ಉಡುಪಿ: ಅಯೋಧ್ಯೆ (Ayodhya) ಬಾಲರಾಮ ಪ್ರತಿಷ್ಠಾಪನೆಯ ಮಂಡಲೋತ್ಸವ ಕಾರ್ಯಕ್ರಮ ನಡೆಯುತ್ತಿದೆ. ಉಡುಪಿಯ (Udupi) ಪೇಜಾವರ ಮಠಾಧೀಶ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ 48 ದಿನಗಳ ಕಾಲದ ಮಂಡಲ ಉತ್ಸವದ ನೇತೃತ್ವ ವಹಿಸಿದ್ದಾರೆ. ಪ್ರತಿದಿನ ಅಭಿಷೇಕ ಹೋಮ ಹವನ ನಡೆಯುತ್ತಿದೆ. ಫೆಬ್ರವರಿ 7ರ ನಂತರ ಬಾಲರಾಮನಿಗೆ ತೊಟ್ಟಿಲು ಸೇವೆ (Cradle Service) ನಡೆಯಲಿದೆ.
ಅಯೋಧ್ಯೆ ಶ್ರೀರಾಮಮಂದಿರದಲ್ಲಿ (Ram Mandir) ಪೇಜಾವರ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ನೇತೃತ್ವದಲ್ಲಿ ಮಂಡಲೋತ್ಸವ ನಡೆಯುತ್ತಿದೆ. ಪ್ರತಿದಿನ ಅಭಿಷೇಕ, ಹೋಮ ಹವನ, ಪಲ್ಲಕ್ಕಿ ಸೇವೆಗಳನ್ನು ಬಾಲರಾಮನಿಗೆ ಸಮರ್ಪಿಸಲಾಗುತ್ತಿದೆ. ಈ ನಡುವೆ ಅಯೋಧ್ಯೆಯ ಶ್ರೀರಾಮನ ತೊಟ್ಟಿಲು ಸೇವೆಗೆ ಕಾಷ್ಠಶಿಲ್ಪದಲ್ಲಿ ನಿರ್ಮಿಸಲಾದ ತೊಟ್ಟಿಲನ್ನು ಉಡುಪಿಯ ಮಾಜಿ ಶಾಸಕ ರಘುಪತಿ ಭಟ್ (Raghupathi Bhat) ಸಮರ್ಪಿಸಲಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!
ಉಡುಪಿ: ಹಿಂದೂ (Hindu) ಎಂದರೆ ಅದೊಂದು ಜೀವನ ಪದ್ಧತಿ. ಆ ಪದ್ಧತಿಯಲ್ಲಿ ಮುಸ್ಲಿಮರು, ಕ್ರಿಶ್ಚಿಯನ್ನರು ಎಲ್ಲರೂ ಬರುತ್ತಾರೆ. ಹಿಂದೂ ಎಂದರೆ ಭಾರತವನ್ನು ಪ್ರೀತಿಸುವ ಮತ್ತು ಭಾರತವನ್ನು ಮಾತೃಭೂಮಿ ಎಂದು ಒಪ್ಪಿದ ಎಲ್ಲರೂ ಒಳಗೊಳ್ಳುತ್ತಾರೆ ಎಂದು ಮಾಜಿ ಶಾಸಕ ಕೆ.ರಘುಪತಿ ಭಟ್ (Raghupati Bhat) ಹೇಳಿದ್ದಾರೆ.
ಉಡುಪಿಯಲ್ಲಿ (Udupi) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತ ಹಿಂದೂ ರಾಷ್ಟ್ರವಾಗಲು ಸಾಧ್ಯವಿಲ್ಲ ಎಂಬ ಸಿಎಂ ಸಿದ್ದರಾಮಯ್ಯ (Siddaramaiah) ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ್ದಾರೆ. ಸಿದ್ದರಾಮಯ್ಯನವರ ಹೇಳಿಕೆ ಅಜ್ಞಾನ ಪ್ರದರ್ಶಿಸುತ್ತದೆ. ಭಾರತವೇ ಶ್ರೇಷ್ಠ ಎಂದು ಭಾವಿಸುವವರೆಲ್ಲ ಹಿಂದೂಗಳು. ಯಾರು ಕೂಡ ಹಿಂದೂ ರಾಷ್ಟ್ರ ಮಾಡಲು ಬಿಡಲ್ಲ ಎಂದು ಹೇಳುವ ಪ್ರಶ್ನೆ ಬರುವುದಿಲ್ಲ. ಭಾರತವನ್ನು ಯಾವಾಗಲೂ ಹಿಂದುಸ್ಥಾನ ಎಂದು ಕರೆಯಲಾಗುತ್ತದೆ. ಇದು ಹಿಂದೂ ರಾಷ್ಟ್ರ, ಆ ಶಬ್ದವನ್ನು ಸಿದ್ದರಾಮಯ್ಯನವರು ಸರಿಯಾಗಿ ಅರ್ಥೈಸಿಕೊಂಡಿಲ್ಲ ಎಂದು ಅವರು ತಿರುಗೇಟು ಕೊಟ್ಟಿದ್ದಾರೆ. ಇದನ್ನೂ ಓದಿ: ಮಾಸ್ಕ್ ಕಡ್ಡಾಯ ಇಲ್ಲ: ಸಿದ್ದರಾಮಯ್ಯ
ಸಿದ್ದರಾಮಯ್ಯನವರ ಹೇಳಿಕೆ ರಾಜಕೀಯ ತಂತ್ರ ಅಷ್ಟೇ. ಅಲ್ಪಸಂಖ್ಯಾತರ ಮತಗಳನ್ನು ಸೆಳೆಯಲು ಹಿಂದೂಗಳನ್ನು ದೂಷಿಸುತ್ತಾರೆ. ಹಿಂದೂ ಜೀವನ ಪದ್ಧತಿ ಎಂದು ನಮಗೆ ಸಂಘಟನೆಗಳು ಹೇಳಿಕೊಟ್ಟಿವೆ. ಧರ್ಮ ಧರ್ಮಗಳ ಬಗ್ಗೆ ಭೇದ ಭಾವ ಮಾಡುವುದು ಸಿದ್ದರಾಮಯ್ಯನವರ ರಾಜಕಾರಣ ಎಂದು ಅವರು ಕಿಡಿಕಾರಿದ್ದಾರೆ.
ಉಡುಪಿ: 15 ವರ್ಷಗಳ ಹಿಂದೆ ನಡೆದ ಉಡುಪಿ ಮಾಜಿ ಶಾಸಕ ಕೆ.ರಘುಪತಿ ಭಟ್ (Raghupathi Bhat) ಅವರ ಪತ್ನಿ ಪದ್ಮಪ್ರಿಯ ನಾಪತ್ತೆ ಹಾಗೂ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಮೋಸ, ವಂಚನೆ ಹಾಗೂ ನಕಲಿ ದಾಖಲೆ ಸೃಷ್ಠಿಸಿರುವ ಪ್ರಕರಣದಲ್ಲಿ ಆರೋಪಿ ಅತುಲ್ ರಾವ್‌ಗೆ 1 ವರ್ಷ ಜೈಲುಶಿಕ್ಷೆ ವಿಧಿಸಿ ಉಡುಪಿ ಸಿಜೆಎಂ ಜಿಲ್ಲಾ ನ್ಯಾಯಾಲಯ (Udupi CJM Court) ಶುಕ್ರವಾರ ಆದೇಶಿಸಿದೆ.
ಜೂನ್ 10, 2008 ರಂದು ಉಡುಪಿಯಲ್ಲಿ (Udupi) ನಡೆದಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಅತುಲ್ ರಾವ್‌ಗೆ 1 ವರ್ಷ ಜೈಲು (Jail) ಶಿಕ್ಷೆಯೊಂದಿಗೆ ದಂಡ ವಿಧಿಸಿದೆ.
15 ವರ್ಷಗಳ ಹಿಂದೆ ನಡೆದಿದ್ದಾದ್ರೂ ಏನು?
2008ರ ಜೂ.10ರಂದು ಪದ್ಮಪ್ರಿಯ ಕರಂಬಳ್ಳಿಯ ತನ್ನ ಮನೆಯಿಂದ ನಾಪತ್ತೆಯಾಗಿದ್ದರು. ಅಂದು ರಘುಪತಿ ಭಟ್ ಅವರ ಬಾಲ್ಯ ಸ್ನೇಹಿತ, ಅದೇ ಊರಿನ ಅತುಲ್ ರಾವ್, ಮನೆಯಿಂದ ಪದ್ಮಪ್ರಿಯ ಅವರನ್ನು ಆಕೆಯ ಕಾರಿನಲ್ಲಿ ಕರೆದು ಕೊಂಡು ಹೋಗಿ ಕುಂಜಾರುಗಿರಿಯ ದಾರಿ ಮಧ್ಯೆ ಕಾರನ್ನು ಇಟ್ಟು, ಅದರ ಒಳಗೆ ಬಳೆಯ ಚೂರು, ರಕ್ತದ ಕಲೆಗಳನ್ನು ಮಾಡಿ ಅಪಹರಣದ ನಾಟಕ ಮಾಡಿದ್ದರೆಂದು ದೂರಲಾಗಿದೆ.
ಕಾರನ್ನು ಅಲ್ಲೇ ಬಿಟ್ಟು ಅತುಲ್ ತನ್ನ ಕಾರಿನಲ್ಲಿ ಪದ್ಮಪ್ರಿಯ ಅವರನ್ನು ಕುಮಟಾದವರೆಗೆ ಕರೆದು ಹೋಗಿದ್ದನು. ಕುಮಟಾಕ್ಕೆ ಬೆಂಗಳೂರಿನ ಚಾಲಕನೋರ್ವನನ್ನು ಕರೆಸಿ, ತನ್ನ ಕಾರನ್ನು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದನು. ಇತ್ತ ಪದ್ಮಪ್ರಿಯ ಅವರನ್ನು ಅತುಲ್ ರಾವ್ ಬಾಡಿಗೆ ಕಾರಿನಲ್ಲಿ ಕುಮಟಾದಿಂದ ಗೋವಾ ವಿಮಾನ ನಿಲ್ದಾಣಕ್ಕೆ ಕರೆದುಕೊಂಡು ಹೋಗಿದ್ದನು. ಅತುಲ್ ತನ್ನ ಪತ್ನಿ ಮೀರಾ ಅವರ ಡ್ರೈವಿಂಗ್ ಲೈಸನ್ಸ್‌ಗೆ ಪದ್ಮಪ್ರಿಯ ಅವರ ಫೋಟೋ ಅಂಟಿಸಿ, ಮೀರಾ ಹೆಸರಿನಲ್ಲಿ ಪದ್ಮಪ್ರಿಯ ಅವರನ್ನು ಗೋವಾ ವಿಮಾನ ನಿಲ್ದಾಣದ ಮೂಲಕ ದೆಹಲಿಗೆ ಕರೆದುಕೊಂಡು ಹೋಗಿದ್ದನು. ಈ ಘಟನೆ ನಡೆಯುವ ಮೊದಲು ದೆಹಲಿಗೆ ಹೋಗಿದ್ದ ಅತುಲ್ ರಾವ್, ಅಲ್ಲಿ ಮನೆ ಬಾಡಿಗೆ ಪಡೆದುಕೊಂಡಿದ್ದನು. ಅದಕ್ಕೆ ಬೆಂಗಳೂರಿನ ನಕಲಿ ವಿಳಾಸ ನೀಡಿ ಬಾಡಿಗೆ ಕರಾರು ಪತ್ರಕ್ಕೆ ನೀಡಿದ್ದನು. ಇದು ಅಲ್ಲಿನ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಾಣಿಯಾಗಿತ್ತು. ಆ ಬಾಡಿಗೆ ಕರಾರು ಪತ್ರದಿಂದಲೇ ಅತುಲ್ ರಾವ್ ಅಲ್ಲಿ ಬ್ಯಾಂಕ್ ಖಾತೆ ತೆರೆದಿದ್ದನು. ಅತುಲ್ ರಾವ್ ಎಸೆಸೆಲ್ಸಿ ವಿದ್ಯಾರ್ಹತೆ ಹೊಂದಿ ಪಿಡಬ್ಲ್ಯೂಡಿ ಇಲಾಖೆಯಲ್ಲಿ ಕ್ಲರ್ಕ್ ಆಗಿದ್ದರೂ ಅಲ್ಲಿ ತನ್ನ ವಿದ್ಯಾರ್ಹತೆಯನ್ನು ಬಿಇ ಮತ್ತು ಇಂಟಲ್ ಕಂಪೆನಿಯಲ್ಲಿ ಇಂಜಿನಿಯರ್ ಎಂಬುದಾಗಿ ಉಲ್ಲೇಖ ಮಾಡಿದ್ದನು ಎಂದು ದೂರಲಾಗಿದೆ.
ದೆಹಲಿಯಲ್ಲಿ ಬಾಡಿಗೆ ರೂಮಿಗೆ ಓಡಾಟ ನಡೆಸುತ್ತಿದ್ದಾಗ ಲಾಡ್ಜ್‌ನಲ್ಲಿಯೂ ಬೆಂಗಳೂರಿನ ನಕಲಿ ವಿಳಾಸ ನೀಡುತ್ತಿದ್ದನು. ಜೂ.10ರಂದು ದೆಹಲಿಗೆ ಹೋಗಿದ್ದ ಅತುಲ್, ಮರುದಿನ ಬೆಂಗಳೂರಿಗೆ ಬಂದು ಲಾಡ್ಜ್‌ನಲ್ಲಿ ಉಳಿದುಕೊಂಡಿದ್ದ. ಅಲ್ಲಿಂದ ಜೂ.12ಕ್ಕೆ ಹೊರಟು ಮರುದಿನ ಉಡುಪಿಗೆ ತಲುಪಿ, ರಘುಪತಿ ಭಟ್ ಜೊತೆ ಪದ್ಮಪ್ರಿಯ ಅವರನ್ನು ಹುಡುಕುವ ನಾಟಕ ಮಾಡಿದ್ದನು. ಈ ಬಗ್ಗೆ ರಘುಪತಿ ಭಟ್ 2008ರ ಜೂ.19ರಂದು ನೀಡಿದ ದೂರಿನಂತೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಆರಂಭದಲ್ಲಿ ಮಣಿಪಾಲ ಪೊಲೀಸರು ತನಿಖೆ ನಡೆಸಿ, ಬಳಿಕ ಸಿಓಡಿ ಅಧಿಕಾರಿಗಳು ತನಿಖೆ ನಡೆಸಿದ್ದರು. ಆರೋಪಿ ವಿರುದ್ಧ ಸಿಓಡಿ ಪೊಲೀಸರು 2008ರ ಆ.22ರಂದು ಪ್ರಾಥಮಿಕ ಮತ್ತು 2009ರ ಜು.29ರಂದು ಅಂತಿಮ ಚಾರ್ಜ್ ಶೀಟ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರಲ್ಲಿ ಮೋಸ, ವಂಚನೆ, ನಕಲಿ ದಾಖಲೆ ಸೃಷ್ಠಿ, ನಕಲಿ ದಾಖಲೆಯನ್ನು ನೈಜ ದಾಖಲೆ ಎಂಬುದಾಗಿ ಬಿಂಬಿಸಿ ಹಾಜರು ಪಡಿಸಿ ದುರುಪಯೋಗ ಪಡಿಸಿರುವ ಬಗ್ಗೆ ಆರೋಪ ಮಾಡಲಾಗಿತ್ತು.
ರಘುಪತಿ ಭಟ್ ನೀಡಿರುವ ದೂರಿನಲ್ಲಿ ತಿಳಿಸಿರುವ ಪದ್ಮಪ್ರಿಯಾಳ ಅಪಹರಣ ಹಾಗೂ ಆತ್ಮಹತ್ಯೆಗೆ ಪ್ರಚೋದನೆ ಆರೋಪವನ್ನು ಸಾಕ್ಷ್ಯದ ಕೊರತೆ ಹಿನ್ನೆಲೆಯಲ್ಲಿ ಸಿಓಡಿ ಅಧಿಕಾರಿಗಳು ಕೈಬಿಟ್ಟಿದ್ದರು. ಪ್ರಕರಣದ ವಿಚಾರಣೆ ನಡೆಸಿದ ಉಡುಪಿ ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ಯೋಗೇಶ್, ಆರೋಪಿ ಮೇಲಿನ ಆರೋಪಗಳು ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟು ಐಪಿಸಿ 468ಕಾಯಿದೆಯಡಿ 1 ವರ್ಷ ಜೈಲುಶಿಕ್ಷೆ ಮತ್ತು 5,000ರೂ. ದಂಡ ವಿಧಿಸಿದೆ. ಐಪಿಸಿ 417, 465, 471 ಕಾಯ್ದೆಯಡಿ ತಲಾ 6 ತಿಂಗಳು ಸಜೆ ಹಾಗೂ 5,000ರೂ. ದಂಡ ವಿಧಿಸಿದೆ. ಸಿಓಡಿ ಪರ ಪ್ರಕರಣದ ವಿಶೇಷ ಪಬ್ಲಿಕ್ ಪ್ರಾಸಿಕ್ಯುಟರ್ ಶಿವಪ್ರಸಾದ್ ಆಳ್ವ ವಾದ ಮಂಡಿಸಿದ್ದರು.
ಉಡುಪಿ: ಸತ್ತು ಮಲಗಿದ ನನ್ನ ಮೇಲೆ ಬಿಜೆಪಿಯ (BJP) ಬಾವುಟ ಇರಬೇಕು ಎಂದು ಶಾಸಕ ರಘುಪತಿ ಭಟ್ (Raghupati Bhat) ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಾರ್ದನ ರೆಡ್ಡಿಯ (Janardhan Reddy) ಪಕ್ಷಕ್ಕೆ ನಾನು ದೇವರಾಣೆಗೂ ಹೋಗುವುದಿಲ್ಲ. ನನ್ನ ಜೊತೆ ಜನ ಇದ್ದಾರೆ ಎಂದ ತಕ್ಷಣ ನಾನು ಪಕ್ಷೇತರನಾಗಿ ನಿಲ್ಲುವುದಿಲ್ಲ. ಬೇರೆ ಬೇರೆ ಪಕ್ಷಗಳಿಂದ ಕರೆ ಬಂದಿದೆ, ಆದರೆ ನಾನು ಯಾವುದೇ ಪಕ್ಷಕ್ಕೆ ಹೋಗುವುದಿಲ್ಲ. ರಘುಪತಿ ಭಟ್ರು ಬಿಜೆಪಿ. ನಾನು ಸಾಯುವಾಗ ಬಿಜೆಪಿಯ ಬಾವುಟ ನನ್ನ ಮೇಲೆ ಬೀಳಬೇಕು. ನಾನು ಪಕ್ಷೇತರ ನಿಲ್ಲುತ್ತೇನೆ, ನಿಲ್ಲುವುದಿಲ್ಲ ಎಂದು ಹೇಳಲು ನಾನಿನ್ನು ನಿರ್ಧಾರವೇ ಮಾಡಿಲ್ಲ. ನಾನು ಇನ್ನು ಶಾಕ್‌ನಿಂದ ಹೊರಗೆ ಬಂದಿಲ್ಲ ಎಂದು ಹೇಳಿದರು.
ಯಾವುದೇ ನಿರ್ಧಾರವಾದರೂ ನಾನೇ ಮಾಡುತ್ತೇನೆ. ಕಾರ್ಯಕರ್ತರ ಅಭಿಪ್ರಾಯವನ್ನು ಮಾತ್ರ ಪಡೆಯುತ್ತೇನೆ. ನಾನು ಸಭೆ ಸೇರಿಸುತ್ತೇನೆ. ಪಕ್ಷೇತರ ನಿಲ್ಲುತ್ತೇನೆ ಎಂದು ಹೇಳಿಲ್ಲ ಹೇಳುವುದು ಇಲ್ಲ. ನನ್ನ ನಿರ್ಧಾರವನ್ನು ನಾನೇ ಮಾಡುತ್ತೇನೆ. ನಾನು ರಾಜಕೀಯದಿಂದ ದೂರ ಹೋಗುವ ವ್ಯಕ್ತಿಯ ಅಲ್ಲ. ಕಾರ್ಯಕರ್ತರ ಎಲ್ಲ ಕಷ್ಟಗಳಿಗೆ ಜೊತೆಯಾಗಿ ನಿಲ್ಲುತ್ತೇನೆ ಎಂದರು.
ನನಗೆ ಬಿಜೆಪಿ (BJP) ಎಲ್ಲವನ್ನೂ ಕೊಟ್ಟಿದೆ. ನಾನೂ ಪಕ್ಷಕ್ಕೆ ಜೀವನ ಮುಡಿಪಾಗಿಟ್ಟಿದ್ದೇನೆ. ಸಂಕಷ್ಟದ ಕಾಲದಲ್ಲಿ ನಾನು ಬೇಕಾಗಿತ್ತು ಈಗ ನಾನು ಬೇಡವಾದೆ. ಈ ಬಾರಿ ಪಕ್ಷ ನನ್ನನ್ನು ನಡೆಸಿಕೊಂಡು ರೀತಿಗೆ ನಾನು ಬಹಳ ನೊಂದುಕೊಂಡಿದ್ದೇನೆ. ನಾನು ಜಾತಿಯಲ್ಲಿ ಬ್ರಾಹ್ಮಣ. ಶಾಸಕನಾಗಿ ಎಂದು ಬ್ರಾಹ್ಮಣನಾಗಿ ನಡೆದುಕೊಂಡಿಲ್ಲ. ನಾನು ಕೆಲಸ ಮಾಡಿದ ಶಾಸಕ ಎಂಬ ಧೈರ್ಯದಲ್ಲಿ ಇದ್ದೆ. ನಾನು ಶಾಸಕನಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ನನ್ನನ್ನು ನಡೆಸಿಕೊಂಡ ರೀತಿ ನಾನು ಬಹಳ ಬೇಸರಗೊಂಡಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ (Narendra Modi) ಪಕ್ಷದ ಹಿರಿಯ ಮುಖಂಡರ ಬಗ್ಗೆ ನನಗೆ ಅತೀವವಾದ ಗೌರವವಿದೆ. 15 ವರ್ಷ ಶಾಸಕನಾಗಿದ್ದು ನಾನು ಬೇಡದವನಾಗಿ ಹೋದ್ನಾ?. ನಾನು ಟಿವಿಯಲ್ಲಿ ವಿಚಾರವನ್ನು ತಿಳಿದುಕೊಳ್ಳಬೇಕಾದ ಪರಿಸ್ಥಿತಿ ಬಂತು. ಒಂದು ಫೋನ್ ಕರೆ ಮಾಡಿ ಈ ಕಾರಣಕ್ಕೋಸ್ಕರ ನಿನಗೆ ಟಿಕೆಟ್ ಇಲ್ಲ ಎಂದು ಯಾರೂ ಹೇಳಿಲ್ಲ. ಮುನ್ಸೂಚನೆ ಕೊಟ್ಟಿದ್ರೆ ಈಶ್ವರಪ್ಪ ರೀತಿಯಲ್ಲಿ ರಾಜೀನಾಮೆ ನೀಡುತ್ತಿದ್ದೆ. ನಾನು ವಿಮರ್ಷೆ ಮಾಡಲ್ಲ, ನಿರ್ಧಾರ ಮಾಡಿದವರು ನನಗೆ ಉತ್ತರ ಕೊಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ರಾಜಕಾರಣ ನನಗೆ ಹೊಸದಲ್ಲ, ಹೊಂದಾಣಿಕೆ ಮಾತೇ ಇಲ್ಲ: ಡಿಕೆಶಿ
ಯಶ್ ಪಾಲ್ ಸುವರ್ಣ ಯಾರೋ ಬೇರೆ ಯುವಕ ಅಲ್ಲ. ಯಶ್ ಪಾಲ್ ನಮ್ಮದೇ ಯುವಕ. ನಾನೇ ಬೆಳೆಸಿದ ಕಾರ್ಯಕರ್ತ. ಆದರೆ ನನ್ನ ಗಮನಕ್ಕೆ ತಾರದೆ ಅಭ್ಯರ್ಥಿ ಆಯ್ಕೆ ಮಾಡಿದ್ದು ಬೇಸರವಾಗಿದೆ. ಯಶ್ ಪಾಲ್‍ಗೆ (Yashpal Suvarna) ನನ್ನ ಅವಶ್ಯಕತೆ ಇರಬಹುದು, ಅವರ ನಮ್ಮ ಸ್ನೇಹಿತರು. ಆದರೆ ನನ್ನ ಅವಶ್ಯಕತೆ ಪಕ್ಷಕ್ಕೆ ಇಲ್ಲವಾಗಿ ಹೋಯ್ತಲ್ಲ ಎನ್ನುವುದು ಬೇಜಾರು ಎಂದು ಹೇಳಿದರು. ಇದನ್ನೂ ಓದಿ: ಇನ್ಮುಂದೆ ಡಿಕೆ ಶಿವಕುಮಾರ್ ಕೇವಲ ಅರ್ಜಿ ಹಾಕಿ ರಾಜ್ಯ ಸುತ್ತಲು ಆಗಲ್ಲ: ಸಿಪಿ ಯೋಗೇಶ್ವರ್
ಉಡುಪಿ: ಸುಮ್ನಿರಲಾರದವ ಇರುವೆ ಬಿಟ್ಕೊಂಡ ಅನ್ನೋ ಪರಿಸ್ಥಿತಿ ಯೂತ್ ಕಾಂಗ್ರೆಸ್ ಮುಖಂಡ ಮಿಥುನ್ ರೈ (Congres Leader Mithun Rain) ಅವರದ್ದು. ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ‘ಕೈ’ಗೆ ‘ರೈ’ ಅಸ್ತ್ರ ಕೊಟ್ಟಿದ್ದಾರೆ. ಉಡುಪಿ ಕೃಷ್ಣ ಮಠಕ್ಕೆ ಸಂಬಂಧಪಟ್ಟಂತೆ ಮಿಥುನ್ ಕೊಟ್ಟ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಬಿಜೆಪಿ (BJP) ನಾಯಕರು ರೈ ವಿರುದ್ಧ ತಿರುಗಿ ಬಿದ್ದಿದ್ದಾರೆ.
ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ತಿಕ್ಕಾಟ ಶುರುವಾಗಿದೆ. ಒಂದೊಂದು ಹೇಳಿಕೆಗಳು ಚರ್ಚಾಸ್ಪದ ವಿವಾದಾತ್ಮಕವಾಗುತ್ತಿದೆ. ಕಾಂಗ್ರೆಸ್ ಮುಖಂಡ ಡಿ.ಕೆ ಶಿವಕುಮಾರ್ ಆಪ್ತ ಮಿಥುನ್ ರೈ ಕೊಟ್ಟ ಹೇಳಿಕೆ ಈಗ ತೀವ್ರ ಚರ್ಚೆಗೆ ಕಾರಣವಾಗಿದೆ. ಉಡುಪಿ ಕೃಷ್ಣ ಮಠ (Krishna Mutt, Udupi) ದ ಜಮೀನನ್ನು ಮುಸಲ್ಮಾನ ದೊರೆ ಧಾರವಾಹಿ ನೀಡಿದ್ದ ಎಂಬ ಹೇಳಿಕೆ ಭಾರೀ ವಿರೋಧಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಆಪ್ ನಾಯಕರ ಬಂಧನ – ಹೋಳಿ ತೊರೆದು ಧ್ಯಾನ ಆರಂಭಿಸಿದ ಕೇಜ್ರಿವಾಲ್
ಮೂಡಬಿದರೆ ವಿಧಾನಸಭಾ ಕ್ಷೇತ್ರ (Mudabidire Vidhanasabha Constituency) ದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿರುವ ಮಿಥುನ್ ರೈ ನಮ್ಮೂರ ಮಸೀದಿ ನೋಡಬನ್ನಿ ಕಾರ್ಯಕ್ರಮದಲ್ಲಿ ಭಾಷಣ ಮಾಡಿದ್ದಾರೆ. ಸೌಹಾರ್ದದ ಮಾತಿನ ನಡುವಿನ ಹೇಳಿಕೆ ಚರ್ಚೆಗೆ ಕಾರಣವಾಗಿದೆ. ಈ ಹೇಳಿಕೆಗೆ ಉಡುಪಿ ಶಾಸಕ ರಘುಪತಿ ಭಟ್ (Raghupathi Bhat) ತಿರುಗೇಟು ಕೊಟ್ಟಿದ್ದಾರೆ. ಅಯೋಧ್ಯೆ, ಕಾಶಿ – ಮಥುರಾದಲ್ಲಿ ನಿಮ್ಮ ಅಣ್ಣ ತಮ್ಮಂದಿರು ಏನು ಮಾಡಿದ್ದಾರೆ ಎಂದು ಇಡೀ ದೇಶಕ್ಕೆ ಗೊತ್ತಿದೆ. ಸತ್ಯ ತಿಳಿದುಕೊಂಡು ಮಾತನಾಡಿ ಎಂದಿದ್ದಾರೆ.
ಆ ಕಾಲದಲ್ಲಿ ಕೃಷ್ಣ ಮಠಕ್ಕೆ ಮುಸಲ್ಮಾನರು ಕೊಡುಗೆಗಳನ್ನು ನೀಡಿದ್ದಾರೆ, ಎಣ್ಣೆ ಬತ್ತಿ ಮತ್ತಿತರ ಪರಿಕರಗಳನ್ನು ಕೊಟ್ಟಿದ್ದಾರೆ ಎಂಬುದು ಬಾಯಿ ಮಾತಿನಲ್ಲಿದೆ. ಹಾಜಿ ಅಬ್ದುಲ್ಲಾ ಸಾಹೇಬ್ ಎಣ್ಣೆಯ ಹರಕೆ ಜನಜನಿತವಾಗಿದೆ. ಆದರೆ ಮುಸಲ್ಮಾನ ದೊರೆಯ ಜಮೀನು ಬಳುವಳಿ ವಿಚಾರ ಚುನಾವಣೆಯವರೆಗೂ ಚರ್ಚೆ ಆಗುವ ಸಾಧ್ಯತೆ ಇದೆ.
ಉಡುಪಿ: ಬೆಳಗಾವಿ (Belagavi) ವಿಧಾನಸೌಧದಲ್ಲಿ ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್ ಭಾವಚಿತ್ರ ಅಳವಡಿಸಿರುವುದು ವಿಪಕ್ಷ ಕಾಂಗ್ರೆಸ್‌ಗೆ (Congress) ಇರುಸು ಮುರುಸು ತಂದಿದೆ. ಕೆಲ ಕಾಂಗ್ರೆಸ್ ನಾಯಕರು ಈ ಬಗ್ಗೆ ಸೈಲೆಂಟಾಗಿದ್ರೆ ಕೆಲವರು ತಗಾದೆ ಶುರು ಮಾಡಿದ್ದಾರೆ ಎಂದು ಬಿ.ಕೆ ಹರಿಪ್ರಸಾದ್‌ಗೆ ಉಡುಪಿ (Udupi) ಶಾಸಕ ರಘುಪತಿ ಭಟ್ (Raghupati Bhat) ತಿರುಗೇಟು ನೀಡಿದರು.
ಸಾವರ್ಕರ್ ಬ್ರಿಟೀಷರ ತಟ್ಟೆ ಕಾಸಿಂದ ಜೀವನ ಮಾಡುತ್ತಿದ್ದರು ಎಂದು ನೀಡಿದ್ದ ಹೇಳಿಕೆ ವಿರುದ್ಧ ಶಾಸಕ ರಘುಪತಿ ಭಟ್ ಅಸಮಾಧಾನ ವ್ಯಕ್ತಪಡಿಸಿದರು. ಬಿ.ಕೆ ಹರಿಪ್ರಸಾದ್ (BK Hariprasad) ಬಾಲಿಶ ಹೇಳಿಕೆ ಕೊಡುತ್ತಿದ್ದಾರೆ. ಹರಿಪ್ರಸಾದ್ ಇತಿಹಾಸವನ್ನು ಒಮ್ಮೆ ಓದಬೇಕು. ಅಂಡಮಾನ್ ನಿಕೋಬಾರ್ ಜೈಲಿಗೆ ಒಮ್ಮೆ ಹೋಗಿ ಬನ್ನಿ. ಅಂಡಮಾನ್ ಜೈಲಿನ ಪರಿಸ್ಥಿತಿಯನ್ನು ನೋಡಿ ಬನ್ನಿ. ಕಾಲಾಪಾನಿ ಶಿಕ್ಷೆ ಹೇಗಿತ್ತು ಎಂಬುದನ್ನು ಅಲ್ಲಿ ಸೌಂಡ್ ಅಂಡ್ ಲೈಟ್ ಮೂಲಕ ತೋರಿಸಲಾಗುತ್ತದೆ ಎಂದರು.
ಮುಸಲ್ಮಾನರನ್ನು ಓಲೈಸಲು ಕಾಂಗ್ರೆಸ್‌ನವರು ಸಾವರ್ಕರ್ ವಿರೋಧಿಸುತ್ತಾರೆ. ಸಾವರ್ಕರ್ ಹಿಂದೂ ಮಹಾಸಭಾ ನಾಯಕರಾಗಿದ್ದದ್ದೇ ಈ ವಿರೋಧಕ್ಕೆ ಕಾರಣ. ಸ್ವಾತಂತ್ರ ಹೋರಾಟದ ಸಂದರ್ಭ ಸಾವರ್ಕರ್ ಹಿಂದೂಗಳ ಪರವಾಗಿದ್ದರು. ಸಾವರ್ಕರ್ ಹಿಂದೂ ಪರ ಧೋರಣೆ ಕಾಂಗ್ರೆಸ್‌ಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಅಧಿವೇಶನ ಮುಗಿದ ಕೂಡಲೇ ಒಂದು ಸಮಿತಿ ರಚನೆ ಮಾಡಿ ಅಂಡಮಾನ್‌ಗೆ ಹೋಗಿ ಎಂದ ಅವರು, ಸಾವರ್ಕರ್ ಯೋಗ್ಯತೆ ಏನು ಅಂತ ದೇಶಕ್ಕೆ ಗೊತ್ತಿದೆ ಎಂದು ಹೇಳಿದರು. ಇದನ್ನೂ ಓದಿ: ವರದಕ್ಷಿಣೆ ಕಿರುಕುಳಕ್ಕೆ ಮೂರು ತಿಂಗಳ ಗರ್ಭಿಣಿ ಬಲಿ
ಸಾವರ್ಕರ್ ದೇಶ ವಿರೋಧಿಯಾಗಿ ಕೊನೆಯವರೆಗೂ ವರ್ತಿಸಿಲ್ಲ. ಸಾವರ್ಕರ್ ದೇಶಪ್ರೇಮ ಕಾಂಗ್ರೆಸ್ಸಿಗೆ ವಿಲನ್‌ನಂತೆ ಕಾಣುತ್ತದೆ. ಅಧಿವೇಶನ ಮುಗಿದ ಕೂಡಲೇ ಅಂಡಮಾನಿಗೆ ಪ್ರವಾಸ ಮಾಡಿ ಬನ್ನಿ. ನಾನು ಯುಪಿಎ ಸರ್ಕಾರ ಇದ್ದಾಗಲೇ ಅಂಡಮಾನಿಗೆ ಭೇಟಿ ಕೊಟ್ಟಿದ್ದೇನೆ. ಸಾವರ್ಕರ್‌ಗೆ ಬೈದರೆ ಮುಸ್ಲಿಂ ವೋಟ್ ಸಿಗುತ್ತದೆ ಎಂಬ ಭ್ರಮೆಯಲ್ಲಿದ್ದಾರೆ. ಭಾರತದ ಮುಸಲ್ಮಾನರ ಕಾಂಗ್ರೆಸ್‌ಗೆ ವೋಟ್ ಹಾಕಲ್ಲ ಈಗ ಬದಲಾಗಿದ್ದಾರೆ ಎಂದು ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಮಾನಸಿಕ ಕಿರುಕುಳಕ್ಕೆ ಬೇಸತ್ತು ತಾಯಿ, ಮಗ, ಸೊಸೆ ಆತ್ಮಹತ್ಯೆ
Live Tv
[brid partner=56869869 player=32851 video=960834 autoplay=true]
ಉಡುಪಿ: ರಾಜ್ಯದ 15 ಜಿಲ್ಲೆಗಳಲ್ಲಿ ಸುರಿದ ಭಾರೀ ಮಳೆಯಿಂದ ಸಾಕಷ್ಟು ಅವಾಂತರಗಳು ಆಗಿದೆ. ಈ ಹಿನ್ನೆಲೆ ಸಿಎಂ ಬಸವರಾಜ ಬೊಮ್ಮಾಯಿ ಎರಡು ದಿನಗಳಲ್ಲಿ ಈಗಾಗಲೇ ನಾಲ್ಕು ಜಿಲ್ಲೆಗಳ ಪ್ರವಾಸ ಮಾಡಿದರು. ಉಡುಪಿ ಜಿಲ್ಲೆಯಲ್ಲಂತೂ ಉಪವಾಸವಿದ್ದು, ನೆರೆ ಕಡಲ್ಕೊರೆತ ಸ್ಥಳಗಳಿಗೆ ಭೇಟಿ ಕೊಟ್ಟರು.
ಮೈಸೂರು ಜಿಲ್ಲೆಯ ಮೂಲಕ ನೆರೆ ಪ್ರವಾಸ ಆರಂಭಿಸಿದ ಸಿಎಂ, ಕೊಡಗು ಜಿಲ್ಲೆಯಲ್ಲಿ ಭೂಕಂಪ ಮತ್ತು ಭೂ ಕುಸಿತವಾದ ಸ್ಥಳಗಳಲ್ಲಿ ಓಡಾಟ ಮಾಡಿದರು. ದಕ್ಷಿಣ ಕನ್ನಡ ಜಿಲ್ಲೆ ಮತ್ತು ಉಡುಪಿ ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶ ಮತ್ತು ಕಡಲ್ಕೊರೆತ ಸ್ಥಳಗಳ ವೀಕ್ಷಣೆ ಮಾಡಿದರು. ಐದು ತಾಲೂಕಿನಲ್ಲಿ ಓಡಾಟ ಮಾಡುತ್ತ ಉಡುಪಿಯ ಭತ್ತದ ಬೇಸಾಯ ಹಾನಿಯ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು. ಇದನ್ನೂ ಓದಿ: ಪ್ರೇಯಸಿಯನ್ನು ಚಾಕುವಿನಿಂದ ಇರಿದು ಪೊಲೀಸರಿಗೆ ಶರಣಾದ
ಬೆಳಗ್ಗೆ 10 ಗಂಟೆಗೆ ಸಭೆಗೆ ಹಾಜರಾದ ಸಿಎಂ, ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ಕೊಟ್ಟು ದೇವರ ದರ್ಶನ ಪಡೆದರು. ಅಲ್ಲಿಂದ ಆರ್‌ಎಸ್‍ಎಸ್ ಕಚೇರಿಗೆ ತೆರಳಿ ಗುರುವಂದನಾ ಕಾರ್ಯಕ್ರಮದಲ್ಲಿ ಭಾಗಿಯಾದರು. ನಿಗದಿಯಾದ ಕಾರ್ಯಕ್ರಮದಂತೆ ಸಿಎಂ ಮಣಿಪಾಲದಲ್ಲಿ ಮಧ್ಯಾಹ್ನದ ಭೋಜನ ಸ್ವೀಕರಿಸಿ ನಂತರ ಬೈಂದೂರು ತಾಲೂಕಿಗೆ ತೆರಳಬೇಕಿತ್ತು. ಅಲ್ಲಿಂದ ಬ್ರಹ್ಮಾವರ, ಕುಂದಾಪುರ ಮತ್ತು ಕಾಪು ತಾಲೂಕಿಗೆ ಬಂದು ನೆರೆ ಹಾನಿ ವೀಕ್ಷಣೆ ಮಾಡಬೇಕಾಗಿತ್ತು. ಈ ಹಿನ್ನೆಲೆ ಬೊಮ್ಮಾಯಿ ಅವರು ಊಟ ಬಿಟ್ಟು ನೇರವಾಗಿ ಬೈಂದೂರಿಗೆ ತೆರಳಿದರು.
ಉಡುಪಿ: ಆರ್‌ಎಸ್‌ಎಸ್ ಇರುವುದರಿಂದ ಸಿದ್ದರಾಮಯ್ಯ ಬೇಳೆ ಬೇಯುತ್ತಿಲ್ಲ ಎಂದು ಶಾಸಕ ರಘುಪತಿ ಭಟ್ ಟಾಂಗ್ ನೀಡಿದ್ದಾರೆ.
ಉಡುಪಿಯಲ್ಲಿ ಆರ್‌ಎಸ್‌ಎಸ್ ಚಡ್ಡಿ ಸುಡಿ ಅಭಿಯಾನಕ್ಕೆ ಕರೆ ಕೊಟ್ಟಿರುವ ಸಿದ್ದರಾಮಯ್ಯಗೆ ಆರ್‌ಎಸ್‌ಎಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರ್‌ಎಸ್‌ಎಸ್ ಚಡ್ಡಿ ಸಂಸ್ಕೃತಿ ಬಿಟ್ಟು ಪ್ಯಾಂಟಿಗೆ ಬಂದು ಬಹಳ ಸಮಯವಾಯಿತು. ಈಗ ನಮ್ಮ ಗಣವೇಶ ಅಂಗಿ ಪ್ಯಾಂಟ್ ಆಗಿದೆ. ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ಹೀಗೆ ಮಾತನಾಡುತ್ತಾರೆ. ಆ ಚಡ್ಡಿ ಇದ್ದಿದರಿಂದ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ಆರ್‌ಎಸ್‌ಎಸ್ ಇಲ್ಲದೇ ಇದ್ದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಖಾಕಿ ಚಡ್ಡಿ ಏನು ಈ ದೇಶದ ರಾಷ್ಟ್ರಧ್ವಜವೇ: ಎನ್‍ಎಸ್‍ಯುಐ ಉಪಾಧ್ಯಕ್ಷೆ
ಆರ್‌ಎಸ್‌ಎಸ್ ಸಿದ್ದರಾಮಯ್ಯಗೆ ಏನು ಮಾಡಿದೆಯೋ ಗೊತ್ತಿಲ್ಲ. ದೇಶಭಕ್ತರ ತಯಾರು ಮಾಡುವ ಸಂಸ್ಥೆ ಆರ್‌ಎಸ್‌ಎಸ್. ರಾಷ್ಟ್ರೀಯತೆ ಮತ್ತು ಒಳ್ಳೆಯ ಶಿಕ್ಷಣ ಕೊಡುತ್ತಿರುವುದೇ ಆರ್‌ಎಸ್‌ಎಸ್. ಆರ್‌ಎಸ್‌ಎಸ್ ಇರುವುದರಿಂದ ಸಿದ್ದರಾಮಯ್ಯನ ಬೇಳೆ ಬೇಯುತ್ತಿಲ್ಲ. ಆರ್‌ಎಸ್‌ಎಸ್ ಏನು ಎಂಬುದು ಇಡೀ ವಿಶ್ವಕ್ಕೆ ಗೊತ್ತಿದೆ ಎಂದು ತಿರುಗೇಟಿ ನೀಡಿದ್ದಾರೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾಗಿದ್ದ ಯುವತಿ ಅನುಮಾನಾಸ್ಪದ ಸಾವು -ನವವಿವಾಹಿತೆಯ ಬಲ ಕಿವಿಯೇ ಕಟ್
ಉಡುಪಿ: ಬಿಜೆಪಿಯಲ್ಲಿ ಹೊಸಬರಿಗೆ ಅವಕಾಶ ಹೊಸತಲ್ಲ. ಹೊಸಬರು ಬಂದು ಹೊಸ ನಾಯಕತ್ವ ಸೃಷ್ಟಿಯಾಗುತ್ತದೆ. ರಾಜ್ಯದಲ್ಲಿ ಹೊಸದಾಗಿ ನಾಯಕತ್ವ ಬಂದೇ ಬರುತ್ತದೆ. ಬಿಜೆಪಿ ಪಕ್ಷ ತೆಗೆದುಕೊಳ್ಳುವ ಎಲ್ಲಾ ನಿರ್ಧಾರಗಳಿಗೆ ನಾನು ಮಾನಸಿಕವಾಗಿ ತಯಾರಾಗಿದ್ದೇನೆ ಎಂದು ರಾಜ್ಯ ರಾಜಕೀಯದಲ್ಲಿ ಸಂಚಲನ ಸೃಷ್ಟಿಸುತ್ತಿರುವ ಬಗ್ಗೆ ಉಡುಪಿ ಶಾಸಕ ರಘುಪತಿ ಭಟ್ ಪ್ರತಿಕ್ರಿಯಿಸಿದ್ದಾರೆ.
ರಾಷ್ಟ್ರೀಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ರಾಜ್ಯ ಭೇಟಿ ಬಳಿಕ ಹೊಸತನದ ಘೋಷಣೆಯನ್ನು ಮಾಡಿ ಹೋಗಿದ್ದಾರೆ. ಮೈಸೂರಿನ ಕಾರ್ಯಕ್ರಮದ ನಂತರ ರಾಜ್ಯ ಬಿಜೆಪಿಯಲ್ಲಿ ಹೊಸತನ ಬಹಳ ಚರ್ಚೆಗಳನ್ನು ಹುಟ್ಟುಹಾಕಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ರಘುಪತಿ ಭಟ್, ನನ್ನನ್ನು ಬಿಟ್ಟು ಬೇರೆಯವರಿಗೆ ಅವಕಾಶ ಕೊಟ್ಟರೆ ಆ ನಿರ್ಧಾರವನ್ನು ಸ್ವೀಕರಿಸಿ ಅಭ್ಯರ್ಥಿಗಾಗಿ ಕೆಲಸ ಮಾಡುತ್ತೇನೆ. 2013ರಲ್ಲಿ ಮತ್ತೊಬ್ಬ ಅಭ್ಯರ್ಥಿ ಆಯ್ಕೆಯಾದಾಗ ನಾನು ಅವರಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ. ವೈಯಕ್ತಿಕವಾಗಿ ಅಲ್ಲ, ಪಕ್ಷಕ್ಕೋಸ್ಕರ ಕೆಲಸ ಮಾಡುವ ಸ್ವಭಾವವನ್ನು ಇಟ್ಟುಕೊಂಡಿದ್ದೇನೆ ಎಂದರು. ಇದನ್ನೂ ಓದಿ: ನೈಸ್ ರಸ್ತೆಯಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು
ಮಾನಸಿಕವಾಗಿ ಸಿದ್ಧರಾಗಿ:
ಪಕ್ಷದ ಹಿರಿಯರು ತೀರ್ಮಾನ ಮಾಡಿದಂತೆ ಬಿಜೆಪಿಯಲ್ಲಿ ನಡೆಯುತ್ತದೆ. ಪಕ್ಷ ತೀರ್ಮಾನಿಸಿದಂತೆ ಟಿಕೆಟ್ ಕೊಡಲಾಗುತ್ತದೆ. ಮಾನಸಿಕವಾಗಿ ಸಿದ್ಧವಿರಬೇಕು. ನಮ್ಮ ಪಕ್ಷದಲ್ಲಿ ಯಾವುದನ್ನೂ ಬೇಕು ಅಂತ ಕೇಳಲಿಕ್ಕೆ ಇಲ್ಲ. ಬೇಡ ಅಂತ ಹೇಳಲಿಕ್ಕೂ ಇಲ್ಲ. ನಾನು ಹೊಸಬನೂ ಅಲ್ಲ ಹಳಬನೂ ಅಲ್ಲ. ನಾನು ಮಧ್ಯದಲ್ಲಿ ಇರುವ ಶಾಸಕ ನನಗಿಂತ ಬಹಳಷ್ಟು ಹಳೆಯ ಶಾಸಕರಿದ್ದಾರೆ ಎಂದು ನುಡಿದರು. ಇದನ್ನೂ ಓದಿ: ಹಣ ಇದ್ದವರು ಮಾತ್ರ ಸಿಎಂ ಆಗ್ತಾರೆ ಅನ್ನೋದು ಇತಿಹಾಸದಲ್ಲೇ ಇಲ್ಲ – ಯತ್ನಾಳ್‍ಗೆ ಶ್ರೀರಾಮುಲು ತಿರುಗೇಟು
ಬಿಜೆಪಿಯಲ್ಲಿ 5-6 ಬಾರಿ ಗೆದ್ದವರಿದ್ದಾರೆ. ನಮ್ಮಲ್ಲಿ ಯಾವತ್ತು ಹೊಸತನ ಇದ್ದೇ ಇದೆ. ನಮ್ಮ ಪಕ್ಷದಲ್ಲಿ ಪ್ರಜಾಪ್ರಭುತ್ವ ಇದೆ ಆಂತರಿಕ ಚರ್ಚೆ ನಡೆಯುತ್ತದೆ. ಜನಾಭಿಪ್ರಾಯ ಸಂಗ್ರಹಿಸುವ ವ್ಯವಸ್ಥೆಗಳು ನಮ್ಮ ಪಕ್ಷದಲ್ಲಿ ಇದೆ. ಕಾರ್ಯಕರ್ತರ ಅಭಿಪ್ರಾಯಗಳನ್ನು ತೆಗೆದುಕೊಳ್ಳುವ ಪದ್ಧತಿ ಬಿಜೆಪಿಯಲ್ಲಿದೆ. ಜನರ ಜೊತೆ ಇದ್ದ ಶಾಸಕರಿಗೆ ಸಮಸ್ಯೆ ಆಗುವುದಿಲ್ಲ. ಜನರಿಂದ ದೂರ ಇದ್ದವರಿಗೆ ಸಮಸ್ಯೆಯಾಗಬಹುದು. 2004ರಲ್ಲಿ ಹೊಸಬನಾಗಿದ್ದ ನನಗೆ ಅವಕಾಶ ಕೊಟ್ಟರು ಎಂದು ಅಭಿಪ್ರಾಯಪಟ್ಟರು.