Tag: ರಘು

  • ರಘುಗೆ ಹುಡುಗಿಯರ ಕಷ್ಟ ಅರ್ಥ ಮಾಡಿಸಿದ ದಿವ್ಯಾ, ವೈಷ್ಣವಿ

    ರಘುಗೆ ಹುಡುಗಿಯರ ಕಷ್ಟ ಅರ್ಥ ಮಾಡಿಸಿದ ದಿವ್ಯಾ, ವೈಷ್ಣವಿ

    ಹುಡುಗಿಯರು ವ್ಯಾಕ್ಸಿಂಗ್ ಮಾಡುವಾಗ ಎಷ್ಟು ನೋವಾಗುತ್ತದೆ ಎಂಬುದನ್ನು ದಿವ್ಯಾ ಉರುಡುಗ, ವೈಷ್ಣವಿ ರಘುಗೆ ತೋರಿಸಿಕೊಟ್ಟಿದ್ದಾರೆ.

    ನಿನ್ನೆ ಬಾತ್ ರೂ ಏರಿಯಾದಲ್ಲಿ ರಘು ಮಲಗಿದ್ದ ವೇಳೆ, ದಿವ್ಯಾ ಉರುಡುಗ ನಿಮಗೆ ಹುಡುಗಿಯರ ಕಷ್ಟ ಏನೆಂದು ಅರ್ಥ ಮಾಡಿಸುತ್ತೇನೆ ಇರಿ ಎಂದು ವ್ಯಾಕ್ಸ್ ಸ್ಟ್ರಿಪ್ಸ್ ನನ್ನು ಒಪನ್ ಮಾಡುತ್ತಾರೆ. ಈ ವೇಳೆ ವೈಷ್ಣವಿ ಕೂಡ ದಿವ್ಯಾ ಉರುಡುಗ ಕೈನಲ್ಲಿ ವ್ಯಾಕ್ಸ್ ಸ್ಟ್ರಿಪ್ಸ್ ತೆಗೆದುಕೊಂಡು ರಘು ಕಾಲಿಗೆ ಅಂಟಿಸುತ್ತಾರೆ.

    ಇನ್ಮುಂದೆ ನೀವು ಜೀವನ ಶೂನ್ಯ ಅಂತ ಹೇಳುವುದಿಲ್ಲ. ಹುಡುಗಿಯರ ಕಷ್ಟ ನಿಮಗೆ ಇಂದು ಗೊತ್ತಾಗುತ್ತದೆ ಎನ್ನುತ್ತಾ ದಿವ್ಯಾ ಉರುಡುಗ ರೆಡಿ ಒನ್, ಟೂ, ಥ್ರಿ, ಗೋ ಎಂದು ವ್ಯಾಕ್ಸ್ ಸ್ಟ್ರಿಪ್ಸ್  ನನ್ನು ಕಾಲಿನ ಮೇಲಿನಿಂದ ಎಳೆದು ನಿಮ್ಮ ಕೇಶ ರಾಶಿ ತೆಗೆದುಕೊಳ್ಳಿ ಎಂದು ಹೇಳಿ ಸ್ಟ್ರಿಪ್ಸ್ ನೀಡುತ್ತಾರೆ.

    ಇದಾದ ನಂತರ ನಿಮಗೆ ನೋವಾಗಲಿಲ್ಲವಾ ಆರಾಮವಾಗಿ ಕುಳಿತುಕೊಂಡಿದ್ರಿ. ನಿಮ್ಮಲ್ಲಿ ಇದನ್ನು ತಡೆದುಕೊಳ್ಳುವಷ್ಟು ಶಕ್ತಿ ಇದೆ ಎಂದ ಮೇಲೆ ಎಲ್ಲಾ ನೋವನ್ನು ತಡೆದುಕೊಳ್ಳುವಷ್ಟು ಶಕ್ತಿ ಇದೆ. ಹಾಗಾಗಿ ತಲೆ ಕೆಡಿಸಿಕೊಳ್ಳಬೇಡಿ ಈ ಮ್ಯಾಜಿಕ್‍ಯಿಂದ ನಿಮಗೆ ಎಲ್ಲಾ ಅರ್ಥ ಆಯ್ತು ಅಂತ ತಿಳಿದುಕೊಳ್ಳುತ್ತೇನೆ ಎಂದು ದಿವ್ಯಾ ಉರುಡುಗ ಹೇಳುತ್ತಾರೆ.

    ಇದಕ್ಕೆ ರಘು ಈ ಮ್ಯಾಜಿಕ್ ಶೋನಲ್ಲಿ ಇಷ್ಟೇಲ್ಲಾ ಅರ್ಥ ಇದ್ಯಾ ಎಂದು ಹೇಳುತ್ತಾ ನಗುತ್ತಾರೆ. ಬಳಿಕ ದಿವ್ಯಾ ಉರುಡುಗ ವೈಷ್ಣವಿ ಅಂಟಿಸಿದ್ದ ವ್ಯಾಕ್ಸ್ ಸ್ಟ್ರಿಪ್ಸ್  ನನ್ನು ಎಳೆಯುತ್ತಾರೆ. ನಂತರ ಹೃದಯ ತೋರಿಸಿ ರಘು ಇಲ್ಲಿರುವ ನೋವಿನ ಮುಂದೆ ಇದೆಲ್ಲಾ ಏನು ದಿವ್ಯಾ ಅನ್ನುತ್ತಾರೆ. ಅದಕ್ಕೆ ಹೇಳಿದ್ದು, ಇದನ್ನು ತಡೆದುಕೊಳ್ಳುವ ಶಕ್ತಿ ಇದೆ ಅಂದರೆ ನೋವನ್ನು ತಡೆದುಕೊಳ್ಳುವ ಶಕ್ತಿ ಇದೆ ಅಂತ ಅರ್ಥ ಎಂದು ದಿವ್ಯಾ ಉರುಡುಗ ಹೇಳುತ್ತಾರೆ.

  • ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ : ಪ್ರಿಯಾಂಕಾ

    ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ : ಪ್ರಿಯಾಂಕಾ

    ಬಿಗ್‍ಬಾಸ್ ಮನೆಯಲ್ಲಿ ಕಳಪೆ ಮತ್ತು ಅತ್ಯುತ್ತಮ ಸ್ಪರ್ಧಿ ಯಾರೆಂಬ ಆಯ್ಕೆ ಪ್ರತಿವಾರದಂತೆ ಈ ವಾರವೂ ನಡೆದಿದೆ. ಈ ಮಧ್ಯೆ ಕ್ಯಾಪ್ಟನ್ ರಘು ಗೌಡ ಮೇಲೆ ಪ್ರಿಯಾಂಕಾ ತಿಮ್ಮೇಶ್ ತೀವ್ರವಾಗಿ ಅಸಮಾಧಾನಗೊಂಡಿದ್ದಾರೆ. ಜೊತೆಗೆ ಕ್ಯಾಪ್ಟನ್ ಆದ್ರೆ ಎರಡು ಕೊಂಬು ಇರಲ್ಲ ಅಂತಲೂ ಅವರು ಹೇಳಿದ್ದಾರೆ. ಇಷ್ಟದಿನ ಸುಮ್ಮನೆ ಇದ್ದಪ್ರಿಯಾಂಕಾ ಇದೀಗ ತಮ್ಮ ಆಟವನ್ನು ಪ್ರಾರಂಭಿಸಿದ್ದಾರೆ.

    ಈ ವೇಳೆ ಕ್ಯಾಪ್ಟನ್ ರಘು, ಪ್ರಿಯಾಂಕಾಗೆ ಕಳಪೆ ವೋಟ್ ನೀಡಿದರು. ಅದಕ್ಕೆ ಪ್ರಿಯಾಂಕಾ ಮನೆಯಲ್ಲಿ ತಪ್ಪುಗಳೇನು ಮಾಡಿಲ್ಲ. ಆದರೆ, ಜಾಸ್ತಿ ಬೆರೆಯುತ್ತಿಲ್ಲ ಎಂದು ನನಗೆ ಅನ್ನಿಸುತ್ತಿದೆ. ವೈಲ್ಡ್ ಕಾರ್ಡ್ ಎಂಟ್ರಿ ಅಂದಮೇಲೆ ಸಿಕ್ಕಾಪಟ್ಟೆ ನಿರೀಕ್ಷೆಗಳಿರುತ್ತದೆ. ಅವರನ್ನು ಗೇಮ್ ಚೇಂಜರ್ ಅಂತಲೇ ನಾವು ಭಾವಿಸುತ್ತೇವೆ. ಅವರು ಕೊಟ್ಟಿರುವ ಕೆಲಸ ಎಲ್ಲ ಚೆನ್ನಾಗಿ ಮಾಡ್ತಾ ಇದ್ದಾರೆ. ಆದರೆ, ಇರುವಿಕೆ, ಇಲ್ಲದಿರುವಿಕೆ ಬಗ್ಗೆ ನನಗೇನೂ ಅನ್ನಿಸುತ್ತಿಲ್ಲ ಎಂದು ರಘು ಪ್ರಿಯಾಂಕ ಅವರಿಗೆ ಹೇಳಿದ್ದರು.

    ನಾನಿಲ್ಲಿ ಎಲ್ಲರ ಜೊತೆಯಲ್ಲಿ ಬೆರೆಯುತ್ತಿದ್ದೇನೆ. ಅಡುಗೆ ಅಂತ ಬಂದಾಗ ಮುಂದೆ ಇರುತ್ತೇನೆ. ಆಟದಲ್ಲಿ ಒಂದು ಕೈ ಮುಂದೆ ಇರುತ್ತೇನೆ. ವೈಲ್ಡ್ ಕಾರ್ಡ್ ಮೂಲಕ ಬಂದಿದ್ದಕ್ಕೆ ನಾನು ವೈಲ್ಡ್ ಆಗಿರೋಕೆ ಸಾಧ್ಯ ಇಲ್ಲ. ಮುಂದೆ ಅದಕ್ಕೂ ನನ್ನನ್ನೂ ಕಳಪೆ ಅಂತೀರಾ? ಅದಕ್ಕೆ ನಿಮ್ಮ ಮಾತನ್ನು ನಾನು ಒಪ್ಪಲ್ಲ. ನಾನಿಲ್ಲಿ ಬಂದು ಎರಡು ವಾರ ಆದ್ರೂ, ಐದು ವಾರದ ಥರ ಆಡ್ತಾ ಇದ್ದೇನೆ ಎಂದು ಪ್ರಿಯಾಂಕ ರಘು ಹೇಳಿಕೆಗೆ  ತಿರುಗೇಟು ನೀಡಿದ್ದಾರೆ.

     ರಘು ದೊಡ್ಡ ಕಳಪೆ!

    ರಘು ದೊಡ್ಡ ಕಳಪೆ. ತನ್ನ ಸ್ವಂತ ಬುದ್ಧಿಯಿಂದ, ಶ್ರಮ ಹಾಕಿ ಅವನು ಕ್ಯಾಪ್ಟನ್ ಆಗಿಲ್ಲ. ಒಬ್ಬರ ಬಗ್ಗೆ ಮಾತನಾಡೋಕು ಮುಂಚೆ ಯೋಚನೆ ಮಾಡಬೇಕು. ನಾನು ಎರಡು ವಾರದಿಂದ ಅರವಿಂದ್, ಪ್ರಶಾಂತ್ ಅವರ ವರ್ತನೆಯನ್ನು ನೋಡಿದ್ದೇನೆ. ಕ್ಯಾಪ್ಟನ್ ಆದಕೂಡಲೇ ಎರಡು ಕೊಂಬು ಬರಲ್ಲ. ಮುಂದೆ ಇಲ್ಲಿ ಯಾವ ಥರ ಇರಬೇಕು ಅನ್ನೋದು ಗೊತ್ತಾಗಿದೆ ಎಂದು ದಿವ್ಯಾ ಸುರೇಶ್ ಜೊತೆ ಚರ್ಚೆ ಮಾಡಿದ ಪ್ರಿಯಾಂಕಾ ಹೇಳಿದ್ದಾರೆ.

     ಹುಚ್ಚುನ ತರಾ ಮಾತಾಡ್ತಾಇದ್ದಾನೆ. ಏನು ಇಲ್ಲದೆ ಕ್ಯಾಪ್ಟನ್ ಆಗಿದ್ದಾನೆ. ತನ್ನ ಕಳಪೆ ಮಾಡಿರುವ ಕುರಿತಾಗಿ ಪ್ರಿಯಾಂಕ ಚಕ್ರವರ್ತಿ ಅವರ ಬಳಿ ಹೇಳಿದ್ದಾರೆ. ಪ್ರಿಯಾಂಕ ತನ್ನ ಕಳಪೆ ಮಾಡಿರುವ ಕುರಿತಾಗಿ ಕೋಪಗೊಂಡಿದ್ದಾರೆ.

  • ನಿನ್ನ ಜೊತೆ ನಾನಿದ್ದೇನೆ- ದಿವ್ಯಾ ಬೆನ್ನಿಗೆ ನಿಂತ ಅರವಿಂದ್

    ನಿನ್ನ ಜೊತೆ ನಾನಿದ್ದೇನೆ- ದಿವ್ಯಾ ಬೆನ್ನಿಗೆ ನಿಂತ ಅರವಿಂದ್

    ಬಿಗ್‍ಬಾಸ್ ಮನೆಯಲ್ಲಿ ಅನುಮಾನದ ಹೊಗೆ, ಬೇಸರ ಹೆಚ್ಚಾಗಿದೆ. ಜೊತೆಯಲ್ಲಿಯೇ ಇದ್ದುಕೊಂಡು ಮೋಸ ಮಾಡಿರುವ ದಿವ್ಯಾ ಸುರೇಶ್ ಕುರಿತಾಗಿ ಮನೆಯವರಿಗೆ ಕೊಂಚ ಬೇಸರವಿದೆ. ಎಲ್ಲರೂ ದಿವ್ಯಾ ಸುರೇಶ್ ಮೇಲೆ ಬೇಸರಗೊಂಡಿದ್ದಾರೆ. ಕಿಚನ್‍ನಲ್ಲಿ ದಿವ್ಯಾ ಉರುಡುಗ, ವೈಷ್ಣವಿ, ರಘು ಈ ವಿಚಾರವಾಗಿ ಮಾತನಾಡಿಕೊಂಡಿದ್ದಾರೆ.

     ಲವ್ ಲೆಟರ್ ಟಾಸ್ಕ್ ವೇಳೆ, ಬೇರೆಯವರ ಲೆಟರ್ ಹುಡುಕುವುದಕ್ಕೆ ನಿಧಿಗೆ ದಿವ್ಯಾ ಸಹಾಯ ಮಾಡಿದ್ದಳು. ಈ ವಿಚಾರವನ್ನು ತಿಳಿಯುತ್ತಿದ್ದಂತೆ ನನಗೆ ನಿಖಕ್ಕೂ ಶಾಕ್ ಆಯಿತ್ತು. ಇನ್ನು ಅವರ ಮೇಲೆ ನಂಬಿಕೆ ಬರುವುದಿಲ್ಲ. ಇದೆ ನೆನಪು ಆಗುತ್ತದೆ. ನಾನು ಒಬ್ಬರನ್ನು ನಂಬಿದರೆ ಸಂಪೂರ್ಣವಾಗಿ ನಂಬುತ್ತೇನೆ. ದಿವ್ಯಾ ಅವಳು ಸಿಕ್ಕಿ ಬಿಳುವುದು ಮಾತ್ರವಲ್ಲದೆ ಮಂಜನ್ನು ಸಿಕ್ಕಿ ಹಾಕಿದರು ಎಂದು ದಿವ್ಯಾ ಉರುಡುಗ ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ವಿಶ್ವನಾಥ್, ರಘು ವೈಷ್ಣವಿ ನಕ್ಕು ಸುಮ್ಮನಾಗಿದ್ದಾರೆ.


    ಹುಷಾರಾಗಿ ಇರು. ಯಾರ ಹತ್ತಿರವು ಏನೂ ಮಾತನಾಡಬೇಡಾ. ಯಾರೊಂದಿಗೂ ಏನನ್ನು ಚರ್ಚೆ ಮಾಡಬೇಡಾ. ನಿನ್ನ ಆಟ ನೀನು ಅಷ್ಟೇ ಎಂದು ನೀನು ಇರಬೇಕು. ಬೇರವಯರ ಬಳಿ ಯಾವ ವಿಚಾರದ ಕುರಿತಾಗಿಯೂ ಚರ್ಚೆ ಮಾಡಬೇಡಾ. ನನಗೂ ಲಿಮಿಟೇಷನ್ ಇದೆ. ಇದು ಆಟ ನಾವು ನಮ್ಮ ಕುರಿತಾಗಿ ಮಾತ್ರ ಯೋಚನೆ ಮಾಡಬೇಕು ಎಂದು ಅರವಿಂದ್ ದಿವ್ಯಾಗೆ ಆಟದ ಕೆಲವು ಸ್ಟ್ಯಾಟರ್ಜಿ ಬಗ್ಗೆ ಹೇಳಿದ್ದಾರೆ.

     ಮುಂದೆ ಹೇಗೆ ಆಟ ಆಡಬೇಕು ಎನ್ನುವುದನ್ನು ಮಾತ್ರ ನೋಡು. ಆಚೆ ಬೇರೆ ಇಲ್ಲಿಯೇ ಬೇರೆ. ನಿನಗೆ ಏನೋ ಅನ್ನಿಸುತ್ತದೆಯೋ ಅದನ್ನು ಮಾಡು. ಆಡುವುದಕ್ಕೆ ಬಂದಿರುವುದು ಅದನ್ನು ಮರೆಯ ಬೇಡಾ. ನಾನು ನಿನ್ನ ಜೊತೆ ಇದ್ದೇನೆ ಖಂಡಿತವಾಗಿಯೂ. ಆದರೆ ನಾನು ನಿನಗೆ ಒಂದು ಮಟ್ಟದವರೆಗೆ ಮಾತ್ರ ಸಹಾಯ ಮಾಡಬಹುದು ಎಂದು ದಿವ್ಯಾಗೆ ಅರವಿಂದ್ ಹೇಳಿದ್ದಾರೆ. ಬಿಗ್‍ಬಾಸ್ ಮನೆಯ ಆಟ ದಿನದಿಂದದಿನಕ್ಕೆ ರೋಚಕತೆಯನ್ನು ಪಡೆದುಕೊಳ್ಳುತ್ತಿದೆ. ಸ್ಪರ್ಧಿಗಳು ಅವರ ಸ್ನೇಹ, ಪ್ರೀತಿ ವಿಶ್ವಾಸವನ್ನು ಬದಿಗೊತ್ತು ಅವರ ಉಳಿವಿಗಾಗಿ ಮಾತ್ರ ಆಟವಾಡುತ್ತಿದ್ದಾರೆ.

  • ಗ್ರ‍್ಯಾಂಡ್ ಫಿನಾಲೆಗೆ ಬರ‍್ತಾರಂತೆ ಅರವಿಂದ್, ದಿವ್ಯಾ ಉರುಡುಗ

    ಗ್ರ‍್ಯಾಂಡ್ ಫಿನಾಲೆಗೆ ಬರ‍್ತಾರಂತೆ ಅರವಿಂದ್, ದಿವ್ಯಾ ಉರುಡುಗ

    ಬಿಗ್‌ಬಾಸ್‌ಮನೆಯ ನಿಜವಾದ ಆಟವನ್ನು ಸ್ಪರ್ಧಿಗಳು ಶುರುಮಾಡಿದ್ದಾರೆ. ಬಿಗ್‌ಬಾಸ್ ಮನೆಯ ಸ್ಪರ್ಧಿಗಳಿಗೆ ಪ್ರತಿಯೊಬ್ಬರಿಗೂ ತಾನೂ ಗೆಲ್ಲಬೇಕು ಎನ್ನುವ ಹಂಬಲವಿದೆ. ೧೪ ಜನ ಸ್ಪರ್ಧಿಗಳಿದ್ದಾರೆ. ಆದರೆ, ಬಿಗ್ ಬಾಸ್ ೮ ಸದಸ್ಯರೊಬ್ಬರಿಗೆ ಈಗಲೇ ಗ್ರ‍್ಯಾಂಡ್ ಫಿನಾಲೆ ಚಿಂತೆ ಶುರುವಾಗಿದೆ.

    ರಘು ಗೌಡ ಅಡುಗೆ ಮನೆಯಲ್ಲಿದ್ದ ವೈಷ್ಣವಿ ಮತ್ತು ದಿವ್ಯಾ ಉರುಡುಗ ಜೊತೆ ಗ್ರ‍್ಯಾಂಡ್ ಫಿನಾಲೆ ಹೇಗಿರುತ್ತೆ ಎಂದು ಚರ್ಚೆ ಮಾಡಿದ್ದಾರೆ. ತಮ್ಮದೇ ಒಂದು ಕಲ್ಪನೆಯಲ್ಲಿ ಗ್ರ‍್ಯಾಂಡ್ ಫಿನಾಲೆ ಹೇಗಿರುತ್ತದೆ ಎಂಬುದನ್ನು ವಿವರಿಸಿದ್ದಾರೆ.

    ದಿವ್ಯಾ, ಅರವಿಂದ್ ಬಿಗ್‌ಬಾಸ್ ಮನೆಯಲ್ಲಿರುವ ಒಂದು ಜೋಡಿ ಎನಿಸಿಕೊಂಡು ಬಿಟ್ಟಿದ್ದಾರೆ. ಒಬ್ಬರಿಗೊಬ್ಬರು ಸದಾ ಜೊತೆಯಾಗಿ ಇರುತ್ತಾರೆ. ವೇದಿಕೆ ಮೇಲೆ ದಿವ್ಯಾ, ಅರವಿಂದ್ ಹೋಗ್ತಾರೆ, ಇಬ್ಬರಲ್ಲಿ ಯಾರ್ ಸೋತ್ರು ಲಾಸ್ ಇಲ್ಲ ಎಂಬುದು ದಿವ್ಯಾ ಮನಸ್ಸಿಲ್ಲಿದೆ ಎಂದು ರಘು ಹೇಳುತ್ತಾ ದಿವ್ಯಾ ಅವರ ಕಾಲೆಳೆದಿದ್ದಾರೆ.

    ದಿವ್ಯಾ ಅಂದುಕೊಳ್ತಾ ಇರ್ತಾಳೆ, ಟಾಪ್ 2ರಲ್ಲಿ ಅರವಿಂದ್ ಮತ್ತು ದಿವ್ಯಾ. ಗೆದ್ರು, ಸೋತ್ರು ಕೂಡ ನೋವು ಮತ್ತು ಖುಷಿ ಎರಡೂ ಇರತ್ತೆ. ಬಿಗ್ ಬಾಸ್ ಗ್ರ‍್ಯಾಂಡ್ ಫಿನಾಲೆ ವೇದಿಕೆ ಮೇಲೆ ಹೇಗೆ ರಿಯಾಕ್ಟ್ ಮಾಡಬೇಕು ಎಂದು ಎಷ್ಟು ಕನಸು ಕಂಡಿರುತ್ತಾಳೋ? ಯಾರೋ ಒಬ್ಬರ ಕೈಯನ್ನು ಎತ್ತಿದ ಕೂಡಲೇ, ಒಬ್ಬರಿಗೊಬ್ಬರು ತಬ್ಬಿಕೊಂಡು, ನಿಂಗ್ ಬಂದ್ರೆ ಏನು, ನಂಗ್ ಬಂದ್ರೆ ಏನು? ವಿಲ್ ಯೂ ಮ್ಯಾರಿ ಮೀ..’ ಎಂದು ಅಲ್ಲಿಯೇ ಅರವಿಂದ್ ತಾಳಿ ಕಟ್ಟಿಬಿಡ್ತಾನೆ ಎಂದು ಅರವಿಂದ್ ಹೇಳಿದ್ದಾರೆ. ಈ ವೇಳೆ ದಿವ್ಯಾ ಜೋರಾಗಿ ನಕ್ಕಿದ್ದಾರೆ.

    ನೀವು ಲವ್ ಮಾಡ್ತಾ ಇದ್ದೀರಾ? ಅಥವಾ ಗೊಂದಲದಲ್ಲಿ ಇದ್ದೀರಾ..? ಹಾಗೇ ಸುಮ್ಮನೆ ಕೇಳ್ತಾ ಇದಿನಿ ಎಂದು ರಘು ಕೇಳಿದಾಗ ಎಲ್ಲಿಗೂ ಹೋಗಿಲ್ಲ, ಅರವಿಂದ್ ಬರೆದ ಪತ್ರಗಳಲ್ಲಿ ಏನ್ ಹೇಳಿದ್ದಾರೆ ಅಂದ್ರೆ, ಇನ್ನೂ ಮಾತಾಡಬೇಕು…ನೋಡೋಣ.. ಅಂತ ಹೇಳಿದ್ದಾರೆ ಎಂದು ದಿವ್ಯಾ ಹೇಳಿದ್ದಾರೆ.

    ನನಗೆ ಲವ್ ಸ್ಟೋರಿ ಅಂದರೆ ತುಂಬ ಇಷ್ಟ. ಜೊತೆಯಲ್ಲಿ ಇದ್ದವರು ಲವ್ ಮಾಡೋದು ಚೆನ್ನಾಗಿರುತ್ತದೆ. ನನಗೆ ಆಗ್ತಾ ಇಲ್ವಲ್ಲಾ ಅಂತ ಹೊಟ್ಟೆ ಹುರಿ ಎಂದು ರಘು ಹೇಳಿದ್ದಾರೆ. ಹೀಗೆ ಡೈಲಾಗ್ ಹೊಡೆದ ರಘು, ತಕ್ಷಣವೇ ಕ್ಯಾಮೆರಾ ಮುಂದೆ ನಿಂತು ವಿದ್ಯಾ ಸುಮ್ಮನೆ ಡೈಲಾಗ್ ಹೇಳಿದೆ ಅಷ್ಟೇ ಎಂದು ತಮ್ಮ ಪತ್ನಿಗೆ ಹೇಳಿದರು.

    ನಿಮಗೆ ಮನೆಗೆ ಹೋಗಬೇಕು ಅಂತಾ ಇದೆಯಾ. ಅಷ್ಟು ಭಯ ಇದ್ದರೆ ಸಾಕು ಎಂದು ವೈಷ್ಣವಿ ಹೇಳಿದ್ದಾರೆ. ಆಗ ರಘು ಪಾಡನ್ನು ನೋಡಿ ವೈಷ್ಣವಿ ಮತ್ತು ದಿವ್ಯಾ ಉರುಡುಗ ಜೋರಾಗಿ ನಕ್ಕಿದ್ದಾರೆ. ಬಿಗ್‌ಬಾಸ್ ಮನೆಯ ಗ್ರಾö್ಯಂಡ್ ಫಿನಾಯಿಲೆಯಲ್ಲಿ ಯಾರಿರುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.

  • ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಮಂಜು ಚಪ್ಪಲಿ ಹೊರಗೆಸೆದ ವೈಷ್ಣವಿ!

    ಷ್ಟುದಿನ ಮನೆಯಲ್ಲಿ ಸೈಲೆಂಟ್ ಆಗಿದ್ದ ವೈಷ್ಣವಿ, ಗರ್ಲ್ ಹಾಸ್ಟೆಲ್ ವರ್ಸಸ್ ಬಾಯ್ಸ್ ಹಾಸ್ಟೆಲ್ ಟಾಸ್ಕ್ ನೀಡಿದಾಗಲಿಂದಲೂ ಮನೆಯಲ್ಲಿ ರೌಡಿಯಂತೆ ಅವಾಜ್ ಹಾಕುತ್ತಾ ಮಿಂಚುತ್ತಿದ್ದಾರೆ.

    ನಿನ್ನೆ ರಘು ಬಾಯ್ಸ್ ಹಾಸ್ಟೆಲ್‍ಗೆ ವೈಷ್ಣವಿಯನ್ನು ಎತ್ತಿಕೊಂಡು ಹೋಗಿ ಹಾಕೋಣ. ಎರಡು ಪಾಯಿಂಟ್ ಆದರೂ ಸಿಗುತ್ತದೆ ಎಂದು ಅಣಕಿಸುತ್ತಿರುತ್ತಾರೆ. ಆಗ ವೈಷ್ಣವಿ ಧೈರ್ಯ ಇದ್ದರೆ ಇಲ್ಲಿ ಬಂದು ಮಾತಾಡು ಎಂದು ಅವಾಜ್ ಹಾಕುತ್ತಾರೆ. ಆಗ ರಘು ವೈಷ್ಣವಿ ಚಪ್ಪಲಿಯನ್ನು ಜೋರಾಗಿ ಒದೆಯುತ್ತಾರೆ. ನಂತರ ವೈಷ್ಣವಿಯವರ ಮತ್ತೊಂದು ಕಾಲಿನ ಚಪ್ಪಲಿಯನ್ನು ಶಮಂತ್ ಹಾಗೂ ರಘು ಸೇರಿಕೊಂಡು ಗಾರ್ಡನ್ ಏರಿಯಾದ ಮೇಲಿರುವ ಸ್ಪೀಕರ್‍ವೊಂದರ ಮೇಲೆ ಇಡುತ್ತಾರೆ.

    ನಂತರ ವೈಷ್ಣವಿಯನ್ನು ಎಳೆದುಕೊಂಡು ಹೋಗಲು ಮಂಜು, ರಾಜೀವ್, ಶಮಂತ್, ರಘು ಪ್ರಯತ್ನಿಸುತ್ತಾರೆ. ಈ ವೇಳೆ ಶುಭ ವೈಷ್ಣವಿಯನ್ನು ಸೇವ್ ಮಾಡಲು ಶುಭಾ ಪೂಂಜಾ ಸಖತ್ ಸರ್ಕಸ್ ನಡೆಸುತ್ತಾರೆ. ಆದರೂ ಬಿಡದ ಹುಡುಗರು ವೈಷ್ಣವಿಯನ್ನು ಬಾಯ್ಸ್ ಹಾಸ್ಟೆಲ್ ವಿಭಾಗಕ್ಕೆ ಎಳೆದುಕೊಂಡು ಹೋಗುತ್ತಾರೆ. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ವೈಷ್ಣವಿ ಓಡಿ ಬರುತ್ತಾರೆ. ಮತ್ತೆ ವೈಷ್ಣವಿಯನ್ನು ಎತ್ತಿಕೊಂಡು ಬಿಸಾಕಿ ಬಿಡುತ್ತೇನೆ ಎಂದು ಮಂಜು ಹೇಳುತ್ತಾರೆ.

    ಆಗ ಶುಭ ಮಂಜುರವರ ಒಂದು ಚಪ್ಪಲಿಯನ್ನು ದೂರಕ್ಕೆ ಎಸೆದರೆ ವೈಷ್ಣವಿ ಮತ್ತೊಂದು ಚಪ್ಪಲಿಯನ್ನು ಸ್ಪೀಕರ್ ಮೇಲೆ ಎಸೆಯಲು ಹೋಗಿ ಬಿಗ್ ಮನೆಯ ಕಾಂಪೌಂಡ್‍ನಿಂದ ಹೊರಕ್ಕೆ ಎಸೆಯುತ್ತಾರೆ. ಈ ವೇಳೆ ಇದನ್ನು ಕಂಡು ಮನೆ ಮಂದಿಯೆಲ್ಲಾ ಸೂಪರ್ ಎಂದು ನಗುತ್ತಾ ಚಪ್ಪಾಳೆ ಹೊಡೆಯುತ್ತಾರೆ.

    ಬಳಿಕ ಮಂಜು ಶನಿವಾರ ನೀನು ಹೀಲ್ಸ್ ಚಪ್ಪಲಿ ಹಾಕಿಕೊಳ್ಳುತ್ತೀಯಾ ಅಲ್ವಾ? ಐತೆ ಇರು ಎಂದು ರೇಗಿಸುತ್ತಾರೆ.

  • ದಿವ್ಯಾ ಸ್ಟೈಲ್ ತೋರಿಸಿದ್ಯಾಕೆ ರಘು?

    ದಿವ್ಯಾ ಸ್ಟೈಲ್ ತೋರಿಸಿದ್ಯಾಕೆ ರಘು?

    ಒಂಟಿ ಮನೆಗೆ ಸಿಂಗಲ್ ಆಗಿ ಬಂದಿದ್ದ ಸೆಲೆಬ್ರಿಟಿಗಳು ಅಲ್ಲಿದ್ದವರ ಜೊತೆ ಜಂಟಿಯಾಗೋದು ಕಾಮನ್. ಈ ಹಿಂದೆಯೂ ಇಂತಹ ಪ್ರೇಮ ಕಥೆಗಳಿಗೆ ಬಿಗ್‍ಬಾಸ್ ಸಾಕ್ಷಿಯಾಗಿತ್ತು. ಈಗ ಮತ್ತೊಂದು ಅಂತಹುವುದೇ ಮುದ್ದಾದ ಪ್ರೇಮ ಕಥೆ ಹೊರ ಬಂದಿದೆ. ಮನೆ ಮಂದಿಯೆಲ್ಲ ಇದೇ ವಿಷ್ಯ ಇಟ್ಕೊಂಡು ಜೋಡಿಹಕ್ಕಿಯ ಕಾಲೆಳೆದು ಮಜಾ ತೆಗೆದುಕೊಂಡರು.

    ಪ್ರೀತಿಯಲ್ಲಿ ಬಿದ್ದವರಿಗೆ ಊಟ, ನಿದ್ದೆ ಬೇಡ ಅನ್ನೋದು ಪ್ರೇಮದ ಮೋಡಿಯಲ್ಲಿ ಸಿಲುಕಿದವರ ಮಾತು. ತಮ್ಮ ಜೋಡಿಯ ಜೊತೆ ಆದಷ್ಟು ಸಮಯ ಕಳೆಯೋಕೆ ಟ್ರೈ ಮಾಡುತ್ತಿರುತ್ತಾರೆ. ಕಳೆದ ಕೆಲ ದಿನಗಳಿಂದ ಬಿಗ್‍ಬಾಸ್ ಮನೆಯಲ್ಲಿ ಲೈಟ್ ಆಫ್ ಆದ್ರೂ, ದಿವ್ಯಾ ಮತ್ತು ಅರವಿಂದ್ ನಡ್ವೆ ಕಣ್ಣಸನ್ನೆ ಆಟ ನಡೆಯುತ್ತಿತ್ತು. ಇದೇ ವಿಷಯವನ್ನ ಸುದೀಪ್ ಚರ್ಚೆಗೆ ತಂದರು. ದಿವ್ಯಾ ಯು ಇತ್ತೀಚೆಗೆ ನಿದ್ದೆ ಮಾಡ್ತಿಲ್ಲ ಅಂದರು. ಅದಕ್ಕೆ ಎಲ್ಲರೂ ಯೆಸ್ ಅಂದ್ರು.

    ನಾನು ಮಲಗೋವರೆಗೂ ದಿವ್ಯಾ ಮಲಗಿರಲ್ಲ. ನಾನು ಮಲಗಿದ್ಮೇಲೆಯೂ ಎಚ್ಚರ ಇರ್ತಾರೆ ಅಂತ ಶಮಂತ್ ಹೇಳಿದ ಎಂದು ಅರವಿಂದ್ ಹೇಳಿದ್ರು.. ಈ ವೇಳೆ ಶಮಂತ್ ಮಧ್ಯ ಪ್ರವೇಶಿಸಿದ್ರು. ಅರವಿಂದ್ ಎಲ್ಲಿಯವರೆಗೂ ಮಲಗಲ್ಲವೋ, ಅಲ್ಲಿಯವರೆಗೂ ದಿವ್ಯಾ ನಿದ್ದೆ ಮಾಡಲ್ಲ. ಅರವಿಂದ್ ನಿದ್ದೆ ಮಾಡೋವರೆಗೂ ಮಡಚಿರೋ ಬಟ್ಟೆಯನ್ನ ಮತ್ತೆ ಮತ್ತೆ ಮಡಚಿ ಇಡ್ತಾರೆ ಎಂದು ಇಬ್ಬರ ಲವ್ ಸ್ಟೋರಿ ಬಿಚ್ಚಿಟ್ಟರು ಶಮಂತ್.

    ಅರವಿಂದ್ ನಿದ್ದೆ ಮಾಡೋವರೆಗೂ ದಿವ್ಯಾ ಮಲಗಲ್ಲ. ಅರವಿಂದ್ ಮಲಗಿದ್ಮೇಲೆ ಸ್ವಲ್ಪ ಸಮಯ ಎರಡೂ ಕೈಗಳನ್ನ ಕೆನ್ನೆ ಮೇಲೆ ಇಟ್ಕೊಂಡು ಅತ್ತ ಇತ್ತ ನೋಡ್ತಿರ್ತಾರೆ ಎಂದು ದಿವ್ಯಾ ಕುಳಿತುಕೊಳ್ಳೋ ಸ್ಟೈಲ್ ತೋರಿಸಿದ್ರು ರಘು. ಒಟ್ಟಿನಲ್ಲಿ ಸಂಡೇ ಎಪಿಸೋಡ್ ದಿವ್ಯಾ, ಅರವಿಂದ್ ಲವ್ ಸ್ಟೋರಿ ಹೆಚ್ಚು ಸದ್ದು ಮಾಡಿದ್ದಂತೂ ನಿಜ.

  • ದಿವ್ಯಾ ವಿರುದ್ಧ ನನ್ನ ಫ್ರಸ್ಟ್ರೆಷನ್ ತೀರಿಸಿಕೊಳ್ಳುತ್ತೇನೆ ಅಂದಿದ್ಯಾಕೆ ಶಮಂತ್!

    ದಿವ್ಯಾ ವಿರುದ್ಧ ನನ್ನ ಫ್ರಸ್ಟ್ರೆಷನ್ ತೀರಿಸಿಕೊಳ್ಳುತ್ತೇನೆ ಅಂದಿದ್ಯಾಕೆ ಶಮಂತ್!

    ಬಿಗ್‍ಬಾಸ್ ರಿಯಾಲಿಟಿ ಶೋ ಆರಂಭದಿಂದಲೂ ದಿವ್ಯಾ ಸುರೇಶ್ ಹಾಗೂ ಶಮಂತ್ ಎಣ್ಣೆ-ಸೀಗೆಕಾಯಿಯಂತೆ ಇದ್ದಾರೆ. ಎಷ್ಟೋ ಬಾರಿ ಶಮಂತ್ ದಿವ್ಯಾ ಜೊತೆ ಮಾತನಾಡಲು ಪ್ರಯತ್ನಿಸಿದರೂ, ದಿವ್ಯಾ ಶಮಂತ್‍ರನ್ನು ಆವಾಯ್ಡ್ ಮಾಡುತ್ತಲೇ ಬಂದಿದ್ದಾರೆ. ಹೀಗಾಗಿ ಇವರಿಬ್ಬರ ಮಧ್ಯೆ ಅಷ್ಟಾಗಿ ಹೊಂದಾಣಿಕೆ ಇಲ್ಲ ಎಂಬುವುದು ಎದ್ದು ಕಾಣುತ್ತದೆ.

    ಸದ್ಯ ನಿನ್ನೆ ಶಮಂತ್ ರಘು ಜೊತೆ ಗಾರ್ಡನ್ ಏರಿಯಾದಲ್ಲಿ ಕುಳಿತು ಈ ವಾರ ಕಳಪೆ ಬೋರ್ಡ್ ಯಾರಿಗೆ ನೀಡುವುದು ಎಂಬುದರ ಬಗ್ಗೆ ಚರ್ಚೆ ನಡೆಸಿದ್ದಾರೆ. ಸಂಜೆ ಕಳಪೆ ಯಾರಿಗೆ ನೀಡುವುದು ಎಂದು ಈಗಲೇ ನಿರ್ಧರಿಸಿ ಎಂದು ಹೇಳುತ್ತಾರೆ. ಆಗ ರಘು ನಿಮ್ಮ ತಲೆಯಲ್ಲಿ ಇರುವುದು ಯಾರು ಎನ್ನುತ್ತಾರೆ.

    ಈ ವೇಳೆ ಶಮಂತ್ ಹುಸಿನಗೆ ಬೀರುತ್ತಾ, ಒಂದೊಂದು ಬಾರಿ ಸುಮ್ ಸುಮ್ನೆ ಏನೇನೋ ಕ್ಯಾರಿ ಮಾಡುವುದು, ಒಂದೇ ಕಡೆ ಇರುವುದು, ದಿಕ್ಕು ತಪ್ಪಿಸುವುದು, ಎಲ್ಲರ ಅಭಿಪ್ರಾಯ ಒಂದೇ ಇರುವಾಗ, ಅವಳದ್ದೇ ಬೇರೆ ಎಂಬುವಂತೆ ಹೇಳುವುದು. ಅದರಲ್ಲೂ ಈ ಬಾರಿ ಕಳಪೆಗೆ ಹುಡುಗಿ ಹೋಗಬೇಕೆಂಬುವುದು ನನ್ನ ಅಭಿಪ್ರಾಯ ಎಂದು ಪರೋಕ್ಷವಾಗಿ ದಿವ್ಯಾ ಸುರೇಶ್ ಬಗ್ಗೆ ಮಾತನಾಡಿದ್ದಾರೆ.

    ನನಗೂ ಕೆಲವೊಂದು ಸಿಟ್ಟಿದೆ ಅದನ್ನೇಲ್ಲಾವನ್ನು ತೀರಿಸಿಕೊಂಡು ಬಿಡಬೇಕು. ಅಲ್ಲಿಯವರೆಗೂ ನನಗೆ ಸಮಾಧಾನ ಇಲ್ಲ. ಯಾಕೆಂದರೆ ಅವರು ನನಗೆ ಏನು ನೀಡುತ್ತಾರೋ ಅದನ್ನೇ ನಾನು ವಾಪಸ್ ಅವರಿಗೆ ನೀಡುತ್ತೇನೆ. ಇಲ್ಲಿ ಲವ್ ಮಾಡುವುದಕ್ಕೆ ಬಂದಿದ್ದಾರೋ ಇಲ್ಲ ಗೇಮ್ ಆಡಲು ಬಂದಿದ್ದಾರೋ ಗೊತ್ತಿಲ್ಲ ಬಿಗ್‍ಬಾಸ್ ಎಂದು ಹೇಳಿದ್ದರು. ಆ ಫ್ರಸ್ಟ್ರೆಷನ್‍ನನ್ನು ನಾನು ಇಂದು ತೀರಿಸಿಕೊಳ್ಳಬೇಕು. ಇಂದು ಸಂಜೆ ಯಾವಾಗ ಬರುತ್ತದೆ ಎಂದು ಕಾಯುತ್ತಿದ್ದೇನೆ. ನಾನು ಹೇಳೆ ಹೇಳುತ್ತೀನೆ ಎಂದು ಕಿಡಿಕಾರಿದರು.

  • ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ವೈಷ್ಣವಿಯಲ್ಲಿ ಅಮ್ಮನನ್ನು ಕಂಡು ಕಣ್ಣೀರಿಟ್ಟ ರಘು!

    ಚಿಕ್ಕ ವಯಸ್ಸಿನಿಂದಲೂ ಕಷ್ಟದಲ್ಲಿಯೇ ಬೆಳೆದ ರಘು, ನಿನ್ನೆ ವೈಷ್ಣವಿ ಬಳಿ ತಮ್ಮ ತಾಯಿಯ ಬಗ್ಗೆ ಮಾತನಾಡಿ ನೋವನ್ನು ಹಂಚಿಕೊಂಡಿದ್ದಾರೆ.

    ವೈಲ್ಡ್‍ಕಾರ್ಡ್ ಮೂಲಕ ದೊಡ್ಮನೆಗೆ ಎಂಟ್ರಿ ಕೊಟ್ಟ ಹೊಸ ಸದಸ್ಯ ಚಂದ್ರಚೂಡ ಚಕ್ರವರ್ತಿ, ನಿನ್ನೆ ರಘು ಜೊತೆ ನಿಮ್ಮ ಹೃದಯದಲ್ಲಿ ನಿಮ್ಮ ತಾಯಿಗೆ ಹೇಳಬೇಕಾದ ಬಹಳ ವಿಚಾರವಿದೆ. ಆದರೆ ಅದನ್ನು ಪ್ರಾಮಾಣಿಕವಾಗಿ ಯಾರಾದರೂ ಬಳಿ ಇಲ್ಲಿಯವಗೂ ಹೇಳಿಕೊಂಡಿದ್ದೀರಾ? ನಿಮಗೆ ನಿಮ್ಮ ಒಳಗಿರುವ ನೋವನ್ನು ಕರಗಿಸಿಕೊಳ್ಳಬೇಕು ಎಂಬ ಆಸೆ ಇದ್ಯಾ? ಎಂದು ಪ್ರಶ್ನಿಸುತ್ತಾರೆ.

    ಆಗ ರಘು ಹೌದು ಎಂದಾಗ, ವೈಷ್ಣವಿಯವರ ಕಣ್ಣನ್ನು ನೋಡಿಕೊಂಡು ನಿಮ್ಮ ತಾಯಿಯನ್ನು ಹುಡುಕಿ, ಹಾಗೇನಾದರೂ ನಿಮ್ಮ ತಾಯಿಯ ಭಾವನೆ ಅವರಲ್ಲಿ ಕಂಡರೆ ನಿಮ್ಮ ತಾಯಿ ಬಳಿ ಹೇಳಿಕೊಳ್ಳಬೇಕೆಂದು ಕೊಂಡಿದ್ದನ್ನೆಲ್ಲಾ ಹೇಳಿಕೊಳ್ಳಿ ಎಂದು ತಿಳಿಸುತ್ತಾರೆ.

    ಬಳಿಕ ವೈಷ್ಣವಿ ನೋಡುತ್ತಾ ರಘು, ನಿನ್ನ ಕೋಪ, ಅಸಹಾಯಕತೆ, ಬೇಸರ ನಿನ್ನ ಮನಸ್ಸಿನಲ್ಲಿ ನಡೆಯುತ್ತಿರುವುದು ನನಗೆ ಅರ್ಥವಾಗಬಹುದಿತ್ತೇನೋ ಆದರೆ ನನಗೆ ಅದು ತಿಳಿಯಲಿಲ್ಲ. ನೀನು ತೆಗೆದುಕೊಂಡ ಕೆಲವು ನಿರ್ಧಾರಗಳು ತಪ್ಪಾಗಿದ್ದವು. ಒಂದು ಸಮಯದಲ್ಲಿ ನನ್ನನ್ನು ನೀನು ಬೇಡ ಅಂದೇ, ದರಿದ್ರ, ಅನಿಷ್ಟ ಎಂದೇ ಅದನ್ನು ನಾನು ಅರ್ಥಮಾಡಿಕೊಂಡೆ, ಒಮ್ಮೊಮ್ಮೆ ನೀನು ಸತ್ತಿದ್ದೆ ನನಗೆ ಬೆಸ್ಟ್ ಎಂದು ಕೂಡ ಅನಿಸಿತ್ತು. ಯಾಕೆಂದರೆ ನಾನು 14-15 ವರ್ಷಗಳ ಹಿಂದೆ ನೋಡಿದ ಅಮ್ಮನಂತೆ ನೀನು ಇರಲಿಲ್ಲ. ನೀನು ತುಂಬಾ ಸ್ಟ್ರಾಂಗ್ ಆಗಿದ್ದೆ, ತುಂಬಾ ನಗುತ್ತಿದ್ದೆ, ಎಲ್ಲರನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದೆ. ಆದರೆ ಸಾಯುವ ಕೊನೆಯ ಮೂರು ತಿಂಗಳ ಹಿಂದೆ ನೀನು ಯಾಕೆ ಹಾಗೇ ಆದೆ ಎಂದು ನಿನಗೆ ಮಾತ್ರ ಗೊತ್ತು. ಪ್ರತಿ ಬಾರಿ ನೀನು ನನಗೆ ಹುಚ್ಚು ಹಿಡಿದಂತೆ ಆಗುತ್ತಿದೆ. ನನಗೆ ಸಾಯುವುದಕ್ಕೂ ಇಷ್ಟವಾಗುತ್ತಿಲ್ಲ ರೋಡಿಗೆ ಹೋಗುತ್ತೇನೆ ನಾನು ಹುಚ್ಚಿಯಾಗುತ್ತೇನೆ ಎಂದಾಗ ನನಗೆ ಏನು ಮಾಡಬೇಕೆಂದು ಸಹ ಗೊತ್ತಾಗುತ್ತಿರಲಿಲ್ಲ.

    ನನಗೆ ಎಷ್ಟೋ ಬಾರಿ ನಿನ್ನನ್ನು ಸಾಯಿಸಿ ನಾನು ಸಾಯಬೇಕು ಎಂದುಕೊಂಡಿದ್ದೆ. ಆದರೆ ಆ ಧೈರ್ಯ ನನಗೆ ಇರಲಿಲ್ಲ ಎಂದು ಕಣ್ಣೀರಿಟ್ಟರು. ನೀನು ಹುಟ್ಟಿದ ಮೇಲೆ ಹೀಗಾದೆವು ಎಂದರೆ ನಾನೇನು ತಪ್ಪು ಮಾಡಿದ್ದೇ. ನೀನು ಏನು ಮಾಡಿದ್ದರೂ ನಾನು ಪ್ರಾಣಕ್ಕಿಂತ ನಿನ್ನನ್ನು ಇಷ್ಟಪಡುತ್ತಿದ್ದೆ. ಮುಂದೆಯೂ ಹೀಗೆ ಇಷ್ಟ ಪಡುತ್ತೇನೆ. ನೀನು ಏನು ಕಷ್ಟಪಟ್ಟಿದ್ಯೋ ಅದು ಯಾರಿಗೂ ಆಗಬಾರದು ಅಂತ ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ತಮ್ಮ ನೋವನ್ನು ವೈಷ್ಣವಿ ಬಳಿ ತೋಡಿಕೊಳ್ಳುತ್ತಾರೆ.

    ನಂತರ ವೈಷ್ಣವಿ ನಿಮ್ಮ ತಂದೆ-ತಾಯಿಗೆ ಏನು ನೋವಿತ್ತು ಎಂಬುವುದು ನಮಗೆ ತಿಳಿದಿರುವುದಿಲ್ಲ. ಹಾಗಾಗಿ ಮೊದಲನೇಯದಾಗಿ ನಾವು ಅವರನ್ನು ಗೌರವಿಸಬೇಕು. ಇಂದಿನಿಂದ ನೀವು ಬದಲಾಗಿ ಎಲ್ಲವನ್ನು ಮರೆತು ಚೆನ್ನಾಗಿ ಬದುಕಿ ಎಂದು ಸಮಾಧಾನ ಪಡಿಸುತ್ತಾರೆ.

  • ವೈನ್‍ಸ್ಟೋರ್ ರಘುಗೆ ಈ ವಾರದ ಕಿಚ್ಚನ ಚಪ್ಪಾಳೆ

    ವೈನ್‍ಸ್ಟೋರ್ ರಘುಗೆ ಈ ವಾರದ ಕಿಚ್ಚನ ಚಪ್ಪಾಳೆ

    ಬಿಗ್‍ಬಾಸ್ ಮನೆಯಲ್ಲಿ ಪ್ರತಿವಾರ ಅತ್ಯುತ್ತಮವಾಗಿ ಆಟ ಆಡಿದ ಸ್ಪರ್ಧಿಗೆ ಮೆಚ್ಚುಗೆ ವ್ಯಕ್ತಪಡಿಸಲು ಕಿಚ್ಚ ಸುದೀಪ್ ಚಪ್ಪಾಳೆ ಹೊಡೆಯುತ್ತಾರೆ. ಪ್ರತಿವಾರ ಸ್ಪರ್ಧಿಗಳು ಕಿಚ್ಚನ ಚಪ್ಪಾಳೆಗಾಗಿ ಕಾಯುತ್ತಾ ಇರುತ್ತಾರೆ.

    ಅದರಂತೆ ಈ ಬಾರಿ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ರಘುರವರಿಗೆ ಸಿಕ್ಕಿದೆ. ಬಿಗ್‍ಬಾಸ್ ಮನೆಯಲ್ಲಿ ಎಚ್ಚರವಾಗಿರುವುದು ಬಹಳ ಮುಖ್ಯ. ಈ ವಾರ ಈ ವ್ಯಕ್ತಿ ಎಚ್ಚರವಾಗಿದ್ದರು. ಬಿಗ್‍ಬಾಸ್ ಮನೆಯಲ್ಲಿ ಆ ಕ್ಷಣದಲ್ಲಿ ಬದುಕುವುದು ಬಹಳ ಬಹಳ ಮುಖ್ಯ, ಇವರು ಬದುಕಿದರು. ಭಾವನೆಗಳನ್ನು ಬಿಗ್‍ಬಾಸ್ ಮನೆಯಲ್ಲಿ ಇವರು ಈ ಬಾರಿ ಮುಕ್ತವಾಗಿ ಹಂಚಿಕೊಳ್ಳಬೇಕು. ಈ ಮನೆಯಲ್ಲಿ ಇವರು ಅನಿಸಿಕೆಗಳನ್ನು ನೇರವಾಗಿ ಹೇಳಿದರು. ಎಲ್ಲದರ ನಡುವೆ ತಮ್ಮ ತನವನ್ನು ತಾವು ಬಿಟ್ಟು ಕೊಡಬಾರದು, ಇವರು ಬಿಟ್ಟುಕೊಡಲಿಲ್ಲ. ಚೆನ್ನಾಗಿ ಟಾಸ್ಕ್ ಆಡಬೇಕು, ಆದರೆ ಇವರು ಆಡಲಿಲ್ಲ. ಆದರೆ ಪ್ರಯತ್ನ ಪಡುತ್ತಾರೆ.

    ಎರಡು ವಾರದ ಹಿಂದೆ ನಾನು ಹೇಳಿದ್ದನ್ನು ಮಾಡಬಹುದು, ಮಾಡುತ್ತಾರೆ ಎಂಬ ಸೂಚನೆ ಕೂಡ ಕೊಡದೇ, ಒಂದೇ ವಾರದಲ್ಲಿ ಸಿಕ್ಕಾಪಟ್ಟೆ ಆ್ಯಕ್ಟಿವ್ ಆಗಿರುವ ಈ ವ್ಯಕ್ತಿಗೆ ನಾನು ಪ್ರೋತ್ಸಾಹ ಕೊಟ್ಟೆ ಕೊಡುತ್ತೇನೆ. ಇನ್ನೂ ಚೆನ್ನಾಗಿ ಆಟ ಆಡಬೇಕೆಂದರೆ ಅವರಿಗೆ ಈ ಎನ್‍ಕ್ರೇಜ್‍ಮೆಂಟ್ ಹೋಗಲೇಬೇಕು ಎಂದು ಹೇಳುತ್ತಾ, ಈ ವಾರದ ಕಿಚ್ಚನ ಮೆಚ್ಚುಗೆಯ ಚಪ್ಪಾಳೆ ರಘುರವರಿಗೆ ಎಂದು ಚಪ್ಪಾಳೆ ತಟ್ಟುತ್ತಾರೆ.

    ಬಳಿಕ ಮಾತನಾಡಿದ ರಘು, ಎರಡು ವಾರಕ್ಕೂ ಮುನ್ನ ಶಂಖದಿಂದಲೇ ತೀರ್ಥ ಬರುವ ರೀತಿ ಆಟೋ ಹೊರಗೆ ಬಂದು ಕಾಯುತ್ತಿದ್ದ ವೇಳೆ ನನಗೆ ಸ್ವಲ್ಪ ಭಯವಾಗಿತ್ತು. ಆದರೆ ಆಗ ಯೋಚಿಸಿದೆ, ನಾನು ಎಲ್ಲರ ವಿರುದ್ಧ ಹೋರಾಡುವುದಕ್ಕಿಂತ ನನ್ನ ವಿರುದ್ಧ ನಾನು ಹೋರಾಡುತ್ತಿದ್ದೆ ಅನಿಸಿತ್ತು. ಆ ನಡವಳಿಕೆ ಇದೀಗ ಬದಲಾಗಿದೆ. ಮೊದಲಿಗೆ ಮಂಜು ಕಂಡರೆ ಭಯಪಡುತ್ತಿದ್ದೆ. ಆದರೆ ಈಗ ಅವರ ಹತ್ತಿರವೇ ಹೋಗಿ, ನಾನು ನಿಮಗೆ ಫೈಟ್ ಕೊಡಬೇಕೆಂಬ ಛಲ ಹಾಗೂ ಆಸೆ ಇದೆ ಎಂದು ಹೇಳುವಷ್ಟು ಧೈರ್ಯ ಬಂದಿದೆ. ಸೋ ಎಲ್ಲರಿಗೂ ನಾನು ಅದೇ ರೀತಿ ಹೇಳುತ್ತೇನೆ ಎಂದು ಹೇಳುತ್ತಾರೆ.

    ಈ ಹಿಂದೆ ಮೊದಲನೇ ವಾರ ಶಂಕರ್, ಎರಡನೇ ವಾರ ಶುಭ ಹಾಗೂ ಮೂರನೇ ವಾರ ಅರವಿಂದ್ ಕಿಚ್ಚನ ಚಪ್ಪಾಳೆ ಗಳಿಸಿದ್ದರು. ಇದೀಗ ನಾಲ್ಕನೇ ವಾರದಲ್ಲಿ ರಘು ಕಿಚ್ಚನ ಮೆಚ್ಚುಗೆಯ ಚಪ್ಪಾಳೆಯನ್ನು ಗಳಿಸಿದ್ದಾರೆ.

    ಒಟ್ಟಾರೆ ಕಿಚ್ಚನ ಚಪ್ಪಾಳೆ ಜೊತೆ ಕೈ ಜೋಡಿಸಿ, ಮನೆಯ ಎಲ್ಲ ಸದಸ್ಯರು ರಘುಗೆ ಚಪ್ಪಾಳೆ ಹೊಡೆಯುವ ಮೂಲಕ ಹರ್ಷವನ್ನು ವ್ಯಕ್ತಪಡಿಸುತ್ತಾರೆ.

  • ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ನಿಧಿ ಸುಬ್ಬಯ್ಯ ಒಂದು ರೀತಿ ಕ್ಯೂಟ್ ದಡ್ಡಿ ಅಂದಿದ್ಯಾಕೆ ರಘು!

    ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಪ್ರತಿವಾರ ನಡೆಯುವಂತೆ ನಿನ್ನೆ ಕೂಡ ‘ಯೆಸ್’ ಆರ್ ‘ನೋ’ ರೌಂಡ್ಸ್ ನಡೆಯಿತು. ಈ ವೇಳೆ ಮನೆಯ ಸದಸ್ಯರಿಗೆ ಕೆಲವೊಂದು ಪ್ರಶ್ನೆಗಳನ್ನು ಕೇಳಿದ ಕಿಚ್ಚ ಕೊನೆಯದಾಗಿ ನಿಧಿ ಸುಬ್ಬಯ್ಯ ಕೆಲವು ಸಲ ದಡ್ಡಿ ಎಂಬ ಪ್ರಶ್ನೆ ಕೇಳುತ್ತಾರೆ.

    ಬಳಿಕ ನೋ ಯಾಕೆ ರಾಜೀವ್‍ರವರೇ ಎಂದು ಕೇಳಿದಾಗ, ನಿಧಿ ಯಾವಾಗಲೂ ನನ್ನ ಭಾವನೆಗಳನ್ನು ಹೇಗೆ ಎಕ್ಸ್‍ಪ್ರೆಸ್ ಮಾಡಬೇಕೆಂದು ಗೊತ್ತಾಗುತ್ತಿಲ್ಲ ಎಂದು ಹೇಳುತ್ತಿರುತ್ತಾರೆ. ಅವರು ಹೇಳಬೇಕೆಂದು ಕೊಂಡ ವಿಚಾರವನ್ನು ಕನ್ನಡದಲ್ಲಿ ಹೇಗೆ ಹೇಳಬೇಕೆಂದು ಗೊತ್ತಾಗದೇ ಯೋಚನೆ ಮಾಡುತ್ತಿರುತ್ತಾರೆ. ಈ ಗ್ಯಾಪ್‍ನಲ್ಲಿ ಕೆಲವೊಂದನ್ನು ಹೇಗೆ ಹೇಳಬೇಕೆಂದು ಗೊತ್ತಾಗದೇ ಹೇಳಿ ಬಿಡುತ್ತಾರೆ. ಆಗ ನಾವು ನಿಧಿ ಕನ್ಫೂಷನ್‍ನಲ್ಲಿ ಹೇಳುತ್ತಿದ್ದಾರೆ ಎಂದು ಕೊಳ್ಳುತ್ತೇವೆ. ಆದರೆ ಅವರಿಗೆ ಏನು ಹೇಳುತ್ತಿದ್ದೇನೆ ಎಂಬ ವಿಚಾರದ ಬಗ್ಗೆ ಅವರಿಗೆ ಬಹಳ ಅರಿವಿರುತ್ತದೆ ಎನ್ನುತ್ತಾರೆ.

    ನಂತರ ಯೆಸ್ ಬೋರ್ಡ್ ತೋರಿಸಿದ್ದ ರಘು, ನಿಧಿ ಕೆಲವು ಸಲ ನನ್ನ ರೀತಿಯೇ ಸ್ಲೋ ಮೋಷನ್. ಏನಾದರೂ ಹೇಳಲು ಸಮಯ ತೆಗೆದುಕೊಳ್ಳುತ್ತಾರೆ. ಯೋಚನೆ ಮಾಡುವ ಸಮಯದ ಮಧ್ಯೆ ಏನಾದರೂ ಹೇಳಿ ಬಿಡುತ್ತಾರೆ. ಅದಕ್ಕೆ ಅವರು ಒಂದು ರೀತಿ ಕ್ಯೂಟ್ ರೀತಿಯ ದಡ್ಡಿ ಎಂದು ಅವರತ್ತಾ ನೋಡುತ್ತಾರೆ. ಈ ವೇಳೆ ಕಿಚ್ಚ ಆಯಿತು ಆದರೆ ನೀವು ಯಾಕೆ ಅವರನ್ನು ಹಾಗೇ ನೋಡುತ್ತಿದ್ದೀರಾ? ನಿಧಿ ನಿಮಗೆ ಗೊತ್ತಾಗ್ತಿದ್ಯಾ ಅವರು ಯಾವ ರೀತಿ ನೋಡುತ್ತಿದ್ದಾರೆ ಎಂದು ಹಾಸ್ಯ ಮಾಡುತ್ತಾರೆ. ಈ ವೇಳೆ ನಿಧಿ ಮುಖ ಮುಚ್ಚಿಕೊಂಡು ನಗುತ್ತಾ ಗೊತ್ತಿಲ್ಲ ಸರ್ ಅವರು ಹೇಗೆ ನೋಡಿದ್ರು ಎನ್ನುತ್ತಾರೆ.

    ನಂತರ ಮಾತನಾಡಿದ ಮಂಜು, ಒಂದೊಂದು ಬಾರಿ ನಿಧಿ ಏನು ಮಾತನಾಡುತ್ತಾರೆ ಎಂಬುವುದು ಅವರಿಗೆ ಗೊತ್ತಾಗುವುದಿಲ್ಲ. ಅಂದರೆ ಅವರಿಗೆ ಎಲ್ಲ ಗೊತ್ತಿದೆ. ಆದರೆ ಆ ಮಾತುಗಳನ್ನು ಹೇಗೆ ಆಡಬೇಕೆಂದು ತಿಳಿದಿರುವುದಿಲ್ಲ. ಥಟ್ ಅಂತ ಮಾತಾನಾಡಿಬಿಡುತ್ತಾರೆ. ಆಗ ಬೇರೆಯವರಿಗೆ ಬೇಸರವಾಗುತ್ತದೆ. 5 ನಿಮಿಷದ ನಂತರ ಹೌದು ನನಗೆ ಗೊತ್ತಾಗಲಿಲ್ಲ ಎಂದು ಅರ್ಥಮಾಡಿಕೊಂಡು ಹೇಳುತ್ತಾರೆ.

    ಇದಕ್ಕೆ ಪ್ರತಿಯುತ್ತರ ನೀಡಿದ ನಿಧಿ, ಹೌದು, ನಾನು ಸಡನ್ ರಿಯಾಕ್ಟ್ ಮಾಡುವುದು, ಓವರ್ ಥಿಂಕ್ ಮಾಡುವುದು ನಿಜ. ನನ್ನ ಪ್ರಕಾರ ಇವರೆಲ್ಲರೂ ನನ್ನ ದಡ್ಡಿ ಅಂದುಕೊಂಡರೆ ಅದು ನನ್ನ ಸ್ಟ್ರೆಂಥ್. ಯಾಕಂದ್ರೆ ನನ್ನ ಆಯ್ಕೆ ಇವರ್ಯಾರಿಗೂ ಇನ್ನೂ ಗೊತ್ತಿಲ್ಲ ಎಂದು ಹೇಳುತ್ತಾರೆ.