Tag: ರಕ್ಷಿತಾ

  • ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಬಿಗ್‌ ಬಾಸ್‌ ಸ್ಪರ್ಧಿ ಅಶ್ವಿನಿ ಗೌಡ ವಿರುದ್ಧ ದೂರು ದಾಖಲು

    ಬೆಂಗಳೂರು: ಪರಿಸರ ನಿಯಮ ಉಲ್ಲಂಘನೆ ಮಾಡಿದ್ದಕ್ಕೆ ಮನೆಗೆ ಬೀಗ ಜಡಿದ ಪ್ರಕರಣ ಮಾಸುವ ಮುನ್ನವೇ ಬಿಗ್‌ಬಾಸ್‌ (Bigg Boss) ಸ್ಪರ್ಧಿ ಅಶ್ವಿನಿ ಗೌಡ (Ashwini Gowda) ವಿರುದ್ಧ ದೂರು ದಾಖಲಾಗಿದೆ.

    ಬಿಗ್ ಬಾಸ್ ಮನೆಯಲ್ಲಿ S ಪದ ಬಳಕೆ ಮಾಡಿದಕ್ಕೆ ಅಶ್ವಿನಿಗೌಡ ಮತ್ತು ಆಯೋಜಕರ ವಿರುದ್ಧ ಹೈಕೋರ್ಟ್ ವಕೀಲ ಪ್ರಶಾಂತ್ ಮೆತಾಲ್ ಬಿಡದಿ ಠಾಣೆಯಲ್ಲಿ ದೂರು ನೀಡಿದ್ದಾರೆ.

    ಸಹ ಸ್ಪರ್ಧಿ ರಕ್ಷಿತಾ (Rakshita Shetty) ಕುರಿತು ಈ ಮಾತನ್ನು ಆಡಿದ್ದಾರೆ. ಇದೊಂದು ವ್ಯಕ್ತಿತ್ವ ನಿಂದನೆ ಎಂದು ಆರೋಪಿಸಿ ಅಶ್ವಿನಿಗೌಡ, ಕಲರ್ಸ್ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ , ಕ್ಲಸ್ಟರ್ ಹೆಡ್ ಸುಷ್ಮಾ ಮತ್ತು ಡೈರೆಕ್ಟರ್ ಪ್ರಕಾಶ್ ವಿರುದ್ಧ ದೂರು ನೀಡಿದ್ದರು.  ಬಿಡದಿ ಪೊಲೀಸರು ದೂರು ಸ್ವೀಕರಿಸಿ ಎನ್‌ಸಿಆರ್ (ಗಂಭೀರವಲ್ಲದ ಪ್ರಕರಣ) ದಾಖಲಿಸಿದ್ದಾರೆ.

    ದೂರಿನಲ್ಲಿ ಏನಿದೆ?
    ಬಿಗ್‌ಬಾಸ್ 12 ಕಾರ್ಯಕ್ರಮದಲ್ಲಿ ಕಂಟೆಸ್ಟೆಂಟ್ ರಕ್ಷಿತ ರವರಿಗೆ ‘She is S, ಆ Category  ನ  ಎಂದು  ಸ್ಪರ್ಧಿಯಾದ ಅಶ್ವಿನಿ ಗೌಡ ಅವರು ಪದ ಬಳಕೆಯನ್ನು ಮಾಡಿರುತ್ತಾರೆ.

    ಇದು ಜಾತಿ ನಿಂದನೆ ಮತ್ತು ವ್ಯಕ್ತಿತ್ವದ ನಿಂದನೆ ಮಾಡುವಂತಹ ವಿಷಯ. ಈ ಸಮಾಜದಲ್ಲಿ ಎಲ್ಲರೂ ಒಂದೇ ಯಾವ ಜಾತಿ ಅಥವಾ ಭೇದವನ್ನು ಹರಡುವಂತಿಲ್ಲ. ಅಶ್ವಿನಿ ಗೌಡ  ಹೇಳಿದ ಮಾತನ್ನು ತೆಗೆಯದೇ ತಮ್ಮ ಟಿಆರ್‌ಪಿ ಹೆಚ್ಚಾಗಲು ಇದನ್ನು ಪ್ರಸಾರ ಮಾಡಿರುತ್ತಾರೆ. ಇದರಿಂದ ಸಮಾಜಕ್ಕೆ ಒಂದು ಕೆಟ್ಟ ಸಂದೇಶವನ್ನು ಕಳುಹಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    ಬಿಗ್‌ಬಾಸ್‌ ಮನೆಯಲ್ಲಿ ಆಗಿದ್ದೇನು?
    ರಕ್ಷಿತಾ ರಾತ್ರಿ ಕ್ಯಾಮೆರಾ ಮುಂದೆ ಮಾತನಾಡುತ್ತಿರುವುದನ್ನು ನೋಡಿ ಮನೆಯವರಿಗೆಲ್ಲ ಫನ್‌ ಮಾಡಲು ರಾತ್ರಿ ಮಲಗಿದ್ದಾಗ ಜಾಹ್ನವಿ ಮತ್ತು ಅಶ್ವಿನಿ ಗೌಡ ಗೆಜ್ಜೆಯನ್ನು ಹಿಡಿದು ಅಲ್ಲಾಡಿಸಿದ್ದರು. ಮನೆಯವರು ಗೆಜ್ಜೆ ಧ್ವನಿ ಮಾಡಿದವರು ಯಾರು ಎಂದು ಕೇಳಿದಾಗ ಅದು ರಕ್ಷಿತಾಳ ಕೆಲಸ ಎಂದು ಸುಳ್ಳು ಹೇಳಿದ್ದರು.

    ಈ ವಿಚಾರದ ಬಗ್ಗೆ ರಕ್ಷಿತಾ ಪ್ರಶ್ನೆ ಮಾಡಿದಾಗ ಜಾಹ್ನವಿ ಮತ್ತು ಅಶ್ವಿನಿ ಗೌಡ ಜೋರು ಧ್ವನಿಯಲ್ಲಿ ಮಾತನಾಡಿ ಗಲಾಟೆ ಮಾಡಿದ್ದರು. ಗಲಾಟೆ ವಿಕೋಪಕ್ಕೆ ಹೋದಾಗಲೂ ಅಶ್ವಿನಿ ಮತ್ತು ಜಾಹ್ನವಿ ತಮ್ಮ ತಪ್ಪನ್ನು ಒಪ್ಪಿರಲಿಲ್ಲ.

    ಮರುದಿನ ಮನೆಯ ವರಾಂಡದಲ್ಲಿ ಜಾಹ್ನವಿ ಜೊತೆ ಅಶ್ವಿನಿ ಕುಳಿತು ರಾತ್ರಿ ನಡೆದ ಗಲಾಟೆಯ ವಿಚಾರದ ಬಗ್ಗೆ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ರಕ್ಷಿತಾ ಉದ್ದೇಶಿಸಿ ಅವಳು ʼಎಸ್‌ ಕೆಟಗೆರಿʼ ಎಂದು ಹೇಳಿದ್ದರು.

  • ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ಸಿನಿಮಾ ಮೂಲಕ ಪುನೀತ್ ಜೀವಂತವಾಗಿದ್ದಾರೆ: ‘ಅಪ್ಪು’ ಸಿನಿಮಾ ಬಗ್ಗೆ ರಮ್ಯಾ ಮಾತು

    ಟ ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ಜನ್ಮದಿನದ ಪ್ರಯುಕ್ತ ‘ಅಪ್ಪು’ (Appu) ಸಿನಿಮಾ ಮಾ.14ರಂದು ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ವೀರೇಶ್ ಥಿಯೇಟರ್‌ಗೆ ಆಗಮಿಸಿ ವಿನಯ್ ರಾಜ್‌ಕುಮಾರ್, ಶರ್ಮಿಳಾ ಮಾಂಡ್ರೆ ಜೊತೆ ರಮ್ಯಾ (Ramya) ‘ಅಪ್ಪು’ ಚಿತ್ರ ವೀಕ್ಷಿಸಿದ್ದಾರೆ. ಬಳಿಕ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ ರಮ್ಯಾ, ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಹೇಳಿದ್ದಾರೆ.

    ‘ಅಪ್ಪು’ ಸಿನಿಮಾ ರಿಲೀಸ್ ಆದಾಗ ಥಿಯೇಟರ್‌ಗೆ ಬಂದು ಸಿನಿಮಾ ನೋಡಿದ್ದೆ, ಹಾಗಾಗಿ ಹಳೆಯ ನೆನಪುಗಳೆಲ್ಲಾ ಬರುತ್ತಿದೆ. ಆಗ ನಾನು ‘ಅಪ್ಪು’ ಚಿತ್ರಕ್ಕೆ ಆಡಿಷನ್ ಕೊಟ್ಟಿದ್ದು, ನೆನಪಾಯ್ತು. ಈಗ ಮತ್ತೆ ಅದೇ ಸಿನಿಮಾ ನೋಡಿದಾಗ ಅಪ್ಪು ಇಲ್ಲ ಅಂತ ನಂಬೋಕೆ ಆಗಲ್ಲ. ಆದರೆ ಸಿನಿಮಾ ಮೂಲಕ ಅಪ್ಪು ಜೀವಂತವಾಗಿದ್ದಾರೆ ಎಂದು ಪುನೀತ್‌ರನ್ನು ನಟಿ ಸ್ಮರಿಸಿದ್ದಾರೆ. ಈ ವೇಳೆ, ಹಾಗಾಗಿ ಅಭಿಮಾನಿಗಳೊಂದಿಗೆ ಅಪ್ಪು ಚಿತ್ರ ನೋಡಿದ್ದು ಖುಷಿಯಾಗಿದೆ ಎಂದಿದ್ದಾರೆ. ಇದನ್ನೂ ಓದಿ:‘ರಾಣಾ ಅಮರ್‌ ಅಂಬರೀಶ್‌’ ಎಂದು ಅಂಬಿ ಮೊಮ್ಮಗನಿಗೆ ನಾಮಕರಣ

    ‘ಅಪ್ಪು’ ಸಿನಿಮಾ ಬಂದು 23 ವರ್ಷಗಳಾಯ್ತು. ಈಗ ಮತ್ತೆ ಈ ಚಿತ್ರವನ್ನು ನೋಡೋಕೆ ಬಂದಿದ್ದೀನಿ, ನಂಬೋಕೆ ಆಗ್ತಿಲ್ಲ. ಇದೇ ಜೀವನ. ಮೊದಲ ಬಾರಿ ‘ಅಪ್ಪು’ ಸಿನಿಮಾ ನೋಡಿದಾಗ ನಾನು ಕೂಡ ಅಭಿಮಾನಿಯಾಗಿ ಹೋಗಿ ಚಿತ್ರ ನೋಡಿದ್ದೆ, ಆ ನಂತರ ಪುನೀತ್ ಜೊತೆ ನಾನು ಕೂಡ ಸಿನಿಮಾ ಮಾಡಿದ್ದೀನಿ. ಜನ ನನ್ನನ್ನು ಗುರುತಿಸುತ್ತಾರೆ. ಈಗ ಚಿತ್ರ ನೋಡಿದಾಗ ಎಲ್ಲವೂ ನೆನಪಾಗುತ್ತದೆ ಎಂದಿದ್ದಾರೆ ಮೋಹಕ ತಾರೆ ರಮ್ಯಾ.

    ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ (Rakshita) ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  • ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಲಿದ್ದಾರೆ ರಮ್ಯಾ

    ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಲಿದ್ದಾರೆ ರಮ್ಯಾ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಜನ್ಮ ದಿನದ ಪ್ರಯುಕ್ತ ‘ಅಪ್ಪು’ ಚಿತ್ರ ಮಾ.14ರಂದು ರಿಲೀಸ್ ಆಗಿದೆ. ಈ ಹಿನ್ನೆಲೆ ಇಂದು (ಮಾ.16) ಅಭಿಮಾನಿಗಳೊಂದಿಗೆ ಮೋಹಕ ತಾರೆ ರಮ್ಯಾ ‘ಅಪ್ಪು’ (Appu Film) ಚಿತ್ರ ವೀಕ್ಷಿಸಲಿದ್ದಾರೆ.

    ಅಭಿಮಾನಿಗಳೊಂದಿಗೆ ಅವರು ಪುನೀತ್‌ ಮತ್ತು ರಕ್ಷಿತಾ ನಟನೆಯ ‘ಅಪ್ಪು’ ಚಿತ್ರ ವೀಕ್ಷಿಸಲಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಬೆಂಗಳೂರಿನ ವೀರೇಶ್ ಮಂದಿರಕ್ಕೆ ರಮ್ಯಾ ಆಗಮಿಸಲಿದ್ದಾರೆ. ಇದನ್ನೂ ಓದಿ:ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ನಟ ಪ್ರಭುದೇವ

    ಇನ್ನೂ ಪುನೀತ್‌ಗೆ ನಾಯಕಿಯಾಗಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟರು. ಅರಸು, ಆಕಾಶ್ ಸಿನಿಮಾಗಳಲ್ಲಿ ಕೂಡ ಅವರು ಜೊತೆಯಾಗಿ ನಟಿಸಿದ್ದಾರೆ.

  • 23 ವರ್ಷಗಳ ನಂತರ ಮತ್ತೆ ‘ಅಪ್ಪು’ ಸಿನಿಮಾ ನೋಡಿ ಎಮೋಷನಲ್ ಆದ ರಕ್ಷಿತಾ

    23 ವರ್ಷಗಳ ನಂತರ ಮತ್ತೆ ‘ಅಪ್ಪು’ ಸಿನಿಮಾ ನೋಡಿ ಎಮೋಷನಲ್ ಆದ ರಕ್ಷಿತಾ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು’ (Appu) ಚಿತ್ರ ರೀ-ರಿಲೀಸ್ ಆಗಿದೆ. ಈ ಹಿನ್ನೆಲೆ ಚಿತ್ರದ ನಾಯಕಿ ರಕ್ಷಿತಾ (Rakshita) ಸಿನಿಮಾ ವೀಕ್ಷಿಸಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ. ಈ ಸಿನಿಮಾ ಯೂತ್ ಲವ್ ಸ್ಟೋರಿ, ಈಗಲೂ ಕಥೆ ಹೊಸದಾಗಿದೆ ಎನ್ನುತ್ತಾ ನಟಿ ಎಮೋಷನಲ್ ಆಗಿದ್ದಾರೆ.

    ರಕ್ಷಿತಾ ಮಾತನಾಡಿ, 23 ವರ್ಷಗಳ ನಂತರ ‘ಅಪ್ಪು’ ಸಿನಿಮಾ ನೋಡ್ತಿದ್ದೀನಿ. ಈ ಸಿನಿಮಾ ಯೂತ್ ಲವ್ ಸ್ಟೋರಿ, ಈಗಲೂ ಕಥೆ ಹೊಸದಾಗಿದೆ. 23 ವರ್ಷದ ನಂತರ ಅಪ್ಪು ನನ್ನ ಪಕ್ಕ ನಿಂತು ಸಂದರ್ಶನ ಕೊಡ್ತಿಲ್ಲ ಅಂತ ಬೇಸರವಿದೆ. ಈ ದಿನ ನನಗೆ ಎಮೋಷನಲ್ ಆಗಿತ್ತು. ನನ್ನ ಮಗನ ಜೊತೆ ಬಂದು ಸಿನಿಮಾ ನೋಡಿದೆ. ಇನ್ನೂ ಅಭಿಮಾನಿಗಳ ಸಂಭ್ರಮ ನೋಡಿ ಖುಷಿಯಾಯ್ತು ಎಂದರು. ಇದನ್ನೂ ಓದಿ:ಜೀವನದಲ್ಲಿ ಯಶಸ್ವಿಯಾಗಲು ಪವಿತ್ರಾ ಗೌಡ ಟಿಪ್ಸ್

    ‘ಅಪ್ಪು’ ಅಂದಾಕ್ಷಣ ಮೊದಲು ನೆನಪಾಗೋದು ಪಾರ್ವತಮ್ಮನವರು. ನನ್ನ ತಂದೆಯನ್ನು ನನ್ನ ಮಗ ಇದ್ದಂತೆ ಅಂತಾ ಪಾರ್ವತಮ್ಮನವರು ಯಾವಾಗಲೂ ಹೇಳ್ತಿದ್ದರು ಎಂದು ನಟಿ ಸ್ಮರಿಸಿದರು. ‘ಅಪ್ಪು’ ಚಿತ್ರದಲ್ಲಿ ನನಗೆ ಇಷ್ಟ ಆಗಿರೋ ಸೀನ್ ಅಂದ್ರೆ ಸುಚಿ ಕೈ ಕತ್ತರಿಕೊಳ್ಳೋದು. ಅದು ಎಮೋಷನಲ್ ಆಗಿತ್ತು ಎಂದು ಸೀನ್ ಬಗ್ಗೆ ವಿವರಿಸಿದರು. ಪುನೀತ್ ಅವರನ್ನು ನೆನೆದು ನಟಿ ಭಾವುಕರಾದರು.

    ಅಂದು ಅಪ್ಪಾಜಿ, ಶಿವಣ್ಣ ಜೊತೆ 100ನೇ ದಿನದ ಪ್ರದರ್ಶನದಲ್ಲಿ ಸಿನಿಮಾ ನೋಡಿದಾಗ ಕನಸು ನನಸಾಯಿತು ಎಂದು ಅನಿಸಿತ್ತು. ಇವತ್ತಿಗೂ ಹಾಗೆ ಇದೆ ಅಪ್ಪು ಲವ್ ಸ್ಟೋರಿ, ಜನಕ್ಕೆ ಕನೆಕ್ಟ್‌ ಆಗಿದೆ ಎನ್ನುತ್ತಾ ಪುನೀತ್ ಬರ್ತ್‌ಡೇಗೆ ರಕ್ಷಿತಾ ವಿಶ್ ಮಾಡಿದರು.

  • ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಿದ ರಕ್ಷಿತಾ

    ಅಭಿಮಾನಿಗಳೊಂದಿಗೆ ‘ಅಪ್ಪು’ ಸಿನಿಮಾ ವೀಕ್ಷಿಸಿದ ರಕ್ಷಿತಾ

    ಪುನೀತ್ ರಾಜ್‌ಕುಮಾರ್ (Puneeth Rajkumar) 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ‘ಅಪ್ಪು’ (Appu) ಸಿನಿಮಾ ರಿ-ರಿಲೀಸ್ ಆಗಿದೆ. ಈ ಹಿನ್ನೆಲೆ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ‘ಅಪ್ಪು’ ಚಿತ್ರವನ್ನು ರಕ್ಷಿತಾ (Rakshita) ವೀಕ್ಷಿಸಿದ್ದಾರೆ. ಇದನ್ನೂ ಓದಿ:ಮಾ.17ಕ್ಕೆ ಪುನೀತ್ ಹುಟ್ಟುಹಬ್ಬ – ‘ಅಪ್ಪು’ ಸಿನಿಮಾ ರೀ-ರಿಲೀಸ್

    ಇದೇ ಮಾ.17ರಂದು ಪುನೀತ್ ಹುಟ್ಟುಹಬ್ಬವಾಗಿದ್ದು, ಮೂರು ದಿನ ಮುಂಚಿತವಾಗಿ ‘ಅಪ್ಪು’ ಚಿತ್ರ ಮರು ಬಿಡುಗಡೆ ಆಗಿದೆ. ಅಭಿಮಾನಿಗಳೊಂದಿಗೆ ರಕ್ಷಿತಾ ‘ಅಪ್ಪು’ ಚಿತ್ರ ನೋಡಿ ರಂಜಿಸಿದ್ದಾರೆ. ಈ ವೇಳೆ, ಅರಸು, ಆಕಾಶ್ ಚಿತ್ರಗಳ ನಿರ್ದೇಶಕ ಮಹೇಶ್ ಬಾಬು ಕೂಡ ಸಾಥ್ ನೀಡಿದ್ದಾರೆ.

    ‘ಬಿಗ್ ಬಾಸ್’ ಸ್ಪರ್ಧಿಗಳಾದ ಕಿಶನ್, ರಕ್ಷಕ್ ಬುಲೆಟ್, ಕಾರ್ತಿಕ್ ಮಹೇಶ್ (Karthik Mahesh), ನಮ್ರತಾ ಗೌಡ (Namratha Gowda) ಕೂಡ ‘ಅಪ್ಪು’ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಮತ್ತೊಮ್ಮೆ ಪುನೀತ್ ಸಿನಿಮಾ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ. ಅಪ್ಪು ಎಂಟ್ರಿಗೆ ಶಿಳ್ಳೆ, ಚಪ್ಪಾಳೆ ಹೊಡೆಯುತ್ತಾ ಎಂಜಾಯ್ ಮಾಡಿದ್ದಾರೆ.

    ಇನ್ನೂ ಪುರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು. 2002ರಲ್ಲಿ ಈ ಸಿನಿಮಾದ ಮೂಲಕ ಪುನೀತ್ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು.

  • ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ನಾಳೆ ರೀ ರಿಲೀಸ್‌ ಆಗ್ತಿದೆ ಪುನೀತ್‌ ರಾಜ್‌ಕುಮಾರ್‌ ನಟನೆಯ ‘ಅಪ್ಪು’ ಸಿನಿಮಾ

    ವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಅಪ್ಪು’ ಸಿನಿಮಾ ಮಾ.14ರಂದು ರೀ ರಿಲೀಸ್‌ಗೆ ಸಿದ್ಧವಾಗಿದೆ. ಮಾ.17ರಂದು ಪುನೀತ್ ಹುಟ್ಟುಹಬ್ಬದ ಹಿನ್ನೆಲೆ ಮತ್ತೆ ‘ಅಪ್ಪು’ ಸಿನಿಮಾ ರೀ ರಿಲೀಸ್ ಮಾಡಲಾಗುತ್ತಿದೆ. ಹಾಗಾಗಿ ‘ಅಪ್ಪು’ ಸಿನಿಮಾ ಸಕ್ಸಸ್‌ನ ವಿಶೇಷ ವಿಡಿಯೋವೊಂದನ್ನು ಪುನೀತ್ ಪತ್ನಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ:‘ಟಾಕ್ಸಿಕ್’ ಅದ್ಭುತವಾಗಿದೆ: ಯಶ್ ಕುರಿತು ಹಾಲಿವುಡ್ ಸ್ಟಂಟ್ ಮಾಸ್ಟರ್ ಗುಣಗಾನ

    ‘ಅಪ್ಪು’ 100ನೇ ದಿನದ ಸಂಭ್ರಮದ ವಿಡಿಯೋವನ್ನು ಅಶ್ವಿನಿ ಪುನೀತ್ ರಾಜ್‌ಕುಮಾರ್ ಶೇರ್ ಮಾಡಿ, ‘ಅಪ್ಪು’ ಚಿತ್ರದ ಐತಿಹಾಸಿಕ ಶತದಿನೋತ್ಸವ ಸಮಾರಂಭದ ಯಶಸ್ಸನ್ನು ಹರ್ಷದಿಂದ ಹಾರೈಸಲು ಕನ್ನಡ ಚಿತ್ರರಂಗದ ಗಣ್ಯರು ಒಂದುಗೂಡುವ ಹಬ್ಬದ ಅಪರೂಪದ ಕ್ಷಣಗಳು ಎಂದು ಬರೆದುಕೊಂಡಿದ್ದಾರೆ. ಜೊತೆಗೆ ಮಾ.14ರಂದು ರೀ ರಿಲೀಸ್ ಆಗುತ್ತಿರುವ ‘ಅಪ್ಪು’ ಚಿತ್ರದ ಬಗ್ಗೆ ಅಪ್‌ಡೇಟ್ ಕೊಟ್ಟಿದ್ದಾರೆ.

    ಇನ್ನೂ ‘ಅಪ್ಪು’ ಚಿತ್ರದ ಸಕ್ಸಸ್ ಕಾರ್ಯಕ್ರಮವು ಅಣ್ಣಾವ್ರು, ರಜನಿಕಾಂತ್ ಸಮ್ಮುಖದಲ್ಲಿ ನಡೆದಿತ್ತು. ಸಿನಿಮಾ ಗೆದ್ದ ಖುಷಿಯಲ್ಲಿ ಶಿವಣ್ಣ, ರಾಘಣ್ಣ ಮತ್ತು ಅಪ್ಪು ಜೊತೆಯಾಗಿ ಹೆಜ್ಜೆ ಹಾಕಿದ್ದರು.

    ಇನ್ನೂ ಪೂರಿ ಜಗನ್ನಾಥ್ ನಿರ್ದೇಶನದ ‘ಅಪ್ಪು’ ಸಿನಿಮಾದಲ್ಲಿ ಪುನೀತ್‌ಗೆ ನಾಯಕಿಯಾಗಿ ರಕ್ಷಿತಾ ನಟಿಸಿದ್ದರು. ಪಾರ್ವತಮ್ಮ ರಾಜ್‌ಕುಮಾರ್ ನಿರ್ಮಾಣ ಮಾಡಿದ್ದರು.

  • ಅಪ್ಪುಗಾಗಿ ‘ನೀನೇ ರಾಜಕುಮಾರ’ ಹಾಡನ್ನು ಸ್ಟೈಲಿಶ್ ಆಗಿ ಹಾಡಿದ ವಿದೇಶಿ ಮಹಿಳೆ

    ಅಪ್ಪುಗಾಗಿ ‘ನೀನೇ ರಾಜಕುಮಾರ’ ಹಾಡನ್ನು ಸ್ಟೈಲಿಶ್ ಆಗಿ ಹಾಡಿದ ವಿದೇಶಿ ಮಹಿಳೆ

    ದಿವಂಗತ ಪುನೀತ್ ರಾಜ್‌ಕುಮಾರ್ (Puneeth Rajkumar) ಮೇಲಿನ ಅಭಿಮಾನಕ್ಕಾಗಿ ಬೆಂಗಳೂರಿನ ಪಬ್‌ವೊಂದರಲ್ಲಿ ವಿದೇಶಿ ಮಹಿಳೆ ಹಾಡು ಹಾಡಿದ್ದಾರೆ. ಅಪ್ಪುಗಾಗಿ ‘ನೀನೇ ರಾಜಕುಮಾರ’ ಹಾಡನ್ನು ಹಾಡಿ ಸೈ ಎನಿಸಿಕೊಂಡಿದ್ದಾರೆ. ಪುನೀತ್ ಮೇಲಿನ ವಿದೇಶಿ ಮಹಿಳೆಯ ಪ್ರೀತಿ ಕಂಡು ಫ್ಯಾನ್ಸ್ ಕೊಂಡಾಡಿದ್ದಾರೆ. ಇದನ್ನೂ ಓದಿ:‘ಜೊತೆಯಲಿ ಇರುವೆನು ಹೀಗೆ ಎಂದು’ ಪತ್ನಿಗಾಗಿ ಹಾಡು ಹಾಡಿದ ಯಶ್

    ‘ನೀನೇ ರಾಜಕುಮಾರ’ ಹಾಡನ್ನ ಸ್ಟೈಲೀಶ್ ಆಗಿ ವಿದೇಶಿ ಮಹಿಳೆ ಹಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ವಿದೇಶಿ ಮಹಿಳೆ ಹಾಡುವಾಗ ಪಬ್‌ನಲ್ಲಿ ಸೇರಿದ್ದ ಜನರು ಕೂಡ ಹಾಡು ಕೇಳಿ ಎಂಜಾಯ್ ಮಾಡಿದ್ದಾರೆ. ಇನ್ನೂ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ 50ನೇ ವರ್ಷದ ಹುಟ್ಟುಹಬ್ಬ ಈ ಹಿನ್ನೆಲೆ ಈ ತಿಂಗಳು ಪೂರ್ತಿ ಅಪ್ಪು ಹಾಡುಗಳನ್ನು ಹಾಡುವ ಮೂಲಕ ಗೌರವ ಸಲ್ಲಿಸಲಿದ್ದಾರೆ.

    ಅಂದಹಾಗೆ, ಇದೇ ಮಾರ್ಚ್‌ 14ರಂದು ಪುನೀತ್‌ ರಾಜ್‌ಕುಮಾರ್‌ ನಟಿಸಿದ್ದ ಅಪ್ಪು ಸಿನಿಮಾ ಮರುಬಿಡುಗಡೆ ಆಗುತ್ತಿದೆ. ನಟನ 50ನೇ ಹುಟ್ಟುಹಬ್ಬದ ಹಿನ್ನೆಲೆ ‘ಅಪ್ಪು’ ಸಿನಿಮಾ ರೀ ರಿಲೀಸ್‌ ಆಗಲಿದೆ.

  • ರಕ್ಷಿತಾ ಸಹೋದರನ ಆರತಕ್ಷತೆ: ಕಪ್ಪು ಸೀರೆಯಲ್ಲಿ ಕಂಗೊಳಿಸಿದ ರಮ್ಯಾ

    ರಕ್ಷಿತಾ ಸಹೋದರನ ಆರತಕ್ಷತೆ: ಕಪ್ಪು ಸೀರೆಯಲ್ಲಿ ಕಂಗೊಳಿಸಿದ ರಮ್ಯಾ

    ಕ್ರೇಜಿ ಕ್ವೀನ್ ರಕ್ಷಿತಾ (Rakshitha Prem) ಸಹೋದರ ರಾಣಾ (Raana) ಮದುವೆ ಆರತಕ್ಷತೆ ಫೆ.8ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ಜರುಗಿದೆ. ಈ ಸಂಭ್ರಮದಲ್ಲಿ ಮೋಹಕತಾರೆ ರಮ್ಯಾ (Ramya) ಸ್ಟೈಲೀಶ್ ಆಗಿ ಕಾಣಿಸಿಕೊಂಡು ಎಲ್ಲರ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು

    ರಾಣಾ ಹಾಗೂ ಫ್ಯಾಷನ್ ಡಿಸೈನರ್ ರಕ್ಷಿತಾಗೆ ಶುಭ ಕೋರಲು ರಮ್ಯಾ ಕೂಡ ಆರತಕ್ಷತೆಗೆ ಆಗಮಿಸಿದ್ದರು. ಒಂದು ಕ್ಷಣ ಮೋಹಕತಾರೆ ರಮ್ಯಾ ಎಂಟ್ರಿ ನೋಡಿ ಅನೇಕರು ದಂಗಾದರು.

    ರಕ್ಷಿತಾ ಸಹೋದರನ ಆರತಕ್ಷತೆಯಲ್ಲಿ ಸ್ಲೀವ್‌ಲೆಸ್ ಬ್ಲೌಸ್‌ಗೆ ಕಪ್ಪು ಬಣ್ಣದ ಸೀರೆಯುಟ್ಟು ರಮ್ಯಾ ಮಿರ ಮಿರ ಅಂತ ಮಿಂಚಿದ್ದಾರೆ. ವಯಸ್ಸು 42 ವರ್ಷವಾಗಿದ್ರೂ ಬಳುಕುವ ಬಳ್ಳಿಯಂತೆ ರಮ್ಯಾ ಕಂಗೊಳಿಸಿದ್ದಾರೆ. ಅವರ ಫಿಟ್‌ನೆಸ್‌ಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಚಿತ್ರರಂಗಕ್ಕೆ ಬಂದು ಹಲವು ವರ್ಷಗಳು ಕಳೆದಿದ್ರೂ ಕೂಡ ಇಂದಿಗೂ ರಕ್ಷಿತಾ ಹಾಗೂ ರಮ್ಯಾ ನಡುವಿನ ಅದೆಷ್ಟು ಚೆನ್ನಾಗಿದೇ ಎಂಬುದಕ್ಕೆ ರಾಣಾ ಆರತಕ್ಷತೆಯಲ್ಲಿ ಇಬ್ಬರೂ ಇದ್ದ ರೀತಿಯೇ ಸಾಕ್ಷಿಯಾಗಿದೆ. ರಕ್ಷಿತಾರನ್ನು ನೋಡ್ತಿದ್ದಂತೆ ರಮ್ಯಾ ತಬ್ಬಿಕೊಂಡಿದ್ದಾರೆ.

    ರಕ್ಷಿತಾ ಹಾಗೂ ರಮ್ಯಾ ಒಂದೇ ಕಾಲಘಟ್ಟದಲ್ಲಿ ಸಿನಿಮಾ ರಂಗದಲ್ಲಿ ಮಿಂಚಿದವರು. ಪುನೀತ್‌ರಾಜ್‌ಕುಮಾರ್‌ಗೆ ನಾಯಕಿಯರಾಗಿ ಸದ್ದು ಮಾಡಿದವರು.‌ ಇದನ್ನೂ ಓದಿ:ಕ್ರೇಜಿ ಕ್ವೀನ್‌ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್

    2002ರಲ್ಲಿ ‘ಅಪ್ಪು’ ಸಿನಿಮಾದಲ್ಲಿ ರಕ್ಷಿತಾ ನಾಯಕಿಯಾಗಿ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. 2003ರಲ್ಲಿ ‘ಅಭಿ’ ಸಿನಿಮಾದ ಮೂಲಕ ರಮ್ಯಾ ಅವರು ಮೊದಲ ಬಾರಿಗೆ ಬಣ್ಣದ ಹಚ್ಚಿದ್ದರು. ಪುನೀತ್‌ಗೆ ನಾಯಕಿಯಾಗಿ ಸೈ ಎನಿಸಿಕೊಂಡರು.

    ರಮ್ಯಾ ಹಾಗೂ ರಕ್ಷಿತಾ ಇಬ್ಬರ ನಡುವೆಯೂ ಒಂದೊಳ್ಳೆಯ ಪೈಪೋಟಿ ಇತ್ತು. ಇನ್ನೂ 2006ರಲ್ಲಿ ‘ತನನಂ ತನನಂ’ ಸಿನಿಮಾದಲ್ಲಿ ಶ್ಯಾಮ್‌ಗೆ ನಾಯಕಿಯರಾಗಿ ರಮ್ಯಾ ಹಾಗೂ ರಕ್ಷಿತಾ ನಟಿಸಿದ್ದರು. ಕವಿತಾ ಲಂಕೇಶ್ ಅವರು ನಿರ್ದೇಶನ ಮಾಡಿದ್ದರು.

    ಇನ್ನೂ ರಕ್ಷಿತಾ 2007ರಲ್ಲಿ ಡೈರೆಕ್ಟರ್ ಪ್ರೇಮ್ ಜೊತೆ ಮದುವೆಯಾದರು. ರಮ್ಯಾ ಸಿನಿಮಾ ಬಳಿಕ ಪಾಲಿಟಿಕ್ಸ್ ಎಂಟ್ರಿ ಕೊಟ್ಟಿದ್ದರು. ಪ್ರಸ್ತುತ ರಮ್ಯಾ ಅವರು ಸಿನಿಮಾ, ರಾಜಕೀಯ ಎರಡರಿಂದಲೂ ಅಂತರ ಕಾಯ್ದುಕೊಂಡಿದ್ದಾರೆ.

  • ಕ್ರೇಜಿ ಕ್ವೀನ್‌ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್

    ಕ್ರೇಜಿ ಕ್ವೀನ್‌ ರಕ್ಷಿತಾ ಸಹೋದರನ ಆರತಕ್ಷತೆ ಸಂಭ್ರಮದಲ್ಲಿ ದರ್ಶನ್

    ಸ್ಯಾಂಡಲ್‌ವುಡ್ ನಟಿ ರಕ್ಷಿತಾ ಸಹೋದರ ರಾಣಾ (Raana) ಮದುವೆ ಫೆ.7ರಂದು ಅದ್ಧೂರಿಯಾಗಿ ಜರುಗಿದೆ. ಇಂದು (ಫೆ.8) ಆರತಕ್ಷತೆ ಕಾರ್ಯಕ್ರಮ ಅದ್ಧೂರಿಯಾಗಿ ನಡೆದಿದೆ. ಈ ಸಂಭ್ರಮದಲ್ಲಿ ದರ್ಶನ್ (Darshan) ಭಾಗಿಯಾಗಿ ಹೊಸ ಜೋಡಿಗೆ ಶುಭಕೋರಿದ್ದಾರೆ.

    ಕೊಲೆ ಪ್ರಕರಣದಲ್ಲಿ ಬೇಲ್ ಸಿಕ್ಕ ಬಳಿಕ ಮೊದಲ ಬಾರಿಗೆ ಶುಭಕಾರ್ಯದಲ್ಲಿ ದರ್ಶನ್ ಹಾಜರಿ ಹಾಕಿದ್ದಾರೆ. ಪತ್ನಿ ವಿಜಯಲಕ್ಷ್ಮಿ, ಸಹೋದರ ದಿನಕರ್ ತೂಗುದೀಪ ಜೊತೆ ದರ್ಶನ್ ಆಗಮಿಸಿದ್ದಾರೆ. ಪ್ರೇಮ್ ಹೆಗಲ ಮೇಲೆ ಕೈಹಾಕಿಕೊಂಡು ದರ್ಶನ್ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಹೊಸ ಬಾಳಿಗೆ ಕಾಲಿಟ್ಟಿರುವ ರಾಣಾಗೆ ದರ್ಶನ್ ವಿಶ್ ಮಾಡಿದ್ದಾರೆ.

    ಗೆಳತಿ ರಕ್ಷಿತಾಗೆ (Rakshitha Prem) ಕೊಟ್ಟ ಮಾತಿನಂತೆ ಕಾರ್ಯಕ್ರಮಕ್ಕೆ ಕುಟುಂಬ ಸಮೇತ ದರ್ಶನ್ ಭಾಗಿಯಾಗಿದ್ದಾರೆ. ಇದನ್ನೂ ಓದಿ:ಜಯಮಾಲಾ ಪುತ್ರಿಯ ಅದ್ಧೂರಿ ಆರತಕ್ಷತೆ: ಸಿನಿ ತಾರೆಯರ ದಂಡು

    ಇನ್ನೂ ರಾಣಾ ದಂಪತಿಯ ಆರತಕ್ಷತೆಯಲ್ಲಿ ರಾಧಿಕಾ ಕುಮಾರಸ್ವಾಮಿ, ಧ್ರುವ ಸರ್ಜಾ, ಅಮೂಲ್ಯ ದಂಪತಿ, ತರುಣ್ ಸುಧೀರ್ ಸೇರಿದಂತೆ ಅನೇಕರು ಭಾಗಿಯಾಗಿ ವಿಶ್ ಮಾಡಿದ್ದಾರೆ.

  • ಪ್ರೇಮ್‌ ಜೊತೆ ಸಿನಿಮಾ ಮಾಡೇ ಮಾಡ್ತೀನಿ: ದರ್ಶನ್

    ಪ್ರೇಮ್‌ ಜೊತೆ ಸಿನಿಮಾ ಮಾಡೇ ಮಾಡ್ತೀನಿ: ದರ್ಶನ್

    ಟ ದರ್ಶನ್ (Darshan) ಫೆ.16ರಂದು ಬರ್ತ್‌ಡೇ ಸಂಭ್ರಮವಾಗಿದ್ದು, ಈ ವರ್ಷ ಹುಟ್ಟುಹಬ್ಬ ಆಚರಣೆ ಮಾಡಲ್ಲ ಎಂದು ವಿಡಿಯೋ ಮೂಲಕ ಫ್ಯಾನ್ಸ್‌ಗೆ ಮನವಿ ಮಾಡಿದ್ದಾರೆ. ಇದರೊಂದಿಗೆ ಡೈರೆಕ್ಟರ್ ಪ್ರೇಮ್ ಜೊತೆ ದರ್ಶನ್ ಸಿನಿಮಾ ಬರಲಿದೆಯಾ ಎಂಬ ಪ್ರಶ್ನೆಗೆ ವಿಡಿಯೋ ಮೂಲಕ ಕ್ಲ್ಯಾರಿಟಿ ಕೊಟ್ಟಿದ್ದಾರೆ. ಪ್ರೇಮ್‌ (Prem) ಜೊತೆ ಸಿನಿಮಾ ಮಾಡೋದು ನನ್ನ ಗುರುಗಳು ಹಾಗೂ ಸ್ನೇಹಿತೆ ರಕ್ಷಿತಾ (Rakshitha Prem) ಆಸೆ ಎಂದಿದ್ದಾರೆ.

    ಬೆನ್ನು ನೋವಿನಿಂದ ಬಳಲುತ್ತಿರುವ ಹಿನ್ನೆಲೆ ಈ ವರ್ಷ ಬರ್ತ್‌ಡೇಗೆ ನಾನು ಸಿಗೋದಿಲ್ಲ. ತುಂಬಾ ಹೊತ್ತು ನಿಂತುಕೊಳ್ಳೋಕೆ ಆಗಲ್ಲ. ಈ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿಲ್ಲ ಎಂದು ದರ್ಶನ್ ಸೆಲೆಬ್ರಿಟಿಗಳಿಗೆ ಕ್ಷಮೆಯಾಚಿಸಿದ್ದಾರೆ. ಇದನ್ನೂ ಓದಿ:ಆರೋಗ್ಯ ಸಮಸ್ಯೆ ಇದೆ, ಈ ಬಾರಿ ಹುಟ್ಟುಹಬ್ಬ ಆಚರಿಸಿಕೊಳ್ಳಲ್ಲ: ಸೆಲೆಬ್ರಿಟಿಗಳಿಗೆ ದರ್ಶನ್‌ ಮನವಿ

    ಯಾವುದೇ ಊಹಾಪೋಹಗಳಿಗೆ ಕಿವಿ ಕೊಡಬೇಡಿ. 101% ಹೌದು ನಾನು ನಿರ್ಮಾಪಕ ಸೂರಪ್ಪ ಬಾಬು ಅವರಿಗೆ ದುಡ್ಡು ವಾಪಸ್ ಕೊಟ್ಟಿದ್ದೇನೆ. ನನ್ನ ಹತ್ತಿರ ಸಿನಿಮಾಗೆ ಬರುವಾಗಲೇ ಅವರಿಗೆ ಸಿಕ್ಕಾಪಟ್ಟೆ ಕಮಿಟ್‌ಮೆಂಟ್ ಇತ್ತು. ಹಾಗಾಗಿ ವಾಪಸ್ ಕೊಟ್ಟೆ. ಮುಂದೆ ನಾವಿಬ್ಬರೂ ಸಿನಿಮಾ ಮಾಡೇ ಮಾಡ್ತೀವಿ ಎಂದಿದ್ದಾರೆ. ಅದಷ್ಟೇ ಅಲ್ಲ, ಮುಂದೆ ನಾನು ಪ್ರೇಮ್ ಒಟ್ಟಾಗಿ ಸಿನಿಮಾ ಮಾಡೇ ಮಾಡುತ್ತೇವೆ. ನನ್ನ ಗುರುಗಳು, ನನ್ನ ಪ್ರೀತಿಯ ಸ್ನೇಹಿತೆಯ ಆಸೆ ಅದು. ಕೆವಿಎನ್ ಪ್ರೊಡಕ್ಷನ್‌ನವರು ಅವರು ಬೇರೆ ಸಿನಿಮಾ ಮಾಡ್ತಿದ್ದಾರೆ. ಮತ್ತೊಂದು ಪ್ರೊಡಕ್ಷನ್ ಅಂದಾಗ ಅವರಿಗೂ ಕಷ್ಟ ಆಗುತ್ತೆ. ಅದಕ್ಕೆ ಯಾರು ಯಾವುದೇ ಪ್ರೊಡಕ್ಷನ್ ಇಲ್ಲದೇ ಸುಮ್ಮನೆ ಇರತಾರಲ್ಲ ಅವರಿಗೆ ಅವಕಾಶ ಕೊಡೋಣ ಅಂತ ಎಂದಿದ್ದಾರೆ.

    ನಿಮ್ಮ ಪ್ರೀತಿ, ಅಭಿಮಾನ, ಪ್ರೋತ್ಸಾಹ ನನ್ನ ಮೇಲೆ ಇರೋದಕ್ಕೆ ಯಾವಾಗಲೂ ಚಿರಋಣಿಯಾಗಿರುತ್ತೇನೆ. ಇದನ್ನು ನಾನೆಂದೂ ತೀರಿಸೋಕೆ ಆಗಲ್ಲ ಎಂದಿದ್ದಾರೆ. ಈ ವೇಳೆ, ನಾನು 3 ಜನರಿಗೆ ಥ್ಯಾಂಕ್ಸ್ ಹೇಳಬೇಕು. ಧನ್ವೀರ್ ಯಾವಾಗಲೂ ಪಾಪ ನನ್ನ ಜೊತೆಯಲಿಯೇ ಇರುತ್ತಿದ್ದರು. ನನ್ನ ದೊಡ್ಡ ಬೆಂಬಲವಾಗಿ ನಿಂತರು. ‘ಬುಲ್ ಬುಲ್’ ರಚಿತಾ ರಾಮ್‌ಗೂ ಥ್ಯಾಂಕ್ಯೂ. ನನ್ನ ಪ್ರಾಣ ಸ್ನೇಹಿತೆ ಆಗಿರುವ ರಕ್ಷಿತಾಗೂ ಥ್ಯಾಂಕ್ಸ್. ನನ್ನ ಎಲ್ಲಾ ಸೆಲೆಬ್ರಿಟಿಗಳಿಗೂ ಧನ್ಯವಾದಗಳು ಎಂದಿದ್ದಾರೆ.

    ದರ್ಶನ್‌ ಹಾಗೂ ನಟಿ ರಕ್ಷಿತಾ ಪ್ರೇಮ್‌ ಹಲವು ವರ್ಷಗಳಿಂದ ಸ್ನೇಹಿತರು. ಆದರೆ ಇತ್ತೀಚೆಗೆ ದರ್ಶನ್‌ ಜೊತೆ ಪ್ರೇಮ್‌ ಸಿನಿಮಾ ಬರಲಿದ್ಯಾ? ಎಂದು ಅನುಮಾನ ವ್ಯಕ್ತಪಡಿಸಿದವರಿಗೆ ದರ್ಶನ್‌ ವಿಡಿಯೋ ಮೂಲಕ ಕ್ಲ್ಯಾರಿಟಿ ನೀಡಿದ್ದಾರೆ.