ದರ್ಶನ್ ಅಭಿನಯದ `ಡೆವಿಲ್’ (The Devil) ಸಿನಿಮಾದ ಎರಡನೇ ಹಾಡು ರಿಲೀಸ್ ಆಗಿದೆ. ಥೈಲ್ಯಾಂಡ್‌ನಲ್ಲಿ ಚಿತ್ರೀಕರಿಸಿರುವ ಹಾಡು ಇದಾಗಿದ್ದು, ನಟಿ ರಚನಾ ರೈ (Rachana Rai) ಜೊತೆ ದರ್ಶನ್ (Darshan) ರೊಮ್ಯಾಂಟಿಕ್ ಸ್ಪೆಪ್ ಹಾಕಿದ್ದಾರೆ.
ಕಳೆದ ಜುಲೈ ತಿಂಗಳಲ್ಲಿ ಕೋರ್ಟ್ ಅನುಮತಿ ಪಡೆದುಕೊಂಡು ದರ್ಶನ್ ಥೈಲ್ಯಾಂಡ್‌ಗೆ ತೆರಳಿದ್ದರು. ಇದೀಗ ಅಲ್ಲಿ ಚಿತ್ರೀಕರಣವಾದ `ಒಂದೇ ಒಂದು ಸಲ’ ಹಾಡು ರಿಲೀಸ್ ಆಗಿದೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನಕ್ಕೆ ಪ್ರಮೋದ್ ಮರವಂತೆ ಸಾಹಿತ್ಯವಿದೆ. ಹಾಡು ಕಪಿಲ್ ಕಪಿಲನ್ ಹಾಗೂ ಚಿನ್ಮಯಿ ಶ್ರೀಪಾದ ಧ್ವನಿಯಲ್ಲಿ ಮೂಡಿಬಂದಿದೆ. ಇದನ್ನೂ ಓದಿ: ದರ್ಶನ್‌ಗೆ ಜೈಲಲ್ಲಿ ಹಾಸಿಗೆ, ದಿಂಬು ನೀಡದ ವಿಚಾರ – ‘ಜೈಲು ಪರಿಶೀಲಿಸಿ ರಿಪೋರ್ಟ್ ಕೊಡಿ’: ಕಾನೂನು ಪ್ರಾಧಿಕಾರಕ್ಕೆ ಕೋರ್ಟ್ ಆದೇಶ

ಈ ಹಾಡಿನ ಮೂಲಕ ದರ್ಶನ್ ಹಾಗೂ ರಚನಾ ರೈ ಆನ್‌ಸ್ಕ್ರೀನ್ ಜೋಡಿ ಮೊದಲ ಬಾರಿ ಒಟ್ಟಿಗೆ ಕಾಣಿಸ್ಕೊಂಡಿದೆ. ಸಂತು ಮಾಸ್ಟರ್ ಕೊರಿಯೋಗ್ರಫಿ ಮಾಡಿರುವ ಹಾಡು ಇದಾಗಿದ್ದು, ವಿವಿಧ ಆಕರ್ಷಕ ಕಾಸ್ಟ್ಯೂಮ್‌ನಲ್ಲಿ ದರ್ಶನ್ ಮಿಂಚಿದ್ದಾರೆ.
ಸಾಮಾನ್ಯವಾಗಿ ದರ್ಶನ್ ಸಿನಿಮಾಗಳಲ್ಲಿ ಮೆಲೋಡಿ ಹಾಡಿಗೂ ಹೆಚ್ಚಿನ ಪ್ರಧಾನ್ಯತೆ ಇರುತ್ತೆ. ಅದನ್ನ ಗಮನದಲ್ಲಿಟ್ಟುಕೊಂಡೇ ಈ ಹಾಡನ್ನ ರಚಿಸಿದಂತಿದೆ. ಇನ್ನು ಪ್ರಕಾಶ್ ವೀರ್ ನಿರ್ದೇಶನದ `ದಿ ಡೆವಿಲ್’ ಚಿತ್ರ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗೋದಕ್ಕೆ ಅನೌನ್ಸ್ ಆಗಿದೆ. ಇದನ್ನೂ ಓದಿ: Fraud Case | ನೋಟು ಅಮಾನ್ಯೀಕರಣದಿಂದಾಗಿ ಸಾಲ ಪಾವತಿಸಲು ಆಗಿರಲಿಲ್ಲ: ಶಿಲ್ಪಾ ಶೆಟ್ಟಿ ಪತಿ



ಬ್ಯಾಡ್ಮಿಂಟನ್ ಪ್ಲೇಯರ್ ಆಗಿರುವ ಈ ತುಳುನಾಡ ಚೆಲುವೆ, ಮಾಡೆಲ್, ಡ್ಯಾನ್ಸರ್ ಹಾಗೇ ಬರಹಗಾರ್ತಿ ಕೂಡ. ಓ ಮೈ ಡಾಗ್ ಎಂಬ ಪುಸ್ತಕ ಬರೆದಿರುವ ರಚನಾ ಸಕಲಕಲಾವಲ್ಲಭೆ. ಈಗ ಸ್ಟಾರ್ ನಟನ ಚಿತ್ರಕ್ಕೆ ನಾಯಕಿಯಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ದರ್ಶನ್ ಮತ್ತು ರಚನಾ ಮೊದಲ ಬಾರಿಗೆ ಜೋಡಿಯಾಗುತ್ತಿರೋದ್ರಿಂದ ಚಿತ್ರದ ಬಗ್ಗೆ ಭಾರೀ ನಿರೀಕ್ಷೆಯಿದೆ.







