬರೋದು ಅಂತೀರಾ. ಇದೀಗ ಆ ಮಾತುಗಳನ್ನೆಲ್ಲ ನನ್ನ ಮುಂದೆ ವಾಪಸ್ ರಿಪೀಟ್ ಮಾಡಿ. ಯಾಕೆ ಅದನ್ನ ಈಗ ಹೇಳಲು ಆಗುತ್ತಿಲ್ಲ ಎಂದು ಸುದೀಪ್ ಖಡಕ್ ಆಗಿ ಪ್ರಶ್ನೆ ಮಾಡಿದರು. ಇದನ್ನೂ ಓದಿ:‘ಪುಷ್ಪ 2’ ಸಾಂಗ್ ರಿಲೀಸ್‌ಗೂ ಮುನ್ನ ವಾರಣಾಸಿಗೆ ಶ್ರೀಲೀಲಾ ಭೇಟಿ

    ಆಗ ರಜತ್ ಅವರು ಇನ್ನೊಂದು ಸಲ ಆ ತಪ್ಪನ್ನು ರಿಪೀಟ್ ಮಾಡಲ್ಲ ಎಂದಿದ್ದಾರೆ. ಆಗ ಸುದೀಪ್ ಅವರು ನಗುತ್ತಾ, ಮುಂದೆ ತಪ್ಪು ಆದರೆ ಮನೆಯಲ್ಲಿ ಒಂದು ಬಾಗಿಲು ಇದೆ ಹೊರಗಡೆ ಹೋಗೋಕೆ ಎಂದು ಹೇಳಿದ್ದಾರೆ. ಈ ಮೂಲಕ ಕಡೆಯದಾಗಿ ರಜತ್‌ಗೆ ಸುದೀಪ್ ವಾರ್ನಿಂಗ್ ಕೊಟ್ಟಿದ್ದಾರೆ.

    ನ.20ರ ಎಪಿಸೋಡ್‌ನಲ್ಲಿ ಟಾಸ್ಕ್ ಆಡುವಾಗ ಬೀಪ್ ಪದಗಳನ್ನೇ ಸುರೇಶ್‌ಗೆ ಬಳಕೆ ಮಾಡಿದರು. ರಜತ್ ಆಡಿದ ಮಾತಿಗೆ ಸುರೇಶ್ ಬಿಗ್ ಬಾಸ್ ಆಟವನ್ನು ಕ್ವೀಟ್ ಮಾಡುತ್ತೇನೆ. ಇಲ್ಲಿಂದ ನನ್ನನ್ನು ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು. ಹಾಗಾಗಿ ಇಂದು ಕಿಚ್ಚನ ಪಂಚಾಯಿತಿಯಲ್ಲಿ ಸುದೀಪ್ ರಜತ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

  • BBK 11: ಅವಾಚ್ಯ ಪದ ಬಳಸಿದ ರಜತ್‌ಗೆ ಕಳಪೆ ಪಟ್ಟ- ಇನ್ಮುಂದೆ ಆಟ ಶುರು ಎಂದ ಸ್ಪರ್ಧಿ

    BBK 11: ಅವಾಚ್ಯ ಪದ ಬಳಸಿದ ರಜತ್‌ಗೆ ಕಳಪೆ ಪಟ್ಟ- ಇನ್ಮುಂದೆ ಆಟ ಶುರು ಎಂದ ಸ್ಪರ್ಧಿ

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ದಿನದಿಂದ ದಿನಕ್ಕೆ ರಂಗೇರುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾದ ಶೋಭಾ ಮತ್ತು ರಜತ್ ಹಾವಳಿ ಜೋರಾಗಿದೆ. ಹೀಗಿರುವಾಗ ದೊಡ್ಮನೆಯಲ್ಲಿ ರಜತ್ ಕಿಶನ್‌ಗೆ (Rajath Kishen) ಕಳಪೆ ಪಟ್ಟ ಸಿಕ್ಕಿದೆ. ಅದಕ್ಕೆ ಗರಂ ಆಗಿರುವ ರಜತ್, ಇನ್ಮುಂದೆ ಅಸಲಿ ಶುರು ಅಂತ ಸವಾಲೆಸೆದಿದ್ದಾರೆ. ಇದನ್ನೂ ಓದಿ:ಸರಳವಾಗಿ ನಡೆಯಿತು ರಕ್ಷಿತಾ ಪ್ರೇಮ್ ಸಹೋದರನ ನಿಶ್ಚಿತಾರ್ಥ

    ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟು ಒಂದು ವಾರ ಕಳೆದಿದೆ. ರಜತ್ ಆಟಕ್ಕೆ ಆಡುವ ಮಾತಿಗೆ ಇಡೀ ಮನೆ ಅವರ ವಿರುದ್ಧ ತಿರುಗಿ ಬಿದ್ದಿದೆ. ಈ ವಾರದ ಉತ್ತಮ ಸ್ಪರ್ಧಿ ಮತ್ತು ಕಳಪೆ ಪ್ರದರ್ಶನ ಆಡಿದವರಿಗೆ ಹೆಸರನ್ನು ಸೂಚಿಸಲು ಎಂದಿನಂತೆ ಬಿಗ್ ಬಾಸ್ ಸೂಚಿಸಿದರು. ಅದರಂತೆ ಇಡೀ ಮನೆ ಮಂದಿ ರಜತ್ ಹೆಸರನ್ನು ಹೇಳಿದ್ದಾರೆ.

    ಗೋಲ್ಡ್ ಸುರೇಶ್‌ಗೆ (Gold Suresh) ಅವಾಚ್ಯ ಪದಗಳಿಂದ ನಿಂದಿಸಿದ ಕಾರಣ ಕೊಟ್ಟು ರಜತ್‌ಗೆ ಕಳಪೆ ಪಟ್ಟ ನೀಡಿದ್ದಾರೆ. ಇದು ರಜತ್‌ಗೆ ಕೋಪಕ್ಕೆ ಕಾರಣವಾಗಿದೆ. ಹುಡುಗಿಯರ ಕೈ ಹಿಡಿದುಕೊಂಡು ಓಡಾಡಿದಷ್ಟು ಸುಲಭವಲ್ಲ. ಬಿಗ್ ಬಾಸ್ ಆಟ ಗೆಲ್ಲೋದು. ಹುಟ್ಟಿದಾಗನಿಂದಲೂ ಹೀಗೆ ಇದ್ದೀನಿ. ಇನ್ಮುಂದೆ ಕೂಡ ಹೀಗೆ ಇರುತ್ತೇನೆ. ಇನ್ಮುಂದೆ ಇದಕ್ಕಿಂತ ಮೂರು ಪಟ್ಟು ಹೆಚ್ಚು ಮಾತನಾಡುತ್ತೇನೆ. ಇನ್ಮುಂದೆ ನಿಜವಾದ ಆಟ ಶುರು ಎಂದು ರಜತ್ ಮನೆ ಮಂದಿಗೆ ಸವಾಲೆಸೆದಿದ್ದಾರೆ.

    ಇನ್ನೂ ನ.20ರ ಸಂಚಿಕೆಯಲ್ಲಿ ಟಾಸ್ಕ್ ಆಡುವಾಗ ರಜತ್ ಮತ್ತು ಗೋಲ್ಡ್ ಸುರೇಶ್ (Gold Suresh) ನಡುವೆ ಕಿರಿಕ್ ಆಗಿದೆ. ಈ ವೇಳೆ, ಅವಾಚ್ಯ ಶಬ್ಧಗಳಿಂದ ಸುರೇಶ್‌ಗೆ ರಜತ್ ನಿಂದಿಸಿದ್ದಾರೆ. ಇದರಿಂದ ಸುರೇಶ್‌ಗೆ ಬೇಸರವಾಗಿತ್ತು. ಬಿಗ್ ಬಾಸ್‌ನಿಂದ ಹೊರ ಹೋಗಲು ಅವರು ಬಿಗ್ ಬಾಸ್‌ಗೆ ಮನವಿ ಮಾಡಿದರು.

  • ದೊಡ್ಮನೆಯಲ್ಲಿ ಯಾರು ಸ್ಟ್ರಾಂಗ್, ಯಾರು ವೀಕ್?- ಮಂಜು, ರಜತ್ ನಡುವೆ ಬಿಗ್ ಫೈಟ್

    ದೊಡ್ಮನೆಯಲ್ಲಿ ಯಾರು ಸ್ಟ್ರಾಂಗ್, ಯಾರು ವೀಕ್?- ಮಂಜು, ರಜತ್ ನಡುವೆ ಬಿಗ್ ಫೈಟ್

    ದೊಡ್ಮನೆ ಆಟ 50 ದಿನಗಳನ್ನು ಪೂರೈಸಿ ಮುನ್ನುಗ್ಗುತ್ತಿದೆ. ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ, ರಜತ್ ಎಂಟ್ರಿ ಕೊಟ್ಟಿದ್ದಾರೆ. ಇದೀಗ ದೊಡ್ಮನೆಯಲ್ಲಿ ರಜತ್ (Rajath Kishen) ರಾಂಗ್ ಆಗಿದ್ದಾರೆ. ಉಗ್ರಂ ಮಂಜು ಅವರು ರಜತ್ ಮೇಲೆ ಸಿಡಿದೆದ್ದಿದ್ದಾರೆ.‌ ಬಿಗ್‌ ಬಾಸ್‌ಯಲ್ಲಿ ಯಾರು ಸ್ಟ್ರಾಂಗ್‌, ಯಾರು ವೀಕ್?‌ ಎಂಬ ವಿಚಾರಕ್ಕೆ ಮಂಜು (Ugramm Manju) ಮತ್ತು ರಜತ್‌ ನಡುವೆ ಕಿತ್ತಾಟ ನಡೆದಿದೆ. ಇದನ್ನೂ ಓದಿ:ಸಲ್ಮಾನ್ ಖಾನ್ ಜೊತೆ ಈದ್, ಹೋಳಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ ರಶ್ಮಿಕಾ

    ವೈಲ್ಡ್ ಕಾರ್ಡ್ ಸ್ಪರ್ಧಿಗಳು ಎಂಟ್ರಿ ಆದ ಮೇಲೆ ‘ಬಿಗ್ ಬಾಸ್’ ಮನೆಯ ಅಸಲಿ ಆಟ ಶುರುವಾಗಿದೆ. ಈ ವಾರ ಬಿಗ್ ಬಾಸ್ ಮನೆಯ ಸದಸ್ಯರಿಗೆ ಫಿಸಿಕಲ್ ಟಾಸ್ಕ್ ಕೊಟ್ಟಿದ್ದು, ಗೆಲ್ಲೋ ಕಿಚ್ಚು ಹೆಚ್ಚಾಗಿದೆ. ಕೊಳವೆ ಮೂಲಕ ಬರುವ ಚೆಂಡನ್ನು ತೆಗೆದುಕೊಂಡು ಹೋಗುವ ಟಾಸ್ಕ್‌ನಲ್ಲಿ ಗೋಲ್ಡ್ ಸುರೇಶ್ ಹಾಗೂ ರಜತ್ ಅವರ ಮಧ್ಯೆ ಜಗಳ ನಡೆದಿತ್ತು. ರಜತ್ ಮೇಲೆ ಕೂಗಾಡಿದ ಸುರೇಶ್ (Gold Suresh) ಅವರು ಬಿಗ್ ಬಾಸ್ ಮನೆ ಬಿಟ್ಟು ಹೋಗಲು ನಿರ್ಧಾರ ಮಾಡಿದ್ದರು.

    ಸುರೇಶ್ ಅವರ ಬಳಿಕ ರಜತ್ ಮತ್ತು ಮಂಜು ನಡುವೆ ವಾಕ್ಸಮರ ನಡೆದಿದೆ. ಟಾಸ್ಕ್‌ ಮಧ್ಯೆ ರಜತ್ ಅವರು ನಾನು, ತ್ರಿವಿಕ್ರಮ್ (Trivikram) ಒಂದೇ ಟೀಮ್‌ನಲ್ಲಿ ಇದ್ದರೆ ಎದುರಾಳಿ ತಂಡ ಸ್ವಲ್ಪ ವೀಕ್ ಆಗುತ್ತೆ ಎಂದಿದ್ದಾರೆ. ರಜತ್ ಅವರ ಈ ಮಾತು ಮಂಜು ಅವರನ್ನು ಕೆರಳುವಂತೆ ಮಾಡಿದೆ. ಯಾವ ನನ್ಮಗ ಇಲ್ಲ ಅಂತಾನೆ. ಫಿಸಿಕಲ್ ಕೊಟ್ಟರೆ ನಾವು ಸ್ಟ್ರಾಂಗ್. ನಾವು ಮಾತನಾಡಿದ್ರೆ, ಉರಿ ಕಿತ್ತುಕೊಂಡು ಬಿಟ್ಟಿತು ಎಂದು ಮಂಜುಗೆ ರಜತ್ ತಿರುಗೇಟು ನೀಡಿದ್ದಾರೆ.

    ನೀವು, ತ್ರಿವಿಕ್ರಮ್ ಇಬ್ಬರು ಒಂದೇ ಟೀಮ್‌ನಲ್ಲಿ ಇದ್ದರೆ ನಾವೆಲ್ಲಾ ವೀಕ್ ಅಂತಾನ ಎಂದು ರಜತ್‌ಗೆ ಮಂಜು ಪ್ರಶ್ನಿಸಿದ್ದಾರೆ. ಹಾಗಾದ್ರೆ ಇಬ್ಬರು ಒಂದೇ ಟೀಮ್‌ಗೆ ಹೋಗಿ ಗುರು. ಜೋರಾಗಿ ಮಾತಾಡಬೇಡ, ನನಗೂ ಬರುತ್ತದೆ ಎಂದು ನೇರವಾಗಿ ಯುದ್ಧಕ್ಕೆ ನಿಂತಿದ್ದಾರೆ ರಜತ್. ಬಿಗ್ ಬಾಸ್ ಮನೆಯಲ್ಲಿ ತ್ರಿವಿಕ್ರಮ್, ಮಂಜು ಮಧ್ಯೆ ನಡೆಯುತ್ತಿದ್ದ ಫೈಟ್‌ನಲ್ಲಿ ರಜತ್ ಅವರು ಎಂಟ್ರಿಯಾಗಿದ್ದಾರೆ. ಒಟ್ನಲ್ಲಿ ವಾರಾಂತ್ಯದ ನಾಮಿನೇಷನ್‌ನಲ್ಲಿ ಯಾರು ವೀಕ್, ಯಾರು ಸ್ಟ್ರಾಂಗ್? ಎಂಬುದಕ್ಕೆ ಉತ್ತರ ಸಿಗಲಿದೆ.

  • ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ‘ಗುಗ್ಗು ನನ್ನ ಮಗ’ ಎಂದ ರಜತ್- Bigg Boss ಡೋರ್ ಓಪನ್ ಮಾಡಿ ಎಂದು ಪಟ್ಟು ಹಿಡಿದ ಸುರೇಶ್

    ಬಿಗ್ ಬಾಸ್‌ಗೆ (Bigg Boss Kannada 11)  ಶೋಭಾ (Shobha Shetty) ಮತ್ತು ರಜತ್ (Rajath) ವೈಲ್ಡ್ ಕಾರ್ಡ್ ಎಂಟ್ರಿ ಬೆನ್ನಲ್ಲೇ ಸ್ಪರ್ಧಿಗಳ ನಡುವಿನ ಫೈಟ್ ಇನ್ನೊಂದು ಹಂತಕ್ಕೆ ತಲುಪಿದೆ. ವೈಲ್ಡ್ ಕಾರ್ಡ್ ಸ್ಪರ್ಧಿ ರಜತ್ ಟಾಸ್ಕ್ ಆಡುವಾಗ ಗೋಲ್ಡ್ ಸುರೇಶ್‌ಗೆ ಅವಮಾನಿಸಿದ್ದಾರೆ. ಅದಕ್ಕೆ ತಾವು ಆಟ ಆಡಲ್ಲ. ಬಾಗಿಲು ತೆಗಿಯಿರಿ ಎಂದು ಬಿಗ್ ಬಾಸ್ ಬಳಿ ಸುರೇಶ್ ಮನವಿ ಮಾಡಿಕೊಂಡಿದ್ದಾರೆ.

    ಇಂದಿನ ಸಂಚಿಕೆಯಲ್ಲಿ ‘ಬಿಗ್ ಬಾಸ್’ ಟಾಸ್ಕ್ ಒಂದನ್ನು ನೀಡಿದ್ದಾರೆ. ಕೊಳವೆ ಮೂಲಕ ಬರುವ ಚೆಂಡನ್ನು ಎತ್ತಿಕೊಂಡು ತಮ್ಮ ತಂಡಕ್ಕೆ ಇರುವ ಮೀಸಲಿರುವ ಚೌಕಟ್ಟಿನಲ್ಲಿ ಇಡಬೇಕು ಎಂದು ‘ಬಿಗ್ ಬಾಸ್’ ಆಟದ ನಿಯಮದಲ್ಲಿತ್ತು. ಈ ಟಾಸ್ಕ್‌ನಲ್ಲಿ ರಜತ್ ಮತ್ತು ಗೋಲ್ಡ್ ಸುರೇಶ್ (Gold Suresh) ನಡುವೆ ಬಿಗ್ ಫೈಟ್ ನಡೆದಿದೆ. ಇದನ್ನೂ ಓದಿ:ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು: ಡಿವೋರ್ಸ್ ಬಗ್ಗೆ ಎ.ಆರ್. ರೆಹಮಾನ್ ರಿಯಾಕ್ಷನ್

    ಅಂತೆಯೇ ಆಟ ಆರಂಭವಾಗಿದೆ. ಈ ವೇಳೆ, ಗೋಲ್ಡ್ ಸುರೇಶ್ ಜೊತೆ ಉಗ್ರಂ ಮಂಜು (Ugramm Manju) ಮಾತುಕತೆ ನಡೆಸುತ್ತಿರುತ್ತಾರೆ. ಇಬ್ಬರ ನಡುವಿನ ವಾಗ್ವಾದಕ್ಕೆ ರಜತ್ ಎಂಟ್ರಿಯಾಗಿ ಕೆಲವು ಪದಗಳನ್ನು ಗೋಲ್ಡ್ ಸುರೇಶ್‌ಗೆ ಬಳಸಿದ್ದಾರೆ. ಗುಗ್ಗು ನನ್ನ ಮಗ, ವೇಸ್ಟ್ ನನ್ನ ಮಗ ಎಂಬ ಪದಗಳನ್ನು ರಜತ್ ಬಳಸಿ ಸುರೇಶ್‌ಗೆ ಕೌಂಟರ್ ಕೊಟ್ಟಿದ್ದಾರೆ. ತಮ್ಮ ಮೇಲೆ ಬಳಕೆ ಆಗಿರುವ ಪದಗಳು ನಿಂದಿಸಿರುವ ರೀತಿ ನನಗೆ ಬೇಸರ ಆಗಿದೆ. ಬಿಗ್ ಬಾಸ್ ಅವರು ನನಗೆ ಮಗನೆ, ಗಿಗನೆ ಎಂದೆಲ್ಲ ಹೇಳ್ತಾರೆ. ಇವನು ನನ್ನ ಅಪ್ಪ ಅಲ್ಲ. ಬಿಗ್ ಬಾಸ್ ನಾನು ಆಟ ಆಡಲ್ಲ. ಬಿಗ್ ಬಾಸ್ ಬಾಗಿಲು ಓಪನ್ ಮಾಡಿ ಎಂದು ಡೋರ್ ತಟ್ಟಿದ್ದಾರೆ. ಸುರೇಶ್‌ಗೆ ಶಿಶಿರ್‌, ಮೋಕ್ಷಿತಾ ಅದೆಷ್ಟೇ ಸಮಾಧಾನ ಮಾಡಿದರು ಕೇಳೋ ಪರಿಸ್ಥತಿಯಲ್ಲಿ ಅವರಿಲ್ಲ.

    ಈ ಪ್ರೋಮೋ ನೋಡಿ ವೀಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಎಪಿಸೋಡ್‌ಗಾಗಿ ಅಭಿಮಾನಿಗಳು ಎದುರು ನೋಡಿದ್ದಾರೆ. ದೊಡ್ಮನೆಗೆ ಬರುತ್ತಿದ್ದಂತೆಯೇ ವೈಲ್ಡ್ ಕಾರ್ಡ್ ಸ್ಪರ್ಧಿಗಳು ವೈಲ್ಡ್ ಆಗಿ ಆಟ ಆಡುತ್ತಿದ್ದಾರೆ.

  • BBK 11: ಫೈರ್‌ ಲೇಡಿ ಶೋಭಾ ಶೆಟ್ಟಿ ಅಬ್ಬರಕ್ಕೆ ದಂಗಾದ ಉಗ್ರಂ ಮಂಜು

    BBK 11: ಫೈರ್‌ ಲೇಡಿ ಶೋಭಾ ಶೆಟ್ಟಿ ಅಬ್ಬರಕ್ಕೆ ದಂಗಾದ ಉಗ್ರಂ ಮಂಜು

    ‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇದೀಗ 50 ದಿನ ಪೂರೈಸಿ ಮುನ್ನುಗ್ಗುತ್ತಿದೆ. ಈ ಸಂದರ್ಭದಲ್ಲಿ ವೈಲ್ಡ್ ಕಾರ್ಡ್ ಸ್ಪರ್ಧಿಗಳಾಗಿ ಶೋಭಾ ಶೆಟ್ಟಿ (Shobha Shetty) ಮತ್ತು ರಜತ್ (Rajath) ಎಂಟ್ರಿ ಕೊಟ್ಟಿದ್ದಾರೆ. ಮನೆಯಲ್ಲಿ ಈಗ ಅಸಲಿ ಆಟ ಶುರುವಾಗಿದೆ. ಇದರ ನಡುವೆ ಕ್ಯಾಪ್ಟನ್ಸಿ ರೇಸ್‌ನಲ್ಲಿ ನಿಲ್ಲಲು ಶೋಭಾ ಅನರ್ಹ ಎಂಬ ವಿಚಾರಕ್ಕೆ ನಟಿ ಮತ್ತು ಮಂಜು ನಡುವೆ ವಾಕ್ಸಮರ ನಡೆದಿದೆ. ಈ ವೇಳೆ, ಶೋಭಾ ಅರ್ಭಟಕ್ಕೆ ಉಗ್ರಂ ಮಂಜು ಸೈಲೆಂಟ್ ಆಗಿದ್ದಾರೆ.

    ವೈಲ್ಡ್ ಕಾರ್ಡ್ ಎಂಟ್ರಿಯಾದ ರಜತ್ ಹಾಗೂ ಶೋಭಾ ಅವರ ಪೈಕಿ ಈ ಮನೆಯ ಕ್ಯಾಪ್ಟನ್ ಆಗಲು ಯಾರು ಅನರ್ಹರು ಎಂದು ಹೇಳುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಇಂದು ಬಿಗ್ ಬಾಸ್ ಮನೆಯ ಸದಸ್ಯರು ಶೋಭಾ ಹಾಗೂ ರಜತ್ ಅವರ ಪೈಕಿ ತಂಡದ ನಾಯಕರಾಗಲು ಯಾರು ಅನರ್ಹರು ಎಂದು ಸ್ಪರ್ಧಿಗಳು ಆಯ್ಕೆ ಮಾಡಬೇಕಿತ್ತು. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ಹರಿಪ್ರಿಯಾ

    ಆಗ ರೂಲ್ಸ್ ಅಂಡ್ ರೆಗ್ಯೂಲೇಷನ್ ಏನು ಇರುತ್ತೋ ಅದನ್ನ ಎಲ್ಲೋ ಅಲ್ಲಾಡ್ಸಿದ್ದು ಶೋಭಾ ಅವರು ಎಂದು ಉಗ್ರಂ ಮಂಜು ರಾಂಗ್ ಆಗಿದ್ದಾರೆ. ಮಂಜು ಆಡಿದ ಮಾತಿಗೆ ಶೋಭಾ ಕೆರಳಿ ಕೆಂಡವಾಗಿದ್ದಾರೆ. ಅಲ್ಲಾಡ್ಸೋದು ಗಿಲ್ಲಾಡ್ಸೋದು ಅಂದ್ರೆ ಏನು? ಇವರಿಗೆ ಕ್ಲ್ಯಾರಿಟಿಯೇ ಇಲ್ಲ ಎಂದು ಶೋಭಾ ಗುಡುಗಿದ್ದಾರೆ. ಸೂಕ್ತ ಕಾರಣ ಕೊಡುತ್ತಾ ಇಲ್ಲ. ಆಡುವ ಮಾತಿನಲ್ಲಿ ಕ್ಲ್ಯಾರಿಟಿ ಇಲ್ಲ ಎಂದಿದ್ದಾರೆ ಶೋಭಾ.

    ಕ್ಲ್ಯಾರಿಟಿಯಿಂದಲೇ ಹೇಳುತ್ತಾ ಇದ್ದೀನಿ ಕಿರುಚಬೇಡಿ ಎಂದು ಮಂಜು ತಿರುಗೇಟು ನೀಡಿದ್ದಾರೆ. ನನ್ನ ಮಾತು ಕೇಳಿಸಿಕೊಳ್ಳಿ, ಮರ್ಯಾದೆ ಕಳೆದುಕೊಳ್ಳಬೇಡಿ ಎಂದು ಮಂಜು ಮೇಲೆ ಶೋಭಾ ಗುಡುಗಿದ್ದಾರೆ. ಶೋಭಾ ಅವರ ಕೂಗಾಟಕ್ಕೆ ಉಗ್ರಂ ಮಂಜು ಕೂಡ ಒಂದು ಕ್ಷಣ ಸೈಲೆಂಟ್ ಆಗಿದ್ದಾರೆ. ಇವರ ವಾಕ್ಸಮರ ನೋಡಿ ಮನೆ ಮಂದಿ ಸೈಲೆಂಟ್‌ ಆಗಿದ್ದಾರೆ. ದೊಡ್ಮನೆಯಲ್ಲಿ ಸದ್ಯ ವೈಲ್ಡ್‌ ಕಾರ್ಡ್‌ ಸ್ಪರ್ಧಿ ಶೋಭಾ ಹವಾ ಜೋರಾಗಿದೆ. ಇನ್ಮೇಲೆ ಅವರ ಆಟ ಹೇಗಿರುತ್ತದೆ ಎಂದು ಕಾದುನೋಡಬೇಕಿದೆ.