Tag: ರಚಿತಾ ರಾಮ್

  • ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ರಚಿತಾ ರಾಮ್- ಫ್ಯಾನ್ಸ್ ಬೇಸರ

    ಹುಟ್ಟುಹಬ್ಬಕ್ಕೆ ಬ್ರೇಕ್ ಹಾಕಿದ ರಚಿತಾ ರಾಮ್- ಫ್ಯಾನ್ಸ್ ಬೇಸರ

    ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಅಭಿಮಾನಿಗಳಿಗೆ ಕಹಿ ಸುದ್ದಿ ಕೊಟ್ಟಿದ್ದಾರೆ. ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ಫ್ಯಾನ್ಸ್‌ಗೆ ರಚಿತಾ ರಾಮ್ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇದನ್ನೂ ಓದಿ:ದೊಡ್ಮನೆ ಧಗ ಧಗ- ಉಗ್ರಂ ಮಂಜು, ಚೈತ್ರಾ ನಡುವೆ ಕಿರಿಕ್

     

    View this post on Instagram

     

    A post shared by Rachita Ram (@rachita_instaofficial)


    ಎಲ್ಲರಿಗೂ ನಮಸ್ಕಾರ, ಎಲ್ಲರೂ ಚೆನ್ನಾಗಿದ್ದೀರಿ ಎಂದು ಭಾವಿಸುತ್ತೇನೆ. ಈ ಬಾರಿ ಚಿತ್ರೀಕರಣ ಇರುವುದರಿಂದ ನನ್ನ ಹುಟ್ಟುಹಬ್ಬ (ಅ.3) ಆಚರಣೆಯನ್ನು ಮಾಡಿಕೊಳ್ಳುತ್ತಿಲ್ಲ ಎಂದು ಹೇಳಲು ಇಚ್ಚಿಸುತ್ತೇನೆ. ಎಲ್ಲರಿಗೂ ಕ್ಷಮೆಯಾಚಿಸುತ್ತಾ ಎಂದಿನಂತೆ ಪ್ರತಿ ಭಾನುವಾರ ಚಿತ್ರೀಕರಣ ಮುಗಿಸಿ ಬಂದ ನಂತರ ಸಿಗುತ್ತೇನೆ ಎಂದು ನಟಿ ಮನವಿ ಮಾಡಿದ್ದಾರೆ.

    ಅಂದಹಾಗೆ, ಶ್ರೀನಗರ ಕಿಟ್ಟಿ ಜೊತೆಗಿನ ‘ಸಂಜು ವೆಡ್ಸ್ ಗೀತಾ 2’ನಲ್ಲಿ ನಾಯಕಿಯಾಗಿ ರಚಿತಾ ರಾಮ್ ನಟಿಸಿದ್ದಾರೆ. ಈ ಸಿನಿಮಾದ ಜೊತೆ ಹಲವು ಚಿತ್ರಗಳು ಅವರ ಕೈಯಲ್ಲಿವೆ.

  • ಝೈದ್ ಖಾನ್ ಗೆ ಜೊತೆಯಾದ ಡಿಂಪಲ್ ಕ್ವೀನ್ ರಚ್ಚು

    ಝೈದ್ ಖಾನ್ ಗೆ ಜೊತೆಯಾದ ಡಿಂಪಲ್ ಕ್ವೀನ್ ರಚ್ಚು

    ಸಂಜು ವೆಡ್ಸ್ ಗೀತಾ 2 ಸಿನಿಮಾ ಮುಗಿಯುತ್ತಿದ್ದಂತೆಯೇ ರಚಿತಾ ರಾಮ್‍ ತಮ್ಮ ಫ್ಯಾನ್ಸ್ ಗೆ ಹೊಸ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಸಚಿವ ಜಮೀರ್ ಅಹ್ಮದ್ ಖಾನ್ ಪುತ್ರ ಝೈದ್ ಖಾನ್ (Zaid Khan) ನಟನೆಯ ಹೊಸ ಸಿನಿಮಾಗೆ ರಚಿತಾ ರಾಮ್ (Rachita Ram) ನಾಯಕಿಯಾಗಿ ಆಯ್ಕೆಯಾಗಿದ್ದಾರೆ. ಈ ಮಾಹಿತಿಯನ್ನು ಸ್ವತಃ ಝೈದ್ ಖಾನ್ ಅವರೇ ತಮ್ಮ ಸೋಷಿಯಲ್ ಮೀಡಿಯಾ ಖಾತೆಯ ಮೂಲಕ ಬಹಿರಂಗ ಪಡಿಸಿದ್ದಾರೆ.

    ಬಹುತೇಕ ಎಲ್ಲಾ ಸ್ಟಾರ್ ನಟರ ಜೊತೆ ನಟಿಸಿರುವ ರಚಿತಾ ರಾಮ್ ಇದೀಗ ಇನ್ನೊಂದು ನಯಾ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ. `ಕಲ್ಟ್’ ಸಿನಿಮಾ ತಂಡಕ್ಕೆ ರಚಿತಾ ರಾಮ್ ಸೇರಿಕೊಂಡಿದ್ದಾರೆ. ಈ ವಿಚಾರ ಆಫಿಷಿಯಲ್ ಘೋಷಣೆಯಾಗಿದೆ. ಕಲ್ಟ್ ಇದು ಝೈದ್ ಖಾನ್ ಅಭಿನಯದ ಎರಡನೇ ಚಿತ್ರ. ಬನಾರಸ್ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಝೈದ್ ಖಾನ್ ಇದೀಗ ಕಲ್ಟ್  (Cult) ಶೀರ್ಷಿಕೆಯಡಿ ಚಿತ್ರ ಮಾಡುತ್ತಿದ್ದಾರೆ. ಝೈದ್‌ಗೆ ಜೋಡಿಯಾಗಿ ರಚಿತಾ ರಾಮ್ ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.

    ಅನಿಲ್ ಕುಮಾರ್ ನಿರ್ದೇಶಿಸುತ್ತಿರುವ `ಕಲ್ಟ್’ ಚಿತ್ರ ಫಸ್ಟ್ ಲುಕ್ ಪೋಸ್ಟರ್‌ನಿಂದಲೇ ವೈರಲ್ ಆಗಿತ್ತು. ಇದೀಗ ಝೈದ್‌ಖಾನ್ ಅವರ `ಬ್ಲಡ್ಡೀ ಲವ್’ಗೆ ಬಣ್ಣ ಹಚ್ಚುತ್ತಿದ್ದಾರೆ ರಚಿತಾ. ಮ್ಯಾಟ್ನಿ ಬಳಿಕ ರಚಿತಾ ಒಪ್ಪಿಕೊಂಡ ನಯಾ ಪ್ರಾಜೆಕ್ಟ್ ಇದು. ಇದೀಗ ಕಲ್ಟ್ಗೆ ನಾಯಕಿಯಾಗೋದ್ರ ಮೂಲಕ ದಶಕದಿಂದ ಬೇಡಿಕೆ ಉಳಿಸಿಕೊಂಡಿರುವ ಸ್ಯಾಂಡಲ್‌ವುಡ್ ನಟಿ ಎಂಬ ಹೆಗ್ಗಳಿಕೆ ರಚಿತಾ ಪಾಲಾಗುತ್ತೆ.

    ಸ್ಟಾರ್ ನಟರು-ಯುವ ನಟರಿಗೂ ಜೋಡಿಯಾಗಿ ಹೊಂದಿಕೆಯಾಗುವ ರಚಿತಾ ಇದೀಗ ವಿಭಿನ್ನ ಕಥೆಯ ಚಿತ್ರದಲ್ಲಿ ಝೈದ್‌ಗೆ ಜೋಡಿಯಾಗಿದ್ದಾರೆ. ಕಲ್ಟ್ ಚಿತ್ರ ಆ್ಯಕ್ಷನ್ ರೊಮ್ಯಾಂಟಿಕ್ ಜಾನರ್ ಚಿತ್ರವಾಗಿದ್ದು ಚಿತ್ರದ ಕುರಿತು ಇನ್ನಷ್ಟು ಮಾಹಿತಿ ಒಂದೊಂದಾಗೇ ಹೊರಬೀಳಲಿದೆ.

  • ರಾಜನನ್ನು ರಾಜನ ಥರ ನೋಡೋಕೆ ಇಷ್ಟ: ದರ್ಶನ್ ಸ್ಥಿತಿ ಕಂಡು ರಚಿತಾ ರಾಮ್ ಭಾವುಕ

    ರಾಜನನ್ನು ರಾಜನ ಥರ ನೋಡೋಕೆ ಇಷ್ಟ: ದರ್ಶನ್ ಸ್ಥಿತಿ ಕಂಡು ರಚಿತಾ ರಾಮ್ ಭಾವುಕ

    ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನು (Darshan) ರಚಿತಾ ರಾಮ್ (Rachita Ram) ಭೇಟಿಯಾದ ಬಳಿಕ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ರಾಜನನ್ನು ರಾಜನ ಥರ ನೋಡೋಕೆ ಇಷ್ಟ ಎಂದು ನಟಿ ಭಾವುಕರಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:ರೇಣುಕಾಸ್ವಾಮಿ ಹತ್ಯೆ ಕೇಸ್ – ದರ್ಶನ್ A1 ಆರೋಪಿ?

    ದರ್ಶನ್ ಸರ್ ಆರೋಗ್ಯವಾಗಿದ್ದಾರೆ. ಜೈಲಿನಲ್ಲಿ ಅವರನ್ನು ಹಾಗೇ ನೋಡೋಕೆ ಕಷ್ಟ ಆಗುತ್ತಿದೆ. ಎಲ್ಲರೂ ಅವರನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇವೆ. ಅವರಿಗೆ ಹೇಳಿ ಬಿಟ್ಟು ಬಂದೆ ನಾವೆಲ್ಲರೂ ನಿಮ್ಮ ಬರುವಿಕೆಗಾಗಿ ಕಾಯ್ತಿದ್ದೇವೆ. ಪ್ಲೀಸ್ ಬೇಗ ಬನ್ನಿ ಅಂತ. ನನಗೆ ಕಾನೂನು ಮೇಲೆ ನಂಬಿಕೆ ಇದೆ. ದರ್ಶನ್ ಸರ್ ಆದಷ್ಟು ಬೇಗ ಹೊರಗೆ ಬರುತ್ತಾರೆ ಎಂದು ನಂಬಿಕೆ ಇದೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

    ರಾಜನನ್ನು ರಾಜನ ಥರನೇ ನನಗೆ ನೋಡೋಕೆ ಇಷ್ಟ. ಇವತ್ತು ಅವರನ್ನು ನೋಡಿ ನಿರಾಳವಾಯ್ತು ಎಂದು ನಟಿ ಭಾವುಕರಾಗಿದ್ದಾರೆ. ಅವರು ಅಲ್ಲಿ ಆರೋಗ್ಯವಾಗಿ ಆರಾಮ ಆಗಿ ಇದ್ದಾರೆ. ನಾನು ಅವರ ಬ್ಯಾನರ್‌ನಿಂದ ಪರಿಚಯ ಆದವಳು. ನನಗೆ ಇವತ್ತು ಏನೇ ಹೆಸರು ಇದ್ದರೂ ಅದು ಅವರಿಂದ ಸಿಕ್ಕಿದೆ. ಅವರು ಅವತ್ತು ಒಪ್ಪಿಕೊಂಡಿದಕ್ಕೆ ನಾನು ಬಿಂದ್ಯಾ ರಾಮ್‌ನಿಂದ ರಚಿತಾ ರಾಮ್ ಆಗಿ ಬೆಳೆದಿದ್ದು. ನಾನು ಯಾವಗಲೂ ಅವರ ಕುಟುಂಬಕ್ಕೆ ಆಭಾರಿಯಾಗಿರುತ್ತೇನೆ. ಅವರನ್ನು ನೋಡಿ ನಾನೇ ಕಣ್ಣೀರಿಟ್ಟೆ ಆದರೆ ಅವರೇ ನನಗೆ ಸಮಾಧಾನ ಮಾಡಿದರು. ಅವರು ಆದಷ್ಟು ಬೇಗ ಹೊರಬರಲಿ ಎಂದು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ರಚಿತಾ ರಾಮ್ ಮಾತನಾಡಿದ್ದಾರೆ.

  • ದರ್ಶನ್ ನೋಡಲು ಜೈಲಿಗೆ ಬಂದ ರಚಿತಾ ರಾಮ್

    ದರ್ಶನ್ ನೋಡಲು ಜೈಲಿಗೆ ಬಂದ ರಚಿತಾ ರಾಮ್

    ನ್ಯಾಯಾಂಗ ಬಂಧನದಲ್ಲಿರುವ ದರ್ಶನ್‌ರನ್ನು (Darshan) ನೋಡಲು ಪರಪ್ಪನ ಅಗ್ರಹಾರದ ಜೈಲಿಗೆ ನಟಿ ರಚಿತಾ ರಾಮ್ (Rachita Ram) ಭೇಟಿ ಕೊಟ್ಟಿದ್ದಾರೆ. ಇದನ್ನೂ ಓದಿ:`ಡಿ’ ಗ್ಯಾಂಗ್‍ನಲ್ಲಿ ಬಿರುಕು – ಒಬ್ಬೊಬ್ಬರೇ ಜೈಲು ತೊರೆಯಲು ಪ್ಲ್ಯಾನ್

    ಕೊಲೆ ಕೇಸ್‌ನಲ್ಲಿ ದರ್ಶನ್ ಅರೆಸ್ಟ್ ಆದ ಬಳಿಕ ಇದೇ ಮೊದಲ ಬಾರಿಗೆ ರಚಿತಾ ರಾಮ್ ಜೈಲಿಗೆ ಆಗಮಿಸಿದ್ದಾರೆ. ಈ ವೇಳೆ, ಬಿಜೆಪಿ ಮುಖಂಡ ಇಂಡವಾಳು ಸಚ್ಚಿದಾನಂದ್, ಕಂಠೀರವ ಸ್ಟುಡಿಯೋ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಮುಖಂಡ ರುದ್ರೇಶ್ ಕೂಡ ನಟನನ್ನು ನೋಡಲು ಜೈಲಿಗೆ ಬಂದಿದ್ದಾರೆ.

    ಇನ್ನೂ ಇನ್ನೂ ಜೈಲು ನಿಯಮಗಳ ಪ್ರಕಾರ, ಒಂದು ವಾರದಲ್ಲಿ 2 ಬಾರಿಯಷ್ಟೇ ಭೇಟಿಯಾಗಲು ಅವಕಾಶವಿರುತ್ತದೆ.

  • ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಶೂಟಿಂಗ್‍ ಮುಕ್ತಾಯ

    ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಶೂಟಿಂಗ್‍ ಮುಕ್ತಾಯ

    ಲವಾದಿ ಕುಮಾರ್ ಅವರ ನಿರ್ಮಾಣದ ಬಹು ನಿರೀಕ್ಷಿತ ಸಂಜು ವೆಡ್ಸ್ ಗೀತಾ-2 (Sanju Weds Geetha 2) ಚಿತ್ರದ ಚಿತ್ರೀಕರಣ ಕಂಠೀರವ ಸ್ಟುಡಿಯೋದಲ್ಲಿ ಮುಕ್ತಾಯವಾಯಿತು. ನಾಯಕಿ ರಚಿತಾರಾಮ್ ಡ್ರಾಯಿಂಗ್ ಬೋರ್ಡ್ ಮೇಲೆ ಆರ್ಟ್ ಬಿಡಿಸುತ್ತಿರುವ ದೃಶ್ಯದೊಂದಿಗೆ ಮಾಧ್ಯಮಗಳ ಸಮ್ಮುಖದಲ್ಲಿ ಕುಂಬಳಕಾಯಿ ಒಡೆಯುವ ಶಾಸ್ತ್ರ ಮಾಡಲಾಯಿತು. ನಾಗಶೇಖರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿರುವ ಈ ಚಿತ್ರದಲ್ಲಿ ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ  ರಮ್ಯಾ ಬದಲು ನಾಯಕಿಯಾಗಿ  ರಚಿತಾರಾಮ್ ಎಂಟ್ರಿಯಾಗಿದ್ದಾರೆ.

    ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಾಗಶೇಖರ್, ನಮ್ಮ ಚಿತ್ರ ವರ್ಷದ ಹಿಂದೆ ಶುರುವಾಗಿತ್ತು. ಶಿಡ್ಲಘಟ್ಟ,  ಸ್ವಿಟ್ಜರ್ ಲ್ಯಾಂಡ್, ಬೆಂಗಳೂರು ಸುತ್ತಮುತ್ತ ಓಟ್ಟು 72 ದಿನಗಳ ಕಾಲ ಆರು ಹಂತಗಳಲ್ಲಿ ಯಶಸ್ವಿಯಾಗಿ  ಶೂಟಿಂಗ್ ನಡೆಸಲಾಯಿತು, ನಿರ್ಮಾಪಕ ಕುಮಾರ್ ಅವರ ಸಹಕಾರದಿಂದ ಇದು ಸಾಧ್ಯವಾಯಿತು. ಕಿಟ್ಟಪ್ಪ, ರಚಿತಾರಾಮ್, ಸಾಧು ಕೋಕಿಲ, ತಬಲಾನಾಣಿ ಸೇರಿದಂತೆ ಬಿಗ್ ಸ್ಟಾರ್ ಕಾಸ್ಟ್ ಚಿತ್ರದಲ್ಲಿದೆ. ಈಗಾಗಲೇ ಎಡಿಟಿಂಗ್, ಡಬ್ಬಿಂಗ್ ಕೂಡ ನಡೆದಿದೆ.  ಸದ್ಯದಲ್ಲೇ  ಆಡಿಯೋ ರಿಲೀಸ್ ಮಾಡೋ ಪ್ಲಾನಿದೆ. ಇವತ್ತಿನ ಟೆಕ್ನಾಲಜಿಯ ಲವ್ ಸ್ಟೋರಿ,  ಜೊತೆಗೆ ಒಂದು ಸರ್ ಪ್ರೈಸ್ ಚಿತ್ರದಲ್ಲಿದೆ. ಇದರಲ್ಲೂ ನಾಯಕ ಬ್ಯೂಟಿ, ಐ ಲವ್ ಯೂ ಗೀತಾ ಅಂತಲೇ ಹೇಳ್ತಾನೆ ಎಂದರು.

    ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಕಳೆದ ಆಗಸ್ಟ್ ನಲ್ಲಿ ಶೂಟಿಂಗ್ ಶುರು ಮಾಡಿದ್ದೆವು. ಆಗಸ್ಟ್ 19ಕ್ಕೇ ಶೂಟಿಂಗ್ ಮುಗಿದಿದೆ.ನಮ್ಮ ಟೆಕ್ನಿಕಲ್ ಟೀಮ್ ಸಹಕಾರ ತುಂಬಾ ಚೆನ್ನಾಗಿತ್ತು. ಒಂದೇ ಒಂದು ಅನ್ ವಾಂಟೆಡ್ ಶಾಟ್ಸ್ ತೆಗೆದಿಲ್ಲ. ಹಾಸನ, ಹಾವೇರಿ ಹೀಗೆ ಬೇರೆ ಬೇರೆ ಊರುಗಳಲ್ಲಿ  ನಮ್ಮ ಚಿತ್ರದ ಮೂರು ಹಾಡುಗಳನ್ನು ರಿಲೀಸ್ ಮಾಡೋ ಪ್ಲಾನಿದೆ ಎಂದು ಹೇಳಿದರು. ನಾಯಕ ಕಿಟ್ಟಿ ಮಾತನಾಡುತ್ತ ಇವತ್ತಿಗೆ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಸದ್ಯದಲ್ಲೇ ಹಾಡುಗಳ ಮೂಲಕ ನಿಮ್ಮ ಮುಂದೆ ಬರುತ್ತೇವೆ‌. ಇಲ್ಲಿ ರೇಶ್ಮೆ ಬೆಳೆಗಾರನಾಗಿ ನಾನು ಕಾಣಿಸಿಕೊಂಡಿದ್ದೇನೆ ಎಂದು ಹೇಳಿದರು.

    ನಾಯಕಿ ರಚಿತಾರಾಂ ಮಾತನಾಡಿ ಈ ಸಿನಿಮಾದ ಜರ್ನಿ ತುಂಬಾ ಚೆನ್ನಾಗಿತ್ತು. ನನ್ನ ಪಾತ್ರದ ಡಬ್ಬಿಂಗ್ ಮಾಡಿಲ್ಲ, ಟೈಟಲ್ ಅದೇ ಇದ್ದರೂ ಇದು ಬೇರೆ ಥರದ ಕಥೆ. ಸ್ವಿಟ್ಜರ್ ಲ್ಯಾಂಡ್ ಶೂಟಿಂಗ್ ಸಮಯದಲ್ಲಿ ನಮಗಾದ ಅನುಭವ ನೆನಪಲ್ಲುಳಿದಿದೆ. ನವೆಂಬರ್-ಡಿಸೆಂಬರ್ ವೇಳೆ ಆದರೂ ವೆದರ್ ನಮಗೆಲ್ಲೂ ತೊಂದರೆ ಕೊಡಲಿಲ್ಲ, ಸಿನಿಮಾ ವಿಜ್ಯುಯಲಿ ತುಂಬಾ ಚೆನ್ನಾಗಿ ಬಂದಿದೆ. ಅದಕ್ಕೆ ಸತ್ಯ ಹೆಗಡೆ ಅವರೇ ಕಾರಣ. ಮುಖ್ಯವಾಗಿ ನಾವು ಹೋದಲ್ಲೆಲ್ಲ ವಾತಾವರಣ ನಮಗೆ ಸಹಕಾರಿಯಾಗಿತ್ತು ಎಂದರು. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ  ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ವಿಶೇಷ ಪಾತ್ರದಲ್ಲಿ ನಟ ಚೇತನ್ ಚಂದ್ರ, ರಾಗಿಣಿ ದ್ವಿವೇದಿ ಕಾಣಿಸಿಕೊಂಡಿದ್ದಾರೆ.

     

    ಛಾಯಾಗ್ರಾಹಕ‌ ಸತ್ಯ ಹೆಗ್ಡೆ ಮಾತನಾಡಿ ಒಂದು  ಸೂಪರ್ ಹಿಟ್ ಚಿತ್ರದ ಸೀಕ್ವೇಲ್ ಮಾಡುವಾಗ ಭಯ ಇದ್ದೇ ಇರುತ್ತೆ. ಶಿಡ್ಲಘಟ್ಟದಲ್ಲಿ ಶೂಟ್ ಮಾಡಿದ್ದು ನಮಗೆ ಸರ್ ಪ್ರೈಸ್ ಹಾಗೀ ಚಾಲೆಂಜ್ ಆಗಿತ್ತು. ಈ ಚಿತ್ರದಲ್ಲಿ ಕಥೆ ಹೇಳುವ ರೀತಿ ಚೇಂಜ್ ಮಾಡಿಕೊಂಡಿದ್ದೇವೆ. ಸ್ವಿಟ್ಜರ್ ಲ್ಯಾಂಡ್ ನ ಹನ್ನೊಂದು ಲೊಕೇಶನ್ ಗಳಲ್ಲಿ  ಚಿತ್ರೀಕರಣ ನಡೆಸಿದ್ದೇವೆ ಎಂದು ಹೇಳಿದರು. ಸಾಧು ಕೋಕಿಲ, ತಬಲಾನಾಣಿ, ಮೂಗು ಸುರೇಶ್ ಸಾಹಸ ನಿರ್ದೇಶಕ ಡಿಫರೆಂಟ್ ಡ್ಯಾನಿ ಚಿತ್ರದ ಕುರಿತಂತೆ ಮಾತನಾಡಿದರು. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ್ ಚಿತ್ರದಲ್ಲಿ ಐದು ಸುಂದರ ಹಾಡುಗಳನ್ನು  ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.  ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ರಿಲೀಸ್  ಮಾಡುತ್ತಿದೆ.

  • ಪ್ರೀ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಸಂಜು ವೆಡ್ಸ್ ಗೀತಾ

    ಪ್ರೀ ಕ್ಲೈಮ್ಯಾಕ್ಸ್ ಶೂಟಿಂಗ್ ನಲ್ಲಿ ಸಂಜು ವೆಡ್ಸ್ ಗೀತಾ

    ನಿರ್ದೇಶಕ ನಾಗಶೇಖರ್ ಸಾರಥ್ಯದ ‘ಸಂಜು ವೆಡ್ಸ್ ಗೀತಾ-2’ (Sanju Weds Geeta 2) ಪ್ರಾರಂಭದಿಂದಲೂ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.  ಸಂಜು ಹಾಗೂ ಗೀತಾರ ನವೀನ ಪ್ರೇಮಕಥೆಯನ್ನು ರೇಶ್ಮೆ ಬೆಳೆಯುವ ರೈತರ ಹೋರಾಟದ ಹಿನ್ನೆಲೆ ಇಟ್ಟುಕೊಂಡು  ನಾಗಶೇಖರ್  ಹೇಳಹೊರಟಿದ್ದಾರೆ. ಈ ಚಿತ್ರದಲ್ಲಿ ಶ್ರೀನಗರ ಕಿಟ್ಟಿ ಜೊತೆ  ರಮ್ಯಾ ಬದಲು ರಚಿತಾರಾಮ್ ಎಂಟ್ರಿಯಾಗಿದ್ದಾರೆ. ಈ ಚಿತ್ರದ ಪ್ರೀ ಕ್ಲೈಮ್ಯಾಕ್ಸ್  (Pre Climax) ದೃಶ್ಯದ ಚಿತ್ರೀಕರಣ ನಿನ್ನೆ ಕಂಠೀರವ ಸ್ಟುಡಿಯೋದಲ್ಲಿ ನಡೆದಿತ್ತು. ಅಲ್ಲಿ ನಾಯಕ ಶ್ರೀನಗರ ಕಿಟ್ಟಿ ಒಬ್ಬ ಸೈನಿಕನ ಗೆಟಪ್ ನಲ್ಲಿದ್ದರು. ಜರ್ಮನ್ ಸೈನಿಕರ ವಿರುದ್ದ ಸೆಣೆಸಾಟ ನಡೆಸಿ  ಅವರ  ಹಿಡಿತದಿಂದ  ರಾಣಿಯನ್ನು ಬಿಡಿಸಿಕೊಂಡು ಬರುವ ಸನ್ನಿವೇಶವದು. ಆ ದೃಶ್ಯವನ್ನು ಗ್ರೀನ್ ಮ್ಯಾಟ್ ನಲ್ಲಿ ಚಿತ್ರೀಕರಿಸಲಾಗುತ್ತಿತ್ತು.

    ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ  ಪ್ರೇಮಕಾವ್ಯವನ್ನು ನಾಗಶೇಖರ್ ಈ ಚಿತ್ರದಲ್ಲಿ ಹೇಳಹೊರಟಿದ್ದಾರೆ. ನಟಿ ರಾಗಿಣಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿರುವ  ನಟ ಚೇತನ್ ಚಂದ್ರ ಕೂಡ ಈ ಸಂದರ್ಭದಲ್ಲಿ ಹಾಜರಿದ್ದರು. ಈ ಸಂದರ್ಭದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ನಾಗಶೇಖರ್, ಈಗಾಗಲೇ ಚಿತ್ರದ ಬಹುತೇಕ  ಚಿತ್ರೀಕರಣ ಮುಗಿದಿದೆ. ಇದು ಚಿತ್ರದ ಪ್ರಿ ಕ್ಲೈಮ್ಯಾಕ್ಸ್ ಸೀನ್. ಇದರ ನಂತರ ನೆದರ್ ಲ್ಯಾಂಡ್ನಲ್ಲಿ ಚಿತ್ರೀಕರಣ ಮುಂದುವರಿಯುತ್ತದೆ. ನಿರ್ಮಾಪಕ ಕುಮಾರ್ ಅವರ ಸಹಕಾರದಿಂದ ಚಿತ್ರದ ಚಿತ್ರೀಕರಣ ಅಂದುಕೊಂಡ ಪ್ಲಾನ್ ಪ್ರಕಾರ ಸರಾಗವಾಗಿ ಮುಗಿಯುತ್ತಿದೆ. ಹನ್ನೆರಡು ಕೋಟಿ ಅಂದುಕೊಂಡ ಬಜೆಟ್ ಈಗ ಹದಿನೈದು ಕೋಟಿಯಾಗಿದೆ.

    ಶೂಟಿಂಗ್ ಜೊತೆಗೇ ಎಡಿಟಿಂಗ್ ಸೇರಿದಂತೆ ಚಿತ್ರದ ಪೋಸ್ಟ ಪ್ರೊಡಕ್ಷನ್ ಕೆಲಸಗಳು ಬಹುತೇಕ  ಮುಗಿದಿವೆ‌  ಅಂದುಕೊಂಡ ಹಾಗೆ ದಸರಾ ವೇಳೆಗೆ ಚಿತ್ರವನ್ನು ತೆರೆಗೆ ತರಲು ಪ್ರಯತ್ನ ಮಾಡುತ್ತಿದ್ದೇವೆ.  ಈಗಾಗಲೇ ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಚಿತ್ರೀಕರಣ ಮಾಡಿದ್ದೇವೆ. ಈಗ ನೆದರ್ ಲ್ಯಾಂಡ್ ಗೆ ಹೋಗ್ತಿದ್ದೇವೆ  ಎಂದು ಹೇಳಿದರು. ನಂತರ ಚಿತ್ರದ ಕುರಿತಂತೆ ಮಾತನಾಡಿದ ನಿರ್ಮಾಪಕ ಛಲವಾದಿ ಕುಮಾರ್, ಈಗಾಗಲೇ ನಾವು ಶೂಟಿಂಗ್ ಕೊನೇ ಹಂತಕ್ಕೆ ಬಂದಿದ್ದೇವೆ. ಅಂದುಕೊಂಡ ಹಾಗೆ ಚಿತ್ರ ಮೂಡಿಬರುತ್ತಿದೆ. ಒಂದು  ಅದ್ಭುತ ದೃಶ್ಯಕಾವ್ಯವಾಗಿ ಸಂಜು ವೆಡ್ಸ್ ಗೀತಾ ಚಿತ್ರ ಮೂಡಿಬರಬೇಕು ಎನ್ನುವುದೇ ನಮ್ಮ ಉದ್ದೇಶ ಎಂದು ಹೇಳಿದರು.

     

    ಪವಿತ್ರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್  ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಸಂಗೀತ ನಿರ್ದೇಶಕ‌  ಶ್ರೀಧರ ವಿ. ಸಂಭ್ರಮ  5 ಸುಂದರವಾದ ಹಾಡುಗಳನ್ನು  ಮಾಡಿದ್ದು, ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ.  ರಾಗಿಣಿ ದ್ವಿವೇದಿ, ಚೇತನ್ ಚಂದ್ರ, ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ.

  • ಟೊಮೆಟೊ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಬ್ಯಾನರ್‌ ಕಟ್ಟಿದ ರೈತ!

    ಟೊಮೆಟೊ ತೋಟಕ್ಕೆ ದೃಷ್ಟಿಬೊಂಬೆ ಬದಲು ರಚಿತಾ ರಾಮ್, ಸನ್ನಿ ಲಿಯೋನ್ ಬ್ಯಾನರ್‌ ಕಟ್ಟಿದ ರೈತ!

    ಚಿಕ್ಕಬಳ್ಳಾಪುರ: ಟೊಮೆಟೊ ತೋಟದ ಮೇಲೆ ಯಾರ ವಕ್ರ ದೃಷ್ಟಿಯೂ ಬೀಳಬಾರದು ಅಂತ ದೃಷ್ಟಿ ದೋಷ ನಿವಾರಣೆಗೆ ಚಿಕ್ಕಬಳ್ಳಾಪುರದ (Chikkaballapura) ರೈತರೊಬ್ಬರು ವಿಭಿನ್ನ ಐಡಿಯಾ ಮಾಡಿದ್ದಾರೆ.

    ಟೊಮೆಟೊ ತೋಟದಲ್ಲಿ ದೃಷ್ಟಿಬೊಂಬೆಗೆ ಬದಲಾಗಿ ನಟಿ ರಚಿತಾ ರಾಮ್ (Rachita Ram) ಹಾಗೂ ಮಾದಕ ನಟಿ ಸನ್ನಿ ಲಿಯೋನ್ *(Sunny Leone) ಬ್ಯಾನರ್ ಕಟ್ಟಿದ್ದಾರೆ. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಹಂಡಿಗನಾಳ ಗ್ರಾಮದ ಯುವ ರೈತ ದೀಪಕ್ ಈ ಐಡಿಯಾ ಮಾಡಿದ್ದಾರೆ. ಇದನ್ನೂ ಓದಿ: ರಣಮಳೆಗೆ ಭಾರೀ ಅವಾಂತರ – ಶೃಂಗೇರಿ ಗಾಂಧಿ ಮೈದಾನದ ಅಂಗಡಿಗಳು ಮುಳುಗಡೆ!

    ತಾವು 5 ಎಕರೆ ಭೂಮಿಯಲ್ಲಿ ಟೊಮೆಟೊ ಬೆಳೆದಿದ್ದಾರೆ. ಇನ್ನೇನು ಕಾಯಿ ಬಿಡುವ ಸಮಯವಿದೆ. ಹೀಗಾಗಿ ಟೊಮೆಟೊ ಬೆಳೆ ಮೇಲೆ ಯಾರ ಕೆಟ್ಟ ಕಣ್ಣು ಬೀಳದಿರಲಿ, ಒಳ್ಳೆಯ ಫಸಲು ಬಂದು ಒಳ್ಳೆ ಲಾಭ ಸಿಗಲಿ ಅನ್ನೋ ಕಾರಣಕ್ಕೆ ದೃಷ್ಟಿ ಬೊಂಬೆ ಬದಲು ನಟಿಯರ ಭಾವಚಿತ್ರದ ಬ್ಯಾನರ್‌ ಅಳವಡಿಸಿದ್ದಾರೆ. ಇದನ್ನೂ ಓದಿ: Jammu Terrorist Attack: ಜಮ್ಮುವಿನಲ್ಲಿ ದಿಢೀರ್‌ ಭಯೋತ್ಪಾದಕ ದಾಳಿ ಹೆಚ್ಚಾಗುತ್ತಿರುವುದು ಏಕೆ?

    ಸದ್ಯ ಚಿಕ್ಕಬಳ್ಳಾಪುರದಲ್ಲಿ ಟೊಮೆಟೊ ಪ್ರತಿ ಕ್ವಿಂಟಲ್‌ ಸುಮಾರು 3,500 ರೂ.ಗೆ ಮಾರಾಟವಾಗುತ್ತಿದೆ. ಇದನ್ನೂ ಓದಿ: ತ್ರಿಪುರಾದಲ್ಲಿ 800ಕ್ಕೂ ಹೆಚ್ಚು ವಿದ್ಯಾರ್ಥಿಗಳಲ್ಲಿ HIV ಪತ್ತೆ; ಶ್ರೀಮಂತರ ಮಕ್ಕಳಲ್ಲಿ ವೈರಸ್‌ ಕಂಡುಬಂದಿದ್ದು ಹೇಗೆ?

  • ರೇಣುಕಾಸ್ವಾಮಿ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ: ರಚಿತಾ ರಾಮ್

    ರೇಣುಕಾಸ್ವಾಮಿ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆ ಎಂಬ ಭರವಸೆಯಿದೆ: ರಚಿತಾ ರಾಮ್

    ಸ್ಯಾಂಡಲ್‌ವುಡ್ ನಟ ದರ್ಶನ್ (Darshan) ಸದ್ಯ ರೇಣುಕಾಸ್ವಾಮಿ ಕೊಲೆ (Renukaswamy Murder Case) ಪ್ರಕರಣದ ವಿಚಾರವಾಗಿ ಬಂಧಿಸಲಾಗಿದೆ. ಸುದೀಪ್, ಉಪೇಂದ್ರ ಅವರು ದರ್ಶನ್‌ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದ ಬಳಿಕ ರಚಿತಾ ರಿಯಾಕ್ಟ್‌ ಮಾಡಿದ್ದಾರೆ. ಇದೀಗ ದರ್ಶನ್ ಪರ ರಚಿತಾ ರಾಮ್ (Rachita Ram) ಮಾತನಾಡಿದ್ದಾರೆ. ಇದನ್ನೂ ಓದಿ:ದೇವರಂಥ ಮನುಷ್ಯ, ನಾಯಿಯಂತ ಬುದ್ಧಿ- ದರ್ಶನ್‌ಗೆ ತಿವಿದ ಉಮಾಪತಿ

    ಈ ನೋಟ್‌ನ ನಾನು ನಟಿಯಾಗಿಲ್ಲ ಅಲ್ಲ. ಸಾಮಾನ್ಯ ಪ್ರಜೆಯಾಗಿ ಬರೆಯುತ್ತಿದ್ದೇನೆ. ಇತ್ತೀಚೆಗೆ ನಡೆದ ಪ್ರಕರಣದ ಬಗ್ಗೆ ನನ್ನ ಮಾತು. ಮೊದಲನೇಯದಾಗಿ ರೇಣುಕಾಸ್ವಾಮಿ ಅವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬಕ್ಕೆ ಭಗವಂತ ಧೈರ್ಯ ಭರಿಸುವ ಶಕ್ತಿ ನೀಡಲಿ ಎಂಬ ಪ್ರಾರ್ಥನೆ ಮಾಡುತ್ತೇನೆ. ಈ ಹತ್ಯೆಗೆ ಕಾನೂನಾತ್ಮಕವಾಗಿ ನ್ಯಾಯ ಸಿಗುತ್ತದೆಂಬ ಭರವಸೆ ನನಗಿದೆ ಎಂದು ಬರೆದುಕೊಂಡಿದ್ದಾರೆ.

     

    View this post on Instagram

     

    A post shared by Rachitaa Ram (@rachita_instaofficial)

    ನನ್ನನ್ನು ಚಿತ್ರರಂಗಕ್ಕೆ ಪರಿಚಯಿಸಿದ ನಟ ದರ್ಶನ್ ಸರ್ ನನಗೆ ಗುರು ಸಮಾನರು, ನನ್ನ ಜೀವನದ ತಪ್ಪುಗಳನ್ನು ತಿದ್ದಿ ಮಾರ್ಗದರ್ಶನ ನೀಡಿದಂತಹ ವ್ಯಕ್ತಿ. ಇಂತಹ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವುದು ನಂಬಲು ಸ್ವಲ್ಪ ಕಷ್ಟವಾಗುತ್ತದೆ. ಏನಿದ್ದರೂ ಸತ್ಯ ಪೊಲೀಸ್ ತನಿಖೆಯಿಂದ ನಮ್ಮ ಮುಂದೆ ಬರಲಿದೆ ಎನ್ನುವುದೇ ನನ್ನ ನಂಬಿಕೆ ಎಂದು ರಚಿತಾ ರಾಮ್ ಸೋಷಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

    ಅಂದಹಾಗೆ, ‘ಬುಲ್ ಬುಲ್’ ಸಿನಿಮಾದ ಮೂಲಕ ದರ್ಶನ್‌ಗೆ ರಚಿತಾ ರಾಮ್ ನಾಯಕಿಯಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಬಳಿಕ ಅಂಬರೀಶ್, ಕ್ರಾಂತಿ ಸಿನಿಮಾದಲ್ಲೂ ದರ್ಶನ್‌ಗೆ ಜೋಡಿಯಾಗಿ ನಟಿಸಿದ್ದರು.

  • ಕಿಟ್ಟಿ ಜೊತೆ ಕುಣಿದ ರಚ್ಚು-ರಾಗಿಣಿ : ಮಂಗ್ಲಿ ದನಿಯಲ್ಲಿ ಸಾಂಗ್

    ಕಿಟ್ಟಿ ಜೊತೆ ಕುಣಿದ ರಚ್ಚು-ರಾಗಿಣಿ : ಮಂಗ್ಲಿ ದನಿಯಲ್ಲಿ ಸಾಂಗ್

    ಕಾಡುವಂಥ  ಪ್ರೇಮಕಥೆಗಳನ್ನು  ತೆರೆಮೇಲೆ ಮೂಡಿಸಿದ ನಿರ್ದೇಶಕ ನಾಗಶೇಖರ್ ಇದೀಗ ಕನ್ನಡ ಸಿನಿರಸಿಕರಿಗಾಗಿ  ಮತ್ತೊಂದು ಅದ್ಭುತ ಲವ್ ಸ್ಟೋರಿಯನ್ನು ಹೇಳಹೊರಟಿದ್ದಾರೆ. ದಶಕದ ಹಿಂದೆ ತಮ್ಮದೇ ನಿರ್ದೇಶನದಲ್ಲಿ ತೆರೆಕಂಡು, ಜನಮನ ಸೂರೆಗೊಂಡು ಯಶಸ್ವಿಯಾಗಿದ್ದ ಸಂಜು ವೆಡ್ಸ್  ಗೀತಾ‌ ಚಿತ್ರದ  ಟೈಟಲ್ ಇಟ್ಟುಕೊಂಡು ನವನವೀನ ಪ್ರೇಮಕಥೆ  ಹೆಣೆದು ಸಂಜು ವೆಡ್ಸ್ ಗೀತಾ-2 (Sanju Weds Geeta 2) ಚಿತ್ರವನ್ನು  ತೆರೆಗೆ ತರುತ್ತಿದ್ದಾರೆ.  ಶ್ರೀನಗರ ಕಿಟ್ಟಿ (Srinagar Kitty) ಹಾಗೂ ಗುಳಿಕೆನ್ನೆ ಬೆಡಗಿ  ರಚಿತಾರಾಮ್ (Rachita Ram) ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿರುವ ಈ ಚಿತ್ರದ ಹಾಡೊಂದರ ಚಿತ್ರೀಕರಣ ಇತ್ತೀಚೆಗೆ ನಡೆಯಿತು. ನಾಯಕ ಸಂಜು ಹಾಗೂ ನಾಯಕಿ ಗೀತಾ ಇಬ್ಬರ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಬರುವ ಪಾರ್ಟಿ ಸಾಂಗ್ ಅದಾಗಿದ್ದು, ವಿಶೇಷವಾಗಿ ಈ ಹಾಡಲ್ಲಿ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿ ಇವರಿಬ್ಬರ ಜೊತೆ ಸ್ಟೆಪ್ಸ್ ಹಾಕಿದ್ದಾರೆ.

    ಕುಂಬಳಗೋಡಿನ ಬಿಜಿಎಸ್ ಹೈಸ್ಕೂಲಿನ ಗ್ಲಾಸ್ ಹೌಸ್ ನಲ್ಲಿ ಈ ಹಾಡಿನ ಚಿತ್ರೀಕರಣ ನಡೆಯಿತು. 200 ರಿಂದ 250 ಜನ ಡಾನ್ಸರ್ಸ್ ಈ ಹಾಡಲ್ಲಿ ಹೆಜ್ಜೆ ಹಾಕಿದ್ದಾರೆ. ಖ್ಯಾತ ಗಾಯಕಿ ಮಂಗ್ಲಿ ಈ ಹಾಡಿಗೆ ದನಿಯಾಗಿದ್ದು, ಭಜರಂಗಿ ಮೋಹನ್ ಅವರು ಕೊರಿಯೋಗ್ರಾಫ್ ಮಾಡಿದ್ದಾರೆ. ಈ ವರ್ಷದ ಸೂಪರ್ ಹಿಟ್ ಸಾಂಗ್ ಇದಾಗಲಿದೆ. ಈಗಾಗಲೇ ಚಿತ್ರದ ಬಹುತೇಕ ಚಿತ್ರೀಕರಣ ಮುಗಿದಿದ್ದು, 2 ಫೈಟ್ಸ್, ಒಂದು ಹಾಡಿನ ಪ್ಯಾಚ್ ವರ್ಕ್  ಮಾತ್ರವೇ ಬಾಕಿಯಿದೆ. ರೇಶ್ಮೆ ನೂಲಿಗೆ ಉತ್ತಮ ಬೆಲೆ ಸಿಗಬೇಕೆಂದು ಹೋರಾಡುವ  ನಮ್ಮ ಮಣ್ಣಿನ ಪ್ರೇಮಿಗಳ ಅದ್ಭುತ ಪ್ರೇಮಕಥೆ ಈ ಚಿತ್ರದಲ್ಲಿದೆ.

    ಈಗಾಗಲೇ ಚಿತ್ರದ ಎಡಿಟಿಂಗ್ ಮುಗಿದು, ಡಬ್ಬಿಂಗ್ ಕೂಡ  ಕೊನೇ ಹಂತದಲ್ಲಿದೆ. ಚಿತ್ರಕ್ಕೆ  ಸ್ವಿಟ್ಜರ್ ಲ್ಯಾಂಡ್ ನಲ್ಲಿ 15 ದಿನ ಹನ್ನೊಂದು ಲೊಕೇಶನ್ ಗಳಲ್ಲಿ  ಮೂರನೇ ಹಂತದ ಚಿತ್ರೀಕರಣ ನಡೆಸಲಾಗಿದೆ.  ಅಲ್ಲದೆ 50 ಲಕ್ಷ ರೂ.ಗಳ  ವೆಚ್ಚದಲ್ಲಿ ಕುಣಿಗಲ್ ನ ಯುಬಿ ಸ್ಟೆಡ್ ಫಾರಂ(ಕುದುರೆ ಫಾರಂ)ನಲ್ಲಿ ಸುಮಾರು 5 ದಿನಗಳವರೆಗೆ  ಅದ್ದೂರಿಯಾಗಿ ಹಾಡೊಂದನ್ನು ಚಿತ್ರೀಕರಿಸಲಾಗಿದೆ. ಹೀಗೆ ಚಿತ್ರಕಥೆಯಷ್ಟೇ ಪ್ರಾಮುಖ್ಯತೆಯನ್ನು ಚಿತ್ರದ ಹಾಡುಗಳಿಗೂ ಸಹ  ನೀಡಲಾಗಿದ್ದು, ಒಂದು ಸಿನಿಮಾಗಾಗುವಷ್ಟು ಖರ್ಚನ್ನು ನಿರ್ಮಾಪಕ ಛಲವಾದಿ ಕುಮಾರ್ ಅವರು ಹಾಡುಗಳಿಗೇ ಮಾಡುವ ಮೂಲಕ ಅದ್ದೂರಿತನಕ್ಕೆ ಎಲ್ಲೂ ಕೊರತೆ ಬಾರದಂತೆ ನೋಡಿಕೊಂಡಿದ್ದಾರೆ. ಅಲ್ಲದೆ ಹಾಡುಗಳನ್ನು ಹಾಸನ ಮತ್ತು ಹಾವೇರಿಯಲ್ಲಿ  ಅದ್ದೂರಿ ಸಮಾರಂಭದಲ್ಲಿ

     

    ರಿಲೀಸ್ ಮಾಡುವ ಯೋಜನೆ ಹಾಕಿಕೊಂಡಿದ್ದಾರೆ.    ಪವಿತರ ಇಂಟರ್ ನ್ಯಾಷನಲ್ ಮೂವೀಮೇಕರ್ಸ್ ಅಡಿಯಲ್ಲಿ  ನಿರ್ಮಾಪಕ  ಛಲವಾದಿ ಕುಮಾರ್ ಅವರು ಈ  ಚಿತ್ರವನ್ನು ಅದ್ದೂರಿ ಬಜೆಟ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಾಗಶೇಖರ್ ಅವರ  ಕಥೆ, ಚಿತ್ರಕಥೆ ನಿರ್ದೇಶನ ಚಿತ್ರಕ್ಕಿದ್ದು   ಶ್ರೀಧರ ವಿ. ಸಂಭ್ರಮ್  ೫ ಹಾಡುಗಳನ್ನು ಕಂಪೋಜ್ ಮಾಡಿದ್ದಾರೆ. ಸೋನು ನಿಗಂ, ಶ್ರೇಯಾ ಘೋಷಾಲ್, ಮಂಗ್ಲಿ ದನಿಯಾಗಿದ್ದಾರೆ. ರಾಗಿಣಿ ದ್ವಿವೇದಿ, ಚೇತನ್ ಚಂದ್ರ,(ಕೆಮಿಯೋ), ರಂಗಾಯಣ ರಘು, ಸಾಧು ಕೋಕಿಲ , ತಬಲಾನಾಣಿ, ಗಿಚ್ಚಿಗಿಲಿಗಿಲಿ ವಿನೋದ್ ಅಲ್ಲದೆ ಖಳನಟ ಸಂಪತ್ ಕುಮಾರ್ ಸೇರಿದಂತೆ  ಹೆಸರಾಂತ ಕಲಾವಿದರ ತಾರಾಗಣ ಈ ಚಿತ್ರಕ್ಕಿದೆ. A 24 ಕ್ರಿಯೇಶನ್ಸ್ ಥ್ರೂ ಗೋಕುಲ್ ಫಿಲಂಸ್ ಈ ಚಿತ್ರವನ್ನು ಪ್ರಪಂಚದಾದ್ಯಂತ ಬಿಡುಗಡೆ ಮಾಡುತ್ತಿದೆ.

  • ವೋಟ್ ಮಾಡದೇ ಬ್ಲೇಮ್ ಮಾಡಬೇಡಿ: ನಟಿ ರಚಿತಾ ರಾಮ್

    ವೋಟ್ ಮಾಡದೇ ಬ್ಲೇಮ್ ಮಾಡಬೇಡಿ: ನಟಿ ರಚಿತಾ ರಾಮ್

    ನ್ನಡದ ಹೆಸರಾಂತ ನಟಿ ರಚಿತಾ ರಾಮ್ (Rachitha Ram) ಕತ್ರಿಗುಪ್ಪೆಯಲ್ಲಿ ಮತದಾನ (Voting) ಮಾಡಿದರು. ಸಾಮಾನ್ಯರಂತೆ ಅರ್ಧ ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಅಭಿಮಾನಿಗಳು ರಚಿತಾ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಸಿದರು.

    ಮತದಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ, ‘ಮನೆಯಲ್ಲಿ ಕೂತು ಕಾಮೆಂಟ್ ಮಾಡೋದಕ್ಕಿಂದ ಬಂದು ವೋಟ್ ಮಾಡಿ. ವೋಟ್ ಮಾಡದೇ ಬ್ಲೇಮ್ ಮಾಡಬೇಡಿ, ನಮ್ಮ ನಾಯಕರ ಆಯ್ಕೆ ಮಾಡಲೇಬೇಕು. ಬಿಸಿಲು ಅಂತ ಮನೆಯಲ್ಲಿ ಕೂರಬೇಡಿ, ಸಂಜೆವರೆಗೂ ಟೈಂ ಇದೆ ಬಂದು ವೋಟ್ ಮಾಡಿ. ಹಿರಿಯನಾಗರೀಕರೆ ಉತ್ಸಾಹದಿಂದ ವೋಟ್ ಮಾಡುವಾಗ ಯುವಕರು ಯಾಕೆ ಮನೆಯಲ್ಲಿ ಕೂರಬೇಕು’ ಎಂದು ಅವರು ಪ್ರಶ್ನೆ ಮಾಡಿದರು.

    ರಿಚರ್ಡ್ ಆಂಟನಿ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿರುವ ರಕ್ಷಿತ್ ಶೆಟ್ಟಿ ಕೂಡ ಬೆಂಗಳೂರಿನಿಂದ ಉಡುಪಿಗೆ ಪ್ರಯಾಣ ಬೆಳೆಸಿ ಮತ ಹಾಕಿದ್ದಾರೆ. ಪ್ರತಿ ಬಾರಿಯೂ ಅವರು ತಪ್ಪದೇ ಮತದಾನದ ಪ್ರಕ್ರಿಯೆಯಲ್ಲಿ ಭಾಗಿಯಾಗುತ್ತಾರೆ. ಮತದಾನದ ನಂತರ ಮಾಧ್ಯಮಗಳ ಜೊತೆಯ ಮಾತನಾಡಿದ್ದಾರೆ.

     

    ಐದು ವರ್ಷದಲ್ಲಿ ಏನು ಅಭಿವೃದ್ಧಿಯಾಗಿದೆ ಎಂದು ನೋಡಿ ವೋಟ್ ಹಾಕುತ್ತೇನೆ. ಮುಂದಿನ ಐದು ವರ್ಷ ಯಾವ ನಾಯಕ ಅಧಿಕಾರಕ್ಕೆ ಬರಬೇಕು  ಎಂದು ವೋಟ್ ಮಾಡ್ತೇನೆ. ಯೋಚನೆ ಮಾಡಿ ರಾಜಕೀಯ ತಿಳಿದವರ ಜೊತೆ ತರ್ಕ ಮಾಡಿ ಮತ ಹಾಕುತ್ತೇನೆ. ಯಾವಾಗಲೂ ನಾನು ಒಂದು ನಿರ್ಧಾರಕ್ಕೆ ಬಂದು ಮತ ಹಾಕುತ್ತೇನೆ. ದೇಶವನ್ನು ಚೆನ್ನಾಗಿ ನಡೆಸಿಕೊಂಡು ಹೋಗುವ ನಾಯಕ ಅಧಿಕಾರಕ್ಕೆ ಬರಬೇಕು ಎಂದಿದ್ದಾರೆ ರಕ್ಷಿತ್.