Tag: ರಂಗಸ್ಥಳಂ

  • ಸಮಂತಾ ಬಗ್ಗೆ ‘ಪುಷ್ಪ 2’ ಡೈರೆಕ್ಟರ್ ಶಾಕಿಂಗ್ ಕಾಮೆಂಟ್

    ಸಮಂತಾ ಬಗ್ಗೆ ‘ಪುಷ್ಪ 2’ ಡೈರೆಕ್ಟರ್ ಶಾಕಿಂಗ್ ಕಾಮೆಂಟ್

    ‘ಪುಷ್ಪ’ ಸಿನಿಮಾದ ಸಕ್ಸಸ್ ನಂತರ ‘ಪುಷ್ಪ 2’ (Pushpa 2) ಚಿತ್ರೀಕರಣದಲ್ಲಿ ನಿರ್ದೇಶಕ ಸುಕುಮಾರ್ (Sukumar) ಬ್ಯುಸಿಯಾಗಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ ಸಮಂತಾ ಬಗ್ಗೆ ಶಾಕಿಂಗ್ ಕಾಮೆಂಟ್‌ವೊಂದನ್ನು ಮಾಡಿದ್ದಾರೆ. ಅವರ ಸಂದರ್ಶನದ ಮಾತುಗಳು ಇದೀಗ ವೈರಲ್ ಆಗುತ್ತಿವೆ. ಇದನ್ನೂ ಓದಿ:ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಅಹಂ ಪ್ರೇಮಾಸ್ಮಿ, ಸಂತ ಚಿತ್ರದ ನಟಿ

    ರಂಗಸ್ಥಳಂ, ಪುಷ್ಪ 2 ಸಿನಿಮಾಗಳಲ್ಲಿ ನಟಿಸುವ ಮೂಲಕ ಸುಕುಮಾರ್ ನಿರ್ದೇಶನದ ಗರಡಿಯಲ್ಲಿ ಈಗಾಗಲೇ ಸಮಂತಾ ಪಳಗಿದ್ದಾರೆ. ಸಮಂತಾ ನಟಿಸಿದ ಈ 2 ಚಿತ್ರದ ಸೂಪರ್ ಡೂಪರ್ ಹಿಟ್ ಆಗಿದೆ. ಹೀಗಿರುವಾಗ ಸ್ಯಾಮ್ ನಟನೆ ಬಗ್ಗೆ ಸುಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ:ಅಯೋಧ್ಯೆ ಸೆಟ್ ನಿರ್ಮಾಣಕ್ಕೆ 11 ಕೋಟಿ ರೂ. ಮೀಸಲಿಟ್ಟ ಡೈರೆಕ್ಟರ್

    ಈ ಹಿಂದೆ ಸುಕುಮಾರ್ ನಿರ್ದೇಶಿಸಿದ ‘ರಂಗಸ್ಥಳಂ’ ಸಿನಿಮಾದಲ್ಲಿ ರಾಮಲಕ್ಷ್ಮಿ ಪಾತ್ರದಲ್ಲಿ ಸಮಂತಾ ನಟಿಸಿದ್ದರು. ಆದರೆ, ಸುಕುಮಾರ್‌ಗೆ ಸಮಂತಾ ಈ ಸಿನಿಮಾಗೆ ಬೇಡ ಅಂತ ಅನಿಸಿತ್ತಂತೆ. ರಾಮ್ ಚರಣ್ ಪಾತ್ರದಲ್ಲಿ ಬೇರೆಯವರನ್ನು ಊಹಿಸಿಕೊಳ್ಳಲು ಸಾಧ್ಯವಿರಲಿಲ್ಲ. ಆದರೆ, ಹಳ್ಳಿ ಹುಡುಗಿ ಪಾತ್ರದಲ್ಲಿ ಹೊಸ ಪ್ರತಿಭೆಯನ್ನು ಆಯ್ಕೆ ಮಾಡುವ ಬಗ್ಗೆ ಯೋಚನೆ ಮಾಡಿದ್ದರಂತೆ.

    ರಾಮ್ ಚರಣ್- ಸಮಂತಾ ಇಬ್ಬರೂ ಸ್ಟಾರ್ಸ್. ಇಬ್ಬರನ್ನು ಒಂದೇ ಸಿನಿಮಾದಲ್ಲಿ ಹಾಕಿಕೊಂಡರೆ ಅವರನ್ನು ಹ್ಯಾಂಡಲ್ ಮಾಡುವುದು ತುಂಬಾನೇ ಕಷ್ಟ. ಅದಕ್ಕಾಗಿ ಸಮಂತಾ ಬದಲು ಬೇರೆಯವರನ್ನು ಆಯ್ಕೆ ಮಾಡಿ ಸಿನಿಮಾ ಮುಗಿಸುವ ಪ್ಲ್ಯಾನ್ ಮಾಡಿದ್ದಂತೆ. ತಂಡದ ಜೊತೆಗಿನ ಚರ್ಚೆ ಬಳಿಕ ಮತ್ತೆ ಸಮಂತಾರನ್ನೇ ಆಯ್ಕೆ ಮಾಡಿದ್ದರು. ‘ರಂಗಸ್ಥಳಂ’ನಲ್ಲಿ ಅವರ ಅಭಿನಯ ನೋಡಿ ಸುಕುಮಾರ್ ಫಿದಾ ಆಗಿದ್ದಾಗಿ ಹೇಳಿದ್ದಾರೆ. ಸರಿಯಾದ ನಟಿಯನ್ನೇ ನಾವು ಆಯ್ಕೆ ಮಾಡಿದ್ವಿ ಎಂದು ಸಮಂತಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

    ನನ್ನ ಸಿನಿಮಾ ಕೆರಿಯರ್‌ನಲ್ಲಿ ತಾನು ನಿರ್ದೇಶನ ಮಾಡುವವರೆಗೂ ಸಮಂತಾರನ್ನು ಆಯ್ಕೆ ಮಾಡುತ್ತಲೇ ಇರುತ್ತೇನೆ ಎಂದಿದ್ದಾರೆ. ಸಮಂತಾಗೆ 30, 40 ಅದೆಷ್ಟೇ ವಯಸ್ಸಾದರೂ, ಅವರ ವಯಸ್ಸಿಗೆ ಸರಿ ಹೊಂದುವಂತಹ ಪಾತ್ರವನ್ನೇ ನೀಡುತ್ತೇನೆ ಎಂದಿದ್ದಾರೆ.

  • ರಂಗಸ್ಥಳದಲ್ಲೇ ಕುಸಿದು ಬಿದ್ದು ಯಕ್ಷಗಾನ ಕಲಾವಿದ ಸಾವು

    ರಂಗಸ್ಥಳದಲ್ಲೇ ಕುಸಿದು ಬಿದ್ದು ಯಕ್ಷಗಾನ ಕಲಾವಿದ ಸಾವು

    ಉಡುಪಿ: ರಂಗದಲ್ಲೇ ಕುಸಿದು‌ ಯಕ್ಷಗಾನ ಕಲಾವಿದ ಸಾವನ್ನಪ್ಪಿರುವ ಘಟನೆ ಉಡುಪಿ ಜಿಲ್ಲೆಯ ಬೈಂದೂರು‌ ತಾಲೂಕಿನ ಜೋಗಿಬೆಟ್ಟು ಗ್ರಾಮದಲ್ಲಿ ನಡೆದಿದೆ.

    ಬಡಗು ತಿಟ್ಟಿನ ಖ್ಯಾತ ಕಲಾವಿದ ಉತ್ತರ ಕನ್ನಡ ಮೂಲದ ಹುಡುಗೋಡು ಚಂದ್ರಹಾಸ ಮೃತ ಯಕ್ಷಗಾನ ಪಾತ್ರಧಾರಿ. ಭಾನುವಾರ ರಾತ್ರಿ ಜೋಗಿಬೆಟ್ಟು ಗ್ರಾಮದಲ್ಲಿ ಜಳವಳ್ಳಿ ಮೇಳದ ಭೀಷ್ಮವಿಜಯ ಪ್ರಸಂಗ ನಡೆಯುತ್ತಿತ್ತು.

    ಈ ಪ್ರಸಂಗದಲ್ಲಿ ಚಂದ್ರಹಾಸ ಸಾಲ್ವನ ಪಾತ್ರದಲ್ಲಿ ಅಭಿನಯಿಸುತ್ತಿದ್ದರು. ಆದ್ರೆ ರಂಗಸ್ಥಳದಲ್ಲಿ ಅಭಿನಯಿಸುತ್ತಿರುವಾಗಲೇ ಚಂದ್ರಹಾಸ ಅವರಿಗೆ ಹೃದಯಾಘಾತ ಸಂಭವಿಸಿದೆ. ಸಂಭಾಷಣೆ ಮುಗಿಸಿ ಕುಣಿತ ಆರಂಭಿಸುತ್ತಿದ್ದಂತೆ ಹಾರ್ಟ್ ಅಟ್ಯಾಕ್ ಆಗಿದೆ.

    ಎಲ್ಲರೂ ನೋಡನೋಡುತ್ತಿದ್ದಂತೆ ಚಂದ್ರಹಾಸ್ ರಂಗಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಆ ಬಳಿಕ ಅವರನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಯಿತದಾದರೂ ಪ್ರಯೋಜನವಾಗಿಲ್ಲ.

    ಚಂದ್ರಹಾಸ್ ಈ ಹಿಂದೆ ಪೆರ್ಡೂರು, ಸಾಲಿಗ್ರಾಮ ಮೇಳದಲ್ಲಿ ಕಲಾವಿದ ಆಗಿದ್ದರು. ಮೂರು ವರ್ಷದ ಹಿಂದೆ ಮೇಳವನ್ನು ಬಿಟ್ಟಿದ್ದರು. ಸದ್ಯ ಸ್ಥಳೀಯ ಪಂಚಾಯತ್ ಸದಸ್ಯ ಆಗಿದ್ದರು. ಭಾನುವಾರ ಜಳವಳ್ಳಿ ಮೇಳದಲ್ಲಿ ತಮ್ಮ ಪ್ರಸಿದ್ಧ ಸಾಲ್ವನ ಪಾತ್ರಕ್ಕೆ ಅತಿಥಿ‌ ಕಲಾವಿದರಾಗಿ ಬಂದಿದ್ದರು. ಆದ್ರೆ ವಿಧಿಯಾಟಕ್ಕೆ ರಂಗದಲ್ಲೇ ಕೊನೆಯುಸಿರು ಎಳೆದಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ಯಶ್ ಕೆಜಿಎಫ್‍ಗೆ ರಾಮ್‍ಚರಣ್ ಅಭಿಮಾನಿಗಳ ಬೆಂಬಲ!

    ಯಶ್ ಕೆಜಿಎಫ್‍ಗೆ ರಾಮ್‍ಚರಣ್ ಅಭಿಮಾನಿಗಳ ಬೆಂಬಲ!

    ಯಶ್ ಅಭಿನಯದ ಬಹುನಿರೀಕ್ಷಿತ ಕೆಜಿಎಫ್ ಚಿತ್ರದ ಬಗ್ಗೆ ಕುತೂಹಲ ಕುದಿಯಲಾರಂಭಿಸಿದೆ. ಆದರಿದು ಕನ್ನಡಕ್ಕೆ ಮಾತ್ರವೇ ಸೀಮಿತವಾಗದೆ ಬೇರೆ ಭಾಷೆಗಳಿಗೂ ಹಬ್ಬಿಕೊಂಡಿದೆ. ತಮಿಳುನಾಡಿನಲ್ಲಿಯೂ ಈ ಚಿತ್ರಕ್ಕಾಗಿ ಯಶ್ ಅಭಿಮಾನಿಗಳು ಕಾತರರಾಗಿರೋ ವಿಚಾರ ಈ ಹಿಂದೆ ಜಾಹೀರಾಗಿತ್ತು. ಈಗ ಹೊರ ಬಿದ್ದಿರೋದು ಕನ್ನಡದ ಅಣ್ತಮ್ಮನ ಚಿತ್ರದ ಬಗ್ಗೆ ತೆಲುಗು ನಾಡಲ್ಲಿ ಎದ್ದಿರೋ ಸಂಚಲನದ ಸುದ್ದಿ!

    ತೆಲುಗಿನಲ್ಲಿಯೂ ಯಶ್ ಅಭಿನಯದ ಕೆಜಿಎಫ್ ಬಗ್ಗೆ ವಿಪರೀತ ಕ್ರೇಜ್ ಆರಂಭವಾಗಿದೆ. ಇದಕ್ಕೆ ಕಾರಣವಾಗಿರೋದು ರಾಮ್‍ಚರಣ್ ಅಭಿಮಾನಿಗಳು. ರಾಮ್ ಚರಣ್ ಅಭಿಮಾನಿಗಳು ಚಿತ್ರಕ್ಕೆ ಭರ್ಜರಿ ಪ್ರಚಾರ ಕೊಡಲಾರಂಭಿಸಿದ್ದಾರೆ. ಇದಲ್ಲದೇ ರಾಮ್ ಚರಣ್ ಅವರು ರಂಗಸ್ಥಳಂ ಚಿತ್ರದಲ್ಲಿ ಗೆದ್ದಂತೆಯೇ, ಯಶ್ ಕೂಡಾ ಕೆಜಿಎಫ್ ಮೂಲಕ ಗೆಲ್ಲಲಿದ್ದಾರೆಂಬ ಭವಿಷ್ಯವನ್ನೂ ಹೇಳಿದ್ದಾರೆ.

    ರಾಮ್ ಚರಣ್ ರಂಗಸ್ಥಳಂ ಚಿತ್ರದ ಮೂಲಕ ಹಳೇ ಕಥೆಯ ಪಾತ್ರವೊಂದಕ್ಕೆ ಜೀವ ತುಂಬಿದ್ದದರು. ಯಶ್ ಅಭಿನಯದ ಕೆಜಿಎಫ್ ಕೂಡಾ ಅಂಥಾದ್ದೇ ಕಥಾನಕ ಹೊಂದಿದೆ. ರಾಮ್ ಚರಣ್ ಅವರಂತೆಯೇ ಯಶ್ ಭಿನ್ನ ಗೆಟಪ್ಪುಗಳು ಮಿಂಚುತ್ತಿವೆ. ಆದ್ದರಿಂದ ಈ ಚಿತ್ರಕ್ಕೆ ರಂಗಸ್ಥಳಂನಂಥಾದ್ದೇ ಗೆಲುವು ಸಿಗಲಿದೆ ಎಂಬುದು ರಾಮ್ ಚರಣ್ ಅಭಿಮಾನಿಗಳ ಅಭಿಪ್ರಾಯ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಮ್ ಚರಣ್ ತಂದೆ ಅಂತಾ ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತೆ: ಮೆಗಾಸ್ಟಾರ್

    ರಾಮ್ ಚರಣ್ ತಂದೆ ಅಂತಾ ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತೆ: ಮೆಗಾಸ್ಟಾರ್

    ಹೈದರಾಬಾದ್: ಟಾಲಿವುಡ್ ನ ಬಹುನಿರೀಕ್ಷತ ರಾಮ್‍ಚರಣ್ ಅಭಿನಯದ ‘ರಂಗಸ್ಥಳಂ’ ಮಾರ್ಚ್ 30ರಂದು ದೇಶಾದ್ಯಂತ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಈಗಾಗಲೇ ಅಭಿಮಾನಿಗಳು ಸೇರಿದಂತೆ ಟಾಲಿವುಡ್ ಗಣ್ಯರೆಲ್ಲಾ ಶುಭಕೋರುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಮ್‍ಚರಣ್ ತಂದೆ ಮೆಗಾಸ್ಟಾರ್ ಚಿರಂಜೀವಿ ಸಹ ಭಾವನಾತ್ಮಕವಾಗಿ ಪುತ್ರನ ಸಿನಿಮಾಗೆ ವಿಶ್ ಮಾಡಿದ್ದಾರೆ.

    ಖೈದಿ ಸಿನಿಮಾ ಹೇಗೆ ನನ್ನ ಜೀವನದಲ್ಲಿ ಪ್ರಮುಖ ಪಾತ್ರವನ್ನ ಪಡೆದುಕೊಂಡಿದೆಯೋ, ಅದೇ ರೀತಿಯಲ್ಲಿ ರಂಗಸ್ಥಳಂ ಚಿತ್ರ ರಾಮ್ ಜೀವನದ ಮಹತ್ವದ ಮೈಲಿಗಲ್ಲು ಆಗಲಿದೆ. ಈಗಾಗಲೇ ನಾನು ಸಿನಿಮಾ ವೀಕ್ಷಣೆ ಮಾಡಿದ್ದು, ಚಿತ್ರ ಅದ್ಭುತವಾಗಿ ಮೂಡಿ ಬಂದಿದೆ. ನನಗೆ ರಾಮ್ ಚರಣ್ ತಂದೆ ಹೇಳಿಕೊಳ್ಳಲು ಹೆಮ್ಮೆ ಆಗುತ್ತದೆ ಅಂತಾ ಮೆಗಾಸ್ಟರ್ ಹೇಳಿಕೊಂಡಿದ್ದಾರೆ.

    ಸಿನಿಮಾ ಪ್ರಮೋಶನ್ ನಲ್ಲಿ ಬ್ಯೂಸಿಯಾಗಿರುವ ರಾಮ್ ಚರಣ್ ಮಂಗಳವಾರ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡ್ರು. ರಾಮ್ ಬ್ಯೂಸಿ ಆಗಿದ್ದರಿಂದ ತಂದೆ ರವಿವಾರದಂದು ಮಗನ ಹುಟ್ಟುಹಬ್ಬ ಆಚರಿಸಿದ್ದಾರೆ. ಪುತ್ರ ರಾಮ್‍ಚರಣ್ ಪೋಷಕರು ಸುಂದರವಾದ ವಾಚ್ ಗಿಫ್ಟ್ ನೀಡಿದ್ದಾರೆ. ಬರ್ತ್ ಡೇ ಫೋಟೋಗಳನ್ನು ರಾಮ್‍ಚರಣ್ ತಮ್ಮ ಫೇಸ್‍ಬುಕ್ ನಲ್ಲಿ ಅಪ್ಲೋಡ್ ಮಾಡಿಕೊಂಡು, ತಂದೆ-ತಾಯಿಗೆ ಧನ್ಯವಾದ ಹೇಳಿದ್ದಾರೆ.

    ಸುಕುಮಾರ್ ನಿರ್ದೇಶನದಲ್ಲಿ ರಂಗಸ್ಥಳಂ ಸಿನಿಮಾ ಮೂಡಿಬಂದಿದೆ. ಚಿತ್ರದಲ್ಲಿ ರಾಮ್‍ಚರಣ್ ಗೆ ನಾಯಕಿಯಾಗಿ ಸಮಂತಾ ಅಕ್ಕಿನೇನಿ ಜೊತೆಯಾಗಿದ್ದಾರೆ. ಚಿತ್ರಕ್ಕೆ ದೇವಿ ಶ್ರೀ ಪ್ರಸಾದ್ ಸಂಗೀತವಿದ್ದು, ನವೀನ್ ಯೆರ್ಮಿನಿ, ರವಿ ಶಂಕರ್ ಮತ್ತು ಮೋಹನ್ ಚೆರುಕುರಿ ಜಂಟಿಯಾಗಿ ಬಂಡವಾಳ ಹೂಡಿದ್ದಾರೆ.