Tag: ರಕ್ತಸ್ರಾವ

  • ಆಸ್ಪತ್ರೆಯಿಂದ ಹೆಚ್‌ಡಿಕೆ ಡಿಸ್ಚಾರ್ಜ್; ನಾನು ಕ್ಷೇಮವಾಗಿದ್ದೇನೆ, ಆತಂಕ ಬೇಡ ಎಂದ ಕೇಂದ್ರ ಸಚಿವ

    ಆಸ್ಪತ್ರೆಯಿಂದ ಹೆಚ್‌ಡಿಕೆ ಡಿಸ್ಚಾರ್ಜ್; ನಾನು ಕ್ಷೇಮವಾಗಿದ್ದೇನೆ, ಆತಂಕ ಬೇಡ ಎಂದ ಕೇಂದ್ರ ಸಚಿವ

    – ಆತಂಕ ಬೇಡ, ಆರೋಗ್ಯ ಸಂಪೂರ್ಣ ಕೆಟ್ಟಿಲ್ಲ: ಹೆಚ್‌ಡಿಕೆ

    ಬೆಂಗಳೂರು: ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತಸ್ರಾವ ಉಂಟಾಗಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಇದೀಗ ಚಿಕಿತ್ಸೆ ಪಡೆದು ಜಯನಗರದ ಅಪೋಲೋ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಜೆಪಿ ನಗರದ ತಮ್ಮ ನಿವಾಸಕ್ಕೆ ವಾಪಸ್ಸಾದರು.

    ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಯಾರೂ ಆತಂಕಕ್ಕೆ ಒಳಗಾಗೋದು ಬೇಡ. ಭಗವಂತ, ನಿಮ್ಮ ಆಶೀರ್ವಾದ ಇರುವವರೆಗೆ ಯಾವುದೇ ಅಪಾಯವಿಲ್ಲ. ಮೂರು ಬಾರಿ ವಾಲ್ ರಿಪ್ಲೇಸ್‌ಮೆಂಟ್ ಆಗಿದೆ. ಬ್ಲಡ್ ಥಿನ್ನರ್ ತೆಗೆದುಕೊಳ್ಳುತ್ತೇನೆ. ಒತ್ತಡಗಳು ಜಾಸ್ತಿಯಾದಾಗ ಮೂಗಿನಿಂದ ರಕ್ತಸ್ರಾವ ಆಗೋದು ಸಹಜ. ಕೆಲಸದ ಒತ್ತಡ ಕಡಿಮೆ ಮಾಡಿಕೊಳ್ಳಿ ಎಂದು ವೈದ್ಯರು ಸಲಹೆ ನೀಡಿದ್ದಾರೆ. ವಿಶ್ರಾಂತಿ ತೆಗೆದುಕೊಳ್ಳುವುದು ಸೂಕ್ತ ಎಂದು ಡಾಕ್ಟರ್ ಹೇಳಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ಮುಡಾ ಹಗರಣ | ಸಿಎಂ ರಾಜೀನಾಮೆಗೆ ಆಗ್ರಹಿಸಿ ಆ.3ರಿಂದ ಬಿಜೆಪಿ-ಜೆಡಿಎಸ್ ಪಾದಯಾತ್ರೆ

    ಕೇಂದ್ರದಿಂದ ರಾಜ್ಯಕ್ಕೆ, ಜನರಿಗೆ ಕೊಡುಗೆ ಕೊಡಬೇಕು. ನನ್ನ ಆರೋಗ್ಯ ಸಂಪೂರ್ಣ ಕೆಟ್ಟಿಲ್ಲ. ಪಾದಯಾತ್ರೆಗೆ ಇನ್ನೂ ಒಂದು ವಾರ ಇದೆ. ಆಮೇಲೆ ನೋಡೋಣ. ಅಂತಹ ಸಂದರ್ಭ ಬಂದರೆ ನಿಖಿಲ್ ಪಾದಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಸೋಮವಾರ ರಾಜ್ಯಸಭೆಯಲ್ಲಿ ಕಾವೇರಿ ನೀರಿನ ಪ್ರಸ್ತಾಪ ಬಂದೇ ಬರುತ್ತದೆ. ತಮಿಳುನಾಡಿನ ಬೇರೆ ಬೇರೆ ಪಕ್ಷದ ನಾಯಕರು ದೇವೇಗೌಡರ ಭಾಷಣಕ್ಕೆ ಹಲವು ವರ್ಷಗಳಿಂದ ಅಡ್ಡಿಪಡಿಸುತ್ತಾ ಬರುತ್ತಿದ್ದಾರೆ. ನಾನು ಈ ಸಂದರ್ಭ ಅವರ ಜೊತೆ ಇರಬೇಕು ಅನ್ನೋದು ನನ್ನ ಆಸೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹೆಚ್‌ಡಿಕೆಗೆ ದಿಢೀರ್‌ ರಕ್ತಸ್ರಾವವಾಗಲು ಕಾರಣವೇನು? – ಬ್ಲಡ್‌ ಥಿನ್ನರ್‌ ಔಷಧಿ ತೆಗೆದುಕೊಳ್ಳುತ್ತಿದ್ದದ್ದು ಏಕೆ?

    ಹೆಚ್‌ಡಿಕೆಗೆ ಏನಾಗಿತ್ತು?
    ಮುಡಾ ಅಕ್ರಮವನ್ನು ಖಂಡಿಸಿ ರಾಜ್ಯ ಸರ್ಕಾರದ (Karnataka Govt) ವಿರುದ್ಧ ಮೈಸೂರಿನಿಂದ ಪಾದಯಾತ್ರೆ ಹಮ್ಮಿಕೊಳ್ಳಲು ಬೆಂಗಳೂರಿನ ಖಾಸಗಿ ಹೋಟೆಲ್‌ (Private Hotel) ಒಂದರಲ್ಲಿ ಬಿಜೆಪಿ-ಜೆಡಿಎಸ್‌ ನಾಯಕರು (BJP JDS Leader) ಜಂಟಿಯಾಗಿ ಸಭೆ ನಡೆಸಿದ್ದರು. ಸಭೆಯಲ್ಲಿ ಹೆಚ್‌.ಡಿ ಕುಮಾರಸ್ವಾಮಿ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ ವಿಜಯೇಂದ್ರ, ವಿಪಕ್ಷ ನಾಯಕ ಆರ್‌. ಅಶೋಕ್‌ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು. ಸಭೆಯ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತಸ್ರಾವ ಉಂಟಾಯಿತು. ಕೂಡಲೇ ಅವರನ್ನು ನಗರದ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇದನ್ನೂ ಓದಿ: ಕೇಂದ್ರ ಸಚಿವ ಹೆಚ್‌ಡಿಕೆಗೆ ಮೂಗಿನಿಂದ ‌ದಿಢೀರ್‌ ರಕ್ತಸ್ರಾವ – ಆಸ್ಪತ್ರೆಗೆ ಕರೆದೊಯ್ದ ಸಿಬ್ಬಂದಿ

  • ಶೂಟಿಂಗ್ ವೇಳೆ ಮೂಗಿನಲ್ಲಿ ರಕ್ತಸ್ರಾವ – ನಟಿ ಹಿಮಾಂಶಿ ಆಸ್ಪತ್ರೆಗೆ ದಾಖಲು

    ಶೂಟಿಂಗ್ ವೇಳೆ ಮೂಗಿನಲ್ಲಿ ರಕ್ತಸ್ರಾವ – ನಟಿ ಹಿಮಾಂಶಿ ಆಸ್ಪತ್ರೆಗೆ ದಾಖಲು

    ಮೂಗಿನಿಂದ ವಿಪರೀತ ರಕ್ತಸ್ರಾವ ಆದ ಹಿನ್ನೆಲೆಯಲ್ಲಿ ಪಂಜಾಬಿ ನಟಿ, ಗಾಯಕಿ ಹಿಮಾಂಶಿ ಖುರಾನಾ ಆಸ್ಪತ್ರೆಗೆ ದಾಖಲಾಗಿದ್ದಾರೆ. ರೊಮೇನಿಯಾದಲ್ಲಿ ಅವರು ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಇದ್ದಕ್ಕಿದ್ದಂತೆ ಮೂಗಿನಿಂದ ರಕ್ತ ಸುರಿಯಲು ಶುರುವಾಯಿತು. ಅದು ನಿಲ್ಲದೇ ಇರುವ ಕಾರಣಕ್ಕಾಗಿ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಈಗ ಅವರಿಗೆ ಅಗತ್ಯ ಚಿಕಿತ್ಸೆ ನೀಡಲಾಗುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

    ರೊಮೇನಿಯಾದಲ್ಲಿ ಇವರ ನಟನೆಯ ‘ಫಟ್ಟೋ ದೇ ಯಾರ್ ಬಡೇ ನೆ’ ಸಿನಿಮಾದ ಶೂಟಿಂಗ್ ನಡೆಯುತ್ತಿತ್ತು. ಅಲ್ಲಿ ತೀವ್ರ ಶೀತದ ವಾತಾವರಣವಿತ್ತು. ಅಲ್ಲದೇ, ಅದು ಮಳೆಯಲ್ಲಿ ಹಾಡಿನ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆಯಲ್ಲಿ ಹಿಮಾಂಶಿ ಜ್ವರದಿಂದ ಬಳಲುತ್ತಿದ್ದರು. ಆದರೂ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರಿಂದ ಮೂಗಿನಿಂದ ರಕ್ತಸಾವ್ರ ಶುರುವಾಗಿದೆ. ಇದನ್ನೂ ಓದಿ: ಪಾಕಿಸ್ತಾನದ ಹಲವೆಡೆ ಸ್ಫೋಟ – 5 ಸಾವು, 10 ಮಂದಿಗೆ ಗಾಯ

    ಹಿಮಾಂಶಿ ಕೇವಲ ಗಾಯಕಿ ಮತ್ತು ನಟಿ ಮಾತ್ರವಲ್ಲ ಪಂಜಾಬಿ ಬಿಗ್ ಬಾಸ್ ಶೋನಲ್ಲೂ ಅವರು ಸ್ಪರ್ಧಿಯಾಗಿ ಭಾಗಿಯಾಗಿದ್ದರು. ಇದೇ ಸಮಯದಲ್ಲೇ ಮತ್ತೋರ್ವ ಸ್ಪರ್ಧಿ ಆಸಿಮ್ ರಿಯಾಜ್ ಜೊತೆ ಅವರು ಡೇಟಿಂಗ್ ಮಾಡುತ್ತಿದ್ದರು ಎಂದು ಹೇಳಲಾಗಿತ್ತು. ಹಲವು ವಿಚಾರಗಳಿಂದಾಗಿ ಅವರು ವಿರೋಧಿಗಳನ್ನೂ ಕಟ್ಟಿಕೊಂಡಿದ್ದರು. ಆ ವಿರೋಧಿಗಳು ಇವರ ಕಾರು ಮೇಲೆ ಕಲ್ಲು ತೂರಿದ್ದರು.

    Live Tv
    [brid partner=56869869 player=32851 video=960834 autoplay=true]

  • ಬಿಗ್ ಬಿ ಅಮಿತಾಭ್ ಬಚ್ಚನ್ ಕಾಲಿಂದ ರಕ್ತಸ್ರಾವ: ಆತಂಕದಲ್ಲಿತ್ತು ಕುಟುಂಬ

    ಬಿಗ್ ಬಿ ಅಮಿತಾಭ್ ಬಚ್ಚನ್ ಕಾಲಿಂದ ರಕ್ತಸ್ರಾವ: ಆತಂಕದಲ್ಲಿತ್ತು ಕುಟುಂಬ

    ಬಾಲಿವುಡ್ ಖ್ಯಾತ ನಟ ಅಮಿತಾಭ್ ಬಚ್ಚನ್ (Amitabh Bachchan) ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಸೆಟ್ ನಲ್ಲಿ ಅವಘಡ ನಡೆದಿದ್ದು, ಕಾಲಿನಿಂದ ತೀವ್ರ ರಕ್ತಸ್ರಾವವಾಗಿದೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಗಾಯಕ್ಕೆ (Injury) ಹೊಲಿಗೆ ಹಾಕಿ ಚಿಕಿತ್ಸೆ ನೀಡಿದ್ದಾರೆ ವೈದ್ಯರು. ಸದ್ಯ ಅಮಿತಾಭ್ ಆರೋಗ್ಯವಾಗಿದ್ದು, ಮನೆಯಲ್ಲಿ ರೆಸ್ಟ್ ಮಾಡುತ್ತಿದ್ದಾರೆ.

    ಕೌನ್ ಬನೇಗಾ ಕರೋಡ್ ಪತಿ ಶೋ ಶೂಟಿಂಗ್ ನಲ್ಲಿ (Shooting) ಭಾಗಿಯಾಗಿದ್ದ ಅಮಿತಾಭ್, ಚಿತ್ರೀಕರಣ ನಡೆಯುವ ಸ್ಥಳದಲ್ಲಿ ಬಿದ್ದಿದ್ದ ಕಬ್ಬಿಣದ ರಾಡ್ ತುಳಿದಿದ್ದರು ಎಂದು ಹೇಳಲಾಗುತ್ತಿದೆ. ರಾಡ್ ಮೇಲೆ ಬಲವಾಗಿ ಕಾಲು ಇಟ್ಟಿದ್ದರಿಂದ ಅದು ಚುಚ್ಚಿ, ರಕ್ತಸ್ರಾವ ಆಗಿದೆ. ರಕ್ತಸ್ರಾವ  (Bleeding)ನಿಲ್ಲದೇ ಇರುವ ಕಾರಣಕ್ಕಾಗಿ ಅವರನ್ನು ಕೂಡಲೇ ಖಾಸಗಿ ಆಸ್ಪತ್ರೆಗೆ (Hospital) ದಾಖಲಿಸಲಾಗಿತ್ತು. ಆಳವಾದ ಗಾಯವಾಗಿದ್ದರಿಂದ ಹೊಲಿಗೆ ಹಾಕಲಾಗಿದೆ. ಇದನ್ನೂ ಓದಿ:ಚೇತನ್ ಕಾಂಟ್ರವರ್ಸಿಗೆ ಪ್ರಗತಿ ರಿಷಬ್ ಶೆಟ್ಟಿ ಪ್ರತಿಕ್ರಿಯೆ

    ಗಾಯಕ್ಕೆ ಹೊಲಿಗೆ ಹಾಕಿದ ನಂತರ ಮತ್ತೆ ಅಮಿತಾಭ್ ಶೂಟಿಂಗ್ ಗೆ ತೆರಳಲು ಸಿದ್ಧರಾಗಿದ್ದರಂತೆ. ಆದರೆ, ಆಯೋಜಕರು ಅದಕ್ಕೆ ಒಪ್ಪದೇ ಮನೆಯಲ್ಲಿ ವಿಶ್ರಾಂತಿ ತಗೆದುಕೊಳ್ಳುವಂತೆ ತಿಳಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಕುಟುಂಬಕ್ಕೆ ಆತಂಕವಾಗಿ , ಪದೇ ಪದೇ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಸದ್ಯ ಅಮಿತಾಭ್ ಆರೋಗ್ಯವಾಗಿದ್ದು ,ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ದುಬೆ ಸತ್ತಿದ್ದು ಪೊಲೀಸರ ಗುಂಡೇಟಿನಿಂದಲ್ಲ – ಮರಣೋತ್ತರ ವರದಿ ಹೇಳಿದ್ದೇನು?

    ದುಬೆ ಸತ್ತಿದ್ದು ಪೊಲೀಸರ ಗುಂಡೇಟಿನಿಂದಲ್ಲ – ಮರಣೋತ್ತರ ವರದಿ ಹೇಳಿದ್ದೇನು?

    ಲಕ್ನೋ: ಪೊಲೀಸ್ ಎನ್‍ಕೌಂಟರ್ ನಲ್ಲಿ ಸಾವನ್ನಪ್ಪಿದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯ ಮರಣೋತ್ತರ ಪರೀಕ್ಷೆ ಬಂದಿದ್ದು, ವರದಿಯಲ್ಲಿ ಆತ ಪೊಲೀಸರ ಗುಂಡೇಟಿನಿಂದ ಸಾನ್ನಪ್ಪಿಲ್ಲ ಎಂದು ತಿಳಿದು ಬಂದಿದೆ.

    ಜುಲೈ 2ರಂದು ರಾತ್ರಿ ಪೊಲೀಸರ ತಂಡ 60 ಪ್ರಕರಣಗಳಲ್ಲಿ ಬೇಕಾಗಿದ್ದ ಆರೋಪಿ ವಿಕಾಸ್ ದುಬೆಯನ್ನು ಬಂಧಿಸಲೆಂದು ದಿಕ್ರು ಗ್ರಾಮಕ್ಕೆ ತೆರಳಿತ್ತು. ಈ ವಿಚಾರ ಮೊದಲೇ ತಿಳಿದಿದ್ದ ವಿಕಾಸ್ ದುಬೆ ಬೆಂಬಲಿಗರು ರಸ್ತೆಗೆ ಅಡ್ಡಲಾಗಿ, ಕಲ್ಲು ಹಾಗೂ ಇಟ್ಟಿಗೆಗಳನ್ನು ಇಟ್ಟಿದ್ದರು. ಇದನ್ನು ತೆರವುಗೊಳಿಸಿ ಪೊಲೀಸರು ದುಬೆ ಅವಿತಿದ್ದ ಮನೆಯತ್ತ ಆಗಮಿಸುತ್ತಿದ್ದರು. ಈ ವೇಳೆ ಗುಂಡಿನ ಮಳೆ ಸುರಿಸಿದ್ದಾರೆ. ಪರಿಣಾಮ ಡಿವೈಎಸ್ಪಿ ದೇವೇಂದ್ರ ಮಿಶ್ರಾ, ಮೂವರು ಪೊಲೀಸ್ ಸಬ್ ಇನ್‍ಸ್ಪೆಕ್ಟರ್ ಗಳು ಹಾಗೂ 4 ಪೊಲೀಸರು ಮೃತಪಟ್ಟಿದ್ದರು.

    ಪೊಲೀಸರನ್ನು ಕೊಂದಿದ್ದ ವಿಕಾಸ್ ದುಬೆಯನ್ನು ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ಆದರೆ ದುಬೆ ಸಾವನ್ನಪ್ಪಿದ್ದು, ಪೊಲೀಸರು ಹೊಡೆದ ಗುಂಡೇಟಿನಿಂದಲ್ಲ. ಪೊಲೀಸರು ಗುಂಡು ಹೊಡೆದಾಗ ಆತ ಸತ್ತಿರಲಿಲ್ಲ. ಬದಲಿಗೆ ಪೊಲೀಸರು ಗುಂಡು ಹೊಡೆದಾಗ ಆತನಿಗೆ ತೀವ್ರ ರಕ್ತಸ್ರಾವವಾಗಿದೆ. ಜೊತೆಗೆ ಗುಂಡು ಬಿದ್ದ ತಕ್ಷಣ ಆತ ಶಾಕ್‍ಗೆ ಒಳಗಾಗಿದ್ದಾನೆ. ಹೀಗಾಗಿ ಆತ ರಕ್ತಸ್ರಾವ ಮತ್ತು ಶಾಕ್‍ನಿಂದ ಸಾವನ್ನಪ್ಪಿದ್ದಾನೆ ಎಂದು ಮರಣೋತ್ತರ ಪರೀಕ್ಷೆ ವರದಿ ತಿಳಿಸಿದೆ. ಇದನ್ನು ಓದಿ: 22 ವರ್ಷದ ಹಿಂದೆಯೇ ಪೊಲೀಸರನ್ನು ಓಡಾಡಿಸಿಕೊಂಡು ಹೊಡೆದಿತ್ತು ದುಬೆ ಫ್ಯಾಮಿಲಿ

    ಎಂಟು ಪೊಲೀಸರನ್ನು ಹತ್ಯೆ ಮಾಡಿದ್ದ ಗ್ಯಾಂಗ್‍ಸ್ಟರ್ ವಿಕಾಸ್ ದುಬೆಯನ್ನು ಜುಲೈ 10ರಂದು ಮುಂಜಾನೆ ಉತ್ತರಪ್ರದೇಶದ ಪೊಲೀಸರು ಎನ್‍ಕೌಂಟರ್ ಮಾಡಿದ್ದರು. ವಿಕಾಸ್ ದುಬೆಯನ್ನು ಬಂಧಿಸಿ ಉತ್ತರ ಪ್ರದೇಶದ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ಮಧ್ಯ ಪ್ರದೇಶದಿಂದ ಕಾನ್ಪುರಕ್ಕೆ ವಾಪಸ್ ಕರೆತರಲಾಗುತ್ತಿತ್ತು. ಆದರೆ ಕಾನ್ಪುರದ ಬಾರ್ರಾ ಪೊಲೀಸ್ ವಲಯಕ್ಕೆ ತಲುಪುತ್ತಿದ್ದಂತೆ ವಿಕಾಸ್ ದುಬೆ ಕುಳಿತಿದ್ದ ವಾಹನವು ಭಾರೀ ಮಳೆಯಿಂದಾಗಿ ರಸ್ತೆಯಲ್ಲಿ ಪಲ್ಟಿಯಾಗಿದೆ.

    ಆಗ ಪೊಲೀಸರು ವಿಕಾಸ್‍ನನ್ನು ವಾಹನದಿಂದ ಹೊರಗೆ ಎಳೆದುಕೊಂಡಿದ್ದಾರೆ. ಈ ವೇಳೆ ಆರೋಪಿ ಗಾಯಗೊಂಡ ಪೊಲೀಸರೊಬ್ಬರಿಂದ ಬಂದೂಕನ್ನು ಕಿತ್ತುಕೊಂಡು ಪೊಲೀಸರ ಮೇಲೆ ಗುಂಡು ಹಾರಿಸಲು ಯತ್ನಿಸಿದ್ದಾನೆ. ಆಗ ಪೊಲೀಸರು ಕೂಡ ಗುಂಡಿನ ದಾಳಿ ಮಾಡಿದ್ದರು. ಈ ಶೂಟೌಟ್‍ನಲ್ಲಿ ಪೊಲೀಸರು ಆರೋಪಿ ವಿಕಾಸ್ ದುಬೆಯನ್ನ ಎನ್‍ಕೌಂಟರ್ ಮಾಡಿದ್ದರು. ಪರಿಣಾಮ ಗ್ಯಾಂಗ್‍ಸ್ಟರ್ ವಿಕಾಸ್ ದುಬೆ ಎನ್‍ಕೌಂಟರ್ ಗೆ ಬಲಿಯಾಗಿದ್ದ.

  • ಹಣದ ಆಸೆ ತೋರಿಸಿ 6ರ ಬಾಲಕನ ಮೇಲೆ ಅತ್ಯಾಚಾರ!

    ಹಣದ ಆಸೆ ತೋರಿಸಿ 6ರ ಬಾಲಕನ ಮೇಲೆ ಅತ್ಯಾಚಾರ!

    ಬಳ್ಳಾರಿ: ಬಾಲಕಿಯರು, ಯುವತಿಯರ ಮೇಲೆ ಅತ್ಯಾಚಾರ ಮಾಡಿರುವ ಸುದ್ದಿಯನ್ನು ನೀವೂ ಕೇಳಿರುತ್ತೀರಿ. ಆದ್ರೆ ಇಲ್ಲೊಬ್ಬ ಕಾಮುಕ ಪಿಶಾಚಿ ಆರು ವರ್ಷದ ಬಾಲಕನ ಮೇಲೆಯೇ ಅತ್ಯಾಚಾರ ಮಾಡಿದ ಘಟನೆ ನಡೆದಿದೆ.

    ಇಂತಹ ವಿಲಕ್ಷಣ ಘಟನೆ ಹೂವಿನಹಡಗಲಿ ತಾಲೂಕಿನಲ್ಲಿ ನಡೆದಿದೆ. ಆರು ವರ್ಷದ ಬಾಲಕನೊಬ್ಬನ ಮೇಲೆ ಅದೇ ಗ್ರಾಮದ ಬಿಕ್ಯಾನಾಯ್ಕ ಎನ್ನುವ ಕಾಮುಕ ಕೃತ್ಯ ಎಸಗಿದ್ದಾನೆ.

    ಹಣದ ಆಸೆ ತೋರಿಸಿ ಬಾಲಕನನ್ನು ಅತ್ಯಾಚಾರ ಮಾಡಿರುವುದಾಗಿ ಬಾಲಕನ ಪೋಷಕರು ಆರೋಪಿಸಿದ್ದಾರೆ. ಈ ಘಟನೆ ಸೋಮವಾರ ನಡೆದಿದ್ದು, ಬಾಲಕನ ಹಿಂಭಾಗದಲ್ಲಿ ರಕ್ತಸ್ರಾವ ಆಗಿದ್ದನ್ನು ಪೋಷಕರು ಗಮನಿಸಿದಾಗ ಪ್ರಕರಣ ಬೆಳಕಿಗೆ ಬಂದಿದೆ.

    ಘಟನೆಯ ಕುರಿತು ಹೂವಿನಹಡಗಲಿ ಠಾಣೆಯಲ್ಲಿ ದೂರು ದಾಖಲಾಗಿದ್ದು, ಬಾಲಕನಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ಬಳಿಕ ಆರೋಪಿ ಬಿಕ್ಯಾನಾಯ್ಕ್ ಪರಾರಿಯಾಗಿದ್ದು, ಸದ್ಯ ಆರೋಪಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.