Tag: ರಕ್ಷಕ್

  • ಜೀವ ಬೆದರಿಕೆ ಕೇಸ್ – ಸ್ಥಳ ಮಹಜರಿಗೆ ಬರುವಂತೆ ಪ್ರಥಮ್, ರಕ್ಷಕ್‌ಗೆ ನೋಟಿಸ್

    ಜೀವ ಬೆದರಿಕೆ ಕೇಸ್ – ಸ್ಥಳ ಮಹಜರಿಗೆ ಬರುವಂತೆ ಪ್ರಥಮ್, ರಕ್ಷಕ್‌ಗೆ ನೋಟಿಸ್

    – ಎ1, ಎ2 ಆರೋಪಿಗಳಿಗೆ ವಿಚಾರಣೆ ಹಾಜರಾಗುವಂತೆ ಬುಲಾವ್

    ದೊಡ್ಡಬಳ್ಳಾಪುರ: ನಟ ಪ್ರಥಮ್‌ಗೆ ಡ್ಯಾಗರ್ ತೋರಿಸಿ ಜೀವ ಬೆದರಿಕೆ ಹಾಕಿರುವ ಪ್ರಕರಣ ಸಂಬಂಧ ನಟ ಪ್ರಥಮ್ (Pratham) ಹಾಗೂ ರಕ್ಷಕ್‌ಗೆ (Rakshak Bullet) ಸ್ಥಳ ಮಹಜರಿಗೆ ಬರುವಂತೆ ನೋಟಿಸ್ ನೀಡಿದ್ದಾರೆ.

    ಇಂದು (ಗುರುವಾರ) 11 ಗಂಟೆಗೆ ದೊಡ್ಡಬಳ್ಳಾಪುರ (Doddaballapura) ಗ್ರಾಮಾಂತರ ಪೊಲೀಸ್ ಠಾಣೆಗೆ ಬಂದು ಸ್ಥಳ ಮಹಜರಿಗೆ ಹಾಜರಾಗುವಂತೆ ನಟ ಪ್ರಥಮ್, ರಕ್ಷಕ್ ಹಾಗೂ ಜಮೀನು ಮಾಲೀಕ ಮಹೇಶ್‌ಗೆ ನೋಟಿಸ್ ನೀಡಿದ್ದಾರೆ. ಸಾಕ್ಷಿಗಳ ಸಮ್ಮುಖದಲ್ಲಿ ಸ್ಪಾಟ್ ಮಹಜರು ಮಾಡುವ ಅವಶ್ಯಕತೆಯಿದೆ ಎಂದು ತಿಳಿಸಿದ್ದಾರೆ.ಇದನ್ನೂ ಓದಿ: ಬೆಂಗ್ಳೂರಿನ ಪ್ರತಿಷ್ಠಿತ ಕಂಪನಿಯ ಸರ್ವರ್ ಹ್ಯಾಕ್ – 378 ಕೋಟಿ ಕ್ರಿಪ್ಟೋ ಕರೆನ್ಸಿ ಕಳ್ಳತನ

    ಸ್ಥಳ ಮಹಜರು ಬಳಿಕ ಪೊಲೀಸರು ಮತ್ತೊಂದಿಷ್ಟು ಸಾಕ್ಷಿಗಳನ್ನ ಸಂಗ್ರಹ ಮಾಡಿ ಆರೋಪಿತ ವ್ಯಕ್ತಿಗಳಾದ ರೌಡಿಶೀಟರ್ ಬೇಕರಿ ರಘು ಹಾಗೂ ಯಶಸ್ವಿನಿಗೆ ವಿಚಾರಣೆಗೆ ಬರುವಂತೆ ನೋಟಿಸ್ ನೀಡಿದ್ದಾರೆ. ಬುಧವಾರ ಎಫ್‌ಐಆರ್ ದಾಖಲಾದ ಬೆನ್ನಲ್ಲೇ ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಸಾದಿಕ್ ಪಾಷಾ ಅವರ ಮುಂದೆ ಹಾಜರಾಗುವಂತೆ ತಿಳಿಸಿದ್ದಾರೆ.

    ದೊಡ್ಡಬಳ್ಳಾಪುರ ದೇವಸ್ಥಾನದ ಬಳಿ ಆಗಿದ್ದೇನು?
    ಜುಲೈ 22ರ ಮಂಗಳವಾರ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಮಯ್ಯನಪಾಳ್ಯ ಸಮೀಪವಿರುವ ಶ್ರೀ ಆದಿಶಕ್ತಿ ರೇಣುಕಾ ಯಲ್ಲಮ್ಮ ದೇವಸ್ಥಾನದಲ್ಲಿ ಪೂಜೆಗೆಂದು ಬಿಗ್ ಬಾಸ್ ವಿನ್ನರ್ ನಟ ಪ್ರಥಮ್ ಬಂದಿದ್ದರು. ಈ ವೇಳೆ ಪ್ರಥಮ್ ರನ್ನ ಅಡ್ಡಗಟ್ಟಿ ಮಾರಕಾಸ್ತ್ರಗಳಿಂದ ಬೆದರಿಸಿ ಜೀವ ಬೆದರಿಕೆ ಹಾಕಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಘಟನೆ ನಡೆದು ಹಲವು ದಿನಗಳ ನಂತರ ಖುದ್ದು, ಪ್ರಥಮ್ ನೇರವಾಗಿ ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ ಬಾಬಾ ಅವರನ್ನು ಭೇಟಿಯಾಗಿ ದೂರು ನೀಡಿದ್ದರು.

    ಪ್ರಥಮ್ ದೂರಿನ ಮೇರೆಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಪ್ರಕರಣ ಕೈಗೆತ್ತಿಕೊಂಡ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಜೀವ ಬೆದರಿಕೆ ಹಾಕಲಾಗಿದ್ದ ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.

    ಪ್ರಥಮ್ ನೀಡಿದ ದೂರಿನಲ್ಲೇನಿದೆ.?
    ಜುಲೈ 22 ರಂದು ಮಹೇಶ್ ಎಂಬ ಸಿನಿಮಾ ಪ್ರೊಮೋಟರ್ ಅವರು ನನಗೆ ದೊಡ್ಡ ಬಳ್ಳಾಪುರದ ಯಲ್ಲಮ್ಮ ದೇವಸ್ಥಾನದ ಪೂಜೆಗೆ ಕರೆದಿದ್ದರು. ಪೂಜೆ ಮುಗಿಸಿ ಮಧ್ಯಾಹ್ನ ಸುಮಾರು 3:50 ಗಂಟೆಗೆ ನಾನು ವಾಪಸ್ ಬರುವ ವೇಳೆ ಯಶಸ್ವಿನಿ ಮತ್ತು ಬೇಕರಿ ರಘು ಹಾಗೂ ಒಂದಷ್ಟು ಅಪರಿಚಿತರು ನನ್ನ ಕಾರನ್ನು ಸುತ್ತುವರೆದು ಅಜ್ಞಾತ ಸ್ಥಳಕ್ಕೆ (ಗ್ರಾಮದ ಹೆಸರು ತಿಳಿದಿರುವುದಿಲ್ಲ. ಸ್ಥಳವನ್ನು ಗುರ್ತಿಸುತ್ತೇನೆ) ಕರೆದೊಯ್ದಿದ್ದರು. ದರ್ಶನ್ ಅವರನ್ನ ಕುರಿತು ನನ್ನ ಬಾಸ್ ಬಗ್ಗೆ, ಮಾತನಾಡಿದ್ದೀಯ ಅಂತ ಅವಾಚ್ಯ ಶಬ್ದಗಳಿಂದ ಬೈಯ್ದು, ಅವರ ಬಳಿ ಇದ್ದ ಡ್ರ‍್ಯಾಗರ್ ಮತ್ತು ಚಾಕು ತೋರಿಸಿ ಚುಚ್ಚಲು ಮುಂದಾಗಿ ಭಯಪಡಿಸಿರುತ್ತಾರೆ. ಇವರು ನನ್ನ ಬಳಿ ಗಲಾಟೆ ಮಾಡುವಾಗ, ಜೈಲಿನಲಿ.. ದರ್ಶನ್ ಜೊತೆ ಇದ್ದ ಬ್ಯಾರಕ್ ಪೋಟೋವನ್ನ ತೋರಿಸಿರುತ್ತಾರೆ. ಆ ನಂತರ ಅಲ್ಲಿಂದ ಬಹಳ ಉಪಾಯದಿಂದ ಪ್ರಾಣ ಉಳಿಸಿಕೊಂಡು ಬಂದಿದ್ದೆ ದೊಡ್ಡ ವಿಚಾರ. ಈ ವಿಚಾರವನ್ನ ನನ್ನ ಜೊತೆ ಇದ್ದ ನನ್ನ ಸ್ನೇಹಿತರಾದ ಮಹೇಶ್, ಪ್ರಮೋದ್ ಮತ್ತು ಚಾಲಕ ಪ್ರಕಾಶ್ ಇವರು ಖುದ್ದು ಮೇಲ್ಕಂಡ ವಿಚಾರಕ್ಕೆ ಸಾಕ್ಷಿಯಾಗಿರುತ್ತಾರೆ. ನನಗೆ ಜೀವ ಭಯವಿರುವುದರಿಂದ ರಕ್ಷಣೆ ನೀಡಿ ಅವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಿದ್ದಾರೆ.ಇದನ್ನೂ ಓದಿ: Uttar Pradesh | ಕಾಲೇಜಿಗೆ ಬಂದಿದ್ದ ವಿದ್ಯಾರ್ಥಿನಿಯ ಕಿಡ್ನ್ಯಾಪ್ – ದೃಶ್ಯ ಸಿಸಿಟಿವಿಯಲ್ಲಿ ಸೆರೆ

  • ರಕ್ಷಕ್ ಕೊಟ್ಟ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಗೌಡ ಕಣ್ಣೀರು

    ರಕ್ಷಕ್ ಕೊಟ್ಟ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಗೌಡ ಕಣ್ಣೀರು

    ‘ಬಿಗ್ ಬಾಸ್’ (Bigg Boss Kannada 10) ಖ್ಯಾತಿಯ ನಮ್ರತಾ ಗೌಡ (Namratha Gowda) ಅವರು 32ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಅವರ ಬರ್ತ್‌ಡೇಯನ್ನು ರಕ್ಷಕ್ ಮತ್ತಷ್ಟು ಸ್ಪೆಷಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಅವರು ಕೊಟ್ಟಿರುವ ಬರ್ತ್‌ಡೇ ಸರ್ಪ್ರೈಸ್‌ಗೆ ನಮ್ರತಾ ಭಾವುಕರಾಗಿದ್ದಾರೆ. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ಇದನ್ನೂ ಓದಿ:ಅದ್ಧೂರಿಯಾಗಿ ಎಂಗೇಜ್‌ಮೆಂಟ್‌ ಮಾಡಿಕೊಂಡ ನಟಿ ವೈಷ್ಣವಿ ಗೌಡ

    ನಮ್ರತಾ‌ ಗೌಡ ಹುಟ್ಟುಹಬ್ಬದ (ಏ.14) ಹಿನ್ನೆಲೆ ಸರ್ಪ್ರೈಸ್ ಆಗಿ ರಕ್ಷಕ್ ಮನೆಗೆ ಕರೆದುಕೊಂಡು ಹೋಗಿ ನಟಿಯ ಕೈಯಲ್ಲಿ ಕೇಕ್ ಕಟ್ ಮಾಡಿಸಿದ್ದಾರೆ. ಬರ್ತ್‌ಡೇಗೆ ಅಲಂಕರಿಸಿರುವ ರೀತಿ ಹಾಗೂ ಸಹೋದರ ರಕ್ಷಕ್  (Rakshak Bullet) ಪ್ರೀತಿ ನೋಡಿ ನಮ್ರತಾ ಕಣ್ಣೀರಿಟ್ಟಿದ್ದಾರೆ. ಇದು ನಟ ಹಂಚಿಕೊಂಡಿರುವ ವಿಡಿಯೋದಲ್ಲಿ ಸೆರೆಯಾಗಿದೆ. ಈ ವಿಡಯೋಗೆ ಹುಟ್ಟುಹಬ್ಬದ ಶುಭಾಶಯಗಳು ಪಾಪು. ನಿಮ್ಮೊಂದಿಗೆ ಎಂದೆಂದಿಗೂ ಎಂದು ರಕ್ಷಕ್‌ ಕ್ಯಾಪ್ಷನ್‌ ನೀಡಿದ್ದಾರೆ. ಇದನ್ನೂ ಓದಿ:ತಾಯಿ ಚಾಮುಂಡೇಶ್ವರಿಗೆ ಡೈಲಾಗ್‌ನಲ್ಲಿ ಅಪಮಾನ ಆರೋಪ- ರಕ್ಷಕ್ ವಿರುದ್ಧ ಸಿಡಿದೆದ್ದ ಹಿಂದೂ ಸಂಘಟನೆ

     

    View this post on Instagram

     

    A post shared by rakshak sena (@rakshak_bullet)

    ಅಂದಹಾಗೆ, ‘ಬಿಗ್ ಬಾಸ್ ಕನ್ನಡ 10’ರ ಕಾರ್ಯಕ್ರಮದಲ್ಲಿ ರಕ್ಷಕ್ ಮತ್ತು ನಮ್ರತಾ ಸ್ಪರ್ಧಿಗಳಾಗಿದ್ದರು. ಈ ಶೋ ಬಳಿಕ ಇಬ್ಬರ ಬಾಂಧವ್ಯ ಮುಂದುವರೆದಿದೆ.

  • ಕಿಚ್ಚನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಕ್ಷಕ್‌ ಬುಲೆಟ್‌

    ಕಿಚ್ಚನ ಜೊತೆ ಫೋಟೋ ಕ್ಲಿಕ್ಕಿಸಿಕೊಂಡ ರಕ್ಷಕ್‌ ಬುಲೆಟ್‌

    ‘ಬಿಗ್ ಬಾಸ್’ ಕನ್ನಡ ಸೀಸನ್ 10ರಲ್ಲಿ (Bigg Boss Kannada 10) ಸ್ಪರ್ಧಿಯಾಗಿ ರಕ್ಷಕ್ ಬುಲೆಟ್ (Rakshak Bullet) ಭಾಗವಹಿಸಿದ್ದರು. ದೊಡ್ಮನೆಯಿಂದ ಬಂದ್ಮೇಲೆ ‘ಬಿಗ್ ಬಾಸ್’ ಶೋ ಕುರಿತು ರಕ್ಷಕ್ ಕಟುವಾಗಿ ಮಾತನಾಡಿದ್ದರು. ಈ ಪರಿಣಾಮ, ಬಿಗ್ ಬಾಸ್ ಗ್ರ್ಯಾಂಡ್ ಫಿನಾಲೆಯಲ್ಲಿ ರಕ್ಷಕ್‌ಗೆ ಕಿಚ್ಚ (Sudeep)  ತಿರುಗೇಟು ನೀಡಿದ್ದರು. ಇದೀಗ ಕಿಚ್ಚನ ಜೊತೆ ಇರುವ ಫೋಟೋವೊಂದನ್ನು ರಕ್ಷಕ್ ಹಂಚಿಕೊಂಡಿದ್ದಾರೆ.

    ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಜೊತೆ ಪ್ರೀತಿಯಿಂದ ರಕ್ಷಕ್ ಫೋಟೋ ಹಂಚಿಕೊಂಡಿದ್ದಾರೆ. ಫಿನಾಲೆ ಬಳಿಕ ಕಿಚ್ಚನ ಜೊತೆ ಕಳೆದ ಕ್ಷಣ ಫೋಟೋ ಶೇರ್ ಮಾಡಿದ್ದಾರೆ. ‘ಅಣ್ಣ’ ಎಂದು ಅಡಿಬರಹ ನೀಡಿದ್ದಾರೆ. ಇದನ್ನೂ ಓದಿ:‘ಅಗ್ನಿಲೋಕ’ ಚಿತ್ರಕ್ಕೆ ಯಶಸ್ವ ಹೀರೋ: ಇವರು ಮೂರ್ತಿ ಮೊಮ್ಮಗ

     

    View this post on Instagram

     

    A post shared by rakshak sena (@rakshak_bullet)

    ಅದಷ್ಟೇ ಅಲ್ಲ, ರಕ್ಷಕ್‌ಗೆ (Rakshak) ಕಿಚ್ಚ ಕನ್ನಡಕವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಇದರ ಬಗ್ಗೆ ಕೂಡ ಖುಷಿಯಿಂದ ಅಪ್‌ಡೇಟ್ ಹಂಚಿಕೊಂಡಿದ್ದಾರೆ. ಈ ವೇಳೆ, ನಡೆದ ಮಾತುಕತೆ ಹೇಗಿತ್ತು? ಎಂದು ರಕ್ಷಕ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಈ ಮೂಲಕ ಗಾಸಿಪ್‌ಗೆಲ್ಲಾ ರಕ್ಷಕ್ ಬ್ರೇಕ್ ಹಾಕಿದ್ದಾರೆ.

    ನಾನು ನಿನ್ನೆ ನನ್ನ ಜೀವನದ ಒಂದು ಅವಿಸ್ಮರಣೀಯ ಸಮಯವನ್ನು ಸುದೀಪ್ ಅಣ್ಣ ಅವರೊಂದಿಗೆ ಕಳೆದೆ. ಸುದೀಪ್ ಅಣ್ಣ ಅವರ ಮತ್ತು ನನ್ನ ತಂದೆಯ ನಡುವಿನ ಆತ್ಮೀಯತೆ, ಸ್ನೇಹ, ಪ್ರೀತಿ ಹಾಗೂ ಬಾಂಧವ್ಯದ ಬಗ್ಗೆ ಹೇಳಿದರು. ನಾನು ತುಂಬಾ ಭಾವುಕನಾದೆ. ನನಗೆ ಸಾಕಷ್ಟು ವಿಚಾರಗಳನ್ನು ನನಗೆ ಹೇಳಿದ್ದಾರೆ. ಬದುಕಿನಲ್ಲಿ ಹೇಗಿರಬೇಕು ಎಂದು ಉತ್ತಮ ಸಲಹೆ ನೀಡಿದರು. ವಿಶೇಷ ಎಂದರೆ, ಅವರು ತಮ್ಮ ಕನ್ನಡಕವನ್ನು ನನಗೆ ಉಡುಗೊರೆಯಾಗಿ ನೀಡಿದರು. ಅದು ನಿಜಕ್ಕೂ ಬೆಲೆ ಕಟ್ಟಲು ಸಾಧ್ಯವಿಲ್ಲ. ಥ್ಯಾಂಕ್ಸ್ ಎ ಲಾಟ್ ಸುದೀಪ್ ಅಣ್ಣ ಎಂದು ಸೋಷಿಯಲ್‌ ಮೀಡಿಯಾದಲ್ಲಿ ರಕ್ಷಕ್ ಬುಲೆಟ್ ಬರೆದುಕೊಂಡಿದ್ದಾರೆ.

  • ‘ಬಿಗ್ ಬಾಸ್’ ಮನೆಯಲ್ಲಿ ಇಶಾನಿ ರ್‍ಯಾಪ್ ಸಾಂಗ್, ಖಿನ್ನತೆಯ ಮಾತು

    ‘ಬಿಗ್ ಬಾಸ್’ ಮನೆಯಲ್ಲಿ ಇಶಾನಿ ರ್‍ಯಾಪ್ ಸಾಂಗ್, ಖಿನ್ನತೆಯ ಮಾತು

    ರ್‍ಯಾಪ್ ಸಂಗೀತದ ಮೂಲಕವೇ ಗುರುತಿಸಿಕೊಂಡಿದ್ದರೂ ಇಶಾನಿ (Ishani) ಬಿಗ್‌ಬಾಸ್‌ (Bigg Boss Kannada) ಮನೆಯೊಳಗೆ ಬಂದ ಮೇಲೆ ಅವರ ರ್‍ಯಾಪ್ ಪ್ರೇಮ ವ್ಯಕ್ತಗೊಂಡಿದ್ದು ವಿರಳವೇ. ಮನೆಯೊಳಗಿನ ವಾತಾವರಣಕ್ಕೆ ಹೊಂದಿಕೊಳ್ಳುವ ಭರದಲ್ಲಿ, ಮೈಕಲ್‌ ಜೊತೆಗಿನ ಸ್ಪೆಷಲ್ ಫ್ರೆಂಡ್‌ಶಿಪ್‌, ಟಾಸ್ಕ್‌ಗಳ ಕಾವು, ಜಗಳ ಈ ಎಲ್ಲದರಿಂದ ಅವರೊಳಗಿನ ರ್‍ಯಾಪ್ ಗರ್ಲ್‌ ಬಚ್ಚಿಟ್ಟುಕೊಂಡಂತಿದ್ದಳು.

    ಆದರೆ, ಒಳಗೆ ಬಚ್ಚಿಟ್ಟುಕೊಂಡಿದ್ದನ್ನು ಹೊರತೆಗೆದು ಅಸಲಿ ಮುಖ ತೋರಿಸುವುದೇ ಬಿಗ್‌ಬಾಸ್‌ ರಿಯಾಲಿಟಿ ಷೋನ ಸ್ಪೆಷಾಲಿಟಿ. ಅದು ಈ ಸೀಸನ್‌ನಲ್ಲಿ ಕೂಡ ಪ್ರತಿದಿನ ಸಾಬೀತಾಗುತ್ತಿದೆ. ಮನೆಯೊಳಗೆ ಪ್ರವೇಶಿಸುವಾಗ ಇದ್ದ ಹಾಗೆ ಯಾರೂ ಈಗ ಇಲ್ಲ. ದಿನಕ್ಕೊಂದು ಹೊಸ ಹೊಸ ರೂಪಗಳು ಅವರೊಳಗಿಂದ ಹೊರಬೀಳುತ್ತಿವೆ. ಹಾಗೆಯೇ ಇಶಾನಿ ಅವರ ಮನಸೊಳಗೆ ಬಚ್ಚಿಟ್ಟುಕೊಂಡಿದ್ದ ರ್‍ಯಾಪ್ ಗರ್ಲ್‌ ನಿಧಾನಕ್ಕೆ ಹೊರಬೀಳುತ್ತಿದ್ದಾಳೆ.  ಅದು JioCinemaದಲ್ಲಿ ಪ್ರಸಾರವಾಗುತ್ತಿರುವ ಬಿಗ್‌ಬಾಸ್‌ ಕನ್ನಡದಲ್ಲಿ ದಾಖಲಾಗಿದೆ.

    ಇಶಾನಿ ಅವರೊಳಗಿನ ರ್‍ಯಾಪ್ ಗರ್ಲ್‌ ಮಾತಾಡತೊಡಗಿದ್ದಕ್ಕೆ ಸಾಕ್ಷಿಯಾಗಿದ್ದು, ಬುಲೆಟ್‌ ರಕ್ಷಕ್‌. ಬರೀ ಸಾಕ್ಷಿಯಾಗಿದ್ದಷ್ಟೇ ಅಲ್ಲ, ಅವರ ಸಹಾಯಕ್ಕೂ ನಿಂತಿದ್ದಾರೆ. ಇವತ್ತಿಡೀ ದಿನ ಇಶಾನಿ ಮ್ಯೂಸಿಕ್ ಮೂಡ್‌ನಲ್ಲಿಯೇ ಇದ್ದಂತಿತ್ತು. ನಡೆದಾಡುತ್ತಿರುವಾಗ, ಹರಟೆಗೆಂದು ಕೂತಿದ್ದಾಗಲೆಲ್ಲ ಗುನುಗುತ್ತಿದ್ದರು. ಕೆಲವು ವರ್ಷಗಳ ಹಿಂದೆ ಇಶಾನಿ ಡಿಪ್ರೆಶನ್‌ಗೆ ಹೋಗಿದ್ದರಂತೆ. ಇದರ ಕುರಿತೂ ಈವತ್ತು ಬಿಗ್‌ಬಾಸ್‌ ಮನೆಯಲ್ಲಿ ಅವರು ಅನುಭವಗಳನ್ನು ಹಂಚಿಕೊಂಡಿದ್ದಾರೆ. ವಿನಯ್, ಇಶಾನಿ, ನಮ್ರತಾ, ಮೈಕಲ್ ಎಲ್ಲರೂ ಕೂತು ಡಿಪ್ರೆಶನ್‌ ಕುರಿತು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.

    ಮೈಕಲ್ ಮತ್ತು ನಮ್ರತಾ ಕೂಡ ಹಿಂದೊಮ್ಮೆ ಡಿಪ್ರೆಶನ್‌ಗೆ ಜಾರಿದ್ದರಂತೆ. ಮೈಕಲ್‌ ಅವರಿಗೆ ಡಿಪ್ರೆಶನ್‌ನಿಂದ ಹೊರಬರಲು ವರ್ಕೌಟ್‌ ತುಂಬ ಸಹಾಯ ಮಾಡಿದೆ. ನಮ್ರತಾಗೆ ಡಾನ್ಸ್‌ ಕೂಡ ಸಹಾಯ ಮಾಡಿತ್ತಂತೆ. ‘ನಾನು ಡಿಪ್ರೆಶನ್‌ನಿಂದ ಹೊರಗೆ ಬರಲು ಸಾಕಷ್ಟು ಪ್ರಯತ್ನಪಟ್ಟೆ. ಆದರೆ ಆಗುತ್ತಿರಲಿಲ್ಲ. ಸಂಗೀತ ಕ್ಲಾಸ್‌, ಡಾನ್ಸ್‌ ಕ್ಲಾಸ್‌ ಎಲ್ಲದಕ್ಕೂ ಹೋಗುತ್ತಿದ್ದೆ. ಆದರೆ ಮನಸ್ಸನ್ನು ಆವರಿಸಿದ ಖಿನ್ನತೆಯಿಂದ ಹೊರಬರುವುದು ಸುಲಭವಾಗಿರಲಿಲ್ಲ. ಸುಮಾರು ಎರಡು ವರ್ಷಗಳ ಕಾಲ ನನಗೆ ಯಾವ ಅವಕಾಶಗಳೂ ಸಿಗಲಿಲ್ಲ. ಇದೂ ನಾನು ಖಿನ್ನತೆಗೆ ಜಾರಲು ಕಾರಣವಾಗಿತ್ತು’ ಎಂದು ಅವರು ಹೇಳಿಕೊಂಡಿದ್ದಾರೆ.

    ಕೊನೆಗೂ ತಮ್ಮನ್ನು ಖಿನ್ನತೆಯಿಂದ ಪಾರುಮಾಡಿದ ಸಂಗೀತದ ಶಕ್ತಿಯನ್ನು ಮನೆಯ ಸದಸ್ಯರಿಗೂ ತೋರಿಸಬೇಕು ಎಂದು ಅವರುನ ನಿರ್ಧರಿಸಿರಬೇಕು. ಇಶಾನಿ ಹಾಡು ಕಟ್ಟಲು ನಿರ್ಧರಿಸಿದ್ದರು. ಎಲ್ಲರೂ ಮಾತಾಡುತ್ತಿರುವಾಗ ಇಶಾನಿ ಹಾಳೆ ಪೆನ್ನು ಹಿಡಿದುಕೊಂಡು ಬಾಯಲ್ಲಿ ಏನೋ ಗುನುಗುತ್ತ ಮನಸ್ಸಿನೊಳಗೆ ಹುಟ್ಟುತ್ತಿರುವ ಹಾಡಿಗೆ ಅಕ್ಷರರೂಪ ನೀಡುತ್ತಿದ್ದರು.

    ನಾನು ಕ್ವಿನ್‌ ಇಶಾನಿ

    ನಾನು ರ್‍ಯಾಪರ್ ರಾಣಿ

    ನಾನು ಏನ್ ಅಂತ ನನಗೆ ಗೊತ್ತು

    ಇದು ಬಿಗ್ ಬಾಸ್

    ಐ ಆಮ್‌ ಲೇಡಿ ಬಾಸ್

    ನಾನು ಫೈಟರ್ ಲೇಡಿ

    ಡೊಂಟ್ ಗಿವ್ ಅ

    ಆಚೆ ನನ್ನ ಫ್ಯಾನ್ಸು

    ಕೊಡ್ರೀ ಒಂದು ಚಾನ್ಸು

    ಆಗ್ರೀನ್ ನಾನು ಬೌನ್ಸ್

    ಇದೇ ನನ್ನ ರೂಲ್ಸು..

    -ಹೀಗೆ ಲಿರಿಕ್ಸ್‌ ಮತ್ತೆ ಮತ್ತೆ ಹೇಳಿಕೊಳ್ಳುತ್ತ, ಅದನ್ನು ತಿದ್ದಿಕೊಳ್ಳುತ್ತ ಬರೆದುಕೊಳ್ಳುತ್ತಿದ್ದಾರೆ. ನಂತರ ಮನೆಯೊಳಗೆ ಬಂದು ಕೂತ ಮೇಲೆ ರಕ್ಷಕ್ (Rakshak)ಕೂಡ ಅವರ ಲಿರಿಕ್ಸ್‌ಗೆ ತಮ್ಮೆರಡು ಸಾಲು ಸೇರಿಸಿದ್ದಾರೆ.

    ‘ಕೇಳ್ರೋ ನನ್ನ ಫ್ಯಾನ್ಸು

    ನಾನೇ ಇಲ್ಲಿ ಬಾಸು’ -ಇದು ರಕ್ಷಕ್ ಸೇರಿಸಿದ ಸಾಲುಗಳು. ಹಾಡು ಇನ್ನೂ ಮುಂದುವರಿಯುತ್ತಲೇ ಇತ್ತು. ಇಶಾನಿ ಇಷ್ಟೊಂದು ಉತ್ಸಾಹದಿಂದ ಕಟ್ಟುತ್ತಿರುವ ಹಾಡು ಪೂರ್ಣಗೊಂಡ ಮೇಲೆ ಹೇಗಿರಬಹುದು? ರಾಪ್‌ ಸಾಂಗ್ ಕಂಪೋಸ್ ಆದಮೇಲೆ ಹೇಗಿರುತ್ತದೆ? ಅದನ್ನು ಅವರು ಎಲ್ಲಿ ಹೇಗೆ ಹಾಡುತ್ತಾರೆ? ಎನ್ನುವುದು ಕುತೂಹಲದ ಅಂಶ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕ್ಯಾಪ್ಟನ್ ಸೋಲಿಸಿ ಕ್ಯಾಪ್ಟನ್ ಆದ ‘ಬಿ ಬಾಸ್’ ರಕ್ಷಕ್

    ಕ್ಯಾಪ್ಟನ್ ಸೋಲಿಸಿ ಕ್ಯಾಪ್ಟನ್ ಆದ ‘ಬಿ ಬಾಸ್’ ರಕ್ಷಕ್

    ಬಿಗ್ ಬಾಸ್ (Bigg Boss Kannada) ಮನೆಯಲ್ಲಿ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿದೆ. ಇದೀಗ ಕ್ಯಾಪ್ಟನ್ ಪಟ್ಟಕ್ಕೆ ಸ್ಪರ್ಧಿಗಳ ಮಧ್ಯೆ ಹಣಾಹಣಿ ನಡೆದಿದೆ. ನಮ್ಮನೆ ಯುವರಾಣಿ ಖ್ಯಾತಿಯ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ಮನೆಯ ಕ್ಯಾಪ್ಟನ್ (Captain) ಆಗಿ ರಕ್ಷಕ್ ಬುಲೆಟ್ (Bullet Rakshak)  ಆಯ್ಕೆಯಾಗಿದ್ದಾರೆ. ನಡೆದ ಟಾಸ್ಕ್ ನಲ್ಲಿ ಗಟ್ಟಿ ಪೈಪೋಟಿ ನೀಡಿದ್ದಾರೆ.

    ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಮೊದಲನೇ ವಾರ ಸ್ನೇಹಿತ್ ಕ್ಯಾಪ್ಟನ್ ಆಗಿ ಮನೆಯ ಸ್ಪರ್ಧಿಗಳ ಮನಗೆದ್ದರು. ಅದರಂತೆ 2ನೇ ವಾರದ ಕ್ಯಾಪ್ಟನ್ ಆಗಲು ಕೂಡ ರಕ್ಷಕ್ ಬುಲೆಟ್ ಜೊತೆ ಮತ್ತೆ ಸ್ನೇಹಿತ್ ಪೈಪೋಟಿ ನೀಡಿದರು. ಚೆಂಡನ್ನು ಪಿರಾಮಿಡ್ ಆಕಾರದಲ್ಲಿ ಜೋಡಿಸುವ ಟಾಸ್ಕ್ ಅನ್ನು ಬಿಗ್ ಬಾಸ್ ನೀಡಿದ್ದರು. ಈ ಟಾಸ್ಕ್ ನಲ್ಲಿ ಸ್ನೇಹಿತ್‌ಗೆ ಠಕ್ಕರ್ ಕೊಟ್ಟು ರಕ್ಷಕ್ ಗೆದ್ದು ಬೀಗಿದ್ದಾರೆ.

    ರಕ್ಷಕ್ ಗೆಲುವಿಗೆ ಬಿಗ್ ಬಾಸ್ ಅಭಿನಂದನೆ ತಿಳಿಸಿ ಸ್ಪೆಷಲ್ ಉಡುಗೊರೆಯೊಂದನ್ನ ಕಳುಹಿಸಿದ್ದಾರೆ. ರಕ್ಷಕ್ ಅವರು ಮನೆಯವರ ಫೋಟೋ ಕಳುಹಿಸಲು ಕೇಳಿಕೊಂಡಿದ್ದರು. ಅದರಂತೆ ಕ್ಯಾಪ್ಟನ್ ಆದ ಬಳಿಕ ಕುಟುಂಬದ ಫೋಟೋವನ್ನೇ ಗಿಫ್ಟ್ ಆಗಿ ನೀಡಿದ್ದಾರೆ. ರಕ್ಷಕ್ ಕೂಡ ನೋಡಿ ಖುಷಿಪಟ್ಟಿದ್ದಾರೆ.

    `ಗುರುಶಿಷ್ಯರು’ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ರಕ್ಷಕ್ ಬುಲೆಟ್ ಎಂಟ್ರಿ ಕೊಟ್ಟರು. ಡಿ ಬಾಸ್ ಅಭಿಮಾನಿ ಆಗಿರುವ ರಕ್ಷಕ್ ಈಗ ದೊಡ್ಮನೆಯಲ್ಲಿ ಕಮಾಲ್ ಮಾಡ್ತಿದ್ದಾರೆ. ಸದಾ ಟ್ರೋಲ್ ಮೂಲಕ ಸದ್ದು ಮಾಡಿರುವ ರಕ್ಷಕ್, ಬಿಗ್ ಬಾಸ್ ವಿನ್ನರ್ ಪಟ್ಟ ಪಡೆದು ಗೆದ್ದು ಬೀಗುತ್ತಾರಾ ಎಂದು ಕಾಯಬೇಕಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Big Boss Kannada: ಹೋಲ್ಡ್‌ನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

    Big Boss Kannada: ಹೋಲ್ಡ್‌ನಲ್ಲಿ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್

    ‘ನನ್ನ ಮೇಲೆ ನೆಗೆಟಿವ್ ಇಮೇಜ್ ಕಟ್ಟಿದರು ಕೆಲವರು. ನನ್ನ ನಿಜವಾದ ಫೇಸ್ ತೋರಿಸಬೇಕು. ಅದನ್ನು ಮನೆಯೊಳಗೆ ಖಂಡಿತ ತೋರಿಸ್ತೀನಿ. ಬದುಕಿನಲ್ಲಿ ಪಾಸಿಟಿವ್ ನೆಗೆಟಿವ್ ಎರಡೂ ಇರಬೇಕು’ ಎಂದು ವಯಸ್ಸಿಗೂ ಮೀರಿ ಪ್ರಬುದ್ಧವಾಗಿ ಮಾತಾಡುವ ಹುಡುಗ ರಕ್ಷಕ್‌ (Rakshak), ಹಿರಿಯ ಹಾಸ್ಯನಟ ಬುಲೆಟ್ ಪ್ರಕಾಶ್‌ (Bullet Prakash) ಅವರ ಪುತ್ರ.

    ‘ಜನರ ಬಾಯಿ ಮುಚ್ಚಿಸಲಾಗದು. ಟ್ರೋಲ್, ರೋಸ್ಟ್‌ ಮಾಡಿದರು ಜನರು… ಅದಕ್ಕೆಲ್ಲ ಕೇರ್ ಮಾಡಲ್ಲ. ನನ್ನ ಸ್ವಂತ ಐಡೆಂಟಿಟಿಯೊಂದಿಗೆ ಬಿಗ್‌ಬಾಸ್ ಮನೆಯೊಳಗೆ ಹೋಗ್ತೀನಿ’ ಎಂದು ನೇರವಾಗಿ ಮಾತಾಡುವ ರಕ್ಷಕ್‌, ಕೌಟುಂಬಿಕ ಪ್ರೇಕ್ಷಕರ ಮನಸಲ್ಲಿ ಜಾಗ ಕಂಡುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡು ಬಿಗ್‌ಬಾಸ್ ವೇದಿಕೆಗೆ ಬಂದಿದ್ದರು.

    ‘ರಾಜಕೀಯ ಸಿನಿಮಾ ಎರಡರಲ್ಲಿಯೂ ನೆಗೆಟಿವ್ ಪಾಸಿಟಿವ್ ಎರಡೂ ಇರತ್ತೆ. ಹೋಗುತ್ತಾ ಹೋಗುತ್ತಾ ಈ ನೆಗೆಟಿವೇ ಪಾಸಿಟಿವ್ ಆಗುತ್ತದೆ’ ಎನ್ನುವ ನಂಬಿಕೆಯಲ್ಲಿರುವ ರಕ್ಷಕ್‌ ಅವರು ಮನೆಯೊಳಗೆ ಮಾತುಗಳಿಗೆ ಸೆನ್ಸಾರ್ ಅಳವಡಿಸಿಕೊಂಡೇ ಮನೆಯೊಳಗೆ ಹೋಗಲು ನಿರ್ಧರಿಸಿದ್ದರು. ‘ನನ್ನ ರಿಯಲ್ ಫೇಸ್‌ ನೋಡಲಿಕ್ಕಾಗಿ ನನಗೆ ವೋಟ್ ಮಾಡಿ’ ಎಂಬ ರಕ್ಷಕ್ ಮನವಿಗೆ ಜನರು 53% ವೋಟ್ ಮಾಡಿ ಹೋಲ್ಡ್‌ನಲ್ಲಿ ಇಟ್ಟಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ

    ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ

    ಬೆಂಗಳೂರು: ಹಾಸ್ಯ ನಟ ದಿ.ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರು ದಾಳಿ ನಡೆಸಿದ ಪ್ರಕರಣ ನಗರದ ಹೆಬ್ಬಾಳ ಫ್ಲೈಓವರ್ ಬಳಿ ನಡೆದಿದೆ.

    ರಾತ್ರಿ 9 ಗಂಟೆ ವೇಳೆ ಜಿಮ್ ಮುಗಿಸಿ ದ್ವಿಚಕ್ರ ವಾಹನದಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ ಹೆಬ್ಬಾಳ ಫ್ಲೈ ಓವರ್ ಬಳಿ ದಿ.ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಮೇಲೆ ಮಂಗಳಮುಖಿಯರು ದಾಳಿ ಮಾಡಿದ್ದಾರೆ. ಮಂಗಳಮುಖಿಯರು ಬ್ಯಾಗ್ ಇಡಿದು ಎಳೆದ ಕಾರಣ ರಕ್ಷಕ್ ಗಾಡಿಯಿಂದ ಕೆಳಗೆ ಬಿದ್ದಿದ್ದಾರೆ. ಘಟನೆಯಿಂದ ರಕ್ಷಕ್ ಕಾಲಿಗೆ ತರಚಿದ ಗಾಯಗಳಿದ್ದು, ದ್ವಿಚಕ್ರ ವಾಹನ ಸಹ ಡ್ಯಾಮೇಜ್ ಆಗಿದೆ. ಇದನ್ನೂ ಓದಿ: ಡ್ರಗ್ಸ್ ಪ್ರಕರಣ ಸಂಬಂಧ ಯಾರ ಒತ್ತಡಕ್ಕೂ ಪೊಲೀಸರು ಹಿಂಜರಿಯುವುದಿಲ್ಲ: ಅರಗ ಜ್ಞಾನೇಂದ್ರ

    ಮಂಗಳಮುಖಿಯರ ದಾಳಿಯಿಂದ ತಪ್ಪಿಸಿಕೊಳ್ಳಲು ರಕ್ಷಕ್ ದ್ವಿಚಕ್ರ ವಾಹನವನ್ನು ಫ್ಲೈಓವರ್ ಮೇಲೆ ಬಿಟ್ಟು ಅಲ್ಲಿಂದ ಕಾಲ್ಕಿತ್ತಿದ್ದರು. ಬಳಿಕ ಹೆಬ್ಬಾಳ ಪೊಲೀಸರ ನೆರವಿನಿಂದ ಗಾಡಿಯನ್ನು ತೆಗೆದುಕೊಂಡು ಮನೆಗೆ ವಾಪಸ್ ಆಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಚಂದನವನಕ್ಕೆ ಬುಲೆಟ್ ಪ್ರಕಾಶ್ ಪುತ್ರನ ಎಂಟ್ರಿ

    ಚಂದನವನಕ್ಕೆ ಬುಲೆಟ್ ಪ್ರಕಾಶ್ ಪುತ್ರನ ಎಂಟ್ರಿ

    ಬೆಂಗಳೂರು: ಹಾಸ್ಯ ನಟ ಬುಲೆಟ್ ಪ್ರಕಾಶ್ ಪುತ್ರ ರಕ್ಷಕ್ ಬಣ್ಣದ ಲೋಕಕ್ಕೆ ಎಂಟ್ರಿ ಕೊಡೋದು ಪಕ್ಕಾ ಆಗಿದೆ. ಈಗಾಗಲೇ ಒಂದು ಶೆಡ್ಯೂಲ್ ಕಂಪ್ಲೀಟ್ ಮಾಡಿಕೊಂಡು ಬಂದಿರು ರಕ್ಷಕ್ ಮುಂದಿನ ಕೆಲಸಕ್ಕೆ ಸಜ್ಜಾಗ್ತಿದ್ದಾರೆ.

    ಗುರುಶಿಷ್ಯರು ಹಿರಿಯನಟ ದ್ವಾರಕೀಶ್ ನಟಿಸಿ ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ದಾಖಲಾಗಿರುವ ಸೂಪರ್ ಹಿಟ್ ಸಿನಿಮಾ. ಈ ಟೈಟಲ್‍ನಲ್ಲಿ ಶರಣ್ ಮತ್ತು ತಂಡದವರು ಹೊಸ ಕಥೆ ಹೇಳು ಹೊರಟಿದ್ದಾರೆ. ಜಡೇಶ್ ಗುರುಶಿಷ್ಯರು ಕಥೆಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದು, ತರುಣಿ ಸುಧೀರ್ ಕ್ರಿಯೇಟಿವ್ ಹೆಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶರಣ್ ಶಿಷ್ಯನ ಪಾತ್ರ ಮಾಡ್ತಿದ್ದಾರೆ ರಕ್ಷಕ್. ನೆನಪಿರಲಿ ಪ್ರೇಮ್ ಪುತ್ರ ಏಕಾಂತ್ ಕೂಡ ಗುರುಶಿಷ್ಯರು ಸಿನಿಮಾಗಾಗಿ ಬಣ್ಣ ಹಚ್ಚಿದ್ದಾರೆ. ಇದಲ್ಲದೆ ಬಹಳಷ್ಟು ಕಲಾವಿದರು ಮಕ್ಕಳು ಗುರುಶಿಷ್ಯರು ಸಿನಿಮಾದಲ್ಲಿ ನಟಿಸಿದ್ದಾರೆ ಅನ್ನೊ ಮಾಹಿತಿ ಸಿಕ್ಕಿದೆ.

    ಯಾವ ಯಾವ ಸ್ಟಾರ್ ಮಕ್ಕಳು ಯಾವ ಪಾತ್ರ ಮಾಡುತ್ತಿದ್ದಾರೆ ಅನ್ನೋದು ಈ ತಿಂಗಳ ಅಂತ್ಯದಲ್ಲಿ ಚಿತ್ರತಂಡ ಹೇಳಲಿದೆ. ಮಗನನ್ನ ಹೀರೋ ಮಾಡಬೇಕು ಅಂತ ಬುಲೆಟ್ ಪ್ರಕಾಶ್ ಬಹಳ ಯೋಚನೆ ಮಾಡಿದ್ದರು. ಫೈಟ್, ಡ್ಯಾನ್ಸ್, ಜಿಮ್ ಅಂತ ಆಗಲೇ ತಯಾರಿ ಆರಂಭಿಸಿದ್ದರು. ಆದ್ರೆ ಮಗ ಬಣ್ಣ ಹಚ್ಚುವ ಮೊದಲೇ ಅನಾರೋಗ್ಯದಿಂದ ಬುಲೆಟ್ ಪ್ರಕಾಶ್ ನಿಧನರಾಗಿದ್ದಾರೆ. ಅಪ್ಪನ ಆಸೆಯಂತೆ ಬುಲೆಟ್ ಸ್ನೇಹಿತರ ಮಾರ್ಗದರ್ಶನದಂತೆ ಮೊದಲ ಸಿನಿಮಾಗೆ ರಕ್ಷಕ್ ಬಣ್ಣ ಹಚ್ಚಿದ್ದಾರೆ. ಮುಂದಿನ ತಿಂಗಳು ಗುರುಶಿಷ್ಯರು ಸಿನಿಮಾ ಮತ್ತೊಂದು ಶೆಡ್ಯೂಲ್ ಪ್ಲಾನ್ ಆಗಿದೆ.