Tag: ರಘು

  • ಕಾಮಿಡಿ ಕಿಲಾಡಿ ರಘು ನಟನೆಯ ‘ರಣಾಕ್ಷ’: ಟ್ರೈಲರ್ ರಿಲೀಸ್

    ಕಾಮಿಡಿ ಕಿಲಾಡಿ ರಘು ನಟನೆಯ ‘ರಣಾಕ್ಷ’: ಟ್ರೈಲರ್ ರಿಲೀಸ್

    ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೀರುಂಡೆ ರಘು (Raghu) ನಾಯಕನಾಗಿ ನಟಿಸಿರುವ,  ದೇವರು, ದೆವ್ವದ ನಡುವಿನ ಸಂಘರ್ಷದ ಸುತ್ತ ನಡೆಯೋ  ಸಸ್ಪೆನ್ಸ್ , ಥ್ರಿಲ್ಲರ್  ಜಾನರ್ ಚಿತ್ರ “ರಣಾಕ್ಷ” (Ranaksha). ಕೆ.ರಾಘವ ಅವರ ನಿರ್ದೇಶನವಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು‌.  ಈ ಸಂದರ್ಭದಲ್ಲಿ ನಿರ್ಮಾಪಕ ರಾಮು  ಮಾತನಾಡುತ್ತಾ 6ರಿಂದ  80 ವರ್ಷದವರೂ ಕೂತು ನೋಡುವಂಥ, ಹಳ್ಳಿ ಸೊಗಡಿನ ಕೌಟುಂಬಿಕ  ಕಥಾನಕ ಇರೋ ಚಿತ್ರವಿದು.  ಸಿನಿಮಾ ನೋಡಿ ನೀವೆಲ್ಲ‌ ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆಯಿದೆ. ಕುಚುಕು ಸ್ನೇಹಿತ ಉಮಾಮಹೇಶ್ವರ ನಮ್ಮಜೊತೆಗಿದ್ದಾರೆ‌.  ಹಣ ಗಳಿಸೋ ಉದ್ದೇಶದಿಂದ ಈ ಸಿನಿಮಾ ಮಾಡಿಲ್ಲ‌. ರಘು ತುಂಬಾ ಚೆನ್ನಾಗಿ ಪಾತ್ರ ಮಾಡಿದ್ದಾರೆ. ಸಕಲೇಶಪುರದಲ್ಲಿ ಶೂಟ್ ಮಾಡುವಾಗ ತುಂಬಾ ಪೆಟ್ಡು ತಿಂದಿದ್ದಾರೆ. ಅಲ್ಲದೆ  ಇಬ್ಬರು ಹೊಸ ಹುಡುಗಿಯರು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ಆಲಾಪ್ ಮಾತು ಕಮ್ಮಿ, ಆದರೆ ಅದ್ಬುತವಾಗಿ ಮ್ಯೂಸಿಕ್ ಮಾಡಿದ್ದಾರೆ ಎಂದರು.

    ನಂತರ  ನಿರ್ದೇಶಕ ರಾಘವ ಮಾತನಾಡಿ ಇದು ನನ್ನ ಎರಡನೇ ಚಿತ್ರ. ಕಲಾವಿದನಾಗಿ ಬಂದವನು ನಿರ್ದೇಶಕನಾಗಿದ್ದೇನೆ. ಪ್ರೊಡ್ಯೂಸರ್ ಗೆ ಒಂದು ಲೈನ್ ಹೇಳಿದಾಗ ಏನೂ ಕೇಳದೆ ಒಪ್ಪಿದರು. “ರಣಾಕ್ಷ” ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ. ಫ್ಯಾಮಿಲಿ ಹಿನ್ನೆಲೆಯಲ್ಲಿ ನಡೆಯುವ ಸಸ್ಪೆನ್ಸ್ , ಥ್ರಿಲ್ಲರ್ ಚಿತ್ರ. ದೇವರು ದೆವ್ವ ಎರಡರ ನಡುವಿನ ಸಂಘರ್ಷವೇ ಚಿತ್ರದ ಕಾನ್ಸೆಪ್ಟ್.  ಯಾವುದೇ  ಮಂತ್ರ , ತಂತ್ರ , ಶಕ್ತಿ  ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಅದು ಹೇಗೆ ಎಂಬುದನ್ನು ಚಿತ್ರದಲ್ಲಿ ಹೇಳಿದ್ದೇವೆ.  ರಘು ನನಗೆ ಬಹಳ ವರ್ಷದ ಗೆಳೆಯ, ನಿನಗೆ ಹೀರೋ ಮಾಡ್ತೇನೆ ಅಂದಾಗ ಕಾಮಿಡಿ ಮಾಡಬೇಡಿ  ಅಂದರು. ತುಂಬಾ ಶ್ರಮವಹಿಸಿ  ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತರುತ್ತಿದ್ದೇವೆ ಎಂದು ಹೇಳಿದರು.

    ಕಾಮಿಡಿ ಕಿಲಾಡಿಗಳು ಮೂಲಕ ಜನಪ್ರಿಯವಾದ ನಟ   ಸೀರುಂಡೆ ರಘು ಮಾತನಾಡುತ್ತಾ ನಾನು ಕೂಡ ಮಾಧ್ಯಮದಲ್ಲಿ ಕೆಲಸ ಮಾಡಿದವನು, ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ  ಅಭಿನಯಿಸಿ, ಮೊದಲಬಾರಿಗೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ಕೊನೆಯಲ್ಲಿ ಅದೇನೆಂದು ರಿವೀಲ್ ಆಗುತ್ತೆ. ನಿಮ್ಮೆಲ್ಲರ ಪ್ರೀತಿ ಸಹಕಾರವಿರಲಿ ಎಂದು ಕೇಳಿಕೊಂಡರು. ನಾಯಕಿ ರಕ್ಷಾ ಮಾತನಾಡುತ್ತಾ ನಾನು ಮುಗ್ಧ  ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ ಇದು ನನ್ನ ಮೊದಲ ಚಿತ್ರ ಎಂದರು.

    ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್ ಆಲಾಪ್ ಮಾತನಾಡಿ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಸಂಗೀತ ನೀಡುವುದು ನನಗೆ ಚಾಲೆಂಜ್ ಆಗಿತ್ತು. ಪ್ರತಿ ಹಾಡು ವಿಭಿನ್ನವಾಗಿ ಮೂಡಿ ಬಂದಿದೆ ಎಂದರು.  ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿವೆ.  ಶೀಘ್ರದಲ್ಲೇ ರಣಾಕ್ಷ  ಬೆಳ್ಳಿಪರದೆ ಮೇಲೆ ಮೂಡಿಬರಲಿದೆ.

  • ಕಾಮಿಡಿ ಕಿಲಾಡಿ ಖ್ಯಾತಿಯ ರಘು ನಟನೆಯ ‘ರಣಾಕ್ಷ’ ಟೀಸರ್ ರಿಲೀಸ್

    ಕಾಮಿಡಿ ಕಿಲಾಡಿ ಖ್ಯಾತಿಯ ರಘು ನಟನೆಯ ‘ರಣಾಕ್ಷ’ ಟೀಸರ್ ರಿಲೀಸ್

    ಯುವ ಪ್ರತಿಭೆಗಗಳ ತಂಡವೇ  ಸೇರಿ  ಮಾಡಿರುವ ಸಸ್ಪೆನ್ಸ್ , ಥ್ರಿಲ್ಲರ್  ಚಿತ್ರ ‘ರಣಾಕ್ಷ’ (Ranaksha).  ಈ ಚಿತ್ರದ  ಹಾಡುಗಳು ಹಾಗೂ ಟೀಸರ್ ಅನ್ನು ಸಾಹಿತಿ, ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್ ಬಿಡುಗಡೆ ಮಾಡಿದರು. ನಂತರ ಮಾತನಾಡುತ್ತಾ ‘ನಿರ್ದೇಶಕ ರಾಘವ ನನಗೆ ಬಹಳ ವರ್ಷದ ಗೆಳೆಯರು, ನಾನು ಈ ಚಿತ್ರದ ಬಗ್ಗೆ ಯಾವುದೇ ನಿರೀಕ್ಷೆ ಇಟ್ಕೊಂಡು ಇಲ್ಲಿಗೆ ಬಂದಿರಲಿಲ್ಲ, ಆದರೆ ಟೀಸರ್ (Teaser) ಹಾಗೂ ಹಾಡುಗಳನ್ನು ನೋಡಿದ ಮೇಲೆ ತಂಡದ ಶ್ರಮ ಕಾಣುತ್ತದೆ. ಈ ರಣಾಕ್ಷ ಟೈಟಲ್ಲೇ  ಸ್ಟ್ರಾಂಗ್ ಇದೆ. ಮೊದಲೆಲ್ಲಾ  ಸಿನಿಮಾಗಳು ಹೆಚ್ಚು ಇರಲಿಲ್ಲ, ಹಾಡುಗಳು ಕೂಡ ಕಮ್ಮಿ ಇತ್ತು, ಪದೇ ಪದೇ ಅದೇ ಹಾಡನ್ನು ಆಕಾಶವಾಣಿ ಹಾಗೂ ಸಮಾರಂಭಗಳಲ್ಲಿ  ಕೇಳಿದಾಗ ಸದಾ ನೆನಪಿಗೆ ಬರುತ್ತಿತ್ತು, ಈಗ ವರ್ಷಕ್ಕೆ ಸುಮಾರು 300  ಚಿತ್ರಗಳು ಬರುತ್ತಿವೆ. ಇನ್ನು ಎಷ್ಟು ಹಾಡುಗಳು ಬಂದಿರಬೇಕು ಯೋಚಿಸಿ. ಅದರಲ್ಲೂ ಈ ಚಿತ್ರದ ಹಾಡುಗಳು ನೋಡಿದಾಗ ಬಹಳ ಖುಷಿ ಎನಿಸಿತು. ಯಾಕೆಂದರೆ ನೋಡಿದ ಮೂರು ಹಾಡುಗಳು ಹೊಸತನದ ಸದ್ದನ್ನ ಮೂಡಿಸುತ್ತದೆ. ಸಂಗೀತ ನಿರ್ದೇಶಕ ವಿಶಾಲ್ ಅಲಾಪ್ ಕೆಲಸ ಸೊಗಸಾಗಿದೆ. ಅದೇ ರೀತಿ  ಗಾಯಕರಿಗೂ ಕೂಡ ಉತ್ತಮ ಭವಿಷ್ಯವಿದೆ.  ಪೂರ್ಣ ಪ್ರಮಾಣದ ನಾಯಕನಾಗಿ ಬೆಳ್ಳಿ ಪರದೆಗೆ ಬರುತ್ತಿರುವ ರಘು, ನಾಯಕಿಯರಾದ ರಕ್ಷಾ ಹಾಗೂ ರೋಹಿ ಸೇರಿದಂತೆ ಇಡೀ ಚಿತ್ರತಂಡಕ್ಕೆ ಯಶಸ್ಸು ಸಿಗಲಿ’ ಎಂದು ಶುಭ ಕೋರಿದರು. ಇನ್ನು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದಂತಹ ಮೋಹನ್ ರಾವ್ ನಾಲ್ವಡೆ, ರಮೇಶ್ ಗೌಡ , ಗಿರೀಶ್ ಗೌಡ,   ಲಕ್ಷ್ಮಣ್ ಪಡಿಮನಿ ಸೇರಿದಂತೆ ಎಲ್ಲರೂ ಚಿತ್ರತಂಡದಕ್ಕೆ ಶುಭ ಹಾರೈಸಿದರು.

    ಚಿತ್ರದ ನಿರ್ದೇಶಕ ರಾಘವ ಮಾತನಾಡುತ್ತಾ ‘ರಣಾಕ್ಷ ಎಂದರೆ ಹದ್ದಿನಂತೆ ಕಣ್ಣಿಟ್ಟು ಕಾಯುವವನು ಎಂದರ್ಥ, ಇದೊಂದು ಸಸ್ಪೆನ್ಸ್ , ಥ್ರಿಲ್ಲರ್ ಕಥೆ ಒಳಗೊಂಡ ಚಿತ್ರ , ಯಾವುದೇ  ಮಂತ್ರ , ತಂತ್ರ , ಶಕ್ತಿ  ಏನೇ ಸಮಸ್ಯೆ ಎದುರಾದರೂ ಅದನ್ನು ಎದುರಿಸುವುದಕ್ಕೆ ಮನುಷ್ಯನೇ ಬರಬೇಕು ಅದು ಹೇಗೆ.. ಏನು.. ಎಂಬುದನ್ನು ಚಿತ್ರದಲ್ಲಿ ನೋಡಬೇಕು, ಬಹಳ ಶ್ರಮವಹಿಸಿ  ಒಂದು ವಿಭಿನ್ನ ಚಿತ್ರವನ್ನು ನಿಮ್ಮ ಮುಂದೆ ತರುತ್ತಿದ್ದೇವೆ. ನಿಮ್ಮೆಲ್ಲರ ಪ್ರೋತ್ಸಾಹ , ಸಹಕಾರ ನಿರಂತರವಾಗಿ ಇರಲಿ ಎಂದು ಕೇಳಿಕೊಂಡರು.  ನಿರ್ಮಾಪಕ ರಾಮು  ಮಾತನಾಡುತ್ತಾ ನನಗೂ ಸಿನಿಮಾ ಮಾಡಬೇಕೆಂಬ ಆಸೆ ಇತ್ತು. ಯಾಕೆಂದರೆ ಒಂದು ಚಿತ್ರ ಮಾಡಿದರೆ ನಮಗೊಂದು ಹೆಸರು ಬರುತ್ತೆ ಅಂತ, ಈ  ಚಿತ್ರವನ್ನು ನೋಡಿ ನೀವೆಲ್ಲ‌ ಗೆಲ್ಲಿಸಿದರೆ, ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆ ಇದೆ ಎಂದರು.

    ಕಾಮಿಡಿ ಕಿಲಾಡಿ ಮೂಲಕ ಜನರ ಗಮನವನ್ನು ಸೆಳೆದ ಪ್ರತಿಭೆ  ನಾಯಕ ಸೀರುಂಡೆ ರಘು (Raghu) ಮಾತನಾಡುತ್ತಾ ನಾನು ಕೂಡ ಮಾಧ್ಯಮದಲ್ಲಿ ಕ್ಯಾಮೆರಾ ಟ್ರೈಪಾಡ್ ಹಿಡಿದುಕೊಂಡು ಬಂದವನು , ನಂತರ ಕಾಮಿಡಿ ಕಿಲಾಡಿಯಲ್ಲಿ ಕಾಣಿಸಿಕೊಂಡೆ , ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ  ಅಭಿನಯಿಸಿದ್ದು, ಈ ಚಿತ್ರದಲ್ಲಿ ಹೀರೋ ಅನ್ನುವುದಕ್ಕಿಂತ ಕಥಾ ನಾಯಕನ ಪಾತ್ರದಲ್ಲಿ ಅಭಿನಯಿಸಿದ್ದೇನೆ. ಮೊದಲ ಬಾರಿಗೆ ಲೀಡ್ ರೋಲ್ ಮಾಡ್ತಿರುವೆ. 4 ಜನ ಸ್ನೇಹಿತರ ಜೊತೆ ಸಾಗುವ ಪಾತ್ರ. ನನಗೆ ಅವಕಾಶ ನೀಡಿರುವ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು. ನಾನು ಹೀರೋ ಆಗಿ ಅಭಿನಯಿಸುತ್ತಿದ್ದೇನೆ. ಬೇರೆ ಪಾತ್ರಗಳನ್ನು ಮಾಡುವುದಿಲ್ಲ ಎಂದು ಭಾವಿಸಿ ಕೆಲವೊಂದು ಅವಕಾಶಗಳು  ದೂರವಾಗಿತ್ತು , ನಾನೊಬ್ಬ ಕಲಾವಿದ. ಯಾವ ಪಾತ್ರವಾದ್ರು ಮಾಡುವುದಷ್ಟೇ ನನ್ನ ಕೆಲಸ. ಮೊದಲ ಬಾರಿಗೆ ಕಾಮಿಡಿ ಬಿಟ್ಟು ಕ್ಲಾಸ್ ಹಾಗೂ ಮಾಸ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ನಿಮ್ಮೆಲ್ಲರ ಪ್ರೀತಿ ಸಹಕಾರವಿರಲಿ ಎಂದು ಕೇಳಿಕೊಂಡರು.  ನಾಯಕಿ ರಕ್ಷಾ ಮಾತನಾಡುತ್ತಾ ನಾನು ಮುಗ್ಧ  ಹಳ್ಳಿ ಹುಡುಗಿಯ ಪಾತ್ರ ಮಾಡಿದ್ದೇನೆ ಇದು ನನ್ನ ಮೊದಲ ಚಿತ್ರ ಎಂದರು. ಮತ್ತೊಬ್ಬ ನಟಿ ರೋಹಿ ಮಾತನಾಡುತ್ತಾ ಅವಕಾಶ ಕೊಟ್ಟ ನಿರ್ಮಾಪಕ , ನಿರ್ದೇಶಕರಿಗೆ ಧನ್ಯವಾದಗಳು ನಮ್ಮ ಚಿತ್ರ ನೋಡಿ ಎಂದು ಕೇಳಿಕೊಂಡರು.

     

    ಚಿತ್ರಕ್ಕೆ ಸಂಗೀತ ನೀಡಿರುವ ವಿಶಾಲ್ ಆಲಾಪ್ ಮಾತನಾಡುತ್ತಾ ಈ ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿವೆ. ಸಂಗೀತ ನೀಡುವುದು ನನಗೆ ಚಾಲೆಂಜ್ ಆಗಿದ್ದು , ಬಹಳ ವಿಭಿನ್ನವಾಗಿ ಸಾಂಗ್ ಕಂಪೋಸ್ ಮಾಡಿದ್ದೇವೆ. ಒಂದೊಂದು ಹಾಡು ವಿಭಿನ್ನವಾಗಿ ಮೂಡಿ ಬಂದಿದೆ. ಗಾಯಕರು  ಕೂಡ ಬಹಳ ಸೊಗಸಾಗಿ ಹಾಡಿದ್ದಾರೆ ಎಂದರು.  ಚಿತ್ರದ ಛಾಯಾಗ್ರಹಕ ದೀಪಕ್ ಕುಮಾರ್ ಮಾತನಾಡುತ್ತಾ ನನಗೆ ಈ ಚಿತ್ರದಲ್ಲಿ ಕೆಲಸ ಮಾಡಲು ಅವಕಾಶ ಸಿಕ್ಕಿದ್ದು ಜಾನಿ ಮಾಸ್ಟರ್ ಮೂಲಕ , ಬಹಳ ಕಷ್ಟಪಟ್ಟು ಈ ಚಿತ್ರವನ್ನು ಚಿತ್ರೀಕರಣ ಮಾಡಿದ್ದೇವೆ ಎಂದರು. ಸಕಲೇಶಪುರ, ಹೊನ್ನಾವರ, ಮೂಡಬಿದ್ರೆ, ಕಾರ್ಕಳ ಸೇರಿದಂತೆ ಹಲವಾರು ಸ್ಥಳಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ , ಚಿತ್ರದಲ್ಲಿ ಮೂರು ಸಾಹಸ ದೃಶ್ಯಗಳಿದ್ದು, ಚಿತ್ರವೀಗ  ಸೆನ್ಸರ್ ಹಂತಕ್ಕೆ ಹೋಗಿದೆ, ಅತಿ ಶೀಘ್ರದಲ್ಲಿ ಬೆಳ್ಳಿ ಪರದೆ ಮೇಲೆ ಮೂಡಿಬರಲಿದೆ.

  • ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ವೈನ್ ಸ್ಟೋರ್ ಫ್ಯಾಮಿಲಿಯನ್ನು ಭೇಟಿಯಾದ ವೈಷ್ಣವಿ

    ಬೆಂಗಳೂರು: ಬಿಗ್‍ಬಾಸ್ ಕಾರ್ಯಕ್ರಮದ ನಂತರ ಇದೇ ಮೊದಲ ಬಾರಿಗೆ ವೈಷ್ಣವಿ ಗೌಡ, ರಘು ಫ್ಯಾಮಿಲಿಯನ್ನು ಮೀಟ್ ಮಾಡಿದ್ದಾರೆ.

    ಬಿಗ್‍ಬಾಸ್ ಸೀಸನ್-8ರ ಬೆಸ್ಟ್ ಫ್ರೆಂಡ್ಸ್ ಅಂದರೆ ಅದು ರಘು ಹಾಗೂ ವೈಷ್ಣವಿ. ಬಿಗ್‍ಬಾಸ್ ಕಾರ್ಯಕ್ರಮದ ಆರಂಭದಿಂದಲೂ ಅಂತ್ಯದವರೆಗೂ ದೊಡ್ಮನೆಯಲ್ಲಿ ಎಲ್ಲರ ನಡುವೆ ಇವರ ಸ್ನೇಹ ಪ್ರೇಕ್ಷಕರ ಹೃದಯ ಗೆದ್ದಿತ್ತು. ಇಬ್ಬರ ನಡುವೆ ಕೆಲವೊಂದಷ್ಟು ಜಗಳ, ಮನಸ್ತಾಪ ಬಂದರೂ ಒಬ್ಬರಿಗೊಬ್ಬರು ಬಿಟ್ಟು ಕೊಡದೇ ಅದನ್ನು ಚರ್ಚಿಸಿ ಹೊಂದಾಣಿಕೆಯಿಂದ ಆಟ ಆಡುತ್ತಿದ್ದ ಇವರಿಬ್ಬರ ಕಾಂಬಿನೇಷನ್ ನೋಡಿ ಅಭಿಮಾನಿಗಳು ನಿಜವಾದ ಫ್ರೆಂಡ್ಸ್ ಅಂದರೆ ಇವರಂತೆ ಇರಬೇಕು ಎಂದು ಮಾತನಾಡಿಕೊಂಡಿದ್ದು ಇದೆ. ಇದನ್ನೂ ಓದಿ: ಕೆಪಿಎಸ್‌ಸಿಯನ್ನು ಹಾಳು ಮಾಡಿದ್ದು ಬಿಜೆಪಿ, ಕಾಂಗ್ರೆಸ್‌ : ಜೆಡಿಎಸ್‌ ತಿರುಗೇಟು

    ರಘು ತಮ್ಮ ಕಷ್ಟದ ದಿನಗಳನ್ನು ಹೇಳಿಕೊಂಡಿದ್ದಾಗ ವೈಷ್ಣವಿ ಸಮಾಧಾನ ಹೇಳಿ ಅವರಿಗೆ ಆತ್ಮಸ್ಥೈರ್ಯ ತುಂಬಿದ್ದರು. ಅಲ್ಲದೇ ದೊಡ್ಮನೆಯಲ್ಲಿ ಯಾವುದೇ ಟಾಸ್ಕ್ ಬಂದಗಲೂ ರಘು ವೈಷ್ಣವಿಗೆ, ವೈಷ್ಣವಿ ರಘುಗೆ ಪ್ರೋತ್ಸಾಹ ನೀಡುತ್ತಾ ಆಟ ಆಡುತ್ತಿದ್ದರು. ಆದರೆ ಬಿಗ್‍ಬಾಸ್ ಕಾರ್ಯಕ್ರಮದ ನಂತರ ರಘು, ವೈಷ್ಣ ವಿಎಲ್ಲೂ ಅಷ್ಟಾಗಿ ಒಟ್ಟಿಗೆ ಕಾಣಿಸಿಕೊಂಡಿರಲಿಲ್ಲ. ಇದನ್ನೂ ಓದಿ: ಹೆಸರುಬೇಳೆ ಪಾಯಸ ಮಾಡುವ ಸರಳ ವಿಧಾನ ನಿಮಗಾಗಿ

     

    View this post on Instagram

     

    A post shared by Vaishnavi (@iamvaishnavioffl)

    ಇದೀಗ ಹಲವು ದಿನಗಳ ಬಳಿಕ ದಸರಾ ಹಬ್ಬದ ಹಿನ್ನೆಲೆ ರಘು ಹಾಗೂ ಅವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಈ ಕುರಿತಂತೆ ವೈಷ್ಣವಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೋ ಶೇರ್ ಮಾಡಿಕೊಂಡಿದ್ದು, ಫೋಟೋದಲ್ಲಿ ರಘು ಅವರ ಮಗನನ್ನು ಎತ್ತಿಕೊಂಡಿದ್ದು, ರಘು, ಪತ್ನಿ ವಿದ್ಯಾಶ್ರೀ ಹಾಗೂ ವೈಷ್ಣವಿ ನಗುತ್ತಾ ಫೋಟೋಗೆ ಪೋಸ್ ನೀಡಿರುವುದನ್ನು ಕಾಣಬಹುದಾಗಿದೆ. ಜೊತೆಗೆ ವೈನ್ ಸ್ಟೋರ್ ಫ್ಯಾಮಿಲಿ ಜೊತೆಗೆ ದಸರಾ ವಿಶೇಷ ಎಂದು ಶೀರ್ಷಿಕೆಯಲ್ಲಿ ಬರೆದುಕೊಂಡಿದ್ದಾರೆ.

  • ಈ ಸಲ ಕಪ್ ನಮ್ದೆ – ಆರ್‌ಸಿಬಿಗೆ ಶಮಂತ್, ರಘು ಸಪೋರ್ಟ್

    ಈ ಸಲ ಕಪ್ ನಮ್ದೆ – ಆರ್‌ಸಿಬಿಗೆ ಶಮಂತ್, ರಘು ಸಪೋರ್ಟ್

    ಬೆಂಗಳೂರು: ಬಿಗ್‍ಬಾಸ್ ಸೀಸನ್-8ಕ್ಕೆ ಎಂಟ್ರಿ ಕೊಟ್ಟಿದ್ದ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾದ ಬ್ರೋ ಗೌಡ ಶಮಂತ್ ಹಾಗೂ ರಘು ವೀಡಿಯೋವೊಂದರಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು, ಈ ಸಲ ಕಪ್ ನಮ್ದೆ ಎಂದಿದ್ದಾರೆ.

    shamanth

    ಬಿಗ್‍ಬಾಸ್ ಸೀಸನ್ 8ರ ಬಳಿಕ ಮತ್ತೆ ತಮ್ಮ ಕೆಲಸಗಳತ್ತ ಮರಳಿದ ಬ್ರೋ ಗೌಡ ಶಮಂತ್ ಹಾಗೂ ರಘು ಅಭಿಮಾನಿಗಳಿಗೆ ಮನರಂಜನೆ ನೀಡುವ ಕೆಲಸವನ್ನು ಮುಂದುವರಿಸಿದ್ದಾರೆ. ಹಲವು ದಿನಗಳ ಬಳಿಕ ಇಬ್ಬರೂ ಒಟ್ಟಿಗೆ ವೀಡಿಯೋವೊಂದರಲ್ಲಿ ಕಾಣಿಸಿಕೊಂಡಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ಸಪೋರ್ಟ್ ಮಾಡಿದ್ದಾರೆ.

    shamanth raghu

    ಹೌದು, ಐಪಿಎಲ್ ಪಂದ್ಯ ಎಂದರೆ ಅಭಿಮಾನಿಗಳಲ್ಲಿ ಒಂದು ರೀತಿ ಕ್ರೇಜ್. ಕಳೆದ ಬಾರಿ ಕೊರೊನಾದಿಂದ ರದ್ದುಗೊಳಿಸಲಾಗಿದ್ದ ಐಪಿಎಲ್ ಪಂದ್ಯ ಇದೀಗ ಸೆಪ್ಟೆಂಬರ್ 19ರಿಂದ ಮತ್ತೆ ಆರಂಭವಾಗಿದೆ. ಎಂದಿನಂತೆ ಆರ್‌ಸಿಬಿ ಅಭಿಮಾನಿಗಳು ಈ ಬಾರಿ ಕೂಡ ಈ ಸಲ ಕಪ್ ನಮ್ದೆ ಎಂದು ಹೇಳುತ್ತಿದ್ದಾರೆ. ಇದನ್ನೂ ಓದಿ: ಮದ್ಯಪಾನದ ದೃಶ್ಯ ತೋರಿಸಿದ್ದಕ್ಕೆ ಕಪಿಲ್ ಶರ್ಮಾ ಶೋ ವಿರುದ್ಧ FIR

    shamanth raghu

    ಈ ಮಧ್ಯೆ ಬ್ರೋ ಗೌಡ ಶಮಂತ್ ಹಾಗೂ ರಘು ಬೆಟ್ಟದ ಮೇಲೆ ನಿಂತು ವೀಡಿಯೋವೊಂದನ್ನು ಮಾಡಿದ್ದಾರೆ. ವೀಡಿಯೋದಲ್ಲಿ ಯಾವುದಾದರೂ ಬೆಟ್ಟದ ಮೇಲೆ ನಿಂತುಕೊಂಡು ಜೋರಾಗಿ ಕೂಗಿದರೆ ವಾಯ್ಸ್ ಎಕೋ ಹೊಡೆಯುತ್ತದೆ. ಉದಾಹರಣೆಗೆ ರಘು ಎಂದರೆ ಮೂರು ಬಾರಿ ವಾಯ್ಸ್ ಎಕೋ ಹೊಡೆಯುತ್ತದೆ. ಬ್ರೋ ಗೌಡ ಅಥವಾ ಚಿನ್ನಿ ಎಂದರೂ ಪ್ರತಿಧ್ವನಿ ಹೊಡೆಯುತ್ತದೆ. ಅದೇ ಆರ್‌ಸಿಬಿ ಅಂತ ಹೇಳಿದರೆ ಎಂದು ರಘು ಕೇಳುತ್ತಾರೆ. ಈ ವೇಳೆ ಶಮಂತ್ ಆರ್‌ಸಿಬಿ, ಈ ಸಲ ಕಪ್ ನಮ್ದೆ ಎಂದು ಕಿರುಚಿದ್ದಾರೆ. ಜೊತೆಗೆ ಈ ವೀಡಿಯೋ ಕೊನೆಯಲ್ಲಿ ಈ ಸಲ ನೋಡೋಣ ಎಂದ ಪದಗಳೊಂದಿಗೆ ಹಿನ್ನೆಲೆಯಲ್ಲಿ ಆರ್‌ಸಿಬಿ ಸಾಂಗ್ ಬಂದಿದೆ. ಇದನ್ನೂ ಓದಿ: ಬಾಲಿವುಡ್‍ಗೆ ಎಂಟ್ರಿ ಕೊಡ್ತಿದ್ದಾರಾ ನಟ ಗೋವಿಂದ ಪುತ್ರ?

    ಒಟ್ಟಾರೆ ಈ ವೀಡಿಯೋ ಬ್ರೋ ಗೌಡ ಮತ್ತು ರಘು ಅಭಿಮಾನಿಗಳಿಗಷ್ಟೇ ಅಲ್ಲದೇ ಆರ್‌ಸಿಬಿ ಅಭಿಮಾನಿಗಳಿಗೂ ಸಖತ್ ಇಷ್ಟ ಆಗುವುದರಲ್ಲಿ ಡೌಟೇ ಇಲ್ಲ ಎಂದು ಹೇಳಬಹುದಾಗಿದೆ. ಇದನ್ನೂ ಓದಿ: ಗೌಡ್ರ ಕುಟುಂಬದಲ್ಲಿ ಸಂಭ್ರಮ – ನಿಖಿಲ್, ರೇವತಿ ದಂಪತಿಗೆ ಗಂಡು ಮಗು

  • ಫಿನಾಲೆ ವೇದಿಕೆಯಲ್ಲಿ ಸುದೀಪ್‍ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಘು ದೀಕ್ಷಿತ್, ರಾಜೇಶ್ ಕೃಷ್ಣನ್

    ಫಿನಾಲೆ ವೇದಿಕೆಯಲ್ಲಿ ಸುದೀಪ್‍ಗೆ ಬಿಗ್ ಸರ್ಪ್ರೈಸ್ ಕೊಟ್ಟ ರಘು ದೀಕ್ಷಿತ್, ರಾಜೇಶ್ ಕೃಷ್ಣನ್

    ಬಿಗ್‍ಬಾಸ್ ಸೀಸನ್-8 ಗ್ರ್ಯಾಂಡ್ ಫಿನಾಲೆ ಭಾನುವಾರ ಅದ್ದೂರಿಯಾಗಿ ನೆರವೇರಿದೆ. ಈ ವೇಳೆ ಫಿನಾಲೆ ವೇದಿಕೆಗೆ ಗಾಯಕ ರಘು ದೀಕ್ಷಿತ್ ಹಾಗೂ ರಾಜೇಶ್ ಕೃಷ್ಣನ್ ಎಂಟ್ರಿ ಕೊಡುವ ಮೂಲಕ ಸುದೀಪ್‍ಗೆ ಸರ್ಪ್ರೈಸ್ ನೀಡಿದ್ದಾರೆ.

    ವೇದಿಕೆ ಮೇಲೆ ಬಂದು ಸುದೀಪ್‍ರನ್ನು ಭೇಟಿ ಮಾಡಿದ ರಘು ದೀಕ್ಷಿತ್, ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ಮ್ಯೂಸಿಕ್ ಜರ್ನಿ ಬಗ್ಗೆ ಮಾತನಾಡಿದ್ದಾರೆ. ಬಳಿಕ ಇದೇ ಮೊದಲ ಬಾರಿಗೆ ಗಾಯಕ ರಾಜೇಶ್ ಕೃಷ್ಣನ್‍ರವರು ಬಿಗ್‍ಬಾಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದಾರೆ.

    ಈ ವೇಳೆ ರಘು ದೀಕ್ಷಿತ್, ನಾನು ಯಾವುದಾರೂ ಮ್ಯೂಸಿಕ್ ಕಂಪೋಸ್ ಮಾಡಲು ಹೋದರೆ, ಜನ ನನಗೆ ಜಸ್ಟ್ ಮಾತ್ ಮಾತಲ್ಲಿ ಸಿನಿಮಾದ ರೀತಿ ಮ್ಯೂಸಿಕ್ ನೀಡಿ ಎಂದು ಹೇಳುತ್ತಾರೆ. ಆದರೆ ನನಗೆ ಮತ್ತೆ ಆ ರೀತಿ ಮ್ಯೂಸಿಕ್ ನೀಡಲು ಸಾಧ್ಯವಿಲ್ಲ. ನಾನು ಮ್ಯೂಸಿಕ್ ನೀಡಿದ ಸೈಕೋ ಸಿನಿಮಾ ಇನ್ನೂ ತೆರೆ ಕಂಡಿರಲಿಲ್ಲ. ಆಗ ಯಾವುದೋ ರೇಡಿಯೋ ಜಿಂಗಲ್‍ನನ್ನು ಕೇಳಿ ವಿನಾಯಕ್ ಜೋಶಿಗೆ ಕರೆ ಮಾಡಿ ಸುದೀಪ್‍ರವರು ನಂಬರ್ ತೆಗೆದುಕೊಂಡು ಸ್ಕ್ರಿಪ್ಟ್ ನೀಡಿ ಏನಾದರೂ ಮಾಡು ಎಂದು ಹೇಳಿ ಅವಕಾಶ ನೀಡಿದರು ಎಂದು ಹೇಳುತ್ತಾ, ಮೊದಲ ಬಾರಿಗೆ ಸುದೀಪ್‍ಗೆ ಸಾಂಗ್ ಕಂಪೋಸ್ ಮಾಡಿದ ಜಸ್ಟ್ ಮಾತ್ ಮಾತಲ್ಲಿ ಹಾಡನ್ನು ಹಾಡಿದ್ದಾರೆ.

    ಸುಮಾರು 25 ವರ್ಷಕ್ಕಿಂತ ಹೆಚ್ಚು ವರ್ಷಗಳ ಕಾಲ ಸುದೀಪ್ ನಾನು ಸ್ನೇಹಿತರು ಆ ಸ್ನೇಹದ ಪ್ರತಿಕವಾಗಿ ಸುದೀಪ್ ಎಷ್ಟೋ ಹಾಡುಗಳನ್ನು ನನಗೆ ನೀಡಿದ್ದಾರೆ. ನನ್ನ ಮೇಲೆ ವಿಶ್ವಾಸ ಇಟ್ಟು, ನನ್ನ ಧ್ವನಿ ಹಾಗೂ ಎಕ್ಸ್ ಪ್ರೆಶನ್‍ನ್ನು ತುಂಬಾ ಇಷ್ಟಪಟ್ಟು, ಒಂದಷ್ಟು ಮುತ್ತುಗಳನ್ನು ನೀಡಿದ್ದಾರೆ. ಅದರಲ್ಲಿ ಎರಡು ಹಾಡುಗಳನ್ನು ಹಾಡುತ್ತೇನೆ ಎಂದು ಚಂದು ಹಾಗೂ ಪಾರ್ಥ ಸಿನಿಮಾದ ಹಾಡುಗಳನ್ನು ಹಾಡಿದ್ದಾರೆ.

    ನಾನು ಸುದೀಪ್‍ಗೆ ದೊಡ್ಡ ಬಿಗ್ ಫ್ಯಾನ್. ನಿನ್ನ ಈಗ ಸಿನಿಮಾವನ್ನು ಯಾವ ಭಾಷೆಯಲ್ಲಿ ಬಂದರೂ ನಾನು ನೋಡುತ್ತಲೆ ಇರುತ್ತೇನೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಒಟ್ಟಾರೆ ಬಿಗ್‍ಬಾಸ್ ವೇದಿಕೆಯಲ್ಲಿ ಬರೀ ಡ್ಯಾನ್ಸ್ ಮಾತ್ರವಲ್ಲದೇ ಸಂಗೀತ ರಸಮಂಜರಿಯನ್ನು ಕೂಡ ಏರ್ಪಡಿಸುವ ಮೂಲಕ ಸ್ಪರ್ಧೀಗಳಿಗೆ ಮನರಂಜನೆಯನ್ನು ನೀಡಲಾಯಿತು. ಇದನ್ನೂ ಓದಿ:ದಿವ್ಯಾ ಸುರೇಶ್ ಬಗ್ಗೆ ಲ್ಯಾಗ್ ಮಂಜು ಹೇಳಿದ್ದೇನು..?

  • ಬಿಗ್ ಮನೆಯಿಂದ ಬರುತ್ತಿದ್ದಂತೆ ನಿಧಿ ಮನೆಗೆ ಹೊರಟ ರಘು

    ಬಿಗ್ ಮನೆಯಿಂದ ಬರುತ್ತಿದ್ದಂತೆ ನಿಧಿ ಮನೆಗೆ ಹೊರಟ ರಘು

    ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‍ನಲ್ಲಿ 2ನೇ ವಾರದ ಎಲಿಮಿನೇಷನ್‍ನಲ್ಲಿ ಬಿಗ್ ಮನೆಯಿಂದ ಆಚೆ ಬಂದಿರುವ ಸ್ಪರ್ಧಿ ರಘು. ಮನೆಗೆ ಬರುತ್ತಿದ್ದಂತೆ ರಘುಗೆ ಅದ್ದೂರಿಯಾದ ಸ್ವಾಗತ ಸಿಕ್ಕಿದೆ. ಬಿಗ್‍ಬಾಸ್ ಜರ್ನಿ ನಂತರ ಹೊಸದೊಂದು ಪ್ರವಾಸಕ್ಕೆ ಸಿದ್ಧರಾಗಿ ನಿಂತಿದ್ದಾರೆ. ಇದನ್ನೂ ಓದಿ:  ಬಿಗ್‍ಬಾಸ್ ಮನೆಯಿಂದ ರಘು ಔಟ್

    ಕನ್ನಡ ಬಿಗ್‍ಬಾಸ್ ಮನೆಯಲ್ಲಿ 91 ದಿನಗಳ ಜರ್ನಿ ರಘು ಪಾಲಿಗೆ ಭಾನುವಾರ ಅಂತ್ಯವಾಗಿದೆ. ಸೀಸನ್ 2ರಲ್ಲಿ ಎರಡನೇ ಸ್ಪರ್ಧಿಯಾಗಿ ರಘು ಎಲಿಮಿನೇಟ್ ಆಗಿದ್ದಾರೆ. ರಘು ಮನೆಗೆ ತೆರಳುತ್ತಿದ್ದಂತೆ ಪಟಾಕಿ ಹೊಡೆಯಲಾಗಿದೆ. ಮನೆಯಲ್ಲಿ ವೆಲ್‍ಕಮ್ ಬ್ಯಾಕ್ ಎಂದು ಕೇಕ್ ಕತ್ತರಿಸಿ ಸ್ವಾಗತಿಸಲಾಗಿದೆ. ಈ ಫೋಟೋ ಹಾಗೂ ವೀಡಿಯೋಗಳನ್ನು ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ಹಂಚಿಕೊಂಡು ಸಂತಸ ಹೊರ ಹಾಕಿದ್ದಾರೆ. ನಾನು ಮೈಸೂರಿಗೆ ಬರುತ್ತಿದ್ದೇನೆ ನಿಮ್ಮ ಅಮ್ಮನಿಗೆ ರುಚಿಯಾದ ಅಡುಗೆಯನ್ನು ತಯಾರಿಸಲು ಹೇಳಿ ನಿಧಿ ಎಂದು ರಘು ನಿಧಿ ಸುಬ್ಬಯ್ಯ ಅವರನ್ನು ಟ್ಯಾಗ್ ಮಾಡಿ ಫೋಟೋವೊಂದನ್ನು ಹಂಚಿಕೊಂಡಿದ್ದಾರೆ. ಬನ್ನಿ ರಘು ಅಮ್ಮಾ ಚಿಲ್ಲಿ ಪೋರ್ಕ್ ಮಾಡುತ್ತಾರೆ ಎಂದು ನಿಧಿ ರಘು ಅವರ ಪೋಸ್ಟ್‍ಗೆ ಪ್ರತಿಕ್ರಿಯಿಸಿದ್ದಾರೆ.

    ರಘು ಅವರು ಬಿಗ್‍ಬಾಸ್ ಮನೆಯಲ್ಲಿ ನಿಧಿ ಸುಬ್ಬಯ್ಯ, ರಘು ಉತ್ತಮ ಬಾಂಧವ್ಯವನ್ನು ಹೊಂದಿದ್ದರು. ಬಿಗ್‍ಬಾಸ್ ಮನೆಯಿಂದ ಶುರುವಾದ ಈ ಸ್ನೇಹ ಹೊರಗೆ ಬಂದ ಮೇಲೂ ಅಷ್ಟೆ ಚೆನ್ನಾಗಿದೆ. ಸಿಧಿ ಮನೆಗೆ ಹೋಗಲು ಸಿದ್ಧರಾಗಿದ್ದಾರೆ.

    ಚಕ್ರವರ್ತಿ ಚಂದ್ರಚೂಡ್, ಮಂಜು ಪಾವಗಡ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ರಘು ಗೌಡ, ಶಮಂತ್ ಬ್ರೋ ಗೌಡ, ವೈಷ್ಣವಿ, ಅರವಿಂದ್ ಕೆ.ಪಿ ಮೇಲೆ ಎಲಿಮಿನೇಷನ್ ತೂಗುಗತ್ತಿ ತೂಗುತ್ತಿತ್ತು. ಮೊದಲು ಮಂಜು ಸೇವ್ ಆದರು. ನಂತರ ಅರವಿಂದ್, ವೈಷ್ಣವಿ ಗೌಡ, ದಿವ್ಯಾ ಸುರೇಶ್, ಪ್ರಶಾಂತ್ ಸಂಬರಗಿ, ಶಮಂತ್ ಬ್ರೋ ಗೌಡ, ಪ್ರಿಯಾಂಕಾ ತಿಮ್ಮೇಶ್ ಸೇವ್ ಆದರು. ಕೊನೆಯಲ್ಲಿ ಚಕ್ರವರ್ತಿ ಹಾಗೂ ರಘು ಉಳಿದುಕೊಂಡರು. ಚಕ್ರವರ್ತಿ ಸೇವ್ ಆಗಿ, ರಘು ಔಟ್ ಆದರು.

  • ಬಿಗ್‍ಬಾಸ್ ಮನೆಯಿಂದ ರಘು ಔಟ್

    ಬಿಗ್‍ಬಾಸ್ ಮನೆಯಿಂದ ರಘು ಔಟ್

    ಬಿಗ್‍ಬಾಸ್ ಎರಡನೇ ಇನ್ನಿಂಗ್ಸ್‌ನ ಮೂರನೇ ವಾರ ರಘು ಗೌಡರವರು ದೊಡ್ಮನೆಯಿಂದ ಹೊರ ಬಂದಿದ್ದಾರೆ.

    ಬಿಗ್‍ಬಾಸ್ ಮನೆಯ 13ನೇ ಸ್ಪರ್ಧಿಯಾಗಿ ದೊಡ್ಮನೆಗೆ ಎಂಟ್ರಿ ಕೊಟ್ಟ ರಘು, ಇನ್‍ಸ್ಟಾಗ್ರಾಮ್‍ನಲ್ಲಿ ರಘು ವೈನ್ ಸ್ಟೋರ್ ಎಂಬ ಖಾತೆಯ ಮೂಲಕವೇ ಸಖತ್ ಫೇಮಸ್. ದೊಡ್ಮನೆಯಲ್ಲಿ ಎಲ್ಲ ಸ್ಪರ್ಧಿಗಳೊಂದಿಗೆ ಉತ್ತಮ ಬಾಂಧವ್ಯ ಹಾಗೂ ಗುಡ್ ಮ್ಯಾನರಿಸಮ್ ಹೊಂದಿರುವ ರಘುರವರು, ಈ ವಾರ ಟಾಸ್ಕ್‌ಗಳಲ್ಲಿ ಕೂಡ ಉತ್ತಮ ಪ್ರದರ್ಶನ ನೀಡಿದ್ದಾರೆ.

    ಬಿಗ್‍ಬಾಸ್ ಫಸ್ಟ್ ಇನ್ನಿಂಗ್ಸ್‌ನಲ್ಲಿ ಅಷ್ಟಾಗಿ ಆಕ್ಟೀವ್ ಆಗಿರದ ರಘು ಸೆಕೆಂಡ್ ಇನ್ನಿಂಗ್ಸ್‍ನಲ್ಲಿ ರೊಚ್ಚು ರಘು ಆಗಿ ಬಂದಿರುವುದಾಗಿ ತಿಳಿಸಿ ಮೊದಲ ವಾರದಿಂದಲೇ ಟಾಸ್ಕ್‌ಗಳಲ್ಲಿ ಚೆನ್ನಾಗಿ ಭಾಗವಹಿಸುವ ಮೂಲಕ ಕಿಚ್ಚನ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ದೊಡ್ಮನೆಯಲ್ಲಿ ವೈಷ್ಣವಿಯವರ ಬೆಸ್ಟ್ ಫ್ರೆಂಡ್ ಆಗಿರುವ ರಘು ತಮ್ಮ ತುಂಟತನ, ತರ್ಲೆ ಹಾಗೂ ಕಾಮಿಡಿ ಮಾಡುವ ಮೂಲಕ ಮನೆಯ ಸ್ಪರ್ಧಿಗಳಿಗೆ ನಗುವಿನ ಕಚಗುಳಿ ನೀಡುತ್ತಿದ್ದರು.

    ಸದ್ಯ ಈ ವಾರ ಜೋಡಿ ಟಾಸ್ಕ್, ನೋಟು ಮುದ್ರಣಾ ಟಾಸ್ಕ್, ಬಲೂನ್ ಟಾಸ್ಕ್ ಹೀಗೆ ಹಲವಾರು ಟಾಸ್ಕ್‌ಗಳಲ್ಲಿ ಭಾಗವಹಿಸಿ ಸಿಂಪಲ್ ಆಗಿ ಆಟಗಳನ್ನು ಆಡಿದ್ದ ರಘು, ಬಿಗ್‍ಬಾಸ್ ಸೆಕೆಂಡ್ ಇನ್ನಿಂಗ್ಸ್‌ನ ಮನೆಯಿಂದ ಹೊರಗೆ ಬರುತ್ತಿರುವ ಎರಡನೇ ಸ್ಪರ್ಧಿಯಾಗಿದ್ದಾರೆ. ಈ ಮುನ್ನ ಸ್ಯಾಂಡಲ್‍ವುಡ್ ನಟಿ ನಿಧಿ ಸುಬ್ಬಯ್ಯರವರು ದೊಡ್ಮನೆಯಿಂದ ಹೊರಬಂದಿದ್ದರು. ಇದನ್ನೂ ಓದಿ: 72 ದಿನಗಳ ಹಿಂದೆ ನಾನು ನೋಡಿದ್ದ ಕೆಪಿ ಹೀಗೆ ಇರಲಿಲ್ಲ: ಸುದೀಪ್

  • ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ನನಗೆ ಆ ಆಘಾತದಿಂದ ಆಚೆ ಬರಲು ಆಗುತ್ತಿಲ್ಲ: ರಘು

    ಪ್ರತಿವಾರ ಕೊನೆಯಲ್ಲಿ ಕಿಚ್ಚ ಸುದೀಪ್ ಅವರು ಯೆಸ್ ಆರ್ ನೋ ಪ್ರಶ್ನೆಗಳನ್ನು ಮನೆಯ ಸ್ಪರ್ಧಿಗಳನ್ನು ಕೇಳುತ್ತಾರೆ. ಹಾಗೆಯೇ ಈ ವಾರ ಸುದೀಪ್, ಮೊದಲ ಪ್ರಶ್ನೆಯಲ್ಲಿಯೇ ಸ್ನಾನಕ್ಕೆ ಹೋದ ಮೇಲೆ ಇನ್ಮುಂದೆ ಯಾವುದೇ ಕಾರಣಕ್ಕೂ ರಘುರವರು ಬಾಗಿಲು ತೆಗೆಯುವುದಿಲ್ಲ ಎಂದು ಹೇಳುತ್ತಾರೆ.

    ಈ ವೇಳೆ ಮನೆಮಂದಿ ಯೆಸ್ ಎಂದು ಉತ್ತರಿಸಿದ್ದಾರೆ. ಆಗ ಸುದೀಪ್‍ರವರು ಯೆಸ್ ಯಾಕೆ ಎಂದು ಪ್ರಶಾಂತ್ ಸಂಬರ್ಗಿಯವರನ್ನು ಕೇಳಿದಾಗ, ರಘು ಈಗ ಹೆದರಿಕೊಂಡು ಬಿಟ್ಟಿದ್ದಾರೆ. ಸೋಪ್ ಬೇಕು, ಟವೆಲ್ ಬೇಕು ಎಂದು ಏನೂ ಕೇಳುವುದಿಲ್ಲ. ಬಟ್ಟೆ ಹಾಕಿಕೊಂಡು ಆಚೆ ಬರುತ್ತಾರೆ ಎನ್ನುತ್ತಾರೆ. ನಂತರ ಶಮಂತ್ ಇನ್ನು ಏನೂ ಉಳಿದಿಲ್ಲ ಎಂದು ಹೇಳುತ್ತಾರೆ.

    ಆದರೆ ನೋ ಎಂದಿದ್ದ ಚಕ್ರವರ್ತಿಯವರು, ಶೋ ಮುಗಿದ ನಂತರ ಎಲ್ಲಾ ಗೊತ್ತಾಗಿರುತ್ತದೆ. ಏನು ಭಯವಿರುವುದಿಲ್ಲ. ಒಂದು ಸಾರಿ ಆ ರೀತಿ ಆಗುವ ತನಕ ಅಷ್ಟೇ. ರಘು ಈಗ ಯಾವ ಕಾನ್ಫಿಡೆಂಟ್ಸ್ ಲೆವರ್‍ನಲ್ಲಿದ್ದಾರೆ ಎಂದರೆ ರೊಚ್ಚು ರಘು ಆಗಿದ್ದಾರೆ ಎಂದಿದ್ದಾರೆ.

    ಕೊನೆಗೆ ರಘುರವರು ನಾನು ಆ ಆಘಾತದಿಂದ ಆಚೆ ಬರುವುದಕ್ಕೆ ಆಗುತ್ತಿಲ್ಲ ಎಂದಾಗ, ಸುದೀಪ್‍ರವರು ಪ್ರಶಾಂತ್‍ರವರಿಗೂ ಬರಲು ಆಗುತ್ತಿಲ್ಲ ಎನ್ನುತ್ತಾರೆ. ಈ ವೇಳೆ ರಘು ಪ್ರಶಾಂತ್‍ರವರಿಗೆ ಆಘಾತವಾಗಿರುವಂತೆ ನನಗೆ ಒಂದು ಪರ್ಸೆಂಟ್ ಕೂಡ ಕಾಣಿಸುತ್ತಿಲ್ಲ. ಸ್ನಾನಕ್ಕೆ ಹೋಗುವುದಕ್ಕೂ ಮುನ್ನ ಸೋಪ್, ಶ್ಯಾಂಪೂ ಎಲ್ಲ ಇದ್ಯಾ ಎಂದು ಚೆಕ್ ಮಾಡುತ್ತೇನೆ. ಆದರೆ ಅವತ್ತು ಜಗ್‍ನನ್ನು ಮರೆತು ಹೋಗಿದ್ದೆ ಅಷ್ಟೇ ಸರ್. ಬಾಗಿಲು ತೆರೆದು ಸ್ವಲ್ಪ ಕೈ ಆಚೆ ಹಾಕಿದ್ದೆ ಅಷ್ಟೋತ್ತಿಗೆ ಇವರು ಬಂದು ಬಿಟ್ಟರು. ಅದರಲ್ಲೂ ಅಂದು ನನ್ನನ್ನು ಎಳೆದು ಈಚೆ ಎಲ್ಲಿ ಹಾಕಿಬಿಡುತ್ತಾರೋ ಎಂದು ಭಯವಾಗಿತ್ತು ಎಂದು ಹೇಳುತ್ತಾರೆ. ಈ ವೇಳೆ ರಘು ಮಾತು ಕೇಳಿ ಮನೆಮಂದಿಯೆಲ್ಲಾ ಸಿಕ್ಕಾಪಟ್ಟೆ ನಕ್ಕಿದ್ದಾರೆ.

  • ರಘುಗೆ  ಹುಚ್ಚುನಾಯಿ ಕಚ್ಚಿದ್ಯಾ ಎಂದಿದ್ಯಾಕೆ ವೈಷ್ಣವಿ..?

    ರಘುಗೆ ಹುಚ್ಚುನಾಯಿ ಕಚ್ಚಿದ್ಯಾ ಎಂದಿದ್ಯಾಕೆ ವೈಷ್ಣವಿ..?

    ಬಿಗ್ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಈ ನಡುವೆ ತುಂಬಾ ಚೆನ್ನಾಗಿ ಮಾತನಾಡಿಕೊಂಡಿದ್ದ ರಘು ಮತ್ತು ವೈಷ್ಣವಿ ಅವರಲ್ಲಿ ಕೂಡ ಮೋಡ ಆವರಿಸಿತ್ತು. ಇದನ್ನು ಸರಿಪಡಿಸಿಕೊಳ್ಳಲು ಈ ಇಬ್ಬರು ಕೂಡ ಒಬ್ಬರಿಗೊಬ್ಬರು ಕೂತು ಮಾತನಾಡಿಕೊಂಡಿದ್ದಾರೆ.

    ತಡರಾತ್ರಿ ಮಾತಿಗಿಳಿದ ವೈಷ್ಣವಿ ಮತ್ತು ರಘು ತಮ್ಮಲ್ಲಿದ್ದ ಭಿನ್ನಾಭಿಪ್ರಾಯಗಳ ಬಗ್ಗೆ ಹೇಳಿಕೊಂಡರು. ನಾನು ನಿಮ್ಮೊಂದಿಗೆ ಮೂರ್ನಾಲ್ಕು ಬಾರಿ ಮಾತನಾಡಿಸಲು ಬಂದೆ ನೀವು ಮಾತನಾಡದೆ ನನ್ನನ್ನು ನೋಡದೆ ಹೋಗಿದ್ದಿರಿ ಎಂದು ವೈಷ್ಣವಿ ರಘುಗೆ ಹೇಳಿದ್ದಾರೆ.

    ಇದಕ್ಕೆ ಉತ್ತರಿಸಿದ ರಘು, ನಾನು ನಿಮ್ಮೊಂದಿಗೆ ಮಾತನಾಡಲು ಬಂದೆ. ನಿಮ್ಮನ್ನು ಹೊರಗಡೆ ಮೋಡ ನೋಡಲು ಕರೆದಿದ್ದೆ ನೀವು ಬಂದಿರಲಿಲ್ಲ. ನಾನು ಮತ್ತೆ ಸುಮ್ಮನಾದೆ ಎಂದರು. ಇದನ್ನು ಕೇಳಿಸಿಕೊಂಡ ವೈಷ್ಣವಿ ನಾನು ಕೂಡ ನಿಮ್ಮನ್ನು ಮಾತನಾಡಿಸಲು ಬಂದೆ. ಏನಾಗಿದೆ ಎಂದು ಕೇಳಿದೆ ನೀವು ಏನಿಲ್ಲ ಎಂದು ಹೇಳಿದಾಗ ನಾನು ನಿಮಗೆ ಹುಚ್ಚುನಾಯಿ ಕಚ್ಚಿದ್ಯಾ ಎಂದು ಕೇಳಿದೆ ಎಂದು ವಿವರಿಸಿದರು. ಇದನ್ನೂ ಓದಿ: ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್

    ನನಗೆ ನೀವು ಕೇಳಿದ್ದು ಕೇಳಿಸಿಲ್ಲ. ನಿಮಗೆ ಹುಚ್ಚುನಾಯಿ ಕಚ್ಚಿತ್ತ ಎಂದು ವೈಷ್ಣವಿಗೆ ಮರು ಪ್ರಶ್ನೆ ಹಾಕಿದ್ದಾರೆ. ವೈಷ್ಣವಿ ಇಲ್ಲ ಪರಿಸ್ಥಿತಿ ಹಾಗೆ ಅನಿಸುತ್ತಿತ್ತು. ಇಲ್ಲಿನ ಕೆಲವು ಘಟನೆಗಳನ್ನು ನೋಡಿದಾಗ ಮನಸ್ಥಿತಿ ಬದಲಾಗಬೇಕು ಎಂದು ಅಂದುಕೊಂಡಿದ್ದೇನೆ ಎಂದರು. ಬಳಿಕ ಪರಸ್ಪರ ಕ್ಷಮೆ ಯಾಚಿಸುತ್ತಾ ಮುಖದಲ್ಲಿ ನಗು ತರಿಸಿಕೊಂಡರು.

  • ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್

    ದೊಡ್ಮನೆ ಒಳಗಿನ ಗುಂಪುಗಾರಿಕೆ ಕಂಡು ಬೇಸರ ವ್ಯಕ್ತಪಡಿಸಿದ ಶಮಂತ್

    ಬಿಗ್‍ಬಾಸ್ ಮನೆಯಲ್ಲಿ ಇದೀಗ ಸ್ಪರ್ಧಿಗಳ ನಡುವೆ ಗುಂಪುಗಾರಿಕೆ ಶುರುವಾಗಿದೆ. ಒಂದಾಗಿದ್ದ ಮನೆಮಂದಿ ಇದೀಗ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗದಷ್ಟರ ಮಟ್ಟಿಗೆ ಮನಸ್ತಾಪ ಬೆಳೆದುನಿಂತಿದೆ. ಇದನ್ನು ಗಮನಿಸುತ್ತಿರುವ ಶಮಂತ್ ಮತ್ತು ರಘು ತಮ್ಮ ಭಾವನೆಗಳನ್ನು ಒಬ್ಬರಿಗೊಬ್ಬರು ಹಂಚಿಕೊಂಡಿದ್ದಾರೆ.

    ಈ ಮನೆಯಲ್ಲಿ 40 ವರ್ಷಕ್ಕಿಂತ ಮೇಲ್ಪಟ್ಟವರು ಒಂದಿಷ್ಟು ಜನ ಇದ್ದಾರೆ. ಅದಕ್ಕಿಂತ ಕಡಿಮೆ ವಯಸ್ಸಿನವರು ಒಂದಿಷ್ಟು ಜನ ಇದ್ದೇವೆ. ನಾವು ಈ ಮನೆಯಲ್ಲಿರುವವರನ್ನು ಒಟ್ಟಾಗಿ ಕರೆದುಕೊಂಡು ಹೋಗಿ ಒಳ್ಳೆಯ ಭಾವನೆ ಬರುವಂತೆ ನೋಡಿಕೊಳ್ಳಬೇಕೆಂದು ಅನಿಸುತ್ತಿದೆ ಎಂದು ಶಮಂತ್ ಅವರು ರಘು ಬಳಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ನಾನು ಮನೆಗೆ ಹೋಗ್ತೀನಿ – ಬಿಗ್ ಮನೆಯಲ್ಲಿ ಕಣ್ಣೀರಿಟ್ಟ ದಿವ್ಯಾ

    ಈ ವೇದಿಕೆ ನಮಗೆ ತುಂಬಾ ದೊಡ್ಡದು. ನಾವು ಮೊದಲು ಇದ್ದಂತೆ ಈ ಮನೆಯಲ್ಲಿ ಇಲ್ಲ ತುಂಬಾ ಬದಲಾವಣೆಗಳು ಕಂಡು ಬರುತ್ತಿದೆ. ನಾವೆನಾ ಇಲ್ಲಿ ಇರೋದು ಎನ್ನುವಷ್ಟರ ಮಟ್ಟಿಗೆ ಬದಲಾವಣೆ ಕಾಣಿಸುತ್ತಿದೆ. ಮನೆ ತುಂಬಾ ಖಾಲಿ, ಖಾಲಿ ಅನಿಸುತ್ತಿದೆ. ಅವರು ಇವರನ್ನು ಮಾತನಾಡಿಸುತ್ತಿಲ್ಲ. ಇವರು ಅವರನ್ನು ಮಾತನಾಡಿಸುತ್ತಿಲ್ಲ ಏನಿದು ಎಂದು ಶಮಂತ್ ಬೇಸರ ವ್ಯಕ್ತಪಡಿಸಿದ್ದಾರೆ.

    ಇದಕ್ಕೆ ರಘು ನಾನು ಯಾವ ಟೀಂ ಜೊತೆಗೂ ಗುರುತಿಸಿಕೊಂಡಿಲ್ಲ. ಟಾಸ್ಕ್ ಬಂದಾಗ ಟೀಂ ಓಕೆ ಅದನ್ನು ಹೊರತು ಪಡಿಸಿ ಗುಂಪುಗಾರಿಕೆ ಸರಿ ಅನಿಸಲಿಲ್ಲ. ನನಗೆ ಅರವಿಂದ್ ಅವರು ಮಾತನಾಡಿದ್ದು ಸರಿ ಅನಿಸಲಿಲ್ಲ ಅವರು ವೈಯಕ್ತಿಕ ವಿಚಾರವಾಗಿ ಮಾತನಾಡಬಾರದು ಎಂದರು. ಇದನ್ನು ಕೇಳಿಸಿಕೊಂಡ ಶಮಂತ್ ನಮ್ಮಲ್ಲಿ ವೈಯಕ್ತಿಕವಾಗಿ ಒಬ್ಬರಿಗೊಬ್ಬರು ಜಗಳವಾಡುತ್ತಿದ್ದಾರೆ ಎಂದು ಬಿಗ್ ಬಾಸ್ ಮನೆಯ ಮಾತಿನ ಕಲಹದ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.