Tag: ರಘು ಗೌಡ

  • ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಬಿಗ್ ಬಾಸ್ ಸೀಸನ್ 9ರ (Bigg Boss Kannada 9) ಶೋಗೆ ತೆರೆಬಿದ್ದಿದೆ. ಈ ಕಾರ್ಯಕ್ರಮ ಮುಗಿದು ಈಗಾಗಲೇ 15 ದಿನಗಳಾಗಿದೆ. ಈ ಬೆನ್ನಲ್ಲೇ ದಿವ್ಯಾ ಉರುಡುಗ (Divya Uruduga) ಮತ್ತು ಅರವಿಂದ್ (Aravind Kp) ಜೋಡಿ ಸೀಸನ್ 8ರ ವೈಷ್ಣವಿ, ರಘು ಗೌಡ ಅವರನ್ನ ಮೀಟ್ ಮಾಡಿದ್ದಾರೆ. ಸದ್ಯ ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡ್ತಿದೆ.

    ದೊಡ್ಮನೆಯ ಆಟ ಸೀಸನ್ 9ರಲ್ಲೂ ದಿವ್ಯಾ ಉರುಡುಗ ಪ್ರವೀಣರ ಪೈಕಿ ಒಬ್ಬರಾಗಿ ಗುರುತಿಸಿಕೊಂಡಿದ್ದರು. ಟಾಪ್ 5 ಫೈನಲಿಸ್ಟ್‌ಗಳಲ್ಲಿ ಒಬ್ಬರಾಗಿದ್ದರು. 5ನೇ ರನ್ನರ್ ಅಪ್ ಆಗಿ ಹೊರಬಂದಿದ್ದರು. ಇದೀಗ ಬಿಗ್ ಬಾಸ್ ಶೋಗೆ ತೆರೆ ಬಿದ್ದಿದೆ. ದಿವ್ಯಾ ಉರುಡುಗ ಫುಲ್ ರಿಲಾಕ್ಸ್ ಮೂಡ್‌ನಲ್ಲಿದ್ದಾರೆ. ಇದನ್ನೂ ಓದಿ: 15 ದಿನಗಳಿಂದ ಸುಧಾರಾಣಿ ಮನೆ ಶ್ವಾನ ನಾಪತ್ತೆ: ಬಿಬಿಎಂಪಿ ವಿರುದ್ಧ ನಟಿ ಗರಂ

    ಈ ಹಿಂದಿನ ಬಿಗ್ ಬಾಸ್ 8ರಲ್ಲಿ (Bigg Boss Kannada 8) ಪರಿಚಯವಾಗಿ ಸ್ಪರ್ಧಿಗಳ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ವೈಷ್ಣವಿ ಗೌಡ (Vaishnavi Gowda) ಮತ್ತು ರಘು ಗೌಡ (Raghu Gowda)  ಅವರನ್ನ ದಿವ್ಯಾ ಮತ್ತು ಅರವಿಂದ್ ಕೆ.ಪಿ ಜೋಡಿ ಭೇಟಿಯಾಗಿದ್ದಾರೆ. ಒಟ್ಟಿಗೆ ಮೋಜು ಮಸ್ತಿ ಮಾಡಿದ್ದಾರೆ. ಒಟ್ಟಾಗಿ ಒಂದೊಳ್ಳೆಯ ಸಮಯವನ್ನ ಕಳೆದಿದ್ದಾರೆ.

    ಬಿಗ್ ಬಾಸ್ ಶೋ ಮುಗಿದ ಮೇಲೂ ಕೂಡ ಆ ಸ್ನೇಹವನ್ನ ಮುಂದುವರೆಸಿಕೊಂಡು ಹೋಗಿರೋದನ್ನ ನೋಡಿ ವೈಷ್ಣವಿ, ರಘು, ದಿವ್ಯಾ, ಅರವಿಂದ್‌ಗೆ ಫ್ಯಾನ್ಸ್ ಮೆಚ್ಚುಗೆ ಸೂಚಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಒಂಟಿಮನೆಯಲ್ಲಿ ಶುರುವಾಯ್ತು ವೈಷ್ಣವಿ, ರಘು ಕುಚುಕುಚು

    ಒಂಟಿಮನೆಯಲ್ಲಿ ಶುರುವಾಯ್ತು ವೈಷ್ಣವಿ, ರಘು ಕುಚುಕುಚು

    ಬಿಗ್ ಬಾಸ್ ಮನೆಯಲ್ಲಿ ಅರವಿಂದ್, ದಿವ್ಯಾ ಉರುಡುಗ ಕುರಿತಾಗಿ ದೊಡ್ಡ ಚರ್ಚೆ ನಡೆಯುತ್ತಿದೆ. ಅವರ ರೀತಿ ನಾವು ಕುಚುಕುಚು ಮಾಡೋಣ ಅಂತ ರಘು ಗೌಡ ಅವರು ವೈಷ್ಣವಿಗೆ ಹೇಳಿದ್ದಾರೆ.

    ಬಿಗ್ ಬಾಸ್ ಮನೆಯಲ್ಲಿ ಪ್ರತಿದಿನ ಒಂದಲ್ಲ ಒಂದು ಟಾಸ್ಕ್ ನೀಡಲಾಗುತ್ತದೆ. ಅಂತೆಯೇ ಹಾಸ್ಟೆಲ್ ಜೀವನಕ್ಕೆ ಸಂಬಂಧಪಟ್ಟಂತೆ ಟಾಸ್ಕ್ ನೀಡಲಾಗಿತ್ತು. ಹುಡುಗರ ಹಾಸ್ಟೆಲ್, ಹುಡುಗಿಯರ ಹಾಸ್ಟೆಲ್ ಎಂದು ವಿಭಾಗಿಸಿ ಅದಕ್ಕೆ ವಾರ್ಡನ್ ಕೂಡ ಮಾಡಲಾಗಿತ್ತು. ಹಾಸ್ಟೆಲ್‍ನಲ್ಲಿ ನಡೆಯುವಂತೆ ಹುಡುಗರು, ಹುಡುಗಿಯರು ನಡೆದುಕೊಳ್ಳಬೇಕಾಗಿತ್ತು. ಆಗ ಕೆಪಿ ಅರವಿಂದ್, ದಿವ್ಯಾ ಇನ್ನಷ್ಟು ಹತ್ತಿರವಾಗಿದ್ದಾರೆ. ಇವರನ್ನು ನೋಡಿದ ರಘು ವೈಷ್ಣವಿಗೆ ನಾವು ಹಾಗೇ ಕುಚುಕುಚು ಮಾಡುವ ಎಂದು ಹೇಳಿದ್ದಾರೆ.

    ದಿವ್ಯಾ , ಅರವಿಂದ್ ಪಕ್ಕಾ ಪ್ರೇಮಿಗಳು ಎಂಬಂತೆ ಮಾತನಾಡಿಕೊಂಡು ವರ್ತಿಸುತ್ತಿದ್ದಾರೆ. ಇದನ್ನು ರಘು ಗೌಡ ಹಾಗೂ ವೈಷ್ಣವಿ ನೋಡಿದ್ದಾರೆ. ಆಗ ನಾವು ಅದನ್ನೇ ಮಾಡೋಣ ಎಂದು ಹೇಳಿದ್ದಾರೆ. ಆಗ ವೈಷ್ಣವಿ ನಾವು ಹಾಗೇ ಮಾಡಲು ಸಾಧ್ಯವಿಲ್ಲ, ವಾರ್ಡನ್ ನೋಡಿದ್ರೆ ಬೈಯ್ತಾರೆ ಎಂದು ಹೇಳಿದ್ದಾರೆ. ಈ ವೇಳೆ ಕ್ಯಾಮೆರಾ ಇದೆ ಅಂತಾನಾ? ಎಂದು ಹೇಳಿದ್ದಾರೆ. ಈ ವೇಳೆ ವೈಷ್ಣವಿ ಜೋರಾಗಿ ನಕ್ಕಿದ್ದಾರೆ.

    ನಿಮ್ಮದು ಯಾವ ಊರು, ಇವತ್ತು ಯಾಕೆ ನನ್ನ ಜೊತೆ ಮಾತನಾಡ್ತಿದ್ದೀರಾ? ಎಂದು ವೈಷ್ಣವಿ ಅವರಿಗೆ ರಘು ಹೇಳಿದ್ದಾರೆ. ಈ ವೇಳೆ ವೈಷ್ಣವಿ ನಗುತ್ತಲೇ ಮಾತನಾಡಿದ್ದಾರೆ. ಬಿಗ್‍ಬಾಸ್ ನೀಡಿರುವ ಟಾಸ್ಕ್ ಮಾತ್ರ ಸಖತ್ ಮಜಾವನ್ನು ಕೊಟ್ಟಿದ್ದಂತೂ ಹೌದು. ಸ್ಪರ್ಧಿಗಳು ತಮ್ಮ ಪಾತ್ರಗಳನ್ನು ನಿರ್ವಹಿಸುತ್ತಾ ಮಜಾವನ್ನು ಕೊಡುತ್ತಿದ್ದಾರೆ.

  • ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ವೈಯಕ್ತಿಕ ವಿಷಯ ಇಟ್ಟುಕೊಂಡು ರಘು, ಚಕ್ರವರ್ತಿ ಕಿತ್ತಾಟ

    ಬಿಗ್‍ಬಾಸ್ ಮನೆಯಲ್ಲಿ ದಿನಕ್ಕೊಂದು ವಿಶೇಷ ಸುದ್ದಿಗಳಿರುತ್ತವೆ. ಜಗಳ, ಗಾಸಿಪ್, ಡ್ರಾಮಾ, ಗುಸು ಗುಸು ಇರುತ್ತವೆ. ವೈಲ್ಡ್‍ಕಾರ್ಡ್ ಮೂಲಕವಾಗಿ ಎಂಟ್ರಿಕೊಟ್ಟ ಚಕ್ರವರ್ತಿ ಚಂದ್ರಚೂಡ್ ಮೊದಲಿನಿಂದಲೂ ಒಂದಲ್ಲಾ ಒಂದು ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಇದೀಗ ಆಟದ ವಿಚಾರವಾಗಿ ರಘು ಮತ್ತು ಚಕ್ರವರ್ತಿ ನಡುವೆ ಡೊಡ್ಡ ಜಗಳವೇ ಆಗಿದೆ.

    ಚಕ್ರವರ್ತಿ ಚಂದ್ರಚೂಡ್ ಹಾಗೂ ರಘು ಗೌಡ ಅವರು ವೈಯಕ್ತಿಕ ವಿಷಯ ಇಟ್ಟುಕೊಂಡು ಜಗಳ ಆಡಿದ್ದಾರೆ. ರಘು ಮಾತು ಕೇಳಿ ಕೋಪಗೊಂಡ ಚಕ್ರವರ್ತಿ ಅವರು ಇನ್ಮುಂದೆ ಯಾರಿಗೂ ಸಹಾಯ ಮಾಡೋದಿಲ್ಲ ಎಂದಿದ್ದಾರೆ.

    ಬಿಗ್‍ಬಾಸ್ ನೀಡಿರುವ ಟಾಸ್ಕ್‍ನಲ್ಲಿ ಯಾರು ಏಜೆಂಟ್ ಅಂತ ದೊಡ್ಡ ಚರ್ಚೆ ನಡೆಯುತ್ತಿದೆ. ಅದರ ಜೊತೆಗೆ ಆಟವನ್ನು ಗೆಲ್ಲಬೇಕು. ಇಲ್ಲಿ ಆಟ ಗೆಲ್ಲಿಸುವವರೂ ಇದ್ದಾರೆ, ಸೋಲಿಸುವವರೂ ಇದ್ದಾರೆ. ಆ ವೇಳೆ ಚಕ್ರವರ್ತಿ ಚಂದ್ರಚೂಡ್ ಅವರು ಏಜೆಂಟ್ ಆಗಿ ಆಟ ಹಾಳು ಮಾಡಿದ್ದಾರೆ ಎಂಬ ಆರೋಪವನ್ನು ರಘು ಮಾಡಿದ್ದಾರೆ. ಈ ವಿಚಾರವಾಗಿ ಇಬ್ಬರ ನಡುವೆ ಜಗಳವಾಗಿದೆ.

    ಚಕ್ರವರ್ತಿ ಅವರು ಸೈಕಲಾಜಿಕಲ್ ಆಗಿ ಆಟ ಆಡಿದ್ದಾರೆ ಅಂತ ರಘು ಆರೋಪ ಮಾಡಿದ್ದಾರೆ. ರಘು ಮಾತ್ರ ಯಾರಿಗೂ ಸಪೋರ್ಟ್ ಮಾಡಲಿಲ್ಲ ಅಂತ ಚಕ್ರವರ್ತಿ ಹೇಳಿದ್ದಾರೆ. ವೈಷ್ಣವಿಯಂತೆ ಚಕ್ರವರ್ತಿ ಅವರಿಗೆ ಫಿಟ್‍ನೆಸ್ ಇದೆ ಅಂತ ರಘು ನಂಬಿದ್ದೇನು. ಆದರೂ ಆಟ ಆಡಲಿಲ್ಲ ಹೀಗಾಗಿ ಚಕ್ರವರ್ತಿ ಅವರೇ ಏಜೆಂಟ್ ಅಂತ ರಘು ಹೇಳಿದ್ದಾರೆ.

    ನಾನು ಸಹಾಯ ಮಾಡಿದ್ದು ತಪ್ಪೇ? ಎಷ್ಟು ನೀಚ ಆಟ ಆಡ್ತಿದ್ದೀಯಾ? ವೈಯಕ್ತಿಕವಾಗಿ ಯಾಕೆ ವಿಷಯ ತರುತ್ತಿದೀಯಾ? ಸೈಕಾಲಜಿ, ಕೌನ್ಸಿಲಿಂಗ್ ಮಾಡಿದ್ದು ವೈಯಕ್ತಿಕವಾದ ವಿಷಯ. ವೈಯಕ್ತಿಕವಾಗಿ ಸಹಾಯ ಮಾಡಿದ್ದಕ್ಕೆ, ಆಟದಲ್ಲಿ ಸಹಾಯ ಮಾಡಿದ್ದಕ್ಕೆ ಮೋಸ ಅಂದರೆ ನಾನು ಏನು ಮಾಡೋಕೆ ಆಗಲ್ಲ ಎಂದು ಚಕ್ರವರ್ತಿ ಹೇಳಿದ್ದಾರೆ. ಈ ವೇಳೆ ಅಲ್ಲಿಯೇ ಇದ್ದ ಅರವಿಂದ್ ಮತ್ತು ವಿಶ್ವನಾಥ್ ಮಧ್ಯಪ್ರವೇಶಿಸಿ ಸುಮ್ಮನಾಗಿಸಲು ಪ್ರಯತ್ನಿಸಿದರೂ ಸಾಧ್ಯವಾಗಿಲ್ಲ.

    ವೈಯಕ್ತಿಕವಾಗಿ ವಿಷಯ ಎತ್ತಬೇಡಿ, ಪರ್ಸನಲ್ ಮ್ಯಾಟರ್ ಎತ್ತಬೇಡಿ, ಸರಿ ಅಲ್ಲ, ನಾನು ಪರ್ಸನಲ್ ಮ್ಯಾಟರ್ ಎತ್ತಿದ್ದು ತಪ್ಪು. ನೀವು ಏಜೆಂಟ್ ಅಲ್ಲ ಅಂತ ನಿರೂಪಿಸಿ ಅಂತ ರಘು ಗೌಡ ಹೇಳಿದ್ದಾರೆ. ನನ್ನ ಜೀವನದಲ್ಲಿ ನಾನು ಯಾರಿಗೂ ಸಹಾಯ ಮಾಡಲ್ಲ. ಇದು ನಾನು ಕಲಿತ ಪಾಠ ಅಂತ ಚಕ್ರವರ್ತಿ ಚಂದ್ರಚೂಡ್ ಹೇಳಿದ್ದಾರೆ.

    ಬಿಗ್‍ಬಾಸ್‍ಮನೆಯ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರ ಸುದ್ದಿಯಾಗುತ್ತಲೇ ಇರುತ್ತಾರೆ. ಸಣ್ಣ ಪುಟ್ಟ ವಿಚಾರಗಳನ್ನು ಡೊಡ್ಡದಾಗಿ ಮಾಡುಕೊಂಡು ಅವರಿಗೆ ಅನ್ನಿಸಿದ ಮಾತುಗಳನ್ನಾಡುತ್ತಾ ಸುದ್ದಿಯಾಗುವ ಒಂಟಿಮನೆಯ ಸ್ಪರ್ಧಿಗಳ ಹಿಂದೆ ನಿಂತು ಆಟ ಆಡುಸುತ್ತಿರುವವರು ಬಿಗ್‍ಬಾಸ್.

  • ದಿವ್ಯಾ-ರಘು ನೋಡಿ ಕಟಕಟ ಹಲ್ಲು ಕಡಿದಿದ್ದೇಕೆ ಮಂಜು?

    ದಿವ್ಯಾ-ರಘು ನೋಡಿ ಕಟಕಟ ಹಲ್ಲು ಕಡಿದಿದ್ದೇಕೆ ಮಂಜು?

    ಬಿಗ್‍ಬಾಸ್ ಮನೆ ಅಂದ್ರೆ ಫುಲ್ ಸೆಕ್ಯೂರ್ ಇರುತ್ತೆ. ಕಂಟೆಸ್ಟೆಂಟ್ ಗೆ ಏನೇ ತೊಂದ್ರೆ ಆದ್ರು ಬಿಗ್ ಬಾಸ್ ಇರ್ತಾರೆ. ಮನೆ ತುಂಬಾ ಕ್ಯಾಮೆರಾಗಳಿವೆ. ಅಲ್ಲದೇ ಮನೆಯ ಕಂಟೆಸ್ಟೆಂಟ್ ಎಲ್ಲರೂ ಒಟ್ಟಾಗಿ ಇರ್ತಾರೆ. ಹೀಗಿರುವಾಗ ಬಿಗ್‍ಬಾಸ್ ಸೀಸನ್-8ರಲ್ಲಿ ಪ್ರಾಣ ಬೆದರಿಕೆ ಆಪಾದನೆಯೊಂದು ಕೇಳಿ ಬಂದಿದೆ. ಒಂಟಿ ಮನೆಯ ಸ್ಟ್ರಾಂಗೆಸ್ಟ್ ಕಂಟೆಸ್ಟೆಂಟ್ ಎನಿಸಿಕೊಂಡಿರುವ ದಿವ್ಯಾ ಉರುಡುಗ ಹಾಗೂ ರಘು ಗೌಡಗೆ ಪ್ರಾಣ ಬೆದರಿಕೆ ಹಾಕಲಾಗಿದೆ. ಅಷ್ಟಕ್ಕೂ ಇವರಿಬ್ಬರಿಗೆ ಪ್ರಾಣ ಬೆದರಿಕೆ ಹಾಕಿರೋದು ಬೇರೆ ಯಾರೂ ಅಲ್ಲ ಬಿಗ್ ಮನೆಯ ಮತ್ತೊಬ್ಬ ಕಂಟೆಸ್ಟೆಂಟ್.

    ಬಿಗ್ ಬಾಸ್, ಮಾತುಗಾರ ಚಟುವಟಿಕೆ ವೇಳೆ ಹೆಚ್ಚಾಗಿ ಮಾತನಾಡುವ ಕಂಟೆಸ್ಟೆಂಟ್ ಲ್ಯಾಗ್ ಮಂಜುಗೆ ಮುಂದಿನ ಆದೇಶ ಬರುವವರೆಗೂ ಮಾತನಾಡದಂತೆ ಆದೇಶ ನೀಡಿದ್ದರು. ಅವರು ಯಾರ ಬಳಿಯಾದ್ರೂ ಏನೇ ಮಾತಾಡಬೇಕು ಅಂದ್ರೂ ವೈಷ್ಣವಿ ಮೂಲಕ ಸನ್ನೆ ಸೂಚನೆ ಮಾತನಾಡಬೇಕು ಎಂದು ಬಿಗ್ ಬಾಸ್ ಹೇಳಿದ್ದರು. ಹೀಗಾಗಿ ಮಂಜು ಯಾರ ಬಳಿಯೂ ಮಾತನಾಡುತ್ತಿರಲಿಲ್ಲ. ಇದನ್ನೇ ಇಟ್ಕೊಂಡು ಮನೆಯ ಕೆಲ ಕಂಟೆಸ್ಟೆಂಟ್ ಮಂಜು ಕಾಲೆಳೆಯುತ್ತಿದ್ದರು.

    ನಿನ್ನೆ ಗಾರ್ಡನ್ ಏರಿಯಾದಲ್ಲಿ ದಿವ್ಯಾ ಉರುಡುಗ, ರಘು, ಅರವಿಂದ್, ಲ್ಯಾಗ್ ಮಂಜು ಹಾಗೂ ವಿಶ್ವ ಕುಳಿತುಕೊಂಡಿದ್ದರು. ಈ ವೇಳೆ ದಿವ್ಯಾ ಮಂಜುಗೆ ಹೀಯಾಳಿಸುತ್ತಿದ್ದರು. ನೀನು ಕುಳಿತುಕೊಳ್ಳೋ ಸ್ಟೈಲ್ ತುಂಬಾ ಚೆನ್ನಾಗಿದೆ.. ಹಾಗೇ ಹೀಗೆ ಅಂತಾ ಟೀಸ್ ಮಾಡ್ತಿದ್ದರು. ಆಗ ಮಂಜು, ಅಲ್ಲಿಯೇ ಇದ್ದ ಮರಳಿನ ಮೇಲೆ ನಿಮಗೆ ಐತಿ ಎಂದು ಬರೆದರು. ಆಗ ರಘು, ಬಿಗ್ ಬಾಸ್ ನಮ್ಮ ಜೀವಕ್ಕೆ ಅಪಾಯವಿದೆ ಎಂದು ಹೇಳ್ತಿದ್ದಂತೆ ದಿವ್ಯಾ ಉರುಡುಗ, ಬಿಗ್ ಬಾಸ್ ಪ್ರಾಣ ಬೆದರಿಕೆ ಹಾಕ್ತಿದ್ದಾರೆ ಎಂದು ಮಂಜು ಬಗ್ಗೆ ಆರೋಪ ಮಾಡಿದರು.

    ಅಷ್ಟರಲ್ಲಿ ವೈಷ್ಣವಿ ಎಂಟ್ರಿ ಕೊಡ್ತಾರೆ ಆಗ ಮಂಜು ವೈಷ್ಣವಿ ಮೂಲಕ ಮಾತಾಡಿಸ್ತಾರೆ. ರಘು ದಿವ್ಯಾ ಮುಗಿಸಿಬೇಡ್ತೇನೆ. ತಿಂದು ಹಾಕ್ತೇನೆ ಎಂದು ಮಂಜು ಸನ್ನೆ ಮಾಡ್ತಾರೆ. ಆಗ ವೈಷ್ಣವಿ ಅವರೇನು ಕಡಲೇ ಕಾಯಿ ತಿನ್ನೋದಿಕ್ಕೆ ಎಂದು ಕಾಮಿಡಿ ಮಾಡ್ತಾರೆ. ಕಟಕಟ ಹಲ್ಲು ಕಡಿಯುತ್ತಾ ಮಂಜು ದಿವ್ಯಾ ಉರುಡುಗ ಹಾಗೂ ರಘು ಗೌಡ ಸೀಳಿ ಬೆಂಕಿಗೆ ಹಾಕುತ್ತೇನೆ ಎಂದು ಸನ್ನೆ ಮಾಡ್ತಾರೆ. ಆಗ ದಿವ್ಯಾ ಉರುಡುಗ, ಬಿಗ್ ಬಾಸ್ ನನ್ನ ಜೀವಕ್ಕೆ ಏನಾದ್ರೂ ಆದ್ರೆ ಮಂಜು ಕಾರಣ ಅಂತಾ ಹೇಳಿ ಜೋರಾಗಿ ನಕ್ಕಿದರು. ಒಟ್ನಲ್ಲಿ ಮಂಜು ಮಾತಾಡದೇ ಇದ್ರೂ ತಮ್ಮ ಆ?ಯಕ್ಷನ್ ಮೂಲಕವೇ ಸಖತ್ ಕಾಮಿಡಿ ಮಾಡ್ತಾ ಮನೆಯವರನ್ನು ನಗಿಸುವ ಪ್ರಯತ್ನ ಮಾಡಿದ್ದಂತೂ ಸುಳ್ಳಲ್ಲ.