Tag: ರಘುಪತಿಭಟ್

  • ಹೇಳಿಕೆ ಖಂಡಿಸದಿದ್ದರೆ ವಿದ್ಯಾರ್ಥಿಗಳೂ ಆಲ್‌ಖೈದಾ ಪಟ್ಟಿಗೆ: ರಘುಪತಿ ಭಟ್

    ಹೇಳಿಕೆ ಖಂಡಿಸದಿದ್ದರೆ ವಿದ್ಯಾರ್ಥಿಗಳೂ ಆಲ್‌ಖೈದಾ ಪಟ್ಟಿಗೆ: ರಘುಪತಿ ಭಟ್

    ಉಡುಪಿ: ನೈಜ ಭಾರತೀಯರಾದರೆ ಹಿಜಬ್ ಹೋರಾಟದಲ್ಲಿ ತೊಡಗಿರುವ ಮುಸ್ಲಿಂ ವಿದ್ಯಾರ್ಥಿಗಳು ಆಲ್‌ಖೈದಾ, ತಾಲಿಬಾನ್ ಬೆಂಬಲವನ್ನು ಖಂಡಿಸಬೇಕು. ಇಲ್ಲದಿದ್ದರೆ ಅವರೂ ಆಲ್‌ಖೈದಾ ಅಥವಾ ದೇಶದ್ರೋಹ ಸಂಪರ್ಕಿತರ ಪಟ್ಟಿಯಲ್ಲಿ ಸೇರುತ್ತಾರೆ. ತಮ್ಮ ಮೇಲಿನ ವಿಶ್ವಾಸವನ್ನೂ ಕಳೆದುಕೊಳ್ಳುತ್ತಾರೆ ಎಂದು ಉಡುಪಿ ಶಾಸಕ ರಘುಪತಿ ಭಟ್ ಎಚ್ಚರಿಸಿದ್ದಾರೆ.

    Raghupati Bhat

    ಉಡುಪಿಯಲ್ಲಿ ಇಂದು ಪಬ್ಲಿಕ್ ಟಿವಿಯೊಂದಿಗೆ ಮಾತನಾಡಿರುವ ಅವರು, ಹಿಜಬ್‌ಗೆ ಸಂಬಂಧಿಸಿದ ಘಟನೆ ಮೊದಲು ಪಾಕಿಸ್ತಾನದ ವಾಹಿನಿಯೊಂದರಲ್ಲಿ ಪ್ರಸಾರವಾಯಿತು. ಘಟನೆ ನಡೆದಾಗ ಮುಸ್ಕಾನ್ ವಿದ್ಯಾರ್ಥಿನಿ ಘೋಷಣೆಗೆ ತಾಲಿಬಾನ್ ಮೊದಲು ಬೆಂಬಲ ಸೂಚಿಸಿತ್ತು. ಇದೀಗ ಆಲ್‌ಖೈದಾ ಬೆಂಬಲ ಸೂಚಿಸಿರುವುದು ಸಿಎಫ್‌ಐ, ಪಿಎಫ್‌ಐ, ಎಸ್‌ಡಿಪಿಐ ಸಂಘಟನೆಗಳೂ ಆಲ್‌ಖೈದಾ ಭಯೋತ್ಪಾದಕ ಸಂಘಟನೆಯೊಂದಿಗೆ ನೇರವಾಗಿ ಸಂಪರ್ಕದಲ್ಲಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಚಂದ್ರು ಕೊಲೆಗಾರರಿಗೆ ಶರಿಯತ್ ಕಾನೂನು ಜಾರಿಯಾಗಬೇಕಾ: ರಘುಪತಿ ಭಟ್ ಪ್ರಶ್ನೆ

    ಹಿಜಬ್ ಹೋರಾಟದಲ್ಲಿ 6 ಹೆಣ್ಣುಮಕ್ಕಳು ಗಟ್ಟಿಯಾಗಿ ನಿಂತದ್ದರಿಂದಲೇ ಇಂದು ವಿವಾದ ದೊಡ್ಡದಾಗಿದೆ. ಇವರಿಗೆ ದೊಡ್ಡಮಟ್ಟದಲ್ಲಿ ಹಣಕಾಸು ಹರಿದು ಬಂದಿದೆ. ಹಾಗಾಗಿ ಸಿಎಫ್‌ಐ(CFI), ಪಿಎಫ್‌ಐ (PFI), ಎಸ್‌ಡಿಪಿಐ(SDPI) ಸಂಘಟನೆಗಳಲ್ಲಿ ದೇಶದ್ರೋಹ ಮಾತನಾಡುವವರನ್ನು ಎನ್‌ಐಎ (NIA) ತನಿಖೆಗೆ ಒಳಪಡಿಸಿದರೆ ವಿದೇಶಿ ಸಂಘನೆಗಳ ಕೈವಾಡ ಏನಿದೆ ಎಂಬುದು ತಿಳಿಯುತ್ತದೆ ಎಂದು ಹೇಳಿದರು.

    muskhan

    ಮುಸ್ಲಿಂ ವಿದ್ಯಾರ್ಥಿನಿಯರಿಗೆ ಆಲ್‌ಖೈದಾ ಜೊತೆಗೆ ಸಂಪರ್ಕವಿದೆ ಎಂದು ಹೇಳುತ್ತಿಲ್ಲ. ಆದರೆ, ಮಕ್ಕಳನ್ನು ಕಂಟ್ರೋಲ್ ಮಾಡುತ್ತಿರುವ ಸಿಎಫ್‌ಐ ಭಯೋತ್ಪಾದಕ ಸಂಘಟನೆಗಳಿಗೆ ಬೆಂಬಲ ನೀಡುತ್ತಿದೆ. ವಿದ್ಯಾರ್ಥಿಗಳು ಭಾರತದ ಪ್ರಜೆಗಳು ಇಲ್ಲಿನ ಎಲ್ಲ ಸವಲತ್ತು ಪಡೆಯುತ್ತಿದ್ದಾರೆ. ಅವರು ನಿಜವಾದ ದೇಶಭಕ್ತರಾದರೆ, ಆಲ್‌ಖೈದಾ, ತಾಲಿಬಾನಿಗಳ ಹೇಳಿಕೆ ಖಂಡಿಸಬೇಕು. ನಿಮ್ಮ ಸಹಕಾರ ನಮಗೆ ಬೇಡ. ನಮಗೆ ಸಂವಿಧಾನ ನ್ಯಾಯಾಲಯದ ಮೇಲೆ ವಿಶ್ವಾಸವಿದೆ ಎನ್ನುವಂತಹ ಹೇಳಿಕೆ ಕೊಡಬೇಕು. ಇಲ್ಲದಿದ್ದರೆ ಅವರನ್ನೂ ದೇಶಹದ್ರೋಹ ಸಂಪರ್ಕಿರತರ ಪಟ್ಟಿಗೆ ಸೇರಿಸಬೇಕಾಗುತ್ತದೆ, ಮಕ್ಕಳ ಮೇಲೂ ವಿಶ್ವಾಸ ಹೋಗುತ್ತದೆ ಎಂದು ಹೇಳಿದರು. ಇದನ್ನೂ ಓದಿ: ಚಂದ್ರು ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ಕೊಟ್ಟ ಜಮೀರ್‌

    ಒಂದು ಸಂಘಟನೆಯನ್ನು ಬ್ಯಾನ್ ಮಾಡಿದರೆ, ಮತ್ತೊಂದು ಹೆಸರಿನಲ್ಲಿ ಸಂಘಟನೆ ಹುಟ್ಟಿಕೊಳ್ಳುತ್ತದೆ. ಆದ್ದರಿಂದ ದೇಶದ್ರೋಹಿಗಳಿಗಾಗಿ ಸಂಘಟನೆ ಮಾಡುವವರನ್ನೇ ಬಹಿಷ್ಕರಿಸಬೇಕು. ಮುಖ್ಯವಾಗಿ ಮುಸ್ಲಿಂ ಸಮುದಾಯದಲ್ಲಿ ಇದು ಆಗಬೇಕು. ಬೆರಳೆಣಿಕೆ ಮಂದಿ ಮಾಡುವ ಇಂತಹ ಕೆಲಸಗಳಿಂದ ಬಹುಪಾಲು ಸಂಖ್ಯೆ ಮುಸ್ಲಿಮರಿಗೂ ಕೆಟ್ಟ ಹೆಸರು ಬರುತ್ತದೆ. ಆದ್ದರಿಂದ ಪ್ರಜ್ಞಾವಂತ ಮುಸ್ಲಿಮರು ಜಾಗೃತರಾಗಬೇಕು. ದೇಶದ್ರೋಹಿಗಳನ್ನು ಸಾಮೂಹಿಕವಾಗಿ ಬಹಿಷ್ಕರಿಸಬೇಕು ಎಂದು ಕೆರೆ ನೀಡಿದ್ದಾರೆ.