Tag: ರಕ್ಷಕ್‌ ಬುಲೆಟ್‌

  • ನನ್ನ ಹೇಳಿಕೆಗಳನ್ನು ತಿರುಚಲಾಗಿದೆ, ಮಾನಸಿಕ ಹಿಂಸೆಯಾಗುತ್ತಿದೆ- ರಕ್ಷಕ್ ಪೋಸ್ಟ್ ವೈರಲ್

    ನನ್ನ ಹೇಳಿಕೆಗಳನ್ನು ತಿರುಚಲಾಗಿದೆ, ಮಾನಸಿಕ ಹಿಂಸೆಯಾಗುತ್ತಿದೆ- ರಕ್ಷಕ್ ಪೋಸ್ಟ್ ವೈರಲ್

    ‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ರಕ್ಷಕ್ ಬುಲೆಟ್ (Rakshak Bullet) ಅವರು ಇತ್ತೀಚೆಗೆ ಅದೇನೇ ಮಾತನಾಡಿದರೂ ಕಾಂಟ್ರವರ್ಸಿ ಆಗುತ್ತಿದೆ. ತಮ್ಮ ಹೇಳಿಕೆಗಳನ್ನು ತಿರುಚಿ ವೈರಲ್ ಆಗ್ತಿರೋ ವಿಡಿಯೋ ಬಗ್ಗೆ ರಿಯಾಕ್ಟ್ ಮಾಡಿದ್ದಾರೆ. ಈ ಕುರಿತು ಪೋಸ್ಟೊಂದನ್ನು ಹಂಚಿಕೊಂಡಿದ್ದಾರೆ.

    ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ ತಮ್ಮ ಇತ್ತೀಚಿನ ದಿನಗಳಲ್ಲಿ ನೀಡಿರುವ ಕೆಲವೇ ಹೇಳಿಕೆಗಳನ್ನು ತಿರುಚಿ ಬೇರೇಯದ್ದೇ ರೂಪ ಕೊಟ್ಟಿರುವ ಬಗ್ಗೆ ಅದರಿಂದ ತಮಗೆ ಮಾನಸಿಕ ಹಿಂಸೆ ಆಗುತ್ತಿದೆ ಎಂದು ರಕ್ಷಕ್ ಹೇಳಿಕೊಂಡಿದ್ದಾರೆ. ನಾನು ಬುಲೆಟ್ ಪ್ರಕಾಶ್ ಅವರ ಮಗ, ನನ್ನ ತಂದೆ ಸುಮಾರು 350ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ. ಅವರನ್ನು ಹರಸಿ ಬೆಳೆಸಿದ್ದೀರಾ. ಅವರ ಮಗನಾಗಿ ನಾನು ಜನಸಿರೋದು ನನ್ನ ಪುಣ್ಯ ಎಂದಿದ್ದಾರೆ. ಇದನ್ನೂ ಓದಿ:ಇಂಟರ್‌ನೆಟ್‌ನಲ್ಲಿ ಸಂಗೀತಾ ಟ್ರೆಂಡಿಂಗ್- ರೂಪೇಶ್ ಶೆಟ್ಟಿ ದಾಖಲೆ ಉಡೀಸ್

    ಬಳಿಕ ನನ್ನ ತಂದೆಯಲ್ಲಿರುವ ನೇರ ನುಡಿ ನನಗೂ ಬಂದಿದೆ. ಇತ್ತೀಚಿನ ದಿನಗಳಲ್ಲಿ ನನ್ನ ಹೇಳಿಕೆಗಳನ್ನು ತಿರುಚಿ ಸಾಮಾಜಿಕ ಜಾಲತಾಣದಲ್ಲಿ ಬಿಡುತ್ತಿದ್ದಾರೆ. ಅದರಿಂದ ನನಗೆ ಕೆಲವೊಮ್ಮೆ ಮಾನಸಿಕವಾಗಿ ಹಿಂಸೆಯಾಗುತ್ತಿದ್ದು, ನಾನು ಯಾರ ಭಾವನೆಗೂ ಧಕ್ಕೆ ತರುವ ಹೇಳಿಕೆಯನ್ನಾಗಲಿ ನೀಡುವುದನ್ನು ಅಭ್ಯಾಸ ಮಾಡಿಕೊಂಡಿಲ್ಲ ಎಂದು ರಕ್ಷಕ್ ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟನೆ ನೀಡಿದ್ದಾರೆ.

     

    View this post on Instagram

     

    A post shared by rakshak sena (@rakshak_bullet)

    ನಾನು ಎಲ್ಲೇ ಹೋದರೂ ಜನ ಗುರುತಿಸಿ ಪ್ರೀತಿಸಿದ್ದಾರೆ. ಒಂದು ಶುಭ ಸುದ್ದಿಯೆಂದರೆ ಇತ್ತೀಚಿನ ದಿನಗಳಲ್ಲಿ ಕೆಲವೊಂದು ಸಿನಿಮಾಗಳಿಗೆ ಅವಕಾಶ ಬಂದಿದ್ದು, ಅದರ ಕೆಲಸದಲ್ಲಿ ಸಕ್ರಿಯನಾಗಿದ್ದೇನೆ ಎಂದು ರಕ್ಷಕ್ ತಿಳಿಸಿದ್ದಾರೆ. ನನ್ನ ಪರಿಶ್ರಮದಿಂದ ಚಿತ್ರಗಳ ಮೂಲಕ ತಮ್ಮನ್ನು ರಂಜಿಸಿ ಮನೆ ಮಾಡುತ್ತೇನೆ ಎಂದು ರಕ್ಷಕ್ ಮನವಿ ಮಾಡಿದ್ದಾರೆ. ತಮ್ಮ ಬೆಂಬಲಿಸಿದವರಿಗೆ ಧನ್ಯವಾದ ತಿಳಿಸಿದ್ದು, ಶೀಘ್ರದಲ್ಲಿ ಹೊಸ ರೀತಿಯಲ್ಲಿ ನಿಮ್ಮ ಮುಂದೆ ಬರಲಿದ್ದೇನೆ ಎಂದು ರಕ್ಷಕ್ ಬರೆದುಕೊಂಡಿದ್ದಾರೆ.

    ಈ ಮೂಲಕ ಎಲ್ಲಾ ಟೀಕೆಗೆ, ಕೆಟ್ಟ ಟ್ರೋಲ್‌ಗಳಿಗೆ ರಕ್ಷಕ್ ಉತ್ತರ ನೀಡಿದ್ದಾರೆ. ತಮ್ಮ ಸಿನಿಮಾಗಳ ಮೂಲಕ ಅಭಿಮಾನಿಗಳಿಗೆ ರಂಜಿಸುತ್ತೇನೆ ಎಂದು ಮನವಿ ಮಾಡಿದ್ದಾರೆ.

  • ಗುಂಪುಗಾರಿಕೆ ಮಾಡೋಕೆ ಬಿಗ್‌ ಬಾಸ್‌ಗೆ ಹೋದೋನಲ್ಲ- ಪ್ರತಾಪ್‌ ಹೇಳಿಕೆಗೆ ರಕ್ಷಕ್‌ ರಿಯಾಕ್ಷನ್

    ಗುಂಪುಗಾರಿಕೆ ಮಾಡೋಕೆ ಬಿಗ್‌ ಬಾಸ್‌ಗೆ ಹೋದೋನಲ್ಲ- ಪ್ರತಾಪ್‌ ಹೇಳಿಕೆಗೆ ರಕ್ಷಕ್‌ ರಿಯಾಕ್ಷನ್

    ಬಿಗ್ ಬಾಸ್ ಮನೆ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಫಿನಾಲೆಗೆ ದಿನಗಣನೆ ಶುರುವಾಗುತ್ತಿದೆ. ವಿನಯ್ (Vinay Gowda) ಮತ್ತು ತಂಡದ ಗುಂಪುಗಾರಿಕೆ ಬಗ್ಗೆ ಮಾತನಾಡಿದ್ದ ಡ್ರೋನ್ ಪ್ರತಾಪ್‌ಗೆ (Drone Prathap) ರಕ್ಷಕ್ ಬುಲೆಟ್ ಖಡಕ್ ಉತ್ತರ ನೀಡಿದ್ದಾರೆ. ತುಳಿದು ಬೆಳೆಯುತ್ತಿರೋ ವಿನಯ್, ತಂಡದವರೆಲ್ಲಾ ಮನೆಗೆ ಹೋದರು ಎಂದ ಪ್ರತಾಪ್‌ಗೆ ರಕ್ಷಕ್ (Rakshak Bullet) ತಿರುಗೇಟು ನೀಡಿದ್ದಾರೆ.

    ವಿನಯ್ ತಮ್ಮ ತಂಡದಲ್ಲಿದ್ದವರಿಗೆ ಎಂದೂ ಬುದ್ಧಿವಾದ ಹೇಳಲಿಲ್ಲ. ವಿನಯ್ & ಟೀಮ್ ಗುಂಪುಗಾರಿಕೆ ಬಗ್ಗೆ ಡ್ರೋನ್ ಪ್ರತಾಪ್ ಮಾತನಾಡಿದ್ದರು. ವಿನಯ್ ತಮ್ಮ ತಂಡದವರ ತಪ್ಪು ಹೇಳದೇ ಇದ್ದಿದ್ದಕ್ಕೆ ಒಬ್ಬೊಬ್ಬರೇ ಮನೆಯಿಂದ ಎಲಿಮಿನೇಟ್ ಆದರು ಎಂದು ರಕ್ಷಕ್, ಈಶಾನಿ, ಸ್ನೇಹಿತ್, ನೀತು ಬಗ್ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ರಕ್ಷಕ್ ಬುಲೆಟ್ ಸೋಶಿಯಲ್ ಮೀಡಿಯಾದಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಯಾವುದೇ ಗುಂಪುಗಾರಿಕೆ ಮಾಡೋಕೆ ಅಥವಾ ತಂಡ ಕಟ್ಟೋದಕ್ಕೆ ಬಿಗ್ ಬಾಸ್ ಮನೆಯೊಳಗೆ ನಾನು ಹೋದೋನಲ್ಲ. ಜನರ ಪ್ರೀತಿ ಮತ್ತೆ ಜನರ ವಿಶ್ವಾಸ ಗಳಿಸೋಕೆ ಅಂತ ಹೋಗಿದ್ದು, ನನ್ನ ಬೆಡ್‌ಶೀಟ್ ನನ್ನ ಹತ್ತಿರ ಜೋಪಾನವಾಗಿ ಇದೆ. ನಿಮ್ಮ ಬೆಡಶೀಟ್ ಜೋಪಾನ ಮಾಡಿಕೊಳ್ಳಿ. ಕೊನೆಯಲ್ಲಿ ಎಚ್ಚರ ಎಂದು ಸಂದೇಶ ಬರೆದಿದ್ದಾರೆ.

    ಈ ವಾರಾಂತ್ಯದ ಶನಿವಾರದ (ಡಿ.6) ಪಂಚಾಯಿತಿಯಲ್ಲಿ ಸುದೀಪ್ (Sudeep) ಮನೆಮಂದಿಗೆ ಚಟುವಟಿಕೆಯೊಂದನ್ನ ಮಾಡಿಸಿದ್ದರು. ನಿಮ್ಮ ಅಭಿಪ್ರಾಯಗಳ ಪ್ರಕಾರ, ಯಾರು ಯಾವುದರ ಬಗ್ಗೆ ಪುಸ್ತಕ ಬರೆಯಬೇಕು? ಎಂದು ಟಾಸ್ಕ್ ಮಾಡಿಸಿದ್ದರು. ಆಗ ಬೇರೆಯವರನ್ನು ತುಳಿದು ಬೆಳೆಯೋದು ಹೇಗೆ? ಎಂಬ ಪುಸ್ತಕವನ್ನು ವಿನಯ್‌ಗೆ ನೀಡಿ ಪ್ರತಾಪ್ ಖಡಕ್ ಆಗಿ ರಿಯಾಕ್ಟ್ ಮಾಡಿದ್ದರು. ಇದನ್ನೂ ಓದಿ:‘ಯುಐ’ ಟೀಸರ್ ಸಂಭ್ರಮಕ್ಕೆ ಸಾಕ್ಷಿಯಾಗಲಿದ್ದಾರೆ ಕಿಚ್ಚ, ಶಿವಣ್ಣ, ಅಲ್ಲು ಅರವಿಂದ್

    ಬೇರೆಯವರನ್ನ ತುಳಿದು ಬೆಳೆಯೋದು ಹೇಗೆ? ಪುಸ್ತಕವನ್ನ ವಿನಯ್‌ಗೆ ಡ್ರೋನ್ ಪ್ರತಾಪ್ ನೀಡಿದರು. ಇಲ್ಲಿಯವರೆಗೂ ಯಾರ್ಯಾರು ವಿನಯ್ ಜೊತೆಯಲ್ಲಿ ಇದ್ದರು ಆ ಎಲ್ಲಾ ಫ್ರೆಂಡ್ಸ್, ಹಾಗೆ ಹೀಗೆ ಅಂದುಕೊಂಡು ಅವರೆಲ್ಲಾ ಎಲ್ಲಿ ತಪ್ಪು ಮಾಡ್ತಿದ್ದಾರೆ ಎಂಬ ಅಭಿಪ್ರಾಯವನ್ನೇ ವಿನಯ್ ಅವರು ಎಂದಿಗೂ ಕೊಟ್ಟಿಲ್ಲ. ಇಂತಹ ಕಡೆ ತಪ್ಪು ಮಾಡ್ತಿದ್ದಾರೆ ಅಂತ ವಿನಯ್ ಹೇಳೇ ಇಲ್ಲ. ಸರಿ ಎಂದುಕೊಂಡೇ ಜೊತೆಯಲ್ಲಿ ಇದ್ದವರೆಲ್ಲಾ ಮನೆಗೆ ಹೋದರು. ಮನೆಗೆ ಹೋದವರೆಲ್ಲರ ಬೆಡ್‌ಶೀಟ್ ಇವರ ಬೆಡ್‌ಗೆ ಸೇರಿಕೊಳ್ತು ಎಂದು ಪ್ರತಾಪ್ ಮಾತನಾಡಿದ್ದರು. ಡ್ರೋನ್ ಪ್ರತಾಪ್ ಮಾತನ್ನ ಕೇಳಿ ವಿನಯ್ ಶಾಕ್ ಆಗಿದ್ದರು.

    ಅಂದಹಾಗೆ, ಬುಲೆಟ್‌ ಪ್ರಕಾಶ್‌ ಪುತ್ರ ರಕ್ಷಕ್‌ ಬುಲೆಟ್ ಬಿಗ್‌ ಬಾಸ್‌ ಮನೆಗೆ ಕಾಲಿಟ್ಟ ಮೂರೇ ವಾರಕ್ಕೆ ಎಲಿಮಿನೇಟ್‌ ಆಗಿ ಹೊರಬಂದಿದ್ದರು. ರಕ್ಷಕ್‌ ಎಲಿಮಿನೇಷನ್‌ ಫ್ಯಾನ್ಸ್‌ಗೆ ಬೇಸರ ಮೂಡಿಸಿತ್ತು.

  • Breaking:   ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಔಟ್

    Breaking: ಬಿಗ್ ಬಾಸ್ ಮನೆಯಿಂದ ರಕ್ಷಕ್ ಬುಲೆಟ್ ಔಟ್

    ಬುಲೆಟ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಅವರು ಮೂರನೇ ಸ್ಪರ್ಧಿಯಾಗಿ ಬಿಗ್ ಬಾಸ್ (Bigg Boss Kannada 10) ಮನೆಯಿಂದ ಔಟ್ (Eliminate) ಆಗಿದ್ದಾರೆ. ಸದಾ ಖಡಕ್ ಡೈಲಾಗ್ ಮೂಲಕ ಗಮನ ಸೆಳೆದಿದ್ದ ಯುವ ನಟ ರಕ್ಷಕ್‌ಗೆ ದೊಡ್ಮನೆಯ ಆಟ ಅಂತ್ಯವಾಗಿದೆ.

    ಸ್ನೇಕ್ ಶ್ಯಾಮ್, ಗೌರೀಶ್ ಬಳಿಕ ರಕ್ಷಕ್ ಬುಲೆಟ್ ದೊಡ್ಮನೆಯ ಆಟಕ್ಕೆ ವಿದಾಯ ಹೇಳಿದ್ದಾರೆ. ಬಿಗ್ ಬಾಸ್ ಮನೆಯಲ್ಲಿ (Bigg Boss House) 2ನೇ ವಾರದ ಕ್ಯಾಪ್ಟನ್ ಆಗಿ ಗಮನ ಸೆಳೆದಿದ್ದರು. ಮನೆಯ ಉತ್ತಮ ಆಟಗಾರ ಎಂದು ಕೂಡ ಗುರುತಿಸಿಕೊಂಡಿದ್ದರು. ಇದನ್ನೂ ಓದಿ:ಸುನಿ ಸಿನಿಮಾದಲ್ಲಿ ರಾಘವೇಂದ್ರ ರಾಜ್ ಕುಮಾರ್: ಶೂಟಿಂಗ್ ಮುಗಿಸಿದ ಟೀಮ್

    ಇತ್ತೀಚೆಗೆ ಡ್ರೋನ್ ಪ್ರತಾಪ್ (Drone Prathap) ಗೂಬೆ ಎಂದಿದ್ದಕ್ಕೆ ಕಿಚ್ಚ (Sudeep) ರಕ್ಷಕ್‌ಗೆ ಖಡಕ್ ಕ್ಲಾಸ್ ಕೂಡ ತೆಗೆದುಕೊಂಡಿದ್ದರು. ಟಾಸ್ಕ್, ಪಂಚಿಂಗ್ ಡೈಲಾಗ್ ಹೇಳೋದ್ರಲ್ಲಿ ರಕ್ಷಕ್ ಸದಾ ಮುಂದಿದ್ದರು. ರಕ್ಷಕ್ ಮನರಂಜನೆ ಕೂಡ ಫ್ಯಾನ್ಸ್‌ಗೆ ಖುಷಿಕೊಟ್ಟಿತ್ತು.

    ರಕ್ಷಕ್ ಬುಲೆಟ್ ಎಲಿಮಿನೇಟ್ ಆಗಿರೋದು ಅವರ ಫ್ಯಾನ್ಸ್ ಬೇಸರಯುಂಟು ಮಾಡಿದೆ. ಆದರೆ ಮುಂಬರುವ ಸಿನಿಮಾಗಳಲ್ಲಿ ನಟನೆಯ ಮೂಲಕ ರಕ್ಷಕ್ ಮೋಡಿ ಮಾಡಲಿ ಎಂಬುದೇ ಅಭಿಮಾನಿಗಳ ಆಶಯ.

  • ರಕ್ಷಕ್‌ ಬುಲೆಟ್‌ಗೆ ಇದ್ಯಂತೆ 5 ಮದುವೆ ಆಗುವ ಯೋಗ

    ರಕ್ಷಕ್‌ ಬುಲೆಟ್‌ಗೆ ಇದ್ಯಂತೆ 5 ಮದುವೆ ಆಗುವ ಯೋಗ

    ನರಂಜನೆಗೆ ಮತ್ತೊಂದು ಹೆಸರೇ ಬಿಗ್ ಬಾಸ್ (Bigg Boss Kannada 10) ರಿಯಾಲಿಟಿ ಶೋ. ಲವ್, ಫ್ರೆಂಡ್‌ಶಿಪ್, ಬ್ರೇಕಪ್ ಹೀಗೆ ನಾನಾ ರೀತಿಯ ಗಾಸಿಪ್ ಕಥೆಗಳನ್ನ ದೊಡ್ಮನೆಯಲ್ಲಿ ನೋಡಬಹುದು. ಇದೀಗ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ತನ್ನ ಮದುವೆ (Wedding) ಬಗ್ಗೆ ಬಾಯ್ಬಿಟ್ಟಿದ್ದಾರೆ. ತನ್ನ ಜಾತಕದಲ್ಲಿರೋ 5 ಮದುವೆ ಯೋಗದ ಬಗ್ಗೆ ರಕ್ಷಕ್ ಮಾತನಾಡಿದ್ದಾರೆ.

    ದೊಡ್ಮನೆಯ ಆಟ 2ನೇ ವಾರಕ್ಕೆ ಕಾಲಿಟ್ಟಿದೆ. ತಣ್ಣಗೆ ಇದ್ದ ಮನೆ ಈಗ ರಣರಂಗವಾಗಿದೆ. ಇದೆಲ್ಲದರ ನಡುವೆ ಸ್ಪರ್ಧಿಗಳಾದ ಸಿರಿ, ಸ್ನೇಹಿತ್, ತನಿಷಾ, ರಕ್ಷಕ್ ತಮ್ಮ ವೈಯಕ್ತಿಕ ಬದುಕಿನ ವಿಚಾರಗಳ ಬಗ್ಗೆ ಮಾತುಕತೆ ನಡೆಸಿದ್ದಾರೆ. ಸ್ನೇಹಿತ್ ತನ್ನ ಬ್ರೇಕಪ್‌ಗಳ ಕತೆ ಹೇಳಿದ್ರೆ, ಹಿರಿಯ ನಟಿ ಸಿರಿ (Siri) ತಮಗೆ ಮದುವೆ ಬಗ್ಗೆ ಆಸಕ್ತಿ ಇಲ್ಲದೇ ಇರೋದರ ಬಗ್ಗೆ ಮಾತನಾಡಿದ್ದಾರೆ.

    ಆಗ ರಕ್ಷಕ್ ತಮ್ಮ ಮದುವೆ ಬಗ್ಗೆ ಬಾಯ್ಬಿಟ್ಟಿದ್ದಾರೆ. ತಂದೆ ಬುಲೆಟ್ ಪ್ರಕಾಶ್ ಅವರಿದ್ದಾಗ ಒಮ್ಮೆ ರಕ್ಷಕ್ ಜಾತಕ ತೋರಿಸಿದ್ರಂತೆ, ಆಗ ಜ್ಯೋತಿಷಿ ರಕ್ಷಕ್‌ಗೆ 5 ಮದುವೆಯಾಗುವ ಯೋಗದ ಬಗ್ಗೆ ಹೇಳಿದ್ರಂತೆ. ಈ ವಿಚಾರ ಮನೆಮಂದಿ ಮುಂದೆ ರಕ್ಷಕ್ ಹೇಳುವಾಗ, ಸ್ನೇಹಿತ್ ಕಾಲೆಳೆದಿದ್ದಾರೆ. ಅದಕ್ಕೆ ನಾ ವೈಲ್ಡ್ ಕಾರ್ಡ್ ಎಂಟ್ರಿ ಬರಲಿ ಅಂತಾ ಹೇಳ್ತಾ ಇದ್ದಿದ್ದು ಅಂತ ತಮಾಷೆ ಮಾಡಿದ್ದಾರೆ. ರಕ್ಷಕ್-ಸ್ನೇಹಿತ್ ಮಾತಿಗೆ ಮನೆಮಂದಿ ನಕ್ಕಿದ್ದಾರೆ. ಇದನ್ನೂ ಓದಿ:ಬಿಗ್ ಬಾಸ್ ಅಂದ್ರೆ ಸುಮ್ನೆನಾ?: ಕ್ಯಾಪ್ಟನ್‌ಗೇ ಪನಿಶ್‌ಮೆಂಟ್

    ಕಾಮಿಡಿ ಪಂಚ್ ಮೂಲಕ ಮನೆಮಾತಾದ ಖ್ಯಾತ ನಟ ಬುಲೆಟ್ ಪ್ರಕಾಶ್ (Bullet Prakash) ಪುತ್ರ ಈಗ ದೊಡ್ಮನೆಯಲ್ಲಿ ಕಮಾಲ್ ಮಾಡ್ತಿದ್ದಾರೆ. ‘ಗುರು ಶಿಷ್ಯರು’ ಚಿತ್ರದ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ಯುವ ನಟ ಸಾಕಷ್ಟು ಟ್ರೋಲ್‌ಗಳ ಮೂಲಕ ಹೈಲೆಟ್ ಆಗಿದ್ದರು. ಈಗ ಬಿಗ್ ಬಾಸ್ ಮನೆಯಲ್ಲಿ ಖಡಕ್ ಡೈಲಾಗ್ ಹೇಳುವ ಮೂಲಕ ಮಿಂಚ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Bigg Bossಗೆ ಇವರೇನಾ ಸ್ಪರ್ಧಿಗಳು? ಸೋಷಿಯಲ್‌ ಮೀಡಿಯಾದಲ್ಲಿ ಪಟ್ಟಿ ವೈರಲ್‌

    Bigg Bossಗೆ ಇವರೇನಾ ಸ್ಪರ್ಧಿಗಳು? ಸೋಷಿಯಲ್‌ ಮೀಡಿಯಾದಲ್ಲಿ ಪಟ್ಟಿ ವೈರಲ್‌

    ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್‌ಗೆ (Bigg Boss Kannada 10) ದಿನಗಣನೆ ಶುರುವಾಗಿದೆ. ಈಗಾಗಲೇ ತೆಲುಗಿನ ಬಿಗ್ ಬಾಸ್‌ಗೆ ಚಾಲನೆ ಸಿಕ್ಕಿರುವ ಬೆನ್ನಲ್ಲೇ ಕನ್ನಡದ ಬಿಗ್ ಬಾಸ್‌ಗೆ ಬರುವ ಸ್ಪರ್ಧಿಗಳ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಬಿಗ್ ಬಾಸ್ ಸೀಸನ್ 10ರ ಕಾರ್ಯಕ್ರಮದಲ್ಲಿ ಇವರೆಲ್ಲಾ ಸ್ಪರ್ಧಿಸುತ್ತಾರಾ?

    ಬಿಗ್ ಬಾಸ್ 10ನೇ ಸೀಸನ್ ಆಗಿರುವ ಕಾರಣ ಒಟಿಟಿ ಇಲ್ಲದೇ ಟಿವಿ ಬಿಗ್ ಬಾಸ್ ಶುರು ಮಾಡಲು ವಾಹಿನಿ ನಿರ್ಧರಿಸಿದೆ. ದೊಡ್ಮನೆ ಆಟಕ್ಕೆ ತೆರೆಮರೆಯಲ್ಲಿ ಎಲ್ಲಾ ತಯಾರಿ ಕೂಡ ನಡೆಯುತ್ತಿದೆ. ಹಾಗಾದ್ರೆ ಯಾರೆಲ್ಲಾ ಸ್ಟಾರ್‌ಗಳ ಹೆಸರು ಸದ್ದು ಮಾಡ್ತಿದೆ. ಇಲ್ಲಿದೆ ಮಾಹಿತಿ.

    artist_48037_megha-shetty-photos-images-86684

    ಟಿವಿ ಲೋಕದ ಸ್ಟಾರ್ ನಟಿ ಮೇಘಾ ಶೆಟ್ಟಿ (Megha Shetty) ಅವರು ‘ಜೊತೆ ಜೊತೆಯಲಿ’ (Jothe Jotheyali) ಧಾರಾವಾಹಿ ಮೂಲಕ ಪ್ರೇಕ್ಷಕರಿಗೆ ಪರಿಚಿತರಾದರು. ಈಗಾಗಲೇ ‘ದಿಲ್ ಪಸಂದ್’ ಮತ್ತು ‘ತ್ರಿಬಲ್ ರೈಡಿಂಗ್’ (Triple Riding) ಚಿತ್ರಗಳು ರಿಲೀಸ್ ಆಗಿವೆ. ಸೋಷಿಯಲ್ ಮೀಡಿಯಾದಲ್ಲಿ ಮಿಲಿಯನ್ ಫಾಲೋವರ್ಸ್ ಹೊಂದಿರುವ ಮೇಘಾ ಕೂಡ ದೊಡ್ಮನೆಗೆ ಬರುತ್ತಾರೆ ಎಂದು ಚರ್ಚೆಯಾಗುತ್ತಿದೆ.

    ಸುನೀಲ್ ರಾವ್ (Sunil Rao) ಎಂದಾಕ್ಷಣ ಮೊದಲು ನೆನಪಾಗೋದು ರಮ್ಯಾ(Ramya), ಅಜಯ್ ರಾವ್ ಜೊತೆಗಿನ ಎಕ್ಸ್‌ಕ್ಯೂಸ್‌ ಮಿ (Excuse Me) ಸಿನಿಮಾ. ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ರು ಚಿತ್ರರಂಗದಲ್ಲಿ ನಾಯಕನಾಗಿ ನಿಲ್ಲಲು ಸುನೀಲ್ ರಾವ್‌ಗೆ ಅದೃಷ್ಟ ಒಲಿಯಲಿಲ್ಲ. ಈಗ ವರ್ಷಕ್ಕೆ ಒಂದು ಸಿನಿಮಾದಲ್ಲಿ ನಟಿಸುತ್ತಾ, ಉದ್ಯಮಿಯಾಗಿ ಸುನೀಲ್ ಗುರುತಿಸಿಕೊಳ್ತಿದ್ದಾರೆ.

    ‘ನಾಗಿಣಿ 2’ (Nagini 2) ಸೀರಿಯಲ್‌ನ ಜೋಡಿ ನಿನಾದ್ ಹರಿತ್ಸ (Ninaad Harithsa) ಮತ್ತು ನಮ್ರತಾ ಗೌಡ (Namratha Gowda) ಇಬ್ಬರ ಹೆಸರು ಕೂಡ ನೆಟ್ಟಿಗರ ಚರ್ಚೆಗೆ ಗ್ರಾಸವಾಗಿದೆ. ನಮ್ರತಾ, ಬಾಲನಟಿಯಾಗಿ ಹಲವು ಸಿನಿಮಾಗಳಲ್ಲಿ ನಟಿಸಿದ ಕಲಾವಿದೆ. ಕಿರುತೆರೆಯಲ್ಲಿ ಸಿಕ್ಕ ಬ್ರೇಕ್, ನಾಯಕಿಯಾಗಿ ಬೆಳ್ಳಿಪರದೆಯಲ್ಲಿ ಮಿಂಚಲು ಸಿಗಲಿಲ್ಲ. ಇನ್ನೂ ನಟನೆ ಮತ್ತು ಗಾಯನದ ಮೂಲಕ ನಿನಾದ್ ಗಮನ ಸೆಳೆದಿದ್ದಾರೆ. ಇದನ್ನೂ ಓದಿ:ಮಿಲಿಯನ್ ಗಡಿ ದಾಟಿದ ಸೋನು ಬಿಕಿನಿ ವಿಡಿಯೋ

    ದಿವಂಗತ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ (Rakshak Bullet Prakash) ಅವರು ‘ಗುರು ಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಪಾದಾರ್ಪಣೆ ಮಾಡಿದರು. ಈಗ ದೊಡ್ಮನೆಗೆ ಕಾಲಿಡುತ್ತಾರೆ ಎಂದು ರಕ್ಷಕ್ ಸುದ್ದಿಯಲ್ಲಿದ್ದಾರೆ.

    ಪ್ರತಿ ಸೀಸನ್‌ನಲ್ಲೂ ಸಿಂಗರ್‌ಗಳಿಗೆ ಬಿಗ್ ಬಾಸ್ ಟೀಂ ಗಾಳ ಹಾಕುತ್ತಾರೆ. ಅದರಂತೆ ಈ ಬಾರಿ ರ‍್ಯಾಪರ್-ಸಿಂಗರ್ ಇಶಾನಿ (Eshani) ಕೂಡ ಬರುತ್ತಾರೆ ಎಂದು ಹೇಳಲಾಗುತ್ತಿದೆ.

    ಕಳೆದ ವರ್ಷ ಡ್ರೋನ್ ಪ್ರತಾಪ್ (Drone Prathap) ಅವರು ಬಿಗ್ ಬಾಸ್‌ಗೆ(Bigg Boss Kannada) ಬರುತ್ತಾರೆ ಎಂದು ಹೇಳಲಾಗಿತ್ತು. ಆದರೆ ಬರಲಿಲ್ಲ. ಈ ಬಾರಿ ಕೂಡ ದೊಡ್ಮನೆಗೆ ಬರುವ ಅವಕಾಶ ಸಿಕ್ಕಿದೆ. ಒಪ್ಪಿ ಮನೆಗೆ ಬರುತ್ತಾರಾ ಕಾಯಬೇಕಿದೆ.

    ಸೋಷಿಯಲ್ ಮೀಡಿಯಾದಲ್ಲಿ ಸೆನ್ಸೇಷನ್ ಕ್ರಿಯೇಟ್ ಮಾಡಿದ್ದ ಧನುಶ್ರೀ, ಸೋನು ಗೌಡಗೆ ಕಳೆದ ಬಾರಿ ಅವಕಾಶ ನೀಡಿದ್ದರು. ಈ ಬಾರಿ ಶಿಲ್ಪಾ ಗೌಡ(Shilpa Gowda), ಭೂಮಿಕಾ ಬಸವರಾಜ್(Bhumika Basavaraj), ಬಿಂದು ಗೌಡ ಬರಲಿದ್ದಾರೆ ಎನ್ನಲಾಗುತ್ತಿದೆ. ಶೋ ಶುರುವಾಗುವ ಸಮಯದಲ್ಲಿ ಅಧಿಕೃತ ಮಾಹಿತಿ ಸಿಗಲಿದೆ.

    ಈಗಾಗಲೇ ಬಿಗ್ ಬಾಸ್ ಕನ್ನಡ ಸೀಸನ್ 10ರ ಮೊದಲ ಪ್ರೋಮೋ ರಿಲೀಸ್ ಆಗಿದೆ. ಸಮ್‌ಥಿಂಗ್ ಸ್ಪೆಷಲ್ ಆಗಿ ಈ ಸೀಸನ್ ಇರಲಿದೆ ಎಂಬುದನ್ನ ವಾಹಿನಿ ತಿಳಿಸಿದೆ. ಅಕ್ಟೋಬರ್ ಮೊದಲ ವಾರದಲ್ಲಿ ಬಿಗ್ ಬಾಸ್ ಆಟ ಶುರುವಾಗಲಿದೆ. ಅಷ್ಟರ ಒಳಗೆ ನಟ ಕಮ್ ನಿರೂಪಕ ಸುದೀಪ್, ಈಗಾಗಲೇ ಒಪ್ಪಿರುವ ಸಿನಿಮಾಗಳ ಕೆಲಸ ಮುಗಿಸಬೇಕಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]