Tag: ರಕುಲ್ ಪ್ರೀತ್ ಸಿಂಗ್

  • ಡ್ರಗ್ಸ್ ಸುಳಿಯಲ್ಲಿ ಸಾರಾ, ರಕುಲ್ ಪ್ರೀತ್ ಸಿಂಗ್ – ಎನ್‍ಸಿಬಿ ಸಮನ್ಸ್

    ಡ್ರಗ್ಸ್ ಸುಳಿಯಲ್ಲಿ ಸಾರಾ, ರಕುಲ್ ಪ್ರೀತ್ ಸಿಂಗ್ – ಎನ್‍ಸಿಬಿ ಸಮನ್ಸ್

    -ಶುರುವಾಯ್ತು ಬಿಟೌನ್‍ನಲ್ಲಿ ಢವ ಢವ
    -ಚೆಲುವೆಯರಿಗೆ ಕಂಟಕವಾಗುತ್ತಾ ರಿಯಾ ಹೇಳಿಕೆ?

    ಮುಂಬೈ: ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‍ಸಿಬಿ) ಬಾಲಿವುಡ್ ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್ ಸೇರಿದಂತೆ ಕಲೆವರಿಗೆ ಸಮನ್ಸ್ ನೀಡಿದೆ. ವಿಚಾರಣೆ ವೇಳೆ ನಟಿ ರಿಯಾ ಚಕ್ರವರ್ತಿ ನೀಡಿರುವ ಹೇಳಿಕೆಯನ್ನಾಧರಿಸಿ ಸಮನ್ಸ್ ನೀಡಲಾಗಿದೆ ಎಂದು ವರದಿಯಾಗಿದೆ.

    ಡಿಸೈನರ್ ಸಿಮೋನ್ ಖಂಬಟ್ಟಾ, ಸುಶಾಂತ್ ಗೆಳತಿ, ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ನಿರ್ಮಾಪಕ ಮುಕೇಶ್ ಛಾಬ್ರಾಗೆ ಎನ್‍ಸಿಬಿ ಸಮನ್ಸ್ ನೀಡಿದೆ. ವಿಚಾರಣೆ ವೇಳೆ ಪಾರ್ಟಿಗಳಲ್ಲಿ ಬಾಲಿವುಡ್ ಐವರು ಸೆಲೆಬ್ರಿಟಿಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ವಿಚಾರವನ್ನ ರಿಯಾ ಹೊರ ಹಾಕಿದ್ದರು. ರಿಯಾ ತನ್ನ ಹೇಳಿಕೆಯಲ್ಲಿ 25 ಕಲಾವಿದರ ಹೆಸರು ಹೇಳಿದ್ದಾರೆ ಎನ್ನಲಾಗಿದ್ದು, ಶೇ.80ರಷ್ಟು ಬಾಲಿವುಡ್ ಸ್ಟಾರ್ ಗಳು ಡ್ರಗ್ಸ್ ಸೇವನೆ ಮಾಡುತ್ತಿರುವ ಬಗ್ಗೆ ಎನ್‍ಸಿಬಿ ಅನುಮಾನ ವ್ಯಕ್ತಪಡಿಸಿದೆ. 15 ಜನ ಬಿ ಟೌನ್ ಸ್ಟಾರ್ ಗಳು ಮತ್ತು ಉಳಿದವರು ಬಿ ಕೆಟಗರಿ ಕಲಾವಿದರು ಎನ್ನಲಾಗಿದೆ.

    ಡ್ರಗ್ಸ್ ಮತ್ತು ಸುಶಾಂತ್ ಸಿಂಗ್ ರಜಪುತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮುಂಬೈ ಮತ್ತು ಗೋವಾದ ಏಳು ಸ್ಥಳಗಳಲ್ಲಿ ಎನ್‍ಸಿಬಿ ದಾಳಿ ನಡೆಸಿದೆ. ಇತ್ತ ವಿಚಾರಣೆ ವೇಳೆ ಸುಶಾಂತ್ ಹಣದಿಂದಲೇ ಡ್ರಗ್ಸ್ ಖರೀದಿ ಮಾಡುತ್ತಿದ್ದೆ. ಆತನ ಎಲ್ಲ ವ್ಯವಹಾರಗಳನ್ನ ನೋಡಿಕೊಳ್ಳುತ್ತಿರುವ ಬಗ್ಗೆ ರಿಯಾ ಒಪ್ಪಿಕೊಂಡಿದ್ದಾರೆ. ಹಾಗೆ ಡ್ರಗ್ಸ್ ಯಾರು ತರಬೇಕು? ಎಲ್ಲಿ ಖರೀದಿಸಬೇಕು ಎಂಬುದರ ಬಗ್ಗೆ ರಿಯಾ ನಿರ್ಧಾರ ಮಾಡುತ್ತಿದ್ದರು ಎಂದು ಎನ್‍ಸಿಬಿ ನ್ಯಾಯಾಲಯದ ಮುಂದೆ ಹೇಳಿತ್ತು.

    ರಿಯಾ ಚಕ್ರವರ್ತಿ ಜಾಮೀನು ಅರ್ಜಿ ವಜಾಗೊಂಡ ಹಿನ್ನೆಲೆ ಭದ್ರತೆಯ ಕಾರಣಗಳಿಂದ ಜೈಲಿನಲ್ಲಿ ಪ್ರತ್ಯೇಕವಾಗಿ ಒಂದೇ ಕೋಣೆಯಲ್ಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಆತಂಕಕಾರಿ ವಿಚಾರವೆಂದರೆ ಈಕೆ ಬಾಲಿವುಡ್ ಯುವ ನಟ ಸುಶಾಂತ್ ಸಿಂಗ್ ರಜಪೂತ್ ತನಿಖೆಯಿಂದ ಈಗಾಗಲೇ ಗಮನಸೆಳೆದಿದ್ದು, ಈ ಹಿನ್ನೆಲೆಯಲ್ಲಿ ರಿಯಾ ಮೇಲೆ ಸಹ ಕೈದಿಗಳು ಹಲ್ಲೆ ಮಾಡುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ನಟಿಗೆ ಹೆಚ್ಚಿನ ಭದ್ರತೆ ಒದಗಿಸಲಾಗಿದ್ದು, ಮೂರು ಶಿಫ್ಟ್ ನಲ್ಲಿ ಇಬ್ಬರು ಕಾನ್‍ಸ್ಟೇಬಲ್ ಗಳು ನಟಿಗೆ ರಕ್ಷಣೆ ನೀಡುತ್ತಿದ್ದಾರೆ.

    ಸದ್ಯ ಜೈಲಿನಲ್ಲಿ ರಿಯಾಗೆ ಮಲಗಲು ಚಾಪೆ ನೀಡಲಾಗಿದೆ. ಆದರೆ ಹಾಸಿಗೆ ಮತ್ತು ದಿಂಬು ನೀಡಿಲ್ಲ ಎಂದು ಮೂಲಗಳು ತಿಳಿಸಿವೆ. ಸೆಲ್ ನಲ್ಲಿ ಫ್ಯಾನ್ ಇಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಕೋರ್ಟ್ ಒಪ್ಪಿದರೆ ಟೇಬಲ್ ಫ್ಯಾನ್ ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

  • ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    ಸಾರಾ, ರಾಕುಲ್ ಡ್ರಗ್ ಸೇವಿಸ್ತಿದ್ದಾರೆ – ಬಾಲಿವುಡ್‍ನಲ್ಲಿ ಬಿರುಗಾಳಿ ಎಬ್ಬಿಸಿದ ರಿಯಾ

    – ಬಾಲಿವುಡ್‍ನಲ್ಲಿ ಶೇ.80 ಜನ ಡ್ರಗ್ ಅಡಿಕ್ಟ್ಸ್

    ಮುಂಬೈ: ನನ್ನ ಜೊತೆ ನಟಿಯರಾದ ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್ ಕೂಡ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದರು ಎಂದು ನಟಿ ರಿಯಾ ಚಕ್ರವರ್ತಿ ಎನ್‍ಸಿಬಿ ತನಿಖೆ ವೇಳೆ ಒಪ್ಪಿಕೊಂಡಿದ್ದಾಳೆ ಎಂದು ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿವೆ.

    ಡ್ರಗ್ ಮಾಫಿಯಾ ಪ್ರಕರಣ ಇಡೀ ಭಾರತ ಚಿತ್ರರಂಗಕ್ಕೆ ದೊಡ್ಡ ತಲೆನೋವಾಗಿ ತೋರುತ್ತಿದೆ. ದಿನಕ್ಕೊಂದು ನಟಿಮಣಿಯರ ಹೆಸರು ಈಗ ಈ ಪ್ರಕರಣದಲ್ಲಿ ಕೇಳಿ ಬರುತ್ತಿವೆ. ಬಾಲಿವುಡ್‍ನಲ್ಲಿ ರಿಯಾ ಚಕ್ರವರ್ತಿ ಅರೆಸ್ಟ್ ಆಗಿದ್ದರೆ, ಇತ್ತ ಸ್ಯಾಂಡಲ್‍ವುಡ್‍ನಲ್ಲಿ ನಟಿ ರಾಗಿಣಿ ಮತ್ತು ಸಂಜನಾ ಅರೆಸ್ಟ್ ಆಗಿದ್ದಾರೆ.

    ಸದ್ಯ ನ್ಯಾಯಾಂಗ ಬಂಧನದಲ್ಲಿರುವ ರಿಯಾ ಎನ್‍ಸಿಬಿ ಅಧಿಕಾರಿಗಳ ವಿಚಾರಣೆ ವೇಳೆ ಹಲವು ನಟಿಯರ ಹೆಸರು ಹೇಳಿದ್ದು, ನಟಿಯರಾದ ಸಾರಾ ಅಲಿ ಖಾನ್ ಮತ್ತು ರಕುಲ್ ಪ್ರೀತ್ ಸಿಂಗ್, ಡಿಸೈನರ್ ಸಿಮೋನೆ ಖಂಬಟ್ಟಾ, ಸುಶಾಂತ್ ಸಿಂಗ್ ರಜಪೂತ್ ಅವರ ಸ್ನೇಹಿತೆ ಮತ್ತು ಮಾಜಿ ಮ್ಯಾನೇಜರ್ ರೋಹಿಣಿ ಅಯ್ಯರ್ ಮತ್ತು ಚಲನಚಿತ್ರ ನಿರ್ಮಾಪಕ ಮುಖೇಶ್ ಛಭ್ರಾ ಎಲ್ಲರೂ ಡ್ರಗ್ ತೆಗೆದುಕೊಂಡಿದ್ದಾರೆ ಎಂದು ಬಾಯ್ಬಿಟ್ಟಿದ್ದಾಳೆ ಎಂದು ಟೈಮ್ಸ್ ನೌ ವರದಿ ವರದಿ ಮಾಡಿದೆ.

    ಸಾರಾ ಅಲಿ ಖಾನ್ ನಟ ಸೈಫ್ ಅಲಿ ಖಾನ್ ಪುತ್ರಿಯಾಗಿದ್ದು, ಈಕೆ 2018ರಲ್ಲಿ ತೆರೆಕಂಡ ಕೇದಾರನಾಥ್ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದರು. ಇದರಲ್ಲಿ ಸುಶಾಂತ್ ಸಿಂಗ್ ರಾಜಪೂತ್ ನಾಯಕನಾಗಿ ನಟಿಸಿದ್ದರು. ಈ ವಿಚಾರವಾಗಿ ಎನ್‍ಸಿಬಿ ತನಿಖೆಯಲ್ಲಿ ಮಾಹಿತಿ ನೀಡಿರುವ ರಿಯಾ, ಕೇದಾರನಾಥ್ ಸಿನಿಮಾ ಸಮಯದಲ್ಲಿ ಸಾರಾ ಅಲಿ ಖಾನ್, ಸುಶಾಂತ್ ಮತ್ತು ಅವರ ಸ್ನೇಹಿತರು ಥೈಲ್ಯಾಂಡ್‍ಗೆ ಟ್ರಿಪ್ ಹೋಗಿ 70 ಲಕ್ಷ ಖರ್ಚು ಮಾಡಿಕೊಂಡು ಬಂದಿದ್ದರು ಎಂದು ಹೇಳಿದ್ದಾಳೆ. ಇದನ್ನೂ ಓದಿ: ಜಾಮೀನು ಅರ್ಜಿ ವಜಾ – ರಿಯಾ ಚಕ್ರವರ್ತಿಗೆ ಜೈಲೇ ಗತಿ

    ಈ ಹಿಂದೆ ಮಾತನಾಡಿದ್ದ ನಟ ಸುಶಾಂತ್ ಸಿಂಗ್ ಸ್ನೇಹಿತ ಸ್ಯಾಮ್ಯುಯೆಲ್ ಹಾಕಿಪ್, ಕೇದಾರನಾಥ್ ಸಿನಿಮಾ ಶೂಟಿಂಗ್ ವೇಳೆ ಸಾರಾ ಅಲಿ ಖಾನ್ ಮತ್ತು ಸುಶಾಂತ್ ಪರಸ್ಪರ ಪ್ರೀತಿಸುತ್ತಿದ್ದರು ಎಂದು ಹೇಳಿದ್ದರು. ಈಗ ಈ ವಿಚಾರ ಸಾಮಾಜಿಕ ಜಾಲತಾಣದಲ್ಲೂ ಚರ್ಚೆಯಾಗುತ್ತಿದ್ದು, ಮಗಳನ್ನು ಪ್ರೀತಿಸಿದಕ್ಕೆ ತಂದೆ ಸೈಫ್ ಅಲಿ ಖಾನ್ ಸುಶಾಂತ್‍ಗೆ ಬೆದರಿಕೆ ಹಾಕಿದ್ದರು ಎಂದು ಹೇಳಲಾಗುತ್ತಿದೆ. ಇದನ್ನೂ ಓದಿ: ಡ್ರಗ್ಸ್ ಅಡಿಕ್ಟ್ ಸುಶಾಂತ್‍ನನ್ನು ಪ್ರೀತಿಸಿದ್ದಕ್ಕೆ ಈ ಶಿಕ್ಷೆ: ರಿಯಾ ಪರ ವಕೀಲ

    ಮೂಲಗಳ ಪ್ರಕಾರ ಎನ್‍ಸಿಬಿ ತನಿಖೆ ವೇಳೆ ರಿಯಾ ಚಕ್ರವರ್ತಿ ಡ್ರಗ್ ತೆಗೆದುಕೊಳ್ಳುತ್ತಿದ್ದ ಮತ್ತು ಸಂಗ್ರಹಿಸುತ್ತಿದ್ದ ಹಲವಾರು ಬಾಲಿವುಡ್ ತಾರೆಯರ ಹೆಸರನ್ನು ಬಾಯ್ಬಿಟ್ಟಿದ್ದಾಳೆ ಎನ್ನಲಾಗಿದೆ. ಇದರಲ್ಲಿ ಈಗಾಗಲೇ 15 ಮಂದಿಯ ಮೇಲೆ ಎನ್‍ಸಿಬಿ ಅಧಿಕಾರಿಗಳು ಕಣ್ಣಿಟ್ಟಿದ್ದಾರೆ. ಬಾಲಿವುಡ್‍ನಲ್ಲಿ 80% ಜನ ಡ್ರಗ್ ತೆಗೆದುಕೊಳ್ಳುತ್ತಾರೆ ಎಂದು ರಿಯಾ ಹೇಳಿದ್ದಾಳೆ. ಇದರಲ್ಲಿ 25 ಮಂದಿಗೆ ಎನ್‍ಸಿಬಿ ಸಮನ್ಸ್ ನೀಡಲು ಸಿದ್ಧತೆ ನಡೆಸಿದೆ. ವಿಚಾರಣೆ ವೇಳೆ ತಾನು ತಪ್ಪು ಮಾಡಿದ್ದನ್ನು ಒಪ್ಪಿಕೊಂಡಿರುವ ರಿಯಾ, ನನಗೆ ಸುಶಾಂತ್ ಕೂಡ ಆರ್ಥಿಕವಾಗಿ ಸಹಾಯ ಮಾಡುತ್ತಿದ್ದರು ಎಂದು ಹೇಳಿದ್ದಾಳೆ ಎಂದು ವರದಿಯಾಗಿದೆ.

    ಜೂನ್ 14 ರಂದು ಮೃತಪಟ್ಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ತನಿಖೆಗೆ ಸಂಬಂಧಿಸಿದ ಡ್ರಗ್ಸ್ ಆರೋಪದ ಮೇಲೆ ನಟಿ ರಿಯಾ ಚಕ್ರವರ್ತಿಯನ್ನು ಮಂಗಳವಾರ ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಸಾವನ್ನಪ್ಪಿದ ನಟ ಸುಶಾಂತ್‍ಗೆ ರಿಯಾ ಚಕ್ರವರ್ತಿ ಗಾಂಜಾ ಸೇವನೆ ಮಾಡಲು ಗಾಂಜಾ ಖರೀದಿಸುತ್ತಿದ್ದಳು ಎಂಬ ಆರೋಪದ ಮೇಲೆ ಎನ್‍ಸಿಬಿ ರಿಯಾಳನ್ನು ಅರೆಸ್ಟ್ ಮಾಡಿತ್ತು. ನಂತರ ಆಕೆ ಸ್ಥಳೀಯ ಕೋರ್ಟಿನಲ್ಲಿ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಳು ಅದು ಕೂಡ ವಜಾಗೊಂಡಿತ್ತು. ಮತ್ತೆ ಮುಂಬೈ ಕೋರ್ಟಿಗೆ ಆಕೆ ಅರ್ಜಿ ಸಲ್ಲಿಸಿದ್ದಳು.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ವಾದವನ್ನು ಆಲಿಸಿದ್ದ ಕೋರ್ಟ್, ಶುಕ್ರವಾರಕ್ಕೆ ತೀರ್ಪನ್ನು ಕಾಯ್ದಿರಿಸಿತ್ತು. ಶುಕ್ರವಾರ ಈ ತೀರ್ಪು ಬಂದಿದ್ದು, ರಿಯಾ ಮತ್ತು ಆಕೆಯ ಸಹೋದರ ಶೌವಿಕ್ ಚಕ್ರವರ್ತಿ ಸೇರಿದಂತೆ ಎಂಟು ಮಂದಿ ಆರೋಪಿಗಳ ಜಾಮೀನು ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಈ ಮೂಲಕ ಮತ್ತೆ ಸೆಪ್ಟೆಂಬರ್ 22ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸದ್ಯ ರಿಯಾ ಬೈಕುಲ್ಲಾ ಜೈಲಿನಲ್ಲಿ ಇದ್ದಾಳೆ.

  • ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಧರಿಸಿ ಬಂದ ನಟಿ

    ಪಿಪಿಇ ಕಿಟ್, ಗ್ಲೌಸ್, ಮಾಸ್ಕ್ ಧರಿಸಿ ಬಂದ ನಟಿ

    ಮುಂಬೈ: ಕೊರೊನಾ ಆತಂಕದ ಹಿನ್ನೆಲೆ ಬಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ಮುಂಬೈ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದಾರೆ. ನಟಿಯ ಫೋಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

    ಅನ್‍ಲಾಕ್ ಆಗಿದ್ದರಿಂದ ದೇಶಿಯ ವಿಮಾನಗಳ ಹಾರಾಟಕ್ಕೆ ಷರತ್ತುಬದ್ಧ ಅನುಮತಿ ನೀಡಲಾಗಿದೆ. ಹಾಗಾಗಿ ಪ್ರಯಾಣಿಕರು ಸಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡು ಪ್ರಯಾಣಿಸುತ್ತಿದ್ದಾರೆ. ಬಾಲಿವುಡ್ ತಾರೆಯರು ಸಹ ದಿಢೀರ್ ಲಾಕ್‍ಡೌನ್ ಘೋಷಣೆ ಆಗಿದ್ದರಿಂದ ಇದ್ದ ಸ್ಥಳದಲ್ಲಿಯೇ ಲಾಕ್ ಆಗಿದ್ದರು. ವಿಮಾನ ಸಂಚಾರಕ್ಕೆ ಅನುಮತಿ ಸಿಕ್ಕ ಹಿನ್ನೆಲೆಯಲ್ಲಿ ಪ್ರಯಾಣಿಸುತ್ತಿದ್ದಾರೆ.

    ನಟಿ ರಕುಲ್ ಸಹ ಮುಂಬೈನಿಂದ ದೆಹಲಿಗೆ ತೆರಳಿದ್ದಾರೆ ಎಂದು ವರದಿಯಾಗಿದೆ. ಕೊರೊನಾ ಆತಂಕದ ಹಿನ್ನೆಲೆ ಮನೆಯಿಂದಲೇ ರಕುಲ್ ಪಿಪಿಇ ಕಿಟ್, ಮಾಸ್ಕ್, ಗ್ಲೌಸ್ ಧರಿಸಿ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ. ಬುಧವಾರ ರಕುಲ್ ಸಿಂಗ್ ಜಾಗಿಂಗ್ ವಿಡಿಯೋ ವೈರಲ್ ಆಗಿತ್ತು.

    https://www.instagram.com/p/CBSYAXknskv/

    https://www.instagram.com/p/CBSTiTBHdNd/

  • ಈಗ ನನಗೆ ಪ್ರಿಯಕರ ಬೇಕು: ನಟಿ ರಕುಲ್

    ಈಗ ನನಗೆ ಪ್ರಿಯಕರ ಬೇಕು: ನಟಿ ರಕುಲ್

    ಹೈದರಾಬಾದ್: ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಈಗ ನನಗೆ ಪ್ರಿಯಕರ ಬೇಕು ಎಂದು ಹೇಳಿದ್ದಾರೆ.

    ಇತ್ತೀಚೆಗೆ ರಕುಲ್ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಈ ವೇಳೆ ಅವರಿಗೆ ರಿಲೇಷನ್‍ಶಿಪ್ ಬಗ್ಗೆ ಪ್ರಶ್ನಿಸಲಾಯಿತು. ಆಗ ಅವರು “ಈಗ ನನಗೆ ಪ್ರಿಯಕರ ಬೇಕು” ಎಂದಿದ್ದಾರೆ. ಈ ಮೂಲಕ ಅವರು ಮದುವೆಯಾಗುವ ಸೂಚನೆ ಕೊಟ್ಟಿದ್ದು, ಗೆಳೆಯನ ಹುಡುಕಾಟದಲ್ಲಿದ್ದಾರೆ.

    ಎಲ್ಲರೂ ನಾನು ರಿಲೇಷನ್‍ಶಿಪ್ ವಿಷಯದಲ್ಲಿ ದೂರವಿದ್ದೇನೆ ಎಂದುಕೊಂಡಿದ್ದಾರೆ. ಈ ವಿಚಾರ ತಿಳಿದು ನನಗೆ ಭೀತಿ ಉಂಟಾಯಿತು. ಹೀಗಾಗಿ ನಾನು ತುಂಬಾ ದಿನಗಳಿಂದ ಈ ಬಗ್ಗೆ ಯೋಚನೆ ಮಾಡುತ್ತಿದ್ದೇನೆ. ಈಗ ನಾನು ಒಬ್ಬಂಟಿ ಆಗಿದ್ದು, ನನ್ನ ಹುಡುಗನಿಗಾಗಿ ಹುಡುಕಾಟದಲ್ಲಿ ಇದ್ದೇನೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಬಾಹುಬಲಿ ಖ್ಯಾತಿಯ ರಾಣಾ ದಗ್ಗುಬಾಟಿ ಮತ್ತು ರಕುಲ್ ಭೇಟಿ ಆಗುತ್ತಿದ್ದರು. ಆಗ ಇಬ್ಬರು ರಿಲೇಷನ್‍ಶಿಪ್‍ನಲ್ಲಿ ಇದ್ದಾರೆ ಎಂಬ ಗಾಸಿಪ್ ಟಿ-ಟೌನ್‍ನಲ್ಲಿ ಹರಿದಾಡುತ್ತಿತ್ತು. ಆಗ ನಾವಿಬ್ಬರೂ ಸ್ನೇಹಿತರಷ್ಟೇ ಎಂದು ರಕುಲ್ ಸ್ಪಷ್ಟನೆ ನೀಡಿದ್ದರು.

    ಸದ್ಯ ರಕುಲ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ರಕುಲ್ `ಮರ್ಜಾವಾ’ ಸಿನಿಮಾ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಕಮಲ್ ಹಾಸನ್-ಸಿದ್ಧಾರ್ಥ್ ಅಭಿನಯದ `ಇಂಡಿಯನ್ 2′ ಮತ್ತು ಶಿವ ಕಾರ್ತಿಕೇಯನ್ ಜೊತೆ ಇನ್ನೂ ಟೈಟಲ್ ನಿಗದಿಯಾಗದ ಸಿನಿಮಾಗಳ ಶೂಟಿಂಗ್‍ನಲ್ಲಿ ಬ್ಯುಸಿ ಆಗಿದ್ದಾರೆ.

  • ಪ್ಯಾಂಟ್ ಜಿಪ್, ಬಟನ್ ಹಾಕದೆ ಫೋಟೋಶೂಟ್ – ಟ್ರೋಲ್ ಆದ ರಕುಲ್

    ಪ್ಯಾಂಟ್ ಜಿಪ್, ಬಟನ್ ಹಾಕದೆ ಫೋಟೋಶೂಟ್ – ಟ್ರೋಲ್ ಆದ ರಕುಲ್

    ಮುಂಬೈ: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ಪ್ಯಾಂಟ್ ಜಿಪ್ ಹಾಕದೆ ಫೋಟೋಶೂಟ್ ಮಾಡಿಸಿದ್ದು, ಈಗ ಈ ಫೋಟೋವನ್ನು ಜನರು ಟ್ರೋಲ್ ಮಾಡುತ್ತಿದ್ದಾರೆ.

    ಇತ್ತೀಚೆಗೆ ರಕುಲ್ ಫೋಟೋಶೂಟ್ ಮಾಡಿಸಿದ್ದಾರೆ. ಈ ಫೋಟೋದಲ್ಲಿ ರಕುಲ್ ಜೀನ್ಸ್ ಹಾಗೂ ಕ್ರಾಪ್ ಟಾಪ್ ಧರಿಸಿದ್ದಾರೆ. ಆದರೆ ರಕುಲ್ ತಾವು ಧರಿಸಿದ್ದ ಜೀನ್ಸ್ ಪ್ಯಾಂಟಿನ ಬಟನ್ ಹಾಗೂ ಜಿಪ್ ಧರಿಸದೆ ಹಾಗೆಯೇ ಕುಳಿತು ಫೋಟೋಶೂಟ್ ಮಾಡಿಸಿದ್ದಾರೆ.

    ರಕುಲ್ ಜೀನ್ಸ್ ಪ್ಯಾಂಟ್‍ನ ಬಟನ್ ಹಾಗೂ ಜಿಪ್ ಧರಿಸದೆ ಮಾಡಿದ ಫೋಟೋಶೂಟ್ ಫೋಟೋವನ್ನು ತಮ್ಮ ಇನ್‍ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ರಕುಲ್ ತಮ್ಮ ಬೋಲ್ಡ್ ನೆಸ್ ತೋರಿಸಿದ್ದಾರೆ. ಇದನ್ನು ನೋಡಿದ ಕೆಲವರು ರಕುಲ್‍ನನ್ನು ಹೊಗಳಿದ್ದಾರೆ. ಮತ್ತೆ ಕೆಲವರು ಟ್ರೋಲ್ ಮಾಡಲು ಶುರು ಆರಂಭಿಸಿದ್ದಾರೆ.

    ರಕುಲ್ ಇನ್‍ಸ್ಟಾಗ್ರಾಂನಲ್ಲಿ ಯಾವಾಗಲೂ ಸಕ್ರಿಯರಾಗಿರುತ್ತಾರೆ. ಇನ್‍ಸ್ಟಾಗ್ರಾಂನಲ್ಲಿ ಯಾವಾಗಲೂ ಹಾಟ್ ಹಾಗೂ ಸೆಕ್ಸಿ ಫೋಟೋ ಹಾಗೂ ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಫೋಟೋ ಹಾಗೂ ವಿಡಿಯೋಗಳು ಅವರ ಅಭಿಮಾನಿಗಳಿಗೆ ಇಷ್ಟವಾಗುತ್ತದೆ.

    ಇತ್ತೀಚೆಗೆ ಹಿಂದಿಯ `ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಅಜಯ್ ದೇವಗನ್ ಜೊತೆ ರಕುಲ್ ಪ್ರೀತ್ ನಟಿಸಿದ್ದರು. ಈ ಚಿತ್ರದ ಹಾಡಿನ ಫೋಟೋವೊಂದರಲ್ಲಿ ರಕುಲ್ ಅವರ ಖಾಸಗಿ ಅಂಗ ಕಾಣುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದು, ಸದ್ಯ ಫೋಟೋ ವೈರಲ್ ಆಗಿತ್ತು.

  • ಖಾಸಗಿ ಅಂಗ ಕಾಣುವಂತೆ ನಟಿಯ ಫೋಟೋ ಎಡಿಟ್

    ಖಾಸಗಿ ಅಂಗ ಕಾಣುವಂತೆ ನಟಿಯ ಫೋಟೋ ಎಡಿಟ್

    ಮುಂಬೈ: ಬಹುಭಾಷಾ ನಟಿ ರಕುಲ್ ಪ್ರೀತ್ ಸಿಂಗ್ ತಮ್ಮ ಆ್ಯಕ್ಟಿಂಗ್ ಹಾಗೂ ಕ್ಯುಟ್ ಹಾಟ್ ಲುಕ್‍ನಿಂದ ಪಡ್ಡೆ ಹುಡುಗರ ಹೃದಯ ಕದ್ದ ಚೆಲುವೆ. ಸದ್ಯ ಹಿಂದಿಯ ‘ದೇ ದೇ ಪ್ಯಾರ್ ದೇ’ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಕುಲ್ ಪ್ರೀತ್ ನಟಿಸುತ್ತಿದ್ದು, ಈ ಚಿತ್ರದ ಹಾಡಿನ ಫೋಟೋವೊಂದರಲ್ಲಿ ರಕುಲ್ ಅವರ ಖಾಸಗಿ ಅಂಗ ಕಾಣುವಂತೆ ಎಡಿಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಕಿಡಿಗೇಡಿಗಳು ಹರಿಬಿಟ್ಟಿದ್ದು, ಸದ್ಯ ಫೋಟೋ ವೈರಲ್ ಆಗಿದೆ.

    ಈ ವೈರಲ್ ಫೋಟೋದಲ್ಲಿ ರಕುಲ್ ಪ್ರೀತ್ ಪಿಂಕ್ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಈ ಫೋಟೋವನ್ನು ಕಿಡಿಗೇಡಿಗಳು ಬದಲಿಸಿ ಖಾಸಗಿ ಭಾಗಗಳು ಕಾಣಿಸುವಂತೆ ಎಡಿಟ್ ಮಾಡಿದ್ದಾರೆ. ಅಲ್ಲದೆ ಈ ಫೋಟೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಸಿನಿಮಾದ ಹಾಡಿನಲ್ಲಿ ಬೋಲ್ಡ್ ಆಗಿ ಹೆಜ್ಜೆ ಹಾಕಿರುವ ನಟಿಗೆ ಮೈ ಮೇಲೆ ಧ್ಯಾನವಿರಲಿಲ್ಲವಾ? ಡ್ಯಾನ್ಸ್ ಮಾಡುವಾಗ ಗೊತ್ತಾಗಿಲ್ವಾ? ಎಂದು ಕಮೆಂಟ್ ಮಾಡಿ ನೆಟ್ಟಿಗರು ಟೀಕಿಸುತ್ತಿದ್ದಾರೆ.

    ಈ ಚಿತ್ರದ ಶರಾಬನ್ ಹಾಡಿಗೆ ರಕುಲ್ ವಿಸ್ಕಿ ಟಾಟಲಿಯನ್ನು ಹಿಡಿದು ಸಖತ್ ಬೋಲ್ಡ್ ಸ್ಟೆಪ್ಸ್ ಹಾಕಿದ್ದಾರೆ. ಚಿತ್ರದಲ್ಲಿ ಅಜಯ್ ದೇವಗನ್‍ಗೆ ಸಾಥ್ ನೀಡಿರುವ ರಕುಲ್, ಅವರ ಮಾಜಿ ಪತ್ನಿ ಪಾತ್ರದಲ್ಲಿ ನಟಿಸಿದ್ದಾರೆ. ಹಾಗೆಯೇ ಶರಾಬನ್ ಹಾಡಿನಲ್ಲಿ ರಕುಲ್ ಜೊತೆ ಅಜಯ್ ಅವರು ಕೂಡ ಹೆಜ್ಜೆ ಹಾಕಿದ್ದು, ಸದ್ಯ ಈ ಹಾಡು ಯುವ ಪೀಳಿಗೆಯ ಮನ ಗೆದ್ದಿದೆ.

  • ಕಾರಿನಲ್ಲಿ ಕೆಲಸ ಮುಗಿಸಿ ಪ್ಯಾಂಟ್ ಹಾಕಲು ಮರೆತ ರಕುಲ್- ಅಭಿಮಾನಿಯ ಟ್ವೀಟ್‍ಗೆ ನಟಿ ತಿರುಗೇಟು

    ಕಾರಿನಲ್ಲಿ ಕೆಲಸ ಮುಗಿಸಿ ಪ್ಯಾಂಟ್ ಹಾಕಲು ಮರೆತ ರಕುಲ್- ಅಭಿಮಾನಿಯ ಟ್ವೀಟ್‍ಗೆ ನಟಿ ತಿರುಗೇಟು

    ಹೈದರಾಬಾದ್: ಟಾಲಿವುಡ್ ನಟಿ ರಕುಲ್ ಪ್ರೀತ್ ಸಿಂಗ್ ಅವರು ಅಭಿಮಾನಿಯ ಟ್ವೀಟ್‍ಗೆ ಖಡಕ್ ಆಗಿ ಪ್ರತಿಕ್ರಿಯೆ ನೀಡಿದ್ದಾರೆ.

    ರಕುಲ್ ಶಾಟ್ಸ್ ಧರಿಸಿ ಕಾರಿನಿಂದ ಹೊರಗೆ ಬರುತ್ತಿದ್ದ ವೇಳೆ ಯಾರೋ ಅವರ ಫೋಟೋವನ್ನು ತೆಗೆದು ಸಾಮಾಜಿಕ ಜಾಲತಾಣದಲ್ಲಿ ಹಾಕಿದ್ದಾರೆ. ಅದಕ್ಕೆ ಅಭಿಮಾನಿ ಒಬ್ಬ ಫೋಟೋ ಬಗ್ಗೆ ಕೆಟ್ಟದಾಗಿ ಟ್ವೀಟ್ ಮಾಡಿ ಟ್ರೋಲ್ ಮಾಡಿದ್ದಾನೆ. ಭಗತ್ ಎಂಬವನು ತನ್ನ ಟ್ವಿಟ್ಟರಿನಲ್ಲಿ ರಕುಲ್ ಕಾರಿನಿಂದ ಹೊರಗೆ ಬರುತ್ತಿರುವ ಫೋಟೋ ಹಾಕಿ ಅದಕ್ಕೆ, “ಕಾರಿನಲ್ಲಿ ಎಲ್ಲ ಮುಗಿದ ಮೇಲೆ ಆಕೆ ಪ್ಯಾಂಟ್ ಧರಿಸಲು ಮರೆತಿದ್ದಾಳೆ” ಎಂದು ಟ್ವೀಟ್ ಮಾಡಿದ್ದಾನೆ.

    ಭಗತ್ ಟ್ವೀಟ್‍ಗೆ ರಕುಲ್ ಪ್ರತಿಕ್ರಿಯಿಸಿ, “ನಿನ್ನ ತಾಯಿ ಕೂಡ ಕಾರಿನಲ್ಲಿ ಎಲ್ಲ ಸೆಶನ್ ನಡೆಸಿದ್ದಾಳೆ ಎನಿಸುತ್ತಿದೆ. ಹಾಗಾಗಿ ನೀನು ಇಷ್ಟು ಎಕ್ಸ್ ಪರ್ಟ್ ಆಗಿದ್ದೀಯಾ. ನಿನ್ನ ತಾಯಿಗೆ ಈ ಸೆಶನ್ ಮಾಹಿತಿಗಳನ್ನು ಹೊರತುಪಡಿಸಿ ನಿನಗೆ ಸ್ವಲ್ಪ ಬುದ್ದಿ ಹೇಳಿಕೊಡು ಎಂದು ಕೇಳಿಕೊಳ್ಳುತ್ತೇನೆ. ನಿಮ್ಮಂತಹ ಜನರು ಇರುವವರೆಗೂ ಮಹಿಳೆಯರಿಗೆ ಸುರಕ್ಷತೆ ಇಲ್ಲ. ಸಮಾನತೆ ಬಗ್ಗೆ ಚರ್ಚೆ ಮಾಡುವುದರಿಂದ ಮಹಿಳೆಯರಿಗೆ ರಕ್ಷಣೆ ಸಿಗುವುದಿಲ್ಲ” ಎಂದು ಖಡಕ್ ಆಗಿ ಟ್ವೀಟ್ ಮಾಡಿದ್ದಾರೆ.

    ರಕುಲ್ ಅವರ ಈ ಟ್ವೀಟ್‍ಗೆ ಕೆಲವರು ಮೆಚ್ಚುಗೆ ವ್ಯಕ್ತಪಡಿಸಿದರೆ, ಮತ್ತೆ ಕೆಲವರು ಆಕ್ರೋಶ ಹೊರ ಹಾಕಿದ್ದಾರೆ. ಕೆಲವರು ರಕುಲ್ ನೀವು ಆ ವ್ಯಕ್ತಿಗೆ ಒಳ್ಳೆಯ ಪ್ರತಿಕ್ರಿಯೆ ನೀಡಿದ್ದೀರಿ ಎಂದು ನಟಿಯ ಪರವಾಗಿ ಮಾತನಾಡಿದರೆ, ಮತ್ತೆ ಕೆಲವರು ಆತ ಮಾತನಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳುತ್ತೇವೆ. ಆದರೆ ಆತ ಮಾಡಿದ ತಪ್ಪಿಗೆ ನೀವು ಆತನ ತಾಯಿಯ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ರಕುಲ್ ವಿರುದ್ಧ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.

     

    View this post on Instagram

     

    @rakulpreet snapped in Bandra today #instadaily #rakulpreet #spotted #papped #manavmanglani @manav.manglani

    A post shared by Manav Manglani (@manav.manglani) on


    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv