Tag: ರಕ್ಷಣಾ ಸಚಿವ

  • ಇಸ್ರೆಲ್‌ ರಕ್ಷಣಾ ಸಚಿವನನ್ನೇ ವಜಾಗೊಳಿಸಿದ ಪ್ರಧಾನಿ ನೆತನ್ಯಾಹು

    ಇಸ್ರೆಲ್‌ ರಕ್ಷಣಾ ಸಚಿವನನ್ನೇ ವಜಾಗೊಳಿಸಿದ ಪ್ರಧಾನಿ ನೆತನ್ಯಾಹು

    ಟೆಲ್‌ ಅವಿವ್‌: ಗಾಜಾ ವಿರುದ್ಧದ ಯುದ್ಧದ ಹೊತ್ತಲ್ಲೇ ಇಸ್ರೇಲ್‌ನಲ್ಲಿ (Isreal) ಮಹತ್ವದ ಬೆಳವಣಿಗೆ ನಡೆದಿದೆ. ಗಾಜಾ ಯುದ್ಧದ ವಿಚಾರದಲ್ಲಿ ತಮ್ಮೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ರಕ್ಷಣಾ ಮಂತ್ರಿ ಯೋವ್ ಗಾಲೆಂಟ್‌ರನ್ನು (Yoav Gallant) ಪ್ರಧಾನಿ ನೆತನ್ಯಾಹು (Benjamin Netanyahu) ತಮ್ಮ ಸಂಪುಟದಿಂದ ರಾತ್ರೋರಾತ್ರಿ ಪದಚ್ಯುತಗೊಳಿಸಿದ್ದಾರೆ.

    ರಕ್ಷಣಾ ಮಂತ್ರಿಯನ್ನು ವಜಾಗೊಳಿಸಿದ ಬೆನ್ನಲ್ಲೇ ನೆತನ್ಯಾಹು ನಡೆಗೆ ಭಾರೀ ಆಕ್ರೋಶ ವ್ಯಕ್ತವಾಗಿದೆ. ಮಧ್ಯರಾತ್ರಿಯೇ ಟೆಲ್ ಅವೀವ್‌ನಲ್ಲಿ ದೊಡ್ಡಮಟ್ಟದ ಪ್ರತಿಭಟನೆ ನಡೆದಿದೆ.  ಇದನ್ನೂ ಓದಿ: ಅಮೆರಿಕ ಉಪಾಧ್ಯಕ್ಷನಾಗಿ ಜೆಡಿ ವ್ಯಾನ್ಸ್ ಆಯ್ಕೆ – ಆಂಧ್ರದ ವಡ್ಲೂರಿನಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

    ನೆತನ್ಯಾಹು ವಿರೋಧಿ ಘೋಷಣೆಗಳು ಮುಗಿಲುಮುಟ್ಟಿದ್ದು ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದ್ದಾರೆ. ಒತ್ತೆಯಾಳುಗಳ ಬಿಡುಗಡೆ ಸಂಬಂಧ ನೆತನ್ಯಾಹು ಯಾವುದೇ ಕ್ರಮ ತೆಗೆದುಕೊಂಡಿಲ್ಲ ಎನ್ನುವುದು ಪ್ರತಿಭಟನಾಕಾರರ ಪ್ರಮುಖ ಆರೋಪವಾಗಿದೆ.

    ಕಳೆದ ವರ್ಷವೇ ಯೋವ್ ಗಾಲೆಂಟ್ ತಲೆದಂಡಕ್ಕೆ ನೆತನ್ಯಾಹು ಯತ್ನಿಸಿದ್ದರು. ಆಗಲೂ ಭಾರೀ ವಿರೋಧ ವ್ಯಕ್ತವಾಗಿತ್ತು. ಯುದ್ಧದ ಸಂದರ್ಭದಲ್ಲಿ ಪ್ರಧಾನ ಮಂತ್ರಿ ಮತ್ತು ರಕ್ಷಣಾ ಸಚಿವರ ನಡುವೆ ಸಂಪೂರ್ಣ ನಂಬಿಕೆಯ ಅಗತ್ಯವಿದೆ ಎಂದು ನೆತನ್ಯಾಹು ಹೇಳಿದ್ದಾರೆ.

    ಅಕ್ಟೋಬರ್ 7, 2023 ರಂದು ಹಮಾಸ್ ಉಗ್ರರು ಇಸ್ರೇಲ್‌ ಮೇಲೆ ದಾಳಿ ನಡೆಸಿ 251 ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದು ಈ ಪೈಕಿ 100 ಮಂದಿ ಎಲ್ಲಿದ್ದಾರೆ ಎಂಬ ಮಾಹಿತಿ ಇಲ್ಲಿಯವರೆಗೆ ಲಭ್ಯವಾಗಿಲ್ಲ.

     

  • ಯುದ್ಧಕಾಲದ ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

    ಯುದ್ಧಕಾಲದ ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್‌ ಅಧ್ಯಕ್ಷ ಝೆಲೆನ್ಸ್ಕಿ

    ಕೀವ್: ಯುದ್ಧಕಾಲದ ರಕ್ಷಣಾ ಸಚಿವ ಓಲೆಕ್ಸಿ ರೆಜ್ನಿಕೋವ್ (Oleksii Reznik) ಅವರನ್ನು ವಜಾಗೊಳಿಸಿ, ಅವರ ಸ್ಥಾನಕ್ಕೆ ರುಸ್ಟೆಮ್ ಉಮೆರೋವ್ ಅವರನ್ನು ನಾಮನಿರ್ದೇಶನ ಮಾಡಿ ಉಕ್ರೇನ್‌ (Ukraine) ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿ (Volodimir Zelensky) ಆದೇಶ ಹೊರಡಿಸಿದ್ದಾರೆ.

    ಉಕ್ರೇನ್‌ ಮೇಲಿನ ರಷ್ಯಾ (Russia) ಯುದ್ಧವು 19 ನೇ ತಿಂಗಳನ್ನು ಪ್ರವೇಶಿಸಿದೆ. ಈ ಹೊತ್ತಿನಲ್ಲಿ ರಕ್ಷಣಾ ವ್ಯವಸ್ಥೆ ವಿಚಾರವಾಗಿ ಸಚಿವಾಲಯಕ್ಕೆ ಹೊಸ ವಿಧಾನಗಳ ಅಗತ್ಯವಿದೆ ಎಂದು ಈ ನಿರ್ಧಾರ ಕೈಗೊಳ್ಳಲಾಗಿದೆ. ಇದನ್ನೂ ಓದಿ: 2ನೇ ಮಹಾಯುದ್ಧದ ನಂತರ ಅತಿ ಹೆಚ್ಚು ಸಾವುಗಳಾದ ಯುದ್ಧ ರಷ್ಯಾ-ಉಕ್ರೇನ್‌ ವಾರ್‌; ಮಡಿದವರೆಷ್ಟು?

    ಹೊಸ ರಕ್ಷಣಾ ಸಚಿವರಾಗಲು ಉಕ್ರೇನ್‌ನ ಮಾಜಿ ಪೀಪಲ್ಸ್ ಡೆಪ್ಯೂಟಿ ರುಸ್ಟೆಮ್ ಉಮೆರೊವ್ ಅವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಝೆಲೆನ್ಸ್ಕಿ ಸೋಷಿಯಲ್‌ ಮೀಡಿಯಾ ಎಕ್ಸ್‌ನಲ್ಲಿ ವೀಡಿಯೋ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

    ಉಕ್ರೇನ್‌ನ ರಕ್ಷಣಾ ಸಚಿವರನ್ನು ಬದಲಿಸಲು ನಾನು ನಿರ್ಧರಿಸಿದ್ದೇನೆ. ಮಿಲಿಟರಿ ಮತ್ತು ಸಮಾಜದೊಂದಿಗೆ ಉತ್ತಮ ಪ್ರಮಾಣದಲ್ಲಿ ಸಂವಹನದ ಹೊಸ ವಿಧಾನಗಳು ಮತ್ತು ಇತರ ಸ್ವರೂಪಗಳ ಅಗತ್ಯವಿದೆ ಎಂದು ಅವರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಂಗಾಪುರ ಅಧ್ಯಕ್ಷರಾಗಿ ಆಯ್ಕೆಯಾದ ಭಾರತೀಯ ಮೂಲದ ಷಣ್ಮುಗರತ್ನಂಗೆ ಮೋದಿ ಅಭಿನಂದನೆ – ಯಾರಿವರು?

    ಈಗ ರುಸ್ಟೆಮ್ ಉಮೆರೋವ್ ಸಚಿವಾಲಯವನ್ನು ಮುನ್ನಡೆಸಬೇಕು. ಉಕ್ರೇನ್‌ನ ವರ್ಕೋವ್ನಾ ರಾಡಾ (ಶಾಸಕಾಂಗ) ಈ ವ್ಯಕ್ತಿಯನ್ನು ಚೆನ್ನಾಗಿ ಬಲ್ಲವರಾಗಿದ್ದಾರೆ. ಉಮೆರೋವ್‌ಗೆ ಯಾವುದೇ ಹೆಚ್ಚುವರಿ ಪರಿಚಯಗಳ ಅಗತ್ಯವಿಲ್ಲ. ಸಂಸತ್ತು ಈ ಅಭ್ಯರ್ಥಿಯನ್ನು ಬೆಂಬಲಿಸುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ ಎಂದು ಉಕ್ರೇನ್‌ ಅಧ್ಯಕ್ಷ ಹೇಳಿದ್ದಾರೆ.

    ಫೆಬ್ರವರಿ 24, 2022 ರಂದು ರಷ್ಯಾ-ಉಕ್ರೇನ್ ಯುದ್ಧದ ಆರಂಭದಿಂದಲೂ ರೆಜ್ನಿಕೋವ್ ರಕ್ಷಣಾ ಸಚಿವರಾಗಿ ಕೆಲಸ ಮಾಡಿದ್ದರು. ಯುದ್ಧವು ಸಾವಿರಾರು ಜನರನ್ನು ಬಲಿ ತೆಗೆದುಕೊಂಡಿದೆ. ಈಗಲೂ ಎರಡು ರಾಷ್ಟ್ರಗಳ ನಡುವೆ ಯುದ್ಧವು ಉಲ್ಬಣಗೊಳ್ಳುತ್ತಲೇ ಇದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ

    ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟು – ನಮ್ಮ ದೇಶ ದಿವಾಳಿಯಾಗಿದೆ ಎಂದ ರಕ್ಷಣಾ ಸಚಿವ

    ಇಸ್ಲಾಮಾಬಾದ್: ನಗದು ಕೊರತೆಯಿಂದ ಬಳಲುತ್ತಿರುವ ಪಾಕಿಸ್ತಾನ ಆರ್ಥಿಕ ಬಿಕ್ಕಟ್ಟನ್ನು (Pakistan economic crisis) ಎದುರಿಸಲು ಹೆಣಗಾಡುತ್ತಿರುವ ನಡುವೆಯೇ ಇದೀಗ ಅಲ್ಲಿನ ರಕ್ಷಣಾ ಸಚಿವರು (Defense Minister) ಪಾಕಿಸ್ತಾನ ದಿವಾಳಿ (Bankrupt) ರಾಷ್ಟ್ರವಾಗಿದೆ ಎಂದು ಬೇಸರದಿಂದ ಹೇಳಿಕೊಂಡಿದ್ದಾರೆ.

    ಶನಿವಾರ ಸಿಯಾಲ್‌ಕೋಟ್‌ನಲ್ಲಿ ಸಮಾರಂಭವೊಂದನ್ನು ಉದ್ದೇಶಿಸಿ ಮಾತನಾಡಿದ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ (Khawaja Asif), ನಾವೀಗ ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಈ ಸ್ಥಿತಿಗೆ ಪ್ರತಿಯೊಬ್ಬರೂ ಕಾರಣರು. ಪಾಕಿಸ್ತಾನದ ಸಮಸ್ಯೆಗೆ ಪಾಕಿಸ್ತಾನವೇ ಪರಿಹಾರ ಕಂಡುಕೊಳ್ಳಬೇಕು ಎಂದಿದ್ದಾರೆ.

    ಪಾಕಿಸ್ತಾನ ಈಗಾಗಲೇ ದಿವಾಳಿಯಾಗಿದೆ. ನಾವು ದಿವಾಳಿಯಾಗಿರುವ ದೇಶದಲ್ಲಿ ವಾಸಿಸುತ್ತಿದ್ದೇವೆ. ಪಾಕಿಸ್ತಾನದ ಸಮಸ್ಯೆಗೆ ಅಂತಾರಾಷ್ಟ್ರೀಯ ಹಣಕಾಸು ನಿಧಿ ಬಳಿ ಪರಿಹಾರವಿಲ್ಲ. ನಮ್ಮ ಸಮಸ್ಯೆಗಳಿಗೆ ನಮ್ಮ ದೇಶದೊಳಗೆಯೇ ಪರಿಹಾರವಿದೆ. ಪಾಕಿಸ್ತಾನದಲ್ಲಿ ಕಾನೂನು ಹಾಗೂ ಸಂವಿಧಾನವನ್ನು ಅನುಸರಿಸದಿರುವುದರಿಂದ ಆರ್ಥಿಕ ಅವ್ಯವಸ್ಥೆ ಉಂಟಾಗಿದೆ. ಈ ಪರಿಸ್ಥಿತಿಗೆ ಅಧಿಕಾರಶಾಹಿ ಹಾಗೂ ರಾಜಕಾರಣಿಗಳು ಸೇರಿದಂತೆ ಎಲ್ಲರೂ ಕಾರಣರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದಾರೆ. ಇದನ್ನೂ ಓದಿ: ಜಪಾನ್ ಮೇಲೆ ಪರೀಕ್ಷಾರ್ಥ ಖಂಡಾಂತರ ಕ್ಷಿಪಣಿ ಹಾರಿಸಿದ ಉ. ಕೊರಿಯಾ – ಅಮೆರಿಕ, ದ. ಕೊರಿಯಾಗೆ ಎಚ್ಚರಿಕೆ

    ತೀವ್ರ ಆರ್ಥಿಕ ಕುಸಿತ ಎದುರಿಸುತ್ತಿರುವ ಪಾಕಿಸ್ತಾನದಲ್ಲಿ ಕಳೆದ ವಾರ ಹಣದುಬ್ಬರ ಶೇ.38.4 ಕ್ಕೆ ಏರಿಕೆಯಾಗಿದೆ. ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರುತ್ತಿರುವುದು ಮುಂದುವರಿಯುತ್ತಿರುವುದರಿಂದ ಒಂದೇ ವಾರದಲ್ಲಿ ಶೇ.38.4 ಕ್ಕೆ ಏರಿಕೆಯಾಗಿದೆ. ಇದನ್ನೂ ಓದಿ: ಕಾರಿನಲ್ಲಿ ಹೋಗುತ್ತಿದ್ದಾಗ ತನ್ನ ಅಜ್ಜಿಗೆ ಗುಂಡು ಹಾರಿಸಿದ 6ರ ಬಾಲಕಿ – ವೃದ್ಧೆ ಸಾವು

    LIVE TV
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಪಾಸಿಟಿವ್

    ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆಗೆ ಕೊರೊನಾ ಪಾಸಿಟಿವ್

    ನವದೆಹಲಿ: ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ.

    ಇಂದು ನಡೆಸಿದ ಕೊರೊನಾ ಸೋಂಕಿನ ಪರೀಕ್ಷೆಯಲ್ಲಿ ಧನಾತ್ಮಕ ಫಲಿತಾಂಶ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಸೋಮವಾರ ದೆಹಲಿಯಲ್ಲಿ ನಡೆಯಲಿರುವ 75ನೇ ಸ್ವಾತಂತ್ರ‍್ಯ ಮಹೋತ್ಸವದ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಾಗುವುದಿಲ್ಲ ಎಂದು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡಿದ್ರೆ 10 ವರ್ಷ ಜೈಲು – ಹಿಮಾಚಲ ಪ್ರದೇಶದಲ್ಲಿ ಸಾಮೂಹಿಕ ಮತಾಂತರ ನಿಷೇಧ

    ಭಾರತದ 75ನೇ ವರ್ಷದ ಸ್ವಾತಂತ್ರ‍್ಯೋತ್ಸವವು ನಮ್ಮಲ್ಲಿ ಪ್ರತಿಯೊಬ್ಬರಿಗೂ ಐತಿಹಾಸಿಕ ಸಂದರ್ಭ ಹಾಗೂ ಹೆಮ್ಮೆಯ ಕ್ಷಣವಾಗಿದೆ. ಆದರೆ ನಾನು ಆಗಸ್ಟ್ 15ರ ಧ್ವಜಾರೋಹಣ ಸಮಾರಂಭದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೆ. ಆದರೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಸಮಾರಂಭದಲ್ಲಿ ಪಾಲ್ಗೊಳ್ಳುವ ಸ್ಥಿತಿಯಲ್ಲಿ ನಾನಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ. ಇದನ್ನೂ ಓದಿ: ಬಿಗ್ ಬಾಸ್ ಮನೆಯಿಂದ ರಾಜಸ್ಥಾನ ಬೆಡಗಿ ಕಿರಣ್ ಯೋಗೇಶ್ವರ್‌ ಔಟ್

    ನಾನು ದೈಹಿಕವಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಿಲ್ಲ. ಆದರೆ ಇಡೀ ರಾಷ್ಟçದೊಂದಿಗೆ ಸ್ವಾತಂತ್ರ‍್ಯ ಸಂಭ್ರಮದಲ್ಲಿ ಸೇರಿಕೊಳ್ಳುತ್ತೇನೆ. ಈ ಶುಭ ಸಂದರ್ಭದಲ್ಲಿ ಎಲ್ಲರಿಗೂ ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಕೋರುತ್ತೇನೆ ಎಂದು ಅವರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಫಿನ್ಲೆಂಡ್‌ಗೆ ರಷ್ಯಾ ಶಾಕ್ – ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ

    ಫಿನ್ಲೆಂಡ್‌ಗೆ ರಷ್ಯಾ ಶಾಕ್ – ನೈಸರ್ಗಿಕ ಅನಿಲ ಸರಬರಾಜು ಸ್ಥಗಿತ

    ಮಾಸ್ಕೋ: ನ್ಯಾಟೋಗೆ ಸೇರಲು ಮುಂದಾದ ಫಿನ್ಲೆಂಡ್‌ಗೆ ರಷ್ಯಾ ಈಗ ಶಾಕ್ ಕೊಟ್ಟಿದೆ. ಇಂದಿನಿಂದ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ.

    ರಷ್ಯಾ-ಉಕ್ರೇನ್ ಯುದ್ಧದ ನಡುವೆ ನ್ಯಾಟೋ ಸದಸ್ಯತ್ವಕ್ಕೆ ಅರ್ಜಿ ಸಲ್ಲಿಸಿದ ಫಿನ್ಲೆಂಡ್ ರುಬೆಲ್‌ನಲ್ಲಿ ಪಾವತಿಸುವ ಷರತ್ತನ್ನು ನಿರಾಕರಿಸಿತ್ತು. ಈ ಕಾರಣಕ್ಕೆ ರಷ್ಯಾ ಫಿನ್ಲೆಂಡ್‌ಗೆ ನೈಸರ್ಗಿಕ ಅನಿಲ ಸರಬರಾಜನ್ನು ಸ್ಥಗಿತಗೊಳಿಸಿದೆ ಎಂದು ಫಿನ್ನಿಷ್ ಸರ್ಕಾರಿ ಸ್ವಾಮ್ಯದ ಕಂಪೆನಿ ಹೇಳಿದೆ. ಇದನ್ನೂ ಓದಿ: ಮಸ್ಕ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ – ಬಾಯಿ ಮುಚ್ಚಿಸಲು ಕೋಟಿ ಹಣ ಸಂದಾಯ

     

    ಉಕ್ರೇನ್‌ನಲ್ಲಿನ ಯುದ್ಧದಿಂದಾಗಿ ರಷ್ಯಾದ ಕಚ್ಚಾತೈಲಗಳ ಮೇಲೆ ಯುರೋಪಿಯನ್ ಒಕ್ಕೂಟಗಳು ರಷ್ಯಾಮೇಲೆ ನಿರ್ಬಂಧ ಹೇರಲು ಮುಂದಾಗಿದ್ದವು. ಈ ವೇಳೆ ಸ್ನೇಹಪರವಲ್ಲದ ವಿದೇಶಿ ಖರೀದಿದಾರರು ರಷ್ಯಾದ ಕರೆನ್ಸಿಯಲ್ಲೇ ಗ್ಯಾಸ್‌ಗೆ ಖರೀದಿಸಬೇಕು ಎಂದು ರಷ್ಯಾ ಒತ್ತಾಯಿಸಿತ್ತು. ಫಿನ್ಲೆಂಡ್‌ ನ್ಯಾಟೋ ಸದಸ್ಯತ್ವಕ್ಕಾಗಿ ಅರ್ಜಿ ಸಲ್ಲಿಸಿದ ನಂತರ ರಷ್ಯಾ ಈ ಕ್ರಮಕೈಗೊಂಡಿರುವುದು ವಿಶೇಷ. ಇದನ್ನೂ ಓದಿ: ಜ್ಞಾನವಾಪಿ ಕೇಸ್ ವಾರಣಾಸಿ ಕೋರ್ಟ್‍ಗೆ ವರ್ಗಾವಣೆ – ವಾದ, ಪ್ರತಿವಾದ ಹೇಗಿತ್ತು?

    ಕಳೆದ ತಿಂಗಳ ಕೊನೆಯಲ್ಲಿ ಪೋಲೆಂಡ್ ಮತ್ತು ಬಲ್ಗೇರಿಯಾಗೆ ನೈಸರ್ಗಿಕ ಅನಿಲವನ್ನು ಸ್ಥಗಿತಗೊಳಿಸಿತ್ತು. ಆದರೆ, ಫಿನ್ಲೆಂಡ್‌ಗೆ ಅನಿಲ ಕಡಿತಗೊಳಿಸಿದ್ದು, ಇದರೊಂದಿಗೆ ಇತರ ಸಣ್ಣ-ಸಣ್ಣ ಗ್ರಾಹಕರೂ ರಷ್ಯಾದ ನೈಸರ್ಗಿಕ ಅನಿಲದಿಂದ ದೂರ ಸರಿಯಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

    12 ಸೇನಾ ಘಟಕ ಸ್ಥಾಪಿಸಲು ನಿರ್ಧಾರ: ನ್ಯಾಟೋ ವಿಸ್ತರಣೆಗೆ ಪ್ರತಿಯಾಗಿ ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ 12 ಹೊಸ ಸೇನಾ ಘಟಕಗಳು ಮತ್ತು ವಿಭಾಗಗಳ ನೆಲೆಯನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ ಎಂದು ರಷ್ಯಾ ರಕ್ಷಣಾ ಸಚಿವ ಸೆರ್ಗೈ ಶೋಯಿಗು ತಿಳಿಸಿದ್ದಾರೆ.

    ಸ್ವೀಡನ್ ಮತ್ತು ಫಿನ್ಲೆಂಡ್‌ ನ್ಯಾಟೋ ಸೇರಲು ಅರ್ಜಿ ಸಲ್ಲಿಸಿರುವುದನ್ನು ವರ್ಚುವಲ್ ಸಭೆಯಲ್ಲಿ ಉಲ್ಲೇಖಿಸಿದ ಅವರು, ಪಶ್ಚಿಮದ ಮಿಲಿಟರಿ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಬೆದರಿಕೆಗೆ ಪ್ರತಿಯಾಗಿ ಈ ನಿರ್ಧಾರಕ್ಕೆ ಬರಲಾಗಿದೆ. ಸೇನೆಯು ಎರಡು ಸಾವಿರಕ್ಕೂ ಹೆಚ್ಚು ಯೂನಿಟ್ ಸೇನಾ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳನ್ನು ಶೀಘ್ರವೇ ಪಡೆಯಲಿದೆ ಎಂದು ಹೇಳಿದ್ದಾರೆ.

  • ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೊರೊನಾ ಪಾಸಿಟಿವ್

    ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಗೆ ಕೊರೊನಾ ಪಾಸಿಟಿವ್

    ನವದೆಹಲಿ: ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ಕೋವಿಡ್-19 ಪಾಸಿಟಿವ್ ದೃಢಪಟ್ಟಿದ್ದು, ಮನೆಯಲ್ಲೇ ಐಸೊಲೇಟ್ ಆಗಿದ್ದಾರೆ.

    ನನಗೆ ಸೌಮ್ಯ ರೋಗಲಕ್ಷಣ ಇತ್ತು. ಪರೀಕ್ಷೆಗೆ ಒಳಗಾದಾಗ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಮನೆಯಲ್ಲೇ ಕ್ವಾರಂಟೈನ್ ಆಗಿದ್ದೇನೆ. ಇತ್ತೀಚೆಗೆ ನನ್ನ ಸಂಪರ್ಕಕ್ಕೆ ಬಂದಿದ್ದವರು ಐಸೊಲೇಟ್ ಆಗಿ, ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ರಾಜನಾಥ್ ಸಿಂಗ್ ಟ್ವೀಟ್ ಮಾಡಿ ತಿಳಿಸಿದ್ದಾರೆ. ಇದನ್ನೂ ಓದಿ: 1000ಕ್ಕೂ ಹೆಚ್ಚು ಪೊಲೀಸರಿಗೆ ಕೊರೊನಾ ಪಾಸಿಟಿವ್

    ದೆಹಲಿಯಲ್ಲಿ ಕೋವಿಡ್ ಪಾಸಿಟಿವಿಟಿ ಪ್ರಮಾಣ ಹೆಚ್ಚುತ್ತಿದ್ದು, ಶೇ.23 ಆಗಿದೆ. ಕಳೆದ 24 ಗಂಟೆಗಳಲ್ಲಿ 22,751 ಪ್ರಕರಣಗಳು ದೆಹಲಿಯಲ್ಲಿ ವರದಿಯಾಗಿವೆ.

    ದೇಶದಲ್ಲಿ ಒಂದೇ ದಿನದಲ್ಲಿ 1.79 ಲಕ್ಷ ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. ಕೊರೊನಾ ರೂಪಾಂತರಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆಯೂ ಏರುಗತಿಯಲ್ಲಿ ಸಾಗುತ್ತಿದೆ. ಇದನ್ನೂ ಓದಿ: ನಟಿ, ಭರತನಾಟ್ಯ ಕಲಾವಿದೆ ಶೋಬನಾಗೆ ಓಮಿಕ್ರಾನ್ ಪಾಸಿಟಿವ್

  • ಅದ್ಧೂರಿ ಕಾರ್ಗಿಲ್ ವಿಜಯೋತ್ಸವ- ಎರಡು ಸೇತುವೆ ಲೋಕಾರ್ಪಣೆ

    ಅದ್ಧೂರಿ ಕಾರ್ಗಿಲ್ ವಿಜಯೋತ್ಸವ- ಎರಡು ಸೇತುವೆ ಲೋಕಾರ್ಪಣೆ

    ನವದೆಹಲಿ: ಯೋಧರು ಕಾರ್ಗಿಲ್ ವಿಜಯೋತ್ಸವವವನ್ನು ಅದ್ಧೂರಿಯಾಗಿ ಆಚರಿಸುತ್ತಿದ್ದಾರೆ. ವಿಜಯೋತ್ಸವದ ಅಂಗವಾಗಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಜಮ್ಮು ಕಾಶ್ಮೀರದ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿದ್ದು, ಇದೇ ವೇಳೆ ಪರ್ವತಗಳಿಗೆ ಸಂಪರ್ಕ ಕಲ್ಪಿಸುವ ಎರಡು ಸೇತುವೆಗಳನ್ನು ಉದ್ಘಾಟಿಸಲಿದ್ದಾರೆ.

    ಆಪರೇಷನ್ ವಿಜಯ್‍ನ 20ನೇ ವರ್ಷಾಚರಣೆ ಹಿನ್ನೆಲೆ ಶನಿವಾರ ಜಮ್ಮು ಕಾಶ್ಮೀರದಲ್ಲಿರುವ ಕಾರ್ಗಿಲ್ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ರಾಜನಾಥ್ ಸಿಂಗ್ ಗೌರವ ಸಲ್ಲಿಸಿದರು. 1999ರಲ್ಲಿ ನಡೆದ ಕಾರ್ಗಿಲ್ ಯುದ್ಧದಲ್ಲಿ ಪಾಕ್ ಸೈನಿಕರು ಹಾಗೂ ಉಗ್ರರ ಒಳನುಸುಳುವಿಕೆ ವಿರುದ್ಧ ನಡೆದ ಯುದ್ಧದಲ್ಲಿ ಭಾರತ ಜಯಗಳಿಸಿತ್ತು.

    ಯುದ್ಧ ಸ್ಮಾರಕಕ್ಕೆ ಗೌರವ ಸಲ್ಲಿಸಿದ ನಂತರ ಬಾರ್ಡರ್ ರೋಡ್ಸ್ ಆರ್ಗನೈಸೇಶನ್ ಕಥುವಾ ಜಿಲ್ಲೆಯ ಉಝ್ ಹಾಗೂ ಸಂಬ ಜಿಲ್ಲೆಯ ಬಸಂತರ್‍ನಲ್ಲಿ ನಿರ್ಮಿಸಿರುವ ಎರಡು ಸೇತುವೆಗಳನ್ನು ರಾಷ್ಟ್ರಕ್ಕೆ ಸಮರ್ಪಣೆ ಮಾಡಲಿದ್ದಾರೆ. ಉಝ್ ಸೇತುವೆ 1 ಕಿ.ಮೀ ಉದ್ದವಿದ್ದು, ಬಸಂತರ್ ಸೇತುವೆ 617.4 ಕಿ.ಮೀ.ಉದ್ದವಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    1999ರಲ್ಲಿ ಭಾರತೀಯ ಸೇನೆ ಅಕ್ರಮವಾಗಿ ಒಳ ನುಸುಳುತ್ತಿದ್ದ ಪಾಕಿಸ್ತಾನ ಸೈನಿಕರು ಹಾಗೂ ಉಗ್ರರ ವಿರುದ್ಧ ಹೋರಾಡಿ, ಶ್ರೀನಗರದ ಲೇಹ್ ಹೆದ್ದಾರಿಯನ್ನು ಗಮನದಲ್ಲಿರಿಸಿಕೊಂಡು ಪಾಕಿಸ್ತಾನ ಆಕ್ರಮಿಸಿದ್ದ ಹಲವು ಪರ್ವತ ಶಿಖರಗಳನ್ನು ವಶಪಡಿಸಿಕೊಂಡಿತ್ತು.

    ಜು.14ರ ಭಾರತದ ವಿಜಯ ದಿನದಂದು ರಾಜನಾಥ್ ಸಿಂಗ್ ಅವರು ದೆಹಲಿಯ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೆಟಿ ನೀಡಿ, ‘ವಿಜಯ ಜ್ವಾಲೆ’ಯನ್ನು ಹೊತ್ತಿಸಿದ್ದರು. ಜ್ವಾಲೆಯು ಜು.26 ರಂದು ಡ್ರಾಸ್ ತಲುಪಲಿದ್ದು, ಸುಮಾರು 9 ಪಟ್ಟಣಗಳು ಹಾಗೂ ನಗರಗಳನ್ನು ಹಾದು ಹೋಗಲಿದೆ. ನಂತರ ಕಾರ್ಗಿಲ್‍ಗೆ ತಲುಪಿ ಶಾಶ್ವತ ವಿಜಯ ಜ್ವಾಲೆ ಬಳಿ ವಿಲೀನಗೊಳಿಸಲಾಗುತ್ತದೆ.

    ವಿಜಯ ದಿನವನ್ನು ಭಾರತೀಯ ಸೇನೆ ವಿಜೃಂಭಣೆಯಿಂದ ಆಚರಿಸುತ್ತಿದ್ದು, ಈ ಮೂಲಕ ಆಪರೇಷನ್ ವಿಜಯ್‍ನಲ್ಲಿ ಭಾಗವಹಿಸಿದ ಯೋಧರಿಗೆ ನಮನ ಸಲ್ಲಿಸಲಾಗುತ್ತಿದೆ. ಆಪರೇಷನ್ ವಿಜಯ್‍ನ್ನು ‘ರಿಮೆಂಬರ್, ರೀಜಾಯ್ಸ್ ಆಂಡ್ ರಿನ್ಯೂ(ನೆನಪಿಡಿ, ಹೆಮ್ಮೆಪಡಿ ಮತ್ತು ನವೀಕರಿಸಿ)’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ. ಅಲ್ಲದೆ, ಸೈನ್ಯದ ಮೂರು ಬೆಟಾಲಿಯನ್‍ಗಳು ಅಸಾಧ್ಯವಾಗದ ಸ್ಥಿಯಲ್ಲಿ ಹೋರಾಡಿದ ಶಿಖರಗಳಿಗೆ ದಂಡಯಾತ್ರೆ ಕೈಗೊಳ್ಳುತ್ತಿವೆ.

    ಕಾರ್ಗಿಲ್ ವಿಜಯ ದಿನದ ಅಂಗವಾಗಿ ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ಮತ್ತು ಬಿಎಸ್‍ಎಫ್ ಯೋಧರ ತಂಡಗಳು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೋಂಡಿದ್ದು, ಸೈನಿಕರು, ಪೊಲೀಸ್ ಹಾಗೂ ಅರೆಸೇನಾ ಪಡೆಗಳ ಧೈರ್ಯದ ಕಥೆಗಳನ್ನು ಪ್ರದರ್ಶಿಸಲಿವೆ. ಹೀಗಾಗಿ ವಿವಿಧ ಕಾರ್ಯಕ್ರಮಗಳನ್ನು ಸೇನೆ ಹಾಕಿಕೊಂಡಿದ್ದು, ಕಾರ್ಗಿಲ್ ವಿಜಯ ದಿನದ ಬಳಿ ಸಾವನ್ನಪ್ಪಿದ ಸೈನಿಕರ ಕುಟುಂಬ ಸದಸ್ಯರನ್ನು ಗೌರವಿಸಲಾಗುತ್ತಿದೆ.

    ಕಾರ್ಯಕ್ರಮಗಳ ಭಾಗವಾಗಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಪ್ರೇರಣೆ ನೀಡುವ ಉಪನ್ಯಾಸ, ಶಾಲಾ ಮಕ್ಕಳಿಗೆ ಕಾರ್ಗಿಲ್ ಪ್ರದೇಶದ ಶೈಕ್ಷಣಿ ಪ್ರವಾಸವನ್ನು ಏರ್ಪಡಿಸಲಾಗಿದೆ. ಅಲ್ಲದೆ, ಕಾರ್ಗಿಲ್ ವಿಜಯದ ಕುರಿತು ರಕ್ಷಣಾ ಸಚಿವಾಲಯದಿಂದ ನಿರ್ಮಿಸಿದ 7 ನಿಮಿಷಗಳ ಕಿರು ಚಿತ್ರ, ಫೋಟೊ ಗ್ಯಾಲರಿ, ಸೈನಿಕರ ಶೌರ್ಯ ಬಿಂಬಿಸುವ ಚಿತ್ರಗಳನ್ನು ಪ್ರದರ್ಶಿಸಲಾಗುತ್ತಿದೆ. ಈ ಎಲ್ಲ ಕಾರ್ಯಕ್ರಮಗಳು ಜು.27ರ ವರೆಗೆ ನಡೆಯಲಿವೆ ಎಂದು ಇಂಡೋ ಟಿಬೇಟಿಯನ್ ಬಾರ್ಡರ್ ಪೊಲೀಸ್(ಐಟಿಬಿಪಿ) ವಕ್ತಾರ ವಿವೇಕ್ ಪಾಂಡೆ ತಿಳಿಸಿದ್ದಾರೆ.