ಕನ್ನಡ ಕಿರುತೆರೆಯಲ್ಲಿ ಮನೆಮಾತಾದ ನಟಿ ರಚಿತಾ ಮಹಾಲಕ್ಷ್ಮಿ (Rachitha Mahalakshmi) ತಮಿಳು ಕಿರುತೆರೆಯತ್ತ ಮುಖ ಮಾಡಿದ್ದರು. ಇದೀಗ ತಮಿಳಿನ ಬಿಗ್ ಬಾಸ್‌ಗೆ ಕಾಲಿಟ್ಟ ಬೆನ್ನಲ್ಲೇ ತಮ್ಮ ವೈಯಕ್ತಿಕ ವಿಚಾರವಾಗಿಯೂ ನಟಿ ಸುದ್ದಿಯಾಗ್ತಿದ್ದಾರೆ. ಪತಿ ದಿನೇಶ್ ಗೋಪಾಲಸ್ವಾಮಿ (Dinesh Gopalswamy) ಡಿವೋರ್ಸ್ (Divorce) ಕೊಡಲಿದ್ದಾರೆ ಎಂಬ ಮಾತುಗಳು ಹರಿದಾಡುತ್ತಿದೆ.

ತಮಿಳಿನ ಜನಪ್ರಿಯ ಧಾರಾವಾಹಿಯಾದ `ಪಿರಿವೊಮ್ ಸಂದಿಪ್ಪೊಮ್’ನಲ್ಲಿ ರಚಿತಾ- ದಿನೇಶ್ ಜೋಡಿಯಾಗಿ ನಟಿಸಿದ್ದರು. ಈ ವೇಳೆ ಇಬ್ಬರಿಗೂ ಪ್ರೇಮಾಂಕುರವಾಗಿ ಗುರುಹಿರಿಯರ ಒಪ್ಪಿಗೆಯ ಮೇರೆಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಮದುವೆಯ ಬಳಿಕ `ನಾಚಿಯಾರ್ ಪುರಮ್’ ಸೀರಿಯಲ್‌ನಲ್ಲೂ ಜೋಡಿಯಾಗಿ ನಟಿಸಿದ್ದರು. ಇದನ್ನೂ ಓದಿ: ಆ ಒಂದು ಮಾತಿನಿಂದ ಮುರಿದು ಬಿತ್ತು ರೂಪೇಶ್ ಶೆಟ್ಟಿ- ರಾಜಣ್ಣ ಫ್ರೆಂಡ್‌ಶಿಪ್

ಕಮಲ್ ಹಾಸನ್ (Kamal Hasan) ನಿರೂಪಣೆಯ ಬಿಗ್ ಬಾಸ್‌ನಲ್ಲಿ (Bigg Boss) ಕನ್ನಡತಿ ರಚಿತಾ 60 ದಿನಗಳನ್ನ ಪೂರೈಸಿದ್ದಾರೆ. ಇನ್ನೂ 40 ದಿನಗಳ ಆಟ ಬಾಕಿಯಿದೆ. ಈ ಬೆನ್ನಲ್ಲೇ ಡಿವೋರ್ಸ್ ವಿಷ್ಯವಾಗಿ ಸೌಂಡ್ ಮಾಡ್ತಿದ್ದಾರೆ. ಲಾಕ್‌ಡೌನ್ ಸಮಯದಲ್ಲೇ ಇಬ್ಬರ ನಡುವೆ ಹೊಂದಾಣಿಕೆಯಿರಲಿಲ್ಲ ಎಂಬ ಸುದ್ದಿ ಹರಿದಾಡುತ್ತಿದೆ. ಅಷ್ಟಕ್ಕೂ ಈ ಡಿವೋರ್ಸ್ ಸುದ್ದಿ ನಿಜಾನಾ? ಎಂಬುದಕ್ಕೆ ಬಿಗ್ ಬಾಸ್ ಶೋ ಬಳಿಕ ರಚಿತಾ ಅವರಿಂದಲೇ ಉತ್ತರ ಸಿಗಲಿದೆ. ಅಲ್ಲಿಯವರೆಗೂ ಕಾದುನೋಡಬೇಕಿದೆ.


ಈ ಶೋನಲ್ಲಿ ರಚಿತಾ ಅವರನ್ನು ಸೂಪರ್ ಸ್ಟಾರ್ ಕಮಲ್ ಹಾಸನ್ ಕನ್ನಡದಲ್ಲಿಯೇ ಮಾತನಾಡಿಸಿದ್ದಾರೆ. ಇನ್ನೂ ತಮಿಳು ಬಿಗ್ ಬಾಸ್‌ಗೆ ಎಂಟ್ರಿ ಕೊಟ್ಟಿರುವ ನೆಚ್ಚಿನ ನಟಿಗೆ ಅಭಿಮಾನಿಗಳು ಸಾಮಾಜಿಕ ಜಾಲತಾಣದ ಮೂಲಕ ಶುಭಹಾರೈಸಿದ್ದಾರೆ.