Tag: ರಕ್ಷಾ ಬಂಧನ್

  • ಬಾಲಿವುಡ್ ನಲ್ಲಿ ಶುರುವಾಗಿದೆ ಬೈಕಾಟ್ ಆಂದೋಲನ : ಕಂಗನಾ ಟಾರ್ಗೆಟ್

    ಬಾಲಿವುಡ್ ನಲ್ಲಿ ಶುರುವಾಗಿದೆ ಬೈಕಾಟ್ ಆಂದೋಲನ : ಕಂಗನಾ ಟಾರ್ಗೆಟ್

    ಬಿಟೌನ್ ನಲ್ಲಿ ಎರಡು ಮೆಗಾ ಬಜೆಟ್ ಸಿನಿಮಾಗಳು ಬಿಡುಗಡೆಗೆ ರೆಡಿಯಾಗಿವೆ. ಮುಂದಿನ ವಾರ ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ರಿಲೀಸ್ ಆಗುತ್ತಿದ್ದರೆ, ಇದರ ಬೆನ್ನಿಂದೆಯೇ ಅಕ್ಷಯ್ ಕುಮಾರ್ ಮುಖ್ಯ ಭೂಮಿಕೆಯ ರಕ್ಷಾ ಬಂಧನ್ ತೆರೆಗೆ ಬರಲು ಸಿದ್ಧತೆ ನಡೆಸಿದೆ. ಈ ಎರಡೂ ಚಿತ್ರಗಳಿಗೂ ಬೈಕಾಟ್ ಬೇನೆ ಶುರುವಾಗಿದೆ. ಸೋಷಿಯಲ್ ಮೀಡಿಯಾದಲ್ಲಂತೂ ಟ್ರೆಂಡ್ ಕ್ರಿಯೇಟ್ ಆಗಿದೆ.

    ಆಮೀರ್ ಖಾನ್ ಎರಡ್ಮೂರು ವರ್ಷಗಳ ಹಿಂದೆ ದೇಶದ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ ಎಂದು ಮತ್ತು ಪಿಕೆ ಸಿನಿಮಾದಲ್ಲಿ ಹಿಂದೂ ದೇವರಿಗೆ ಅಗೌರವ ತೋರಿದ್ದಾರೆ ಎನ್ನುವ ಕಾರಣಕ್ಕಾಗಿ ಲಾಲ್ ಸಿಂಗ್ ಚಡ್ಡಾವನ್ನು ಹಿಂದೂಗಳು ನೋಡಬಾರದು ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಬಾಲಿವುಡ್ ನಟಿ ಕಂಗನಾ ರಣಾವತ್ ಕೂಡ ಅದಕ್ಕೆ ಧ್ವನಿಗೂಡಿಸಿದ್ದಾರೆ. ಈ ಕುರಿತು ಸ್ವತಃ ಆಮೀರ್ ಕೂಡ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಭಾರತವನ್ನು ಪ್ರೀತಿಸುವಂತವನು ಎಂದು ಹೇಳುವ ಮೂಲಕ ಸಮಾಧಾನಿಸಿದ್ದಾರೆ. ಇದನ್ನೂ ಓದಿ:ಪತಿ ಪಾದದ ಬಳಿ ಕೂತು ಪೂಜಿಸಿದಕ್ಕೆ ಟ್ರೋಲ್ ಆದ ನಟಿ ಪ್ರಣಿತಾ

    ಇತ್ತ ದೇಶಪರ, ದೇಶಭಕ್ತಿ ಸಾರುವಂತಹ ಅನೇಕ ಚಿತ್ರಗಳನ್ನು ಮಾಡಿರುವ ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನಕ್ಕೆ ಕಥೆ ಬರೆದವರು ಕೂಡ ಹಿಂದೂಗಳಿಗೆ ಅವಹೇಳನ ಮಾಡುವಂತಹ ಟ್ವಿಟ್ ಗಳನ್ನು ಮಾಡಿದ್ದರು ಎನ್ನುವ ಕಾರಣಕ್ಕಾಗಿ ಈ ಸಿನಿಮಾವನ್ನೂ ಬೈಕಾಟ್ ಮಾಡಬೇಕು ಎಂದು ಹಲವರು ಆಗ್ರಹಿಸಿದ್ದಾರೆ. ಇದಕ್ಕೆ ಕಂಗನಾ ರಣಾವತ್ ಕೂಡ ಧ್ವನಿ ಎತ್ತಬೇಕು ಎಂದು ಒತ್ತಡ ಹೇರಿದ್ದಾರೆ. ಇದಕ್ಕೂ ಉತ್ತರ ನೀಡಿದ ಕಂಗನಾ, ದೇಶ ಮತ್ತು ಹಿಂದೂಗಳ ಪರ ಯಾರೇ ಅಗೌರವ ತೋರಿದರೂ, ಅಂತಹ ಸಿನಿಮಾಗಳನ್ನು ಒಪ್ಪಬೇಡಿ ಎಂದು ಟ್ವಿಟ್ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್  ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ಆಗಸ್ಟ್ 11ಕ್ಕೆ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಡುವೆ ಬಿಗ್ ಫೈಟ್ : ಗೆಲುವು ಯಾರ ಪಾಲಿಗೆ?

    ಬಾಲಿವುಡ್ ಅಂಗಳದಲ್ಲಿ ಬಿಗ್ ಫೈಟ್ ಗೆ ವೇದಿಕೆ ಸಜ್ಜಾಗುತ್ತಿದೆ. ಬಿಟೌನ್ ನ ಇಬ್ಬರು ಸೂಪರ್ ಸ್ಟಾರ್ ಗಳ ಚಿತ್ರಗಳು ಆಗಸ್ಟ್ 11ಕ್ಕೆ ಬಿಡುಗಡೆ ಆಗುತ್ತಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬ ಲೆಕ್ಕಾಚಾರ ಈಗಿನಿಂದಲೇ ಶುರುವಾಗಿದೆ. ಕೇವಲ ಸಿನಿಮಾದಿಂದ ಮಾತ್ರವಲ್ಲ, ಇತರ ವಿಷಯಗಳಿಂದಾಗಿಯೂ ಸಿನಿಮಾದ ಸೋಲು ಗೆಲುವಿನ ಚರ್ಚೆಗಳು ನಡೆದಿವೆ. ಸಿನಿಮಾ ಬಿಡುಗಡೆಗೆ ಇನ್ನೂ ಎರಡು ತಿಂಗಳು ಇದ್ದರೂ, ಈಗಿನಿಂದಲೇ ಬಾಕ್ಸ್ ಆಫೀಸ್ ಲೆಕ್ಕಾಚಾರ ಕೂಡ ನಡೆದಿದೆ.

    ಬಾಲಿವುಡ್ ಇಬ್ಬರು ಖ್ಯಾತ ನಟರಾದ ಅಕ್ಷಯ್ ಕುಮಾರ್ ಮತ್ತು ಆಮೀರ್ ಖಾನ್ ನಟನೆಯ ಚಿತ್ರಗಳು ಆಗಸ್ಟ್ 11 ರಂದು ವಿಶ್ವದಾದ್ಯಂತ ಬಿಡುಗಡೆ ಆಗುತ್ತಿವೆ. ಅಕ್ಷಯ್ ನಟನೆಯ ರಕ್ಷಾ ಬಂಧನ್ ಮತ್ತು ಆಮೀರ್ ಖಾನ್ ನಟನೆಯ ಲಾಲ್ ಸಿಂಗ್ ಚಡ್ಡಾ ಏಕಕಾಲಕ್ಕೆ ತೆರೆ ಕಾಣುತ್ತಿವೆ. ಎರಡೂ ನಿರೀಕ್ಷಿತ ಚಿತ್ರಗಳು ಆಗಿದ್ದರಿಂದ, ಪ್ರೇಕ್ಷಕನ ಒಲವು ಯಾರ ಕಡೆ ಎನ್ನುವುದೇ ಸದ್ಯಕ್ಕಿರುವ ಕುತೂಹಲ. ಎರಡೂ ಸಿನಿಮಾಗಳು ತಮ್ಮದೇ ಆದ ಕಾರಣಗಳಿಂದಾಗಿ ಸಾಕಷ್ಟು ಕ್ರೇಜ್ ಕ್ರಿಯೇಟ್ ಮಾಡಿವೆ. ಇದನ್ನೂ ಓದಿ:ಇನ್ನೆರಡು ತಿಂಗಳಲ್ಲಿ ಶಿವರಾಜ್ ಕುಮಾರ್ ಮತ್ತು ಅರ್ಜುನ್ ಜನ್ಯ ಕಾಂಬಿನೇಷನ್ ಸಿನಿಮಾ: ರಮೇಶ್ ರೆಡ್ಡಿ

    ಈಗಾಗಲೇ ಲಾಲ್ ಸಿಂಗ್ ಚಡ್ಡಾ ಟ್ರೈಲರ್ ರಿಲೀಸ್ ಆಗಿದ್ದು, ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಈ ಸಿನಿಮಾದಲ್ಲಿ ಆಮೀರ್ ಹೊಸ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೇ, ಅದ್ಧೂರಿಯಾಗಿಯೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಅಕ್ಷಯ್ ಕುಮಾರ್ ನಟನೆಯ ರಕ್ಷಾ ಬಂಧನ್ ಟ್ರೇಲರ್ ಕೂಡ ಇತ್ತೀಚೆಗಷ್ಟೇ ರಿಲೀಸ್ ಆಗಿದೆ. ಅದು ಕೂಡ ಪ್ರೇಕ್ಷಕರ ಗಮನ ಸೆಳೆದಿದೆ. ಎರಡೂ ಚಿತ್ರಗಳು ಕೂಡ ಭರವಸೆ ಮೂಡಿಸಿರುವುದರಿಂದ ದೊಡ್ಡ ಮಟ್ಟದಲ್ಲಿ ಫೈಟ್ ಎದುರಾಗಲಿದೆ.

    ಈ ಕುರಿತು ಮಾತನಾಡಿರುವ ಅಕ್ಷಯ್ ಕುಮಾರ್, ‘ಎರಡು ದೊಡ್ಡ ಸಿನಿಮಾಗಳು ಬಂದಾಗ ಈ ರೀತಿ ಗೊಂದಲ ಆಗುವುದು ಸಹಜ. ಹಾಗಂತ ನಾನು ಇದನ್ನು ಕ್ಲ್ಯಾಶ್ ಎಂದು ಕರೆಯುವುದಿಲ್ಲ. ಎರಡು ದೊಡ್ಡ ಚಿತ್ರಗಳು ಬಿಡುಗಡೆ ಆಗುತ್ತಿವೆ ಎಂದಷ್ಟೇ ಹೇಳುವ. ಎರಡೂ ಚಿತ್ರಗಳು ಚೆನ್ನಾಗಿ ಕಲೆಕ್ಷನ್ ಮಾಡಲಿವೆ ಎಂಬ  ನಂಬಿಕೆ ನನ್ನದು’ ಅಂತಾರೆ ಅಕ್ಷಯ್ ಕುಮಾರ್.

    Live Tv

  • ಮೋದಿಗೆ ಕಳೆದ 20 ವರ್ಷಗಳಿಂದ ರಾಖಿ ಕಟ್ತಿರೋ ಪಾಕ್ ಮಹಿಳೆ!

    ಮೋದಿಗೆ ಕಳೆದ 20 ವರ್ಷಗಳಿಂದ ರಾಖಿ ಕಟ್ತಿರೋ ಪಾಕ್ ಮಹಿಳೆ!

     

    ನವದೆಹಲಿ: ಸದ್ಯ ಭಾರತದಲ್ಲಿ ವಾಸವಿರುವ ಪಾಕಿಸ್ತಾನದ ಮಹಿಳೆಯೊಬ್ಬರು ಕಳೆದ 20 ವರ್ಷಗಳಿಂದ ಮೋದಿಗೆ ರಾಖಿ ಕಟ್ಟುತ್ತಿದ್ದಾರೆ.

    ನರೇಂದ್ರ ಭಾಯ್ ಅವರಿಗೆ ನಾನು ಕಳೆದ 22-23 ವರ್ಷಗಳಿಂದ ರಾಖಿ ಕಟ್ಟುತ್ತಾ ಬಂದಿದ್ದೇನೆ. ಈ ವರ್ಷವೂ ಅವರಿಗೆ ರಾಖಿ ಕಟ್ಟಲು ತುಂಬಾ ಉತ್ಸುಕಳಾಗಿದ್ದೀನಿ ಅಂತ ಕಮರ್ ಮೊಹ್ಸಿನ್ ಶೇಖ್ ಸುದ್ದಿ ಸಂಸ್ಥೆಗೆ ಹೇಳಿದ್ದಾರೆ.

    ಕಮರ್ ಮೊಹ್ಸಿನ್ ಅವರು ಪಾಕಿಸ್ತಾನದವರಾಗಿದ್ದು, ಮದುವೆಯಾದ ನಂತರ ಭಾರತಕ್ಕೆ ಬಂದು ನೆಲೆಸಿದ್ದಾರೆ. ಇವರು ಮೋದಿಗೆ ಮೊದಲನೇ ಬಾರಿಗೆ ರಾಖಿ ಕಟ್ಟಿದ್ದು ಅವರು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದಾಗ.

    ನಾನು ನರೇಂದ್ರ ಭಾಯ್ ಅವರಿಗೆ ಮೊದಲ ಬಾರಿಗೆ ರಾಖಿ ಕಟ್ಟಿದಾಗ ಅವರು ಆರ್‍ಎಸ್‍ಎಸ್ ಕಾರ್ಯಕರ್ತರಾಗಿದ್ದರು. ಅವರ ಧ್ಯೇಯ ಹಾಗೂ ಕಠಿಣ ಪರಿಶ್ರಮದಿಂದ ಇಂದು ಪ್ರಧಾನಿ ಆಗಿದ್ದಾರೆ ಎಂದು ಕಮರ್ ಹೇಳಿದ್ದಾರೆ.

    ಈಗ ಪ್ರಧಾನಿಯವರು ತುಂಬಾ ಬ್ಯುಸಿ ಇರ್ತಾರೆ ಅಂದುಕೊಂಡಿದ್ದೆ. ಆದ್ರೆ ಎರಡು ದಿನಗಳ ಹಿಂದೆ ಅವರು ಕರೆ ಮಾಡಿದ್ದರು. ನನಗೆ ತುಂಬಾ ಖುಷಿಯಾಯ್ತು. ರಕ್ಷಾ ಬಂಧನ್‍ಗೆ ತಯಾರಿ ಶುರು ಮಾಡಿದೆ ಎಂದಿದ್ದಾರೆ.