Tag: ರಚನಾ ದಶರಥ್

  • ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ರಚನಾ ದಶರಥ್

    ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ರಚನಾ ದಶರಥ್

    ಸ್ಯಾಂಡಲ್‌ವುಡ್ ನಟಿ ರಚನಾ ದಶರಥ್ (Rachana Dashrath) ಅವರು ಮೊದಲ ಮಗುವಿನ ಆಗಮನದ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿಯಾಗಿರುವ ನಟಿಯ ಸೀಮಂತ ಶಾಸ್ತ್ರ (Baby Shower) ಇದೀಗ ಸರಳವಾಗಿ ನಡೆದಿದೆ. ಸೀಮಂತ ಶಾಸ್ತ್ರದ ಫೋಟೋಗಳು ಇಲ್ಲಿವೆ.

    ಸಿನಿಮಾ, ಕಿರುತೆರೆ ನಟಿ ರಚನಾ ಅವರ ಮನೆಯಲ್ಲಿ ಸರಳವಾಗಿ ಇತ್ತೀಚಿಗೆ ಸೀಮಂತ ಶಾಸ್ತ್ರ ಮಾಡಲಾಯಿತು. ಆಪ್ತರು, ಕುಟುಂಬಸ್ಥರ ಸಮ್ಮುಖದಲ್ಲಿ ಕಾರ್ಯಕ್ರಮ ಜರುಗಿದೆ. ಇದೀಗ 8 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಇದನ್ನೂ ಓದಿ:ರಚಿತಾ ರಾಮ್ ತರ ಹುಡುಗಿ ಸಿಗಬೇಕು- ಮದುವೆ ಬಗ್ಗೆ ಹನುಮಂತ ಪ್ರತಿಕ್ರಿಯೆ

    ‘ಡಿಂಗ'(Dinga) ಚಿತ್ರದ ಹೀರೋ ಲೋಕೇಶ್ (Actor Lokesh) ಜೊತೆ ರಚನಾಗೆ ಪ್ರೇಮಾಂಕುರವಾಗಿತ್ತು. ತಮ್ಮ ಎರಡು ಕುಟುಂಬಕ್ಕೂ ಪ್ರೀತಿ ವಿಚಾರ ಪ್ರಸ್ತಾಪಿಸಿ, ಈ ವರ್ಷ ಗುರು ಹಿರಿಯರ ಸಮ್ಮುಖದಲ್ಲಿ ಜನವರಿ 27ರಂದು ಚಾಮರಾಜನಗರದ ಅನುಭವ ಮಂಟಪದಲ್ಲಿ ಮದುವೆಯಾದರು.

    ರಚನಾ ದಶರಥ್ ಅವರು ಅಗ್ರಸೇನಾ, ಎಬಿ ಪಾಸಿಟಿವ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಮೊದಲ ಮಗುವಿನ ನಂತರ ಚೊಚ್ಚಲ ಮಗುವಿನ ಆರೈಕೆಯ ಜೊತೆಗೆ ನಟನೆಗೆ ಕಮ್ ಬ್ಯಾಕ್ ಆಗುವ ಬಗ್ಗೆ ನಟಿ ಅಭಿಲಾಷೆ ಹೊಂದಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ರಚನಾ- ಲೋಕೇಶ್ ದಂಪತಿ

    ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ರಚನಾ- ಲೋಕೇಶ್ ದಂಪತಿ

    ಸ್ಯಾಂಡಲ್‌ವುಡ್ (Sandalwood) ನಟಿ ರಚನಾ ದಶರಥ್(Rachana Dashrath)- ಲೋಕೇಶ್ ಬಸವಟ್ಟಿ (Lokesh Basavatti) ಅವರು ತಮ್ಮ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ವರ್ಷ ಹಸೆಮಣೆ ಏರಿದ್ದ ಈ ಜೋಡಿ ಈಗ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಅಪ್‌ಡೇಟ್ ಹಂಚಿಕೊಂಡಿದ್ದಾರೆ.

    ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳ, ಪಾರ್ವತಿ ಪರಮೇಶ್ವರ (Parvathi Parameshwara) ಸೇರಿದಂತೆ ಹಲವು ಸೀರಿಯಲ್ ನಟಿಸಿರುವ ಲೋಕೇಶ್ ಬಸವಟ್ಟಿ ಅವರ ಜೊತೆ ಜನವರಿ 27 ಶುಕ್ರವಾರದಂದು ಚಾಮರಾಜನಗರದಲ್ಲಿರುವ ಅನುಭವ ಮಂಟಪದಲ್ಲಿ ಲೋಕೇಶ್ ಬಸವಟ್ಟಿ ಹಾಗೂ ರಚನಾ ದಶರಥ್ ವಿವಾಹ ಮಹೋತ್ಸವ ನೆರವೇರಿತ್ತು. ಕುಟುಂಬಸ್ಥರು ಹಾಗೂ ಆತ್ಮೀಯರ ಸಮ್ಮುಖದಲ್ಲಿ ಲೋಕೇಶ್ ಬಸವಟ್ಟಿ ಮತ್ತು ರಚನಾ ದಶರಥ್ ಹಸೆಮಣೆ ಏರಿದ್ದರು.

    ಈ ನವದಂಪತಿ ಮಗುವಿನ ನಿರೀಕ್ಷೆಯಲ್ಲಿರುವ ಬಗ್ಗೆ ಲೋಕೇಶ್ ಬಸವಟ್ಟಿ ಹಾಗೂ ರಚನಾ ದಶರಥ್ ಇತ್ತೀಚೆಗಷ್ಟೇ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ತಾಯ್ತನದ (Pregnancy) ಪಯಣವನ್ನು ಆರಂಭಿಸಿದ್ದೇನೆ ಎಂದು ಸಂತಸದಿಂದಲೇ ರಚನಾ ದಶರಥ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಮನೆಗೆ ‘ಅಗ್ನಿಸಾಕ್ಷಿ’ ನಟಿ ಎಂಟ್ರಿ?

    ಲೋಕೇಶ್ ಬಸವಟ್ಟಿ- ರಚನಾ ದಶರಥ್ ಒಂದೇ ಸೀರಿಯಲ್‌ನಲ್ಲಿ ನಟಿಸಿದ್ದರು. ಈ ವೇಳೆ ಇಬ್ಬರ ಮಧ್ಯೆ ಸ್ನೇಹ, ಆತ್ಮೀಯತೆ ಬೆಳೆಯಿತು. ಬಳಿಕ ಪ್ರೀತಿ ಚಿಗುರಿತು. ಪರಸ್ಪರ ಪ್ರೀತಿಸುತ್ತಿದ್ದ ಲೋಕೇಶ್ ಹಾಗೂ ರಚನಾ ಕುಟುಂಬಸ್ಥರ ಸಮ್ಮತಿ ಪಡೆದು ಮದುವೆಯಾದರು. ರಚನಾ ತುಂಬು ಗರ್ಭಿಣಿಯಾಗಿರುವ ಕಾರಣ ನಟನೆಯಿಂದ ಬ್ರೇಕ್ ಪಡೆದಿದ್ದಾರೆ. ಮನೆಗೆ ಹೊಸ ಅತಿಥಿಯ ಆಗಮನವಾಗುವ ಸಂತಸದಲ್ಲಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ರಚನಾ ದಶರಥ್, ಲೋಕೇಶ್ ಬಸವಟ್ಟಿ ಮದುವೆ ಡೇಟ್ ಫಿಕ್ಸ್

    ರಚನಾ ದಶರಥ್, ಲೋಕೇಶ್ ಬಸವಟ್ಟಿ ಮದುವೆ ಡೇಟ್ ಫಿಕ್ಸ್

    ಸ್ಯಾಂಡಲ್‌ವುಡ್ (Sandalwood) ನಟಿ ರಚನಾ ದಶರಥ್ (Rachana Dashrath) ಮತ್ತು ಲೋಕೇಶ್ ಬಸವಟ್ಟಿ (Lokesh Basavatti) ಇತ್ತೀಚೆಗಷ್ಟೇ ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದರು. ಇದೀಗ ಮದುವೆಯ (Wedding) ಡೇಟ್ ಅನೌನ್ಸ್ ಮಾಡುವ ಮೂಲಕ ಈ ಜೋಡಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್ ಜೊತೆ ನಟಿ ರಚನಾ ದಶರಥ್ ಮಾತನಾಡಿದ್ದಾರೆ.

    ಇಬ್ಬರೂ ಸಿನಿಮಾ ಕ್ಷೇತ್ರದಲ್ಲಿರುವ ಕಾರಣ, ರಚನಾ ಮತ್ತು ಲೋಕೇಶ್ ಎಂಗೇಜ್‌ಮೆಂಟ್ ವಿಚಾರ ಅನೇಕರಿಗೆ ಅಚ್ಚರಿ ಮೂಡಿಸಿತ್ತು. ಸಾಕಷ್ಟು ಜನ ಇದು ಲವ್ ಮ್ಯಾರೇಜ್ ಎಂದೇ ಭಾವಿಸಿದ್ದರು. ಆದರೆ ಇದು ಪಕ್ಕಾ ಅರೇಂಜ್ ಮ್ಯಾರೇಜ್ ಎಂದು ನಟಿ ರಚನಾ ಹೇಳಿದ್ದಾರೆ. ಎಂಗೇಜ್‌ಮೆಂಟ್ ಬಳಿಕ ಮದುವೆ ಡೇಟ್ ಬಗ್ಗೆ ರಿವೀಲ್ ಮಾಡಿದ್ದಾರೆ. ಇದನ್ನೂ ಓದಿ: ಈ ಬಾರಿಯೂ ಕೈಕೊಟ್ಟ ಅದೃಷ್ಟ: ಬಿಗ್ ಬಾಸ್ ಮನೆಯಿಂದ ದಿವ್ಯಾ ಉರುಡುಗ ಔಟ್

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಗೌರಿಪುರದ ಗಯ್ಯಾಳಿಗಳು’ ಎಂಬ ಸೀರಿಯಲ್‌ನಲ್ಲಿ ರಚನಾ ಮತ್ತು ಲೋಕೇಶ್ ಇಬ್ಬರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ರಚನಾ ನಡೆ, ನುಡಿ ಇಷ್ಟವಾಗಿರುವ ಕಾರಣ ನಟ ಲೋಕೇಶ್ ತಂದೆ, ತಾಯಿ ಮದುವೆ ಬಗ್ಗೆ ಪ್ರಸ್ತಾಪಿಸಿದರಂತೆ ಆದರೆ ನಟಿ ರಚನಾ ನಾನು ನೇಪಾಳಿ ಕುಟುಂಬದ ಹುಡುಗಿ, ನೀವು ಲಿಂಗಾಯತರು ಬೇರೆ ಬೇರೆ ಜಾತಿಯಾಗುತ್ತದೆ. ಈ ವಿಚಾರದಲ್ಲಿ ನನ್ನ ಕುಟುಂಬದ (Family) ನಿರ್ಧಾರವೇ ಅಂತಿಮ ಎಂದಿದ್ದರು ರಚನಾ. ಬಳಿಕ ಎರಡು ಕುಟುಂಬಗಳು ಈ ಮದುವೆಯ ಬಗ್ಗೆ ಮಾತನಾಡಿ, ಗುರುಹಿರಿಯರ ಸಮ್ಮತಿಯ ಮೇರೆಗೆ ಇತ್ತೀಚೆಗೆ ರಚನಾ ಮತ್ತು ಲೋಕೇಶ್ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈಗ ಖುಷಿಯಿಂದಲೇ ಮದುವೆಗೆ ರಚನಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ.

    ಇದೀಗ ಲೋಕೇಶ್ ಅವರು ಮೂಲತಃ ಚಾಮರಾಜನಗರದ ಬಸವಟ್ಟಿ ಗ್ರಾಮದವರು. ಹಾಗಾಗಿ ಚಾಮರಾಜನಗರದ ಅನುಭವ ಮಂಟಪದಲ್ಲಿ (Anubava Mantapa) 2023, ಜನವರಿ 26, 27ರಂದು ಮದುವೆ ನಡೆಯಲಿದೆ. ನೇಪಾಳಿ ಮತ್ತು ಲಿಂಗಾಯತ ಪದ್ಧತಿ ಪ್ರಕಾರ ಮದುವೆ ಜರುಗಲಿದೆ. ಗುರುಹಿರಿಯರ ಸಮ್ಮುಖದಲ್ಲಿ ರಚನಾ ಮತ್ತು ಲೋಕೇಶ್ ಹೊಸ ಬಾಳಿಗೆ ಕಾಲಿಡುತ್ತಿದ್ದಾರೆ. ಒಟ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡ್ತಿರುವ ಹೊಸ ಜೋಡಿಗೆ ಶುಭವಾಗಲಿ ಎಂಬುದೇ ಅಭಿಮಾನಿಗಳ ಆಶಯ.

    ನಟಿ ರಚನಾ ದಶರಥ್ ಮದುವೆ ನಂತರವೂ ಚಿತ್ರರಂಗದಲ್ಲಿ  ಆಕ್ಟೀವ್‌ ಆಗಿರಲಿದ್ದಾರೆ. ಇನ್ನೂ ರಚನಾ ನಟಸಿರುವ `ಅಗ್ರಸೇನಾ’ ಮತ್ತು ಎಬಿ ಪಾಸಿಟಿವ್ ಚಿತ್ರಗಳು ತೆರೆಗೆ ಅಬ್ಬರಿಸಲು ರೆಡಿಯಾಗಿದೆ.

    ನಟನೆಯಲ್ಲಿ ಆಸಕ್ತಿ ಹೊಂದಿದ್ದ ಲೋಕೇಶ್ ಬಸವಟ್ಟಿ ನಟನಾ ಸಂಸ್ಥೆ ಸೇರಿದರು. ಕೆಲ ನಾಟಕಗಳಲ್ಲಿ ಅಭಿನಯಿಸಿದರು. ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳಾ, ಪಾರ್ವತಿ ಪರಮೇಶ್ವರ ಮುಂತಾದ ಸೀರಿಯಲ್‌ಗಳಲ್ಲಿ ಲೋಕೇಶ್ ಬಸವಟ್ಟಿ ನಟಿಸಿದ್ದಾರೆ. ಪಾರ್ವತಿ ಪರಮೇಶ್ವರ ಸೀರಿಯಲ್‌ನಲ್ಲಿನ ಲಾಯರ್ ಗುಂಡಣ್ಣ ಪಾತ್ರ ಲೋಕೇಶ್ ಬಸವಟ್ಟಿ ಅವರಿಗೆ ಖ್ಯಾತಿ ತಂದುಕೊಡ್ತು. ಚತುರ್ಭುಜ, ಡಿಂಗ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಲೋಕೇಶ್ ಬಸವಟ್ಟಿ ಮಿಂಚಿದ್ದಾರೆ.

    ಶೃತಿ ರಿಪ್ಪನ್‌ಪೇಟೆ, ಪಬ್ಲಿಕ್‌ ಟಿವಿ ಡಿಜಿಟಲ್‌ 

    Live Tv
    [brid partner=56869869 player=32851 video=960834 autoplay=true]

  • ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ

    ರಚನಾ ದಶರಥ್ ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡ ಲೋಕೇಶ್ ಬಸವಟ್ಟಿ

    ಕಿರುತೆರೆ ಮತ್ತು ಹಿರಿತೆರೆಯಲ್ಲಿ ಗಟ್ಟಿಮೇಳದ ಸದ್ದು ಜೋರಾಗಿದೆ. ಇತ್ತೀಚೆಗೆ ವಸಿಷ್ಠ ಮತ್ತು ಹರಿಪ್ರಿಯಾ, ಅವಿವಾ ಮತ್ತು ನಟ ಅಭಿಷೇಕ್ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದರು. ಈ ಬೆನ್ನಲ್ಲೇ ನಟಿ ರಚನಾ (Rachana Dashrath) ಜೊತೆ ಲೋಕೇಶ್ ಬಸವಟ್ಟಿ (Lokesh Basavatti) ಎಂಗೇಜ್‌ಮೆಂಟ್ (Engagement) ಮಾಡಿಕೊಂಡಿದ್ದಾರೆ.

    ಹಲವು ವರ್ಷಗಳಿಂದ ರಚನಾ ಮತ್ತು ಲೋಕೇಶ್ ಪ್ರೀತಿಸುತ್ತಿದ್ದರು. ಇತ್ತೀಚೆಗಷ್ಟೇ ತಾವು ಎಂಗೇಜ್ ಆಗಿರುವ ವಿಚಾರ ಸಾಮಾಜಿಕ ಜಾಲತಾಣದ ಮೂಲಕ ತಿಳಿಸಿದ್ದರು. ಹಲವು ವರ್ಷಗಳ ಪ್ರೀತಿಗೆ ಉಂಗುರದ ಮುದ್ರೆ ಒತ್ತಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಜೋಡಿ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ. ಇದನ್ನೂ ಓದಿ: ‘ದಿ ಕೇರಳ ಸ್ಟೋರಿ’ ಸಿನಿಮಾ ಬ್ಯಾನ್ ಮಾಡಲು ಸಿಎಂಗೆ ಮನವಿ

    ನಟನೆಯಲ್ಲಿ ಆಸಕ್ತಿ ಹೊಂದಿದ್ದ ಲೋಕೇಶ್ ಬಸವಟ್ಟಿ `ನಟನಾ’ ಸಂಸ್ಥೆ ಸೇರಿದರು. ಕೆಲ ನಾಟಕಗಳಲ್ಲಿ ಅಭಿನಯಿಸಿದರು. ಸಿಲ್ಲಿ ಲಲ್ಲಿ, ಪಾಯಿಂಟ್ ಪರಿಮಳಾ, ಪಾರ್ವತಿ ಪರಮೇಶ್ವರ ಮುಂತಾದ ಸೀರಿಯಲ್‌ಗಳಲ್ಲಿ ಲೋಕೇಶ್ ಬಸವಟ್ಟಿ ನಟಿಸಿದ್ದಾರೆ. ಪಾರ್ವತಿ ಪರಮೇಶ್ವರ ಸೀರಿಯಲ್‌ನಲ್ಲಿನ ಲಾಯರ್ ಗುಂಡಣ್ಣ ಪಾತ್ರ ಲೋಕೇಶ್ ಬಸವಟ್ಟಿ ಅವರಿಗೆ ಖ್ಯಾತಿ ತಂದುಕೊಡ್ತು. `ಚತುರ್ಭುಜ’ ಸೇರಿದಂತೆ ಕೆಲ ಸಿನಿಮಾಗಳಲ್ಲೂ ಲೋಕೇಶ್ ಬಸವಟ್ಟಿ ಮಿಂಚಿದ್ದಾರೆ.

    ಮೂಲತಃ ನೇಪಾಳಿ ಕುಟುಂಬಕ್ಕೆ ಸೇರಿದವರು ರಚನಾ ದಶರಥ್. ಆದರೆ, ಹುಟ್ಟಿ ಬೆಳೆದಿದ್ದೆಲ್ಲಾ ಬೆಂಗಳೂರಿನಲ್ಲಿ. ಹೀಗಾಗಿ ಕನ್ನಡ ಭಾಷೆಯನ್ನ ಸಲೀಸಾಗಿ ರಚನಾ ಮಾತನಾಡುತ್ತಾರೆ. ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ರಚನಾ ದಶರಥ್ ಸ್ಯಾಂಡಲ್‌ವುಡ್‌ಗೂ ಎಂಟ್ರಿ ಕೊಟ್ಟರು. `ಮಾತು ಕಥೆ’, ‘ಯೋಗಿ ದುನಿಯಾ’, ‘ಸಮರ್ಥ’ ಮುಂತಾದ ಸಿನಿಮಾಗಳಲ್ಲಿ ರಚನಾ ದಶರಥ್ ಅಭಿನಯಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಜನ್‍ಧನ್ ಪ್ರಥಮ ಪ್ರತಿ ಸಿದ್ಧ

    ಜನ್‍ಧನ್ ಪ್ರಥಮ ಪ್ರತಿ ಸಿದ್ಧ

    ಬೆಂಗಳೂರು: ಶ್ರೀ ಸಿದ್ಧವಿನಾಯಕ ಫಿಲಂಸ್ ಲಾಂಛನದಲ್ಲಿ ಟಿ.ನಾಗಚಂದ್ರ, ಸ್ನೇಹಿತರೊಂದಿಗೆ ಕೂಡಿ ನಿರ್ಮಿಸುತ್ತಿರುವ ‘ಜನ್‍ಧನ್’ ಚಿತ್ರದ ಪ್ರಥಮ ಪ್ರತಿ ಸಿದ್ಧವಾಗಿದೆ.

    ಮುಂದಿನ ತಿಂಗಳು ಬಿಡುಗಡೆಯಾಗಲಿರುವ ಈ ಚಿತ್ರ ಬೆಂಗಳೂರಿನಿಂದ-ಶಿರಾವರೆಗೂ ನಡೆಯುವ ಒಂದು ದಿನದ ಕಥೆಯಾಗಿದ್ದು, ಎನ್‍ಹೆಚ್4 ನಲ್ಲಿ ಬೆಳಗ್ಗೆ 4 ಗಂಟೆಯಿಂದ ಪ್ರಾರಂಭವಾಗಿ ಸಂಜೆ ಕೊನೆಗೊಳ್ಳುತ್ತದೆ. ಸಾಮಾನ್ಯ ಜನರ ಭಾವನೆಗಳನ್ನು ಬಿತ್ತರಿಸುವ ಕಥೆ ಇದು.

    ಈ ಚಿತ್ರವನ್ನು ಕಥೆ-ಚಿತ್ರಕಥೆ-ಸಂಭಾಷಣೆ-ನಿರ್ದೇಶನ-ಟಿ.ನಾಗಚಂದ್ರ, ಛಾಯಾಗ್ರಹಣ – ಉಮೇಶ್ ಕಂಪ್ಲಾಪುರ್, ಸಂಗೀತ – ಟಾಪ್ ಸ್ಟಾರ್ ರೇಣು, ಹಿನ್ನೆಲೆ ಸಂಗೀತ – ಗೌತಮ್ ಶ್ರೀವತ್ಸ, ನಿರ್ವಹಣೆ- ರಾಜರಾವ್, ತಾರಾಗಣದಲ್ಲಿ – ಸುನೀಲ್ ಶಶಿ, ರಚನಾ, ಮಾಸ್ಟರ್ ಲಕ್ಷಣ್, ಅರುಣ್, ಟಾಪ್ ಸ್ಟಾರ್ ರೇಣು, ಜಯಲಕ್ಷ್ಮಿ, ಸುನಿಲ್ ವಿನಾಯಕ, ಸುಮನ್, ತೇಜೇಶ್ವರ್ ಮುಂತಾದವರಿದ್ದಾರೆ.