Tag: ರಚಿತಾ ರಾಮ್

  • ಅದ್ದೂರಿ ಸೆಟ್ ನಲ್ಲಿ ಮೂಡಿ ಬಂತು ‘ಸಂಜು-ಗೀತಾ’ ಸಾಂಗ್

    ಅದ್ದೂರಿ ಸೆಟ್ ನಲ್ಲಿ ಮೂಡಿ ಬಂತು ‘ಸಂಜು-ಗೀತಾ’ ಸಾಂಗ್

    ಒಂದು ಪ್ರೇಮಕಥೆ ಎಂದರೆ ಅಲ್ಲಿ ಖುಷಿ, ತ್ಯಾಗದ ಜೊತೆಗೆ ಕಾಡುವ ಕಥೆ ಇರಬೇಕು. ಇದನ್ನು ಅಚ್ಚುಕಟ್ಟಾಗಿ ತೆರೆಮೇಲೆ ತಂದವರು ನಿರ್ದೇಶಕ ನಾಗಶೇಖರ್.  ಅದಕ್ಕೆ  ಮೈನಾ, ಸಂಜು ವೆಡ್ಸ್ ಗೀತಾಗಿಂತ ಉದಾಹರಣೆ ಬೇಕಿಲ್ಲ.  ಈಗ ಹೊಸ ಸಂಜು ಹಾಗೂ ಗೀತಾರ (Sanju Weds Geetha 2) ನವೀನ ಪ್ರೇಮಕಥೆಯನ್ನು ನಾಗಶೇಖರ್  ಹೇಳಹೊರಟಿದ್ದಾರೆ. ಶ್ರೀನಗರ ಕಿಟ್ಟಿ (Srinagar Kitty) ಜೊತೆ  ರಮ್ಯಾ ಬದಲು ರಚಿತಾ ರಾಮ್  (Rachita Ram)ಬಂದಿದ್ದಾರೆ.

    ರೇಷ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಾವ್ಯವಿದು. ಸದ್ಯ ಚಿತ್ರದ ಬಹುತೇಕ  ಚಿತ್ರೀಕರಣ, ಎಡಿಟಿಂಗ್ ಮುಗಿದಿದ್ದು ಲೂಪ್ ಸ್ಟುಡಿಯೋದಲ್ಲಿ ಡಬ್ಬಿಂಗ್  ಕಾರ್ಯ ನಡೆದಿದೆ. ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಮೂರನೇ ಹಂತದ ಚಿತ್ರೀಕರಣ ಮುಗಿಸಿದ್ದು, ಈಗ  ನಾಲ್ಕನೇ ಹಂತದ ಚಿತ್ರೀಕರಣ ಶುರುವಾಗಿದೆ. ಕುಣಿಗಲ್ ನಲ್ಲಿ  ಅದ್ದೂರಿ ಹಾಡೊಂದರ ಶೂಟಿಂಗ್ ನಡೆದಿದೆ.

    ಈ ಹಾಡು, ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳ ಕಾಲ  ಪ್ರಮುಖವಾದ  ಕಲರ್ ಫುಲ್  ಹಾಡಿನ  ಚಿತ್ರೀಕರಣ ನಡೆಸಲಾಯಿತು. ತುಂಬಾ ಅದ್ದೂರಿಯಾಗಿ ಮೂಡಿ ಬಂದಿರುವ ಈ ಹಾಡಿಗೆ ಸುಮಾರು 45 ರಿಂದ 50 ಲಕ್ಷ ರೂ. ವರೆಗೆ ಖರ್ಚು  ಮಾಡಲಾಗಿದೆ. ಇದಲ್ಲದೆ ಉಳಿದ ಹಾಡುಗಳನ್ನೂ ಸಹ ಇನ್ನೂ ಅದ್ದೂರಿಯಾಗಿ  ಆಗಿ ಚಿತ್ರೀಕರಿಸುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಒಟ್ಟಾರೆ ಇಡೀ ಚಿತ್ರ ವೈಭವಯುತವಾಗಿ ಮೂಡಿಬರಬೇಕು. ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.

     

    ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ  ೫ ಸುಂದರವಾದ ಹಾಡುಗಳನ್ನು  ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.  ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.

  • ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್‌ ಪ್ರತಿಕ್ರಿಯೆ

    ಇಂಥ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಜನಸಾಮಾನ್ಯರ ಕೈಗೆ ಒಪ್ಪಿಸಿ: ನೇಹಾ ಕೊಲೆ ಬಗ್ಗೆ ನಟಿ ರಚಿತಾ ರಾಮ್‌ ಪ್ರತಿಕ್ರಿಯೆ

    ಬೆಂಗಳೂರು: ಹುಬ್ಬಳ್ಳಿ ನೇಹಾ ಹಿರೇಮಠ್‌ (Neha Hiremath) ಹತ್ಯೆ ಪ್ರಕರಣದ ಕುರಿತು ನಟಿ ರಚಿತಾ ರಾಮ್‌ (Rachita Ram) ಪ್ರತಿಕ್ರಿಯೆ ನೀಡಿದ್ದಾರೆ. ಕೊಲೆಗಾರನಿಗೆ ತಕ್ಕ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.

    ಪ್ರಕರಣ ಕುರಿತು ಇನ್‌ಸ್ಟಾಗ್ರಾಂ ನಲ್ಲಿ ಪೋಸ್ಟ್‌ ಹಾಕಿರುವ ರಚಿತಾ ರಾಮ್‌, ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನನ್ನ ಮಗ ತಪ್ಪು ಮಾಡಿದ್ದಾನೆ.. ಅವನಿಗೆ ಶಿಕ್ಷೆ ಆಗಲೇಬೇಕು: ಕೊಲೆಗಾರ ಫಯಾಜ್‌ ತಾಯಿ ಕಣ್ಣೀರು

     

    View this post on Instagram

     

    A post shared by Rachitaa Ram (@rachita_instaofficial)

    ಜಾತಿ, ಧರ್ಮ ಯಾವುದೇ ಆಗಿರಲಿ. ಮೊದಲು ನಾವು ಮಾನವರು. ನಾನು ಈ ಪೋಸ್ಟ್‌ ಹಾಕಲು ಕಾರಣ ಆಕೆಗೆ (ನೇಹಾ) ಆಗಿರುವ ಅನ್ಯಾಯ. ತಪ್ಪು ಯಾರೇ ಮಾಡಿದರು ತಪ್ಪೆ ಎಂದು ನಟಿ ಅಭಿಪ್ರಾಯಪಟ್ಟಿದ್ದಾರೆ.

    ಸರ್ಕಾರಕ್ಕೆ ನನ್ನ ಒಂದು ಮನವಿ! ರಾಜಕೀಯ ಆಯಾಮದಲ್ಲಿ ಈ ವಿಷಯವನ್ನು ತರಬೇಡಿ. ಆಗಿರೋದು ಅನ್ಯಾಯ. ಈಗ ನ್ಯಾಯ ಬೇಕಾಗಿದೆ ಅಷ್ಟೆ. ಈ ರೀತಿಯ ಕೃತ್ಯ ಮಾಡುವವರನ್ನು ಗಲ್ಲಿಗೇರಿಸುವ ಬದಲು ಅವರನ್ನು ಜನಸಾಮಾನ್ಯರ ಕೈಗೆ ಒಪ್ಪಿಸಿ ಎಂದು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ನೇಹಾ ಹತ್ಯೆ ಕೇಸ್ – ಎಬಿವಿಪಿಯಿಂದ ಗೃಹಸಚಿವರ ಮನೆ ಮುತ್ತಿಗೆಗೆ ಯತ್ನ

    ನಟಿ ರಚಿತಾ ರಾಮ್‌, ಕೊಲೆಯಾದ ನೇಹಾ ಹಿರೇಮಠ್‌ ಫೋಟೊ ಜೊತೆಗೆ ಈ ಪೋಸ್ಟ್‌ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೇ #wewantjustice ಎಂದು ಟ್ಯಾಗ್‌ ಕೂಡ ಹಾಕಿದ್ದಾರೆ.

  • ನಲವತ್ತರ ವಯಸ್ಸಿನ ಪಾತ್ರ ಒಪ್ಪಿಕೊಂಡ ರಚಿತಾ ರಾಮ್

    ನಲವತ್ತರ ವಯಸ್ಸಿನ ಪಾತ್ರ ಒಪ್ಪಿಕೊಂಡ ರಚಿತಾ ರಾಮ್

    ಸಂಜು ವೆಡ್ಸ್ ಗೀತಾ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ನಟಿ ರಚಿತಾ ರಾಮ್, ಈ ನಡುವೆ ದುನಿಯಾ ವಿಜಯ್ ನಟನೆಯ ಹೊಸ ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ರಚಿತಾ ಅವರದ್ದು ನಲವತ್ತರ ವಯಸ್ಸಿನ ಪಾತ್ರ ಎನ್ನುವುದು ಬಹಿರಂಗವಾಗಿದೆ. ಸದಾ ಗ್ಲಾಮ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದ ರಚ್ಚು, ಈ ಬಾರಿ ವಿಭಿನ್ನ ಪಾತ್ರವನ್ನು ಆಯ್ಕೆ ಮಾಡಿಕೊಂಡಿದ್ದಾರೆ.

    ಜಂಟಲ್ ಮ್ಯಾನ್, ಗುರುಶಿಷ್ಯರು ಚಿತ್ರಗಳ ನಿರ್ದೇಶಕ ಹಾಗೂ ಕಾಟೇರ ಚಿತ್ರದ ಲೇಖಕ ಜಡೇಶ ಕೆ ಹಂಪಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬರುತ್ತಿದ್ದು, ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಮಹಾಲಕ್ಷ್ಮೀಪುರದ ಶ್ರೀವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ ನಡೆಯಿತು. ರಚಿತಾರಾಮ್ ಈ ಚಿತ್ರದ ನಾಯಕಿಯಾಗಿ ನಟಿಸುತ್ತಿದ್ದು, ದುನಿಯಾ ವಿಜಯ್ ಪುತ್ರಿ ರಿತನ್ಯ(ಮೋನಿಕಾ) ಈ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸುತ್ತಿದ್ದಾರೆ. “ಡೇರ್ ಡೆವಿಲ್ ಮುಸ್ತಫಾ” ಖ್ಯಾತಿಯ ಶಿಶಿರ್ ಸಹ ಪ್ರಮುಖಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

    ಇದು ನಾನು ಕಂಡ, ಕೇಳಿದ ಹಾಗೂ ನೋಡಿದ ನೈಜ ಕಥೆ ಎಂದು ಮಾತನಾಡಿದ ನಿರ್ದೇಶಕ ಜಡೇಶ ಕೆ ಹಂಪಿ, ಇದು ಆಳಿದವರ ಕಥೆಯಲ್ಲ. ಅಳಿದು ಉಳಿದವರ ಕಥೆ.  ಕೋಲಾರ ಭಾಗದಲ್ಲಿ ನಡೆಯುವ ಕಥೆಯಾಗುವುದರಿಂದ ಸಂಭಾಷಣೆ ಕೋಲಾರದ ಭಾಷೆಯಲ್ಲೇ ಇರುತ್ತದೆ.   ಮಾಸ್ತಿ ಅವರು ಸಂಭಾಷಣೆ ಬರೆಯುತ್ತಿದ್ದಾರೆ. ಅವರು ಕೋಲಾರದವರೆ ಆಗಿರುವುದು ವಿಶೇಷ.ಇದು 90 ರ ಕಾಲಘಟ್ಟದಲ್ಲಿ ನಡೆಯುವ ಕಥೆ. ಶಿವರಾಮ ಕಾರಂತರ “ಚೋಮನ ದುಡಿ”ಯ ಚೋಮನ ಪಾತ್ರ ಈ ಚಿತ್ರಕ್ಕೆ ಸ್ಪೂರ್ತಿ. ಹಾಗಂತ “ಚೋಮನ ದುಡಿ” ಚಿತ್ರಕ್ಕೂ ಈ ಚಿತ್ರಕ್ಕೂ ಸಂಬಂಧವಿಲ್ಲ. ಇನ್ನು ಈ ಚಿತ್ರವನ್ನು ಜಗದೀಶ್ ಅವರು ನಿರ್ಮಿಸಬೇಕಿತ್ತು‌. ಕಾರಣಾಂತರದಿಂದ ಆಗಲಿಲ್ಲ. ಆನಂತರ ಸ್ನೇಹಿತರೊಬ್ಬರ ಮೂಲಕ ಸತ್ಯಪ್ರಕಾಶ್ ಅವರ ಪರಿಚಯವಾಯಿತು. ಅವರು ಹಾಗೂ ಅವರ ಮಗ ಸೂರಜ್ ಈ ಚಿತ್ರದ ಕಥೆ ಕೇಳಿ ಮೆಚ್ಚಿಕೊಂಡರು. ಕೇವಲ ಇಪ್ಪತ್ತು ದಿನಗಳಲ್ಲಿ ಚಿತ್ರಕ್ಕೆ ಚಾಲನೆ ದೊರಕ್ಕಿದೆ. ಬೆಂಗಳೂರಿನಲ್ಲಿ ಅದ್ದೂರಿ ಸೆಟ್ ಹಾಕಲಾಗುತ್ತಿದೆ. ಉಳಿದಂತೆ ಕೋಲಾರ, ಮೈಸೂರಿನಲ್ಲೂ ಚಿತ್ರೀಕರಣ ನಡೆಯಲಿದೆ. ನಾಯಕ ವಿಜಯ್ ಅವರು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುತ್ತಾರೆ ನಿರ್ದೇಶಕರು.

    ಈ ಚಿತ್ರದ ಮತ್ತೊಂದು ವಿಶೇಷವೆಂದರೆ ತಂದೆ – ಮಗ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಂದೆ – ಮಗಳು ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲೂ ದುನಿಯಾ ವಿಜಯ್ ಮಗಳು,  ಮಗಳ ಪಾತ್ರದಲ್ಲೇ ಅಭಿನಯಿಸುತ್ತಿದ್ದಾರೆ.

  • ಚಿತ್ರರಂಗಕ್ಕೆ ರಿತಾನ್ಯಾ ಎಂಟ್ರಿ- ಪುತ್ರಿಗೆ ದುನಿಯಾ ವಿಜಯ್ ಸಲಹೆ

    ಚಿತ್ರರಂಗಕ್ಕೆ ರಿತಾನ್ಯಾ ಎಂಟ್ರಿ- ಪುತ್ರಿಗೆ ದುನಿಯಾ ವಿಜಯ್ ಸಲಹೆ

    ಸ್ಯಾಂಡಲ್‌ವುಡ್ ‘ಸಲಗ’ (Salaga) ದುನಿಯಾ ವಿಜಯ್ (Duniya Vijay) ಮತ್ತೆ ರಚಿತಾ ರಾಮ್ (Rachita Ram) ಡ್ಯುಯೇಟ್ ಹಾಡೋದಕ್ಕೆ ಸಜ್ಜಾಗಿದ್ದಾರೆ. ವಿಜಯ್ 29ನೇ ಸಿನಿಮಾಗೆ ‘ಕಾಟೇರ’ ರೈಟರ್ ಜಡೇಶ್ (Jadesh Hampi) ನಿರ್ದೇಶನ ಮಾಡುತ್ತಿದ್ದಾರೆ. ಅಪ್ಪನ ಸಿನಿಮಾದಲ್ಲೇ ಮಗಳು ರಿತಾನ್ಯಾ (Rithanya Vijay) ಲಾಂಚ್‌ ಆಗುತ್ತಿದ್ದಾರೆ.

    ದುನಿಯಾ ವಿಜಯ್ ನಟನೆಯ 29ನೇ ಚಿತ್ರಕ್ಕೆ ಇಂದು (ಏ.11) ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಅದ್ಧೂರಿಯಾಗಿ ಚಾಲನೆ ಸಿಕ್ಕಿದೆ. ಈ ವೇಳೆ, ತಮ್ಮ 30 ವರ್ಷಗಳ ಸಿನಿ ಜರ್ನಿಯ ಬಗ್ಗೆ ದುನಿಯಾ ವಿಜಯ್ ಸ್ಮರಿಸಿದ್ದಾರೆ. ಜೊತೆಗೆ ಮಗಳಿಗೂ ಸಿನಿಮಾರಂಗದ ಕುರಿತು ಕಿವಿ ಮಾತೊಂದನ್ನು ಹೇಳಿದ್ದಾರೆ. ಇದನ್ನೂ ಓದಿ:Bigg Boss OTT 3: ದೊಡ್ಮನೆಗೆ ವಿಕ್ಕಿ ಜೈನ್

    ಈ ಸಂದರ್ಭದಲ್ಲಿ ವಿಜಯ್ ಮಾತನಾಡಿ ಇಂದು ತಂಬಾ ವಿಶೇಷವಾದ ದಿನ. ಇವತ್ತಿಗೆ ಚಿತ್ರರಂಗಕ್ಕೆ ಕಾಲಿಟ್ಟು 30 ವರ್ಷಗಳು ಕಳೆದವು. ಅದೇ ನಾನು ಮಗಳಿಗೆ ಹೇಳುತ್ತಿದ್ದೆ. ನಾನು ಸರ್ಕಸ್ ಮಾಡಿ ಇವತ್ತಿಗೆ 30 ವರ್ಷ ಆಯ್ತು. ಈ ಸ್ಥಾನಕ್ಕೆ ಬರುವುದಕ್ಕೆ 18 ವರ್ಷ ಬೇಕಾಯ್ತು. ಅದಕ್ಕೂ ಮುಂಚೆ ಹೀರೋ ಆಗುವುದಕ್ಕೆ ಸರ್ಕಸ್ ಹೊಡೆದಿದ್ದು, 10 -12 ವರ್ಷ. ಇಲ್ಲಿವರೆಗೂ ಬರೋಕೆ ನನಗಾದ ಆ ಅವಮಾನ ಹಾಗೂ ನೋವುಗಳು ನನ್ನ ಮೆಟ್ಟಿಲು ಎಂದಿದ್ದಾರೆ. ಅದನ್ನು ಸುಲಭವಾಗಿ ಹತ್ತಿಸಿಕೊಂಡು ಬಂದು ನಿನಗೆ ಕೊಡುತ್ತಿದ್ದೇನೆ. ಅದನ್ನು ಹುಷಾರಾಗಿ ಕಾಪಾಡಿಕೊಂಡು ಹೋಗು ಎಂದು ಮಗಳಿಗೆ ಹೇಳುತ್ತಿದ್ದೆ ಎಂದು ಮಾತನಾಡಿದ್ದಾರೆ.

    ಬಳಿಕ ತಂದೆ ಏನೆಲ್ಲ ಮಾಡಬಹುದು ಎಂದರೆ ನನಗಾಗಿ ಮಾಡಿರುವ ಸ್ಕಿಪ್ಟ್‌ನಲ್ಲಿಯೂ ಅರ್ಧ ಕೊಡಬಹುದು. ಜಡೇಶ್ ನನಗೆ ನಾನೇ ಹೀರೋ ಆಗಬೇಕು ಎಂದು ಹೇಳಬಹುದಿತ್ತು. ತಂದೆ ಇದನ್ನೂ ಮಗಳಿಗಾಗಿ ತ್ಯಾಗ ಮಾಡಬಹುದು ಎಂದು ಹೇಳಲು ಇಷ್ಟಪಡುತ್ತೇನೆ. ಇದೇ ವೇಳೆ ವೇದಿಕೆಯಲ್ಲಿ ಮಗಳು ರಿತಾನ್ಯಾಗೆ ವಿಜಯ್ ಸಲಹೆ ನೀಡಿದ್ದಾರೆ. ಒಂದು ಯಾವಾಗಲೂ ನಿನ್ನನ್ನು ನೋಡುವ ಮಾಧ್ಯಮ. ಯಾವಾಗಲೂ ನಿನ್ನಲ್ಲಿ ಕಣ್ಣಿಟ್ಟು ತಿದ್ದುವುದಕ್ಕೆ ನೋಡುತ್ತಿರುತ್ತೆ. ಇನ್ನೊಂದು ಅಭಿಮಾನಿಗಳು. ನಮ್ಮನ್ನು ಪ್ರೋತ್ಸಾಹಿಸಿ ಊಟ ಕೊಡುವ ಅಭಿಮಾನಿಗಳು. ಇನ್ನೊಬ್ಬರು ದೇವರು ನೋಡುತ್ತಿರುತ್ತಾರೆ ಎಂದರು. ಕೊನೆಗೆ ದುನಿಯಾ ಅವರು ಮಗಳಿಗೆ ಸುಖವಾಗಿರು. ದೇವರು ದೊಡ್ಡ ಮಟ್ಟಕ್ಕೆ ಕರೆದುಕೊಂಡು ಹೋಗಲಿ. ಇನ್ನೂ ನೀನು ತುಂಬಾನೇ ಕಲಿಯೋದಿದೆ ಎಂದು ತಿಳಿ ಹೇಳಿದರು.

    ‘ಸಲಗ’ ವಿಜಯ್ 29ನೇ ಸಿನಿಮಾಗೆ ಸತ್ಯ ಪ್ರಕಾಶ್ ನಿರ್ಮಾಪಕರಾಗಿ, ಸಹ ನಿರ್ಮಾಪಕರಾಗಿ ಸೂರಜ್ ಗೌಡ ಸಾಥ್‌ ನೀಡಿದ್ದಾರೆ. ಕೋಲಾರ ಸುತ್ತಮುತ್ತ ಸಿನಿಮಾದ ಕಥೆ ನಡೆಯಲಿದೆ ಎಂದು ಚಿತ್ರತಂಡ ಮಾಹಿತಿ ಹಂಚಿಕೊಂಡಿದೆ. ನೈಜ ಕಥೆಯನ್ನು ಆಧರಿಸಿದ ಸಿನಿಮಾ ಮೂಡಿ ಬರಲಿದೆ. ಕೋಲಾರ ಭಾಷೆಯಲ್ಲಿ ಚಿತ್ರದ ಡೈಲಾಗ್ ಇರಲಿದೆ.

    ಈಗಾಗಲೇ ಸಿನಿಮಾದ ಪೋಸ್ಟರ್ ರಿವೀಲ್ ಆಗಿದೆ. ಕತ್ತಿ ಹಾಗೂ ಕೊಡಲಿ ಹಿಡಿದು ದುನಿಯಾ ವಿಜಯ್ ನಿಂತಿದ್ದಾರೆ. ಇದು ಆಳಿದವರ ಕಥೆಯಲ್ಲ, ಅಳಿದು ಉಳಿದವರ ಕಥೆ ಎನ್ನುವ ಲೈನ್ ಕೂಡ ಇದೆ. ಜಡೇಶ್ ಹಂಪಿ ಅವರಿಗೆ ನಿರ್ದೇಶನದಲ್ಲಿ ಅನುಭವ ಇದೆ. ರಾಜಹಂಸ’, ‘ಜಂಟಲ್‌ಮ್ಯಾನ್’, ‘ಗುರು ಶಿಷ್ಯರು’ ಸಿನಿಮಾಗಳನ್ನು ಅವರು ನಿರ್ದೇಶಿಸಿದ್ದರು. ದುನಿಯಾ ವಿಜಯ್ ಮುಂದಿನ ಸಿನಿಮಾಗೆ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

    ಈ ಸಿನಿಮಾದ ಮೂಲಕ ವಿಜಯ್ ಮೊದಲ ಪುತ್ರಿ ರಿತಾನ್ಯಾ (Rithanya Vijay) ಸಿನಿಮಾಗೆ ಪಾದಾರ್ಪಣೆ ಮಾಡುತ್ತಿದ್ದು, ಅನುಪಮ್ ಖೇರ್ ಸ್ಕೂಲ್‌ನಲ್ಲಿ ತರಬೇತಿ ಪಡೆದು ಸಕಲ ತಯಾರಿ ಮಾಡಿಕೊಂಡೆ ನಟನೆಯ ಅಖಾಡಕ್ಕೆ ಇಳಿದಿದ್ದಾರೆ. ತಂದೆಯಂತೆಯೇ ಮಗಳು ಗೆದ್ದು ಬೀಗುತ್ತಾರಾ? ಎಂದು ಕಾದುನೋಡಬೇಕಿದೆ.

  • ದುನಿಯಾ ವಿಜಯ್, ರಚಿತಾ ಕಾಂಬಿನೇಷನ್ ಚಿತ್ರಕ್ಕೆ ಮುಹೂರ್ತ

    ದುನಿಯಾ ವಿಜಯ್, ರಚಿತಾ ಕಾಂಬಿನೇಷನ್ ಚಿತ್ರಕ್ಕೆ ಮುಹೂರ್ತ

    ನ್ನಡದ ಹೆಸರಾಂತ ನಟ ದುನಿಯಾ ವಿಜಯ್ ಮತ್ತು ರಚಿತಾ ರಾಮ್ (Rachita Ram) ಕಾಂಬಿನೇಷನ್ ನ ಹೊಸ ಚಿತ್ರಕ್ಕೆ ಬೆಂಗಳೂರಿನ ದೇವಸ್ಥಾನದಲ್ಲಿ ಇಂದು ಮುಹೂರ್ತವಾಯಿತು (Muhurta). ಇನ್ನೂ ಚಿತ್ರಕ್ಕೆ ಹೆಸರು ಇಟ್ಟಿಲ್ಲವಾದರೂ, ಈ ಕಾಂಬಿನೇಷನ್ ನ 2ನೇ ಚಿತ್ರ ಇದಾಗಿದೆ. ಹಾಗಾಗಿ ಸಹಜವಾಗಿ ಕುತೂಹಲಕ್ಕೆ ಕಾರಣವಾಗಿದೆ.

    ಈ ಸಿನಿಮಾದ ಮತ್ತೊಂದು ವಿಶೇಷತೆ ಅಂದರೆ, ದುನಿಯಾ ವಿಜಯ್ (Duniya Vijay) ಪುತ್ರಿ ಮೋನಿಕಾ (Monica Vijay) ಈ ಚಿತ್ರದ ಮೂಲಕ ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಮೋನಿಕಾ ಚಿತ್ರೋದ್ಯಮಕ್ಕೆ ಬರುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಇದೀಗ ಅಂತೆ ಕಂತೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ಅಪ್ಪನ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ಕೂಡ ನಟಿಸಲಿದ್ದಾರೆ.

     

    ಈ ಸಿನಿಮಾವನ್ನು ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದರೆ,  ಜಡೇಶ್ ಕೆ.ಹಂಪಿ  ಅವರ ನಿರ್ದೇಶನವಿದೆ. ಈ ಹಿಂದೆ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಟಿಸಿದ್ದರು. ಈಗ ಹಲವು ವರ್ಷಗಳ ನಂತರ ಈ ಜೋಡಿ ಒಂದಾಗುತ್ತಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

  • ಕೊನೆಗೂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ದುನಿಯಾ ವಿಜಯ್ ಪುತ್ರಿ

    ಕೊನೆಗೂ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟ ದುನಿಯಾ ವಿಜಯ್ ಪುತ್ರಿ

    ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ (Duniya Vijay) ಪುತ್ರಿ ಮೋನಿಕಾ (Monica Vijay) ಸಿನಿಮಾರಂಗಕ್ಕೆ ಎಂಟ್ರಿ ಕೊಡುತ್ತಾರೆ ಎಂಬ ಸುದ್ದಿ ಕೆಲದಿನಗಳಿಂದ ಹರಿದಾಡಿತ್ತು. ಇದೀಗ ಅಂತೆ ಕಂತೆ ಸುದ್ದಿಗೆ ಸ್ಪಷ್ಟನೆ ಸಿಕ್ಕಿದೆ. ದುನಿಯಾ ವಿಜಯ್ ನಟನೆಯ 29ನೇ ಸಿನಿಮಾದಲ್ಲಿ ಮಗಳು ಮೋನಿಕಾ ಕೂಡ ನಟಿಸಲಿದ್ದಾರೆ.

    ಬೆಂಗಳೂರಿನ ದೇವಸ್ಥಾನವೊಂದರಲ್ಲಿ ಏ.11ರಂದು ಚಿತ್ರದ ಮುಹೂರ್ತ ಕಾರ್ಯಕ್ರಮ ಜರುಗಲಿದೆ. ವಿಜಯ್ ಹೊಸ ಸಿನಿಮಾಗೆ ಕೆ.ವಿ ಸತ್ಯಪ್ರಕಾಶ್ ನಿರ್ಮಾಣ ಮಾಡುತ್ತಿದ್ದಾರೆ. ನಿರ್ದೇಶಕ ಜಡೇಶ್ ಕೆ.ಹಂಪಿ, ದುನಿಯಾ ವಿಜಯ್, ರಚಿತಾ ರಾಮ್ (Rachitha Ram), ಮೋನಿಕಾ ವಿಜಯ್, ಶಿಶಿರ್ ಮುಂತಾದವರು ಮುಹೂರ್ತ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

    ದುನಿಯಾ ವಿಜಯ್ ಮತ್ತು ರಚಿತಾ ರಾಮ್ ಹೊಸ ಚಿತ್ರಕ್ಕೆ ಜಡೇಶ್ ಕೆ. ಹಂಪಿ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಪುತ್ರಿ ಮೋನಿಕಾಗೂ ಕೂಡ ಚಿತ್ರದಲ್ಲಿ ಉತ್ತಮ ಪಾತ್ರವಿದೆ. ಈ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಹೊಸ ಪ್ರತಿಭೆ ಮೋನಿಕಾ ಪಾದಾರ್ಪಣೆ ಮಾಡುತ್ತಿದ್ದಾರೆ. ಇದನ್ನೂ ಓದಿ:ಈದ್ ಹಬ್ಬಕ್ಕೆ ‘ಬಡೆ ಮಿಯಾನ್ ಚೋಟೆ ಮಿಯಾನ್’

    ಈ ಹಿಂದೆ ‘ಜಾನಿ ಮೇರಾ ನಾಮ್ ಪ್ರೀತಿ ಮೇರಾ ಕಾಮ್’ ಎಂಬ ಚಿತ್ರದಲ್ಲಿ ದುನಿಯಾ ವಿಜಯ್ ಮತ್ತು ರಚಿತಾ ರಾಮ್ ನಟಿಸಿದ್ದರು. ಈಗ ಹಲವು ವರ್ಷಗಳ ನಂತರ ಈ ಜೋಡಿ ಒಂದಾಗುತ್ತಿದೆ. ಹಾಗಾಗಿ ಚಿತ್ರದ ಮೇಲಿನ ನಿರೀಕ್ಷೆ ಹೆಚ್ಚಿಸಿದೆ.

  • ದುನಿಯಾ ವಿಜಯ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ

    ದುನಿಯಾ ವಿಜಯ್ ಚಿತ್ರಕ್ಕೆ ರಚಿತಾ ರಾಮ್ ನಾಯಕಿ

    ದ್ಯ ಸಂಜು ವೆಡ್ಸ್ ಗೀತಾ 2 ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರುವ ರಚಿತಾ ರಾಮ್ (Rachita Ram), ಮತ್ತೊಂದು ಸಿನಿಮಾ ಒಪ್ಪಿಕೊಂಡಿರುವ ಸುದ್ದಿ ಗಾಂಧಿ ನಗರದಲ್ಲಿ ಹರಿದಾಡುತ್ತಿದೆ. ಕಾಟೇರ ಕಥೆಗಾರ ಜಡೇಶ್ ಹಂಪಿ ನಿರ್ದೇಶನದ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ.

    ಈ ಹಿಂದೆ ದುನಿಯಾ ವಿಜಯ್ (Duniya Vijay) ಅವರಿಗಾಗಿ ಜಡೇಶ್ (Jadesh Hampi) ಸಿನಿಮಾ ಮಾಡುವ ವಿಚಾರ ಹಂಚಿಕೊಂಡಿದ್ದಾರೆ. ವಿಜಯ್ ಅವರ 29ನೇ ಸಿನಿಮಾ ಅನೌನ್ಸ್ ಕೂಡ ಮಾಡಿದ್ದರು. ಇದೇ ಚಿತ್ರಕ್ಕೆ ರಚಿತಾ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ. ಮುಂದಿನ ದಿನಗಳಲ್ಲಿ ಅಧಿಕೃತವಾಗಿ ಹಂಚಿಕೊಳ್ಳಬೇಕಷ್ಟೆ.

    ನಾನಾ ಕಾರಣಗಳಿಂದಾಗಿ ಈ ಸಿನಿಮಾ ಕುತೂಹಲ ಮೂಡಿಸಿದೆ. ಈ ಸಿನಿಮಾ ಮೂಲಕ ದುನಿಯಾ ವಿಜಯ್ ಅವರ ಪುತ್ರಿ ಮೋನಿಕಾ ಚಿತ್ರರಂಗಕ್ಕೆ ಎಂಟ್ರಿ ಕೊಡಲಿದ್ದಾರೆ ಎನ್ನಲಾಗುತ್ತಿದೆ. ಆದರೆ, ಇದ್ಯಾವುದೂ ಅಧಿಕೃತವಲ್ಲ. ವಿಜಯ್ ಭೀಮ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿಯಾಗಿರೋದ್ರಿಂದ ಮುಂದಿನ ದಿನಗಳಲ್ಲಿ ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಸಿಗಬಹುದು.

     

    ರಚಿತಾ ರಾಮ್ ಮತ್ತು ದುನಿಯಾ ವಿಜಯ್ ನಟನೆಯ ಜಾನಿ  ಸಿನಿಮಾ ಪ್ರೇಕ್ಷಕರನ್ನು ರಂಜಿಸಿತ್ತು. ಹಾಗಾಗಿ ಮತ್ತೆ ಈ ಜೋಡಿಯನ್ನು ತೆರೆಯ ಮೇಲೆ ನೋಡುವುದಕ್ಕಾಗಿ ಅಭಿಮಾನಿಗಳು ಕಾಯುತ್ತಿದ್ದಾರೆ.

  • ಏಪ್ರಿಲ್ ಮೊದಲ ವಾರದಲ್ಲಿ ಬಹುನಿರೀಕ್ಷಿತ ‘ಮ್ಯಾಟ್ನಿ’

    ಏಪ್ರಿಲ್ ಮೊದಲ ವಾರದಲ್ಲಿ ಬಹುನಿರೀಕ್ಷಿತ ‘ಮ್ಯಾಟ್ನಿ’

    ಯೋಗ್ಯ ಚಿತ್ರದ ತರುವಾಯ ಒಂದು ಸುದೀರ್ಘಾವಧಿಯ ನಂತರ ನೀನಾಸಂ ಸತೀಶ್ (Satish Ninasam) ಮತ್ತು ರಚಿತಾ ರಾಮ್ (Rachita Ram) ಜೋಡಿಯಾಗಿ ನಟಿಸುತ್ತಿರುವ ಚಿತ್ರ `ಮ್ಯಾಟ್ನಿ’ (Matney). ಯಶಸ್ವಿ ಜೋಡಿಯಾಗಿ ಗುರುತಿಸಿಕೊಂಡಿರುವ ಸತೀಶ್ ಮತ್ತು ರಚಿತಾ ಮತ್ತೊಂದು ತೆರನಾದ ಗೆಟಪ್ಪಿನಲ್ಲಿ ಕಾಣಿಸಿಕೊಂಡಿರುವ ಮ್ಯಾಟ್ನಿಯ ಬಿಡುಗಡೆ ದಿನಾಂಕದ ಬಗ್ಗೆ ಒಂದಷ್ಟು ವಿಚಾರಗಳು ಹರಿದಾಡುತ್ತಿವೆ. ಗಾಂಧಿ ನಗರದಲ್ಲಿ ಸದ್ಯಕ್ಕೆ ಗುಲ್ಲೆದ್ದಿರುವ ವಿಚಾರಗಳನ್ನಾಧರಿಸಿ ಹೇಳೋದಾದರೆ, ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ಮ್ಯಾಟ್ನಿ ತೆರೆಗಾಣುವ ಸಾಧ್ಯತೆಗಳಿವೆ.

    ಮನೋಹರ್ ಕಾಂಪಲ್ಲಿ ನಿರ್ದೇಶನದಲ್ಲಿ, f3 ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಮೂಡಿ ಬಂದಿರುವ ಮ್ಯಾಟ್ನಿ ಆರಂಭದಿಂದ ಇಲ್ಲಿಯವರೆಗೂ ಪ್ರೇಕ್ಷಕರ ಆಸಕ್ತಿ ಸೆಳೆಯುತ್ತಾ ಬಂದಿದೆ. ಹಂತ ಹಂತವಾಗಿ ಒಂದಿಷ್ಟು ವಿಚಾರಗಳನ್ನು ತಲುಪಿಸುತ್ತಾ ಬಂದಿರುವ ಈ ಚಿತ್ರವೀಗ ಬಿಡುಗಡೆಯ ಅಂಚಿಗೆ ಬಂದು ನಿಂತಿದೆ. ಸದ್ದಿಲ್ಲದಂತೆ ಪೋಸ್ಟ್ ಪ್ರೊಡಕ್ಷನ್ ಕಾರ್ಯ ಮುಗಿಸಿರುವ ಮ್ಯಾಟ್ನಿಯ ಪ್ರಚಾರ ಕಾರ್ಯವೂ ಚಾಲೂ ಆಗುವ ಲಕ್ಷಣಗಳು ಕಾಣಿಸುತ್ತಿವೆ.

    ಇತ್ತೀಚಿನ ವರ್ಷಗಳಲ್ಲಿ ವಿಶೇಷವಾದ, ಒಂದಕ್ಕೊಂದು ಭಿನ್ನವಾದ ಪಾತ್ರಗಳನ್ನೇ ನೀನಾಸಂ ಸತೀಶ್ ಒಪ್ಪಿಕೊಳ್ಳುತ್ತಾ ಬರುತ್ತಿದ್ದಾರೆ. ಅದರ ಮುಂದುವರೆಕೆಯ ಭಾಗವೆಂಬಂತೆ ಕಾಣಿಸುತ್ತಿರುವ ಮ್ಯಾಟ್ನಿ ಮನಮೋಹಕ ಕಥೆಯ ಹೂರಣದೊಂದಿಗೆ ರೂಪಿಸಲ್ಪಟ್ಟಿದೆ. ಒಂದು ಯಶಸ್ವಿ ಜೋಡಿ ಮತ್ತೊಂದು ಸಿನಿಮಾದಲ್ಲಿಯೂ ಜೊತೆಯಾದಾಗ ಸಹಜವಾಗಿಯೇ ಅದರತ್ತ ಒಂದಷ್ಟು ಕುತೂಹಲ ಮೂಡಿರತ್ತೆ. ಈ ಸಿನಿಮಾದ ಬಗ್ಗೆಯೂ ಅಂಥದ್ದೊಂದು ನಿರೀಕ್ಷೆ ಮೂಡಿದೆ.

  • ಸಂಜು ವೆಡ್ಸ್ ಗೀತಾ 2: ಸ್ವಿಟ್ಜರ್‌ಲ್ಯಾಂಡ್‌ ಅನುಭವ ಬಿಚ್ಚಿಟ್ಟ ಟೀಮ್

    ಸಂಜು ವೆಡ್ಸ್ ಗೀತಾ 2: ಸ್ವಿಟ್ಜರ್‌ಲ್ಯಾಂಡ್‌ ಅನುಭವ ಬಿಚ್ಚಿಟ್ಟ ಟೀಮ್

    ನಾಲ್ಕು ತಿಂಗಳ‌ ಹಿಂದೆ ಪ್ರಾರಂಭವಾಗಿದ್ದ ನಾಗಶೇಖರ್ ಅವರ ನಿರ್ದೇಶನದ ‘ಸಂಜು ವೆಡ್ಸ್ ಗೀತಾ 2′ (Sanju Weds Geeta 2) ಚಿತ್ರದ ಚಿತ್ರೀಕರಣ ಪ್ರಮುಖ ಘಟ್ಟಕ್ಕೆ ಬಂದಿದೆ. ಇದೇ ತಿಂಗಳು ಚಿತ್ರತಂಡ ಸ್ವಿಟ್ಜರ್‌ಲ್ಯಾಂಡ್ (Switzerland) ಗೆ ಹೋಗಿ 2 ಹಾಡುಗಳನ್ನು ಚಿತ್ರೀಕರಿಸಿಕೊಂಡು ಬಂದಿದೆ. ಈವರೆಗೆ ನಡೆಸಿದ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಳ್ಳಲೆಂದು ನಿರ್ದೇಶಕ‌ ನಾಗಶೇಖರ್ ಹಾಗೂ ತಂಡ ಮಾಧ್ಯಮಗಳ ಮುಂದೆ ಬಂದಿತ್ತು. ಅಶೋಕ ಹೋಟೆಲ್ ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸ್ವಿಟ್ಜರ್‌ಲ್ಯಾಂಡ್ ಶೂಟಿಂಗ್ ದೃಶ್ಯಗಳ ಪ್ರದರ್ಶನದ ನಂತರ ಮಾತನಾಡಿದ ನಿರ್ದೇಶಕ ನಾಗಶೇಖರ್ ಹಿಂದೆ ಸಂಜು ವೆಡ್ಸ್ ಗೀತಾ ಸಿನಿಮಾ ಮಾಡುವಾಗ ಆದ ಅನುಭವಗಳನ್ನು ಮೆಲುಕು ಹಾಕಿದರು. ಅಲ್ಲದೆ ಈ ಚಿತ್ರ ಅದಕ್ಕಿಂತ ಚೆನ್ನಾಗಿ, ವೈಭವಯುತವಾಗಿ ಮೂಡಿಬರುತ್ತಿದೆ. ಇತ್ತೀಚೆಗಷ್ಟೇ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ಹಾಡುಗಳ ಶೂಟಿಂಗ್ ಮಾಡಿಕೊಂಡು ಬಂದಿದ್ದೇವೆ. ನಂತರ ಮುಂಬಯಿ, ಹೈದರಾಬಾದ್ ಶೂಟಿಂಗ್ ಮಾಡಿ, 2024ರ ಏಪ್ರಿಲ್ 1ರಂದು ಚಿತ್ರವನ್ನು  ರಿಲೀಸ್ ಮಾಡುವ ಯೋಜನೆಯಿದೆ.

    ಸಂಜು ವೆಡ್ಸ್ ಗೀತಾ ಚಿತ್ರಕ್ಕೆ ಸಿಕ್ಕ ಯಶಸ್ಸಿನಿಂದಲೇ  ಭಾಗ ಎರಡು ಇಷ್ಟು ಅದ್ದೂರಿಯಾಗಿ ಮೂಡಿಬರುತ್ತಿದೆ. ರಂಗಾಯಣ ರಘು, ಸಾಧು ಕೋಕಿಲ ವಿಶೇಷ ಪಾತ್ರಗಳಲ್ಲಿದ್ದಾರೆ. ನನ್ನ‌ ಈ ಕನಸಿಗೆ ಎಂಜಿನಿಯರಿಂಗ್ ಕ್ಲಾಸ್‌ಮೆಟ್ ಕುಮಾರ್ ಕೈಜೋಡಿಸಿದ್ದಾರೆ. ಶ್ರೀಧರ್ ವಿ. ಸಂಭ್ರಮ್ ಅದ್ಭುತವಾದ  ಟ್ಯೂನ್‌ಗಳನ್ನು ಮಾಡಿಕೊಟ್ಟಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ರಚಿತಾ ರಾಮ್, ಶ್ರೀನಗರ ಕಿಟ್ಟಿ ಇಬ್ಬರೂ ಅದ್ಭುತ ಅಭಿನಯ ನೀಡಿದ್ದಾರೆ.

    2024ರ ಬ್ಲಾಕ್‌ಬಸ್ಟರ್ ಚಿತ್ರವಾಗಿ ಸಂಜು ವೆಡ್ಸ್ ಗೀತಾ ಮೂಡಿಬರಲಿದೆ. ಇಂಥ ಒಳ್ಳೆ ನಿರ್ಮಾಪಕರು ನಮ್ಮ ಚಿತ್ರಕ್ಕೆ ಸಿಕ್ಕಿದ್ದಾರೆ. ಯಾವುದಕ್ಕೂ ಹಿಂದೇಟು ಹಾಕಲ್ಲ ಎಂದರು. ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಹಿರಿಯ ನಿರ್ದೇಶಕ ಎಸ್.ಮಹೇಂದರ್, ನಟ ಶರಣ್ ಆಗಮಿಸಿ ನಾಗಶೇಖರ್ ಹಾಗೂ ಚಿತ್ರದ ಬಗ್ಗೆ ಮಾತನಾಡಿದರು. ನಾಯಕ ಶ್ರೀನಗರ ಕಿಟ್ಟಿ ಮಾತನಾಡಿ ಅಲ್ಲಿ ಕೊರೆಯುವ ಚಳಿ ಇತ್ತು. ಹಾಡುಗಳು ತುಂಬಾ ಚೆನ್ನಾಗಿ ಬಂದಿವೆ ಎಂದು ಹೇಳಿದರು.

    ನಾಯಕಿ ರಚಿತಾ ರಾಮ್ (Rachita Ram) ಮಾತನಾಡಿ  ತುಂಬಾ ಶೇಡ್ಸ್ ಇರುವಂಥ ಗೀತಾ ಪಾತ್ರ ನನ್ನದು. ಸಿನಿಮಾ ಅಂದ್ರೆ ಖುಷಿ, ಕಷ್ಟ ಎರಡೂ ಇರುತ್ತೆ. ನಾವಿ ಹೋಗಿದ್ದೇ ಡಿಸೆಂಬರ್ ಚಳಿಯಲ್ಲಿ. ನಾಗಶೇಖರ್ ಏನಾ ಮಾಡಿದರೂ ಪ್ಲಾನ್ಡ್ ಆಗಿ ಮಾಡ್ತಾರೆ. ನಮಗೆ ನೇಚರ್ ಕೂಡ ತುಂಬಾ ಸಪೋರ್ಟ್ ಮಾಡಿತು. ಅಲ್ಲಿ ಮಾಡಿದ ಎರಡು ಹಾಡುಗಳೂ ತುಂಬಾ ಚೆನ್ನಾಗಿ ಬಂದಿವೆ. ಲೊಕೇಶನ್ ಅದ್ಭುತ. ಸತ್ಯ ಹೆಗಡೆ ಸರ್ ಬೇರೆ ಬೇರೆ ಆ್ಯಂಗಲ್‌ನಲ್ಲಿ ಶೂಟ್ ಮಾಡಿದ್ದಾರೆ. ಎಮೋಷನಲ್ ಸೀನ್ಸ್ ಇನ್ಟೆನ್ಸ್ ಆಗಿ ಬಂದಿದೆ ಎಂದರು.

     

    ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ ಚಿತ್ರದಲ್ಲಿ 5 ಸುಂದರ ಹಾಡುಗಳಿಗೆ ಸಂಗೀತ ನೀಡಿದ್ದು, ಕವಿರಾಜ ಸಾಹಿತ್ಯ ಬರೆದಿದ್ದಾರೆ. ನಿರ್ಮಾಪಕ ಚಲವಾದಿ ಕುಮಾರ್‌ ಮಾತನಾಡಿ,  ನಾಗಶೇಖರ್ ಮತ್ತು ನಾನು ಎಂಜಿನಿಯರಿಂಗ್ ಕ್ಲಾಸ್‌ಮೆಟ್ಸ್. ಸ್ಕ್ರಿಪ್ಟ್ ನಲ್ಲೂ ನಾನು ಜೊತೆ ಕುಳಿತಿದ್ದೆ. ಸಿನಿಮಾ ತುಂಬಾ ಚೆನ್ನಾಗಿ ಬರುತ್ತಿದೆ ಎಂದರು. ನಾಗಶೇಖರ್ ಮೂವೀಸ್ ಹಾಗೂ ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಸಹಯೋಗದೊಂದಿಗೆ ಮಹಾನಂದಿ ಕ್ರಿಯೇಶನ್ಸ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಾಗಶೇಖರ್ ಅವರೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.

  • ಸ್ವಿಜರ್‌ಲ್ಯಾಂಡ್‌ನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ ರಚಿತಾ ರಾಮ್

    ಸ್ವಿಜರ್‌ಲ್ಯಾಂಡ್‌ನಲ್ಲಿ ಮಸ್ತ್ ಮಜಾ ಮಾಡ್ತಿದ್ದಾರೆ ರಚಿತಾ ರಾಮ್

    ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Rachitha Ram) ಅವರು ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕೈತುಂಬಾ ಸಿನಿಮಾಗಳ ನಡುವೆ ನಟಿ ರಚಿತಾ ಇದೀಗ ಸ್ವಿಜರ್‌ಲ್ಯಾಂಡ್‌ಗೆ ಹಾರಿದ್ದಾರೆ. ಸ್ವಿಸ್ ಟ್ರಡಿಷನಲ್ ಡ್ರೆಸ್‌ನಲ್ಲಿ ರಚಿತಾ ರಾಮ್ ಮಿಂಚಿದ್ದಾರೆ.

    ನಟಿ ರಚಿತಾ ಮೂರು ದಿನಗಳಿಂದ ವಿದೇಶದಲ್ಲಿರುವ ಫೋಟೋಗಳನ್ನ ಶೇರ್ ಮಾಡ್ತಿದ್ದಾರೆ. ಸ್ವಿಸ್ ಪದ್ಧತಿಯಂತೆ ನಯಾ ಡ್ರೆಸ್ ತೊಟ್ಟು ನಟಿ ಸಂಭ್ರಮಿಸಿದ್ದಾರೆ. ಸಿನಿಮಾ ಚಿತ್ರೀಕರಣಕ್ಕಾಗಿ ಈ ಉಡುಗೆ ತೊಟ್ಟಿದ್ದೀನಿ ಎಂದು ನಟಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ರಸ್ತೆಯ ಪಕ್ಕದಲ್ಲಿ ನಟಿ ಡ್ಯಾನ್ಸ್ ಮಾಡುತ್ತಾ ಏಂಜಾಯ್‌ ಮಾಡಿದ್ದಾರೆ. ನಟಿಯ ಈ ಪೋಸ್ಟ್‌ ಸಖತ್‌ ವೈರಲ್‌ ಆಗುತ್ತಿದೆ.

     

    View this post on Instagram

     

    A post shared by Rachita Ram (@rachita_instaofficial)

    ‘ಸಂಜು ವೆಡ್ಸ್ ಗೀತಾ’ ಪಾರ್ಟ್ 2 (Sanju Weds Geetha 2) ಸಿನಿಮಾದ ಚಿತ್ರೀಕರಣಕ್ಕಾಗಿ ಸ್ವಿಜರ್‌ಲ್ಯಾಂಡ್‌ಗೆ ರಚಿತಾ & ಟೀಮ್ ಹೋಗಿದ್ದಾರೆ. ಸುಂದರ ತಾಣದಲ್ಲಿ ಶೂಟಿಂಗ್ ಭರದಿಂದ ಸಾಗುತ್ತಿದೆ. ಇದನ್ನೂ ಓದಿ:ತೇಜ ಸಜ್ಜ ನಟನೆಯ ‘ಹನುಮಾನ್‌’ ಚಿತ್ರದ ಟ್ರೈಲರ್‌ ಔಟ್‌

    ನಾಗಶೇಖರ್ ನಿರ್ದೇಶನದ ಸಿನಿಮಾದಲ್ಲಿ ‘ಸಂಜು ವೆಡ್ಸ್ ಗೀತಾ’ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ರಮ್ಯಾ ನಟಿಸಿ ಸೈ ಎನಿಸಿಕೊಂಡಿದ್ದರು. ಸಿನಿಮಾ ಸಕ್ಸಸ್ ಕಂಡಿತ್ತು. ಈಗ ಪಾರ್ಟ್ 2ನಲ್ಲಿ ಶ್ರೀನಗರ ಕಿಟ್ಟಿಗೆ ರಚಿತಾ ರಾಮ್ ಜೋಡಿಯಾಗಿದ್ದಾರೆ.