Tag: ರಕ್ಷಿತ್ ತೀರ್ಥಹಳ್ಳಿ

  • ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್

    ಜೂ.27ಕ್ಕೆ `ತಿಮ್ಮನ ಮೊಟ್ಟೆಗಳು’ ರಿಲೀಸ್

    ಕ್ಷಿತ್ ತೀರ್ಥಹಳ್ಳಿಯವರ ಬರವಣಿಗೆ ಮತ್ತು ನಿರ್ದೇಶನದಲ್ಲಿ ಮೂಡಿಬರುತ್ತಿರುವ ತಿಮ್ಮನ ಮೊಟ್ಟೆಗಳು ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದ್ದು, ಇದೇ ಜೂ.27ಕ್ಕೆ ತೆರೆಕಾಣುತ್ತಿದೆ.

    ತಿಮ್ಮನ ಮೊಟ್ಟೆಗಳು ಚಿತ್ರತಂಡ ವಾಸುಕಿ ವೈಭವ್ ಹಾಡಿರುವ `ಕಾಡು ದಾರಿ’ ಎಂಬ ಹಾಡಿನ ಲಿರಿಕಲ್ ವಿಡಿಯೋ ಅನಾವರಣ ಮಾಡುವುದರೊಂದಿಗೆ ಸಿನಿಮಾ ಬಿಡುಗಡೆ ದಿನಾಂಕವನ್ನು ಘೋಷಿಸಿದೆ.ಇದನ್ನೂ ಓದಿ: ನಟಿ ಕರಿಷ್ಮಾ ಕಪೂರ್‌ ಮಾಜಿ ಪತಿ ಸಂಜಯ್‌ ಹೃದಯಾಘಾತದಿಂದ ನಿಧನ

    ಶ್ರೀಕೃಷ್ಣ ಪ್ರೊಡಕ್ಸನ್ಸ್ ಬ್ಯಾನರ್ ಅಡಿಯಲ್ಲಿ ಮೂಡಿಬರುತ್ತಿರುವ ಚೊಚ್ಚಲ ನಿರ್ಮಾಣಕ್ಕೆ ಆದರ್ಶ್ ಅಯ್ಯಂಗಾರ್ ಬಂಡವಾಳ ಹೂಡಿದ್ದಾರೆ. ರಕ್ಷಿತ್ ತೀರ್ಥಹಳ್ಳಿಯವರೇ ಬರೆದ ಕಾಡಿನ ನೆಂಟರು ಕಥಾಸಂಕಲನದಿಂದ ಆಯ್ದ ಒಂದು ಕಥೆ ತಿಮ್ಮನ ಮೊಟ್ಟೆಗಳು ಸಿನಿಮಾ ಆಗಿ ತೆರೆಕಾಣಲಿದೆ.

    ಅಮೇರಿಕಾದ ಡಲ್ಲಾಸ್‌ನಲ್ಲಿ ಪ್ರಿಮೀಯರ್ ಶೋ ಮಾಡಿಕೊಂಡಿದ್ದ ಚಿತ್ರತಂಡಕ್ಕೆ ಉತ್ತಮ ಅಭಿಪ್ರಾಯಗಳು ಬಂದಿದ್ದವು. ಚಿತ್ರದ ಕಥಾವಸ್ತುವಿನಲ್ಲಿ ಕಾಳಿಂಗ ಹಾವು ಪ್ರಮುಖ ಪಾತ್ರವಹಿಸಿದ್ದು, ಮಾನವ ಹಾಗೂ ಪ್ರಾಣಿ ಸಂಬಂಧದ ಸಣ್ಣ ಎಳೆಯ ಭಾವುಕತೆ ಎಲ್ಲರ ಗಮನ ಸೆಳೆದು ಚಿತ್ರತಂಡ ಮೆಚ್ಚುಗೆಗೆ ಪಾತ್ರವಾಗಿತ್ತು. ಇದಕ್ಕೂ ಮುನ್ನ ಕೋಲ್ಕತ್ತಾ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡಿತ್ತು. ಜೊತೆಗೆ ದೆಹಲಿಯಲ್ಲಿ ನಡೆದ ದಾದಾ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ ಸ್ಪೆಷಲ್ ಜೂರಿ ಮೆನ್ಷನ್ ಅವಾರ್ಡ್ ಕೂಡ ಪಡೆದುಕೊಂಡಿತ್ತು.

    ಪ್ರಕೃತಿ ಮತ್ತು ಮನುಷ್ಯನ ನಡುವಿನ ಸೂಕ್ಷ್ಮ ಸಂವೇದನೆಗಳನ್ನೊಳಗೊಂಡ ಈ ಚಿತ್ರದಲ್ಲಿ ಕೇಶವ್ ಗುತ್ತಳಿಕೆ, ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಕರ್, ಶೃಂಗೇರಿ ರಾಮಣ್ಣ, ಪ್ರಗತಿ ಪ್ರಭು, ರಘು ರಾಮನಕೊಪ್ಪ, ಮಾಸ್ಟರ್ ಹರ್ಷ, ವಿನಯ್ ಕಣಿವೆ, ಪೃಥ್ವಿರಾಜ್ ಕೊಪ್ಪ, ಪ್ರಾಣೇಶ್ ಕೂಳೆಗದ್ದೆ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಪ್ರವೀಣ್.ಎಸ್ ಅವರ ಛಾಯಾಗ್ರಹಣ, ಕೆಂಪರಾಜು.ಬಿ.ಎಸ್ ಅವರ ಸಂಕಲನ ಹಾಗೂ ಹೇಮಂತ್ ಜೋಯಿಷ್ ಅವರ ಸಂಗೀತವಿದೆ.ಇದನ್ನೂ ಓದಿ: ಕಾಂತಾರ ಚಾಪ್ಟರ್-1 | ದೈವದ ನೇಮೋತ್ಸವ ಚಿತ್ರೀಕರಣಕ್ಕೂ ಮುನ್ನವೇ ಸಹ ಕಲಾವಿದ ಸಾವು

  • ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಫಾಲ್ಕೆ ಜ್ಯೂರಿ ಅವಾರ್ಡ್

    ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ ಫಾಲ್ಕೆ ಜ್ಯೂರಿ ಅವಾರ್ಡ್

    ದಿನಾಲ್ಕನೇ ದಾದ ಸಾಹೇಬ್ ಫಾಲ್ಕೆ ಚಲನಚಿತ್ರೋತ್ಸವದಲ್ಲಿ (Dada Saheb Phalke Film Festival) ರಕ್ಷಿತ್  ತೀರ್ಥಹಳ್ಳಿ ನಿರ್ದೇಶನದ ‘ತಿಮ್ಮನ ಮೊಟ್ಟೆಗಳು’ ಚಿತ್ರಕ್ಕೆ Honorable Jury Mention Award ದೊರೆತಿದೆ. ಏಪ್ರಿಲ್ 30 ರಂದು ದೆಹಲಿಯಲ್ಲಿ ನಡೆದ  ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಚಿತ್ರ ತಂಡ ಪ್ರಶಸ್ತಿ ಸ್ವೀಕರಿಸಿತು.

    ನಿರ್ದೇಶಕರೇ (Rakshit Tirthahalli) ಬರೆದ ‘ಕಾಡಿನ ನೆಂಟರು’ ಪುಸ್ತಕ ಆಧರಿಸದ ಕಥೆ ತಿಮ್ಮನ ಮೊಟ್ಟೆಗಳು (Timmana Mottegalu) ಚಿತ್ರಕ್ಕಿದೆ. ಶ್ರೀ ಕೃಷ್ಣ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಆದರ್ಶ್ ಅಯ್ಯಂಗಾರ್ ಅವರ ನಿರ್ಮಾಣ ಚಿತ್ರಕ್ಕಿದೆ.

     

    ಸುಚೇಂದ್ರ ಪ್ರಸಾದ್, ಆಶಿಕಾ ಸೋಮಶೇಖರ್, ಮಾಸ್ಟರ್ ಹರ್ಷ, ರಾಮಣ್ಣ ರಘು ರಾಮನಕೊಪ್ಪ ಸೇರಿದಂತೆ ಹಲವಾರು ನಟರು ತಾರಾಗಣದಲ್ಲಿ ಇದ್ದಾರೆ. ಪಶ್ಚಿಮ ಘಟ್ಟಗಳಲ್ಲಿ ಕಂಡು ಬರುವ ಕಾಳಿಂಗ ಸರ್ಪದ ಬಗ್ಗೆ ವಿಶೇಷ ಮಾಹಿತಿ ಕೂಡ ಈ ಸಿನಿಮಾದಲ್ಲಿ ಇರುವುದು ಮತ್ತೊಂದು ವಿಶೇಷ.

  • ಜಾಗೃತಿಗಾಗಿ ‘ಬೆಳಕೆ’ ಅಂತ ಹಾಡು ಬರೆದ ಪ್ರಮೋದ್ ಮರವಂತೆ

    ಜಾಗೃತಿಗಾಗಿ ‘ಬೆಳಕೆ’ ಅಂತ ಹಾಡು ಬರೆದ ಪ್ರಮೋದ್ ಮರವಂತೆ

    ಗಷ್ಟೇ ಬೇಸಿಗೆ ಆರಂಭ. ಆಗಲೇ ಎಲ್ಲೆಡೆ ನೀರಿಗೆ ಹಾಹಾಕಾರ.‌ ಇದಕ್ಕೆ ಕಾರಣ ಪರಿಸರ ನಾಶ ಹಾಗೂ ಜಾಗತಿಕ ತಾಪಮಾನದ ಏರಿಕೆ. ಈ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ  ‘ಬೆಳಕೆ’ (Belake) ಹಾಡು (Song) ಬಿಡುಗಡೆಯಾಗಿದೆ. ಹೊಂಬಣ್ಣ ಚಿತ್ರದ ಖ್ಯಾತಿಯ ರಕ್ಷಿತ್ ತೀರ್ಥಹಳ್ಳಿ (Rakshit Theerthahalli) ನಿರ್ದೇಶಿಸಿರುವ ಈ ಹಾಡಿಗೆ ಆದರ್ಶ ಅಯ್ಯಂಗಾರ್, ದನಿಯಾಗುವುದರ ಜೊತೆಗೆ ನಟನೆಯನ್ನು ಮಾಡಿದ್ದಾರೆ.

    ನಮ್ಮ ಶ್ರೀಕೃಷ್ಣ ಪ್ರೊಡಕ್ಷನ್ಸ್ ಮೂಲಕ ಈಗಾಗಲೇ ಜನರಿಗೆ ಉತ್ತಮ ಸಂದೇಶ ನೀಡುವ ವಿಡಿಯೋ ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ‌. ತಿಮ್ಮನ ಮೊಟ್ಟೆಗಳು ಚಿತ್ರ ಸಹ ನಿರ್ಮಾಣವಾಗಿ, ಬಿಡುಗಡೆ ಹಂತದಲ್ಲಿದೆ. ಮತ್ತೊಂದು ಉತ್ತಮ ಸಂದೇಶವುಳ್ಳ ಹಾಡನ್ನು ನಿರ್ಮಿಸುವ ಸಲುವಾಗಿ ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ಅವರ ಜೊತೆ ಚರ್ಚಿಸಿದಾಗ ಅವರು ಜಾಗತಿಕ ತಾಪಮಾನದ ಕುರಿತು ಜನರಿಗೆ ಜಾಗೃತಿ ಮೂಡಿಸುವ ಈ ಹಾಡನ್ನು ಮಡೋಣ ಎಂದು ಸಲಹೆ ನೀಡಿದರು. ಜನರಿಗೆ ಪರಿಸರದ ಬಗ್ಗೆ ಕಾಳಜಿ ಮೂಡಿಸುವ ಸಲುವಾಗಿ ಬೆಳಕೆ ಹಾಡನ್ನು ನಿರ್ಮಾಣ ಮಾಡಿದ್ದೇವೆ. ನಾನು ಹಾಡುವುದರೊಟ್ಟಿಗೆ ಅಭಿನಯವನ್ನು ಮಾಡಿದ್ದೇನೆ. ರಕ್ಷಿತ್ ತೀರ್ಥಹಳ್ಳಿ ನಿರ್ದೇಶಿಸಿದ್ದಾರೆ. ಪ್ರಮೋದ್ ಮರವಂತೆ ಬರೆದಿರುವ ಈ ಹಾಡಿಗೆ ಹೇಮಂತ್ ಜೋಯಿಸ್ ಸಂಗೀತ ನೀಡಿದ್ದಾರೆ.  ಗುರುಪ್ರಸಾದ್ ನಾರ್ನಾಡ್ ಅವರ ಛಾಯಾಗ್ರಹಣದಲ್ಲಿ ಹಾಡು ಸುಂದರವಾಗಿ ಮೂಡಿಬಂದಿದೆ. ಸುಧೀರ್ ಎಸ್ ಜೆ ಈ ಹಾಡಿನ ಸಂಕಲನಕಾರರು  ಎಂದರು ಗಾಯಕ ಹಾಗೂ ನಾಯಕ ಆದರ್ಶ ಅಯ್ಯಂಗಾರ್.

    ಮುಂಚೆ ಬೆಂಗಳೂರಿನಲ್ಲಿ ತಾಪಮಾನ ಕಡಿಮೆ ಇರುತ್ತಿತ್ತು. ಈಗ ಗಮಿನಿಸಿದರೆ ಬೆಂಗಳೂರು, ಮಲೆನಾಡು ಹಾಗೂ ಉತ್ತರ ಕರ್ನಾಟಕ ಎಲ್ಲಾ ಕಡೆ ಹೆಚ್ಚು ಕಡಿಮೆ ಒಂದೇ ತಾಪಮಾನವಿರುತ್ತದೆ‌. ಇದಕ್ಕೆ ಕಾರಣ ಪರಿಸರ ನಾಶ. ಗಿಡ ಬೆಳಸುವುದು ಹಾಗೂ ಈಗಿರುವ ಗಿಡಗಳನ್ನು ಉಳಿಸುವುದೆ ಇದಕ್ಕೆ ಪರಿಹಾರ. ಇಲ್ಲದಿದ್ದರೆ ಮುಂದೆ ಇನ್ನೂ ಹೆಚ್ಚಿನ ಸಮಸ್ಯೆ ಎದುರಿಸಬೇಕಾಗುತ್ತದೆ. ಇಂತಹ ವಿಷಯಗಳ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಹಾಡೊಂದನ್ನು ಮಾಡೋಣ ಎಂದು ನಾನು, ಆದರ್ಶ ಅಯ್ಯಂಗಾರ್ ಅವರಿಗೆ ಹೇಳಿದಾಗ ಸಂತೋಷದಿಂದ ಒಪ್ಪಿದರು.  ಈ ಹಾಡು ಈಗ ನಿಮ್ಮ ಮುಂದೆ ಇದೆ. ಎಲ್ಲರೂ ನೋಡಿ ಎಂದು ನಿರ್ದೇಶಕ ರಕ್ಷಿತ್ ತೀರ್ಥಹಳ್ಳಿ ತಿಳಿಸಿದರು.

    ನಾನು ಸಾಕಷ್ಟು ಚಿತ್ರಗಳಿಗೆ ಹಾಡು ಬರೆಯುತ್ತಿದ್ದೇನೆ‌. ಆದರೆ ಪರಿಸರದ ಬಗ್ಗೆ ಜಾಗೃತಿ ಮೂಡಿಸುವ ಈ ಹಾಡನ್ನು ಬರೆಯಲು ತುಂಬಾ ಸಂತೋಷವಾಯಿತು. ತುಂಬಾ ಬಿಸಿಲಿದೆ‌‌.‌ ದಯವಿಟ್ಟು ಎಲ್ಲರೂ ತಮ್ಮ ಮನೆಯ ಮಹಡಿಯಲ್ಲಿ ಪಕ್ಷಿಗಳಿಗೆ ನೀರಿನ ವ್ಯವಸ್ಥೆ ಮಾಡಿ ಎಂದರು ಗೀತರಚನೆಕಾರ ಪ್ರಮೋದ್ ಮರವಂತೆ (Pramod Maravante). ಛಾಯಾಗ್ರಾಹಕ ಗುರುಪ್ರಸಾದ್ ನಾರ್ನಾಡ್ ಕೂಡ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.