Tag: ರಘು

  • ಜೀವನವೇ ಚಿತ್ತಲ್ ಪತ್ತಲು ಎಂದಿದ್ಯಾಕೆ ರಘು!

    ಜೀವನವೇ ಚಿತ್ತಲ್ ಪತ್ತಲು ಎಂದಿದ್ಯಾಕೆ ರಘು!

    ರಘು ವೈನ್‍ಸ್ಟೋರ್ ಎಂದು ಇನ್‍ಸ್ಟಾಗ್ರಾಮ್‍ನಲ್ಲಿ ಹಾಸ್ಯ ಮಾಡುವ ಮೂಲಕ ಫೇಮಸ್ ಆಗಿರುವ ರಘು. ನಿನ್ನೆ ಬಿಗ್‍ಬಾಸ್ ಮನೆಯಲ್ಲಿ ಯುವರಾಜರಾಗಿ ಮಿಂಚಿದ್ದಾರೆ. ಬಿಗ್‍ಬಾಸ್ ನಿನ್ನೆ ನೀಡಿದ್ದ ಟಾಸ್ಕ್‍ನಲ್ಲಿ ವಿಶ್ವನಾಥ್ ರಾಜನಾಗಿ, ವೈಷ್ಣವಿ ಗೌಡ ಹಾಗೂ ನಿಧಿ ಸುಬ್ಬಯ್ಯ ವೈಭೋಗದ ಅರಸಿಯರಾಗಿ ಅಭಿನಯಿಸಿದ್ದರು. ಈ ವೇಳೆ ಮಹಾರಾಜ ವಿಶ್ವನಾಥ್‍ಗೆ ಪುತ್ರನಾಗಿ ರಘು ನಟಿಸಿದ್ದು, ಎಲ್ಲರಿಗೂ ಮನರಂಜನೆ ನೀಡಿದ್ದಾರೆ.

    ನಿನ್ನೆ ಮನೆಯ ಸದಸ್ಯರೆಲ್ಲರೂ ಒಂದೊಂದು ರೀತಿಯ ಪಾತ್ರ ನಿರ್ವಹಿಸಿದರು. ಈ ವೇಳೆ ವೈಷ್ಣವಿ ಗೌಡ ಬಸವಣ್ಣನವರ ವಚನಕ್ಕೆ ಅಭಿನಯ ಮಾಡಿದರೆ, ನಿಧಿ ಪಂಚರಂಗಿ ಸಿನಿಮಾದ ಗೀತೆಯನ್ನು ಹೇಳಿದರು. ನಂತರ ಬಂದ ರಘು ನಾನು ಚಿಕ್ಕವನಾಗಿದ್ದಾಗ ವಿದ್ಯಾಭ್ಯಾಸಕ್ಕೆಂದು ನನ್ನ ತಂದೆ-ತಾಯಂದಿರು ನನ್ನನ್ನು ಹೊರದೇಶಕ್ಕೆ ಕಳುಹಿಸಿದ್ದರು. ಅಲ್ಲಿ ನಾನು ಈ ಕಲೆಯನ್ನು ಕಲಿತುಕೊಂಡು ಬಂದಿದ್ದೇನೆ. ಅಲ್ಲಿಗೆ ಹೋದ ಮೇಲೆ ನನ್ನ ಜೀವನ ಹಾಳಾಗಿ ಹೋಗಿ, ಚಿತ್ತಲ್ ಪತ್ತಲ್ ಆಗೋಯ್ತು. ಅದರ ಬಗ್ಗೆ ನಾನು ಬರೆದಿರುವ ಈ ಚಿಕ್ಕ ಹಾಡನ್ನು ನಿಮ್ಮ ಮುಂದೆ ಪ್ರಸ್ತುತ ಪಡಿಸುತ್ತೇನೆ ಎಂದು ಹೇಳಿದರು.

    ನಂತರ, ಕೂತು ಕೇಳಿ ನೋಡಿ ಈ ಕ್ಯಾಂಡಿಡೆಟ್ ಸ್ಟೋರಿ ಎಂದು ರಘು ಹಾಡು ಹೇಳಲು ಆರಂಭಿಸಿದರು. ಈ ವೇಳೆ ಮನೆಯ ಸದಸ್ಯರು ಹಾಡಿಗೆ ಚಪ್ಪಾಳೆ ತಟ್ಟಿದರೆ, ಶಮಂತ್ ಹಾಡಿಗೆ ತಾಳಹಾಕಿದರು. ಅಲ್ಲದೆ ಮಹಾರಾಜ ವಿಶ್ವನಾಥ್, ನಿಧಿ ಸುಬ್ಬಯ್ಯ, ವೈಷ್ಣವಿ, ರಘು ಜೊತೆ ಹಾಡಿಗೆ ಹೆಜ್ಜೆ ಹಾಕಿದರು. ಕೊನೆಗೆ ರಘು ಚಿತ್ತಲ್ ಪತ್ತಲು ಜೀವನವೇ ಚಿತ್ತಲ್ ಪತ್ತಲು.. ಎಂದು ಹಾಡನ್ನು ಮುಕ್ತಾಯಗೊಳಿಸುತ್ತಾರೆ.

    ಬಳಿಕ ಹಾಡು ಮುಗಿದ ನಂತರ ಮನೆಯ ಸದಸ್ಯರೆಲ್ಲರೂ ಶಿಳ್ಳೆ ಹಾಡು ಚಪ್ಪಾಳೆ ಹೊಡೆಯುವ ಮೂಲಕ ಸಂತಸ ವ್ಯಕ್ತಪಡಿಸುತ್ತಾರೆ.

  • ಸಂಬರಗಿ ನಂದೆಲ್ಲಿಡಲಿ ಅನ್ನೋ ವ್ಯಕ್ತಿ- ಬಿಗ್ ಮನೆಯಲ್ಲಿ ಶುರುವಾಯ್ತು ಗುಸು ಗುಸು

    ಸಂಬರಗಿ ನಂದೆಲ್ಲಿಡಲಿ ಅನ್ನೋ ವ್ಯಕ್ತಿ- ಬಿಗ್ ಮನೆಯಲ್ಲಿ ಶುರುವಾಯ್ತು ಗುಸು ಗುಸು

    ಬಿಗ್‍ಬಾಸ್‍ನಲ್ಲಿ ದಿನೇ ದಿನೇ ಪ್ರಶಾಂತ್ ಸಂಬರಗಿ ವಿರುದ್ಧ ಅಸಮಾಧಾನ ಸ್ಫೋಟಗೊಂಡಂತೆ ಕಾಣಿಸ್ತಿದೆ. ಮನೆಯ ಸದಸ್ಯರಿಗೆ ಪ್ರಶಾಂತ್ ಸಂಬರಗಿ ಕಿರಿಕಿರಿಯುನ್ನುಂಟು ಮಾಡ್ತಿದ್ದಾರೆ ಅನ್ನೋದು ಅವರ ಮಾತುಗಳಲ್ಲಿಯೇ ಅರ್ಥ ಆಗ್ತಿದೆ. ಒಂದು ವಿಶೇಷ ಅಂದ್ರೆ ಯಾರು ನೇರವಾಗಿ ಸಂಬರಗಿ ಮುಂದೆ ಹೇಳದೇ, ತಾವೇ ತಾವೇ ಮಾತಾಡಿಕೊಳ್ಳುತ್ತಿದ್ದಾರೆ.

    ಮಂಗಳವಾರ ಕಿಚನ್‍ನಲ್ಲಿ ನಿಧಿ ಸುಬ್ಬಯ್ಯ, ರಘು ಮಾತನಾಡಿಕೊಳ್ಳುತ್ತಾ ಸಂಬರಗಿ ದಡ್ಡ, ಹಾಗೆ ಹೀಗೆ ಅಂತ ಮಾತಾಡಿಕೊಂಡಿದ್ದರು. ನಿನ್ನೆ ಎಪಿಸೋಡ್ ನಲ್ಲಿ ಒಂದೆಡೆ ಕುಳಿತಿದ್ದ ವಿಶ್ವನಾಥ್, ರಘು ಮತ್ತು ಅರವಿಂದ್ ಮೂವರ ನಡುವೆಯೂ ಸಂಬರಗಿಯ ಕುರಿತಾದ ಮಾತುಗಳನ್ನಾಡುತ್ತಿದ್ದರು.

    ಪ್ರಶಾಂತ್ ಸಂಬರಗಿ ತಮಗೆ ಬೇಕಾಗಿದ್ದನ್ನ ಮಾಡ್ತಾರೆ. ಇಲ್ಲ ಅಂದ್ರೆ ಆಗಲ್ಲ ಗುರು ಅಂತ ಹೇಳ್ತಾರೆ. ತಾವು ಏನೇ ಕೆಲಸ ಮಾಡಿದ್ರೂ ಎಲ್ಲರಿಗೂ ತಿಳಿಯುವಂತೆ ಹೇಳೋದು ಅವರ ನಡವಳಿಕೆ. ಊಟ, ಟೀ ತಂದಾಗಲೂ ಅದನ್ನ ಪದೇ ಪದೇ ಹೇಳ್ತಾರೆ ಎಂದು ಅರವಿಂದ್ ಮತ್ತು ವಿಶ್ವನಾಥ್ ಅಂದ್ರು.

    ನಮ್ಮ ತಾಯಿಯ ವಿಷಯ ಹೇಳಿದಾಗ ರಘು ತಬ್ಬಲಿ ಅಲ್ಲ. ನಾವೆಲ್ಲ ಅವನ ಜೊತೆಯಲ್ಲಿದ್ದೇವೆ ಎಂದು ಸಂಬರಗಿ ಹೇಳಿದಾಗ ಬೇಜಾರ ಆಯ್ತು. ನಾನು ಯಾವಾಗಾದ್ರೂ ತಬ್ಬಲಿ ಅಂತ ಯಾರಿಗಾದ್ರೂ ಹೇಳಿದ್ನಾ? ಏನೇ ಮಾತಾಡಿದ್ರೂ ಸಂಬರಗಿ ಅವರು ಅದನ್ನ ಕಂಟೆಂಟ್ ತರ ನೋಡ್ತಾರೆ. ಯಾವುದೇ ಟಾಪಿಕ್ ಬಂದ್ರೂ ನಂದೆಲ್ಲಿಡಲಿ ಅನ್ನೋ ಜಾಯಮಾನದವರು ಅಂತ ಆಡಿಕೊಂಡ್ರು. ಇದೇ ವಿಷಯವಾಗಿ ನಿಧಿ ಸುಬ್ಬಯ್ಯ ಮುಂದೆಯೂ ರಘು ಮಾತಾಡಿದ್ರು.

  • ಸಂಬರಗಿ ಒಬ್ಬ ದಡ್ಡ: ನಿಧಿ ಸುಬ್ಬಯ್ಯ

    ಸಂಬರಗಿ ಒಬ್ಬ ದಡ್ಡ: ನಿಧಿ ಸುಬ್ಬಯ್ಯ

    ಬೆಂಗಳೂರು: ನಾಲ್ಕನೇ ವಾರದಲ್ಲಿ ಸ್ಪರ್ಧಿಗಳಿಗೆ ಯಾರು ಹೇಗೆ ಅನ್ನೋ ಲೆಕ್ಕ ಸಿಕ್ಕಂತೆ ಕಾಣುತ್ತಿದ್ದು, ಯಾರು ತಮ್ಮ ಹಿತೈಶಿಗಳು ಮತ್ತು ಯಾರ ಜೊತೆ ಕಂಫರ್ಟ್ ಝೋನ್ ಅಂತ ಅನ್ನೋದು ಅರ್ಥ ಆದಂತೆ ಆಗಿದೆ. ಅಡುಗೆ ಮನೆಯಲ್ಲಿ ನಿಧಿ ಸುಬ್ಬಯ್ಯ, ಶುಭಾ ಪೂಂಜಾ ಮತ್ತು ರಘು ಮೂವರು ಪ್ರಶಾಂತ್ ಸಂಬರಗಿಯ ಆಟದ ಬಗ್ಗೆ ಮಾತನಾಡುತ್ತಿದ್ದರು. ಈ ವೇಳೆ ಸಂಬರಗಿ ಒಬ್ಬ ದಡ್ಡ, ಕೊನೆಯಲ್ಲಿ ಬಂದು ನಾನು ಮಾಡಿದೆ ಅಂತ ಹೇಳಿಕೊಳ್ಳುವ ಜಾಯಮಾನದ ವ್ಯಕ್ತಿ ಎಂದರು.

    ಇದಕ್ಕೂ ಮೊದಲು ನಾನು ಅಮ್ಮನ ಡೆತ್ ಆ್ಯನಿವರ್ಸರಿ ವಿಷಯ ಹೇಳಿದಾಗ, ನನ್ನ ಬಳಿ ಬಂದ ಸಂಬರಗಿ ಸಾಂತ್ವಾನದ ಮಾತುಗಳನ್ನಾಡಿದರು. ರಘು ತಬ್ಬಲಿ ಅಂತ ಹೇಳಿಕೊಳ್ಳುತ್ತಿರುತ್ತಾರೆ. ಅವನು ತಬ್ಬಲಿ ಅಲ್ಲ, ನಾವೆಲ್ಲ ಅವನೊಂದಿಗೆ ಇದ್ದೇವೆ ಅಂದ್ರು. ಆದ್ರೆ ಯಾರಿಗೂ ನಾನು ತಬ್ಬಲಿ ಅಂತ ಹೇಳಿಕೊಂಡು ಸಿಂಪಥಿ ಕ್ರಿಯೇಟ್ ತೆಗೆದುಕೊಳ್ಳಲು ಟ್ರೈ ಮಾಡಿಲ್ಲ. ಆದ್ರೆ ಸಂಬರಗಿ ಯಾಕೆ ಹಾಗೆ ಹೇಳಿದ್ರು ಅಂತ ಇವಾಗೂ ನನಗೆ ತಿಳಿಯುತ್ತಿಲ್ಲ ಎಂದು ಹೇಳಿದರು.

    ನೀನು ವೀಕ್ ಅನ್ನೋ ಸುಳ್ಳನ್ನ ಹತ್ತು ಬಾರಿ ಹೇಳಿದಾಗ ಅದನ್ನ ನಂಬೋಕೆ ಹೋಗ್ತೀವಿ. ಎಲ್ಲರನ್ನ ಹೀಗೆ ವೀಕ್ ಮಾಡೋದು ಸಂಬರಗಿ ಆಟದ ಪ್ಲಾನ್ ಅಂತ ರಘುಗೆ ನಿಧಿ ಸಮಜಾಯಿಸಿ ಕೊಟ್ರು. ಇನ್ನೊಮ್ಮೆ ಆ ರೀತಿ ಮಾತಾಡಿದ್ರೆ ಮುಚ್ಕೊಂಡು ಹೋಗಿ ಎಂದು ಮುಖಕ್ಕೆ ನೇರವಾಗಿ ಹೇಳಿ ಎಂದು ರಘುಗೆ ಸಲಹೆ ನೀಡಿದ್ರು ನಿಧಿ.

    ದಿವ್ಯ ಉರುಡುಗಳ ಕೆಲ ಘಟನೆಗಳು ನೋಡಿದೆ. ಆಕೆ ಪ್ರಶಾಂತ್ ಸಂಬರಗಿಗಿಂತ ಹೆಚ್ಚು ನಾಟಕ ಮಾಡ್ತಾಳೆ. ಕೆಲವೇ ಕ್ಷಣಗಳಲ್ಲಿ ಹೇಗೆ ಚೇಂಜ್ ಆಗ್ತಾಳೆ ಅನ್ನೋದು ಗೊತ್ತಾಯ್ತು. ಆದ್ರೆ ಪ್ರಶಾಂತ್ ಸಂಬರಗಿ ಒಬ್ಬ ದಡ್ಡ. ಅವನಿಗೆ ಅದನ್ನೆಲ್ಲ ಕ್ಯಾಚ್ ಮಾಡೋಕೆ ಸಾಧ್ಯವಿಲ್ಲ ಎಂದು ಸಂಬರಗಿ ಬಗ್ಗೆ ಶುಭಾ, ನಿಧಿ ಮತ್ತು ರಘು ಮಾತಾಡಿಕೊಂಡ್ರು.

  • ತರಕಾರಿ ಮಂಡಿ ತೆರೆದ ರಘು

    ತರಕಾರಿ ಮಂಡಿ ತೆರೆದ ರಘು

    ಬಿಗ್‍ಬಾಸ್ ಮನೆಯಲ್ಲಿ ರಘು ತರಕಾರಿ ಮಂಡಿಯನ್ನು ತೆರೆದಿದ್ದಾರೆ. ಈ ವಿಚಾರವಾಗಿ ಸುದೀಪ್ ಇಂದು ಸೂಪರ್ ಸಂಡೆ ವಿತ್ ಸುದೀಪದಲ್ಲಿ ಮಾತನಾಡಲಿದ್ದಾರೆ.

    ಹೌದು ಕಳೆದವಾರ ನೀಡಲಾದ ಜೋಡಿ ಟಾಸ್ಕ್‍ನಲ್ಲಿ ಮನೆಯ ಸದಸ್ಯರನ್ನು ಜೋಡಿ ಮಾಡಲಾಗಿತ್ತು. ಈ ವೇಳೆ ವೈಷ್ಣವಿ, ರಘು ಒಂದು ಜೋಡಿಯಾಗಿ ಆಟ ಆಡುತ್ತಿದ್ದರು. ರಿಚಾರ್ಜ್ ಸ್ಟಿಕ್ ಎಲ್ಲಿದೆ ಅಂತ ತಿಳಿದುಕೊಳ್ಳಲು ವೈಷ್ಣವಿಯನ್ನ ಮಂಜು ನಿಧಾನವಾಗಿ ಪಕ್ಕಕ್ಕೆ ಕರೆತಂದು ವಿಚಾರಿಸುತ್ತಿದ್ದರು. ವೈಷ್ಣವಿ ಮಾಹಿತಿ ನೀಡಿದ್ರೆ ಹೇಗೆ ಅಂತ ರಘು ಇಬ್ಬರನ್ನ ಹಿಂಬಾಲಿಸುತ್ತಿದ್ದರು.ಇದನ್ನು ಗಮನಿಸಿದ ಲ್ಯಾಗ್ ಮಂಜು ನೋಡಪ್ಪಾ.. ಬೆಳ್ಳುಳ್ಳಿ ಹಿಂದೆ ಈರುಳ್ಳಿ ಬರುತ್ತಿದೆ ಎಂದು ತಮಾಷೆ ಮಾಡಿದ್ದರು.

    ಈ ವಿಚಾರವನ್ನು ಸುದೀಪ್ ವಾರದ ಕಥೆಯ ಕಿಚ್ಚನ ಪಂಚಾಯ್ತಿ ಕಟ್ಟೆಯಲ್ಲಿ ಮಾತನಾಡಿದ್ದಾರೆ. ಈರುಳ್ಳಿ, ಬೆಳ್ಳಿಯ ಕಥೆಯನ್ನು ಹೇಳಿದ್ದಾರೆ. ಈ ವೇಳೆ ರಘು ಅವರಿಗೆ ಈ ಮನೆಯಲ್ಲಿರುವ ಸದಸ್ಯರನ್ನು ಯಾವ ಯಾವ ತರಕಾರಿಗೆ ಹೋಲಿಸುತ್ತಿರಾ ಎಂದು ರಘು ಅವರನ್ನು ಕೇಳಿದ್ದಾರೆ.

    ಬಿಗ್‍ಬಾಸ್ ಮನೆಯಲ್ಲಿದೆ ವೆರೈಟಿ ವೆರೈಟಿ ತರಕಾರಿ!

    ದಿವ್ಯ ಸುರೇಶ್ ಮೆಣಸಿನ ಕಾಯಿ, ಶಂಕರ್ ಅವರು ಹಾಗಲಕಾಯಿ ಅವರಿಗೆ ಏನ್ ಆದರೂ ಉಲ್ಟಾ ಹೊಡೆದರೆ ಅವರು ತುಂಬಾ ಕಹಿಯಾಗುತ್ತಾರೆ. ನಿಧಿ ಅವರು ಕ್ಯಾಪ್ಸಿಕಂ ಅವರನ್ನು ಬಜ್ಜಿ ಮಾಡಕೊಂಡು ತಿನ್ನಬಹುದು ಎಂದು ಹೇಳುತ್ತಾ ರಘು ಅವರದ್ದೆ ಶೈಲಿಯಲ್ಲಿ ಜೋಕ್ ಮಾಡಿದ್ದಾರೆ. ರಘು ಅವರ ತರಕಾರಿ ಮಳಿಗೆ ವಿಚಾರವನ್ನು ಕೇಳಿದ ಮನೆ ಮಂದಿ ನಕ್ಕಿದ್ದಾರೆ.

    ಶಮಂತ್ ಅವರನ್ನು ಯಾವ ತರಕಾರಿ ಹೋಲಿಸ್ತೀರಾ ಎಂದು ಸುದೀಪ್ ಕೇಳಿದಾಗ ರಘು ಸೆಪ್ಪೆ ಮೊರೆ ಹಾಕಿ ಕೊಂಡು ಬದನೆಕಾಯಿ ಸರ್ ಎಂದಿದ್ದಾರೆ. ಆಗ ಸುದೀಪ್ ಅಂದರೆ ವಿಷಯ ಇಲ್ಲಾ ಅಂತನಾ ಎಂದು ಜೋಕ್ ಮಾಡಿದ್ದಾರೆ. ಈ ವೇಳೆ ಮನೆಯ ಮಂದಿ ನಗೆಗಡಿಲಿನಲ್ಲಿ ತೇಲಾಡಿದ್ರು.

  • ರಘುನ ಚುಡಾಯಿಸಿ ಮಜಾ ತಗೊಂಡ ಮನೆ ಹೆಂಗಳೆಯರು!

    ರಘುನ ಚುಡಾಯಿಸಿ ಮಜಾ ತಗೊಂಡ ಮನೆ ಹೆಂಗಳೆಯರು!

    ಬಿಗ್‍ಬಾಸ್ ಮನೆ ಸದಸ್ಯರಲ್ಲಿ ರಘು ಕೊಂಚ ಡಿಫ್ರೆಂಟ್ ಎಂದು ಹೇಳಿದರೆ ತಪ್ಪಾಗಲಾರದು. ರಘು ಸೀರಿಯಸ್ ಆಗಿನೂ ಮಾತನಾಡುತ್ತಾರೆ. ಕಾಮಿಡಿನೂ ಮಾಡುತ್ತಾರೆ. ಇದಕ್ಕೆ ಉತ್ತಮ ಉದಾಹರಣೆಯೆಂಬಂತೆ ಬಿಗ್‍ಬಾಸ್ ಮನೆಯಲ್ಲಿ ಒಂದು ಘಟನೆ ನಡೆದಿದೆ.

    ರಘು ಮನೆಯಲ್ಲಿ ಬೆಲ್ಲಿ ಡಾನ್ಸ್ ಮಾಡಲು ತಯಾರಿ ನಡೆಸಿದ್ದಾರೆ. ಈ ವೇಳೆ ಮನೆ ಸದಸ್ಯರ ಬಳಿ ಹುಡುಗಿಯ ಹಾಗೇ ಹಾವ-ಭಾವದಲ್ಲಿ ಮಾತನಾಡುತ್ತಿದ್ದಾರೆ. ಮನೆಯವರು ರಘುವನ್ನು ಚುಡಾಯಿಸುತ್ತಾ ಸಖತ್ ಮಜಾ ತಗೋತ್ತಿದ್ದಾರೆ.

    ರಘು ಬಾರೆ… ಇಲ್ಲಿ.. ಎಂದು ಶುಭ ಪೂಂಜಾ ಮಾದಕ ಧ್ವನಿಯಲ್ಲಿ ಕರೆದಿದ್ದಾರೆ. ಈ ವೇಳೆ ರಘು ಏನೇ… ಎಂದು ನಾಚುತ್ತಾ ಮಾತನಾಡಿದ್ದಾರೆ. ಈ ವೇಳೆ ಅಲ್ಲೇ ಇದ್ದ ವಿಶ್ವನಾಥ್, ವೈಷ್ಣವಿ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರ್ಗಿ ಜೋರಾಗಿ ನಕ್ಕಿದ್ದಾರೆ.

    ಏನೇ ಹೊಟ್ಟೆ ಎಲ್ಲಾ ಬಿಟ್ಟ್ಕೊಂಡಿದ್ದಿಯಾ ಮೊಟ್ಟೆತರ ಎಂದು ದಿವ್ಯ ಸುರೇಶ್, ರಘು ಅವರಿಗೆ ಹೇಳಿದ್ದಾರೆ. ಈ ವೇಳೆ ರಘು ನಾಚುತ್ತಾ ತುಂಬಾ ಕಾಣಿಸ್ತಾ ಇದ್ಯಾ. ಕ್ರಾಪ್ ಟಾಪ್ ಅಂತ ಅಂಗಡಿಯವನು ಕೊಟ್ಟ. ತುಂಬಾ ಕ್ರಾಪ್ ಆಗಿ ಹೋಯ್ತಾ. ಇದನ್ನು ಹಾಕಿಕೊಳ್ಳೊಕೆ ಅಂತಾನೆ ದಿನಾ ವರ್ಕ್‍ಔಟ್ ಮಾಡುತ್ತೇನೆ ಎಂದು ಹುಡುಗಿಯ ಧ್ವನಿಯಲ್ಲಿ ನಾಚುತ್ತಾ ಹೇಳಿದ್ದಾರೆ.

    ಮನೆಯವರು ಕೇಳುತ್ತಿರುವ ಪ್ರಶ್ನೆಗಳಿಗೆ ರಘು ನಗುತ್ತಾ ನಾಚುತ್ತಾ ಹೆಣ್ಣಿನ ಧ್ವನಿಯಲ್ಲಿ ಉತ್ತರಿಸಿದ್ದಾರೆ. ಮನೆಯ ಹೆಂಗಳೆಯರೆಲ್ಲಾ ಸೇರಿ ರಘುವನ್ನು ಚುಡಾಯಿಸಿ ಜೋರಾಗಿ ನಕ್ಕಿದ್ದಾರೆ.

  • ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ರಘು ಕೂದಲು ಉದುರಿದ್ಯಾಕೆ? ಲ್ಯಾಗ್ ಮಂಜು ತರಲೆ ಉತ್ತರ

    ಬಿಗ್‍ಬಾಸ್ ಸೀಸನ್ 8ರ ಮೂರನೇ ವಾರದಲ್ಲಿ ಸ್ಪರ್ಧಿಗಳ ನಿಜವಾದ ಮುಖ ಪ್ರೇಕ್ಷಕರ ಮುಂದೆ ಬರ್ತಿದೆ. ನಿನ್ನೆ ಎಪಿಸೋಡ್ ನಲ್ಲಿ ಸಂಬರಗಿ ಕಣ್ಣೀರು, ಶುಭಾ ಮುನಿಸು, ಗೀತಾ ಲೆಕ್ಕಾಚಾರದ ಆಟ, ಮಂಜನ ಕಾಮಿಡಿ ನಡುವೆ ದೇಸಿ ಗೇಮ್, ಚಂದ್ರಕಲಾ ಮತ್ತು ಶಂಕರ್ ಅಶ್ವಥ್ ಸೇಫ್ ಜೋನ್ ಹೀಗೆ ಒಂದೊಂದು ಗುಣಗಳು ನೋಡಲು ಸಿಗುತ್ತಿವೆ. ಇಂದು ವಾಹಿನಿ ಪ್ರೋಮೋ ರಿಲೀಸ್ ಮಾಡಿದ್ದು, ರಘು ಕೂದಲು ಉದುರಿದ್ಯಾಕೆ ಅಂತ ಮಂಜು ಹೇಳಿದ್ದಾರೆ.

    ಹಾಲ್ ನಲ್ಲಿ ಮಂಜು, ಅರವಿಂದ್, ರಘು, ದಿವ್ಯಾ ಸುರೇಶ್ ಮತ್ತು ದಿವ್ಯಾ ಉರುಡುಗ ಕುಳಿತಿದ್ದರು. ದಿವ್ಯಾ ಸುರೇಶ್ ಮುಂದೆ ನಾನು ಸುಳ್ಳು ಹೇಳುವ ರೀತಿ ಕಾಣಬಹುದು. ಆದ್ರೆ ಸುಳ್ಳು ಹೇಳ್ತೀನಾ ಅಂತ ರಘು ಹೇಳಿದ್ರು. ರಘು ಮಾತು ಕೇಳಿದ ಅರವಿಂದ್ ನಗಲಾರಂಭಿಸಿದರು. ಅಲ್ಲಿಯೇ ಕುಳಿತಿದ್ದ ಮಂಜು, ಇಷ್ಟು ವರ್ಷದಲ್ಲಿ ರಘು ಇದುವರೆಗೂ ನಿಜನಾ ಹೇಳಿಲ್ಲ ಅನ್ನೋದು ನನ್ನ ಅನಿಸಿಕೆ. ನಿಜ ಹೇಳಿದ್ರೆ ಕೂದಲು ಜೋರಾಗಿ ಬೆಳೆದಿರೋದು ಅಂತ ಕಾಲೆಳೆದರು.

    ಸುಳ್ಳು ಹೇಳೋರಿಗೆ ಹೆಚ್ಚು ಕೂದಲು ಉದುರೋದು. ಬೇಕಿದ್ರೆ ನಮ್ಮ ಮಾವ ಸಂಬರಗಿಯನ್ನ ಕೇಳು. ಸೆಕ್ಷನ್ 56ರ ಪ್ರಕಾರ ಕೂದಲು ಉದುರೋದೇ ಸುಳ್ಳು ಹೇಳಲು ಅಂತ ಹೇಳ್ತಾರೆ. ಬೇಕಿದ್ರೆ ಕರಿ ಗೊಂಬೆ ಮತ್ತು ರಘುನನ್ನ ನೋಡಿ ಅಂತ ಹೇಳಿ ಹಾಲ್ ನಲ್ಲಿ ಕುಳಿತಿದ್ದ ಎಲ್ಲರನ್ನ ನಗಿಸಿದರು.

    ಈ ವಾರ ಜೋಡಿಯಾಗಿ ಟಾಸ್ಕ್ ನೀಡಿರುವ ಬಿಗ್‍ಬಾಸ್ ಎಲ್ಲರಿಗೂ ರಿಚಾರ್ಜ್ ಸ್ಟಿಕ್ ನೀಡಿದ್ದಾರೆ. ಅದನ್ನ ಕಾಪಾಡಿಕೊಳ್ಳುವದರ ಜೊತೆಗೆ ಬೇರೆಯವರ ಸ್ಟಿಕ್ ಪಡೆದುಕೊಂಡ ಜೋಡಿ ವಿನ್ ಆಗಲಿದೆ. ಹಾಗಾಗಿಯೇ ಎಲ್ಲರೂ ಬೇರೆಯವರ ರಿಚಾರ್ಜ್ ಸ್ಟಿಕ್ ಹುಡುಕೋದರಲ್ಲಿ ಬ್ಯುಸಿಯಾಗಿದ್ದಾರೆ.

  • ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಆಗುತ್ತೆ!

    ಬೆಂಗಳೂರು: ಬಿಗ್‍ಬಾಸ್ ಮನೆ ಎಂದರೆ ಹೈ ಡ್ರಾಮಾ ಎಂದು ಗೊತ್ತು. ಪ್ರತಿಯೊಬ್ಬರು ಒಂದೊಂದು ಮುಖವಾಡ ತೊಟ್ಟು ನಾಟಕವಾಡುತ್ತಾರೆ ಅಂತ ಅಲ್ಲಿಯವರೇ ಹೇಳುತ್ತಿರುತ್ತಾರೆ. ಒಬ್ಬೊಬ್ಬರ ಮುಖವಾಡ ಕಳಚಿ ಬೀಳುತ್ತಿದೆ. ಹೀಗಿರುವಾಗ ಮನೆಯವರ ದೃಷ್ಟಿಯಲ್ಲಿ ನಿರ್ಮಲಾ ಎಂದರೆ ಕೊಂಚ ವಿಭಿನ್ನ. ಇವರ ಕುರಿತಾಗಿ ಅವರದ್ದೇ ಟೀಮ್‍ನವರು ಮಾತನಾಡಿಕೊಂಡಿದ್ದಾರೆ.

    ಕೊರೊನಾ ವೈರಸ್ ಥೀಮ್‍ನಲ್ಲೊಂದು ಆಟವನ್ನು ಆಡಿಸಲಾಗುತ್ತಿದೆ. ವೈರಸ್ ಹಾಗೂ ಮನುಷ್ಯರ ಎಂದು ಆಟವಾಡುತ್ತಿದ್ದಾರೆ. ಆಟದ ವೇಳೆ ನಿರ್ಮಲಾ ಗಾಯಗೊಂಡಿದ್ದಾರೆ. ಆದರೆ ನಾನು ಆಟವಾಡುತ್ತೇನೆ ಎಂದು ಅವರ ತಂಡವದರ ಬಳಿ ನಿರ್ಮಲಾ ಕೇಳಿದ್ದಾರೆ. ಈ ವೇಳೆ ಶಂಕರ್ ಅಶ್ವಥ್, ನಿಧಿ ಸುಬ್ಬಯ್ಯ, ರಘು, ರಾಜೀವ್ ಅವರು ನಿರ್ಮಲಾ ಅವರ ಕುರಿತಾಗಿ ಮಾತನಾಡಿಕೊಳ್ಳುತ್ತಿದ್ದಾರೆ.

    ನಿರ್ಮಲಾ ತಲೆ ಸ್ವಿಚ್ ಆನ್, ಆಫ್ ಮಾಡುತ್ತಿದ್ದಾರೆ..!
    ನಿರ್ಮಲಾ ಅವರು ತಲೆಯನ್ನು ಯಾರೋ ಆಪರೇಟ್ ಮಾಡುತ್ತಿದ್ದಾರೆ. ಯಾರೋ ಕ್ರೇಜಿ ಅವರು ಎಂದು ಹೇಳಿ ನಕ್ಕಿದ್ದಾರೆ. ನಿರ್ಮಲಾ ಅವರು ಸಖತ್ ಟ್ಯಾಲೆಂಟ್. ಏನಾದರೂ ಹೇಳಿ ಸುಮ್ಮನಾಗಲ್ಲ ಕೈ ಬಾಯಿ ಆಡಿಸುತ್ತಾರೆ. ಆದರೆ ಜಗತ್ತಿನಲ್ಲಿ ಮುಖ್ಯವಾಗಿ ಕೈ, ಬಾಯಿ ಹಿಡಿತ ಇರಬೇಕು ಎಂದು ಹೇಳಿ ರಘು ಹೇಳಿದ್ದಾರೆ.

    ನಿರ್ಮಲಾನಂತೆ ಮಿಮಿಕ್ರಿ ಮಾಡಿದ ಶಂಕರ್ ಅಶ್ವಥ್!
    ಹೋಗು ಮನೆಗೆ ನಿನ್ನ ಹಣೆಬರ ಮನೆಗೆ ಹೋಗಬೇಕು ಎಂದೆ ಇದೆ, ದೇವರು ಇಲ್ಲಿವರೆಗೂ ಕರೆದುಕೊಂಡು ಬಂದು ಬಿಟ್ಟಿದ್ದಾನೆ. ಮನಸ್ಸು ಒಳ್ಳೆಯದು ಆದರೆ ಏನೊ ಹೊಸ ತರ ಮಾಡಲು ಹೋಗುತ್ತಾರೆ. ಈ ವೇಳೆ ನಿನ್ನ ಹೆಸರು ಏನು ಎಂದು ನಿರ್ಮಲಾ ಬಳಿ ಕೇಳಿದರೆ ಅವರ ಹೇಗೆ ಮತನಾಡುತ್ತಾರೆ ಎಂಬುದನ್ನು ಆ್ಯಕ್ಟ್ ಮಾಡಿ ಶಂಕರ್ ತೋರಿಸಿದ್ದಾರೆ ಈ ವೇಳೆ ಅಲ್ಲಿದ್ದ ವೈರಸ್ ಟೀಮ್ ತಂಡದ ಸದಸ್ಯರು ಅವರದ್ದೇ ಸದಸ್ಯರ ಕುರಿತಾಗಿ ಮಾತನಾಡಿ ಜೋರಾಗಿ ನಕ್ಕಿದ್ದಾರೆ.

    ಬಿಗ್ ಬಾಸ್ ಮನೆ ಒಂದು ವಾರ ಶಾಂತವಾಗಿತ್ತು. ಯಾವುದೇ ಜಗಳ ಎಂದು ಇರಲಿಲ್ಲಲ. ಆದರೆ ಬಿಗ್‍ಬಾಸ್ ಅಸಲಿ ಆಟ ಶುರುವಾಗಿದೆ. ಎಲ್ಲರ ನಗುಮುಖದ ಹಿಂದಿರುವ ಮುಖವಾಡ ಒಂದೊಂದಾಗಿಯೇ ಹೊರ ಬರುತ್ತಿದೆ. ಈ ಎಲ್ಲರ ನಗು, ಜಗಳ, ಆಟದ ಹಿಂದೆ ಇರುವವರು ಬಿಗ್‍ಬಾಸ್

  • ಒಂದೆ ವಾರಕ್ಕೆ ಮನೆಯಿಂದ ಹೋಗ್ಬೇಕಾ ಅಂದ ಧನುಶ್ರೀ..!

    ಒಂದೆ ವಾರಕ್ಕೆ ಮನೆಯಿಂದ ಹೋಗ್ಬೇಕಾ ಅಂದ ಧನುಶ್ರೀ..!

    ಬೆಂಗಳೂರು: ಬಿಗ್ ಮನೆಯಲ್ಲಿ ರಂಗು ರಂಗಿನ ಆಟ ಮುಂದುವರೆದಿದೆ. ವಾರಾಂತ್ಯದಲ್ಲೊಬ್ಬರು ಮನೆಯಿಂದ ಹೊರ ಹೋಗುತ್ತಾರೆ. ಈ ವಿಚಾರವಾಗಿ ರಘು ಮತ್ತು ಧನುಶ್ರೀ ಮಾತನಾಡಿದ್ದಾರೆ. ಮನೆಯ ರಂಗು ರಂಗಿನ ಆಟದ ಬಿಸಿ ಹೆಚ್ಚಾಗುತ್ತಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ಯಾರು ಹೋಗಬಹುದು ಎಂಬ ಕುತೂಹಲ ಹೆಚ್ಚಾಗಿದೆ.
    ಮನೆಯಲ್ಲಿ ಕೆಲವು ದಿನ ಮಾತ್ರ ಇದ್ದು ಹೋಗಬೇಕಾ..? ಹೊಂದಿಕೊಂಡು ಬೆರೆಯಲು ನನಗೆ ಸಮಯ ಬೇಕು ಅಷ್ಟರಲ್ಲಿ ಹೋಗಬೇಕಾ ಎಂದು ನೋವಾಗುತ್ತಿದೆ ಎಂದು ಧನುಶ್ರೀ ರಘು ಜೊತೆ ಹೇಳಿಕೊಂಡಿದ್ದಾರೆ.

    ಭಯಾ ಆಗುತ್ತಿದೆಯಾ.. ಎರಡನೇ ವಾರದ ಕ್ಯಾಪ್ಟನ್ ಆಯ್ಕೆ ಸಂದರ್ಭದಲ್ಲಿ ಕೊನೆಗೆ ನಿರ್ಮಲಾ ಎಸ್ ಎಂದ ಟೀಮ್‍ಗೆ ಯಾರನ್ನೋ ಮೆಚ್ಚಿಸಲು ಹೋಗಿಬಿಟ್ಟರು. ಇವರು ನಾಮಿನೇಟ್ ಆಗಿದ್ದಾರೆ. ಹೀಗಾಗಿ ಕ್ಯಾಪ್ಟನ್ ಅವರಿಂದ ತಾನು ಈ ಮನೆಯಲ್ಲಿ ಉಳಿಯಬಹುದು ಎಂದು ಹೀಗೆ ಮಾಡಿದ್ದಾರೆ ಅನ್ನಿಸುತ್ತದೆ ಅಂತ ಇಬ್ಬರೂ ಗುಟ್ಟಾಗಿ ಚರ್ಚೆ ನಡೆಸಿದ್ದಾರೆ.

    ವಾರಾಂತ್ಯದಲ್ಲಿ ಯಾರು ಮನೆಯಿಂದ ಹೋಗುತ್ತಾರೆ ಎನ್ನುವ ಕುತೂಹಲ ಹೆಚ್ಚಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ನಾನು ಉಳಿಯಬೇಕು ಎನ್ನುವ ಮನಸ್ಥಿತಿ ಇದೆ. ಆದರೆ ಯಾರು ಅದನ್ನು ಬಾಯಿಬಿಟ್ಟು ಹೇಳುವ ಪರಿಸ್ಥಿತಿಯಲ್ಲಿ ಇಲ್ಲ. ಆದರೆ ಇವರೆಲ್ಲ ಕೀ ಕೊಟ್ಟ ಗೊಂಬೆಗಳಂತೆ. ಬಿಗ್ ಬಾಸ್ ಹೇಳಿದಂತೆ ಆಟವಾಡುವ ಗೊಂಬೆಗಳು ಮಾತ್ರ ಇವರು ಎನ್ನುವುದು ಅಷ್ಟೆ ಸತ್ಯವಾಗಿದೆ. ನಾಮಿನೇಟ್ ಆಗಿರುವ ಸದಸ್ಯರಲ್ಲಿ ವಾರಾಂತ್ಯದಲ್ಲಿ ಯಾರು ಮನೆಯಿಂದ ಹೊರ ಹೋಗುತ್ತಾರೆ. ಯಾರು ಸೇಫ್ ಆಗಿ ಉಳಿದು ತಮ್ಮ ಆಟ ಮುಂದುವರಿಸ್ತಾರೆ ಎಂದು ಕಾದುನೋಡಬೇಕಿದೆ.

  • ಹವಾಮಾನ ವೈಪರೀತ್ಯ- ದಾರಿ ಮಧ್ಯೆ ಲ್ಯಾಂಡ್ ಆದ ಹೆಲಿಕಾಪ್ಟರ್

    ಹವಾಮಾನ ವೈಪರೀತ್ಯ- ದಾರಿ ಮಧ್ಯೆ ಲ್ಯಾಂಡ್ ಆದ ಹೆಲಿಕಾಪ್ಟರ್

    ಶಿವಮೊಗ್ಗ: ಹವಾಮಾನ ವೈಪರಿತ್ಯದಿಂದಾಗಿ ಎಂಎಲ್‍ಸಿ ರಘು ಆಚಾರ್ ಸಂಚಾರ ಮಾಡುತ್ತಿದ್ದ ಹೆಲಿಕಾಪ್ಟರ್ ದಾರಿ ಮಧ್ಯದಲ್ಲಿಯೇ ಲ್ಯಾಂಡ್ ಆದ ಘಟನೆ ಇಂದು ಜಿಲ್ಲೆಯ ಭದ್ರಾವತಿ ತಾಲೂಕಿನ ಅಂಚೆ ಸಿದ್ದಾಪುರದಲ್ಲಿ ನಡೆದಿದೆ.

    ಶಿವಮೊಗ್ಗದಲ್ಲಿ ಇಂದು ನಡೆದ ಶಾಸಕ ಬಿ.ಕೆ ಸಂಗಮೇಶ್ ಅವರ ಸಹೋದರನ ಪುತ್ರಿಯ ವಿವಾಹ ನಿಶ್ಚಿತಾರ್ಥ ಸಮಾರಂಭದಲ್ಲಿ ಭಾಗವಹಿಸುವ ಸಲುವಾಗಿ ಎಂಎಲ್‍ಸಿ ರಘು ಆಚಾರ್ ಬೆಂಗಳೂರಿನಿಂದ ಶಿವಮೊಗ್ಗಕ್ಕೆ ಹೆಲಿಕಾಪ್ಟರ್ ಮೂಲಕ ಪ್ರಯಾಣ ಬೆಳೆಸಿದ್ದರು. ಆದರೆ ಹೆಲಿಕಾಪ್ಟರ್ ಭದ್ರಾವತಿ ಸಮೀಪ ಬರುತ್ತಿದ್ದಂತೆ ಮೋಡ ಕವಿದ ವಾತಾವರಣ ಇದ್ದ ಪರಿಣಾಮ ಅಂಚೆ ಸಿದ್ದಾಪುರ ಗ್ರಾಮದ ಶಾಲೆಯೊಂದರ ಮೈದಾನದಲ್ಲಿಯೇ ಫೈಲೆಟ್ ನ ಸಮಯ ಪ್ರಜ್ಞೆಯಿಂದ ಲ್ಯಾಂಡ್ ಆಗಿದೆ.

    ನಂತರ ಮಾಧ್ಯಮದವರ ಜೊತೆ ಮಾತನಾಡಿದ ರಘು ಆಚಾರ್, ದೇವರ ದಯೆಯಿಂದ ಯಾವುದೇ ಅವಘಡ ಸಂಭವಿಸಲಿಲ್ಲ. ತಾಯಿ ಚಾಮುಂಡೇಶ್ವರಿ ಆಶೀರ್ವಾದದಿಂದ ವಾಪಸ್ ಬಂದಿದ್ದೇನೆ. ನಾನು 9 ವರ್ಷಗಳಿಂದ ಹೆಲಿಕಾಪ್ಟರ್ ನಲ್ಲಿ ಓಡಾಡುತ್ತಿದ್ದೇನೆ. ನನ್ನ ಜೀವನದಲ್ಲಿ ಇಂತಹ ಸಮಸ್ಯೆ ಯಾವಾಗಲೂ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಇಂತಹ ಸಮಸ್ಯೆ ಕಾಣಿಸಿಕೊಂಡಿದ್ದು ಕೆಲಕಾಲ ಗಾಬರಿಯಾಗುವಂತೆ ಮಾಡಿತ್ತು ಎಂದಿದ್ದಾರೆ.

  • ರಿಯಲ್ ಲೈಫಿನಲ್ಲೂ ಮಿ. ಆ್ಯಂಡ್ ಮಿಸಸ್ ಆದ ಅಮೃತಾ-ರಘು

    ರಿಯಲ್ ಲೈಫಿನಲ್ಲೂ ಮಿ. ಆ್ಯಂಡ್ ಮಿಸಸ್ ಆದ ಅಮೃತಾ-ರಘು

    ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಕಿರುತೆರೆ ಮತ್ತು ಬೆಳ್ಳಿತೆರೆಯ ನಟ-ನಟಿಯರು ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇದಕ್ಕೆ ಹೊಸ ಸೇರ್ಪಡೆ ಎಂಬಂತೆ ‘ಕುಲವಧು’ ಧಾರಾವಾಹಿಯ ವಚನಾ ಖ್ಯಾತಿಯ ಅಮೃತಾ ರೀಲ್ ಹುಡುಗ ಜೊತೆ ರಿಯಲ್ ಆಗಿ ಮದುವೆಯಾಗಿದ್ದಾರೆ.

    ನಟಿ ಅಮೃತಾ ತಮ್ಮ ಬಹುದಿನಗಳ ಗೆಳೆಯ ಹಾಗೂ ಕಿರುತೆರೆ ನಟ ರಘು ಅವರ ಜೊತೆ ಸಪ್ತಪದಿ ತುಳಿದಿದ್ದಾರೆ. ಇವರಿಬ್ಬರ ಮದುವೆ ಬೆಂಗಳೂರಿನಲ್ಲಿ ಮೇ 12 ಮತ್ತು 13 ರಂದು ಅಂದರೆ ಭಾನುವಾರ ಮತ್ತು ಸೋಮವಾರ ಅದ್ಧೂರಿಯಾಗಿ ನಡೆದಿದೆ. ಇದನ್ನೂ ಓದಿ: ರೀಲ್ ಹುಡ್ಗನ ಜೊತೆಗೆ ರಿಯಲ್ ಆಗಿ ಸಪ್ತಪದಿ ತುಳಿಯಲಿದ್ದಾರೆ ಕುಲವಧು ಖ್ಯಾತಿಯ ವಚನಾ

    ಭಾನುವಾರ ರಂದು ಅಮೃತಾ ಮತ್ತು ರಘು ಅವರ ಆರತಕ್ಷತೆ ಕಾರ್ಯಕ್ರಮ ನಡೆದಿದ್ದು, ಕಿರುತೆರೆ ನಟ-ನಟಿಯರು, ಆಪ್ತರು ಮತ್ತು ಸ್ನೇಹಿತರು ಆರತಕ್ಷತೆಗೆ ಬಂದು ನವಜೋಡಿಗೆ ಶುಭಾಶಯ ತಿಳಿಸಿದ್ದಾರೆ. ಆರತಕ್ಷತೆಯಲ್ಲಿ ಅಮೃತಾ ನೀಲಿ ಬಣ್ಣದ ಗೌನ್ ಧರಿಸಿದ್ದು, ರಘು ಬಿಳಿ ಬಣ್ಣದ ಕುರ್ತಾ ಧರಿಸಿದ್ದರು. ಇಬ್ಬರು ಮುದ್ದಾಗಿ ಕಾಣಿಸುತ್ತಿದ್ದರು.

    ಸೋಮವಾರ ಗುರುಹಿರಿಯರ ನಿಶ್ಚಯಿಸಿದ್ದ ಮುಹೂರ್ತದಲ್ಲಿ ಅಮೃತಾ-ರಘು ಬ್ರಾಹ್ಮಿಣ್ ಮತ್ತು ಗೌಡರ ಸಂಪ್ರದಾಯದಂತೆ ಮದುವೆಯಾಗಿದ್ದಾರೆ. ರಘು ಮತ್ತು ಅಮೃತಾ ಅವರು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರು ಈ ಹಿಂದೆ ಒಟ್ಟಿಗೆ `ಮಿ. ಆ್ಯಂಡ್ ಮಿಸಸ್ ರಂಗೇಗೌಡ’ ಧಾರಾವಾಹಿಯಲ್ಲಿ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿ ಪ್ರೇಕ್ಷಕರ ಮನೆ ಗೆದ್ದಿದ್ದರು. ಜೋಡಿ ಐಶ್ವರ್ಯ ಮತ್ತು ರಂಗೇಗೌಡ ಪಾತ್ರವನ್ನು ಮಾಡುತ್ತಿದ್ದರು. ಅಷ್ಟೇ ಅಲ್ಲದೇ ಇವರಿಬ್ಬರಿಗೆ `ಬೆಸ್ಟ್ ಜೋಡಿ’ ಅವಾರ್ಡ್ ಕೂಡ ಬಂದಿತ್ತು.