Tag: ರಂಜಿತ್ ಕುಮಾರ್ ಗೌಡ

  • ಸಿನಿಮಾಗೆ ನಾಯಕಿಯಾದ ‘ಭೂಮಿಗೆ ಬಂದ ಭಗವಂತ’ ಬಾಲನಟಿ

    ಸಿನಿಮಾಗೆ ನಾಯಕಿಯಾದ ‘ಭೂಮಿಗೆ ಬಂದ ಭಗವಂತ’ ಬಾಲನಟಿ

    ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಪ್ರಣೀತಾ ಪಾತ್ರ ಮಾಡುತ್ತಿರುವ ಅಂಕಿತಾ ಜಯರಾವ್ (Ankita Jayaram) ಇದೀಗ ಹಿರಿತೆರೆಗೂ ಕಾಲಿಟ್ಟಿದ್ದಾರೆ. ಕಾಗದ (Kagada) ಹೆಸರಿನ ಸಿನಿಮಾದಲ್ಲಿ ಅವರು ನಾಯಕಿಯಾಗಿ ನಟಿಸುತ್ತಿದ್ದಾರೆ. ಈಗಾಗಲೇ ಸಿನಿಮಾದ ಫಸ್ಟ್ ಲುಕ್ ಕೂಡ ರಿಲೀಸ್ ಆಗಿದೆ.

    ಈ ಹಿಂದೆ ಆ್ಯಪಲ್ ಕೇಕ್ ಎಂಬ ಸಿನಿಮಾ ನಿರ್ದೇಶಿಸಿದ್ದ ರಂಜಿತ್ ಕುಮಾರ್ ಗೌಡರ (Ranjith Kumar Gowda) ಎರಡನೇ ಹೆಜ್ಜೆ ಕಾಗದ. ಮದರಂಗಿ, ವಾಸ್ಕೋಡಿಗಾಮ ಸೇರಿದಂತೆ ಹಲವಾರು ಚಿತ್ರಗಳಲ್ಲಿ ಕೋ ಡೈರೆಕ್ಟರ್ ಆಗಿ ಕೆಲಸ ಮಾಡಿದ್ದ ರಂಜಿತ್ ‘ಆ್ಯಪಲ್ ಕೇಕ್’ ಮೂಲಕ ನಿರ್ದೇಶಕರಾಗಿ ಬಡ್ತಿ ಪಡೆದಿದ್ದರು. ಈಗ ಅವರ ನಿರ್ದೇಶನದ ಎರಡನೇ ಸಿನಿಮಾ ‘ಕಾಗದ’ ಸಿನಿಮಾದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಸ್ಯಾಂಡಲ್ ವುಡ್ ಕ್ಯೂಟ್ ಕಪಲ್ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಫಸ್ಟ್ ಲುಕ್ ಅನಾವರಣ ಮಾಡಿ ಚಿತ್ರತಂಡಕ್ಕೆ ಶುಭಾಶಯ ಕೋರಿದ್ದಾರೆ.

    ಕಾಗದ ಸಿನಿಮಾ ಮೂಲಕ ಬಾಲನಟಿ ಅಂಕಿತಾ ನಾಯಕಿಯಾಗಿ, ಆದಿತ್ಯ (Aditya) ನಾಯಕನಾಗಿ ಸ್ಯಾಂಡಲ್ ವುಡ್ ಗೆ ಪದಾರ್ಪಣೆ ಮಾಡಿದ್ದಾರೆ. ಮಫ್ತಿ ಖ್ಯಾತಿಯ ಬಾಲರಾಜವಾಡಿ, ನೇಹಾ ಪಾಟೀಲ್, ಶಿವಮಂಜು, ಅಶ್ವತ್ಥ್ ನೀನಾಸಂ, ಗೌತಮ್ ತಾರಾಬಳಗದಲ್ಲಿದ್ದಾರೆ. ಕಾಗದ ಪ್ರೇಮಕಥಾ ಹಂದರದ ಚಿತ್ರ. 2005ರ ಸಮಯದಲ್ಲಿ ನಡೆಯುವ ಕಾಲ್ಪನಿಕ ಕಥೆ. ಮೊಬೈಲ್ ಇಲ್ಲದ ಕಾಲಘಟ್ಟದಲ್ಲಿ ಕಾಗದ ಎಷ್ಟು ಮುಖ್ಯ ಪಾತ್ರವಹಿಸಿದೆ ಅನ್ನುವುದು ಚಿತ್ರದ ಕಂಟೆಂಟ್.

     

    ರಂಜಿತ್ ಕುಮಾರ್ ಗೌಡ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಈ ಸಿನಿಮಾಗೆ ಅರುಣ್ ಕುಮಾರ್ ಎ ಬಂಡವಾಳ ಹೂಡಿದ್ದಾರೆ. ಅಮ್ಮ ಸಿನಿ ಕ್ರಿಯೇಷನ್ ನಡಿ ಸಿನಿಮಾ ಮೂಡಿ ಬರಲಿದ್ದು, ಇದೇ ನಿರ್ಮಾಣ ಸಂಸ್ಥೆಯಡಿ ಈ ಹಿಂದೆ ರಗಡ್ ಎಂಬ ಚಿತ್ರ ನಿರ್ಮಾಣವಾಗಿತ್ತು. ಕಾಗದ ಸಿನಿಮಾದ ಬಹುತೇಕ ಶೂಟಿಂಗ್ ಮುಕ್ತಾಯಗೊಂಡಿದ್ದು, ಒಂದು ಹಾಡಿನ ಚಿತ್ರೀಕರಣವಷ್ಟೇ ಬಾಕಿ ಇದೆ. ವೀನಸ್ ನಾಗರಾಜ್ ಮೂರ್ತಿ ಛಾಯಾಗ್ರಹಣ, ಎಸ್ ಪ್ರದೀಪ್ ವರ್ಮಾ ಸಂಗೀತ, ಪವನ್ ಗೌಡ ಸಂಕಲನ, ಭೂಷಣ್ ಕೊರಿಯೋಗ್ರಫಿ ಸಿನಿಮಾಕ್ಕಿದೆ. ಬೇಲೂರು, ಮೂಡಿಗೆರೆ ಭಾಗದಲ್ಲಿ ಕಾಗದ ಸಿನಿಮಾದ ಚಿತ್ರೀಕರದ ಮಾಡಲಾಗಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕಾಡುವ ಕಥೆಯನ್ನು ರುಬ್ಬಿ ತಯಾರಿಸಿದ ಆ್ಯಪಲ್ ಕೇಕ್!

    ಕಾಡುವ ಕಥೆಯನ್ನು ರುಬ್ಬಿ ತಯಾರಿಸಿದ ಆ್ಯಪಲ್ ಕೇಕ್!

    ಬೆಂಗಳೂರು: ನಿಮಗೆಲ್ಲ ಆ್ಯಪಲ್ ಕೇಕ್ ಗೊತ್ತಿಲ್ಲದಿರಲು ಸಾಧ್ಯವಿಲ್ಲ. ಇದೀಗ ಅದೇ ಹೆಸರನ್ನಿಟ್ಟುಕೊಂಡ ಚಿತ್ರ ತಯಾರಾಗಿ ಬಿಡುಗಡೆಯ ಹೊಸ್ತಿಲಲ್ಲಿದೆ. ರಂಜಿತ್ ಕುಮಾರ್ ಗೌಡ ನಿರ್ದೇಶನ ಮಾಡಿರೋ ಈ ಚಿತ್ರವನ್ನು ಅರವಿಂದ್ ಕುಮಾರ್ ಗೌಡ ನಿರ್ಮಾಣ ಮಾಡಿದ್ದಾರೆ.

    ಆ್ಯಪಲ್ ಕೇಕ್ ಎಂಬುದು ಎಲ್ಲರಿಗೂ ಚಿರಪರಿಚಿತವಾಗಿರೋ ಬೇಕರಿ ಐಟಮ್. ರಾಗಿ ಮುದ್ದೆಯ ಜ್ಯೂನಿಯರ್ ವರ್ಷನ್ನಿನಂತೆ ಕಾಣೋ ಇದು ರುಚಿಯಲ್ಲೂ ಭಿನ್ನ. ಇದನ್ನು ಚಪ್ಪರಿಸಿ ತಿನ್ನೋ ಹೆಚ್ಚಿನವರಿಗೆ ಇದನ್ನು ಹೇಗೆ ತಯಾರಿಸುತ್ತಾರೆಂಬ ಅರಿವಿರಲಿಕ್ಕಿಲ್ಲ. ಇದನ್ನು ಬೇರೆ ಬೇರೆ ತಿನಿಸು ಮಾಡೋವಾಗ ಉಳಿದ, ಕೆಲವೊಮ್ಮೆ ಸೇಲಾಗದ ಪದಾರ್ಥಗಳನ್ನು ಸೇರಿಸಿ ಮಾಡಲಾಗುತ್ತದೆ. ಅವೆಲ್ಲವೂ ಒಟ್ಟಾಗಿ ಆ್ಯಪಲ್  ಕೇಕಾಗುತ್ತೆ. ಈ ಚಿತ್ರದಲ್ಲಿ ನಾನಾ ಥರದಲ್ಲಿ ರಿಜೆಕ್ಷನ್ನಿಗೊಳಗಾದ ನಾಲ್ಕು ಪಾತ್ರಗಳ ಸುತ್ತ ಕಥೆ ಸುತ್ತುತ್ತೆ. ಆದ್ದರಿಂದಲೇ ಅದಕ್ಕೆ ಹತ್ತಿರಾದ ಆ್ಯಪಲ್ ಕೇಕ್ ಎಂಬ ಹೆಸರಿಡಲಾಗಿದೆಯಂತೆ. ಪ್ರತೀ ಸೀನುಗಳಲ್ಲಿಯೂ ಈ ಬಗ್ಗೆ ಕ್ಲಾರಿಟಿಯೂ ಸಿಗಲಿದೆಯಂತೆ.

    ಈ ಚಿತ್ರದಲ್ಲಿ ನಾಯಕ ನಾಯಕಿಯೆಂಬ ಮಾಮೂಲು ಸೂತ್ರವಿಲ್ಲ. ಇಲ್ಲೇನಿದ್ದರೂ ಕಥೆಯೇ ನಾಯಕ, ಅದುವೇ ನಾಯಕಿ ಎಂಬುದು ನಿರ್ದೇಶಕರ ಸ್ಪಷ್ಟನೆ. ಕರ್ನಾಟಕದ ನಾನಾ ದಿಕ್ಕಿನಿಂದ ನಾಲ್ಕು ಪಾತ್ರಗಳು ಮಾಯಾ ನಗರಿ ಬೆಂಗಳೂರಿಗೆ ಬಂದು ಸೇರುತ್ತವೆ. ಒಂದೆಡೆ ಸಂಧಿಸುತ್ತವೆ. ಅಲ್ಲಿಂದಲೇ ರೋಚಕ ಕಥೆ ಬಿಚ್ಚಿಕೊಳ್ಳುತ್ತದೆ. ಇದು ಬದುಕಿಗೆ ಹತ್ತಿರವಾದ, ಎಲ್ಲರನ್ನೂ ಕಾಡುವ ವಿಶಿಷ್ಟವಾದ ಕಥೆ ಹೊಂದಿರೋ ಚಿತ್ರ ಅನ್ನುತ್ತಾರೆ ನಿರ್ದೇಶಕ ರಂಜಿತ್.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews