ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಆಟೋ ಚಾಲಕರ ಸಂಘದ ರಾಯಭಾರಿ ಆಗಿ ನೇಮಕಗೊಂಡಿದ್ದಾರೆ. ಖಾಕಿ ಶರ್ಟ್ ಧರಿಸಿಕೊಂಡೇ ಆಟೋ ಚಲಾಯಿಸಿ ಖುಷಿ ಪಟ್ಟಿದ್ದಾರೆ.
ಬೆಂಗಳೂರಿನಿಂದ (Bengaluru) ನೂರಾರು ಆಟೋ ಚಾಲಕರು ಆರ್.ಆರ್ ನಗರದ ಅವರ ನಿವಾಸದ ಬಳಿ ಜಮಾಯಿಸಿ ರಚಿತಾರನ್ನ ಅಫಿಷಿಯಲ್ ಆಗಿ ಚಾಲಕರ ಸಂಘದ (Auto Drivers Association) ರಾಯಭಾರಿಯನ್ನಾಗಿ ಮಾಡಿಕೊಳ್ಳುವ ಕಾರ್ಯಕ್ರಮ ಮಾಡಿದ್ದಾರೆ. ಆಟೋ ಎದುರು ಆಟೋ ಚಾಲಕರ ವಸ್ತ್ರದಲ್ಲೇ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದಾರೆ ರಚಿತಾ ರಾಮ್. ಈ ವಿಚಾರವನ್ನ ತಮ್ಮ ಸೋಷಿಯಲ್ ಮೀಡಿಯಾ ಇನ್‌ಸ್ಟಾ ಖಾತೆಯಲ್ಲೂ ಹಂಚಿಕೊಂಡಿದ್ದಾರೆ.
ʻಅತಿರಥ ಮಹಾರಥ ಸಾರಥಿಗಳಿಗೆ ನನ್ನ ಸಮಸ್ಕಾರ, ನನ್ನನ್ನು ಆಟೋ ಚಾಲಕರ ಸಂಘದ ಬ್ರ್ಯಾಂಡ್ ಅಂಬಾಸಿಡರ್ ಆಗಿ ನೇಮಕ ಮಾಡಿದ್ದಕ್ಕೆ ಧನ್ಯವಾದಗಳುʼ ಎಂದಿದ್ದಾರೆ ರಚಿತಾ. ಅನೇಕ ಮಹಿಳಾ ಆಟೋ ಚಾಲಕಿಯರೂ ಸೇರಿದಂತೆ ಆಟೋ ಚಾಲಕರು ರಚಿತಾ ಮನೆ ಮುಂದೆ ಭರ್ಜರಿಯಾಗಿ ಜಮಾಯಿಸಿದ್ದರು. ಆಟೋ ಚಾಲಕಿಯರ ಜೊತೆ ತಾವೂ ಖಾಕಿ ಶರ್ಟ್ ಧರಿಸಿಯೇ ನಿಂತಿದ್ದರು ರಚಿತಾ. ಇದೀಗ ರಚಿತಾ ರಾಮ್ ಆಟೋ ಚಾಲಕರ ಸಂಘದ ರಾಯಭಾರಿ.
ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಕೊನೆಗೂ ತಮ್ಮ ಮದ್ವೆ ಬಗ್ಗೆ ಸುಳಿವು ಕೊಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ (Hubballi) ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವಾಗ, ಇನ್ನೂ ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಹೇಳಿದ್ದಾರೆ. ಇದು ರಚ್ಚು ಫ್ಯಾನ್ಸ್‌ಗೆ ಸಿಕ್ಕಾಪಟ್ಟೆ ಖುಷಿ ಕೊಟ್ಟಿದೆ.
ಹೌದು. ಇತ್ತೀಚೆಗೆ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲೂ ಮದ್ವೆ (Rachita Ram Marriage) ಬಗ್ಗೆ ಸುಳಿವು ಕೊಟ್ಟಿದ್ದರು. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯ ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದರು. ಇದೀಗ ಮತ್ತೊಮ್ಮೆ ಮದ್ವೆ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ರಚ್ಚು, ಸದ್ಯದಲ್ಲಿಯೇ ಮದುವೆ ಆಗುವೆ, ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಡುವೆ ಎಂದು ಹೇಳಿದರು. ಲವ್ ಮ್ಯಾರೇಜೋ & ಅರೇಂಜ್ ಮ್ಯಾರೇಜೋ ಏನೋ ಮ್ಯಾರೇಜ್ ಆಗುವೆ. ಒಟ್ನಲ್ಲಿ ಇನ್ನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡುವೆ ಅಂತ ಹೇಳಿದ್ದಾರೆ.
33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಪರಭಾಷಾ ಸಿನಿಮಾಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ರಜನಿಕಾಂತ್ ಅವರ `ಕೂಲಿʼ ಸಿನಿಮಾದಲ್ಲೂ ವಿಲನ್ ಪಾತ್ರದಲ್ಲಿ ನಟಿಸಿ ಭಾರೀ ಮೆಚ್ಚುಗೆ ಗಳಿಸಿದ್ದರು. ಇದೀಗ ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್, ಅಯೋಗ್ಯ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಕಾನ್ಸೆಪ್ಟ್ನ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ದುನಿಯಾ ವಿಜಯ್ ಜೊತೆ 2ನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ನಟಿ ರಚಿತಾ. ಅಲ್ಲದೇ ಇತ್ತೀಚೆಗೆ ವಿಲನ್ ಪಾತ್ರಗಳಿಗೆ ಬೇಡಿಕೆ ಹೆಚ್ಚಾಗ್ತಿದೆ ಎಂದು ನಟಿ ಹೇಳಿಕೊಂಡಿದ್ದರು.
ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) 33ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ತಮ್ಮ ಹುಟ್ಟುಹಬ್ಬವನ್ನ ನಿವಾಸದ ಮುಂದೆ ಅಭಿಮಾನಿಗಳ ಸಮ್ಮುಖದಲ್ಲಿ ಗ್ಯಾಂಡ್ ಆಗಿ ಸೆಲೆಬ್ರೇಟ್ ಮಾಡಿಕೊಂಡಿದ್ದಾರೆ. ದೂರದ ಊರಿನಿಂದ ಬಂದ ಅಭಿಮಾನಿಗಳಿಗೆ ಸೆಲ್ಫಿ ಕೊಟ್ಟು ಇಡೀ ದಿನ ಅವರೊಂದಿಗೆ ಕಳೆದಿದ್ದಾರೆ. ಹುಟ್ಟುಹಬ್ಬದ ಈ ವೇಳೆ ದರ್ಶನ್ ಅಭಿಮಾನಿಗಳು (Darshan Fans) ಹಬ್ಬ ಮಾಡುವ ಸುದ್ದಿ ಕೊಟ್ಟಿದ್ದಾರೆ ರಚಿತಾ ರಾಮ್.
ರಚಿತಾ ರಾಮ್, ನಟ ದರ್ಶನ್ ಅವರ ಬಗ್ಗೆ ಹಲವಾರು ಬಾರಿ ಮಾತನಾಡಿದ್ದಾರೆ. ದರ್ಶನ್ ಕಳೆದ ಬಾರಿ ಜೈಲಿನಲ್ಲಿದ್ದಾಗ ಭೇಟಿ ಕೂಡಾ ಮಾಡಿ ಬಂದಿದ್ದರು. ತಮ್ಮ ಹುಟ್ಟುಹಬ್ಬದ ವೇಳೆ ಮತ್ತೆ ಅವರ ನೆನಪು ಮಾಡಿಕೊಂಡಿದ್ದಾರೆ ರಚಿತಾ. ಪ್ರತೀವರ್ಷ ದರ್ಶನ್ ಅವರಿಂದ ಬರುತ್ತಿದ್ದ ವಿಶ್ ಮಿಸ್ ಮಾಡಿಕೊಂಡ ಬಗ್ಗೆ ಬೇಸರ ಹೊರಹಾಕಿದ್ದಾರೆ. ಇನ್ನು ದರ್ಶನ್ ನಟನೆಯ ಡೆವಿಲ್ ಸಿನಿಮಾ ಇದೇ ಡಿಸೆಂಬರ್‌ನಲ್ಲಿ ತೆರೆಗೆ ಬರಲಿದೆ. ಈ ಸಿನಿಮಾದ ಪ್ರಚಾರ ಕಾರ್ಯ ಭರ್ಜರಿಯಾಗಿ ನಡೆಯುತ್ತಿದೆ. ಇದನ್ನೂ ಓದಿ: ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಲ್ಯಾಂಡ್ ಲಾರ್ಡ್ ಟೀಮ್‌ನಿಂದ ಗಿಫ್ಟ್
ಡೆವಿಲ್ ಸಿನಿಮಾದ (Devil Movie) ರಿಲೀಸ್ ವೇಳೆ ಚಿತ್ರದ ಪ್ರಚಾರಕ್ಕೆ ನಿಲ್ಲೋದಾಗಿ ನಟಿ ರಚಿತಾ ರಾಮ್ ಹೇಳಿದ್ದಾರೆ. ನನ್ನನ್ನು ಇಂಡಸ್ಟ್ರಿಗೆ ತಂದಿದ್ದೇ ದರ್ಶನ್ ಸರ್, ಅವರು ನಮ್ಮ ಗುರುಗಳು. ಅವರ ಸಿನಿಮಾ ರಿಲೀಸ್ ವೇಳೆ ಪ್ರಚಾರ ಮಾಡುತ್ತೇನೆ. ಆ ಚಿತ್ರತಂಡದ ಜೊತೆ ನಿಲ್ಲುತ್ತೇನೆ ಎನ್ನುವ ಮಾತುಗಳನ್ನಾಡಿದ್ದಾರೆ.
ಈ ಸುದ್ದಿ ಕೇಳಿದ ದಚ್ಚು ಫ್ಯಾನ್ಸ್ ಖುಷಿಯಿಂದ ಸಂಭ್ರಮಿಸಿದ್ದಾರೆ. ರಚಿತಾ ರಾಮ್ ಹುಟ್ಟುಹಬ್ಬಕ್ಕೆ ಎಲ್ಲಾ ನಟರ ಅಭಿಮಾನಿಗಳು ಆಗಮಿಸಿ ರಚ್ಚು ಬರ್ತ್ಡೇ ಗ್ಯಾಂಡ್ ಆಗಿ ಸೆಲಬ್ರೇಟ್ ಮಾಡಿದ್ದಾರೆ. ರಚಿತಾ ರಾಮ್ ಈ ವರ್ಷದ ತಮ್ಮ ಹುಟ್ಟು ಹಬ್ಬದ ವೇಳೆ ಹಲವಾರು ವಿಚಾರಗಳ ಬಗ್ಗೆ ಮನಬಿಚ್ಚಿ ಮಾತಾಡಿದ್ದಾರೆ.
ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಹುಟ್ಟುಹಬ್ಬದ ಸುಸಂದರ್ಭದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ನವರಾತ್ರಿ ವೇಳೆ ಮೂಗುಬೊಟ್ಟು ಚುಚ್ಚಿಸಿಕೊಂಡಿದ್ದ ರಚಿತಾ ತೆರೆಮರೆಯಲ್ಲಿ ಮದುವೆಗೆ ಸಿದ್ಧರಾಗ್ತಿದ್ದಾರಾ ಅನ್ನೋ ಅನುಮಾನಕ್ಕೆ ಸ್ಪಷ್ಟನೆ ಕೊಟ್ಟಿದ್ದಾರೆ.
ಶೀಘ್ರದಲ್ಲೇ ಮದುವೆಯಾಗುವ (Marriage) ಬಗ್ಗೆ ನಟಿ ರಚಿತಾ ರಾಮ್ ಮಾತ್ನಾಡಿದ್ದಾರೆ. ಮದುವೆಯಾಗುವ ಹುಡುಗ ಹೇಗಿರಬೇಕು ಎನ್ನುವ ಬಗ್ಗೆ ಯಾವ ಡ್ರೀಮ್ ಇಲ್ಲ. ಮನೆಯಲ್ಲಿ ಹುಡುಗನನ್ನ ಹುಡುಕುವ ಕಾರ್ಯಗಳು ನಡೆಯುತ್ತಿವೆ ಎನ್ನುವ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಮೈಸೂರು ಅರಮನೆ ಪೇಂಟಿಂಗ್ ಮುಂದೆ ದಸರಾ ಗೊಂಬೆಯಂತೆ ಕಂಗೊಳಿಸಿದ ರಮ್ಯಾ!
33ನೇ ವಸಂತಕ್ಕೆ ಕಾಲಿಟ್ಟಿರುವ ನಟಿ ರಚಿತಾ ರಾಮ್ ಪರಭಾಷಾ ಸಿನಿಮಾಗಳಲ್ಲೂ ನಟಿಸಿದ್ದಾರೆ. ರಜನಿಕಾಂತ್ ಅವರ ಸಿನಿಮಾದಲ್ಲಿ ನಟಿಸಿದ್ದಾರೆ. ದುನಿಯಾ ವಿಜಯ್ ನಟನೆಯ ಲ್ಯಾಂಡ್ ಲಾರ್ಡ್, ಅಯೋಗ್ಯ-2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಇವೆರಡು ಸಿನಿಮಾಗಳ ಟೀಸರ್ ರಿಲೀಸ್ ಆಗಿದೆ. ವಿಭಿನ್ನ ಕಾನ್ಸೆಪ್ಟ್ನ ಲ್ಯಾಂಡ್ ಲಾರ್ಡ್ ಸಿನಿಮಾ ಮೂಲಕ ದುನಿಯಾ ವಿಜಯ್ ಜೊತೆ ಎರಡನೇ ಬಾರಿ ಸ್ಕ್ರೀನ್ ಶೇರ್ ಮಾಡುತ್ತಿದ್ದಾರೆ ನಟಿ ರಚಿತಾ. ಇದನ್ನೂ ಓದಿ: ಕಾಂತಾರ ಚಾಪ್ಟರ್ 1 ಸಿನಿಮಾ ನೋಡಿ ಹಾಡಿಹೊಗಳಿದ ಯಶ್
ನಟಿ ರಚಿತಾ ರಾಮ್ ಈ ಹಿಂದೆಯೂ ಮದುವೆಯ ಬಗ್ಗೆ ಕೇಳಲಾದ ಪ್ರಶ್ನೆಗೆ ಗೌಡ್ರ ಹುಡುಗ ಸಿಕ್ರೆ ಮದುವೆಯಾಗ್ತೀನಿ ಎಂದು ಹೇಳಿದ್ದರು. ಪ್ರತಿಬಾರಿಯೂ ಮದುವೆಯ ಪ್ರಸ್ತಾಪ ಬಂದಾಗಲೆಲ್ಲ ರಚಿತಾ, ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗ್ತಿದ್ರು. ಈ ಸಲ ಶೀಘ್ರವೇ ಮದ್ವೆ ಆಗ್ತೀನಿ ಎಂದು ಹೇಳಿರುವ ಹಿಂದೆ ಅವರ ಕುಟುಂಬಸ್ಥರು ಹುಡುಗನ ಹುಡುಕುವ ಕೆಲಸ ನಡೆಸಿದ್ದಾರೆ ಅಂತಾನೇ ಹೇಳ್ಬಹುದು. ಬಹುತೇಕ 2026ರಲ್ಲಿ ರಚಿತಾ ಮದುವೆಯ ಸುಳಿವು ನೀಡಿದ್ದಾರೆ. ರಚಿತಾ ಫ್ಯಾನ್ಸ್ ಈ ಸುದ್ದಿ ಕೇಳಿ ಕುಣಿದು ಕುಪ್ಪಳಿಸುತ್ತಿದ್ದಾರೆ.
ಕರುನಾಡಿನ ಎಲ್ಲರ ನೆಚ್ಚಿನ ವಾಹಿನಿ ಜೀ ಕನ್ನಡ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಸರಿಗಮಪ, ವೀಕೆಂಡ್ ವಿತ್ ರಮೇಶ್, ಡ್ರಾಮಾ ಜೂನಿಯರ್ಸ್ ಮತ್ತು ಕಾಮಿಡಿ ಕಿಲಾಡಿಗಳು ಸೇರಿ ಹಲವಾರು ಶೋಗಳ ಮೂಲಕ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದೆ. ಈ ಪಟ್ಟಿಗೆ ಭರ್ಜರಿ ಬ್ಯಾಚುಲರ್ಸ್ (Bharjari Bachelors) ಸೀಸನ್ 2 ಸೇರ್ಪಡೆಯಾಗಿದ್ದು, ಇದು ಜೀವನದ ಪ್ರಮುಖ ಮೈಲಿಗಲ್ಲುಗಳಲ್ಲಿ ಒಂದಾದ ಮದುವೆಗೆ ತಯಾರಿ ನಡೆಸುತ್ತಿರುವ ಯುವ ಬ್ಯಾಚುಲರ್ಗಳ ಜೀವನ ಮತ್ತು ವ್ಯಕ್ತಿತ್ವಗಳ ಮೇಲೆ ಕೇಂದ್ರೀಕರಿಸುವ ರಿಯಾಲಿಟಿ ಶೋ ಆಗಿದೆ.
ಭರ್ಜರಿ ಬ್ಯಾಚುಲರ್ಸ್ ಮೊದಲ ಸೀಸನ್ ಯಶಸ್ಸಿನ ಬಳಿಕ ಎರಡನೇ ಸೀಸನ್ ಕೂಡ ಕರ್ನಾಟಕದಾದ್ಯಂತ ಪ್ರೇಕ್ಷಕರ ಹೃದಯ ಗೆದ್ದಿದೆ. ಈ ಸೀಸನ್‌ನಲ್ಲಿ ಹೊಸ ಬ್ಯಾಚುಲರ್‌ಗಳನ್ನು ಪರಿಚಯಿಸಲಾಯಿತು. ಅವರು ತಮ್ಮ ಆತ್ಮವಿಶ್ವಾಸ, ಸಂವಹನ ಕೌಶಲ್ಯ, ಸ್ವಾಭಾವಿಕತೆ ಮತ್ತು ಒಟ್ಟಾರೆ ವ್ಯಕ್ತಿತ್ವವನ್ನು ಪರೀಕ್ಷಿಸಲು ಮಾಡಲಾಗಿದ್ದ ಅನೇಕ ಸುತ್ತುಗಳಲ್ಲಿ ಭಾಗವಹಿಸಿ ಎಲ್ಲರ ಮನಗೆದ್ದಿದ್ದಾರೆ.
ಸೀಸನ್ ನಲ್ಲಿ ಬ್ರಹ್ಮಚಾರಿ vs ಸಂಸಾರಿ, ಡೆಡಿಕೇಶನ್ ರೌಂಡ್, ಕಂಪ್ಯಾಟಿಬಿಲಿಟಿ ರೌಂಡ್, ಪ್ರೊಪೋಸ್ ರೌಂಡ್, ಸೀನಿಯರ್ಸ್ vs ಜೂನಿಯರ್ಸ್ ಹೀಗೆ ವಿಭಿನ್ನ ಸುತ್ತುಗಳು ಇದ್ದು ಇದರಲ್ಲಿ ಏಂಜೆಲ್ಸ್ ಮತ್ತು ಬ್ಯಾಚುಲರ್ಸ್ ಸಕ್ಕತಾಗಿ ಭಾಗವಹಿಸಿ ಎಲ್ಲರನ್ನೂ ಮನರಂಜಿಸಿದ್ದಾರೆ. ಅಷ್ಟೇ ಅಲ್ಲದೇ ಈ ಶೋ ಭಾವನಾತ್ಮಕವಾಗಿ ಜನರನ್ನು ತನ್ನತ್ತ ಸೆಳೆಯುವಲ್ಲಿ ಯಶಸ್ವಿಯಾಗಿದೆ.
ಅದ್ಬುತ ನಿರೂಪಣೆಯ ಮೂಲಕ ನಿರಂಜನ್ ದೇಶಪಾಂಡೆ (Niranjan Deshpande) ಈ ಶೋನ ನಡೆಸಿಕೊಟ್ಟಿದ್ದು, ಜಡ್ಜ್‌ಗಳಾದ ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಮತ್ತು ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಈ ಶೋನ ಮತ್ತೊಂದು ಕೇಂದ್ರ ಬಿಂದುವಾಗಿದ್ದರು. ಹಾಗೆಯೇ ಶೋನಲ್ಲಿ ಭಾಗವಹಿಸಿದ ಬ್ಯಾಚುಲರ್ಸ್ ಹಾಗೂ ಏಂಜೆಲ್ಸ್ ಗಳು ತಮ್ಮದೇ ಆದ ಶೈಲಿಯಲ್ಲಿ ವೀಕ್ಷಕರನ್ನು ಮನರಂಜಿಸಿದ್ದಾರೆ. ಇದನ್ನೂಓದಿ: ದರ್ಶನ್-ಪವಿತ್ರಾ ಲಿವ್ ಇನ್ ರಿಲೇಷನ್ ಶಿಪ್‌ನಲ್ಲಿದ್ದರು: ಸರ್ಕಾರ ಪರ ವಕೀಲ
ಅಂತಿಮ ಸುತ್ತಿನಲ್ಲಿ ಸುನೀಲ್-ಅಮೃತಾ, ದರ್ಶನ್-ಅಪೇಕ್ಷಾ, ರಕ್ಷಕ್ ಬುಲೆಟ್- ರಮೋಲ, ಹುಲಿ ಕಾರ್ತಿಕ್- ಧನ್ಯ, ಗಾಬ್ರಿ -ಅನನ್ಯಾ, ಉಲ್ಲಾಸ್-ಪವಿ, ಪ್ರವೀಣ್ ಜೈನ್- ಸುಕೃತಾ, ಪ್ರೇಮ್ ಥಾಪಾ-ವಿಜಯಲಕ್ಷ್ಮಿ, ಡ್ರೋನ್ ಪ್ರತಾಪ್-ಗಗನಾ, ಮತ್ತು ಸೂರ್ಯಾ- ಅಭಿಜ್ಞಾ ಭಾಗವಹಿಸಲಿದ್ದಾರೆ. ಹಾಗೆಯೇ ಭರ್ಜರಿ ಬ್ಯಾಚುಲರ್ ಸೀಸನ್ 2 ನ ವಿಜೇತರು ಯಾರಾಗುತ್ತಾರೆ ಅನ್ನುವುದಕ್ಕೆ ಈ ವಾರಾಂತ್ಯದಲ್ಲಿ ಸಿಗಲಿದೆ ಉತ್ತರ.
ಭರ್ಜರಿ ಬ್ಯಾಚುಲರ್ಸ್ ಸೀಸನ್ 2 ನ ವಿಜೇತರು ಯಾರಾಗ್ತಾರೆ? ತಿಳ್ಕೊಳೋಕೆ ಮಿಸ್ ಮಾಡದೇ ನೋಡಿ ಜೀ಼ ಕನ್ನಡ ಇದೇ ಭಾನುವಾರ ಸಂಜೆ 6 ಗಂಟೆಗೆ.
ಬೆಂಗಳೂರು: ರೌಡಿಶೀಟರ್ ಶಿವಪ್ರಕಾಶ್ ಅಲಿಯಾಸ್ ಬಿಕ್ಲು ಶಿವ ಹತ್ಯೆ ಪ್ರಕರಣದ (Biklu Shiva Murder Case) ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು, ಸ್ಫೋಟಕ ರಹಸ್ಯಗಳು ಬಯಲಾಗುತ್ತಿವೆ. ಕೊಲೆ ಪ್ರಕರಣದ ಎ1 ಆರೋಪಿ ಜಗ್ಗ ಅಲಿಯಾಸ್ ಜಗದೀಶ್ ನಟಿ ರಚಿತಾ ರಾಮ್‌ಗೆ (Rachita ram) ಭರ್ಜರಿ ಗಿಫ್ಟ್ ಕೊಟ್ಟಿರುವುದು ಬೆಳಕಿಗೆ ಬಂದಿದೆ.
ಪ್ರಕರಣದ ಪ್ರಮುಖ ಆರೋಪಿ ಜಗ್ಗ ಡಿಂಪಲ್ ಕ್ವೀನ್‌ಗೆ ಸೀರೆ ಹಾಗೂ ಗೋಲ್ಡ್ ಗಿಫ್ಟ್ ನೀಡಿರುವ ಫೋಟೋ ವೈರಲ್ ಆಗಿದೆ. ರವಿ ಬೋಪಣ್ಣ ಸಿನಿಮಾ ಶೂಟಿಂಗ್ ವೇಳೆ ಜಗ್ಗ ನಟಿಗೆ ಈ ಉಡುಗೊರೆಯನ್ನ ನೀಡಿದ್ದಾನೆ. ಈ ಫೋಟೋದಲ್ಲಿ ಹಿರಿಯ ನಟ ರವಿಚಂದ್ರನ್ (Ravichandran) ಕೂಡ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೊಲೆ ಆರೋಪಿಗೆ ಸಿನಿ ನಂಟಿರುವುದು ಗೊತ್ತಾಗಿದೆ. ಇದನ್ನೂ ಓದಿ: ಕಲಬುರಗಿ | ಜೂಜಾಡುತ್ತಿದ್ದ ಕಾಂಗ್ರೆಸ್, ಬಿಜೆಪಿ ಮುಂಖಂಡರ ಸಹಿತ 7 ಮಂದಿ ಅರೆಸ್ಟ್
ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಾಜಿ ಸಚಿವ ಬೈರತಿ ಬಸವರಾಜ್ ಹೆಸರು ಕೇಳಿಬಂದಿತ್ತು. ಪೊಲೀಸರು ಅವರನ್ನ ವಿಚಾರಣೆಗೂ ಒಳಪಡಿಸಿದ್ದರು. ಬುಧವಾರ ಮತ್ತೆ ವಿಚಾರಣೆಗೆ ಹಾಜರಾಗುವಂತೆಯೂ ತನಿಖಾಧಿಕಾರಿ ಸೂಚಿಸಿದ್ದಾರೆ. ಅಲ್ಲದೇ ಎ1 ಜಗ್ಗದೀಶ್ ಸಹಚರರಾದ ಅನಿಲ್, ಅರುಣ್ ಹಾಗೂ ನವೀನ್ ಆರೋಪಿಗಳನ್ನು ಬಂಧಿಸಲಾಗಿದೆ. ಕೊಲೆ ಬಳಿಕ ಅರುಣ್ ಹಾಗೂ ನವೀನ್ ತಲೆಮರೆಸಿಕೊಂಡಿದ್ದರು. ಸದ್ಯ ಮೂವರನ್ನ ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: ಒಡಿಶಾ ಹೋಟೆಲ್‌ನಲ್ಲಿ ಯುವತಿ ಮೇಲೆ ಅತ್ಯಾಚಾರ – ಕಾಂಗ್ರೆಸ್ ಸ್ಟೂಡೆಂಟ್ ಲೀಡರ್ ಅರೆಸ್ಟ್
ಏನಿದು ಪ್ರಕರಣ?
ರಿಯಲ್ ಎಸ್ಟೇಟ್ ವ್ಯವಹಾರ ಮಾಡುತ್ತಿದ್ದ ಶಿವಪ್ರಕಾಶ್‌ನನ್ನು (ಬಿಕ್ಲು ಶಿವ) ಹಲಸೂರು ಮನೆಯ ಎದುರು ಜುಲೈ 15ರಂದು ರಾತ್ರಿ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದರು. ಈ ಪ್ರಕರಣದ ಆರೋಪಿಗಳಾದ ಕಿರಣ್, ವಿಮಲ್, ಪ್ರದೀಪ್, ಮದನ್ ಹಾಗೂ ಸ್ಯಾಮ್ಯುವೆಲ್‌ನನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು. ಪ್ರಕರಣದ ಎ5 ಆರೋಪಿ ಶಾಸಕ ಬೈರತಿ ಬಸವರಾಜ್ ಅವರನ್ನು ಶನಿವಾರ ವಿಚಾರಣೆ ಮಾಡಲಾಗಿತ್ತು. ಇದನ್ನೂ ಓದಿ: ನಮ್ಮ ಹುಡ್ಗಿ ತಂಟೆಗೆ ಬಂದ್ರೆ ಮುಗ್ಸಿ ಬಿಡ್ತೀನಿ – ಲಾಂಗ್ ಹಿಡಿದು ರೌಡಿಶೀಟರ್ ಪುಂಡಾಟ
ಬೆಂಗಳೂರು: ತನ್ನ ವಿರುದ್ಧ ಕೇಳಿ ಬಂದ ಆರೋಪಗಳಿಗೆ ನಟಿ ರಚಿತಾ ರಾಮ್ ಮೌನ ಮುರಿದಿದ್ದು ಸಂಜು ವೆಡ್ಸ್ ಗೀತಾ 2 ನಿರ್ದೇಶಕ ರಾಜಶೇಖರ್ ಅವರದ್ದೇ ತಪ್ಪು ಎಂದು ಕಿಡಿಕಾರಿದ್ದಾರೆ.
ಕಳೆದ ಮೂರು ದಿನಗಳಿಂದ ಬರುತ್ತಿರುವ ಆರೋಪಗಳಿಗೆ ರಚಿತಾ ರಾಮ್ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಮೂಲಕ ಸ್ಪಷ್ಟನೆ ನೀಡಿದ್ದಾರೆ.
ರಚಿತಾ ರಾಮ್ ಹೇಳಿದ್ದೇನು?
ನಾಗಶೇಖರ್ ಈಗ ನನ್ನ ವಿರುದ್ಧ ಮಾಡುತ್ತಿರುವ ಎಲ್ಲಾ ಆರೋಪಗಳು ಸುಳ್ಳು. ಜನವರಿ 17 ರಂದು ಸಂಜು ವೆಡ್ಸ್ ಗೀತಾ 2 ಮೊದಲ ಬಾರಿ ಬಿಡುಗಡೆಯಾಗಿತ್ತು. ಮೊದಲ ಬಾರಿ ಸಿನಿಮಾ ಬಿಡುಗಡೆಯಾದಾಗ ನಾನು ಎಲ್ಲಾ ಪ್ರಚಾರಕ್ಕೆ ಹೋಗಿದ್ದೇನೆ. ಈ ಸಂದರ್ಭದಲ್ಲಿ ಇಡೀ ಸಿನಿಮಾ ತಂಡ ನನಗೆ ಮೆಚ್ಚುಗೆ ಸೂಚಿಸಿತ್ತು. ಈಗ ಯಾಕೆ ನನ್ನ ಅನುಪಸ್ಥಿತಿಯಲ್ಲಿ ಆ ರೀತಿ ಮಾತಾನಾಡುತ್ತಿದ್ದಾರೋ ಗೊತ್ತಿಲ್ಲ. ಇದನ್ನೂ ಓದಿ: ರಚಿತಾ ರಾಮ್ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ : ನಿರ್ದೇಶಕ ನಾಗಶೇಖರ್ ಒತ್ತಾಯ
ಈಗ ನಾನು ಬೇರೊಂದು ಸಿನಿಮಾದಲ್ಲಿ ಅಭಿನಯಿಸುತ್ತಿದ್ದು ಅವರಿಗೆ ಡೇಟ್ ನೀಡಿದ್ದೇನೆ. ಈ ಸಂದರ್ಭದಲ್ಲಿ ಎರಡನೇ ಬಾರಿ ಸಿನಿಮಾ ರಿಲೀಸ್ ಆಗುತ್ತಿದ್ದು ಈಗ ಪ್ರಚಾರಕ್ಕೆ ಬರಬೇಕು ಎಂದು ಹೇಳಿದರೆ ಹೇಗೆ? ಇದೇ ಸಂಜು ವೆಡ್ಸ್ ಗೀತಾ ತಂಡ ಶೂಟಿಂಗ್ ಕಾರಣವೊಡ್ಡಿ ಬೇರೊಂದು ಸಿನಿಮಾ ಪ್ರಚಾರಕ್ಕೆ ಅವಕಾಶ ಮಾಡಿಕೊಡಲಿಲ್ಲ. ಆ ಸಿನಿಮಾವನ್ನು ಮಹಿಳಾ ನಿರ್ಮಾಪಕಿ ನಿರ್ಮಾಣ ಮಾಡಿದ್ದರು. ಅವರು ದುಡ್ಡು ಹಾಕಿರ್ಲಿಲ್ವಾ? ಅವಾಗ ಆ ನಿರ್ಮಾಪಕರಿಗೆ ಕಷ್ಟ ಆಗಿಲ್ವಾ?
ನಾನು ಪ್ರಚಾರಕ್ಕೆ ಹೋಗದೇ ಇದ್ರೂ ನಾನು ಸಾಮಾಜಿಕ ಜಾಲತಾಣದಲ್ಲಿ ಚಿತ್ರದ ಬಗ್ಗೆ ಪೋಸ್ಟ್, ಸ್ಟೋರಿ ಹಾಕಿದ್ದೇನೆ. ಈ ಹಿಂದೆ ಪ್ರಚಾರದ ಸಮಯದಲ್ಲಿ ಸರಿಯಾದ ಪ್ಲ್ಯಾನಿಂಗ್ ಮಾಡಿರಲಿಲ್ಲ. ಒಂದೊಂದು ದಿನ ಒಂದೊಂದು ಶೆಡ್ಯೂಲ್ ಹೇಳುತ್ತಿದ್ದರು. ಇಂದು ಕಾರ್ಯಕ್ರಮ ಎಂದು ಹೇಳಿ ಮುಂದೂಡುತ್ತಿದ್ದರು. ಹೀಗಾಗಿ ನನಗೆ ಎರಡನೇ ಬಾರಿ ಪ್ರಚಾರದಲ್ಲಿ ಭಾಗಿಯಾಗಲು ಸಾಧ್ಯವಾಗಿಲ್ಲ. ಇದೆಲ್ಲಾ ನನ್ನ ಮೇಲೆ ಉದ್ದೇಶಪೂರ್ವಕವಾಗಿಯೇ ಮಾಡಿರುವ ಆರೋಪ.
ಇನ್ನೊಂದು ಸಿನಿಮಾದ ಅಡ್ವಾನ್ಸ್ ಪಡೆದು ವಾಪಸ್ ಮಾಡಿಲ್ಲ ಎಂಬ ಮತ್ತೊಂದು ಆರೋಪ ನನ್ನ ಮೇಲೆ ಬಂದಿದೆ. ಈ ಆರೋಪದ ಬಗ್ಗೆ ಸಾರಾ ಗೋವಿಂದು ಅವರ ನೇತೃತ್ವದಲ್ಲಿ ಮಾತುಕತೆ ನಡೆಯುತ್ತಿದೆ. ಅವರು ನನ್ನ ಬಳಿ ಈ ಬಗ್ಗೆ ಏನು ಮಾತನಾಡಬೇಡ ಎಂದು ಹೇಳಿದ್ದಾರೆ. ಹೀಗಾಗಿ ನಾನು ಈ ಆರೋಪದ ಬಗ್ಗೆ ಈಗ ಮಾತನಾಡುತ್ತಿಲ್ಲ. ಇದನ್ನೂ ಓದಿ: ಅಡ್ವಾನ್ಸ್ ಹಣ ವಾಪಸ್ ಕೊಡದ ಆರೋಪ – ರಚಿತಾ ರಾಮ್ ವಿರುದ್ಧ ಮತ್ತೊಂದು ದೂರು
ನಾನು ಸಂಜು ವೆಡ್ಸ್ ಗೀತಾ 2 ಚಿತ್ರತಂಡದ ಜೊತೆ ಯಾವುದೇ ತಪ್ಪು ಮಾಡಿಲ್ಲ. ತಪ್ಪು ಮಾಡದೇ ಇರುವಾಗ ನಾನು ಯಾಕೆ ಕ್ಷಮೆ ಕೇಳಬೇಕು? ಈಗಾಗಲೇ ನಾನು ಈ ವಿಚಾರದ ಬಗ್ಗೆ ಅಭಿಮಾನಿಗಳಿಗೆ ಸ್ಪಷ್ಟನೆ ನೀಡಿದ್ದೇನೆ. ಈ ಎಲ್ಲಾ ವಿಚಾರ ತಿಳಿದುಕೊಂಡು ನಾನು ತಪ್ಪು ಮಾಡಿದ್ದೇನೆ ಎಂದು ಅಭಿಮಾನಿಗಳು ಭಾವಿಸಿದರೆ ಅಭಿಮಾನಿಗಳ ಜೊತೆ ಮಾತ್ರ ಕ್ಷಮೆ ಕೇಳುತ್ತೇನೆ ಹೊರತು ಬೇರೆ ಯಾರ ಬಳಿಯೂ ಕ್ಷಮೆ ಕೇಳುವುದಿಲ್ಲ ಎಂದು ರಚಿತಾ ರಾಮ್ ಹೇಳಿದ್ದಾರೆ.
ಅಡ್ವಾನ್ಸ್ ಹಣ ವಾಪಸ್ ಕೊಡದ ಆರೋಪದಲ್ಲಿ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ಮತ್ತೊಂದು ದೂರು ದಾಖಲಾಗಿದೆ.
‘ಉಪ್ಪಿ ರುಪ್ಪಿ’ ಸಿನಿಮಾಗಾಗಿ ಗುಳಿಕೆನ್ನೆ ಚೆಲುವೆ ರಚಿತಾ ರಾಮ್‌ಗೆ ಅಡ್ವಾನ್ಸ್ ನೀಡಲಾಗಿತ್ತು. ಈಗ ಹಣ ವಾಪಸ್ ಕೊಡದೇ ನಿರ್ಮಾಪಕಿಯನ್ನು ಸತಾಯಿಸುತ್ತಿದ್ದಾರೆಂದು ದೂರಲಾಗಿದೆ.
8 ವರ್ಷಗಳ ಹಿಂದೆ ಉಪ್ಪಿ ಮತ್ತು ರಚಿತಾ ನಟನೆಯಲ್ಲಿ ಸಿನಿಮಾ ಮೂಡಿಬರಬೇಕಿತ್ತು. ‘ಉಪ್ಪಿ ರುಪ್ಪಿ’ ಸಿನಿಮಾದಲ್ಲಿ ಉಪೇಂದ್ರ ಜೊತೆ ನಟಿಸಲು ನಟಿ ಒಪ್ಪಿಕೊಂಡಿದ್ದರು. ಈ ಸಿನಿಮಾವನ್ನು ವಿಜಯಲಕ್ಷ್ಮಿ ಅರಸ್ ನಿರ್ಮಾಣ ಮತ್ತು ಕೆ.ಮಾದೇಶ್ ನಿರ್ದೇಶನ ಮಾಡುವುದಿತ್ತು.
23 ಲಕ್ಷ ಸಂಭಾವನೆಗೆ ನಟಿ ಕಮಿಟ್ ಆಗಿದ್ದರು. ಮುಂಗಡವಾಗಿ 13 ಲಕ್ಷ ಅಡ್ವಾನ್ಸ್ ರೂಪದಲ್ಲಿ ಹಣ ಪಡೆದಿದ್ದರು. 2017 ರಲ್ಲಿ ಬ್ಯಾಂಕಾಕ್‌ನಲ್ಲಿ ಶೂಟಿಂಗ್‌ಗೆ ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿತ್ತು. ಬರುವುದಾಗಿ ಒಪ್ಪಿಕೊಂಡು ರಚಿತಾ ರಾಮ್‌ಗೆ ಟಿಕೆಟ್ ಬುಕ್ ಮಾಡಿದ್ದರು. ಆದರೆ, ಬಂದಿರಲಿಲ್ಲ. 15 ದಿನಗಳ ಕಾಲ ಈಗ ಬರ್ತೀನಿ, ಆಗ ಬರ್ತೀನಿ ಅಂತಾ ಸತಾಯಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
ಸೂಟ್ ರೂಮ್ ಬುಕ್ ಮಾಡಿಕೊಂಡು 15 ದಿನ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್ ಕಾದಿದ್ದರು. ಬಂದ ಜಾಗಕ್ಕೆ ಸುಂಕವಿಲ್ಲ ಎಂದು ಹೀರೊ ಪೋರ್ಷನ್ ಶೂಟ್ ಮಾಡಿಕೊಂಡು ಚಿತ್ರತಂಡ ವಾಪಸ್ ಆಗಿತ್ತು. ರಚಿತಾ ರಾಮ್‌ನಿಂದ ನಿರ್ಮಾಪಕಿ ಒಂದೂವರೆ ಕೋಟಿ ಕಳೆದುಕೊಂಡರು ಎನ್ನಲಾಗಿದೆ. ಒಂದು ದಿನ ಮಾತ್ರ ಮೈಸೂರಿನಲ್ಲಿ ನಡೆದ ಸಿನಿಮಾ ಶೂಟಿಂಗ್‌ನಲ್ಲಿ ನಟಿ ಭಾಗಿಯಾಗಿದ್ದರು. ನಟಿ ಕಾರಣದಿಂದ ಸಿನಿಮಾ ಅರ್ಧಕ್ಕೆ ನಿಂತು ಹೋಯಿತು.
35 ಪರ್ಸೆಂಟ್ ಮಾತ್ರ ಕಂಪ್ಲೀಟ್ ಆಗಿ ಸಿನಿಮಾ ನಿಂತು ಹೋಯಿತು. ಹಣವೂ ಇಲ್ಲ ಸಿನಿಮಾನೂ ಕಂಪ್ಲೀಟ್ ಇಲ್ಲ ಎನ್ನುವಂತಾಯಿತು. ಅವತ್ತಿನಿಂದ ಸಂಪರ್ಕಕ್ಕೆ ಸಿಗದೇ ನಟಿ ಸತಾಯಿಸುತ್ತಿದ್ದರು. ಕೊನೆಯದಾಗಿ ಫಿಲ್ಮ್ ಚೇಂಬರ್‌ಗೆ ನಿರ್ಮಾಪಕಿ ದೂರು ಕೊಟ್ಟಿದ್ದಾರೆ.
ನಟಿ ರಚಿತಾ ರಾಮ್ (Rachita Ram) ವಿರುದ್ಧ ಕಲಾವಿದರ ಸಂಘ ಮತ್ತು ಫಿಲ್ಮ್ ಚೇಂಬರ್ (Film Chamber) ಕಠಿಣ ಕ್ರಮ ತಗೆದುಕೊಳ್ಳಬೇಕು ಅಂತ ಸಂಜು ವೆಡ್ಸ್ ಗೀತಾ 2 (Sanju Weds Geetha 2) ಸಿನಿಮಾದ ನಿರ್ದೇಶಕ ನಾಗಶೇಖರ್ (Nagashekar) ಒತ್ತಾಯಿಸಿದ್ದಾರೆ.
ನಾಗಶೇಖರ್ ನಿರ್ದೇಶನದ ಸಂಜು ವೆಡ್ಸ್ ಗೀತಾ 2 ಸಿನಿಮಾದಲ್ಲಿ ರಚಿತಾ ರಾಮ್ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾ ರಿಲೀಸ್ ಆಗುವ ಮುನ್ನ ಮತ್ತು ನಂತರ ಸಂಜು ವೆಡ್ಸ್ ಗೀತಾ 2 ಸಿನಿಮಾ ಪ್ರಚಾರಕ್ಕೆ ರಚಿತಾ ಭಾಗಿಯಾಗಿಲ್ಲ. ಹಾಗಾಗಿ ನಟಿಯ ನಡೆಯ ವಿರುದ್ಧ ಚಿತ್ರತಂಡ ತಿರುಗಿ ಬಿದ್ದಿದ್ದು ನಾವು ಇಂತಹ ಕಲಾವಿದರಿಗೆ ಕಠಿಣ ಕ್ರಮ ತೆಗೆದುಕೊಳ್ಬೇಕು ಅಂತ ಆಗ್ರಹಿಸುತ್ತೇವೆ ಎಂದಿದ್ದಾರೆ.
ನಮ್ಮ ಸಿನಿಮಾ ಪ್ರಚಾರಕ್ಕೆ ರಚಿತಾ ರಾಮ್ ಒಂಚೂರು ಸಪೋರ್ಟ್ ಕೊಟ್ಟಿಲ್ಲ. ರಾಕ್‌ಲೈನ್ ವೆಂಕಟೇಶ್ ಅವರು ಮನವೊಲಿಸಲು ಪ್ರಯತ್ನಿಸಿದ್ರು. ರಚಿತಾ ಒಪ್ಪಿಲ್ಲ. ರಮ್ಯಾ, ತಮನ್ನಾ ಎಲ್ಲರಿಗೂ ಸಿನಿಮಾ ಮಾಡಿದ್ದೀನಿ. ಆದ್ರೆ ಇಂತಹ ಸಮಸ್ಯೆ ಯಾವ ನಟಿಯೂ ಕೊಟ್ಟಿಲ್ಲ. ಸಿನಿಮಾಗೆ ಇಷ್ಟು ದಿನ ಪ್ರದರ್ಶನ ಕಂಡರೂ ಒಂದು ದಿನವೂ ಸಪೋರ್ಟ್ ಕೊಟ್ಟಿಲ್ಲ. ಶಿವಣ್ಣ, ಉಪೇಂದ್ರ, ಸುದೀಪ್ ಅಂಥವ್ರೇ ಈ ಸಿನಿಮಾಗೆ ಸಪೋರ್ಟ್ ಕೊಟ್ಟಿದ್ದಾರೆ. ನಾವು ಪೇಮೆಂಟ್ ಕಮ್ಮಿ ಕೊಟ್ಟಿಲ್ಲ. ನಟಿ ರಚಿತಾ ರಾಮ್ ವಿರುದ್ಧ ಹಾಗೂ ಕನ್ನಡ ಸಿನಿಮಾಗೆ ಥಿಯೇಟರ್ ಸಮಸ್ಯೆ ಕುರಿತು ತುಂಬಾ ನಷ್ಟ ಅನುಭವಿಸಿದ್ದೇವೆ ಅಂತ ಫಿಲ್ಮ್ ಚೇಂಬರ್ಗೆ ನಿರ್ದೇಶಕ ನಾಗಶೇಖರ್ ಮತ್ತು ನಟ ಶ್ರೀನಗರ ಕಿಟ್ಟಿ ದೂರು ನೀಡಿದ್ದಾರೆ. ಇದನ್ನೂ ಓದಿ: ಕನ್ನಡಿಗರಿಗೆ ಅಪಮಾನ ಪ್ರಕರಣ – ಹೇಳಿಕೆ ಕೊಡಲು ಪೊಲೀಸರನ್ನು ಸತಾಯಿಸುತ್ತಿರುವ ಸೋನು ನಿಗಮ್
ಶ್ರೀನಗರ ಕಿಟ್ಟಿ ಮತ್ತು ರಚಿತಾ ರಾಮ್ ಕಾಂಬಿನೇಷನ್ ನಲ್ಲಿ ಸಂಜು ವೆಡ್ಸ್ ಗೀತಾ 2 ಸಿನಿಮಾ ಮೂಡಿ ಬಂದಿದ್ದು, ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಛಲವಾದಿ ಕುಮಾರ್ ಅವರು ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ರಾಗಿಣಿ ದ್ವಿವೇದಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿದ್ದಾರೆ.
ಈಗಾಗಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫೈನಲ್‌ಗೆ ತಲುಪಿದ್ದು, ಟ್ರೋಫಿ ಗೆಲ್ಲಲು ಒಂದೇ ಹೆಜ್ಜೆ ಬಾಕಿ ಇದೆ. ಇದರ ಬೆನ್ನಲ್ಲೇ ಸ್ಯಾಂಡಲ್‌ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ (Rachita Ram) ಈ ಬಾರಿ ಕಪ್ ನಮ್ಮದೇ ಎಂದಿದ್ದಾರೆ.
ಹುಬ್ಬಳ್ಳಿಯಲ್ಲಿ (Hubballi) ಮಾತನಾಡಿದ ಅವರು, ಸದ್ಯ ಐಪಿಎಲ್ 18ನೇ ಆವೃತ್ತಿ ನಡೆಯುತ್ತಿದೆ. ಅಲ್ಲದೇ ವಿರಾಟ್ ಕೊಹ್ಲಿ (Virat Kohli) ಅವರ ಜರ್ಸಿ ನಂಬರ್ ಕೂಡಾ 18 ಆಗಿದೆ. ಹದಿನೆಂಟರ ಜೊತೆ ನಮಗೆಲ್ಲಾ ವಿಶೇಷ ನಂಟಿದೆ. ಹೀಗಾಗಿ ಈ ಬಾರಿ ಕಪ್ ನಮ್ದೇ ಆಗುತ್ತೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ‘ಅಂಬಿ’ ಕನ್ವರ್ ಲಾಲ್ ಲುಕ್‌ನಲ್ಲಿ ಬಂದ ದರ್ಶನ್- ‘ದ ಡೆವಿಲ್’ ಪೋಸ್ಟರ್ ಔಟ್
ಕಮಲ್ ಹಾಸನ್ (Kamal Haasan) ವಿಚಾರವಾಗಿ ಪ್ರತಿಕ್ರಿಯಿಸಿ, ಕಮಲ್ ಹಾಸನ್ ಖಂಡಿತ ಕ್ಷಮೆ ಕೇಳಬೇಕು. ನಾನು ಏನು ಹೇಳಬೇಕು ಎಂದುಕೊಂಡಿದ್ದೆ ಅದನ್ನು ಹೇಳಿದ್ದೇನೆ. ನನ್ನ ಪ್ರೀತಿ ನನ್ನ ಭಾಷೆಯಾಗಿದೆ. ಬೇರೆ ಭಾಷೆ ಬಗ್ಗೆ ಕಮೆಂಟ್ ಮಾಡಲ್ಲ. ಆದರೆ ನನ್ನ ಮೊದಲ ಗೌರವ ಕನ್ನಡ ಭಾಷೆಗೆ. ಇಲ್ಲಿ ಯಾರಿಂದ ಯಾರೂ ಬಂದಿಲ್ಲ. ಯಾರಿಂದ ಯಾರೂ ಎಂದು ದೇವರಿಗೆ ಗೊತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಕಮಲ್ ಹಾಸನ್ ಹೇಳಿಕೆಯನ್ನು ಸಮರ್ಥನೆ ಮಾಡಿಕೊಳ್ಳಲ್ಲ: ಕೊನೆಗೂ ಮೌನ ಮುರಿದ ಶಿವಣ್ಣ
ಇಂದು ಹಿಸ್ಟರಿ ತೆಗೆದು ಏನು ಸಾಬೀತು ಮಾಡಬೇಕೋ ಮಾಡುತ್ತಿದ್ದೇವೆ. ನಾನು ಹಾಕಿರೋ ವೀಡಿಯೋ ನನಗೂ ಅನ್ವಯವಾಗುತ್ತದೆ. ಯಾರೂ ತಮ್ಮ ಮಾತೃಭಾಷೆಯನ್ನು ಮರೆಯಬಾರದು. ನಮ್ಮ ಭಾಷೆ ಅವರಿಗೆ ಹೇಳಿಕೊಡೋಣ, ಅವರ ಭಾಷೆ ಕಲಿಯೋಣ. ಚಿತ್ರ ಬ್ಯಾನ್ ಬಗ್ಗೆ ದೊಡ್ಡವರು, ವಾಣಿಜ್ಯ ಮಂಡಳಿಯವರು ನಿರ್ಧಾರ ಕೈಗೊಳ್ಳುತ್ತಾರೆ ಎಂದು ಹೇಳಿದರು. ಇದನ್ನೂ ಓದಿ: 100ಕ್ಕೂ ಹೆಚ್ಚು ಆತ್ಮಾಹುತಿ ಡ್ರೋನ್ ಸಾಗಿಸಬಲ್ಲ `ಬಾಹುಬಲಿ’ ಡ್ರೋನ್ ಸಿದ್ಧಪಡಿಸಿದ ಚೀನಾ!
ಕಮಲ್ ಹಾಸನ್ ಅವರ ಮಾತಿನಿಂದ ನಮಗೆ ನೋವಾಗಿದೆ. ಅವರು ಖಂಡಿತ ಕ್ಷಮೆ ಕೇಳಬೇಕು. ಸಿನಿಮಾ ಕ್ಷೇತ್ರಕ್ಕೆ ಅವರ ಕೊಡುಗೆ ದೊಡ್ಡದಿದೆ. ನಮ್ಮ ಭಾಷೆ ಬಗ್ಗೆ ಮಾತನಾಡಿದ್ರೆ, ನಾವು ಯಾಕೆ ಸುಮ್ಮನಿರಬೇಕು? ಕಮಲ್ ಹಾಸನ್ ಕಲೆ ಬಗ್ಗೆ, ಅವರು ಸಿನಿಮಾ ರಂಗಕ್ಕೆ ಕೊಟ್ಟ ಕೊಡುಗೆ ಬಗ್ಗೆ ಮಾತನಾಡಲು ನಾನು ಚಿಕ್ಕವಳು. ಆದರೆ ಭಾಷೆ ವಿಚಾರ ಬಂದಾಗ ಅವರು ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.