Tag: ರಂಜಿತ್ ಕುಮಾರ್

  • ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್

    ದಾಂಪತ್ಯ ಜೀವನಕ್ಕೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ರಂಜಿತ್

    ‘ಬಿಗ್ ಬಾಸ್’ ಖ್ಯಾತಿಯ ರಂಜಿತ್ (Ranjith) ಇಂದು (ಮೇ 11) ದಾಂಪತ್ಯ ಜೀವನಕ್ಕೆ (Wedding) ಕಾಲಿಟ್ಟಿದ್ದಾರೆ. ಬಹುಕಾಲದ ಗೆಳತಿ ಮಾನಸ ಗೌಡ ಜೊತೆ ಇಂದು ಅದ್ಧೂರಿಯಾಗಿ ಹಸೆಮಣೆ ಏರಿದ್ದಾರೆ. ಇದನ್ನೂ ಓದಿ:Mother’s Day 2025: ಅಮ್ಮನ ಬಗ್ಗೆ ಹೃದಯಸ್ಪರ್ಶಿ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್

    ಮಾನಸ ಜೊತೆಗಿನ ಹಲವು ವರ್ಷಗಳ ಪ್ರೀತಿಗೆ ಇಂದು ಮದುವೆಯ ಮುದ್ರೆ ಒತ್ತಿದ್ದಾರೆ. ದೊಡ್ಡಬಳ್ಳಾಪುರದ ಮೇನ್ ರೋಡ್, ಹೊನ್ನೇನಹಳ್ಳಿಯಲ್ಲಿ ರಂಜಿತ್ ಮದುವೆ ಜರುಗಿದೆ. ಈ ಜೋಡಿಗೆ ತುಕಾಲಿ ಸಂತೋಷ್ ಮತ್ತು ಮಾನಸಾ ದಂಪತಿ, ಗೋಲ್ಡ್ ಸುರೇಶ್, ಯಮುನಾ, ರಜತ್, ರಂಗಾಯಣ ರಘು, ಶೋಭರಾಜ್ ಸೇರಿದಂತೆ ಅನೇಕರು ಭಾಗಿಯಾಗಿ ಶುಭಹಾರೈಸಿದ್ದಾರೆ.ಇದನ್ನೂ ಓದಿ:‘ಯುದ್ಧ ಬೇಡ’ ಎಂದು ಮನವಿ ಮಾಡಿದ ಐಶ್ವರ್ಯಾ ರಾಜೇಶ್- ನೆಟ್ಟಿಗರಿಂದ ತರಾಟೆ

     

    View this post on Instagram

     

    A post shared by Manasa Gowda (@manasam23)

    ಮಾನಸ ಗೌಡ ಅವರು ಫ್ಯಾಷನ್ ಸ್ಟುಡಿಯೋ ಹೊಂದಿದ್ದಾರೆ. ಫ್ಯಾಷನ್ ಡಿಸೈನರ್ ಆಗಿ ಕೆಲಸ ಮಾಡುತ್ತಿದ್ದಾರೆ. ಇನ್ಸ್ಟಾಗ್ರಾಂನಲ್ಲಿ ಪರಿಚಿತರಾದ ಮಾನಸ ಜೊತೆ ರಂಜಿತ್‌ಗೆ ಲವ್ ಆಗಿತ್ತು. ಇದೀಗ ಇಬ್ಬರ ಪ್ರೀತಿ ಮದುವೆಗೆ ಮುನ್ನುಡಿ ಬರೆದಿದೆ.

  • ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಬಿಗ್‌ ಬಾಸ್‌’ ಖ್ಯಾತಿಯ ರಂಜಿತ್‌

    ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ಬಿಗ್‌ ಬಾಸ್‌’ ಖ್ಯಾತಿಯ ರಂಜಿತ್‌

    ‘ಶನಿ’, ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿ ರಂಜಿತ್ ಕುಮಾರ್ (Ranjith Kumar) ಅವರು ಬಹುಕಾಲದ ಗೆಳತಿ ಮಾನಸಾ ಗೌಡ (Manasa Gowda) ಜೊತೆ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ‘ಬಿಗ್ ಬಾಸ್ ಕನ್ನಡ 11’ರ ಸ್ಪರ್ಧಿಗಳು ಸಾಕ್ಷಿಯಾಗಿದ್ದಾರೆ. ಇದನ್ನೂ ಓದಿ:ಸ್ಯಾಂಡಲ್‌ವುಡ್ ಕ್ವೀನ್ ಇಸ್‌ ಬ್ಯಾಕ್- ರಮ್ಯಾಗೆ ಯೋಗರಾಜ್ ಭಟ್ ಡೈರೆಕ್ಷನ್‌

    ಹಲವು ವರ್ಷಗಳಿಂದ ಪ್ರೀತಿಸುತ್ತಿದ್ದ ಮಾನಸಾ ಜೊತೆ ರಂಜಿತ್ ಕುಮಾರ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಗುರುಹಿರಿಯರ ಸಮ್ಮುಖದಲ್ಲಿ ಈ ಕಾರ್ಯಕ್ರಮ ಜರುಗಿದೆ. ಎಂಗೇಜ್‌ಮೆಂಟ್‌ನಲ್ಲಿ ವೈಟ್‌ ಬಣ್ಣದ ಕಾಸ್ಟ್ಯೂಮ್‌ನಲ್ಲಿ ರಂಜಿತ್‌ ಕಾಣಿಸಿಕೊಂಡಿದ್ರೆ, ಮಾನಸಾ ಕ್ರೀಮ್‌ ಕಲರ್‌ ಉಡುಗೆಯಲ್ಲಿ ಮಿಂಚಿದ್ದಾರೆ.

    ರಂಜಿತ್ ಎಂಗೇಜ್‌ಮೆಂಟ್‌ನಲ್ಲಿ ಶಿಶಿರ್, ಭವ್ಯಾ(Bhavya Gowda), ಐಶ್ವರ್ಯಾ, ಮೋಕ್ಷಿತಾ ಪೈ(Mokshitha Pai), ಅನುಷಾ ರೈ ಭಾಗಿಯಾಗಿ ಶುಭಕೋರಿದ್ದಾರೆ. ಸದ್ಯದಲ್ಲೇ ಹೊಸ ಬಾಳಿಗೆ ಕಾಲಿಡಲಿರುವ ರಂಜಿತ್‌ಗೆ ಫ್ಯಾನ್ಸ್ ಕೂಡ ಶುಭಕೋರುತ್ತಿದ್ದಾರೆ.

  • BBK 11: ಐಶ್ವರ್ಯಾ, ರಂಜಿತ್‌ ನಡುವೆ ಸಮ್‌ಥಿಂಗ್‌ ಸಮ್‌ಥಿಂಗ್- ‘ಬಿಗ್‌’ ಮನೆಯಲ್ಲಿ ಹೊಸ ಪ್ರೇಮ ಪುರಾಣ

    BBK 11: ಐಶ್ವರ್ಯಾ, ರಂಜಿತ್‌ ನಡುವೆ ಸಮ್‌ಥಿಂಗ್‌ ಸಮ್‌ಥಿಂಗ್- ‘ಬಿಗ್‌’ ಮನೆಯಲ್ಲಿ ಹೊಸ ಪ್ರೇಮ ಪುರಾಣ

    ಪ್ರತಿ ಸೀಸನಲ್ಲೂ‌ ಒಂದಲ್ಲಾ ಒಂದು ಲವ್ ಸ್ಟೋರಿ ಇದ್ದೇ ಇರುತ್ತದೆ. ಈ ಬಾರಿ ಬಿಗ್ ಬಾಸ್‌ ಶೋ (Bigg Boss Kannada 11) ಶುರುವಾದ್ಮೇಲೆ ಕೇಳಬೇಕಾ? ಇದೀಗ ದೊಡ್ಮನೆಯಲ್ಲಿ ಹೊಸ ಪ್ರೇಮ ಪುರಾಣ ಶುರುವಾಗಿದೆ. ಐಶೂ ಕಣ್ನೋಟಕ್ಕೆ ರಂಜಿತ್ ಕಳೆದುಹೋಗಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದ್ರೆ? ನೀನೇ ಬೇಕು ಅಂತ ಸ್ಪರ್ಧಿ ಐಶ್ವರ್ಯಾ ಸಿಂದೋಗಿಗೆ (Aishwarya Shindogi) ಪ್ರೇಮ ನಿವೇದನೆ ಮಾಡಿದ್ದಾರೆ ರಂಜಿತ್.‌

    ಕಳೆದ 10 ಸೀಸನ್‌ಗಳಲ್ಲಿ ಅದೆಷ್ಟೋ ಪ್ರೇಮ ಕತೆಗಳು ‘ಬಿಗ್ ಬಾಸ್’ ಮನೆಯಲ್ಲಿ ಶುರುವಾಗಿ ಹೊಸ ಬದುಕಿಗೆ ಮುನ್ನುಡಿ ಬರೆದಿದೆ. ಅದರಲ್ಲಿ ಕೆಲವು ಪ್ರೇಮ ಕತೆಗಳು ಅಂತ್ಯವಾಗಿದ್ದು ಇದೆ. ಈ ಬಾರಿ ಐಶ್ವರ್ಯಾ ಮತ್ತು ರಂಜಿತ್ ಇಬ್ಬರೂ ಮುಂದಿನ ದಿನಗಳಲ್ಲಿ ಜಂಟಿಯಾಗೋ ಲಕ್ಷಣ ಕಾಣುತ್ತಿದೆ. ಐಶ್ವರ್ಯಾರನ್ನು ನೋಡಿ ರಂಜಿತ್ ಫುಲ್ ಫ್ಲ್ಯಾಟ್ ಆಗಿದ್ದಾರೆ. ರಂಜಿತ್ (Ranjith Kumar) ನಾಚಿಕೊಳ್ಳುತ್ತಿರೋ ಪರಿ ನೋಡಿ ಅಣ್ಣಂಗೆ ಲವ್ ಆಗಿದೆ ಅಂತ ಮನೆ ಮಂದಿ ಹಾಡು ಹೇಳಲು ಶುರು ಹಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು? ಅಂತೀರಾ. ಇಲ್ಲಿದೆ ಸ್ಟೋರಿ ಬಿಗ್‌ ಬಾಸ್‌ ಮನೆಯಲ್ಲಿನ ಲವ್‌ ಸ್ಟೋರಿ.

    ಬಿಳಿ ಸೀರೆಯುಟ್ಟು ಗೊಂಬೆ ಹಾಗೆ ನಿಂತ ಐಶ್ವರ್ಯಾರನ್ನು ರಂಜಿತ್ ಫುಲ್ ಫಿದಾ ಆಗಿದ್ದಾರೆ. ತಿಂಡಿ ಬೇಕಾ ಅಂತ ಐಶ್ವರ್ಯಾ ಕೇಳಿದ್ದಕ್ಕೆ, ಏನು ಬೇಡ ನೀವೇ ಬೇಕು ಅಂತ ಐಶ್ವರ್ಯಾಗೆ ರಂಜಿತ್ ಕಾಳು ಹಾಕಲು ಶುರು ಮಾಡಿದ್ದಾರೆ. ಸ್ವರ್ಗ ಬೇಕಾ? ನರಕ ಬೇಕಾ? ಅಂತ ಕೇಳಿದ್ರೆ, ನೀವೇ ಬೇಕು ಅಂತ ನಟಿಗೆ ಐಸ್ ಇಡ್ತಿದ್ದಾನೆ ರಂಜಿತ್. ಇದನ್ನೆಲ್ಲಾ ನೋಡಿ ಮನೆ ಮಂದಿ ಇಬ್ಬರ ನಡುವೆ ಸಮ್‌ಥಿಂಗ್ ಸಮ್‌ಥಿಂಗ್ ಶುರುವಾಗಿದೆ ಅಂತಲೇ ಇಬ್ಬರನ್ನೂ ಆಡಿಕೊಳ್ಳಲು ಶುರು ಮಾಡಿದ್ದಾರೆ. ಇದನ್ನೂ ಓದಿ:ವಿಜಯ್ ದಳಪತಿ ಸಿನಿಮಾದಲ್ಲಿ ಬಾಬಿ ಡಿಯೋಲ್- ಗುಡ್ ನ್ಯೂಸ್ ಕೊಟ್ಟ ‘ಕೆವಿಎನ್’ ಸಂಸ್ಥೆ

    ಬಿಗ್ ಬಾಸ್ ಮನೆಯಲ್ಲಿ ಶುರು ಆಗೋ ಪ್ರೇಮ ಕತೆಗಳು ಪರ್ಮನೆಂಟ್ ಆಗಿರೋಲ್ಲ. ಎಲ್ಲರೂ ಅರವಿಂದ್ ಮತ್ತು ದಿವ್ಯಾ ಉರುಡುಗ ಜೋಡಿ ಆಗೋಕೆ ಆಗೋದಿಲ್ಲ ಅಲ್ವಾ? ಅದೇನೇ ಆಗಿರಲಿ ದೊಡ್ಮನೆಯ ಅಸಲಿ ಆಟ ಈಗ ಶುರುವಾಗಿದೆ. ಶೋಗೆ ಅಷ್ಟೇ ಈ ಪ್ರೀತಿ, ಪ್ರೇಮ ಸೀಮಿತ ಆಗಿರುತ್ತಾ? ಆಟ ಮುಗಿದ್ಮೇಲೂ ಪ್ರೀತಿ ಪಯಣ ಮುಂದುವರೆಯುತ್ತಾ? ಅಂತ ಕಾದುನೋಡಬೇಕಿದೆ.

  • ಸೂರ್ಯದೇವ ಪಾತ್ರಧಾರಿಯ ಅಸಲಿ ಕಥೆ!

    ಸೂರ್ಯದೇವ ಪಾತ್ರಧಾರಿಯ ಅಸಲಿ ಕಥೆ!

    ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ‘ಶನಿ’ ಧಾರಾವಾಹಿಯನ್ನು ನೋಡುವವರಿಗೆ ಸೂರ್ಯದೇವನ ಪರಿಚಯ ಇದ್ದೇ ಇರುತ್ತೆ. ಈ ಧಾರಾವಾಹಿಯಲ್ಲಿ ಸೂರ್ಯದೇವ ಪಾತ್ರವನ್ನು ರಂಜಿತ್ ಕುಮಾರ್ ಅವರು ಮಾಡಿದ್ದಾರೆ.

    ಶನಿ ಕಿರುತೆರೆ ಜಗತ್ತಿನ ನಂಬರ್ ಒನ್ ಸೀರಿಯಲ್ ಶೋವಾಗಿದ್ದು, ಪ್ರೇಕ್ಷಕರ ಮನವನ್ನು ಗೆದ್ದಿದೆ. ಇವತ್ತು ಪ್ರೇಕ್ಷಕರ ಮುಂದೆ ಸೂರ್ಯದೇವನಾಗಿ ನಿಲ್ಲುವುದಕ್ಕೆ ರಂಜಿತ್‍ಕುಮಾರ್ ಜೀವನದಲ್ಲಿ ತುಂಬಾ ಕಷ್ಟ ಪಟ್ಟಿದ್ದಾರೆ.

    ಹೈಟ್- ಪರ್ಸನಾಲಿಟಿ ಜೊತೆಗೆ ಟ್ಯಾಲೆಂಟ್ ಇದ್ದರೂ ರಂಜಿತ್‍ ಗೆ ಅವಕಾಶಗಳು ಸಿಗುತ್ತಿರಲಿಲ್ಲ. ಟ್ವಿಕ್ಲಿಂಗ್ ಬಜಾರ್ ನಲ್ಲಿ ಸಣ್ಣದೊಂದು ಚಾನ್ಸ್ ಗಾಗಿ ಸಿಕ್ಕಾಪಟ್ಟೆ ಸೈಕಲ್ ಹೊಡೆದಿದ್ದಾರೆ. ರಂಜಿತ್ ತೀರಾ ಕಡುಬಡತನದ ಮಗನೇನು ಅಲ್ಲ. ಇಂಡಿಗೋ ಏರ್ ಲೈನ್ಸ್ ಕಂಪನಿಯಲ್ಲಿ ಒಳ್ಳೆಯ ಕೆಲಸ ಮಾಡುತ್ತಿದ್ದರು. ಆದರೆ ರಂಜಿತ್ ಅವರಿಗೆ ಸಿನಿಮಾದಲ್ಲಿ ಅಭಿನಯಿಸುವ ಕನಸಿತ್ತು.

    ರಂಜಿತ್‍ ಕುಮಾರ್ ಮಾತು
    ನಾನು ಬಾಲ್ಯದಿಂದಲೂ ಕರಾಟೆ ಕಲಿತ್ತಿದ್ದೇನೆ. ಆದರೆ ನನಗೆ ಸಿನಿಮಾದಲ್ಲಿ ಮಾಡಬೇಕೆಂದು ಆಸೆ ಇರಲಿಲ್ಲ. ನನಗೆ ಏರ್ ಲೈನ್ಸ್ ನಲ್ಲಿ ಕೆಲಸ ಮಾಡಬೇಕೆಂಬ ಆಸೆ ಇತ್ತು. ಅದೇ ರೀತಿ ಇಂಡಿಗೋ ಏರ್ ಲೈನ್ಸ್ ಕಂಪನಿಯಲ್ಲಿ ಕೆಲಸ ಸಿಕ್ಕಿತ್ತು. ಎರಡು ವರ್ಷ ಅಲ್ಲಿಯೇ ಇದ್ದೆ. ನಮ್ಮ ಅಕ್ಕ ನಟಿ ಮಾಲಾಶ್ರೀ ಅವರಿಗೆ ಬೌನ್ಸರ್ಸ್ ಆಗಿ ಕೆಲಸ ಮಾಡುತ್ತಿದ್ದರು. ಅವರು ಕೂಡ ಒಳ್ಳೆಯ ಪರ್ಸನಾಲಿಟಿ ಇದೆ ಸಿನಿಮಾದಲ್ಲಿ ಅಭಿನಯಿಸು ಎಂದು ಹೇಳಿದರು.

    ಸಿನಿಮಾದಲ್ಲಿ ಚಾನ್ಸ್ ಕ್ಕಾಗಿ ತುಂಬಾ ಕಷ್ಟ ಪಟ್ಟಿದ್ದೇನೆ. ಬೆಳಗ್ಗೆ ಗಾಂಧಿನಗರಕ್ಕೆ ಹೋದರೆ ಸಂಜೆವರೆಗೂ ಕಾಯುತ್ತಿದ್ದೆ. ಯಾರು ಸಿಗುತ್ತಿರಲಿಲ್ಲ, ಎಲ್ಲರು ಹೈಟ್, ಪರ್ಸನಾಲಿಟಿ ಇದೆ ಸಿನಿಮಾದಲ್ಲಿ ಮಾಡಿ ಎಂದು ಹೇಳುತ್ತಿದ್ದರು. ಆದ್ದರಿಂದ ನಾನು ಸಿನಿಮಾದಲ್ಲಿ ಮಾಡಬೇಕು ಎಂದು ಪ್ರಯತ್ನ ಪಟ್ಟಿದ್ದೇನೆ. ಕೊನೆಗೆ ಸತತ ನಾಲ್ಕು ವರ್ಷ ಅಲೆದಾಡಿದ್ದೇನೆ. ಈ ಸಮಯದಲ್ಲಿ ಎಷ್ಟು ಚಪ್ಪಲಿ ಸವೆದಿದಿಯೋ ಗೊತ್ತಿಲ್ಲ ಎಂದ್ರು

    ಸಿನಿಮಾ ಅವಕಾಶಕ್ಕಾಗಿ ಸಿನಿಮಾ ನಟರಿಗೆ ನಾನು ಬೌನ್ಸರ್ಸ್ ಕೆಲಸ ಮಾಡಿದ್ದೇನೆ. ನಾನು ನಟಿ ಮಾಲಾಶ್ರೀ ಅವರಿಂದ ಸಿನಿಮಾಗೆ ಬಂದೆ. ಮೊದಲ ಬಾರಿ ನಾನು ದರ್ಶನ್ ಅಭಿನಯದ ‘ಪೊರ್ಕಿ’ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಸಿನಿಮಾರಂಗಕ್ಕೆ ಪಾದಾರ್ಪಣೆ ಮಾಡಿದ್ದೆ. ಅಲ್ಲಿಂದ ಅಣ್ಣಾಬಾಂಡ್, ಜಾಕಿ ಮತ್ತು ತಮಸ್ಸು ಹೀಗೆ ಸ್ಟಾರ್ ನಟರುಗಳ ಸಿನಿಮಾದಲ್ಲಿ ಅಭಿನಯಸಿದ್ದೇನೆ ಎಂದು ಹೇಳಿದ್ದಾರೆ.

    ಶನಿ ಧಾರಾವಾಹಿ:
    ನಾನು ಡಾ. ರಾಜ್ ಕುಮಾರ್ ಅವರನ್ನು ನೋಡಿ ಕಮರ್ಷಿಯಲ್ ಸಿನಿಮಾಗಳಿಗಿಂತ ಪೌರಾಣಿಕ ಪಾತ್ರಗಳನ್ನ ಮಾಡಿ ಸೈ ಎನಿಸಿಕೊಳ್ಳಬೇಕು ಎಂಬ ಮಹದಾಸೆ ಇಟ್ಟುಕೊಂಡಿದ್ದೆ. ಇದೇ ವೇಳೆ ಶನಿ ಧಾರಾವಾಹಿಯ ಅವಕಾಶ ಬಂತು. ಬಳಿಕ ಸಿನಿಮಾದ ಅವಕಾಶಗಳನ್ನು ಬಿಟ್ಟು ಶನಿ ಧಾರಾವಾಹಿಗೆ ಹೋದೆ. ಡಾ. ರಾಜ್ ಕುಮಾರ್ ಅವರಿಂದ ಪ್ರೇರೇಪಣೆ ಪಡೆದುಕೊಂಡು ಪೌರಾಣಿಕ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದೇನೆ ಎಂದು ತಿಳಿಸಿದ್ದಾರೆ.

    ಸದ್ಯಕ್ಕೆ ರಂಜಿತ್ ಕುಮಾರ್ ಅವರಿಗೆ ಸೂರ್ಯದೇವನ ಪಾತ್ರವನ್ನ ನೋಡಿ ಹಲವು ಅವಕಾಶಗಳು ಬರುತ್ತಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv