Tag: ರಚಿತಾರಾಮ್

  • ಕಿರುತೆರೆಗೆ ಮರಳಿದ ಹ್ಯಾಟ್ರಿಕ್ ಹೀರೋ; ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಶಿವಣ್ಣ

    ಕಿರುತೆರೆಗೆ ಮರಳಿದ ಹ್ಯಾಟ್ರಿಕ್ ಹೀರೋ; ಡ್ಯಾನ್ಸ್ ಶೋಗೆ ತೀರ್ಪುಗಾರರಾಗಿ ಶಿವಣ್ಣ

    ನ್ನಡ ಟಿವಿ ಲೋಕದಲ್ಲಿ ನಾನಾ ಕಾರ್ಯಕ್ರಮಗಳ ಮೂಲಕ ಅಭಿಮಾನಿಗಳಿಗೆ ಮನರಂಜನೆ ನೀಡುತ್ತಲೇ ಬಂದಿದೆ. ರಿಯಾಲಿಟಿ ಶೋ, ಸಿನಿಮಾ, ಧಾರಾವಾಹಿ ಹೀಗೆ ಹತ್ತು ಹಲವು ವಿಶೇಷತೆಗಳಿಂದ ಸಿನಿಪ್ರಿಯರನ್ನ ರಂಜಿತ್ತಾ ಬಂದಿದೆ. ಬಿಗ್‌ ಸ್ಕ್ರೀನ್‌ನಲ್ಲಿ ಆಕ್ಟೀವ್‌ ಆಗಿದ್ದ ಚಿತ್ರರಂಗದ ಸ್ಟಾರ್ ಕಲಾವಿದರೆಲ್ಲ ಕಿರುತೆರೆಯತ್ತ ಮುಖ ಮಾಡ್ತಿದ್ದಾರೆ. ಇದೀಗ ಅದೇ ಸಾಲಿಗೆ ಈಗ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಕೂಡ ಮೋಡಿ ಮಾಡಲು ಬರುತ್ತಿದ್ದಾರೆ.

    ಈಗಾಗಲೇ ರಚಿತಾರಾಮ್, ರವಿಚಂದ್ರನ್, ಮೇಘನಾ ರಾಜ್, ಅನುಪ್ರಭಾಕರ್ ಸೇರಿದಂತೆ ಹಲವರು ಕಿರುತೆರೆಯತ್ತ ಮುಖ ಮಾಡಿದ್ದಾರೆ. ಅದೇ ರೀತಿ ಬಿಗ್ ಸ್ಕ್ರೀನ್‌ ಸ್ಟಾರ್ ಶಿವರಾಜ್‌ಕುಮಾರ್ ಕೂಡ ಖಾಸಗಿ ವಾಹಿನಿಯ ಶೋಗೆ ಜಡ್ಜ್ ಆಗಿ ಕಾಣಿಸಿಕೊಳ್ತಿದ್ದಾರೆ.

    ಕಿರುತೆರೆಯ ಬಿಗ್ ಶೋ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಶೋ ಮೂಲಕ ತೀರ್ಪುಗಾರರಾಗಿ ಕಿರುತೆರೆಗೆ ನಟ ಶಿವರಾಜ್‌ಕುಮಾರ್ ಮರಳಿದ್ದಾರೆ. 125 ಸಿನಿಮಾಗಳ ಮೂಲಕ ರಂಜಿಸಿರೋ ನಟ ಶಿವರಾಜ್‌ಕುಮಾರ್ `ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಸೀಸನ್-6ಗೆ ಜಡ್ಜ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ಶೋನ ಪ್ರೋಮೋ ರಿಲೀಸ್ ಆಗಿದ್ದು, ಶಿವಣ್ಣ ನ್ಯೂ ಲುಕ್ ನೋಡಿ ಫ್ಯಾನ್ಸ್ ಖುಷಿಪಡ್ತಿದ್ದಾರೆ. ಇದನ್ನು ಓದಿ:ಕ್ರೇಜಿಸ್ಟಾರ್ ರವಿಚಂದ್ರನ್‌ಗೆ ಗೌರವ ಡಾಕ್ಟರೇಟ್

    ಅಪ್ಪು ಅಗಲಿಕೆಯ ನೋವಿನ ನಂತರ ಸಾಲು ಸಾಲು ಸಿನಿಮಾಗಳಿಗೆ ಶಿವಣ್ಣ ಸಹಿ ಹಾಕಿದ್ದಾರೆ. ಕಿರುತೆರೆ ಹಿರಿತೆರೆ ಎರಡರಲ್ಲೂ ನಟ ಶಿವರಾಜ್‌ಕುಮಾರ್ ಬ್ಯುಸಿಯಾಗಿದ್ದಾರೆ. ಸಿನಿಮಾಗಳಿಂದ ಮೋಡಿ ಮಾಡ್ತಿದ್ದ‌ ನಟ ಶಿವಣ್ಣ ಮತ್ತೆ ಹೊಸ ಶೋ ಮೂಲಕ ಕಿರುತೆರೆಗೆ ಮರಳಿದ್ದಾರೆ.

  • ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಭಟ್ಟರ ಸಿನಿಮಾದಿಂದ ರಚಿತಾ ರಾಮ್ ಹೊರ ನಡೆದ ಅಸಲಿ ಕಾರಣ?

    ಯೋಗರಾಜ್ ಭಟ್ಟ ನಿರ್ದೇಶನದ ಸಿನಿಮಾದಲ್ಲಿ ನಟಿಸಲು ಅನೇಕ ನಾಯಕಿಯರು ಈ ಹೊತ್ತಿಗೂ ಕಾಯುತ್ತಿದ್ದಾರೆ. ಭಟ್ಟರ ಸಿನಿಮಾದಲ್ಲಿ ನಟಿಸಿದ ಬಹುತೇಕ ಕಲಾವಿದರು ಚಿತ್ರರಂಗದಲ್ಲಿ ಬ್ಯುಸಿ ಆಗಿದ್ದಾರೆ. ಹೀಗಾಗಿ ಇವರ ಸಿನಿಮಾದಲ್ಲಿ ಅವಕಾಶ ಕೇಳಿಕೊಂಡು ಬರುವವರ ಸಂಖ್ಯೆ ಹೆಚ್ಚಿರುತ್ತದೆ. ಇಂತಹ ಹೊತ್ತಿನಲ್ಲಿ ಸಿಕ್ಕಿರುವ ಅವಕಾಶವನ್ನು ಮಿಸ್ ಮಾಡಿಕೊಂಡಿದ್ದಾರೆ ಡಿಂಪಲ್ ಕ್ವೀನ್ ರಚಿತಾ ರಾಮ್. ಇದನ್ನೂ ಓದಿ :ಗೆಳೆಯನ ಸಿನಿಮಾದಲ್ಲಿ ಕೊತ್ವಾಲ್ ಆದ ವಸಿಷ್ಠ ಸಿಂಹ

    ಅಂದುಕೊಂಡಂತೆ ಆಗಿದ್ದರೆ ಯೋಗರಾಜ್ ಭಟ್ ನಿರ್ದೇಶನದ ‘ಗರಡಿ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಬೇಕಿತ್ತು ರಚಿತಾ ರಾಮ್. ಈ ಚಿತ್ರವನ್ನು ನಟ, ಸಚಿವ ಬಿ.ಸಿ.ಪಾಟೀಲ್ ನಿರ್ಮಾಣ ಮಾಡುತ್ತಿರುವುದರಿಂದ, ಅವರ ಮನೆಗೂ ರಚಿತಾ ಹೋಗಿ ಬಂದಿದ್ದರು. ಸಿನಿಮಾದ ಪೂಜೆ, ಮುಹೂರ್ತ ಇತ್ಯಾದಿ ಕಾರ್ಯಕ್ರಮಗಳಲ್ಲೂ ಅವರು ಭಾಗಿಯಾಗಿದ್ದರು. ಇನ್ನೇನು ಭಟ್ಟರು ಶೂಟಿಂಗ್ ಗೆ ಹೊರಡಬೇಕು ಎನ್ನುವಾಗ ರಚಿತಾ ರಾಮ್ ಸಿನಿಮಾದಿಂದ ಹೊರ ನಡೆದಿದ್ದಾರೆ. ಇದನ್ನೂ ಓದಿ : ರಮ್ಯಾಗಾಗಿ ಕಾದ ದಿಲ್ ಕಾ ರಾಜಾ

    ರಚಿತಾ ರಾಮ್ ಸಿನಿಮಾದಲ್ಲಿ ಇಲ್ಲ ಎನ್ನುತ್ತಿದ್ದಂತೆಯೇ ಗಾಂಧಿನಗರದಲ್ಲಿ ಸಾಕಷ್ಟು ಗಾಸಿಪ್ ಗಳು ಹರಿದಾಡಿದವು. ಈ ಸಿನಿಮಾದಲ್ಲಿ ಯಶಸ್ ಸೂರ್ಯ ನಾಯಕನಾಗಿ ನಟಿಸುತ್ತಿರುವುದೇ ರಚಿತಾ ಹೊರ ಹೋಗಲು ಕಾರಣ ಎನ್ನಲಾಗಿತು. ಸಂಭಾವನೆಯ ವಿಚಾರವೂ ಕೇಳಿ ಬಂತು. ಅಸಲಿ ವಿಚಾರವೆಂದರೆ, ಸದ್ಯ ರಚಿತಾ ರಾಮ್ ಅವರು ‘ಕ್ರಾಂತಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಜತೆಗೆ ರಿಯಾಲಿಟಿ ಶೋ ಜಡ್ಜ್ ಆಗಿ ಒಪ್ಪಿಕೊಂಡಿದ್ದಾರಂತೆ. ಹಾಗಾಗಿ ಗರಡಿ ಸಿನಿಮಾಗೆ ಡೇಟ್ ಹೊಂದಿಸಲು ಸಾಧ್ಯವಾಗದೇ ಸಿನಿಮಾ ಬಿಡಬೇಕಾಗಿ ಬಂತಂತೆ. ಇದನ್ನೂ ಓದಿ: ಜ್ಯೂ.ಎನ್‍ಟಿಆರ್ ಜೊತೆ ನಟಿಸಲು ಇಷ್ಟ ಎಂದ ಪದ್ಮಾವತಿ

    ರಚಿತಾ ರಾಮ್ ಜಾಗಕ್ಕೆ ಬೇರೆ ನಟಿಯು ಬಂದಾಗಿದೆ. ಸಿನಿಮಾದ ಶೂಟಿಂಗ್ ಕೂಡ ಶುರುವಾಗಿದೆ. ಅಂದಹಾಗೆ ರಚಿತಾ ರಾಮ್ ಮಾಡಬೇಕಿದ್ದ ಪಾತ್ರವನ್ನು ಈಗ ಮಾಡುತ್ತಿರುವುದು ಸೋನಲ್ ಮೆಂಥೆರೋ.

  • ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

    ಆಸ್ಪತ್ರೆಗೆ ದಾಖಲಾಗಿ ಡಿಂಪಲ್ ಕ್ವೀನ್ ರಚಿತಾ ಡಿಸ್ಚಾರ್ಜ್

    ಬೆಂಗಳೂರು: ಚಂದನವನದ ಡಿಂಪಲ್ ಕ್ವಿನ್ ರಚಿತಾರಾಮ್ ಆಸ್ಪತ್ರೆಗೆ ದಾಖಲಾಗಿ, ಡಿಸ್ಚಾರ್ಜ್ ಆಗಿದ್ದಾರೆ. ರಚಿತಾ ರಾಮ್ ಅವರು ಕಳೆದ ಕೆಲ ತಿಂಗಳುಗಳಿಂದ ನಾನ್ ಸ್ಟಾಪ್ ಶೂಟಿಂಗ್ ಹಾಗೂ ಪ್ರಮೋಷನ್ಸ್ ಒತ್ತಡದಿಂದ ಅತಿಯಾದ ಆಯಾಸಕ್ಕೆ ಒಳಗಾಗಿದ್ದು, ಶೀತ ಜ್ವರದಿಂದ ಬಳಲುತ್ತಿದ್ದರು. ಈ ಹಿನ್ನೆಲೆ ಶಿವಮೊಗ್ಗಕ್ಕೆ ‘ಏಕ್ ಲವ್ ಯಾ’ ಚಿತ್ರದ ಪ್ರಚಾರಕ್ಕೆ ಹೋಗಿ ಬಂದ ಮೇಲೆ ಆಸ್ಪತ್ರೆಗೆ ದಾಖಲಾಗಿದ್ದು, ಇಂದು ಡಿಸ್ಚಾರ್ಜ್ ಆಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    ಶಿವಮೊಗ್ಗದಲ್ಲಿ ತಮ್ಮ ಹೊಸ ಚಿತ್ರ ಏಕ್ ಲವ್ ಯಾ ಸಾಂಗ್ ಇವೆಂಟ್ ವೇಳೆ ಮಾತನಾಡಿದ್ದ ರಚಿತಾ, ಡಿಸೆಂಬರ್31 ರಂದು ನನ್ನ ಸಿನಿಮಾ ಲವ್ ಯೂ ರಚ್ಚು ಬಿಡುಗಡೆಯಾಗುತ್ತಿದೆ. ಈ ಸಿನಿಮಾಕ್ಕಾಗಿ ನಮ್ಮ ನಿರ್ಮಾಪಕರು ತುಂಬ ಫೈಟ್ ಮಾಡುತ್ತಿದ್ದಾರೆ. ನಿರ್ಮಾಪಕರು ಒಂದು ಸಿನಿಮಾ ಮಾಡಲು ಎಲ್ಲೆಲ್ಲಿಂದಲೋ ದುಡ್ಡು ತಂದು ಕಷ್ಟ ಪಟ್ಟು ಇಷ್ಟ ಪಟ್ಟು ಸಿನಿಮಾ ಮಾಡಿರುತ್ತಾರೆ. ಆದರೆ ಈ ನಡುವೆ ನೈಟ್ ಕರ್ಫ್ಯೂ, ಬಂದ್ ಮಾಡುವುದರಿಂದ ತೊಂದರೆಯಾಗುತ್ತದೆ ಎಂದಿದ್ದರು. ಇದನ್ನೂ ಓದಿ: ನ್ಯೂ ಇಯರ್ ಸೆಲೆಬ್ರೆಷನ್‍ಗೆ ಮಾಲ್ಡೀವ್ಸ್‌ಗೆ ಹಾರಿದ ಬಾಲಿವುಡ್ ಲವ್​ ಬರ್ಡ್ಸ್

    ಒಂದು ಕಡೆ ನಮ್ಮ ರಾಜ್ಯಕೋಸ್ಕರ ಸಪೋರ್ಟ್ ಮಾಡುತ್ತಾ ನಿಲ್ಲಬೇಕಾಗುತ್ತದೆ. ಇನ್ನೊಂದು ಕಡೆ ಸಿನಿಮಾ. ಹೀಗಾಗಿ ಏನು ಹೇಳಬೇಕು ಅಂತಾ ಗೊತ್ತಾಗುತ್ತಿಲಲ್ಲ. ಒಂದು ಕಡೆ ನಮ್ಮ ಪ್ರೊಡ್ಯೂಸರ್, ಇನ್ನೊಂದು ಕಡೆ ನಮ್ಮ ರಾಜ್ಯ. ಸಪೋರ್ಟ್ ಎರಡು ಕಡೆಯೂ ಇರುತ್ತದೆ. ಆದರೆ ಹೆಚ್ಚು ಸಪೋರ್ಟ್ ನಮ್ಮ ರಾಜ್ಯಕೋಸ್ಕರ ಇರುತ್ತದೆ ಎಂದು ಹೇಳಿದ್ದರು. ಇದನ್ನೂ ಓದಿ: ಗೋವಾದಲ್ಲಿ ಸ್ನೇಹಿತರ ಜೊತೆ ಎಂಜಾಯ್ ಮೂಡ್‍ನಲ್ಲಿ ಸಮಂತಾ

  • ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

    ಶೂಟಿಂಗ್ ವೇಳೆ ಫೈಟರ್ ವಿವೇಕ್ ದುರಂತ ಸಾವು – ರಚಿತಾ ರಾಮ್ ಸಂತಾಪ

    ಬೆಂಗಳೂರು: ಸಿನಿಮಾದ ಶೂಟಿಂಗ್ ಸಮಯದಲ್ಲಿ ಫೈಟರ್ ವಿವೇಕ್ ದುರಂತ ಸಾವಿಗೆ ನಟಿ ರಚಿತಾ ರಾಮ್ ಸಂತಾಪ ಸೂಚಿಸಿದ್ದಾರೆ.

    ಈ ಸಂಬಂಧ ಇನ್‍ಸ್ಟಾದಲ್ಲಿ ಪೋಸ್ಟ್ ಹಾಕಿರುವ ನಟಿ, ವಿವೇಕ್ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ಕರುಣಿಸಲಿ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ಅಮ್ಮ ನಿನ್ನ ಚೆನ್ನಾಗಿ ನೋಡ್ಕೋತ್ತೀನಿ ಅಂದ್ಬಿಟ್ಟು ರಸ್ತೆಯಲ್ಲೇ ಬಿಟ್ಟೋದ: ವಿವೇಕ್ ತಾಯಿ ಕಣ್ಣೀರು

    ”ವಿದ್ಯುತ್ ಅವಘಡದಿಂದ ಸಾವನ್ನಪ್ಪಿದ ಫೈಟರ್ ವಿವೇಕ್ ಅವರ ಆತ್ಮಕ್ಕೆ ಶಾಂತಿ ಸಿಗಲೆಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ. ಹಾಗೆಯೇ ಅವರ ಕುಟುಂಬಕ್ಕೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ನಟಿ ತಿಳಿಸಿದ್ದಾರೆ.

     

    View this post on Instagram

     

    A post shared by Rachita Ram (@rachita_instaofficial)

    ನಿನ್ನೆ ಬಿಡದಿ ಬಳಿಯ ತೋಟದಲ್ಲಿ ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ‘ಲವ್ ಯೂ ರಚ್ಚು’ ಸಿನಿಮಾದ ಸಾಹಸ ದೃಶ್ಯದ ಚಿತ್ರೀಕರಣ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ವಿದ್ಯುದಾಘಾತದಿಂದ ಫೈಟರ್ ವಿವೇಕ್ ಸಾವನ್ನಪ್ಪಿದ್ದರು. ಇನ್ನೊಬ್ಬ ಫೈಟರ್ ರಂಜಿತ್ ಸ್ಥಿತಿ ಗಂಭೀರವಾಗಿದ್ದು, ಸಾವು- ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಹೈಟೆನ್ಷನ್ ವೈರ್ ತಗುಲಿದ್ದರಿಂದ ಫೈಟರ್ ಸಾವಾಯ್ತು: ನಟ ಅಜಯ್ ರಾವ್

    ಶೂಟಿಂಗ್ ವೇಳೆ 35 ವರ್ಷದ ಫೈಟರ್ ವಿವೇಕ್ ಧರಿಸಿದ್ದ ಲೋಹದ ಹಗ್ಗ, ಹೈಟೆನ್ಶನ್ ವೈರ್ ತಗುಲಿ ಈ ದುರಂತ ಸಂಭವಿಸಿದೆ. ಗುರು ದೇಶಪಾಂಡೆ ನಿರ್ಮಾಣದ ಈ ಸಿನಿಮಾಗೆ ಫೈಟ್ ಮಾಸ್ಟರ್ ವಿನೋದ್ ಸಾಹಸ ದೃಶ್ಯಗಳನ್ನು ಸಂಯೋಜಿಸಿದ್ದರು. ಇದನ್ನೂ ಓದಿ: ಲವ್ ಯೂ ರಚ್ಚು ದುರಂತ – ಜೆಸಿಬಿ ಡ್ರೈವರ್ ಸೇರಿ ಐವರ ಮೇಲೆ FIR

  • ಬ್ಯಾಟ್ ಹಿಡಿದು ಕ್ರಿಕೆಟ್ ಪೀಲ್ಡ್ ಗೆ ಎಂಟ್ರಿ ಕೊಟ್ಟ ಗುಳಿಕೆನ್ನೆ ಬೆಡಗಿ- ವಿಡಿಯೋ ವೈರಲ್

    ಬ್ಯಾಟ್ ಹಿಡಿದು ಕ್ರಿಕೆಟ್ ಪೀಲ್ಡ್ ಗೆ ಎಂಟ್ರಿ ಕೊಟ್ಟ ಗುಳಿಕೆನ್ನೆ ಬೆಡಗಿ- ವಿಡಿಯೋ ವೈರಲ್

    ಬೆಂಗಳೂರು: ಸಾಂಡಲ್‍ವುಡ್‍ನಲ್ಲಿ ಡಿಂಪಲ್ ಕ್ವೀನ್ ಎಂದೇ ಹೆಸರುವಾಸಿಯಾದ ರಚಿತಾ ರಾಮ್ ಅವರು ಬ್ಯಾಟ್ ಹಿಡಿದು ಮೈದಾನದಲ್ಲಿ ಕ್ರಿಕೆಟ್ ಆಡಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸ್ಯಾಂಡಲ್‍ವುಡ್‍ನಲ್ಲಿ ಈಗಾಗಲೇ ಹಲವು ಕ್ರಿಕೆಟ್ ಪಂದ್ಯಾವಳಿಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ರಚಿತರಾಮ್ ಅವರು ಯಾವ ತಂಡದ ಪರವಾಗಿ ಆಡಲಿದ್ದಾರೆ ಎಂಬ ಗೊಂದಲ ಇದೀಗ ಅಭಿಮಾನಿಗಳಲ್ಲಿ ಉಂಟಾಗಬಹುದು. ಆದ್ರೆ ಇದರ ಅಸಲಿ ಕಹಾನಿಯೇ ಬೇರೆ ಇದೆ.

    https://www.instagram.com/p/BmA-38qAwvP/?taken-by=rachita_ram

    ಹೌದು. ಸೂಪರ್ ಸ್ಟಾರ್ ಉಪೇಂದ್ರರವರು ಅಭಿನಯಿಸುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ರಚಿತಾರಾಮ್ ನಟಿಯಾಗಿ ಅಭಿನಯಿಸುತ್ತಿದ್ದು, ಚಿತ್ರಿಕರಣದ ವೇಳೆ ಸಿನಿಮಾ ಸೆಟ್‍ನಲ್ಲೆ ಮೈದಾನಕ್ಕಿಳಿದು 4-5 ಎಸೆತಗಳಿಗೆ ಬ್ಯಾಟ್ ಬೀಸಿದ್ದಾರೆ. ನಟಿ ಜೊತೆಗೆ ಉಪೇಂದ್ರರವರು ಕೂಡ ಸಾಥ್ ನೀಡಿದ್ದಾರೆ.

    ರಚಿತಾರಾಮ್ ಕ್ರಿಕೆಟ್ ಆಡುತ್ತಿರುವ ಫೋಟೋಗಳು ಮತ್ತು ವಿಡಿಯೋವನ್ನು ಇನ್ಸ್ ಸ್ಟಾಗ್ರಾಮ್‍ನಲ್ಲಿ ಪೋಸ್ಟ್ ಮಾಡಿಕೊಂಡಿದ್ದು, ತುಂಬಾ ದಿನಗಳ ನಂತರ ಕ್ರಿಕೆಟ್ ಆಡಿದ್ದೇನೆ. ಇದರಿಂದಾಗಿ ನನ್ನ ಬ್ಯಾಲದ ನೆನಪುಗಳು ಮರುಕಳಿಸುತ್ತಿವೆ. ನನಗೆ ತುಂಬಾ ಖುಷಿಯಾಗಿದೆ ಎಂದು ಬರೆದುಕೊಂಡಿದ್ದಾರೆ. ನಟಿಯ ಫೋಟೋಗಳಿಗೆ ಅಭಿಮಾನಿಗಳು ಕೂಡ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

    ಸದ್ಯ ರಚಿತರಾಮ್ ಆರ್ ಚಂದ್ರುರವರು ನಿರ್ದೇಶಿಸುತ್ತಿರುವ ಐ ಲವ್ ಯೂ ಸಿನಿಮಾದಲ್ಲಿ ಬ್ಯುಸಿಯಾಗಿದ್ದು, ಅದರಲ್ಲಿ ಉಪೇಂದ್ರ ನಾಯಕ ನಟರಾಗಿ ಅಭಿನಯಿಸುತ್ತಿದ್ದಾರೆ.

    https://www.instagram.com/p/BmAbOBSA127/?taken-by=rachita_ram