Tag: ರಂಗಿತರಂಗ

  • ಪತ್ನಿ ಜೊತೆ ಮಾಲ್ಡೀವ್ಸ್‌ನಲ್ಲಿ ‘ವಿಕ್ರಾಂತ್‌ ರೋಣ’ ನಟ

    ಪತ್ನಿ ಜೊತೆ ಮಾಲ್ಡೀವ್ಸ್‌ನಲ್ಲಿ ‘ವಿಕ್ರಾಂತ್‌ ರೋಣ’ ನಟ

    ಸ್ಯಾಂಡಲ್‌ವುಡ್ (Sandalwood) ಹೀರೋ ನಿರೂಪ್ ಭಂಡಾರಿ (Nirup Bhandari) ಇದೀಗ ಮಾಲ್ಡೀವ್ಸ್‌ನಲ್ಲಿ ಪತ್ನಿ ಜೊತೆ ಕಾಲ ಕಳೆಯುತ್ತಿದ್ದಾರೆ. ಪ್ರವಾಸಿಗರ ಮತ್ತು ನಟ-ನಟಿಯರ ನೆಚ್ಚಿನ ತಾಣವಾಗಿರುವ ಮಾಲ್ಡೀವ್ಸ್‌ನಲ್ಲಿ (Maldives) ನಿರೂಪ್ ಬೀಡು ಬಿಟ್ಟಿದ್ದಾರೆ.

    ರಂಗಿತರಂಗ, ರಾಜರಥ, ವಿಕ್ರಾಂತ್ ರೋಣ (Vikrant Rona) ಸಿನಿಮಾಗಳ ಮೂಲಕ ಗಮನ ಸೆಳೆದ ನಟ ನಿರೂಪ್ ಭಂಡಾರಿ ಸದ್ಯ ವೆಕೇಷನ್ ಮೂಡ್‌ನಲ್ಲಿದ್ದಾರೆ. ಪತ್ನಿ ಮಾಲ್ಡೀವ್ಸ್‌ನಲ್ಲಿ ಮೋಜು ಮಸ್ತಿ ಮಾಡ್ತಿದ್ದಾರೆ. ಮಾಲ್ಡೀವ್ಸ್ ಸುಂದರ ಫೋಟೋಗಳನ್ನ ಸೋಶಿಯಲ್ ಮೀಡಿಯಾದಲ್ಲಿ ಈ ಜೋಡಿ ಶೇರ್ ಮಾಡಿದೆ.

    ದಿಗಂತ್ (Diganth) ಜೊತೆ ‘ಎಡಗೈ ಅಪಘಾತಕ್ಕೆ ಕಾರಣ’ ಚಿತ್ರದಲ್ಲಿ ನಿರೂಪ್ ಭಂಡಾರಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ದಿಗಂತ್ ಜೊತೆಯಾಗಿ ನಿಧಿ ಸುಬ್ಬಯ್ಯ ನಟಿಸಿದ್ದಾರೆ. ಇದನ್ನೂ ಓದಿ:ಅಲ್ಲು ಬ್ಯುಸಿನೆಸ್ ಪಾರ್ಕ್ ನಲ್ಲಿ ಖ್ಯಾತ ನಟ ಅಲ್ಲು ರಾಮಲಿಂಗಯ್ಯ ಪ್ರತಿಮೆ

    ಹೊಸ ಬಗೆಯ ಕಥೆಗಳನ್ನ ನಿರೂಪ್ ಕೇಳ್ತಿದ್ದಾರೆ. ಸದ್ಯದಲ್ಲೇ ಮತ್ತಷ್ಟು ಹೊಸ ಸಿನಿಮಾಗಳ ಅಪ್‌ಡೇಟ್ ಜೊತೆ ನಿರೂಪ್ ಕಾಣಿಸಿಕೊಳ್ತಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಬಾಹುಬಲಿ ಚಿತ್ರಕ್ಕೆ ಎದುರಾಗಿ ನಿಂತ ರಂಗಿತರಂಗಕ್ಕೆ ಎಂಟು ವರ್ಷ

    ಬಾಹುಬಲಿ ಚಿತ್ರಕ್ಕೆ ಎದುರಾಗಿ ನಿಂತ ರಂಗಿತರಂಗಕ್ಕೆ ಎಂಟು ವರ್ಷ

    ನೂಪ್ ಭಂಡಾರಿ ನಿರ್ದೇಶನದ ‘ರಂಗಿತರಂಗ’ (Rangitaranga) ಸಿನಿಮಾ ಅಂದು ‘ಬಾಹುಬಲಿ’ ಚಿತ್ರದ ಎದುರು ಬಿಡುಗಡೆ ಆಗುತ್ತಿದೆ ಎಂದಾಗ ನಕ್ಕವರೇ ಹೆಚ್ಚು. ಬಹುಕೋಟಿ ವೆಚ್ಚದಲ್ಲಿ ತಯಾರಾದ ಬಾಹುಬಲಿ ಸಿನಿಮಾ ಎದುರು, ಹೆಸರೇ ಇಲ್ಲದ ಹುಡುಗರ ಟೀಮ್ ವೊಂದು ಹುಚ್ಚಾಟ ಮಾಡುತ್ತಿದೆ ಎಂದು ಹೇಳಿದ್ದೂ ಇದೆ. ಅನೂಪ್ ಭಂಡಾರಿ (Anoop Bhandari), ನಿರೂಪ್ ಭಂಡಾರಿ (Nirup Bhandari), ರಾಧಿಕಾ ನಾರಾಯಣ್, ಆವಂತಿಕಾ ಶೆಟ್ಟಿ ಹೀಗೆ ಎಲ್ಲ ಹೊಸ ಹೆಸರುಗಳೆ.

    ರಾಜಮೌಳಿ ಎಂಬ ಅದ್ಭುತ ನಿರ್ದೇಶಕನ ಚಿತ್ರ ಬಾಹುಬಲಿ (Baahubali). ಪ್ರಭಾಸ್, ರಾಣಾ ದಗ್ಗುಬಾಟಿ, ತಮನ್ನಾ, ಅನುಷ್ಕಾ ಶೆಟ್ಟಿ, ರಮ್ಯಾ ಕೃಷ್ಣ ಹೀಗೆ ಸ್ಟಾರ್ ಗಳ ಪಟ್ಟಿಯೇ ಹೊಂದಿರುವ ಸಿನಿಮಾದ ಎದುರು ಕನ್ನಡದ ರಂಗಿತರಂಗ ಬಿಡುಗಡೆ ಆಯಿತು. ಬಾಹುಬಲಿ ಅಬ್ಬರಕ್ಕೆ ಸಿನಿಮಾ ಬಲಿಯೇ ಆಗಲಿದೆ ಎಂದು ಆಡಿಕೊಂಡವರ ಬಾಯಿಗೆ ಬೀಗ ಹಾಕಿತ್ತು ರಂಗಿತರಂಗ. ಬಾಹುಬಲಿಯ ಯಶಸ್ಸಿನ ನಡುವೆಯೂ ಬರೋಬ್ಬರಿ ಒಂದು ವರ್ಷಗಳ ಕಾಲ ರಂಗಿತರಂಗ ಪ್ರದರ್ಶನ ಕಂಡಿತು. ಇದನ್ನೂ ಓದಿ:ನೀನು ಆಂಟಿಯಾಗಿ 1 ವರ್ಷದ ಅನುಭವವಿದೆ- ಬರ್ತ್‌ಡೇಯಂದು ಪತ್ನಿ ಕಾಲೆಳೆದ ನಟ ಸುದರ್ಶನ್

    ಯಾವೆಲ್ಲವೂ ಸ್ಯಾಂಡಲ್ ವುಡ್ ನಲ್ಲಿ ಹೊಸ ಹೆಸರುಗಳು ಎಂದು ಕಾಣುತ್ತಿದ್ದವೋ, ಅವೆಲ್ಲವೂ ಕನ್ನಡ ಚಿತ್ರೋದ್ಯಮದಲ್ಲಿ ಚಿರಪರಿಚಿತ ಹೆಸರುಗಳಾದವು. ಮುಂದೆ ಆ ಎಲ್ಲ ಹೆಸರುಗಳೂ ಸ್ಟಾರ್ ನಟರ ಪಟ್ಟಿಯಲ್ಲೂ ಕಾಣಿಸಿಕೊಂಡವು. ಅಂತಹ ರಂಗಿತರಂಗ ಸಿನಿಮಾ ರಿಲೀಸ್ ಆಗಿ ಬರೋಬ್ಬರಿ ಎಂಟು ವರ್ಷಗಳಾಗಿವೆ. ಆ ದಿನವನ್ನು ಚಿತ್ರತಂಡ ನೆನಪಿಸಿಕೊಂಡಿದೆ.

    ಹೌದು, ರಂಗಿತರಂಗ ಸಿನಿಮಾ ರಿಲೀಸ್ ಆಗಿ ಎಂಟು ವರ್ಷಗಳಾಗಿವೆ (Eight Years). ಈ ಸಂದರ್ಭದಲ್ಲಿ ನಿರೂಪ್ ಭಂಡಾರಿ ಸಿನಿಮಾದ ಪೋಸ್ಟರ್ ವೊಂದನ್ನು ಹಂಚಿಕೊಂಡು, ಅಂದಿನ ದಿನಗಳನ್ನು ನೆನಪಿಸಿಕೊಂಡಿದ್ದಾರೆ. ಚಿತ್ರದೊಂದಿಗೆ ನಿಂತವರಿಗೆ ಧನ್ಯವಾದಗಳನ್ನು ಹೇಳಿದ್ದಾರೆ. ರಂಗಿತರಂಗದ ಗೆಲುವನ್ನೂ ಮತ್ತೆ ನೆನಪಿಸಿಕೊಂಡು ಸಂಭ್ರಮಿಸಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ‘ನನಗೆ ಅವಕಾಶ ಕೊಡಿ’ ಎಂದು ಪೋಸ್ಟ್ ಹಾಕಿದ ರಂಗಿತರಂಗ ಖ್ಯಾತಿಯ ನಟಿ

    ‘ನನಗೆ ಅವಕಾಶ ಕೊಡಿ’ ಎಂದು ಪೋಸ್ಟ್ ಹಾಕಿದ ರಂಗಿತರಂಗ ಖ್ಯಾತಿಯ ನಟಿ

    ನ್ನಡ ಸಿನಿಮಾ ರಂಗದಲ್ಲಿ ಸಂಚಲನವನ್ನೇ ಸೃಷ್ಟಿ ಮಾಡಿದ್ದ ‘ರಂಗಿತರಂಗ’ (Rangitaranga) ಚಿತ್ರವು ಕೇವಲ ಕನ್ನಡದಲ್ಲಿ ಮಾತ್ರವಲ್ಲ, ಆನಂತರ ದೇಶ ವಿದೇಶಗಳಲ್ಲೂ ತನ್ನ ಗೆಲುವಿನ ಪತಾಕೆಯನ್ನು ಹಾರಿಸಿತ್ತು. ರಾತ್ರೋರಾತ್ರಿ ಅನೂಪ್ ಭಂಡಾರಿ (Anoop Bhandari)ಎಂಬ ನಿರ್ದೇಶಕ, ನಿರೂಪ ಭಂಡಾರಿ ಎನ್ನುವ ನಟ ಹಾಗೂ  ಆವಂತಿಕಾ ಶೆಟ್ಟಿ (Avantika Shetty) ಎನ್ನುವ ನಟಿ ಫೇಮಸ್ ಆಗಿ ಬಿಟ್ಟರು. ಭಾರತೀಯ ಸಿನಿಮಾ ರಂಗದ ಅನೇಕ ದಿಗ್ಗಜರು ಈ ಚಿತ್ರದ ಬಗ್ಗೆ ಮಾತನಾಡಿದರು. ಆನಂತರ ಅನೂಪ್ ನಡೆದದ್ದು ಹಾದಿ ಆಯಿತು.

    ರಂಗಿತರಂಗದ ನಂತರ ಅನೂಪ್ ‘ರಾಜರಥ’ ಚಿತ್ರ ಮಾಡಿದರೂ, ಅದು ಹೇಳಿಕೊಳ್ಳುವಂತಹ ಗೆಲುವನ್ನು ತಂದುಕೊಡಲಿಲ್ಲ. ಆದರೂ, ಅವರು ಛಲ ಬಿಡದೇ ಭಾರೀ ಬಜೆಟ್ ಚಿತ್ರಕ್ಕೆ ಕೈ ಹಾಕಿ ಗೆಲುವು ಕಂಡರು. ಆದರೆ, ಆವಂತಿಕಾ ಶೆಟ್ಟಿಗೆ ಮಾತ್ರ ನಂತರದ ಸಿನಿಮಾಗಳಲ್ಲಿ ಅಷ್ಟೇನೂ ಯಶಸ್ಸು ಮತ್ತು ಬೇಡಿಕೆ ಬರಲಿಲ್ಲ. ಎರಡ್ಮೂರು ಚಿತ್ರಗಳನ್ನು ಮಾಡಿ, ತೆರೆಮರೆಗೆ ಸರಿದುಬಿಟ್ಟರು ಆವಂತಿಕಾ. ಈಗ ಮತ್ತೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತ ಪಡಿಸಿದ್ದಾರೆ. ಇದನ್ನೂ ಓದಿ: ಹೊಸ ಫೋಟೋಶೂಟ್‌ನಲ್ಲಿ ಮಹಾಲಕ್ಷ್ಮಿಯಂತೆ ಕಂಗೊಳಿಸಿದ ನಟಿ ಅಮೂಲ್ಯ

    ಕುಟುಂಬದ ಸಮಸ್ಯೆಯ ಕಾರಣದಿಂದಾಗಿ ಆವಂತಿಕಾ ಸಿನಿಮಾ ರಂಗದಿಂದಲೇ ದೂರ ಸರಿದರಂತೆ. ನೆಮ್ಮದಿಗಾಗಿ ಆಧ್ಯಾತ್ಮದತ್ತ ಒಲವು ಬೆಳೆಸಿಕೊಂಡರಂತೆ. ಕೋವಿಡ್ ಮತ್ತಿತರ ಕಾರಣದಿಂದಾಗಿ ಬರೋಬ್ಬರಿ ಐದು ವರ್ಷಗಳಿಂದ ಅವರು ಯಾವುದೇ ಸಿನಿಮಾ ಮಾಡಿಲ್ಲ. ಮುಂಬೈನಲ್ಲೇ ಬೀಡುಬಿಟ್ಟಿದ್ದರಿಂದ ಕನ್ನಡ ಮಾತನಾಡಲು ಕೂಡ ಕಷ್ಟವಾಗುತ್ತಿದೆ ಎಂದು ಅವರು ಹೇಳಿಕೊಂಡಿದ್ದಾರೆ.

    ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಆವಂತಿಕಾ, ‘ನನಗೆ ಸಿನಿಮಾದಲ್ಲಿ ನಟಿಸುವ ಆಸಕ್ತಿಯಿದೆ. ಯಾರಾದರೂ ಅವಕಾಶ ಕೊಡಬೇಕು ಅಷ್ಟೆ. ಅವಕಾಶ ಕೊಟ್ಟರೆ ಖಂಡಿತವಾಗಿಯೂ ನಟಿಸುತ್ತೇನೆ. ಈ ಮೂಲಕ ಅವಕಾಶಕ್ಕಾಗಿ ಕೇಳುತ್ತಿದ್ದೇನೆ’ ಎಂದು ಅವರು ಪೋಸ್ಟ್ ಮಾಡಿದ್ದಾರೆ. ಅಲ್ಲದೇ, ತಮ್ಮ ವೈಯಕ್ತಿಕ ಬದುಕಿನ ಬಗ್ಗೆಯೂ ಅವರು ಕೆಲ ವಿಷಯಗಳನ್ನು ಹಂಚಿಕೊಂಡಿದ್ದಾರೆ.

  • ಎರಡನೇ ಸಲ ‘ಆಸ್ಕರ್’ ಅಂಗಳದಲ್ಲಿ ಕನ್ನಡದ ನಿರ್ದೇಶಕ ಅನೂಪ್ ಭಂಡಾರಿ

    ಎರಡನೇ ಸಲ ‘ಆಸ್ಕರ್’ ಅಂಗಳದಲ್ಲಿ ಕನ್ನಡದ ನಿರ್ದೇಶಕ ಅನೂಪ್ ಭಂಡಾರಿ

    ನ್ನಡದ ಹೆಸರಾಂತ ನಿರ್ದೇಶಕ ಅನೂಪ್ ಭಂಡಾರಿ ಎರಡನೇ ಬಾರಿ ಆಸ್ಕರ್ ಅಂಗಳದಲ್ಲಿ ಇದ್ದಾರೆ. ಎರಡು ಬಾರಿ ಇಂಥದ್ದೊಂದು ಅವಕಾಶ ಪಡೆದ ದಕ್ಷಿಣದ ನಿರ್ದೇಶಕ ಎನ್ನುವ ಗೌರವಕ್ಕೆ ಪಾತ್ರರಾಗಿದ್ದಾರೆ. ಈ ಹಿಂದೆ ಅವರ ‘ರಂಗಿತರಂಗ’ ಸಿನಿಮಾ ಕೂಡ ಆಸ್ಕರ್ ಗೆ ಅರ್ಹತೆಯ ಯಾದಿಯಲ್ಲಿತ್ತು. ಇದೀಗ ಸುದೀಪ್ ನಟನೆಯ ವಿಕ್ರಾಂತ್ ರೋಣ ಕೂಡ ಅರ್ಹತೆಯ ಯಾದಿಯಲ್ಲಿ ಸ್ಥಾನ ಪಡೆದುಕೊಂಡಿದೆ.

    ರಂಗಿತರಂಗ ಅನೂಪ್ ಭಂಡಾರಿ ಅವರ ಚೊಚ್ಚಲು ನಿರ್ದೇಶನದ ಸಿನಿಮಾ. ಬಾಕ್ಸ್ ಆಫೀಸಿನಲ್ಲಿ ಹೊಸ ದಾಖಲೆ ಬರೆದಿದ್ದ ಈ ಸಿನಿಮಾ ಆಸ್ಕರ್ ಪ್ರಶಸ್ತಿಯ ಲಿಸ್ಟ್ ನಲ್ಲಿ ಕಾಣಿಸಿಕೊಳ್ಳುವುದರ ಮೂಲಕ ಸಾಕಷ್ಟು ಸದ್ದು ಮಾಡಿತ್ತು. ಈ ಸಿನಿಮಾದಲ್ಲಿ ಬಹುತೇಕ ಹೊಸಬರೇ ಕೆಲಸ ಮಾಡಿದ್ದರೂ, ಜನಪ್ರಿಯತೆಯಲ್ಲಿ ಅದು ಯಾವತ್ತೂ ಹಿಂದೆ ಬೀಳಲಿಲ್ಲ. ಆಸ್ಕರ್ ನಲ್ಲೂ ಸರಿಯಾದ ಫೈಟ್ ಅನ್ನೇ ಅದು ಮಾಡಿತ್ತು. ಇದನ್ನೂ ಓದಿ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾದ `ವಜ್ರಕಾಯ’ ನಟಿ ಶುಭ್ರಾ ಅಯ್ಯಪ್ಪ

    ಪ್ರತಿಷ್ಠಿತ 95ನೇ ಆಸ್ಕರ್ ಅಕಾಡಮಿ ಪ್ರಶಸ್ತಿಯ ಅರ್ಹತೆ ವಿಭಾಗದಲ್ಲಿ ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ಕೂಡ ಕಾಣಿಸಿಕೊಂಡಿದೆ. ನಟನಾ ವಿಭಾಗದಲ್ಲಿ ಈ ಸಿನಿಮಾ ಆಯ್ಕೆಯಾಗಿದ್ದು, ಕನ್ನಡದ ಎರಡು ಚಿತ್ರಗಳು ಈ ಬಾರಿ ಆಸ್ಕರ್ ಅಂಗಳದಲ್ಲಿವೆ. ಅನೂಪ್ ಭಂಡಾರಿ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ನಿರೂಪ್ ಭಂಡಾರಿ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.

    ವಿಕ್ರಾಂತ್ ರೋಣ ಜೊತೆ ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ‘ಕಾಂತಾರ’ ಸಿನಿಮಾ ಆಸ್ಕರ್ ಪ್ರಶಸ್ತಿಗಾಗಿ ಅರ್ಹತೆ ಸುತ್ತಿನಲ್ಲಿ ಸ್ಥಾನ ಪಡೆದಿದೆ. ಅತ್ಯುತ್ತಮ ಚಿತ್ರ ಹಾಗೂ ಅತ್ಯುತ್ತಮ ನಟ ಎರಡು ವಿಭಾಗದಲ್ಲಿ ಅದು ಅರ್ಹತೆ ಸುತ್ತನ್ನು ಪಾಸು ಮಾಡಿದ್ದು, ಮುಂದಿನ ಹಂತಕ್ಕೆ ಸಿನಿಮಾ ಹೋಗಬೇಕಾದರೆ, ಆಸ್ಕರ್ ಸದಸ್ಯರು ಮತ ಚಲಾಯಿಸುವುದು ಕಡ್ಡಾಯವಾಗಿದೆ. ವಿಶ್ವದಾದ್ಯಂತ ಒಟ್ಟು 301 ಸಿನಿಮಾಗಳು ಅರ್ಹತೆ ಸುತ್ತಿನಲ್ಲಿ ಪಾಸಾಗಿವೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಬಾಲಿವುಡ್ ನಲ್ಲಿ ಕನ್ನಡದ ರಂಗಿತರಂಗ ಸಿನಿಮಾ ರಿಮೇಕ್

    ಳು ವರ್ಷಗಳ ಹಿಂದೆ ಕನ್ನಡದಲ್ಲಿ ಹೊಸ ಸಂಚಲನ ಮೂಡಿಸಿದ್ದ ರಂಗಿತರಂಗ ಸಿನಿಮಾ ಇದೀಗ ಬಾಲಿವುಡ್ ಅಂಗಳ ತಲುಪಿದೆ. ನೂರು ಕೋಟಿಗೂ ಹೆಚ್ಚು ಬಜೆಟ್ ನಲ್ಲಿ ನಿರ್ಮಾಣವಾದ ಬಾಹುಬಲಿ ಸಿನಿಮಾದ ಜೊತೆ ಜೊತೆಯಾಗಿಯೇ ಬಿಡುಗಡೆಯಾದ ರಂಗಿತರಂಗ ಸಿನಿಮಾ ಬಾಕ್ಸ್ ಆಫೀಸಿನಲ್ಲಿ ಹಿಟ್ ಆಗಿತ್ತು. ಈ ಸಿನಿಮಾದ ಮೂಲಕ ಅನೂಪ್ ಭಂಡಾರಿ ನಿರ್ದೇಶಕನಾಗಿ ಸಿನಿಮಾ ರಂಗಕ್ಕೆ ಕಾಲಿಟ್ಟರೆ, ನಿರೂಪ್ ಭಂಡಾರಿ ಹೀರೋ ಆಗಿ ಲಾಂಚ್ ಆದರು. ಇದೀಗ ಈ ಸಿನಿಮಾ ಹಿಂದಿಯಲ್ಲಿ ರೀಮೇಕ್ ಆಗುತ್ತಿದೆ.

    ತನ್ನ ನಿರೂಪಣೆ ಮತ್ತು ಮೇಕಿಂಗ್ ಕಾರಣದಿಂದಾಗಿ ರಂಗಿತರಂಗಿ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿತ್ತು. ಕಡಿಮೆ ಬಜೆಟ್ ನಲ್ಲಿ ತಯಾರಾದ ಈ ಚಿತ್ರ ಹೆಚ್ಚು ದುಡ್ಡು ಮಾಡಿತ್ತು. ಅಲ್ಲದೇ, ಹೊಸ ಪ್ರೇಕ್ಷಕರನ್ನು ಅದು ಹುಟ್ಟು ಹಾಕಿತ್ತು. ಈ ಸಿನಿಮಾದಿಂದ ಸ್ಯಾಂಡಲ್ ವುಡ್ ಗೆ ಪರಿಚಯವಾದ ಅನೂಪ್ ಭಂಡಾರಿ ಆನಂತರ ಹಲವು ಸಿನಿಮಾಗಳನ್ನು ಮಾಡಿದರು. ಇದೀಗ ಸುದೀಪ್ ನಟನೆಯ ವಿಕ್ರಾಂತ್ ರೋಣ ಚಿತ್ರಕ್ಕೂ ಇವರೇ ನಿರ್ದೇಶಕರು. ಇದನ್ನೂ ಓದಿ:ಚಂದ್ರಶೇಖರ್ ಗುರೂಜಿ ಹತ್ಯೆಗೆ ಕಂಬನಿ ಮಿಡಿದ ನಟ ಜಗ್ಗೇಶ್

    ಈಗಾಗಲೇ ಮುಂಬೈನ ಕಾರ್ಪೊರೇಟ್ ಕಂಪನಿಯೊಂದಿ ರೀಮೇಕ್ ರೈಟ್ಸ್ ಪಡೆದುಕೊಂಡಿದೆ ಎನ್ನಲಾಗುತ್ತಿದೆ. ಅಂದುಕೊಂಡಂತೆ ಆದರೆ, ನಿರೂಪ ಮಾಡಿದ್ದ ಪಾತ್ರವನ್ನು ಹಿಂದಿಯಲ್ಲಿ ಅಕ್ಷಯ್ ಕುಮಾರ್ ಮಾಡಲಿದ್ದಾರೆ ಎನ್ನುವ ಸುದ್ದಿಯಿದೆ. ಈ ಕುರಿತು ಅಧಿಕೃತ ಮಾಹಿತಿ ಹೊರ ಬೀಳದೇ ಇದ್ದರೂ, ಹಿಂದಿ ರೈಟ್ಸ್ ವಿಚಾರವಾಗಿ ಅನೂಪ್ ಭಂಡಾರಿ ಖಚಿತತೆಯನ್ನು ನೀಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ರಂಗಿತರಂಗ ನಿರ್ಮಾಪಕರಿಂದ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ

    ರಂಗಿತರಂಗ ನಿರ್ಮಾಪಕರಿಂದ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಇತ್ತೀಚೆಗೆ ಥ್ರಿಲ್ಲರ್ ಕಥಾ ಹಂದರವುಳ್ಳ ಸಿನಿಮಾಗಳು ಹೆಚ್ಚು ಮೂಡಿಬರುತ್ತಿದ್ದು, ಪ್ರೇಕ್ಷಕರಿಗೂ ಈ ರೀತಿಯ ಸಿನಿಮಾಗಳು ಹಿಡಿಸುತ್ತವೆ. ಹೀಗಾಗಿ ಜನಪ್ರಿಯತೆ ಪಡೆಯುತ್ತವೆ. ಇದಕ್ಕೆ ಉದಾಹರಣೆಯೇ ರಂಗಿತರಂಗ ಸಿನಿಮಾ. ಈ ಸಿನಿಮಾವನ್ನು ಕರಾವಳಿ ಭಾಗದಲ್ಲಿ ಚಿತ್ರೀಕರಿಸಲಾಗಿದ್ದು, ಯಕ್ಷಗಾನದ ಮೂಲಕವೇ ಥ್ರಿಲ್ಲರ್ ಕಥೆಯನ್ನು ಹೆಣೆಯಲಾಗಿದೆ. ಹೀಗಾಗಿ ಈ ಸಿನಿಮಾ ಭಾರೀ ಸದ್ದು ಮಾಡಿತ್ತು. ಇದೀಗ ಅದೇ ಸಿನಿಮಾದ ನಿರ್ಮಾಪಕರು ಇಂತಹದ್ದೇ ಮತ್ತೊಂದು ಸಿನಿಮಾ ನಿರ್ಮಿಸಲು ಮುಂದಾಗಿದ್ದಾರೆ.

    ರಂಗಿತರಂಗ ಸಿನಿಮಾ ಬಳಿಕ ನಟ ರಕ್ಷಿತ್ ಶೆಟ್ಟಿ ಜೊತೆ ಸೇರಿ ಅವನೇ ಶ್ರೀಮನ್ನಾರಾಯಣ ಸಿನಿಮಾಗೆ ಬಂಡವಾಳ ಹೂಡಿದ್ದ ಎಚ್.ಕೆ.ಪ್ರಕಾಶ್ ಇದೀಗ ಅವರದ್ದೇ ಶ್ರೀ ದೇವಿ ಎಂಟರ್‍ಟೈನರ್ಸ್ ಬ್ಯಾನರ್ ಅಡಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ನಿರ್ಮಿಸಲು ಮುಂದಾಗಿದ್ದು, ನಿರ್ದೇಶಕ ಭರತ್ ಜಿ.ಜೊತೆ ಸೇರಿ ಹೊಸ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ.

    ಹೊಸ ನಿರ್ದೇಶಕರ ಮೂಲಕ ಸಿನಿಮಾ ಮಾಡಲು ಎಚ್.ಕೆ.ಪ್ರಕಾಶ್ ಅವರು ಮುಂದಾಗಿದ್ದು, ರೇಡಿಯೋ ಹಾಗೂ ಜಾಹೀರಾತಿನಲ್ಲಿ ಕೆಲಸ ಮಾಡಿದ್ದ ಭರತ್ ಈ ಸಿನಿಮಾಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಹಾರರ್ ಕಾಮಿಡಿ ಸಿನಿಮಾ ಮೂಲಕ ನಿರ್ದೇಶನದ ಅಗ್ನಿ ಪರೀಕ್ಷೆಗೆ ಇಳಿದಿದ್ದಾರೆ. ಇದೊಂದು ನಿಗೂಢ ಕಥೆಯಾಗಿದ್ದು, ಇದಕ್ಕಾಗಿ ಕಾಡಿನ ಮಧ್ಯ ಇರುವ ಬ್ರಿಟಿಷ್ ವಾಸ್ತುಶಿಲ್ಪದ 103 ವರ್ಷಗಳ ಹಳೆಯ ಕಟ್ಟಡವನ್ನು ಆಯ್ಕೆ ಮಾಡಿಕೊಂಡಿದ್ದೇವೆ ಎಂದು ಚಿತ್ರ ಬಗ್ಗೆ ತಿಳಿಸಿದ್ದಾರೆ.

    ಚಿತ್ರವು ಹಾಸ್ಯದ ಮೂಲಕವೇ ಭಯವನ್ನು ಉಂಟು ಮಾಡುತ್ತದೆ. ಆ ರೀತಿಯ ಥ್ರಿಲ್ಲರ್ ಕಥೆಯನ್ನು ಹೆಣೆದಿದ್ದೇನೆ. ಅಲ್ಲದೆ ದೆವ್ವಗಳ ಅಸ್ಥಿತ್ವದ ಕುರಿತು ಹಾಗೂ ಪುನರ್‍ಜನ್ಮದ ಕುರಿತು ಸಹ ಪ್ರಶ್ನಿಸುತ್ತದೆ. ಚಿತ್ರಕ್ಕಾಗಿ ಈಗಾಗಲೇ ಲೋಕೇಶನ್ ಗುರುತಿಸಿದ್ದು, ಊಟಿ ಸುತ್ತಮುತ್ತ ಚಿತ್ರೀಕರಣ ನಡೆಯಲಿದೆ. ಪ್ರಸ್ತುತ ಗ್ರೌಂಡ್ ವರ್ಕ್ ಮಾಡುತ್ತಿದ್ದೇವೆ. ಲಾಕ್‍ಡೌನ್ ಮುಗಿದ ಬಳಿಕ ಚಿತ್ರೀಕರಣ ಪ್ರಾರಂಭಿಸಲು ಚಿಂತನೆ ನಡೆಸಿದ್ದೇವೆ ಎಂದು ನಿರ್ದೇಶಕ ಭರತ್ ಮಾಹಿತಿ ನೀಡಿದ್ದಾರೆ.

    ನಿರ್ಮಾಪಕರು ಸಹ ಚಿತ್ರದ ಟೆಕ್ನಿಸಿಯನ್ಸ್ ಗಾಗಿ ಹುಡುಕಾಟ ನಡೆಸಿದ್ದು, ನಿರ್ದೇಶಕರು ಪ್ರಮುಖ ಪಾತ್ರ ನಿರ್ವಹಿಸುವ ನಟರಿಗಾಗಿ ಹುಡುಕಾಟ ನಡೆಸಿದ್ದಾರಂತೆ. ಸೋಮವಾರದಿಂದಲೇ ಆಡಿಶನ್ಸ್ ನಡೆಯುತ್ತಿದೆಂತೆ. ಒಟ್ನಲ್ಲಿ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾ ಸೆಟ್ಟೇರಲು ಚಿತ್ರತಂಡ ಎಲ್ಲ ರೀತಿಯ ಸಿದ್ಧತೆ ನಡೆಸಿದ್ದು, ಪ್ರಮುಖ ಪಾತ್ರಗಳಲ್ಲಿ ಯಾರು ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಮನೆ ಮಾಡಿದೆ.