Tag: ರಂಗಿನ ರಾಟೆ

  • ಸಿನಿಮಾ ಚಾನ್ಸ್ ಕೊಡಿಸೋದಾಗಿ ನಿರ್ದೇಶಕನಿಂದ ಯುವತಿಗೆ ದೋಖಾ- ಪ್ರಕರಣ ದಾಖಲು

    ಸಿನಿಮಾ ಚಾನ್ಸ್ ಕೊಡಿಸೋದಾಗಿ ನಿರ್ದೇಶಕನಿಂದ ಯುವತಿಗೆ ದೋಖಾ- ಪ್ರಕರಣ ದಾಖಲು

    ಸಿನಿಮಾದಲ್ಲಿ ಚಾನ್ಸ್ ಕೊಡಿಸೋದಾಗಿ ‘ರಂಗಿನ ರಾಟೆ’ (Ranginaa Raate) ಸಿನಿಮಾ ನಿರ್ದೇಶಕ ಸಂತೋಷ್ (Director) ವಿರುದ್ಧ ವಂಚನೆಗೊಳಗಾದ ಯುವತಿಯಿಂದ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಟನೆಗೆ ಚಾನ್ಸ್ ಕೊಡಿಸೋದಾಗಿ ತಮ್ಮಿಂದ ಹಣ ಪಡೆದಿರೋದಾಗಿ ಯುವತಿ ಇದೀಗ ಠಾಣೆ ಮೆಟ್ಟಿಲೇರಿದ್ದಾರೆ. ಇದನ್ನೂ ಓದಿ:ಎಲ್ಲೆಲ್ಲೂ ‘ಜೈಲರ್’ ಚಿತ್ರದ ಹವಾ, ನಿಲ್ಲುತ್ತಿಲ್ಲ ರಜನಿ ತಾಕತ್ತು

    ಸಿನಿಮಾರಂಗದಲ್ಲಿ ನಟಿಯಾಗಿ ಬೆಳೆಯಬೇಕು ಎಂದು ಕನಸು ಕಂಡಿದ್ದ ಯುವತಿಗೆ ‘ರಂಗಿನ ರಾಟೆ’ ನಿರ್ದೇಶಕ ಹಣ ಪಡೆದುಕೊಂಡಿದ್ದಾರೆ ಎಂಬ ಆರೋಪದಡಿ ಪ್ರಕರಣ ದಾಖಲಾಗಿದೆ. ಗೂಗಲ್‌ಪೇ, ಫೋನ್ ಪೇ ಮೂಲಕ ಹಣ ಹಾಕಿಸಿಕೊಂಡು ಯುವತಿಗೆ ನಿರ್ದೇಶಕ ಸಂತೋಷ್‌ ವಂಚಿಸಿದ್ದಾರೆ. ಇದೀಗ ಸ್ಥಳಿಯ ಯಶವಂತಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

    ಕಳೆದ ವರ್ಷ ‘ರಂಗಿನ ರಾಟೆ’ ಎಂಬ ಸಿನಿಮಾವನ್ನು ಡೈರೆಕ್ಟರ್ ಸಂತೋಷ್ ನಿರ್ದೇಶಿಸಿದ್ದರು. ನಟ ರಾಜೀವ್ ಮತ್ತು ದುನಿಯಾ ರಶ್ಮಿ  ಮುಖ್ಯಭೂಮಿಕೆಯಲ್ಲಿ ಬಣ್ಣ ಹಚ್ಚಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ರಂಗಿನ ರಾಟೆ’ ಟ್ರೇಲರ್ ಬಿಡುಗಡೆ ಮಾಡಿದ ರಾಗಿಣಿ

    ‘ರಂಗಿನ ರಾಟೆ’ ಟ್ರೇಲರ್ ಬಿಡುಗಡೆ ಮಾಡಿದ ರಾಗಿಣಿ

    ವಿತಾ ಅರುಣ್ ಕುಮಾರ್ ನಿರ್ಮಿಸಿರುವ ” ರಂಗಿನ ರಾಟೆ ” (Rangina Rate) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭ ಇತ್ತೀಚೆಗೆ ನಡೆಯಿತು. ಖ್ಯಾತ ನಟಿ ರಾಗಿಣಿ ದ್ವಿವೇದಿ (Ragini Dwivedi) ಈ ಚಿತ್ರದ ಟ್ರೇಲರ್ ಬಿಡುಗಡೆ ಮಾಡಿದರು. ಮಾಜಿ ಸಂಸದ ಶಿವರಾಮೇಗೌಡ ಸೇರಿದಂತೆ ಅನೇಕ ಗಣ್ಯರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

    ನಾನು ಚಿತ್ರದ ಕೆಲವು ಸನ್ನಿವೇಶಗಳನ್ನು ನೋಡಿದ್ದೀನಿ. ತುಂಬಾ ಚೆನ್ನಾಗಿದೆ. ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ರಾಗಿಣಿ ಹಾರೈಸಿದರು. ಚಿತ್ರದ ಪ್ರಮುಖ ಪಾತ್ರಧಾರಿ ರಾಜೀವ್ ರಾಥೋಡ್ (Rajeev Rathore) ನನ್ನ ಅಳಿಯಂದಿರು. ಅವರ ಜೊತೆಗೆ ಮಂಡ್ಯದ ಇಬ್ಬರು, ಮೂವರು ಹುಡುಗರು ಇದರಲ್ಲಿರುವುದು ತಿಳಿದು ಖುಷಿಯಾಯಿತು. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಚೆನ್ನಾಗಿದೆ. ಚಿತ್ರ ಕೂಡ ನಿರೀಕ್ಷೆಗೂ ಮೀರಿ ಜಯಭೇರಿ ಬಾರಿಸಲಿ ಎಂದರು ಮಾಜಿ ಸಂಸದರಾದ ಶಿವರಾಮೇಗೌಡ.

    ಏಳು ಪ್ರಮುಖಪಾತ್ರಗಳ ಸುತ್ತ ನಡೆಯುವ ಕಥೆಯಿದು. ಕೆಟ್ಟದ್ದನ್ನು  ಮಾಡಿದವರು ಇಲ್ಲೇ ಅನುಭವಿಸುತ್ತಾರೆ ಎಂಬುದನ್ನು ತೋರಿಸುವ ಪ್ರಯತ್ನ ಮಾಡಿದ್ದೇವೆ. ಇಂದು ಟ್ರೇಲರ್ (Trailer) ಬಿಡುಗಡೆ ಮಾಡಿದ್ದೇವೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ನೋಡಿ ಪ್ರೋತ್ಸಾಹಿಸಿ ಎಂದು ನಿರ್ದೇಶಕ ಆರ್ಮುಗಂ ತಿಳಿಸಿದರು. ಇದನ್ನೂ ಓದಿ:ಖ್ಯಾತ ನಟಿ ಆಶಾ ಪರೇಖ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಪ್ರದಾನ ಮಾಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು

    ಇದೊಂದು ಕಾಡಿನಲ್ಲಿ ನಡೆಯುವ ಕಥೆ. ನನ್ನ ಜೊತೆಗಿರುವವರು ಅನಿವಾರ್ಯ ಕಾರಣದಿಂದ ಕಷ್ಟಕ್ಕೆ ಸಿಲುಕಿ ಕೊಳ್ಳುತ್ತಾರೆ. ಅವರನೆಲ್ಲಾ ಕಷ್ಟದಿಂದ ಪಾರು ಮಾಡುವ ಪಾತ್ರ ನನ್ನದು ಎಂದು ತಮ್ಮ ಪಾತ್ರದ ಬಗ್ಗೆ ರಾಜೀವ್ ರಾಥೋಡ್ ವಿವರಿಸಿದರು.  ನಿರ್ದೇಶಕ ಮುರಳಿ ಮೋಹನ್ (Muruli Mohan) ಸಹ ತಮಗೆ ಈ ಚಿತ್ರದಲ್ಲಿ ಉತ್ತಮ ಪಾತ್ರ ಸಿಕ್ಕಿರುವುದಾಗಿ ಹೇಳಿಕೊಂಡರು. ನಿರ್ಮಾಪಕಿ ಕವಿತಾ ಅರುಣ್ ಕುಮಾರ್,  ಸಹನಾಯಕಿ ಸ್ವಪ್ನ ಶೆಟ್ಟಿಗಾರ್, ಸಂತೋಷ್ ಮಳವಳ್ಳಿ ಸೇರಿದಂತೆ  ಚಿತ್ರತಂಡದ ಅನೇಕ ಸದಸ್ಯರು ಚಿತ್ರದ ಕುರಿತು ಮಾತನಾಡಿದರು. ಆಗಮಿಸಿದ್ದ ಅನೇಕ ಗಣ್ಯರು ಚಿತ್ರತಂಡಕ್ಕೆ ಶುಭ ಕೋರಿದರು.

    ಆರ್ಮುಗಂ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ರವಿ ಸುವರ್ಣ ಛಾಯಾಗ್ರಹಣ ಹಾಗೂ ಚಂದ್ರು ಓಬ್ಬಯ್ಯ ಅವರ ಸಂಗೀತ ನಿರ್ದೇಶನವಿದೆ. ರಾಜೀವ್ ರಾಥೋಡ್, ಮುರಳಿ ಮೋಹನ್ (ಸಂತ), ದುನಿಯಾ ರಶ್ಮಿ, ಸಂತೋಷ್ ಮಳವಳ್ಳಿ, ಭವ್ಯ, ರಾಂಕಲ್ ಚಂದ್ರು, ಸ್ವಪ್ನ ಶೆಟ್ಟಿಗಾರ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ

    Live Tv
    [brid partner=56869869 player=32851 video=960834 autoplay=true]

  • ರಂಗಿನ ರಾಟೆ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ದುನಿಯಾ ರಶ್ಮಿ

    ರಂಗಿನ ರಾಟೆ ಮೂಲಕ ಮತ್ತೆ ಸ್ಯಾಂಡಲ್ ವುಡ್ ನಲ್ಲಿ ಕಾಣಿಸಿಕೊಂಡ ದುನಿಯಾ ರಶ್ಮಿ

    ದುನಿಯಾ ರಶ್ಮಿ ಸಿನಿಮಾ ರಂಗದಿಂದ ದೂರವಾದರಾ ಅನ್ನುವ ಹೊತ್ತಿನಲ್ಲಿ ಮತ್ತೆ ಧೂತ್ತೆಂದು ಪ್ರತ್ಯಕ್ಷವಾಗಿದ್ದಾರೆ. ಆರ್ಮುಗಂ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ರಂಗಿನ ರಾಟೆ’ ಸಿನಿಮಾದಲ್ಲಿ ಅವರು ನಟಿಸಿದ್ದು, ನಿನ್ನೆಯಷ್ಟೇ ಆ ಸಿನಿಮಾದ ಪೋಸ್ಟರ್ ರಿಲೀಸ್ ಆಗಿದೆ. ಎಲ್ಲರ ಜೀವನ ರಾಟೆಯ ಹಾಗೆ ಸುತ್ತುತ್ತಿರುತ್ತದೆ. ಈ ವಿಷಯವನ್ನು ಕೇಂದ್ರವಾಗಿಟ್ಟಿಕೊಂಡು ” ರಂಗಿನ ರಾಟೆ” ಚಿತ್ರ ಸಿದ್ದವಾಗಿದೆ. ಚಿತ್ರೀಕರಣ ಕೂಡ ಮುಕ್ತಾಯವಾಗಿದೆ.

    ಈ ಕುರಿತು ಮಾತನಾಡಿದ ನಿರ್ದೇಶಕ ಆರ್ಮುಗಂ “ನಾನು ಮುರಳಿ ಮೋಹನ್ ಅವರ ಬಳಿ ಕೆಲಸ ಮಾಡುತ್ತಿದ್ದೆ. ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಎಲ್ಲರ ಜೀವನವೇ ಒಂದು ಸುತ್ತಾಟ. ರಾಟೆ ತಿರುಗಿದ ಹಾಗೆ. ಹಾಗಾಗಿ ನಾನು ಚಿತ್ರಕ್ಕೆ ಈ ಶೀರ್ಷಿಕೆಯಿಟ್ಟಿದ್ದೀನಿ.  ಚಿತ್ರೀಕರಣ ಮುಕ್ತಾಯವಾಗಿದೆ. ಆಗರ ಮುಂತಾದ ಕಡೆ ಚಿತ್ರೀಕರಣ ಮಾಡಿದ್ದೇವೆ. ರಾಜೀವ್ ರಾಥೋಡ್, ದುನಿಯಾ ರಶ್ಮಿ, ಭವ್ಯ ಹಾಗೂ ಸಂತೋಷ್ ನಾಲ್ಕು ಜನರ ಸುತ್ತ ಕಥೆ ಸಾಗುತ್ತದೆ. ಸಂತೋಷ್ ಮಳವಳ್ಳಿ ಅವರ ಮೂಲಕ ನಿರ್ಮಾಪಕಿ ಕವಿತಾ ಅರುಣ್ ಕುಮಾರ್ ಅವರ ಪರಿಚಯವಾಯಿತು. ಅವರು ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದಿದೆ. ಸದ್ಯದಲ್ಲೇ ಮಾತಿನ ಜೋಡಣೆ ಆರಂಭವಾಗಲಿದೆ’ ಎಂದರು. ಇದನ್ನೂ ಓದಿ:ಐದು ಭಾಷೆ, ಐದು ಸ್ಟಾರ್ ನಟರಿಂದ ಕಿಚ್ಚನ ವಿಕ್ರಾಂತ್ ರೋಣ ಟ್ರೈಲರ್ ರಿಲೀಸ್

    “ಯವರಾಜ” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಗಿದೆ. ಕನ್ನಡದ ಸಾಕಷ್ಟು ಚಿತ್ರಗಳಲ್ಲಿ ಅಭಿನಯಿಸಿದ್ದೇನೆ. ನಾಯಕನಾಗಿ ಇದು ಮೂರನೇ ಚಿತ್ರ. ಅವಕಾಶ ನೀಡಿದ ನಿರ್ಮಾಪಕರಿಗೆ ಧನ್ಯವಾದ. ನಿರ್ದೇಶಕರು ಕಥೆ ಹೇಳಿದ ಕೂಡಲೆ ಸಿನಿಮಾದಲ್ಲಿ ನಟಿಸಲು ನಿರ್ಧರಿಸಿದೆ. ಅನಿರೀಕ್ಷಿತ ಘಟನೆಯಲ್ಲಿ ನಾನು ಸಿಕ್ಕಿಹಾಕಿಕೊಳ್ಳುತ್ತೇನೆ. ಅದರಿಂದ ಹೇಗೆ ಪಾರಾಗುತ್ತೇನೆ? ಎಂಬುದನ್ನು ಸಿನಿಮಾದಲ್ಲಿ ನೋಡಬೇಕು ಎಂದರು ರಾಜೀವ್ ರಾಥೋಡ್.

    ನನಗೆ ಸಿನಿಮಾ ಮಾಡಲು ಇಷ್ಟವಿರಲಿಲ್ಲ. ಸಂತೋಷ್ ಅವರು ನಿರ್ದೇಶಕರ ಪರಿಚಯ‌ ಮಾಡಿಸಿದರು.  ಕಥೆ ಕೇಳಿ ನಿರ್ಮಾಣಕ್ಕೆ ಮುಂದಾದೆ. ಮೊದಲ ಪ್ರಯತ್ನ.‌ ನಿಮ್ಮೆಲ್ಲರ ಬೆಂಬಲವಿರಲಿ ಎಂದರು ನಿರ್ಮಾಪಕಿ ಕವಿತಾ ಅರುಣ್ ಕುಮಾರ್.ಇದು ನನ್ನ ಮೊದಲ ಚಿತ್ರ. ಮೊದಲ ಪತ್ರಿಕಾಗೋಷ್ಠಿ. ಸಿನಿಮಾದಲ್ಲಿ ನಟಿಸುವ ಆಸೆಯಿತ್ತು. ಈಡೇರಿದೆ. ಕಥೆಯೇ ಈ ಚಿತ್ರದ ನಾಯಕ, ನಾಯಕಿ. ರಾಜೀವ್ ರಾಥೋಡ್, ದುನಿಯಾ ರಶ್ಮಿ ಹಾಗೂ ನಾನು ಮುಖ್ಯಪಾತ್ರದಲ್ಲಿ ನಟಿಸಿದ್ದೇವೆ. ನಮ್ಮ ಚೊಚ್ಚಲ ಪ್ರಯತ್ನಕ್ಕೆ ನಿಮ್ಮ‌ ಹಾರೈಕೆಯಿರಲಿ ಎಂದರು ನಟಿ ಭವ್ಯ.

    Live Tv