Tag: ರಕ್ಷಕ್‌ ಬುಲೆಟ್‌

  • ರಕ್ಷಕ್‌ ಬುಲೆಟ್‌ ಎಡವಟ್ಟಿನಿಂದ ಯುವಕನ ಕಾಲು ಮುರಿತ

    ರಕ್ಷಕ್‌ ಬುಲೆಟ್‌ ಎಡವಟ್ಟಿನಿಂದ ಯುವಕನ ಕಾಲು ಮುರಿತ

    ಬಿಗ್‌ ಬಾಸ್‌ ಖ್ಯಾತಿಯ ರಕ್ಷಕ್‌ ಬುಲೆಟ್‌ ಎಡವಟ್ಟಿನಿಂದ ಯುವಕನ ಕಾಲು ಮುರಿತ ಆಗಿರುವ ಘಟನೆ ನಡೆದಿದೆ.

    ಗುರುವಾರ ಬೆಳಗ್ಗೆ 11:30ರ ಸುಮಾರಿಗೆ ಅಪಘಾತ ಸಂಭವಿಸಿತ್ತು. ರಕ್ಷಕ್‌ ಬುಲೆಟ್‌ ಅಜಾಗರೂಕತೆಯಿಂದ ಕಾರು ಚಲಾಯಿಸಿ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾರೆ.

    ವೇಣುಗೋಪಾಲ ಕಾಲು ಮುರಿದುಕೊಂಡ ಯುವಕ. ಯುವಕನ ಬೈಕ್ ಮತ್ತು ರಕ್ಷಕ್ ಕಾರು ಡಿಕ್ಕಿಯಾಗಿದೆ. ವೇಣುಗೋಪಾಲ ಮತ್ತು ಸ್ನೇಹಿತೆ ಬೈಕ್‌ನಲ್ಲಿ ಬರುತ್ತಿದ್ದಾಗ ಅಪಘಾತವಾಗಿತ್ತು.

    ಮಾನ್ಯತಾ ಟೆಕ್‌ಪಾರ್ಕ್‌ನ ಶಿವರಾಜ್ ಕುಮಾರ್ ಮನೆ ತಿರುವಿನಲ್ಲಿ ಅಪಘಾತವಾಗಿದೆ. ಆಕ್ಸಿಡೆಂಟ್ ಆದ ನಂತರ ಟ್ಯಾಕ್ಸಿಯಲ್ಲಿ ಹೆಬ್ಬಾಳ ಬಳಿಯ ಖಾಸಗಿ ಆಸ್ಪತ್ರೆಗೆ ಯುವಕ ದಾಖಲಾಗಿದ್ದಾರೆ.

    ಅಪಘಾತದ ತೀವ್ರತೆಗೆ ಯುವಕನ ಎಡಗಾಲಿನ ಮೂಳೆ ಮುರಿತವಾಗಿದೆ. ಶಿಡ್ಲಘಟ್ಟ ಮೂಲದ ಯುವಕ ವೇಣುಗೋಪಾಲ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ. ಸದ್ಯ ಹೆಣ್ಣೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

  • ಸತ್ಯ ಒಪ್ಪಿಕೊಂಡ ರಕ್ಷಕ್: ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?

    ಸತ್ಯ ಒಪ್ಪಿಕೊಂಡ ರಕ್ಷಕ್: ಆಡಿಯೋ ವೈರಲ್ ಬಗ್ಗೆ ಹೇಳಿದ್ದೇನು?

    ಟ ಪ್ರಥಮ್ (Pratham) ಇತ್ತೀಚೆಗೆ ದೇವಸ್ಥಾನದ ಪೂಜೆಗೆಂದು ಬೆಂಗಳೂರು ಗ್ರಾಮಾಂತರ ದೊಡ್ಡಬಳ್ಳಾಪುರದ ಶಕ್ತಿ ದೇವತೆ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿರುತ್ತಾರೆ. ಈ ವೇಳೆ ಕೆಲ ಕಿಡಿಗೇಡಿಗಳು ದರ್ಶನ್ ಅಭಿಮಾನಿಗಳು(Darshan Fans) ಅಂತಾ ಅವರ ಹೆಸರು ಹೇಳಿಕೊಂಡು ಪ್ರಥಮ್‌ರನ್ನ ಸುತ್ತುವರೆದಿದ್ದಾರೆ. ಬಳಿಕ ಪಾರ್ಟಿ ನಡೆಯುತ್ತಿದ್ದ ಜಾಗಕ್ಕೆ ಕರೆದುಕೊಂಡು ಹೋಗಿ ಮಾರಾಕಾಸ್ತ್ರಗಳನ್ನು ತೋರಿಸಿ ಬೆದರಿಸಿದ್ದಾರೆ. ಜೀವ ಬೆದರಿಕೆ ಹಾಕಿದ್ದಾರೆ ಅಂತಾ ನಟ ಪ್ರಥಮ್ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಜೊತೆಗೆ ಈ ಘಟನೆ ನಡೆದಾಗ ಆ ಜಾಗದಲ್ಲಿ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ (Rakshak Bullet) ಇದ್ದರು ಎಂದಿದ್ದಾರೆ. ಇದನ್ನೂ ಓದಿ: ನಿಮ್ಮಿಂದಲೇ ಹೆಣ್ಮಕ್ಕಳಿಗೆ ದೌರ್ಜನ್ಯ – ದರ್ಶನ್‌ ಫ್ಯಾನ್ಸ್‌ ವಿರುದ್ಧ ರಮ್ಯಾ ಕೆಂಡಾಮಂಡಲ

     

    ನಟ ಪ್ರಥಮ್ ಹೇಳಿಕೆ ಬಳಿಕ ನಟ ಹಾಗೂ ಬಿಗ್‌ಬಾಸ್ ಖ್ಯಾತಿಯ ರಕ್ಷಕ್ ಬುಲೆಟ್ ತಾನು ಆ ಜಾಗದಲ್ಲಿ ಇರೋ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ನಾನಿದ್ದಿದ್ದು ನಿಜ, ಆದರೆ ಈ ಘಟನೆಗೂ ನನಗೂ ಯಾವುದೇ ರೀತಿ ಸಂಬಂಧವಿಲ್ಲ. ದಯವಿಟ್ಟು ಈ ರೀತಿ ಜಾಲತಾಣದಲ್ಲಿ ವೈರಲ್ ಆಗ್ತಿರುವ ತಹರೇವಾರಿ ಸುದ್ದಿಗೆ ನಮ್ಮ ಕುಟುಂಬದ ಸದಸ್ಯರು ಆತಂಕಕ್ಕೀಡಾಗಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ. ಇದನ್ನೂ ಓದಿ: ರಶ್ಮಿಕಾ ಮಂದಣ್ಣ ನಟನೆಯ ಮೈಸಾ ಚಿತ್ರಕ್ಕೆ ಮುಹೂರ್ತ: ಗೋಂಡ್ ಹಾಡಿಗೆ ಡಾನ್ಸ್

    ಮಹೇಶ್ ಎನ್ನುವವರು ದೇವಸ್ಥಾನಕ್ಕೆ ನನ್ನ ಕರೆದಿದ್ದರು, ನಾನು ಹೋದೆ ಪೂಜೆ ಮುಗಿಸಿಕೊಂಡೆ ಊಟ ಮಾಡಿ ಬಂದೆ ಅಷ್ಟೇ ಹೊರತು ಆ ಘಟನೆಗೂ ನನಗೂ ಯಾವ ಸಂಬಂಧವಿಲ್ಲ ಅಂತಾ ಖಡಾಖಂಡಿತವಾಗಿ ಖಂಡಿಸಿದ್ದಾರೆ. ಪ್ರಥಮ್ ಅಣ್ಣ ನಾನು ಫ್ಯಾಮಿಲಿ ಫ್ರೆಂಡ್ಸ್, ಬೇರೆಯವರಿಗೆ ತೊಂದ್ರೆ ಮಾಡ್ಬೇಕು ಅಂತಾ ಬಂದಿಲ್ಲ. ಕಲಾವಿದರ ಫ್ಯಾಮಿಲಿಯಿಂದ ಬಂದವನು ನಾನು’ ಎಂದು ಮಾತನಾಡಿದ್ದಾರೆ.

  • ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನಂದೇನಾದ್ರೂ ತಪ್ಪಿದ್ರೆ ದೇವ್ರು ನೋಡಿಕೊಳ್ಳಲಿ – ರಕ್ಷಕ್ ಬುಲೆಟ್

    ಬೆಂಗಳೂರು: ಕರ್ಮ ಯಾರ ಮನೆ ಬಾಗಿಲನ್ನು ಬಿಡಲ್ಲ, ನನ್ನದೇನಾದರೂ ತಪ್ಪಿದ್ರೆ ದೇವರು ನೋಡಿಕೊಳ್ಳಲಿ ಎಂದು ನಟ ರಕ್ಷಕ್ ಬುಲೆಟ್ (Rakshak Bullet) ಕಿಡಿಕಾರಿದ್ದಾರೆ.

    ದೊಡ್ಡಬಳ್ಳಾಪುರ (Doddaballapur) ದೇವಸ್ಥಾನಕ್ಕೆ ಹೋಗಿದ್ದ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿತ್ತು. ದುಷ್ಕರ್ಮಿಗಳ ಗುಂಪೊಂದು ಡ್ರ‍್ಯಾಗರ್ ತೋರಿಸಿ ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿತ್ತು. ಘಟನೆ ವೇಳೆ ರಕ್ಷಕ್ ಬುಲೆಟ್ ಕೂಡ ಇದ್ದರು. ಈ ಕುರಿತು `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ನನ್ನನ್ನು ಒಬ್ಬರು ಕರೆದಿದ್ದರು. ಅದಕ್ಕೆ ಅಲ್ಲಿಗೆ ಹೋಗಿದ್ದೆ. ಹೋದೆ, ನನ್ನ ಕೆಲಸ ಮುಗಿಸಿ ಬಂದೆ. ಕೆಲವು ಕಡೆ ನಾನೇ ಬೆದರಿಕೆ ಹಾಕಿಸಿದ್ದೇನೆ, ಸುಪಾರಿ ಕೊಟ್ಟಿದೀನಿ ಅಂತ ಹೇಳಿದ್ದಾರೆ. ಆದರೆ ನಾನು ಇಲ್ಲಿ ರೌಡಿಸಂ, ಬೇರೆ ವ್ಯವಹಾರ ಮಾಡೋಕೆ ಬಂದಿಲ್ಲ. ನಿಯತ್ತಾಗಿ ನಾನು ನನ್ನ ಕೆಲಸ ಅಂತ ಇದೀನಿ. ಘಟನೆ ನಡೆದ ಜಾಗದಲ್ಲಿ ನಾನಿದ್ದೆ. ಆದರೆ ನನಗೂ ಇದ್ಯಾವುದಕ್ಕೂ ನನಗೆ ಸಂಬಂಧ ಇಲ್ಲ. ನಾನು ಮಧ್ಯದಲ್ಲಿ ಹೋದ್ರೆ ನನ್ನ ಮೇಲೆ ಬರುತ್ತೆ ಅಂತ ಹೋಗಿಲ್ಲ ಎಂದರು.ಇದನ್ನೂ ಓದಿ: ಏಯ್‌.. ಗೂಂಡಾಗಿರಿ ಬಿಟ್ಟುಬಿಡಿ, ಬಾಸಿಸಂ ನಡೆಯಲ್ಲ – ದರ್ಶನ್‌ ಫ್ಯಾನ್ಸ್‌ಗೆ ಒಳ್ಳೆ ಹುಡ್ಗ ಪ್ರಥಮ್‌ ವಾರ್ನಿಂಗ್‌

    ಈ ಘಟನೆ ವೇಳೆ ನಾನು ಆ ಜಾಗದಲ್ಲಿದ್ದೆ ಎನ್ನುವ ಕಾರಣದಿಂದಲೇ ಇಷ್ಟೆಲ್ಲಾ ಆಗ್ತಿದೆ. ಪ್ರಥಮ್ ನನಗೆ ಅಣ್ಣನ ತರ. ಬೇರೆಯವರಿಗೆ ತೊಂದರೆ ಕೊಡೋಕೆ ಬಂದಿಲ್ಲ. ಕಲಾವಿದರಾಗಿ ಕೆಲಸ ಮಾಡೋಕೆ ಬಂದಿದೀನಿ. ಅದನ್ನೇ ಮಾಡ್ತೀನಿ. ಇದರಲ್ಲಿ ನನ್ನ ಪಾತ್ರ ಇಲ್ಲ. ಹೀಗಾಗಿ ಯಾರೇ ಏನೇ ಕೇಳಿದರೂ ನಾನು ನಡೆದಿದ್ದನ್ನು ಹೇಳ್ತೀನಿ. ಏನೇ ಆದರೂ ನಾನು ಎದುರಿಸುತ್ತೇನೆ ಎಂದು ಖಡಕ್ಕಾಗಿ ತಿಳಿಸಿದರು.

    ಈ ಘಟನೆ ದೇವಸ್ಥಾನದ ಮುಂದೆ ನಡೆದಿದೆ. ಅಲ್ಲಿದ್ದವರು ದೇವಸ್ಥಾನಕ್ಕೆ ಬರಲಿ, ನಾನು ಹೋಗ್ತೀನಿ. ಎಲ್ಲರೂ ಒಂದು ಕರ್ಪೂರ ಹಚ್ಚೋಣ. ನಾನೇನಾದ್ರೂ ತಪ್ಪು ಮಾಡಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಆ ತಾಯಿ ನನ್ನ ನೋಡಿಕೊಳ್ಳಲಿ. ಕರ್ಮ ಅನ್ನೋದು ಯಾರ ಮನೆ ಬಾಗಿಲನ್ನೂ ಬಿಡಲ್ಲ. ಪ್ರಥಮ್ ಅಣ್ಣನಿಗೆ ನಾನೇನಾದ್ರೂ ತೊಂದರೆ ಕೊಟ್ಟಿದ್ರೆ ಆ ದೇವ್ರು ನಂಗೆ ಶಿಕ್ಷೆ ಕೊಡಲಿ. ಅದನ್ನು ನಾನು ಸ್ವೀಕರಿಸುತ್ತೇನೆ ಎಂದು ಹೇಳಿದರು.

    ಕೆಲವರಿಗೆ ನಾನೇನು ಮಾಡಿದ್ರೂ ಸಮಸ್ಯೆ, ಇಲ್ಲಿ ನನ್ನ ಪಾತ್ರವೇ ಇಲ್ಲ. ನನ್ನ ಬಗ್ಗೆ ಸುಮ್ಮನೇ ಅಪಪ್ರಚಾರ ಮಾಡ್ತಿದ್ದಾರೆ. ನನ್ನದಲ್ಲದ ತಪ್ಪಿಗೆ ನನ್ನ ಬಗ್ಗೆ ಮಾತಾಡ್ತಿದ್ದಾರೆ. ರಕ್ಷಕ್ ಜೊತೆ ಹುಡುಗರಿದ್ದರು ಅಂತ ಹೇಳ್ತಿದ್ದಾರೆ. ಇದ್ರಿಂದ ನಂಗೆ ತುಂಬಾ ನೋವಾಗಿದೆ. ನನ್ನ ಮನೆಯವರಿಗೂ ತುಂಬಾ ನೋವಾಗಿದೆ. ಘಟನೆಯ ಬಳಿಕ ನಾನು ಹಾಗೂ ಪ್ರಥಮ್ ಒಟ್ಟಿಗೆ ಚೆನ್ನಾಗಿ ಮಾತನಾಡಿದ್ದೇವೆ ಎಂದು ತಿಳಿಸಿದರು.

    ಏನಿದು ಪ್ರಕರಣ? ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ನಟ ಪ್ರಥಮ್‌ಗೆ ಕಿಡಿಗೇಡಿಗಳಿಂದ ಜೀವ ಬೆದರಿಕೆ ಬಂದಿದೆ ಅನ್ನೋ ಆಡಿಯೋವೊಂದು ಸ್ಫೋಟಗೊಂಡಿತ್ತು. ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಪ್ರಥಮ್‌ಗೆ ಜೀವ ಬೆದರಿಕೆ ಒಡ್ಡಿರುವುದಾಗಿ ತಿಳಿದುಬಂದಿತ್ತು. ಈ ಕುರಿತು ವ್ಯಕ್ತಿಯೊಬ್ಬರೊಂದಿಗೆ ಪ್ರಥಮ್ ಮಾತನಾಡಿರುವ ಆಡಿಯೋ ಕೂಡ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.

    ದೊಡ್ಡಬಳ್ಳಾಪುರ ದೇವಸ್ಥಾನಕ್ಕೆ ಹೋಗಿದ್ದ ವೇಳೆ ದುಷ್ಕರ್ಮಿಗಳು ಡ್ಯಾಗ್ರರ್ ತೋರಿಸಿ ನಟನಿಗೆ ಜೀವಬೆದರಿಕೆ ಹಾಕಿದ್ದರು. ಪೂಜೆ ಮುಗಿಸಿ ಹೊರಟ ವೇಳೆ ಕಾರಿಗೆ ಅಡ್ಡಬಂದ ಕೆಲವರು ಪ್ರಥಮ್‌ನನ್ನ ಬಲವಂತವಾಗಿ ಕರೆದೊಯ್ದು, ನಮ್ ಬಾಸ್ ಬಗ್ಗೆ ಮಾತಾಡ್ತಿಯ ಅಂತ ಹಲ್ಲೆಗೆ ಯತ್ನಿಸಿ ಅವಾಚ್ಯವಾಗಿ ನಿಂದಿಸಿ ಬೆದರಿಸಿದ್ದರು. ಆ ಸ್ಥಳದಲ್ಲಿ ಬುಲೆಟ್ ರಕ್ಷಕ್ ಕೂಡ ಇರುವುದಾಗಿ ಹೇಳಿದ್ದರು. ಕೊನೆಗೆ ಅಲ್ಲಿಂದ ತಪ್ಪಿಸಿಕೊಂಡು ಬಂದ ಪ್ರಥಮ್ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿಕೆ ಬಾಬಾ ಅವರನ್ನ ಭೇಟಿಯಾಗಿ ಘಟನೆ ವಿವರಿಸಿದ್ದರು. ಬಳಿಕ ಎಸ್ಪಿ ಸಂಬಂಧಪಟ್ಟ ಠಾಣೆಗೆ ದೂರು ನೀಡುವಂತೆ ಸಲಹೆ ನೀಡಿದ್ದರು.

    ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದ ಎಸ್ಪಿ ಸಿಕೆ ಬಾಬಾ, ನಟ ಪ್ರಥಮ್ ಮೇಲೆ ಹಲ್ಲೆಗೆ ಯತ್ನಿಸಿ, ಜೀವ ಬೆದರಿಕೆ ಆರೋಪ ಕೇಳಿಬಂದಿದೆ. ದೇವಸ್ಥಾನಕ್ಕೆ ಹೋಗಿದ್ದಾಗ ಘಟನೆ ನಡೆದಿದೆ. ಅವರನ್ನ ಈಗಾಗಲೇ ಕರೆದು ಮಾತನಾಡಿದ್ದೀನಿ. ಅವರಿಗೆ ದೂರು ಕೊಡೋಕೆ ಹೇಳಿದ್ದೀನಿ. ಇಲ್ಲಿವರೆಗೂ ಯಾವುದೇ ದೂರು ನೀಡಿಲ್ಲ. ದೂರು ಕೊಟ್ಟ ನಂತರ ತನಿಖೆ ಮಾಡಿ ಕ್ರಮ ಕೈಗೊಳ್ತಿವಿ ಎಂದು ಹೇಳಿದ್ದರು.ಇದನ್ನೂ ಓದಿ: ಗೂಂಡಾಗಳನ್ನ ಸಾಕ್ಬೇಡಿ, ಮನೆಯಲ್ಲಿ ನಾಯಿ ಸಾಕಿ, ಒಳ್ಳೆಯವರ ಸಹವಾಸ ಮಾಡಿ – ದರ್ಶನ್‌ಗೆ ಪ್ರಥಮ್‌ ಸ್ಟ್ರೈಟ್‌ ಹಿಟ್‌

  • ತಾಯಿ ಚಾಮುಂಡೇಶ್ವರಿ ದೇವಿ ಭಕ್ತರಿಗೆ ಕ್ಷಮೆ ಕೋರಿದ ‌’ಬಿಗ್‌ ಬಾಸ್’ ರಕ್ಷಕ್ ಬುಲೆಟ್

    ತಾಯಿ ಚಾಮುಂಡೇಶ್ವರಿ ದೇವಿ ಭಕ್ತರಿಗೆ ಕ್ಷಮೆ ಕೋರಿದ ‌’ಬಿಗ್‌ ಬಾಸ್’ ರಕ್ಷಕ್ ಬುಲೆಟ್

    ‘ಬಿಗ್ ಬಾಸ್’ (BBK 10) ರಕ್ಷಕ್ ಬುಲೆಟ್ (Rakshak Bullet) ಅವರು ಇತ್ತೀಚಿನ ಶೋವೊಂದರಲ್ಲಿ ಡೈಲಾಗ್ ಮೂಲಕ ನಾಡದೇವಿ ಚಾಮುಂಡೇಶ್ವರಿಗೆ ಅವಮಾನ ಮಾಡಿದ್ದಾರೆ ಎಂದು ದೇವಿ ಆರಾಧಕರು ಮತ್ತು ಹಿಂದೂ ಸಂಘಟನೆಗಳು ತಿರುಗಿಬಿದ್ದಿದ್ದರು. ಈ ಬೆನ್ನಲ್ಲೇ ರಕ್ಷಕ್ ಕ್ಷಮೆಯಾಚಿಸಿದ್ದಾರೆ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಆಚಾತುರ್ಯ ನಡೆಯೋದಿಲ್ಲ ಎಂದು ಮನವಿ ಮಾಡಿದ್ದಾರೆ. ಇದನ್ನೂ ಓದಿ:ರಾಮ್ ಚರಣ್ ಬರ್ತ್‌ಡೇ ಸೆಲೆಬ್ರೇಟ್ ಮಾಡಿದ ಶಿವಣ್ಣ

    ಸೋಶಿಯಲ್ ಮೀಡಿಯಾದಲ್ಲಿ ನಟ ಪೋಸ್ಟ್ ಮಾಡಿ ನಾನು ನಿಮ್ಮ ರಕ್ಷಕ್ ಬುಲೆಟ್, ಇತ್ತೀಚೆಗೆ ಒಂದು ರಿಯಾಲಿಟಿ ಶೋನಲ್ಲಿ ನಾನು ಒಂದು ಹೆಸರಾಂತ ಚಿತ್ರದ ಡೈಲಾಗ್ ಅನ್ನು ಒಂದು ಸ್ಕಿಟ್‌ನಲ್ಲಿ ಹೇಳಿದ್ದೆ, ಅದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ನನ್ನ ತಂದೆಯವರಾದ ದಿವಂಗತ ಬುಲೆಟ್ ಪ್ರಕಾಶ್ (Bullet Prakash) ಅವರು ನನ್ನ ತಾಯಿ ಹಾಗೂ ಕುಟುಂಬಸ್ಥರು ಪರಮ ಭಕ್ತರು. ನಮ್ಮ ತಂದೆಯವರು ಇದ್ದಾಗಿನಿಂದಲೂ ನಾವು ತಾಯಿ ಚಾಮುಂಡೇಶ್ವರಿಗೆ ಪೂಜೆ ಮಾಡುತ್ತಾ ನಡೆದುಕೊಂಡು ಬಂದಿದ್ದೇವೆ.

    ನಾವು ಉದ್ದೇಶಪೂರ್ವಕವಾಗಿ ತಾಯಿ ಚಾಮುಂಡೇಶ್ವರಿ ಬಗ್ಗೆ ಹೇಳುವಷ್ಟು ದೊಡ್ಡವನಲ್ಲ. ಆ ತಾಯಿಯ ಆಶೀರ್ವಾದದಿಂದ ನಾನು ಬೆಳೆಯುತ್ತಿದ್ದೇನೆ. ನಾನು ಯಾವುದೇ ಕಾರ್ಯ ಪ್ರಾರಂಭಿಸಬೇಕಾದರೆ ಮೊದಲು ತಾಯಿ ಚಾಮುಂಡೇಶ್ವರಿಗೆ (Chamundeshwari) ಪೂಜೆ ಸಲ್ಲಿಸಿ ನಂತರ ಕೆಲಸವನ್ನು ಆರಂಭಿಸುತ್ತೇನೆ. ನಾನು ಭಕ್ತಾಧಿಗಳ ಭಾವನೆಗಳಿಗಾಗಲಿ ಮನಸ್ಸಿಗಾಗಲಿ ನೋವುಂಟು ಮಾಡುವ ಕೆಲಸ ಮಾಡುವುದಿಲ್ಲ. ಯಾರಿಗಾದರೂ ಬೇಸರವಾಗಿದ್ದಲ್ಲಿ ನಾನು ಕ್ಷಮೆಯಾಚಿಸುತ್ತೇನೆ. ಮುಂದೆ ಇಂತಹ ಆಚಾತುರ್ಯ ನಡೆಯೋದಿಲ್ಲ ಎಂದು ರಕ್ಷಕ್ ಕ್ಷಮೆ ಕೋರಿದ್ದಾರೆ.

     

    View this post on Instagram

     

    A post shared by rakshak sena (@rakshak_bullet)

    ಅಂದಹಾಗೆ, ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ರಿಯಾಲಿಟಿ ಶೋವೊಂದರ ಸ್ಕಿಟ್‌ವೊಂದರಲ್ಲಿ ತಾಯಿ ಚಾಮುಂಡೇಶ್ವರಿ ವಿಚಾರ ಸಂಬಂಧ ಹೇಳಿದ್ದ ಡೈಲಾಗ್ ಒಂದು ವಿವಾದಕ್ಕೆ ಕಾರಣವಾಗಿತ್ತು. ಇದು ಸೋಷಿಯಲ್ ಮಿಡಿಯಾದಲ್ಲೂ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ಹಿಂದೂ ಪರ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದರು. ಶೋನಲ್ಲಿ ಸ್ಟೇಜ್ ಮೇಲೆ ರಕ್ಷಕ್ ಬುಲೆಟ್ ಅವರು ಸಹನಟಿಗೆ ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕೊಂಡು ಸ್ವಿಜರ್‌ಲ್ಯಾಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾರೆ ಅನ್ನಿಸ್ತಿದೆ ಎಂದು ಡೈಲಾಗ್ ಹೊಡೆದಿದ್ದರು. ಸಹನಟಿಗೆ ಡೈಲಾಗ್ ಮೂಲಕ ಹೊಗಳುವ ಭರದಲ್ಲಿ ರಕ್ಷಕ್ ಯಡವಟ್ಟು ಮಾಡಿಕೊಂಡಿದ್ದರು. ಇದು ಹಿಂದೂ ಹೋರಾಟಗಾರರ ಕೋಪಕ್ಕೆ ಕಾರಣವಾಗಿತ್ತು.

  • ತಾಯಿ ಚಾಮುಂಡೇಶ್ವರಿಗೆ ಡೈಲಾಗ್‌ನಲ್ಲಿ ಅಪಮಾನ ಆರೋಪ- ರಕ್ಷಕ್ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆ

    ತಾಯಿ ಚಾಮುಂಡೇಶ್ವರಿಗೆ ಡೈಲಾಗ್‌ನಲ್ಲಿ ಅಪಮಾನ ಆರೋಪ- ರಕ್ಷಕ್ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆ

    ಬಿಗ್ ಬಾಸ್ ಸ್ಪರ್ಧಿಗಳಾದ ರಜತ್ (Rajath), ವಿನಯ್ (Vinay Gowda) ಪ್ರಕರಣದ ಬೆನ್ನಲ್ಲೇ ಮತ್ತೊಬ್ಬ ಸ್ಪರ್ಧಿ ವಿವಾದಕ್ಕೆ ಸಿಲುಕಿದ್ದಾರೆ. ಧಾರ್ಮಿಕ ಭಾವನೆಗೆ ರಕ್ಷಕ್ ಬುಲೆಟ್ (Rakshak Bullet) ಧಕ್ಕೆಯುಂಟು ಮಾಡಿದ್ದಾರೆ ಎಂದು ಹಿಂದೂ ಸಂಘಟನೆಗಳು ದೂರು ದಾಖಲಿಸಲು ಮುಂದಾಗಿವೆ. ರಿಯಾಲಿಟಿ ಶೋನಲ್ಲಿ ರಕ್ಷಕ್ ಅವರು ತಮ್ಮ ಡೈಲಾಗ್‌ ಮೂಲಕ ತಾಯಿ ಚಾಮುಂಡೇಶ್ವರಿಗೆ ಅಪಮಾನ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಇದನ್ನೂ ಓದಿ:ರೀಲ್ಸ್ ಮಾಡಿದ ಜಾಗದಲ್ಲಿ ವಿನಯ್‌, ರಜತ್‌ರನ್ನು ಸ್ಥಳ ಮಹಜರಿಗೆ ಕರೆತಂದ ಪೊಲೀಸರು

    ಕನ್ನಡದ ಹಿರಿಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬುಲೆಟ್ ರಿಯಾಲಿಟಿ ಶೋವೊಂದರ ಸ್ಕಿಟ್‌ವೊಂದರಲ್ಲಿ ತಾಯಿ ಚಾಮುಂಡೇಶ್ವರಿ ವಿಚಾರ ಸಂಬಂಧ ಹೇಳಿದ್ದ ಡೈಲಾಗ್ ಒಂದು ವಿವಾದಕ್ಕೆ ಕಾರಣವಾಗಿದೆ. ಇದು ಸೋಷಿಯಲ್ ಮಿಡಿಯಾದಲ್ಲೂ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ಇದು ಹಿಂದೂ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಶೋನಲ್ಲಿ ಸ್ಟೇಜ್ ಮೇಲೆ ರಕ್ಷಕ್ ಬುಲೆಟ್ ಅವರು ಸಹನಟಿಗೆ ನಿಮ್ಮನ್ನು ನೋಡ್ತಿದ್ರೆ ತಾಯಿ ಚಾಮುಂಡೇಶ್ವರಿ ಬೆಟ್ಟದಿಂದ ಇಳಿದು ಬಂದು ಸೀರೆ ಒಡವೆ ಬಿಚ್ಚಿಟ್ಟು, ಪ್ಯಾಂಟು ಶರ್ಟು ಹಾಕೊಂಡು ಸ್ವಿಜರ್‌ಲ್ಯಾಂಡ್‌ನಲ್ಲಿ ಟ್ರಿಪ್ ಹೊಡಿತಿದ್ದಾರೆ ಅನ್ನಿಸ್ತಿದೆ ಎಂದು ಡೈಲಾಗ್ ಹೊಡೆದಿದ್ದಾರೆ. ಸಹನಟಿಗೆ ಡೈಲಾಗ್‌ ಮೂಲಕ ಹೊಗಳುವ ಭರದಲ್ಲಿ ರಕ್ಷಕ್‌ ಯಡವಟ್ಟು ಮಾಡಿಕೊಂಡಿದ್ದಾರೆ. ಇದು ಹಿಂದೂ ಹೋರಾಟಗಾರರ ಕೋಪಕ್ಕೆ ಕಾರಣವಾಗಿದೆ.

    ಸದ್ಯ ಇದೇ ಕಾರಣಕ್ಕೆ ಕೆರಳಿರೋ ಹಿಂದೂ ಮುಖಂಡರು ರಕ್ಷಕ್ ಬುಲೆಟ್ ವಿರುದ್ಧ ಇಂದು ಬೆಂಗಳೂರು ಪೊಲೀಸ್ ಆಯುಕ್ತರಿಗೆ ದೂರು ನೀಡಲು ಮುಂದಾಗಿದ್ದಾರೆ. ಜೊತೆಗೆ ಕೂಡಲೇ ಬಹಿರಂಗ ಕ್ಷಮೆಯಾಚಿಸುವಂತೆ ಆಗ್ರಹಿಸಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ತೆರಳಿ ತಪ್ಪು ಕಾಣಿಕೆ ಸಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ.

    ಇನ್ನೂ ರಕ್ಷಕ್ ವಿರುದ್ಧ ಮಾತ್ರ ಅಲ್ಲದೇ ಶೋನ ನಿರ್ದೇಕರು ಮತ್ತು ಜಡ್ಜ್ ವಿರುದ್ಧ ಹಿಂದೂ ಮುಖಂಡರು ಕಿಡಿಕಾರಿದ್ದಾರೆ. ಶೋ ಪ್ರದರ್ಶನಕ್ಕೂ ಮುನ್ನ ಆಗಿರುವ ತಪ್ಪಿನ ಬಗ್ಗೆ ಗಮನ ಇಲ್ಲದೆ ತೋರಿಸಿರೋದು, ಕೋಟ್ಯಾಂತರ ಹಿಂದೂಗಳು ಭಾವನೆಗೆ ಧಕ್ಕೆಯಾಗಿದೆ. ಸರ್ಕಾರವೇ ನಾಡ ದೇವಿಗೆ ನಮಿಸಿ ಗೌರವ ಸಲ್ಲಿಸುವಾಗ, ಎಲ್ಲಾರ ಭಾವನೆಗೆ ಧಕ್ಕೆಯಾಗುವ ವಿಚಾರದ ಬಗ್ಗೆ ಗಮನ ಹರಿಸದೇ ಇರೋದು ಸಂಬಂಧಿಸಿದ ಎಲ್ಲರ ತಪ್ಪು. ಹಾಗಾಗಿ ದೂರಿನಲ್ಲಿ ಇವರ ಹೆಸರುಗಳನ್ನು ಉಲ್ಲೇಖಿಸಿ ದೂರು ನೀಡಲು ಮುಂದಾಗಿದ್ದಾರೆ. ಒಟ್ಟಾರೆ ಗೊತ್ತೋ ಗೊತ್ತಿಲ್ಲದೆಯೋ ಮಾಡೋ ಯಡವಟ್ಟು ವಿವಾದವಾಗಿ ಸುತ್ತಿಕೊಳ್ಳುತ್ತಿದೆ. ಈ ಬಗ್ಗೆ ರಕ್ಷಕ್ ಕ್ಷಮೆ ಕೇಳಿ ಇತ್ಯರ್ಥ ಮಾಡ್ತಾರೋ ಅಥವಾ ಮತ್ತಷ್ಟು ವಿವಾದಕ್ಕೆ ಕಾರಣವಾಗ್ತಾರೋ ಎಂದು ಕಾದುನೋಡಬೇಕಿದೆ.

  • ‘R B 01’ ಚಿತ್ರದಲ್ಲಿ ಪಾತ್ರ ಹೇಗಿರಲಿದೆ? ಮಾಹಿತಿ ಬಿಚ್ಚಿಟ್ಟ ರಕ್ಷಕ್

    ‘R B 01’ ಚಿತ್ರದಲ್ಲಿ ಪಾತ್ರ ಹೇಗಿರಲಿದೆ? ಮಾಹಿತಿ ಬಿಚ್ಚಿಟ್ಟ ರಕ್ಷಕ್

    ‘ಬಿಗ್ ಬಾಸ್ ಕನ್ನಡ 10′ (Bigg Boss Kannada 10) ಮೂಲಕ ಮನೆ ಮಾತಾಗಿರುವ ಬುಲೆಟ್ ಪ್ರಕಾಶ್ (Bullet Prakash) ಸದ್ಯ ತಮ್ಮ ಚೊಚ್ಚಲ ಸಿನಿಮಾದ ಕೆಲಸದಲ್ಲಿ ಬ್ಯುಸಿಯಾಗಿದ್ದಾರೆ. ತಂದೆಯ ಆಸೆಯಂತೆಯೇ ಉತ್ತಮ ನಟನಾಗಿ ಅಖಾಡಕ್ಕೆ ಇಳಿಯಲು ರೆಡಿಯಾಗಿದ್ದಾರೆ. ಸದ್ಯ ಚಿತ್ರದ ಪೋಸ್ಟರ್‌ನಿಂದ ಹವಾ ಕ್ರಿಯೇಟ್ ಮಾಡಿರುವ ರಕ್ಷಕ್, ಚಿತ್ರದಲ್ಲಿನ ಪಾತ್ರ ಮತ್ತು ಸಿನಿಮಾ ಬಗ್ಗೆ ಪಬ್ಲಿಕ್ ಟಿವಿ ಡಿಜಿಟಲ್‌ಗೆ ಮಾಹಿತಿ ನೀಡಿದ್ದಾರೆ.

    ಬುಲೆಟ್ ಪ್ರಕಾಶ್ ಅವರು ಇದ್ದಾಗಲೇ ಬಣ್ಣದ ಲೋಕಕ್ಕೆ ಎಂಟ್ರಿ ಕೊಡುವುದಕ್ಕೆ ರಕ್ಷಕ್ ಉತ್ಸುಕರಾಗಿದ್ದರು. ಅದಕ್ಕಾಗಿ ಪೂರ್ವ ತಯಾರಿ ಕೂಡ ಮಾಡಿಕೊಳ್ಳುತ್ತಿದ್ದರು. ಈಗ ಸೂಕ್ತ ಸಮಯ ಬಂದಿದೆ. ಉತ್ತಮ ಕಥೆ ಸಿಕ್ಕ ಬೆನ್ನಲ್ಲೇ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ರೆಡಿಯಾಗಿದ್ದಾರೆ.

    ‘R B 01’ ಸಿನಿಮಾದಲ್ಲಿ ತನ್ನ ಪಾತ್ರ ರಾ ಮತ್ತು ಮಾಸ್ ಆಗಿರಲಿದೆ. ಸದ್ಯ ಸಿನಿಮಾದ ಪ್ರೀ- ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಪಾತ್ರಕ್ಕಾಗಿ ಪ್ರತಿದಿನ ವರ್ಕೌಟ್ ಕೂಡ ಮಾಡುತ್ತಿದ್ದೇನೆ. ಅದಕ್ಕಾಗಿ ಸಕಲ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಸಂಪೂರ್ಣವಾಗಿ ಸಿದ್ಧವಾದ ಮೇಲೆಯೇ ಕ್ಯಾಮೆರಾ ಮುಂದೆ ಬರುವುದಾಗಿ ರಕ್ಷಕ್ ತಿಳಿಸಿದ್ದಾರೆ.

     

    View this post on Instagram

     

    A post shared by rakshak sena (@rakshak_bullet)

    ಸದ್ಯದಲ್ಲೇ ಸಿನಿಮಾ ಶೂಟಿಂಗ್ ಕೂಡ ಶುರುವಾಗಿದೆ. ನನ್ನ ಪಾತ್ರದ ಲುಕ್ ಹೇಗಿರಲಿದೆ ಎಂಬುದಕ್ಕೆ ಪೋಸ್ಟರ್ ಕೂಡ ರಿಲೀಸ್ ಮಾಡುತ್ತೇವೆ. ನನ್ನ ಪಾತ್ರದ ಕಾಸ್ಟ್ಯೂಮ್ ಕೂಡ ಸಿದ್ಧವಾಗುತ್ತಿದೆ. ನನ್ನ ಇಷ್ಟಪಡುವ ಅಭಿಮಾನಿಗಳಿಗೆ ಖಂಡಿತಾ ನಿರಾಸೆ ಮಾಡುವುದಿಲ್ಲ ಎಂದು ರಕ್ಷಕ್ ಬುಲೆಟ್ ತಿಳಿಸಿದ್ದಾರೆ.

     

    View this post on Instagram

     

    A post shared by rakshak sena (@rakshak_bullet)

    ಎಲ್ಲಾ ನನ್ನ ಆತ್ಮೀಯರೇ, ಇಂದು (ಏ.2) ನನ್ನ ಪೂಜ್ಯ ತಂದೆ ದಿವಂಗತ ‘ಬುಲೆಟ್’ ಪ್ರಕಾಶ್ ಅವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು. ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕೂ ಹರಸಿ, ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ರಕ್ಷಕ್ ಬರೆದುಕೊಂಡಿದ್ದಾರೆ.

    ತಮ್ಮ ಮೊದಲ ಸಿನಿಮಾ ರಕ್ಷಕ್ ಮಾಸ್ ಆಗಿ ಎಂಟ್ರಿ ಕೊಡಲಿದ್ದಾರೆ. ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಡೈಲಾಗ್‌ಗಳು ಪಂಚಿAಗ್ ಆಗಿವೆ. ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದುನ್ನೆ. ‘ಬುಲೆಟ್’… ಇನ್ನುಂದೆ ನಂದೆ ರೌಂಡು, ನನ್ನದೇ ಸೌಂಡು ಎಂಬ ಡೈಲಾಗ್ ಹೈಲೆಟ್ ಆಗಿದೆ.

    ‘R B 01’ ಚಿತ್ರಕ್ಕೆ ಶ್ರೀಹರಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಕ್ರಿಶ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸದ್ಯ ರಕ್ಷಕ್ ಲುಕ್, ಪಾತ್ರ ಸಿನಿಮಾದಲ್ಲಿ ಹೇಗಿರಲಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ತಂದೆ ಬುಲೆಟ್ ಪ್ರಕಾಶ್‌ರಂತೆಯೇ ರಕ್ಷಕ್ ಕೂಡ ಚಿತ್ರರಂಗದಲ್ಲಿ ಬೆಳೆಯಲಿ ಎಂಬುದೇ ಅಭಿಮಾನಿಗಳ ಆಶಯ.

  • ಇನ್ಮುಂದೆ ನನ್ನದೇ ರೌಂಡು, ನನ್ನದೇ ಸೌಂಡು- ಬುಲೆಟ್ ಪುತ್ರನ ಹೊಸ ಅಧ್ಯಾಯ

    ಇನ್ಮುಂದೆ ನನ್ನದೇ ರೌಂಡು, ನನ್ನದೇ ಸೌಂಡು- ಬುಲೆಟ್ ಪುತ್ರನ ಹೊಸ ಅಧ್ಯಾಯ

    ಗುರುಶಿಷ್ಯರು, ಬಿಗ್ ಬಾಸ್ ಸೀಸನ್ 10ರ (Bigg Boss Kannada 10) ಮೂಲಕ ಮೋಡಿ ಮಾಡಿದ ರಕ್ಷಕ್ ಬುಲೆಟ್ (Rakshak Bullet) ಇದೀಗ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಅಧ್ಯಾಯ ಶುರು ಮಾಡಲು ಸಜ್ಜಾಗಿದ್ದಾರೆ. ಬುಲೆಟ್ ಪ್ರಕಾಶ್ ಪುತ್ರ ಹೀರೋ ಆಗಿ ಬೆಳ್ಳಿಪರದೆಯಲ್ಲಿ ಮಿಂಚಲು ರೆಡಿಯಾಗಿದ್ದಾರೆ. ಬುಲೆಟ್ ಪ್ರಕಾಶ್ (Bullet Prakash) 47ನೇ ವರ್ಷದ ಹುಟ್ಟುಹಬ್ಬದ ದಿನವೇ ರಕ್ಷಕ್ ತಮ್ಮ ಫ್ಯಾನ್ಸ್‌ಗೆ ಸಿಹಿಸುದ್ದಿ ಕೊಟ್ಟಿದ್ದಾರೆ.

    ಎಲ್ಲಾ ನನ್ನ ಆತ್ಮೀಯರೇ, ಇಂದು (ಏ.2) ನನ್ನ ಪೂಜ್ಯ ತಂದೆ ದಿವಂಗತ ‘ಬುಲೆಟ್’ ಪ್ರಕಾಶ್ (Bullet Prakash) ಅವರ 47ನೇ ಜನ್ಮದಿನ. ಇಂದಿನ ವಿಶೇಷವೇನೆಂದರೆ, ನಾನು ನಾಯಕ ನಟನಾಗಿ ನಟಿಸುತ್ತಿರುವ ನನ್ನ ಚೊಚ್ಚಲ ಚಿತ್ರದ ಪೋಸ್ಟರ್ ಬಿಡುಗಡೆ ಮಾಡುತ್ತಿರುವುದು. ನಿಜಕ್ಕೂ ನನಗೆ ಸಂತಸ ತಂದಿದೆ. ನನ್ನ ತಂದೆಯ ಆಶೀರ್ವಾದದೊಂದಿಗೆ ನಿಮ್ಮೆಲ್ಲರ ಆಶೀರ್ವಾದ ಕೂಡ ಸದಾ ನನ್ನ ಮೇಲಿರಲಿ ಎಂದು ಬಯಸುತ್ತೇನೆ. ನನಗೂ ಹಾಗೂ ನನ್ನ ಇಡೀ ಚಿತ್ರತಂಡಕ್ಕೂ ಹರಸಿ, ಹಾರೈಸಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ ಎಂದು ರಕ್ಷಕ್ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ರಶ್ಮಿಕಾ, ಶ್ರೀಲೀಲಾ ನಡುವೆ ಕಾಣೆಯಾದ್ರಾ ಕುಡ್ಲದ ಬೆಡಗಿ ನೇಹಾ ಶೆಟ್ಟಿ?

     

    View this post on Instagram

     

    A post shared by rakshak sena (@rakshak_bullet)

    ತಮ್ಮ ಮೊದಲ ಸಿನಿಮಾ ರಕ್ಷಕ್ ಮಾಸ್ ಆಗಿ ಎಂಟ್ರಿ ಕೊಡಲಿದ್ದಾರೆ. ಶೇರ್ ಮಾಡಿರುವ ಪೋಸ್ಟರ್‌ನಲ್ಲಿ ಡೈಲಾಗ್‌ಗಳು ಪಂಚಿಂಗ್ ಆಗಿವೆ. ಮಚ್ಚಾ ಏರಿಯಾದಲ್ಲಿ ಕಣ್ಮುಂದೆ ಬೇಜಾನ್ ಗಾಡಿಗಳು ಸೌಂಡ್ ಮಾಡ್ತಾವೆ. ಆದರೆ ಸೌಂಡ್ ಕೇಳ್ತಿದ್ದಂಗೆ ಇದೇ ಗಾಡಿ ಅಂತ ಹೇಳೋದು ಒಂದುನ್ನೆ. ‘ಬುಲೆಟ್’… ಇನ್ನುಂದೆ ನಂದೆ ರೌಂಡು, ನನ್ನದೇ ಸೌಂಡು ಎಂಬ ಡೈಲಾಗ್ ಹೈಲೆಟ್ ಆಗಿದೆ.

    ‘R B 01’ ಚಿತ್ರಕ್ಕೆ ಶ್ರೀಹರಿ ಕಥೆ, ಚಿತ್ರಕಥೆ ಬರೆದಿದ್ದಾರೆ. ಕ್ರಿಶ್ ಎಂಬುವವರು ನಿರ್ದೇಶನ ಮಾಡಲಿದ್ದಾರೆ. ಶ್ರೀಧರ್ ಕಶ್ಯಪ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. ಸದ್ಯ ರಕ್ಷಕ್ ಲುಕ್, ಪಾತ್ರ ಸಿನಿಮಾದಲ್ಲಿ ಹೇಗಿರಲಿದೆ ಎಂಬುದರ ಬಗ್ಗೆ ಅಭಿಮಾನಿಗಳಿಗೆ ಕುತೂಹಲ ಕೆರಳಿಸಿದೆ. ತಂದೆ ಬುಲೆಟ್ ಪ್ರಕಾಶ್‌ರಂತೆಯೇ ರಕ್ಷಕ್ ಕೂಡ ಚಿತ್ರರಂಗದಲ್ಲಿ ಬೆಳೆಯಲಿ ಎಂಬುದೇ ಅಭಿಮಾನಿಗಳ ಆಶಯ.

  • ದುಬಾರಿ ಕಾರು ಖರೀದಿಸಿದ ರಕ್ಷಕ್- ದುಡ್ಡು ಎಲ್ಲಿಂದ ಬಂತು ಎಂದ ನೆಟ್ಟಿಗರು

    ದುಬಾರಿ ಕಾರು ಖರೀದಿಸಿದ ರಕ್ಷಕ್- ದುಡ್ಡು ಎಲ್ಲಿಂದ ಬಂತು ಎಂದ ನೆಟ್ಟಿಗರು

    ಹಾಸ್ಯ ನಟ ಬುಲೆಟ್ ಪ್ರಕಾಶ್ (Bullet Prakash) ಪುತ್ರ ರಕ್ಷಕ್ ಬುಲೆಟ್ (Rakshak Bullet) ಇದೀಗ ದುಬಾರಿ ಕಾರುವೊಂದನ್ನು ಖರೀದಿಸಿದ್ದಾರೆ. ರಕ್ಷಕ್ ಮನೆಗೆ ಹೊಸ ಅತಿಥಿ ಆಗಮನ ಆಗಿರೋ ಸಂತಸದಲ್ಲಿದ್ದಾರೆ. ದುಬಾರಿ ಕಾರು ಖರೀದಿ ಮಾಡಿದಕ್ಕೆ ಬುಲೆಟ್ ಪ್ರಕಾಶ್ ಪುತ್ರನಿಗೆ ಫ್ಯಾನ್ಸ್ ಶುಭಕೋರುತ್ತಿದ್ದಾರೆ. ಕೋಟಿ ಕೋಟಿ ಹಣ ಎಲ್ಲಿಂದ ಬಂತು ಅಂತ ನೆಟ್ಟಿಗರು ರಕ್ಷಕ್ ಕಾಲೆಳೆದಿದ್ದಾರೆ.

    ಸದಾ ಒಂದಲ್ಲಾ ಒಂದು ವಿಚಾರವಾಗಿ ಟ್ರೋಲಿಗರ ಬಾಯಿಗೆ ಆಹಾರವಾಗುವ ರಕ್ಷಕ್ ಈ ಬಾರಿ ಕಾಲೆಳೆಯುವವರಿಗೆ ಡೋಂಟ್ ಕೇರ್ ಎಂದಿದ್ದಾರೆ. ದುಬಾರಿ ಕಾರು ಖರೀದಿಸುವ ಮೂಲಕ ಟ್ರೋಲ್ ಮಾಡುವವರಿಗೆ ಸಖತ್ ಆಗಿ ತಿರುಗೇಟು ನೀಡಿದ್ದಾರೆ.

    ರಕ್ಷಕ್ ಮನೆಗೆ ಬಿಎಂಡಬ್ಲೂ ಕಾರು ಬಂದಿರುವ ಫೋಟೋ ಶೇರ್ ಮಾಡಿ ‘ಹೊಸ ಸದಸ್ಯ ಮನೆಗೆ ಸ್ವಾಗತ’ ಎಂದು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಹೊಸ ಅತಿಥಿ ಆಗಮನದ ಬೆನ್ನಲ್ಲೇ ಇಲಿಯಾನಾ ಕೊಟ್ರು ಗುಡ್ ನ್ಯೂಸ್

    ದುಬಾರಿ ಕಾರಿನ ಫೋಟೋ ರಕ್ಷಕ್ ಶೇರ್ ಮಾಡ್ತಿದ್ದಂತೆ ಕಣ್ಣು ಬಿಟ್ಟಂತೆ ಕಾರಿನ ಬೆಲೆ ಬಗ್ಗೆ ನೆಟ್ಟಿಗರು ಚರ್ಚೆ ಮಾಡ್ತಿದ್ದಾರೆ. ಬಿಎಂಡಬ್ಲೂ ಕಾರಿನ ಬೆಲೆ ಕಡಿಮೆ ಅಂದರೂ 40 ಲಕ್ಷ ರೂ.ಯಿಂದ 2.60 ಕೋಟಿ ರೂ. ಒಳಗಿದೆ. ಇಷ್ಟೊಂದು ಕಾಸು ರಕ್ಷಕ್ ಬಳಿ ಬಂದಿದ್ದಾದರೂ ಹೇಗೆ? ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿದೆ.

    ಅಂದ್ಹಾಗೇ ಕಳೆದ ವರ್ಷ ತಮ್ಮ ಸಹೋದರಿಯ ಮದುವೆಗೆ ಮುನ್ನ, ರಕ್ಷಕ್ ಮಹಿಂದ್ರಾ ಥಾರ್ ಕಾರನ್ನ ಖರೀದಿ ಮಾಡಿದ್ದರು. ಈಗ ಬಿ.ಎಂ.ಡಬ್ಲೂ ಕಾರು ರಕ್ಷಕ್ ಮನೆಗೆ ಎಂಟ್ರಿ ಕೊಟ್ಟಿದೆ.

    ತಂದೆಯಂತೆ ಉತ್ತಮ ಕಲಾವಿದನಾಗಿ ಮಿಂಚಲು ರಕ್ಷಕ್ ಪ್ರಯತ್ನಿಸುತ್ತಿದ್ದಾರೆ. ‘ಗುರು ಶಿಷ್ಯರು’ ಸಿನಿಮಾದಲ್ಲಿ ನಟಿಸಿದ ಮೇಲೆ ‘ಬಿಗ್ ಬಾಸ್ ಕನ್ನಡ 10’ರಲ್ಲಿ (Bigg Boss Kannada 10) ರಕ್ಷಕ್ ಸ್ಪರ್ಧಿಯಾಗಿದ್ದರು. ಬಿಗ್ ಬಾಸ್ ಶೋ ರಕ್ಷಕ್‌ಗೆ ಹೆಚ್ಚಿನ ಜನಪ್ರಿಯತೆ ಕೊಟ್ಟಿದೆ.

  • Bigg Boss: ಮತ್ತೆ ಒಟ್ಟಾದ್ರು ದೊಡ್ಮನೆಯ ಗುಂಪು- ಸ್ನೇಹಿತ್ ಎಲ್ಲಿ ಎಂದ ಫ್ಯಾನ್ಸ್

    Bigg Boss: ಮತ್ತೆ ಒಟ್ಟಾದ್ರು ದೊಡ್ಮನೆಯ ಗುಂಪು- ಸ್ನೇಹಿತ್ ಎಲ್ಲಿ ಎಂದ ಫ್ಯಾನ್ಸ್

    ‘ಬಿಗ್ ಬಾಸ್’ ಕನ್ನಡ ಸೀಸನ್ 10 ಈ ವರ್ಷ ಸೆನ್ಸೇಷನ್ ಕ್ರಿಯೇಟ್ ಮಾಡಿದ ಶೋ. ಸೀಸನ್‌ನ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಹೊರಹೊಮ್ಮಿದ್ದಾರೆ. ಇದೆಲ್ಲಾ ಕಳೆದು 2 ವಾರಗಳಾಗಿವೆ. ಈ ಬೆನ್ನಲ್ಲೇ `ಬಿಗ್ ಬಾಸ್’ ಮನೆಯ ಗುಂಪು ಜೊತೆಯಾಗಿದ್ದಾರೆ. ಇದನ್ನೂ ಓದಿ:ಎಂಗೇಜ್‌ಮೆಂಟ್ ಸಂಭ್ರಮದಲ್ಲಿ ನಿರ್ದೇಶಕ ಅಭಿಷೇಕ್ ಶೆಟ್ಟಿ

    ಬಿಗ್ ಬಾಸ್ ಶೋ ಮುಗಿದ ಮೇಲೆ ಕೆಲ ದಿನಗಳ ಹಿಂದೆ ಕಾರ್ತಿಕ್, ನಮ್ರತಾ, ವಿನಯ್, ಸಂಗೀತಾ ಭೇಟಿಯಾಗಿದ್ದರು. ಈ ಬೆನ್ನಲ್ಲೇ ದೊಡ್ಮನೆಯ ಗುಂಪು ರಕ್ಷಕ್, ವಿನಯ್, ನಮ್ರತಾ ಗೌಡ, ಇಶಾನಿ, ಮೈಕಲ್ ಅಜಯ್, ಪವಿ ಪೂವಪ್ಪ ಮತ್ತೆ ಭೇಟಿಯಾಗಿದ್ದಾರೆ. ಈ ತಂಡದ ಜೊತೆ ವಿನಯ್ ಪತ್ನಿ ಅಕ್ಷತಾ ಕೂಡ ಸಾಥ್ ನೀಡಿದ್ದಾರೆ. ಇದನ್ನೂ ಓದಿ:12 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ‘ಧೂಮ್’ ಚಿತ್ರ ನಟಿ ಇಶಾ

    ಬಿಗ್ ಬಾಸ್ ಮನೆಯಲ್ಲಿ ಈ 3 ಗುಂಪುಗಳಾಗಿ ಹೈಲೆಟ್ ಆಗಿತ್ತು. ಸಂತು-ಪಂತು ಗುಂಪು, ಮತ್ತೊಂದು ಸಂಗೀತಾ, ಕಾರ್ತಿಕ್, ತನಿಷಾರ ಟ್ರಯೋ ಫ್ರೆಂಡ್‌ಶಿಪ್, ಹಾಗೆಯೇ ವಿನಯ್ ಗುಂಪಲ್ಲಿ ಇಶಾನಿ, ಮೈಕಲ್, ನಮ್ರತಾ, ರಕ್ಷಕ್, ಪವಿ, ಸ್ನೇಹಿತ್ ಗೌಡ ಹೈಲೆಟ್ ಆಗಿದ್ದರು. ಈಗ ಇದೇ ವಿನಯ್ ಟೀಮ್ ಭೇಟಿಯಾಗಿ ಕೆಲ ಸಮಯ ಕಾಲ ಕಳೆದಿದ್ದಾರೆ. ಈ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಸ್ನೇಹಿತ್ ಎಲ್ಲಿ? ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.

    ನಮ್ರತಾ (Namratha) ಜೊತೆಗೆ ಫ್ರೆಂಡ್‌ಶಿಪ್ ಬ್ರೇಕಪ್ ಆದ್ಮೇಲೆ ವಿನಯ್ (Vinay) ತಂಡದ ಜೊತೆ ಸ್ನೇಹಿತ್ (Snehith Gowda) ಎಲ್ಲೂ ಕಾಣಿಸಿಕೊಂಡಿಲ್ಲ. ಹಾಗಾಗಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ. ಅದಕ್ಕೆ ‘ಬಿಗ್ ಬಾಸ್’ ಸ್ಪರ್ಧಿ ಪವಿ ಪೂವಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಎಲ್ಲರಿಗೂ ನಮಸ್ಕಾರ, ಸ್ನೇಹಿತ್ ಆ ದಿನ ಬ್ಯುಸಿಯಾಗಿದ್ದರು. ಹಾಗೆಯೇ ಅವರು ಪಾರ್ಟಿ ಮಾಡದ ಕಾರಣ ಬರಲಿಲ್ಲ. ಆದರೆ ಸ್ನೇಹಿತ್ ಯಾವಾಗಲೂ ನಮ್ಮ ಗುಂಪಿನಲ್ಲಿಯೇ ಇರುತ್ತಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪವಿ ಸ್ಪಷ್ಟನೆ ನೀಡಿದ್ದಾರೆ.

    ಅಂದಹಾಗೆ, ಬಿಗ್ ಬಾಸ್ ಮನೆಯಲ್ಲಿ ನಮ್ರತಾ ಮೇಲೆ ಸ್ನೇಹಿತ್‌ಗೆ ಲವ್ ಆಗಿತ್ತು. ದೊಡ್ಮನೆಯಲ್ಲಿ ಇರುವಾಗಲೇ ನಮ್ರತಾಗೆ ಹಲವು ಬಾರಿ ಸ್ನೇಹಿತ್ ಪ್ರೇಮ ನಿವೇದನೆ ಮಾಡಿದ್ದರು. ಆದರೆ ನಮ್ರತಾ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಸ್ನೇಹಿತ್ ಎಲಿಮಿನೇಷನ್ ನಂತರ ಕಾರ್ತಿಕ್ ಜೊತೆ ನಮ್ರತಾ ಒಡನಾಟದ ಬಗ್ಗೆ ಭಾರೀ ಟ್ರೋಲ್ ಆಗಿತ್ತು. ಫಿನಾಲೆ ಕೊನೆಯ ವಾರದಲ್ಲಿ ಸ್ನೇಹಿತ್ ದೊಡ್ಮನೆಗೆ ಎಂಟ್ರಿ ಕೊಟ್ಟಾಗ ಕಾರ್ತಿಕ್ ಜೊತೆಗಿನ ಟ್ರೋಲ್ ಬಗ್ಗೆ ಸ್ನೇಹಿತ್ ಮಾತನಾಡಿದ ರೀತಿ ನಮ್ರತಾಗೆ ಘಾಸಿ ಆಗಿತ್ತು. ಬಿಗ್ ಬಾಸ್ ಶೋ ಮುಗಿದ ಮೇಲೆ ನಿಮ್ಮನ್ನು ಎಂದೂ ಭೇಟಿ ಮಾಡಲ್ಲ ಎಂದು ಕಡ್ಡಿ ಮುರಿದಂತೆ ಹೇಳಿದ್ದರು ನಮ್ರತಾ. ಇದೀಗ ದೊಡ್ಮನೆಯ ಆಟ ಮುಗಿದ ಮೇಲೂ ಇಬ್ಬರು ಮುನಿಸು ಮುಂದುವರೆದಿದೆ.

  • ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ- ರಕ್ಷಕ್‌ಗೆ ಸುದೀಪ್ ಪ್ರಶ್ನೆ

    ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ- ರಕ್ಷಕ್‌ಗೆ ಸುದೀಪ್ ಪ್ರಶ್ನೆ

    ಬಿಗ್ ಬಾಸ್ ಕನ್ನಡ 10 (Bigg Boss Kannada 10) ಫಿನಾಲೆಗೆ ಇಂದು (ಜ.27) ಅದ್ಧೂರಿಯಾಗಿ ಓಪನಿಂಗ್ ಪಡೆದಿದೆ. 6 ಫೈನಲಿಸ್ಟ್‌ಗಳ ಜೊತೆ ಎಲಿಮಿನೇಟ್ ಆಗಿರೋ ಸ್ಪರ್ಧಿಗಳು ಕೂಡ ಆಗಮಿಸುವ ಮೂಲಕ ಕಾರ್ಯಕ್ರಮಕ್ಕೆ ಸಾಥ್ ನೀಡಿದ್ದಾರೆ. ಈ ವೇಳೆ, ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ ಎಂದು ರಕ್ಷಕ್‌ಗೆ (Rakshak Bullet) ಸುದೀಪ್ (Sudeep) ಪ್ರಶ್ನೆ ಮಾಡಿದ್ದಾರೆ.

    ಸುದೀಪ್ (Sudeep) ವೇದಿಕೆಗೆ ಬರುತ್ತಿದ್ದಂತೆ ಎಲ್ಲ ಹಳೆಯ ಸ್ಪರ್ಧಿಗಳನ್ನು ಮಾತನಾಡಿಸುತ್ತಾ ಹೇಗಿದ್ದೀರಿ? ಎಂದು ಕೇಳಿದರು. ರಕ್ಷಕ್ ಬಳಿ ಬರುತ್ತಿದ್ದಂತೆ, ಮೊದಲಿಗೆ ನಿಮ್ಮ ಕ್ಷಮೆ ಕೇಳಬೇಕು ನಾನು ಎಂದರು ರಕ್ಷಕ್. ಅದೆಲ್ಲ ಇರಲಿ ಪರವಾಗಿಲ್ಲ, ಸಂದರ್ಶನದಲ್ಲಿ ಇದ್ದ ವಾಯ್ಸ್ ಈಗೇಕೆ ಇಲ್ಲ ಎಂದು ಸುದೀಪ್‌ ಪ್ರಶ್ನೆ ಮಾಡಿದ್ದರು. ಇದನ್ನೂ ಓದಿ:Bigg Boss: ವರ್ತೂರು ಜೈಲಿಗೆ ಹೋಗಿದ್ದ ಸಂಗತಿ ಬಿಚ್ಚಿಟ್ಟ ಕಿಚ್ಚ- ಸಂತೋಷ್ ತಾಯಿ ಕಣ್ಣೀರು

    ನೀವು ಎದುರಿಗೆ ಇದ್ದೀರಲ್ಲ, ಅದಕ್ಕೆ ಗೌರವ ತುಸು ಹೆಚ್ಚು ಎಂದು ರಕ್ಷಕ್‌ ಮಾತನಾಡಿದ್ದರು. ಇರಲಿ, ನಿಮಗೆ ಯಾರ ಬಗ್ಗೆಯಾದರೂ ಮಾತನಾಡುವ ಅಧಿಕಾರ ಇದೆ. ಮಾತನಾಡಿ, ಸಮಸ್ಯೆಯಿಲ್ಲ. ಕ್ಷಮೆ ಎಲ್ಲ ಕೇಳಬೇಡಿ ಎಂದು ಕಿಚ್ಚ ಸುದೀಪ್‌ ಪ್ರತಿಕ್ರಿಯೆ ನೀಡಿದ್ದರು. ಅದಕ್ಕೆ ರಕ್ಷಕ್, ಇಲ್ಲ ಅಣ್ಣ, ನನ್ನ ಉದ್ದೇಶ ಅದಾಗಿರಲಿಲ್ಲ ಎಂದು ಸ್ಪಷ್ಟನೆ ಕೊಡಲು ಪ್ರಯತ್ನಿಸಿದರು. ಆದರೆ ಸುದೀಪ್, ಪರವಾಗಿಲ್ಲ ಬಿಡಿ, ನಿಮ್ಮ ಜೀವನದಲ್ಲಿ ನಿಮಗೆ ಒಳ್ಳೆಯದಾಗಲಿ ಎಂದು ಮುಂದುವರೆದರು. ಇದನ್ನೂ ಓದಿ:Bigg Boss: ದೊಡ್ಮನೆಯಿಂದ ತುಕಾಲಿ ಸಂತು ಎಲಿಮಿನೇಟ್?

    ‘ಬಿಗ್ ಬಾಸ್ ಸೀಸನ್ 10’ರಲ್ಲಿ 3ನೇ ವಾರವೇ ರಕ್ಷಕ್ ಬುಲೆಟ್ (Rakshak Bullet) ಎಲಿಮಿನೇಟ್ ಆಗಿ ಹೊರಬಂದಿದ್ದರು. ಎಲಿಮಿನೇಷನ್ ನಂತರ ಶೋ ಕುರಿತು ಹಲವು ವಿಚಾರಗಳನ್ನು ರಕ್ಷಕ್ ಮಾತನಾಡಿದ್ದರು. ಸುದೀಪ್, ಬಿಗ್ ಬಾಸ್ ಶೋ ಕುರಿತು ರಕ್ಷಕ್ ಮಾತನಾಡಿದ್ದ ಮಾತುಗಳು ವಿವಾದಕ್ಕೆ ದಾರಿ ಮಾಡಿಕೊಟ್ಟಿತ್ತು. ಹಾಗಾಗಿಯೇ ಇದೀಗ ಫಿನಾಲೆಯಲ್ಲಿ ರಕ್ಷಕ್‌ಗೆ ಸುದೀಪ್ ಪ್ರಶ್ನೆ ಮಾಡಿದ್ದಾರೆ. ನೇರವಾಗಿ ಹೇಳದೇ ಇದ್ದರೂ ಪರೋಕ್ಷವಾಗಿ ರಕ್ಷಕ್‌ಗೆ ಸುದೀಪ್ ಕಿವಿಹಿಂಡಿದ್ದಾರೆ.