Tag: ರಂದೀಪ್ ಸಿಂಗ್ ಸುರ್ಜೇವಾಲಾ

  • ರಾಹುಲ್ ಕ್ಷಮೆಗೆ ಪಟ್ಟು ಹಿಡಿದ ಶಿರಡಿ ಸಾಯಿಬಾಬಾ ಟ್ರಸ್ಟ್

    ರಾಹುಲ್ ಕ್ಷಮೆಗೆ ಪಟ್ಟು ಹಿಡಿದ ಶಿರಡಿ ಸಾಯಿಬಾಬಾ ಟ್ರಸ್ಟ್

    ಮುಂಬೈ: ಕೇಂದ್ರ ರೈಲ್ವೆ ಮತ್ತು ಕಲ್ಲಿದ್ದಲು ಸಚಿವ ಪಿಯೂಷ್ ಗೋಯಲ್ ಅವರ ಕುರಿತಾಗಿ “ಶಿರಡಿಯ ಪವಾಡಗಳಿಗೆ ಮಿತಿಯಿಲ್ಲ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿರುವುದು ವಿವಾದಕ್ಕೆ ಗ್ರಾಸವಾಗಿದೆ.

    ರಾಜಕೀಯ ಆರೋಪ ಪ್ರತ್ಯಾರೋಪಗಳಿಗೆ ಶಿರಡಿಯನ್ನು ಎಳೆದು ತರುವುದು ನೋವಿನ ಸಂಗತಿ. ದೇಶ ವಿದೇಶಗಳಲ್ಲಿನ ಸಾವಿರಾರು ಶಿರಡಿ ಭಕ್ತರ ಭಾವನೆಗೆ ನೋವುಂಟು ಮಾಡಿದೆ. ಭಕ್ತರ ಪರವಾಗಿ ಇದನ್ನು ಖಂಡಿಸುತ್ತೇವೆ. ಈ ಕುರಿತು ಭಕ್ತರಲ್ಲಿ ಕ್ಷಮೆಯಾಚಿಸುವಂತೆ ರಾಹುಲ್ ಗಾಂಧಿ ಅವರನ್ನು ಶ್ರೀ ಸಾಯಿಬಾಬಾ ಸಂಸ್ಥಾನದ ಅಧ್ಯಕ್ಷ ಸುರೇಶ್ ಹವಾರ್ ಅವರು ಟ್ವೀಟ್ ಮೂಲಕ ಆಗ್ರಹಿಸಿದ್ದಾರೆ.

    ಶಿರಡಿಯ ಪಾವಿತ್ರತೆಯನ್ನು ಗೋಯಲ್ ಅವರು ಹಾಳುಮಾಡುತ್ತಿದ್ದಾರೆ ಎಂದು ರಾಹುಲ್ ಹೇಳಿದ್ದಾರೆ ಅಷ್ಟೇ ಎಂದು ರಾಹುಲ್ ಅವರ ಹೇಳಿಕೆಯನ್ನು ಕಾಂಗ್ರೆಸ್ ವಕ್ತಾರ ರಂದೀಪ್ ಸಿಂಗ್ ಸುರ್ಜೇವಾಲಾ ಸಮರ್ಥಿಸಿಕೊಂಡಿದ್ದಾರೆ. ಜನರ ಹಣವನ್ನು ಲೂಟಿ ಮಾಡಲು ಶಿರಡಿ ಹೆಸರನ್ನು ಗೋಯಲ್ ಅವರು ತಮ್ಮ ಸಂಸ್ಥೆಗಳಿಗೆ ಬಳಸಿದ್ದಾರೆ ಎಂದು ದೂರಿದ್ದಾರೆ.

    ಶಿರಡಿ ಹೆಸರನ್ನು ಯಾವುದೇ ಖಾಸಗಿ ಮತ್ತು ಸಾರ್ವಜನಿಕ ಸಂಸ್ಥೆಗಳಿಗೆ ಬಳಸದಂತೆ ಸಂಸ್ಥಾನದವರು ಸೆಕ್ಯೂರೀಟಿಸ್ ಆಂಡ್ ಎಕ್ಸ್ ಚೆಂಜ್ ಬೋರ್ಡ್ ಆಫ್ ಇಂಡಿಯಾ(ಸೆಬಿ) ಮತ್ತು ಪ್ರಧಾನಿಗಳ ಬಳಿ ಮನವಿ ಮಾಡುವಂತೆ ಹೇಳಿದ್ದಾರೆ.