Tag: ರಘಭಟ್

  • ಕಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಸ್ಯಾಂಡಲ್‍ವುಡ್ ನಟ

    ಕಳ್ಳರನ್ನು ಚೇಸ್ ಮಾಡಿ ಸೆರೆಹಿಡಿದ ಸ್ಯಾಂಡಲ್‍ವುಡ್ ನಟ

    ಬೆಂಗಳೂರು: ಕ್ಯಾಬ್ ಡ್ರೈವರ್‌ ಬಳಿ ದರೋಡೆ ಮಾಡಿ ಎಸ್ಕೇಪ್ ಆಗುತ್ತಿದ್ದ ಇಬ್ಬರು ಕಳ್ಳರನ್ನು ಸ್ಯಾಂಡಲ್‍ವುಡ್ ನಟರೊಬ್ಬರು ಚೇಸ್ ಮಾಡಿ ಸೆರೆಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    ನಟ ರಘುಭಟ್ ಗುರುವಾರ ರಾತ್ರಿ ‘ಅವನೇ ಶ್ರೀಮನ್ನಾರಾಯಣ’ ಪ್ರೀಮಿಯರ್ ಶೋ ನೋಡಿಕೊಂಡು ಮನೆಗೆ ಹೋಗುತ್ತಿದ್ದರು. ಈ ವೇಳೆ ಹಲಸೂರಿನ RMZ ಸರ್ಕಲ್ ಬಳಿ ಇಬ್ಬರು ದುಷ್ಕರ್ಮಿಗಳು ಕ್ಯಾಬ್ ಡ್ರೈವರ್ ರಘುನಾಥ್ ಎಂಬವರ ಬಳಿ ಹಣ, ಮೊಬೈಲ್ ಕಸಿದು ಎಸ್ಕೇಪ್ ಆಗುತ್ತಿದ್ದರು.

    ಇದನ್ನು ನೋಡಿದ ನಟ ರಘುಭಟ್ ಬೈಕನ್ನು ಹಿಂಬಾಲಿಸಿದ್ದಾರೆ. ಆದರೆ ವೇಗವಾಗಿ ತಪ್ಪಿಸಿಕೊಳ್ಳುವ ಬರದಲ್ಲಿ ರಸ್ತೆ ವಿಭಜಕ್ಕೆ ಡಿಕ್ಕಿ ಹೊಡೆದು ಕಳ್ಳರು ಕೆಳಗಿಬಿದ್ದಿದ್ದಾರೆ. ಈ ವೇಳೆ ನಟ ರಘುಭಟ್ ಆರೋಪಿ ಅಬ್ದುಲ್‍ನನ್ನು ಸೆರೆಹಿಡಿದ್ದಾರೆ. ಮತ್ತೊಬ್ಬ ಆರೋಪಿ ಮೋಯಿನ್‍ಗೆ ಗಂಭೀರವಾಗಿ ಗಾಯಗಳಾಗಿತ್ತು. ತಕ್ಷಣ ನಟ ರಘುಭಟ್ ಪೊಲೀಸರಿಗೆ ಮಾಹಿತಿ ತಿಳಿಸಿ, ಆರೋಪಿಗಳನ್ನು ಹಲಸೂರು ಪೊಲೀಸರ ವಶಕ್ಕೆ ನೀಡಿದ್ದಾರೆ.

    ನಟನ ಕಾರ್ಯಕ್ಕೆ ಪೊಲೀಸರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟ ರಘುಭಟ್ ‘ಅನ್ವೇಷಿ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.