Tag: ರಘು ದೀಕ್ಷಿತ್

  • ವಾರಿಜಶ್ರೀ ಕೈಹಿಡಿದ ಗಾಯಕ ರಘು ದೀಕ್ಷಿತ್

    ವಾರಿಜಶ್ರೀ ಕೈಹಿಡಿದ ಗಾಯಕ ರಘು ದೀಕ್ಷಿತ್

    ಗಾಯಕ, ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಎರಡನೇ ಮದುವೆಯಾಗಿದ್ದಾರೆ. ಬೆಂಗಳೂರು ನಗರದ ಹೊರವಲಯದ ಖಾಸಗಿ ರೆಸಾರ್ಟ್‌ವೊಂದರಲ್ಲಿ ನಟ ರಘು ದೀಕ್ಷಿತ್ ಮತ್ತು ವಾರಿಜಾಶ್ರೀ (Varijashree Venugopal) ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಆಪ್ತರು, ಸ್ನೇಹಿತರು ಹಾಗೂ ಕುಟುಂಬದವರ ಸಮ್ಮುಖದಲ್ಲಿ ಸಡಗರದಿಂದ ಈ ವಿವಾಹ ನೆರವೇರಿದೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆಯ ಫೋಟೋಗಳು ವೈರಲ್ ಆಗುತ್ತಿವೆ.

    ರಘು ದೀಕ್ಷಿತ್‌ ಜೊತೆ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಅವರು ವೈವಾಹಿಕ ಜೀವನ ಆರಂಭಿಸಿದ್ದಾರೆ. ರಘು ದೀಕ್ಷಿತ್ ಮತ್ತು ವಾರಿಜಶ್ರೀ ಮದುವೆ ಆಗಲಿದ್ದಾರೆ ಎಂಬ ಬಗ್ಗೆ ಇತ್ತೀಚೆಗಷ್ಟೇ ಸುದ್ದಿ ಹೊರಬಿದ್ದಿತ್ತು. ಕುಟುಂಬದವರು ಮತ್ತು ಆಪ್ತರ ಸಮ್ಮುಖದಲ್ಲಿ ಈ ಮದುವೆ ನೆರವೇರಿದೆ.‌ ಇದನ್ನೂ ಓದಿ: ರಘು ದೀಕ್ಷಿತ್, ವಾರಿಜಶ್ರೀ ಮದುವೆ ಡೇಟ್ ಫಿಕ್ಸ್

    ರಘು ದೀಕ್ಷಿತ್ ಹಾಗೂ ವಾರಿಜಶ್ರೀ ವೇಣುಗೋಪಾಲ್ ಇಬ್ಬರೂ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ. ಒಟ್ಟಿಗೆ ಕೆಲಸವನ್ನ ಮಾಡಿರುವ ಈ ಜೋಡಿ ಕೊರೊನಾ ಕಾಲದಲ್ಲಿ ಮಾಡಿದ `ಭರವಸೆಯ ಬದುಕು’ ಹಾಡು ಅಪಾರ ಮೆಚ್ಚುಗೆಗೆ ಕಾರಣವಾಗಿತ್ತು. ಇದೀಗ ಕೆಲವೇ ಕೆಲವರು ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ಸಪ್ತಪದಿ ತುಳಿದಿದ್ದಾರೆ.

  • ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!

    ಖ್ಯಾತ ಗಾಯಕಿ ಜೊತೆ 2ನೇ ಮದ್ವೆಗೆ ಸಜ್ಜಾದ ರಘು ದೀಕ್ಷಿತ್;‌ ಅಕ್ಟೋಬರ್ ಅಂತ್ಯದಲ್ಲೇ ಮದುವೆ!

    ಸಂಗೀತ ನಿರ್ದೇಶಕ ರಘು ದೀಕ್ಷಿತ್ (Raghu Dixit) ಅವರು ಗಾಯಕಿ ಹಾಗೂ ಕೊಳಲು ವಾದಕಿ ವಾರಿಜಾಶ್ರೀ (Varijashree) ಅವರ ಜೊತೆ ಸಪ್ತಪದಿ ತುಳಿಯಲಿದ್ದಾರೆ.

    ಸ್ವತಃ ರಘು ದೀಕ್ಷಿತ್ ಅವರೇ ಈ ಬಗ್ಗೆ ಹೇಳಿಕೊಂಡಿದ್ದಾರೆ. ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಎರಡೂ ಮನೆಯವರ ಒಪ್ಪಿಗೆ ಮೇರೆಗೆ ವಿವಾಹ ಬಂಧನಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ತಿಂಗಳ ಕೊನೆಯಲ್ಲಿ ಇಬ್ಬರು ಮದುವೆ ಆಗಲಿದ್ದಾರೆ.ಇದನ್ನೂ ಓದಿ: ಒಂದು ತಿಂಗಳಿಗೆ ನಿವೇದಿತಾ ಖರ್ಚು ಕೇಳಿದ್ರೆ ಶಾಕ್ ಆಗ್ತೀರಿ!

    ನನ್ನ ಜೀವನದಲ್ಲಿ ಹೊಸ ಅಧ್ಯಾಯ ಆರಂಭವಾಗುತ್ತದೆ ಎಂದು ನಾನು ನಿರೀಕ್ಷೆ ಮಾಡಿರಲಿಲ್ಲ. ನನ್ನ ಜೀವನದಲ್ಲಿ ನಾನು ನಿರೀಕ್ಷೆ ಮಾಡಿರದ ಆಕಸ್ಮಿಕ ತಿರುವು ಇದು. ನನ್ನ ಮತ್ತು ವಾರಿಜಾಶ್ರೀ ಅವರ ಪ್ರೀತಿಗೆ ವಾರಿಜಾಶ್ರೀ ಅವರ ಪೋಷಕರು ಒಪ್ಪಿಗೆ ಸೂಚಿಸಿದ್ದಾರೆ. ಸದ್ಯ ನಮ್ಮ ಜೀವನದ ಹೊಸ ಅಧ್ಯಾಯವನ್ನು ಪ್ರಾರಂಭಿಸಲು ಹೊರಟಿದ್ದೇವೆ ಎಂದಿದ್ದಾರೆ ರಘು ದೀಕ್ಷಿತ್.

    ವಾರಿಜಾಶ್ರೀ ಹಾಗೂ ರಘು ದೀಕ್ಷಿತ್ ಇಬ್ಬರು `ಸಾಕು ಇನ್ನೂ ಸಾಕು’ ಎನ್ನುವ ಆಲ್ಬಂಗೆ ಕೆಲಸ ಮಾಡುವ ಮೂಲಕ ಪರಸ್ಪರ ಪರಿಚಯವಾದರು. ಅಲ್ಲಿಂದ ಮುಂದೆ ಇಬ್ಬರು ಸ್ನೇಹಿತರಾಗಿ ಸಾಕಷ್ಟು ವಿಡಿಯೋ ಸಾಂಗ್ ಆಲ್ಬಂಗಳಿಗೆ ಕೆಲಸ ಮಾಡಿದ್ದಾರೆ.

    ಈ ಮೊದಲು ರಘು ದೀಕ್ಷಿತ್ ಅವರು ನೃತ್ಯ ಕಲಾವಿದೆ ಮಯೂರಿ ಅವರನ್ನು ಮದುವೆಯಾಗಿದ್ದರು. ಕೆಲವು ವರ್ಷಗಳ ಹಿಂದೆ ಮಯೂರಿ ಅವರೊಂದಿಗೆ ವಿಚ್ಛೇದನ ಪಡೆದುಕೊಂಡಿದ್ದ ರಘು ದೀಕ್ಷಿತ್ ಇದೀಗ ವಾರಿಜಾಕ್ಷಿ ಅವರೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಡಲಿದ್ದಾರೆ.ಇದನ್ನೂ ಓದಿ: ಮುತ್ತಿನಿಂದಲೇ ರವಿಕೆ ಮಾಡಿಸಿಕೊಂಡ ಬ್ಯೂಟಿ ಪ್ರಣೀತಾ

  • ಖ್ಯಾತ ಗಾಯಕಿ ಜೊತೆ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ರೆಡಿ

    ಖ್ಯಾತ ಗಾಯಕಿ ಜೊತೆ ಗಾಯಕ ರಘು ದೀಕ್ಷಿತ್ ಎರಡನೇ ವಿವಾಹಕ್ಕೆ ರೆಡಿ

    ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ (Raghu Dixit) ಹೊಸ ಅಧ್ಯಾಯಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ವಾರಿಜಶ್ರೀ (Varijashree Venugopal) ಎಂಬ ಗಾಯಕಿ, ಕೊಳಲು ವಾದಕಿ ಜೊತೆ ಸಂಸಾರದ ಸರಿಗಮ ಹಾಡಲು ಸಿದ್ಧರಾಗಿದ್ದಾರೆ ರಘು ದೀಕ್ಷಿತ್.

    ಇವರಿಗೆ ಇದು ಎರಡನೇ ವಿವಾಹ. ಹಿಂದೆ ಶಾಸ್ತ್ರೀಯ ನೃತ್ಯಗಾರ್ತಿ ಮಯೂರಿ ಜೊತೆ ರಘು ಧೀಕ್ಷಿತ್ ವಿವಾಹ ಮುರಿದುಬಿದ್ದಿತ್ತು. ಇದೀಗ ಗ್ರ‍್ಯಾಮಿ-ನಾಮನಿರ್ದೇಶಿತ ಖ್ಯಾತ ಗಾಯಕಿ ವಾರಿಜಶ್ರೀ ವೇಣುಗೋಪಾಲ್ ಜೊತೆ ಹೊಸ ಬಾಳಿನ ಬಂಡಿ ಹೂಡಲು ರಘು ದೀಕ್ಷಿತ್ ಸಿದ್ಧರಾಗಿದ್ದಾರೆ.

    ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಲವು ಆಲ್ಬಂಗಳಲ್ಲಿ ಜೊತೆಯಾಗಿ ಹಾಡಿದ್ದು, ಒಬ್ಬರಿಗೊಬ್ಬರು ಪರಸ್ಪರ ಪರಿಚಿತರು. ಅನೇಕ ವರ್ಷಗಳಿಂದ ಪರಸ್ಪರ ಬಲ್ಲವರಾಗಿದ್ದು, ಇದೀಗ ಜಂಟಿಯಾಗಿ ಬಾಳ್ವೆ ಮಾಡಲು ಸಿದ್ಧರಾಗಿದ್ದಾರೆ. `ಸಾಕು ಇನ್ನು ಸಾಕು’ ಆಲ್ಬಂ ಸಂಗೀತ ಸಹಯೋಗವೇ ಇವರ ಪ್ರೀತಿಗೆ ಸೇತುವೆಯಾಗಿದೆಯಂತೆ. ಇದೇ ತಿಂಗಳು ಕೊನೆಯಲ್ಲಿ ಮದುವೆ ನಿಶ್ಚಯವಾಗಿದೆ.

    ಈ ಹಿಂದೆ ಕೋವಿಡ್ ವೇಳೆ ರಘು ದೀಕ್ಷಿತ್ ಹಾಗೂ ವಾರಿಜಶ್ರೀ ಹಾಡಿದ ಹಾಡು ಜನಪ್ರಿಯವಾಗಿತ್ತು. ಇದೀಗ ರಘು ದೀಕ್ಷಿತ್ ಬಾಳಲ್ಲಿ ಮತ್ತೆ ವಸಂತವಾಗಿದೆ. ಹೊಸ ದಾಂಪತ್ಯಕ್ಕೆ ಸಿದ್ಧರಾಗಿದ್ದಾರೆ. ಶೀಘ್ರದಲ್ಲೇ ಮದುವೆ ಜರುಗಲಿದೆ.

  • ‘ಬ್ಯಾಂಗ್’ ಚಿತ್ರ ಒಪ್ಪಿಕೊಂಡಿದ್ಯಾಕೆ- ಸಿಂಗರ್ ಟು ಆಕ್ಟಿಂಗ್ ಜರ್ನಿ ಬಗ್ಗೆ ರಘು ದೀಕ್ಷಿತ್ ಮಾತು

    ‘ಬ್ಯಾಂಗ್’ ಚಿತ್ರ ಒಪ್ಪಿಕೊಂಡಿದ್ಯಾಕೆ- ಸಿಂಗರ್ ಟು ಆಕ್ಟಿಂಗ್ ಜರ್ನಿ ಬಗ್ಗೆ ರಘು ದೀಕ್ಷಿತ್ ಮಾತು

    ಸ್ಯಾಂಡಲ್‌ವುಡ್‌ನಲ್ಲಿ (Sandalwood) ಸಿಂಗರ್, ಮ್ಯೂಸಿಕ್ ಕಂಪೋಸರ್ ಆಗಿ ಗುರುತಿಸಿಕೊಂಡಿರುವ ರಘು ದೀಕ್ಷಿತ್ ಅವರು ಫಸ್ಟ್ ಟೈಮ್ ಬಣ್ಣ ಹಚ್ಚಿದ್ದ ಬಗ್ಗೆ ಅನುಭವ ಬಿಚ್ಚಿದ್ದಾರೆ. ‘ಬ್ಯಾಂಗ್’ (Bang Film) ಸಿನಿಮಾ ಮೂಲಕ ಡಾನ್ ಆಗಿ ಎಂಟ್ರಿ ಕೊಡ್ತಿರುವ ರಘು ದೀಕ್ಷಿತ್ ಅವರು ತಮ್ಮ ಮೊದಲ ಸಿನಿಮಾ ಬಗ್ಗೆ ಮಾತನಾಡಿದ್ದಾರೆ.

    ಕನ್ನಡದ ಸಾಕಷ್ಟು ಸಿನಿಮಾಗಳಿಗೆ ಮ್ಯೂಸಿಕ್ ಕಂಪೋಸ್ ಮಾಡಿರುವ ರಘು ದೀಕ್ಷಿತ್ (Raghu Dixit) ಅವರಿಗೆ ಬ್ಯಾಂಗ್ ಸಿನಿಮಾಗೆ ನಟನೆಗೆ ಆಫರ್ ಸಿಕ್ಕಿದ್ದು, ಅನಿರೀಕ್ಷಿತ. ಆದರೆ ನಿದೇಶಕರು ಮೊದಲು ಭೇಟಿ ಮಾಡಲು ಬಂದಾಗ ಸಾಂಗ್ ಹಾಡೊಸೋಕೆ ಬಂದ್ರು ಎಂದು ಅಂದುಕೊಂಡಿದ್ರಂತೆ. ಕಡೆಗೆ ಸಿನಿಮಾಗೆ ಓಕೆ ಅಂದಿದ್ಯಾಕೆ? ಈ ಸಿನಿಮಾ ಯಾಕೆ ಒಪ್ಪಿಕೊಳ್ಳಬೇಕು ಎಂದು ಅನಿಸಿತು ಎಂದು ಸಂದರ್ಶನವೊಂದರಲ್ಲಿ ರಘು ದೀಕ್ಷಿತ್ ಮಾತನಾಡಿದ್ದಾರೆ.

    ಡ್ಯಾಡಿ ಹೆಸರಿನ ಡಾನ್ ಪಾತ್ರದಲ್ಲಿ ರಘು ದೀಕ್ಷಿತ್ ‘ಬ್ಯಾಂಗ್’ ಚಿತ್ರದಲ್ಲಿ ನಟಿಸಿದ್ದಾರೆ. ಶಾನ್ವಿ (Shanvi Srivastav) ಕೂಡ ಈ ಚಿತ್ರದಲ್ಲಿ ಗ್ಯಾಂಗ್‌ಸ್ಟರ್ ಪಾತ್ರ ಮಾಡಿದ್ದಾರೆ. ಎಂದಿಗೂ ನನಗೆ ನಟನಾಗುವ ಹಂಬಲವನ್ನು ಇರಲಿಲ್ಲ. ಆದರೆ, ಅಂತಹ ಅವಕಾಶ ಸಿಕ್ಕಿದೆ ಎಂಬ ಬಗ್ಗೆ ನನಗೆ ಖುಷಿ ಇದೆ. ಮೊದಲ ಚಿತ್ರದಲ್ಲಿ ನಾನು ಗ್ಯಾಂಗ್‌ಸ್ಟರ್ ಪಾತ್ರ ಮಾಡುತ್ತಿದ್ದೇನೆ. ನಾನು ತುಂಬಾ ಅದೃಷ್ಟಶಾಲಿ ಎಂದು ರಘು ದೀಕ್ಷಿತ್ ಅವರು ಮಾತನಾಡಿದ್ದಾರೆ. ಇದನ್ನೂ ಓದಿ:ಬಾಹುಬಲಿ ಚಿತ್ರಕ್ಕೆ ಎದುರಾಗಿ ನಿಂತ ರಂಗಿತರಂಗಕ್ಕೆ ಎಂಟು ವರ್ಷ

    ನಾನು ಈ ಚಿತ್ರದ ನಿರ್ದೇಶಕ ಗಣೇಶ್ ಪರಶುರಾಮ್ ಅವರನ್ನು ಒಮ್ಮೆ ಭೇಟಿ ಮಾಡಿದೆ. ಅವರು ಸಿನಿಮಾ ಬಗ್ಗೆ ಮಾತನಾಡುವುದಿದೆ ಎಂದಿದ್ದರು. ನನ್ನ ಬಳಿ ಸಂಗೀತ ಸಂಯೋಜನೆ ಮಾಡಿಸಬಹುದು, ಇಲ್ಲವೇ ಹಾಡು ಹಾಡಿಸಬಹುದು ಎಂದುಕೊಂಡೆ. ಆದರೆ, ಅವರು ನನ್ನ ಬಳಿ ನಟಿಸುವಂತೆ ಕೋರಿದರು. ಆದರೆ, ನಾನು ನಿರಕಾರಿಸಿದೆ. ಕೆಲ ತಿಂಗಳು ಬಿಟ್ಟು ಅವರು ಮತ್ತೆ ಆಗಮಿಸಿದರು. ನಾನು ಒಮ್ಮೆ ಕಾಸ್ಟ್ಯೂಮ್ ಧರಿಸಿ ನೋಡಿದೆ. ನನಗೆ ಅದು ನಿಜಕ್ಕೂ ಖುಷಿ ನೀಡಿತು. ಬಳಿಕ ಕಥೆ ಕೇಳಿ ಸಿನಿಮಾ ಒಪ್ಪಿಕೊಂಡೆ ಎಂದು ರಘು ದೀಕ್ಷಿತ್ ಹೇಳಿದ್ದಾರೆ.

    ಶಾನ್ವಿ ಶ್ರೀವಾಸ್ತವ್, ರಘು ದೀಕ್ಷಿತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದರೆ, ಸಾತ್ವಿಕಾ, ರಿತ್ವಿಕ್, ಸುನೀಲ್ ನಾಟ್ಯರಂಗ ಅವರು ಚಿತ್ರದಲ್ಲಿ ನಟಿಸಿದ್ದಾರೆ.ಸದ್ಯದಲ್ಲೇ ಸಿನಿಮಾ ತೆರೆಗೆ ಬರಲಿದೆ. ಪೂಜಾ ವಸಂತ್ ಕುಮಾರ್ ಬ್ಯಾಂಗ್ ಸಿನಿಮಾವನ್ನ ನಿರ್ಮಾಣ ಮಾಡಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಆರ್ಕೆಸ್ಟ್ರಾಗಾಗಿ ಎಂಟು ಹಾಡುಗಳನ್ನು ಬರೆದ ಡಾಲಿ ಧನಂಜಯ್

    ಆರ್ಕೆಸ್ಟ್ರಾಗಾಗಿ ಎಂಟು ಹಾಡುಗಳನ್ನು ಬರೆದ ಡಾಲಿ ಧನಂಜಯ್

    ಟ ಧನಂಜಯ್ ಗೀತ ರಚನೆಕಾರರಾಗಿಯೂ ಫೇಮಸ್ ಆಗಿದ್ದಾರೆ. ಈವರೆಗೂ ಚಿತ್ರಗಳಿಗಾಗಿ ಒಂದೊಂದು ಹಾಡುಗಳನ್ನು ಬರೆಯುತ್ತಿದ್ದವರು. ಇದೀಗ ಆರ್ಕೆಸ್ಟ್ರಾ ಸಿನಿಮಾಗಾಗಿ ಅವರು ಎಂಟು ಹಾಡುಗಳನ್ನು ಬರೆದಿದ್ದಾರೆ. ಈ ಸಿನಿಮಾದಲ್ಲಿ ಬರುವ ಅಷ್ಟೂ ಹಾಡುಗಳಿಗೂ ಡಾಲಿ ಸಾಹಿತ್ಯ ಬರೆದಿದ್ದಾರೆ. ಒಂದಕ್ಕಿಂತ ಒಂದು ಹಾಡುಗಳು ವಿಶೇಷವಾಗಿವೆ. ಈ ಹಾಡುಗಳಿಗೆ ರಘು ದೀಕ್ಷಿತ್ ಅವರ ಸಂಗೀತ ಸಂಯೋಜನೆಯಿದೆ. ಇದೇ ಮೊದಲ ಬಾರಿಗೆ ಒಂದು ಚಿತ್ರದ ಅಷ್ಟೂ ಹಾಡುಗಳನ್ನು ಡಾಲಿ ರಚಿಸಿದ್ದಾರೆ.

    ಕಳೆದ ಕೆಲವು ವರ್ಷಗಳ ಹಿಂದೆ ಮೈಸೂರಿನ ಹುಡುಗರೆಲ್ಲಾ ಸೇರಿ ನಿರ್ಮಾಣ ಮಾಡಿದ್ದ “ಬಾರಿಸು ಕನ್ನಡ ಡಿಂಡಿಮವ” ಹಾಡು ತುಂಬಾ ಜನಪ್ರಿಯವಾಯಿತು. ಈಗ ಅದೇ ತಂಡ ಈ ಚಿತ್ರವನ್ನು ನಿರ್ಮಾಣ ಮಾಡಿದೆ. ನಾನು ಮೊದಲು ಮೈಸೂರಿನ ನೇತ್ರಣ್ಣ ಹಾಗೂ ಕೃಪಾಕರ್, ಸೇನಾನಿ ಅವರನ್ನು ನೆನೆದು ಮಾತು ಆರಂಭಿಸುತ್ತೇನೆ. ಮೈಸೂರಿನಲ್ಲಿ ನಮ್ಮದೊಂದು ತಂಡ. ಗೆಳೆಯರಿಗೆಲ್ಲಾ ರಂಗಭೂಮಿಯಲ್ಲಿ ಆಸಕ್ತಿ. ‌ಧನಂಜಯ ನನಗೆ ಕಾಲೇಜಿನಲ್ಲಿ ಸೀನಿಯರ್. ಆಗಿನಿಂದಲೂ ಗೆಳೆಯ ಮತ್ತು ಸಹಕಾರ ನೀಡಿದವ. “ಮೈಸೂರು” ಆರ್ಕೇಸ್ಟ್ರಾ ತುಂಬಾ ಜನಪ್ರಿಯ. ಈ ಕುರಿತು ಕಥೆ ಮಾಡಿ‌ ಸಿನಿಮಾ ಮಾಡಬೇಕೆಂದು ಕನಸು. ಕೆಲವು ಗೆಳೆಯರ ಸಹಾಯದಿಂದ ಚಿತ್ರ ಆರಂಭಿಸಿದ್ದೆವು.‌ ಬೆಂಗಳೂರಿನ ಗಾಂಧಿನಗರ  ಸಿನಿಮಾದವರಿಗೆ ಹೆಸರುವಾಸಿ. ಹಾಗೆ,  ಮೈಸೂರಿನ ಗಾಂಧಿನಗರ “ಆರ್ಕೆಸ್ಟ್ರಾ” ದವರಿಗೆ ಹೆಸರುವಾಸಿ. ಅಲ್ಲಿ ಸಂಪರ್ಕ ಮಾಡಿ ಎಲ್ಲೆಲ್ಲಿ “ಆರ್ಕೇಸ್ಟ್ರಾ” ನಡೆಯುತ್ತದೆ?  ಎಂಬ ಮಾಹಿತಿ ಪಡೆದು, ಅಲ್ಲೇ ಹೋಗಿ ನೈಜವಾಗಿ ಚಿತ್ರೀಕರಣ ಮಾಡುತ್ತಿದ್ದೆವು. ಒಂದು ನೈಜತೆಗಾಗಿ, ಮತ್ತೊಂದು ಸೆಟ್ ಹಾಕುವಷ್ಟು ಹಣವಿರಲಿಲ್ಲ. “ಆರ್ಕೇಸ್ಟ್ರಾ” ಹಾಡುಗಾರನಾಗಬೇಕೆಂಬ ಆಸೆಹೊತ್ತ ಹುಡುಗನೊಬ್ಬನ ಸುತ್ತ ಹೆಣೆದಿರುವ ಕಥೆಯಿದು. ಪೂರ್ಣ ಈ ಚಿತ್ರದ ನಾಯಕ. ರಾಜಲಕ್ಷ್ಮೀ ನಾಯಕಿ. ದಿಲೀಪ್ ರಾಜ್, ನಾಗಭೂಷಣ್, ಮಹೇಶ್ ಮುಂತಾದ ರಂಗಭೂಮಿ ಕಲಾವಿದರು ಇದರಲ್ಲಿ ನಟಿಸಿದ್ದಾರೆ. ಜೋಸಫ್ ಛಾಯಾಗ್ರಹಣ ಮಾಡಿದ್ದಾರೆ. ಡಾಲಿ ಎಲ್ಲಾ ಹಾಡುಗಳನ್ನು ಬರೆದಿದ್ದಾರೆ. ರಘು ದೀಕ್ಷಿತ್ ಸಂಗೀತ ನೀಡಿದ್ದಾರೆ. Krg ಸ್ಟುಡಿಯೋಸ್ ಹಾಗೂ ಡಾಲಿ ಪಿಕ್ಚರ್ಸ್ ನಮ್ಮ ಚಿತ್ರವನ್ನು ಅರ್ಪಿಸುತ್ತಿದ್ದಾರೆ ಎಂದು ನಿರ್ದೇಶಕ ಸುನೀಲ್ ಮಾಹಿತಿ ನೀಡಿದರು.

    ಮೈಸೂರಿನ ಕಲಾಮಂದಿರ ಹಾಗೂ ರಂಗಾಯಣದ ಸುತ್ತ ನಾವು ಕಥೆಯ ಬಗ್ಗೆ ಮಾತನಾಡುತ್ತಾ ತಿರುಗುತ್ತಿದಾಗ, ಅದನ್ನು ಗಮನಿಸಿದ ಕೃಪಾಕರ್, ಸೇನಾನಿ ಅವರು ತಮ್ಮದೇ ಕ್ಯಾಮೆರಾ ಹಾಗೂ ಎಡಿಟಿಂಗ್ ಸೆಟಪ್ ಹಾಗೂ ಜೋಸೆಫ್ ಎಂಬ ಛಾಯಾಗ್ರಾಹಕನನ್ನು ನೀಡಿ ನಮಗೆ ಸಹಾಯ ಮಾಡಿದರು. ಚಿತ್ರೀಕರಣ ತಡವಾದರೆ ಧನಂಜಯ ಬೇಗ ಶುರುಮಾಡುವಂತೆ ಹುರಿದುಂಬಿಸುತ್ತಿದ್ದರು. ಸಂಗೀತ ನಿರ್ದೇಶಕ ರಘದೀಕ್ಷಿತ್ ನಮ್ಮ ಸಹಾಯಕ್ಕೆ ನಿಂತರು. ಈಗ ಕೆ.ಆರ್.ಜಿ ಸ್ಟುಡಿಯೋಸ್ ನ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್ ಬಿಡುಗಡೆಗೆ ಬೇಕಾದ ಅನುಕೂಲ ಮಾಡಿಕೊಡುತ್ತಿದ್ದಾರೆ. ಎಲ್ಲರಿಗೂ ಧನ್ಯವಾದ. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    ನಾನು ಮೂಲತಃ ರಂಗಭೂಮಿಯವನು. “ಆರ್ಕೇಸ್ಟ್ರಾ” ಸಿನಿಮಾ ಬಿಡುಗಡೆಗೆ ಕಾತುರದಿಂದ ಕಾಯುತ್ತಿದ್ದೇನೆ. ಯುವಕರ ತಂಡದ ಶ್ರಮದಿಂದ ಈ ಚಿತ್ರ ಚೆನ್ನಾಗಿ ಮೂಡಿಬಂದಿದೆ. ನನ್ನ ಪಾತ್ರಕೂಡ ಚೆನ್ನಾಗಿದೆ ಎಂದರು ನಟ ದಿಲೀಪ್ ರಾಜ್. ನಾನು ಮೈಸೂರಿನವನು. ನಟ ನಾಗಭೂಷಣ್ ಮೂಲಕ ಈ ತಂಡದ ಪರಿಚಯವಾಯಿತು. ನಿರ್ದೇಶಕ ಸುನೀಲ್ ಪೆನ್ ಡ್ರೈವ್ ಮೂಲಕ ಈ ಚಿತ್ರದ ಕಥೆ ಕಳಿಸಿದ್ದರು. ನೋಡಿ ಕೆಲಸ ಶುರು ಮಾಡಿದೆ. ಮೈಸೂರಿನ ನೇತ್ರಣ್ಣ ಅವರ ಜಾಗವೇ ನಮ್ಮ ಆಫೀಸ್. ಡಾಲಿ ಬರೆದ ಎರಡು ಸಾಲುಗಳು ನನಗೆ ಇಷ್ಟವಾಯಿತು.  ವಿಶೇಷವೆಂದರೆ ಈ ಚಿತ್ರದ ಎಂಟು ಹಾಡುಗಳನ್ನು  ಡಾಲಿ ಅವರೆ ಬರೆದಿದ್ದಾರೆ. ಹಣ ಪಡೆಯದೆ ಸಂಗೀತ ನಿರ್ದೇಶನದ ಜವಾಬ್ದಾರಿ ಹೊತ್ತು ಕೊಂಡಿದ್ದೇನೆ. ಹಾಗಾಗಿ ನನ್ನನ್ನು ನಿರ್ಮಾಪಕ ಅಂತ ನಿರ್ಧರಿಸಿದ್ದಾರೆ ಎಂದರು ರಘು ದೀಕ್ಷಿತ್. ನಾವೆಲ್ಲಾ ಮೈಸೂರಿನ ಕಾಲೇಜ್ ನಲ್ಲಿ ನಾಟಕ ಮಾಡಬೇಕಾದರೆ, ಬೀಳುತ್ತಿದ್ದ ವಿಸಿಲ್ ಗೆ ನಮ್ಮ ತಲೆ ತಿರುಗುತ್ತಿತ್ತು. ಆಮೇಲೆ ಸಿನಿಮಾ ನಟನೆಗೆ ಬಂದ ಮೇಲೆ ವಾಸ್ತವ ಅರ್ಥವಾಯಿತು. ಆನಂತರ ಮತ್ತೆ ಜನ ಕೈ ಹಿಡಿದರು. ನನ್ನ ಮೊದಲ ದಿನಗಳಿಂದಲೂ ನನ್ನ ಸ್ನೇಹಿತರು ನನ್ನ ಜೊತೆ ಇದ್ದಾರೆ. ನಾನು ಅವರ ಜೊತೆ ಇರುತ್ತೇನೆ . ನಮ್ಮೊಂದಿಗೆ ಕೆ.ಆರ್.ಜಿ ಸ್ಟುಡಿಯೋಸ್ ಅವರು ಇದ್ದಾರೆ ಎಂದರು ಡಾಲಿ ಧನಂಜಯ.

    Live Tv

  • ಕಾನ್ ಫೆಸ್ಟಿವಲ್‌ನಲ್ಲಿ ಸ್ನಾನ ಮಾಡದೇ ಸಂಗೀತ ಪ್ರದರ್ಶನ ನೀಡಿದ್ರಂತೆ ರಘು ದೀಕ್ಷಿತ್ – ಸಂದರ್ಶನದಲ್ಲಿ ಹೇಳಿದ್ದೇನು?

    ಕಾನ್ ಫೆಸ್ಟಿವಲ್‌ನಲ್ಲಿ ಸ್ನಾನ ಮಾಡದೇ ಸಂಗೀತ ಪ್ರದರ್ಶನ ನೀಡಿದ್ರಂತೆ ರಘು ದೀಕ್ಷಿತ್ – ಸಂದರ್ಶನದಲ್ಲಿ ಹೇಳಿದ್ದೇನು?

    ಕಾನ್ ಸಿನಿಮೋತ್ಸವದಲ್ಲಿ ಕನ್ನಡಿಗ ಗಾಯಕ ರಘು ದೀಕ್ಷಿತ್ ಭಾಗಿಯಾಗಿದ್ದರು. ವಿಶ್ವದ ಎಲ್ಲ ಚಿತ್ರರಂಗದ ಸ್ಟಾರ್‌ಗಳ ಸಿನಿಮೋತ್ಸವದಲ್ಲಿ ಭಾಗಿಯಾಗಿದ್ದರು. ಕನ್ನಡತಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಕಾಣಿಸಿಕೊಂಡಿದ್ದರು. ಕಾನ್ ಫೆಸ್ಟಿವಲ್‌ನಲ್ಲಿ ಕನ್ನಡ ಚಿತ್ರರಂಗದಿಂದ ರಘು ದೀಕ್ಷಿತ್‌ಗೆ ಹಾಡಲು ಅವಕಾಶ ಸಿಕ್ಕಿತು. ಬಳಿಕ ಕಾನ್ ಸಿನಿಮೋತ್ಸವದ ಕುರಿತು ಸಂದರ್ಶನವೊಂದರಲ್ಲಿ ರಘು ದೀಕ್ಷಿತ್ ಮಾತನಾಡಿದ್ದಾರೆ.

    ಇದೇ ಸಿನಿಮೋತ್ಸವದಲ್ಲಿ ಕನ್ನಡಿಗ ರಘು ದೀಕ್ಷಿತ್ ತಮ್ಮ ಗಾಯನದ ಮೂಲಕ ಮೋಡಿ ಮಾಡಿದ್ರು, ಕನ್ನಡದ ಕಂಪನ್ನು ಪಸರಿಸಿದ್ರು. ಮೇ 17ರಿಂದ ಮೇ 29ರ ವರೆಗೆ ಪ್ರಾರಂಭವಾದ ಈ ಕಾನ್ ಫೆಸ್ಟಿವಲ್‌ನಲ್ಲಿ ರಘು ದೀಕ್ಷಿತ್ ಭಾಗಿವಹಿಸಿದ್ದರ ಹಿಂದಿನ ಕಥೆಯನ್ನ ಹೇಳಿಕೊಂಡಿದ್ದಾರೆ.

    ಕಾನ್ ಫೆಸ್ಟಿವಲ್‌ಗೆ ಹೋಗುವ ಸಮಯದಲ್ಲಿ ರಘು ದೀಕ್ಷಿತ್ ಮತ್ತು ಅವರ ತಂಡಕ್ಕೆ ಫ್ರಾನ್ಸ್ ರೀಚ್ ಆಗುವಾಗ ತಡವಾಗಿತ್ತಂತೆ. ಆದ್ರೆ ಮೇ 21ರಂದು ನಡೆಯುವ ಕಾರ್ಯಕ್ರಮದಲ್ಲಿ ಸರಿಯಾದ ಸಮಯಕ್ಕೆ ರಘು ದೀಕ್ಷಿತ್ ತಲುಪಿದ್ದರು. ಆದರೆ ಸಮಯದ ಅಭಾವದಿಂದ ಸ್ನಾನ ಮಾಡದೇ ಪ್ರದರ್ಶನ ನೀಡಿದ್ದರಂತೆ. ಇಂತಹ ಸಮಯದಲ್ಲೂ ಪರಿಸ್ಥಿತಿಗೆ ತಕ್ಕಂತೆ ಗಾಯಕ ರಘು ಅವರು ಹಾಡಿ ರಂಜಿಸಿದ್ದಾರೆ. ಈ ಕುರಿತು ಸಂದರ್ಶನವೊಂದರಲ್ಲಿ ರಘು ದೀಕ್ಷಿತ್ ಹೇಳಿಕೊಂಡಿದ್ದಾರೆ.ಇದನ್ನೂ ಓದಿ:ಪವನ್ ಕಲ್ಯಾಣ್‌ಗೆ ರಾಜಮೌಳಿ ಆ್ಯಕ್ಷನ್ ಕಟ್

    ರಘು ದೀಕ್ಷಿತ್ ಕಾನ್ ಸಿನಿಮೋತ್ಸವದಿಂದ ಇದೀಗ ಹಿಂತಿರುಗಿದ್ದು, ಬ್ಯಾಕ್ ಟು ಬ್ಯಾಕ್ ಮೂರು ಆಲ್ಬಂಗಳನ್ನು ರಿಲೀಸ್ ಮಾಡಲು ಸಜ್ಜಾಗಿದ್ದಾರೆ. ರಘು ದೀಕ್ಷಿತ್ ಕಂಪೋಸ್ ಮಾಡಿರುವ ಚಿತ್ರದ ಹಾಡುಗಳು ಬಿಡುಗಡೆಗೆ ಸಜ್ಜಾಗಿವೆ.

  • ಕಾನ್ ಫೆಸ್ಟಿವಲ್‌ಗೆ ಕನ್ನಡದ ಗಾಯಕ ರಘು ದೀಕ್ಷಿತ್

    ಕಾನ್ ಫೆಸ್ಟಿವಲ್‌ಗೆ ಕನ್ನಡದ ಗಾಯಕ ರಘು ದೀಕ್ಷಿತ್

    ವಿಶ್ವದ ಅತ್ಯಂತ ಪ್ರಸಿದ್ಧ ಸಿನಿಮೋತ್ಸವ ಕಾನ್ ಫೆಸ್ಟಿವಲ್ ಈಗಾಗಲೇ ಶುರುವಾಗಿದೆ. ಈ ಕಾನ್ ಫೆಸ್ಟಿವಲ್‌ನಲ್ಲಿ ಭಾರತೀಯ ಸಿನಿಮಾ ರಂಗದ ಖ್ಯಾತ ತಾರೆಯರು ಭಾಗಿಯಾಗಿದ್ದಾರೆ. ಇದೀಗ ಕಾನ್ ಫೆಸ್ಟಿವಲ್‌ನಲ್ಲಿ ನಮ್ಮ ಕನ್ನಡದ ಹೆಸರಾಂತ ಗಾಯಕ ರಘು ದೀಕ್ಷಿತ್ ಭಾಗಿಯಾಗುತ್ತಿದ್ದಾರೆ.

    ಕಾನ್ ಸಿನಿಮೋತ್ಸವ ಅಂತರಾಷ್ಟೀಯ ಮಟ್ಟದಲ್ಲಿ ಮನ್ನಣೆ ಪಡೆದಿರುವ ಕಾರ್ಯಕ್ರಮವಾಗಿದ್ದು, ಎಲ್ಲಾ ದೇಶದ ಕಲಾವಿದರು ಈ ಸಮಾರಂಭದಲ್ಲಿ ಭಾಗವಹಿಸುತ್ತಾರೆ. ಕಾನ್ ಸಿನಿಮೋತ್ಸವಕ್ಕೆ ಕನ್ನಡತಿ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಜ್ಯೂರಿಯಾಗಿ ಭಾಗವಹಿಸುತ್ತಿದ್ದು, ಇದೇ ಕಾರ್ಯಕ್ರಮಕ್ಕೆ ಮತ್ತೊಬ್ಬ ಕನ್ನಡಿಗನ ಎಂಟ್ರಿಯಾಗಿದೆ. ಕಾನ್ ಫಸ್ಟಿವಲ್‌ನಲ್ಲಿ ಕನ್ನಡದ ಕಂಪನ್ನು ಹಾಡಿನ ಮೂಲಕ ಪಸರಿಸಲು ಹೆಸರಾಂತ ಗಾಯಕ ರಘು ದೀಕ್ಷಿತ್ ಭಾಗಿಯಾಗುತ್ತಿದ್ದಾರೆ.

    ಕಾನ್ ಅಂತಹ ಅಂತರಾಷ್ಟೀಯ ಮಟ್ಟದ ಕಾರ್ಯಕ್ರಮದಲ್ಲಿ ಕನ್ನಡ ಹಾಡುಗಳ ಪ್ರದರ್ಶನಕ್ಕೆ ಅವಕಾಶ ಸಿಕ್ಕಿರುವುದು ಕನ್ನಡಗರಿಗೆ ಹೆಮ್ಮೆಯ ವಿಚಾರವಾಗಿದೆ. ಗಾಯಕ, ಗೀತ ರಚನೆಕಾರ ರಘು ದೀಕ್ಷಿತ್ ಕಾನ್ ಫೆಸ್ಟಿವಲ್‌ಗೆ ಸಕಲ ಸಿದ್ಧತೆ ಮಾಡಿಕೊಂಡಿದ್ದಾರೆ. ಮೇ 21ರಂದು ಕಾನ್ ಸಿನಿಮೋತ್ಸವದಲ್ಲಿ ರಘು ದೀಕ್ಷಿತ ಕನ್ನಡ ಹಾಡುಗಳನ್ನು ಹಾಡಲಿದ್ದಾರೆ. ಇದನ್ನೂ ಓದಿ: ಗಂಡು ಮಗುವಿಗೆ ತಾಯಿಯಾದ ನಟಿ ಸಂಜನಾ ಗಲ್ರಾನಿ

    ಇದೇ ಮೊದಲ ಬಾರಿಗೆ ಕಾನ್ ಫೆಸ್ಟಿವಲ್‌ನಲ್ಲಿ ಭಾಗವಹಿಸುತ್ತಿದ್ದು, ದೇಸಿ ಹಾಡುಗಳ ಮೂಲಕ ಗಮನ ಸೆಳೆಯಲಿದ್ದಾರೆ. ಸದ್ಯ ಗಾಯಕ ರಘು ದೀಕ್ಷಿತ್ ಯಾವೆಲ್ಲ ಹಾಡುಗಳನ್ನು ಹಾಡಲಿದ್ದಾರೆ ಎನ್ನುವುದು ಇದೀಗ ಕುತೂಹಲ ಮೂಡಿಸಿದೆ.

  • ತಾಯಿಯ ಸಾವಿನ ನೋವಲ್ಲೂ ವೃತ್ತಿ ಪರತೆ ಮೆರೆದ ರಘು ದೀಕ್ಷಿತ್

    ತಾಯಿಯ ಸಾವಿನ ನೋವಲ್ಲೂ ವೃತ್ತಿ ಪರತೆ ಮೆರೆದ ರಘು ದೀಕ್ಷಿತ್

    ನೆನ್ನೆ (ಫೆ.24)ಯಷ್ಟೇ ರಘು ದೀಕ್ಷಿತ್ ಅವರ ತಾಯಿ ಮೈಸೂರಿನಲ್ಲಿ ನಿಧನ ಹೊಂದಿದ್ದರು. ತಾಯಿಯನ್ನು ಅಪಾರವಾಗಿ ಪ್ರೀತಿಸುತ್ತಿದ್ದ ರಘು, ತಾಯಿಯ ನಿಧನದ ದಿನ ಅವರ ಜತೆ ಇರಲಿಲ್ಲ. ಮೈಸೂರಿನಲ್ಲಿ ತಾಯಿ ಕೊನೆಯುಸಿರೆಳೆದಿದ್ದರೆ, ಅತ್ತ ರಘು ಒಪ್ಪಿಕೊಂಡಿದ್ದ ಕಾರ್ಯಕ್ರಮಕ್ಕಾಗಿ ದುಬೈನಲ್ಲಿದ್ದರು. ವಿಷಯ ತಿಳಿಯುತ್ತಿದಂತೆ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಮೈಸೂರಿಗೆ ಆಗಮಿಸಿದರು. ನೆನ್ನೆಯೇ ತಾಯಿಯ ಅಂತ್ಯ ಸಂಸ್ಕಾರ ಮಾಡಿರುವ ರಘು, ಇವತ್ತು ಮತ್ತೆ ದುಬೈಗೆ ಹಾರುತ್ತಿದ್ದಾರೆ.

    https://twitter.com/Raghu_Dixit/status/1497093549875032070

    ಒಪ್ಪಿಕೊಂಡ ಕಾರ್ಯಕ್ರಮವನ್ನು ರದ್ದುಗೊಳಿಸುವುದು ಕಷ್ಟವಾಗಿದ್ದರಿಂದ, ತಾಯಿ ಕಳೆದುಕೊಂಡ ನೋವಿನಲ್ಲೇ ಅವರು ಸಂಗೀತ ಕಾರ್ಯಕ್ರಮ ನೀಡಲಿದ್ದಾರೆ. ಕೆಲಸದ ಮೂಲಕವೇ ತಾಯಿಗೆ ನಮನ ಸಲ್ಲಿಸುವುದಾಗಿ ಅವರು ಸಂಕಲ್ಪ ಮಾಡಿದ್ದಾರೆ. ಇದನ್ನೂ ಓದಿ : ಪುನೀತ್ ನಿರ್ಮಾಣದ ಫ್ಯಾಮಿಲಿ ಪ್ಯಾಕ್ ಚಿತ್ರ ನಿರ್ದೇಶಕನಿಗೆ ಟಾಲಿವುಡ್ ನಿಂದ ಮೆಗಾ ಆಫರ್

    ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ರಘು, “ತಾಯಿಯ ಸಂತಾಪ ಸಂದೇಶಗಳನ್ನು ಕಳುಹಿಸಿದ ಮತ್ತು ಕರೆ ಮಾಡಿ ಧೈರ್ಯ ತುಂಬಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಅಮ್ಮನ ಅಂತಿಮ ವಿಧಿ ವಿಧಾನಗಳನ್ನು ಕಾವೇರಿ ನದಿಯಲ್ಲಿ ಪೂರ್ಣಗೊಳಿಸಿದ್ದೇನೆ. ಈಗ ಅಮ್ಮನ ಆತ್ಮವು ದೈವಿಕ ಬೆಳಕನ್ನು ಸೇರಿದೆ. ದಿ ಶೋ ಮಸ್ಟ್ ಗೊ ಆನ್” ಎಂದು ಬರೆದುಕೊಂಡಿದ್ದಾರೆ.  ಇದನ್ನೂ ಓದಿ : ಫೆ.27ಕ್ಕೆ ಡಾ.ಅಂಬರೀಶ್ ಸ್ಮಾರಕ ಶಂಕು ಸ್ಥಾಪನೆ : ಸಿಎಂ ಬಸವರಾಜ ಬೊಮ್ಮಾಯಿ ಭಾಗಿ

    ಪ್ರತಿ ವರ್ಷವೂ ರಘು ಆರು ತಿಂಗಳು ಭಾರತದಲ್ಲಿದ್ದರೆ, ಇನ್ನಾರು ತಿಂಗಳು ಬೇರೆ ಬೇರೆ ದೇಶಗಳಲ್ಲಿ ಕಾರ್ಯಕ್ರಮ ಕೊಡಲು ಮೀಸಲಿಡುತ್ತಾರೆ. ಕೋವಿಡ್ ಕಾರಣದಿಂದಾಗಿ ಎರಡು ವರ್ಷಗಳಿಂದ ಅವರು ವಿದೇಶದಲ್ಲಿ ಯಾವುದೇ ಕಾರ್ಯಕ್ರಮ ನೀಡಿರಲಿಲ್ಲ. ಇದೀಗ ತಾನೆ ಕಾರ್ಯಕ್ರಮ ಶುರು ಮಾಡಿದ್ದರು. ಅಷ್ಟರಲ್ಲಿ ಅವರ ಬದುಕಿನಲ್ಲಿ ಇಂಥದ್ದೊಂದು ಘಟನೆ ನಡೆದು ಹೋಗಿದೆ.

  • ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು

    ಖ್ಯಾತ ಗಾಯಕ ರಘು ದೀಕ್ಷಿತ್ ತಾಯಿ ನಿಧನ : ದುಬೈನಲ್ಲಿದ್ದಾರೆ ರಘು

    ಕನ್ನಡ ಖ್ಯಾತ ಸಂಗೀತ ನಿರ್ದೇಶಕ, ಗಾಯಕ ರಘು ದೀಕ್ಷಿತ್ ಅವರ ತಾಯಿ ನಿಧನರಾಗಿದ್ದಾರೆ. ಕೆಲ ತಿಂಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ : ಶಿವರಾಜ್ ಕುಮಾರ್ ಭೇಟಿಯಾದ ಜಗ್ಗೇಶ್

    ಇತ್ತ ತಾಯಿ ನಿಧನರಾಗಿದ್ದರೆ, ಅತ್ತ ರಘು ದೀಕ್ಷಿತ್ ಕಾರ್ಯಕ್ರಮ ನೀಡಲು ದುಬೈಗೆ ತೆರೆಳಿದ್ದರು. ಸುದ್ದಿ ತಿಳಿಯುತ್ತಿದ್ದಂತೆಯೇ ನಿಗದಿಯಾಗಿದ್ದ ಕಾರ್ಯಕ್ರಮವನ್ನು ಮೊಟಕುಗೊಳಿಸಿ ಭಾರತದತ್ತ ಆಗಮಿಸುತ್ತಿದ್ದಾರೆ. ಬೆಂಗಳೂರಿನಲ್ಲಿಯೇ ಇರುವ ರಘು ಅವರ ಸಹೋದರ, ಗಾಯಕ ವಾಸು ದೀಕ್ಷಿತ್ ಮತ್ತು ವಾಸು ಪತ್ನಿ ಬಿಂದು ಮಾಲಿನ ರಘು ಅವರ ನಿವಾಸದತ್ತ ಹೊರಟಿದ್ದಾರೆ.

  • ಹಿತವಾಗಿದೆ ‘ನಿನ್ನ ಸನಿಹಕೆ’ ಟೈಟಲ್ ಟ್ರ್ಯಾಕ್ – ಮತ್ತೆ ಮೋಡಿ ಮಾಡಿದ ರಘು ದೀಕ್ಷಿತ್ ಸಂಗೀತ

    ಹಿತವಾಗಿದೆ ‘ನಿನ್ನ ಸನಿಹಕೆ’ ಟೈಟಲ್ ಟ್ರ್ಯಾಕ್ – ಮತ್ತೆ ಮೋಡಿ ಮಾಡಿದ ರಘು ದೀಕ್ಷಿತ್ ಸಂಗೀತ

    ಒಂದೊಂದೇ ಹಾಡುಗಳ ಮೂಲಕ ಎಲ್ಲರ ಮನಸ್ಸಿಗೂ ಹತ್ತಿರವಾಗುತ್ತಿರುವ ಬಹು ನಿರೀಕ್ಷಿತ ಚಿತ್ರ ‘ನಿನ್ನ ಸನಿಹಕೆ’. ಇದೀಗ ಚಿತ್ರತಂಡ ಮತ್ತೊಂದು ಮೆಲೋಡಿ ಹಾಡನ್ನು ಬಿಡುಗಡೆ ಮಾಡಿ ಕೇಳುಗ ಪ್ರಿಯರ ಮನಸೂರೆ ಮಾಡಿದೆ. ಚಿತ್ರದ ನಿನ್ನ ಸನಿಹಕೆ ಟೈಟಲ್ ವಿಡಿಯೋ ಹಾಡು ಬಿಡುಗಡೆಯಾಗಿ ಎಲ್ಲರ ಮನಸೂರೆಗೊಳ್ಳುತ್ತಿದೆ.

    ರಘು ದೀಕ್ಷಿತ್ ಮ್ಯೂಸಿಕ್ ಮ್ಯಾಜಿಕ್‍ನಲ್ಲಿ ಅರಳಿರೋ ನಿನ್ನ ಸನಿಹಕೆ ಟೈಟಲ್ ಟ್ರ್ಯಾಕ್ ಕೇಳುಗರ ಮನಸ್ಸಿಗೆ ಬಹಳ ಹತ್ತಿರವಾಗಿದ್ದು, ಸಿನಿಮಾಟೋಗ್ರಾಫರ್ ಅಭಿಲಾಶ್ ಕಲತಿ ಅಷ್ಟೇ ಸುಂದರವಾಗಿ ಹಾಡನ್ನು ಸೆರೆ ಹಿಡಿದಿದ್ದಾರೆ. ವಾಸುಕಿ ವೈಭವ್ ಸಾಹಿತ್ಯ ಕೃಷಿಯಲ್ಲಿ ಅರಳಿರುವ ಈ ಹಾಡಿಗೆ ಸಂಜಿತ್ ಹೆಗ್ಡೆ, ಶೃತಿ.ವಿ.ಎಸ್ ದನಿಯಾಗಿದ್ದಾರೆ.

    ಈಗಾಗಲೇ ಬಿಡುಗಡೆಯಾಗಿರುವ ಈ ಚಿತ್ರದ ಎರಡೂ ಹಾಡುಗಳು ಸೂಪರ್ ಹಿಟ್ ಆಗಿದ್ದು, ಟೈಟಲ್ ಟ್ರ್ಯಾಕ್ ಕೂಡ ಎಲ್ಲರ ಗಮನ ಸೆಳೆಯುತ್ತಿದೆ. ಲವ್ ಮಾಕ್ಟೇಲ್ ಚಿತ್ರದಲ್ಲಿ ಒಂದಕ್ಕಿಂತ ಒಂದು ಹಿಟ್ ಸಾಂಗ್ ನೀಡಿ ಕಮಾಲ್ ಮಾಡಿದ್ದ ಸಂಗೀತ ನಿರ್ದೇಶಕ ರಘು ದೀಕ್ಷಿತ್ ನಿನ್ನ ಸನಿಹಕೆ ಚಿತ್ರದ ಮೂಲಕ ಮತ್ತೊಂದು ಸೂಪರ್ ಡೂಪರ್ ಆಲ್ಬಂ ನೀಡೋದ್ರಲ್ಲಿ ಡೌಟೇ ಇಲ್ಲ ಎನ್ನುವಷ್ಟರ ಮಟ್ಟಿಗೆ ಹಾಡುಗಳು ಸೊಗಸಾಗಿ ಮೂಡಿ ಬರುತ್ತಿವೆ.

    ‘ನಿನ್ನ ಸನಿಹಕೆ’ ರೋಮ್ಯಾಂಟಿಕ್ ಕಾಮಿಡಿ ಸಿನಿಮಾವಾಗಿದ್ದು, ಈ ಚಿತ್ರದ ಮೂಲಕ ನಟ ಸೂರಜ್ ಗೌಡ ನಟನೆ ಜೊತೆ ಸಿನಿಮಾ ನಿರ್ದೇಶಕನಾಗಿಯೂ ಬಡ್ತಿಪಡೆಯುತ್ತಿದ್ದಾರೆ. ಸೂರಜ್ ಗೌಡ ಜೋಡಿಯಾಗಿ ಧನ್ಯ ರಾಮ್‍ಕುಮಾರ್ ಸ್ಕ್ರೀನ್ ಶೇರ್ ಮಾಡಿದ್ದಾರೆ.

    ವೈಟ್ ಅಂಡ್ ಗ್ರೇ ಪಿಕ್ಷರ್ಸ್ ಬ್ಯಾನರ್‍ನಡಿ ಅಕ್ಷಯ್ ರಾಜ್ ಶೇಖರ್, ರಂಗನಾಥ್ ಕುಡ್ಲಿ ‘ನಿನ್ನ ಸನಿಹಕೆ’ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.