Tag: ಯೋಧ

  • CRPF ಸಹ ಸೈನಿಕರ ಮೇಲೆ ಗುಂಡಿನ ದಾಳಿ- ನಾಲ್ವರು ಬಲಿ, ಮೂವರಿಗೆ ಗಂಭೀರ ಗಾಯ

    CRPF ಸಹ ಸೈನಿಕರ ಮೇಲೆ ಗುಂಡಿನ ದಾಳಿ- ನಾಲ್ವರು ಬಲಿ, ಮೂವರಿಗೆ ಗಂಭೀರ ಗಾಯ

    ಚಂಢೀಗಡ: ಸಹೋದ್ಯೋಗಿ ಗುಂಡಿನ ದಾಳಿಗೆ ನಾಲ್ವರು ಕೇಂದ್ರೀಯ ಮೀಸಲು ಪೊಲೀಸ್ ಪಡೆ(ಸಿಆರ್​​ಪಿಎಫ್) ಸಿಬ್ಬಂದಿ ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿರುವ ಘಟನೆ ಛತ್ತೀಸ್‍ಗಢದ ಸುಕ್ಮಾ ಜಿಲ್ಲೆಯಲ್ಲಿ ನಡೆದಿದೆ.

    ರಾಜ್ಯ ರಾಜಧಾನಿ ರಾಯ್‍ಪುರದಿಂದ ಸುಮಾರು 400 ಕಿ.ಮೀ ದೂರದಲ್ಲಿರುವ ಸುಕ್ಮಾ ಜಿಲ್ಲೆಯ ಮರೈಗುಡೆಮ್‍ನಲ್ಲಿರುವ ಲಿಂಗಂಪಲ್ಲಿಯ 50ನೇ ಬೆಟಾಲಿಯನ್‍ನ ಶಿಬಿರದಲ್ಲಿ ಸಿಆರ್‍ಪಿಎಫ್ ಯೋಧರ ನಡುವೆ ಘರ್ಷಣೆ ನಡೆದಿದ್ದು, ಈ ಘಟನೆ ಮುಂಜಾನೆ 3.30ರ ಸುಮಾರಿಗೆ ನಡೆದಿದೆ ಎಂದು ಪೊಲೀಸ್ ಮಹಾನಿರೀಕ್ಷಕ (ಬಸ್ತರ್ ಶ್ರೇಣಿ) ಸುಂದರರಾಜ್ ಪಿ. ಹೇಳಿದ್ದಾರೆ. ಇದನ್ನೂ ಓದಿ: ಸ್ವಿಗ್ಗಿ ಊಟ ತಂದು ಕೊಡದಕ್ಕೆ ಪಿಎಂ, ಸಿಎಂಗೆ ಪತ್ರ ಬರೆದ ಸಿನಿಮಾ ಸೂಪರ್ ಸ್ಟಾರ್

    ಯೋಧನೊಬ್ಬ ತನ್ನ ಸಹ ಸೈನಿಕರ ಮೇಲೆ ಗುಂಡು ಹಾರಿಸಿದ್ದಾನೆ. ಈ ವೇಳೆ ನಾಲ್ವರು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿದ್ದಾರೆ. ಹೀಗಾಗಿ ಕೂಡಲೇ ಆತನನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಾಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ವಿಕ್ಕಿ, ಕತ್ರಿನಾ ಮದುವೆ ಸಿದ್ಧತೆ ಶುರು

  • ಜಮ್ಮು & ಕಾಶ್ಮೀರ: ಜಾಕ್ ಸ್ಲಿಪ್ ಆಗಿ ಗಾಯಗೊಂಡು ಕೋಮಾದಲ್ಲಿದ್ದ ಕಾಫಿನಾಡಿನ ಯೋಧ ಸಾವು

    ಜಮ್ಮು & ಕಾಶ್ಮೀರ: ಜಾಕ್ ಸ್ಲಿಪ್ ಆಗಿ ಗಾಯಗೊಂಡು ಕೋಮಾದಲ್ಲಿದ್ದ ಕಾಫಿನಾಡಿನ ಯೋಧ ಸಾವು

    ಚಿಕ್ಕಮಗಳೂರು: ವಾಹನ ರಿಪೇರಿ ಮಾಡುವಾಗ ಜಾಕ್ ಸ್ಲಿಪ್ ಆಗಿ ತಲೆಗೆ ಗಂಭೀರವಾಗಿ ನಾಲ್ಕು ದಿನದಿಂದ ಕೋಮಾದಲ್ಲಿದ್ದ ಜಿಲ್ಲೆಯ ಕಡೂರು ತಾಲೂಕಿನ ಬಿಳವಾಳ ಗ್ರಾಮದ ಯೋಧ ಜಮ್ಮುವಿನಲ್ಲಿ ಕೊನೆಯುಸಿರೆಳೆದಿದ್ದಾರೆ.

    ಮೃತ ಯೋಧನನ್ನು 45 ವರ್ಷದ ಬಿ.ಕೆ.ಶೇಷಪ್ಪ ಎಂದು ಗುರುತಿಸಲಾಗಿದೆ. ಮೂಲತಃ ಕಡೂರು ತಾಲೂಕಿನ ಶೇಷಪ್ಪ ಕಳೆದ 20 ವರ್ಷಗಳಿಂದ ಗಡಿ ಭದ್ರತಾ ಪಡೆ (ಬಿ.ಎಸ್.ಎಫ್)ಯಲ್ಲಿ ಮ್ಯಾಕನಿಕಲ್ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಇದನ್ನೂ ಓದಿ: ನಾಳೆ ಪುನೀತ್ 11ನೇ ದಿನದ ಪುಣ್ಯಾರಾಧನೆ – ಅಪ್ಪು ಕುಟುಂಬಸ್ಥರಿಂದ ಭಾರೀ ಸಿದ್ಧತೆ

    ಶೇಷಪ್ಪ ನಾಲ್ಕು ದಿನದ ಹಿಂದೆ ಕರ್ತವ್ಯದಲ್ಲಿದ್ದಾಗ ವಾಹನ ರಿಪೇರಿ ಮಾಡುವ ವೇಳೆ ಜಾಕ್ ಸ್ಲಿಪ್ ಆಗಿ ವಾಹನ ಮೇಲೆ ಬಿದ್ದ ಪರಿಣಾಮ ಅವರ ತಲೆಗೆ ಗಂಭೀರ ಗಾಯವಾಗಿ ಕೋಮಾಗೆ ಜಾರಿದ್ದರು. ಅವರಿಗೆ ವೈಷ್ಣೋದೇವಿ ಬಳಿಯ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಕಳೆದ ನಾಲ್ಕು ದಿನದಿಂದ ಕೋಮದಲ್ಲಿದ್ದ ಶೇಷಪ್ಪ ಚಿಕಿತ್ಸೆ ಫಲಕಾರಿಯಾಗದೆ ಇಂದು ಸಂಜೆ ಕೊನೆಯುಸಿರೆಳೆದಿದ್ದಾರೆ. ಇದನ್ನೂ ಓದಿ: ಕಿರುತೆರೆ ಕ್ರಿಕೆಟ್ ಗುಂಗು ಡಿಸೆಂಬರ್ ಎರಡನೇ ವಾರದಿಂದ TCL ಕಿಕ್ ಸ್ಟಾರ್ಟ್

    ಶೇಷಪ್ಪ ಅವರಿಗೆ ಅನಾಹುತವಾದ ವಿಷಯ ತಿಳಿದ ಕೂಡಲೇ ಬಿಳವಾಲದಿಂದ ಅವರ ಹಿರಿಯ ಸಹೋದರ ಪ್ರಕಾಶ್ ಜಮ್ಮುವಿಗೆ ತೆರಳಿದ್ದರು. ಶೇಷಪ್ಪ ಅವರ ಚೇತರಿಕೆಗಾಗಿ ಗ್ರಾಮಸ್ಥರು ಹಾಗೂ ಸ್ನೇಹಿತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದರು. ಯೋಧನ ನಿಧನದ ಸುದ್ದಿಯಿಂದ ಗ್ರಾಮದಲ್ಲಿ ಸ್ಮಶಾನ ಮೌನ ಆವರಿಸಿದೆ. ಶೇಷಪ್ಪ ಅವರ ಪಾರ್ಥಿವ ಶರೀರ ಭಾನುವಾರ ವಿಮಾನದ ಮೂಲಕ ಬೆಂಗಳೂರಿಗೆ ಬರಲಿದೆ. ಬೆಂಗಳೂರಿನಿಂದ ಸಂಜೆ ವೇಳೆಗೆ ಸ್ವಗ್ರಾಮ ಬಿಳವಾಲಕ್ಕೆ ಆಗಮಿಸುವ ನಿರೀಕ್ಷೆ ಇದೆ. ಬಿಳವಾಲದಲ್ಲಿಯೇ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕುಟುಂಬಸ್ಥರು ತಿಳಿಸಿದ್ದಾರೆ.

    ಕಡೂರು ತಾಲ್ಲೂಕಿನ ಬಿಳವಾಲ ಗ್ರಾಮದ ಕೇಶವಪ್ಪ ಮತ್ತು ಮಾಳಮ್ಮ ದಂಪತಿ 2ನೇ ಮಗ ಶೇಷಪ್ಪ. ಅವರಿಗೆ ಪತ್ನಿ ಮತ್ತು ಎರಡು ಮಕ್ಕಳು ಇದ್ದಾರೆ.

  • ಯೋಧರಿಗೆ ಇಡೀ ದೇಶವೇ ಋಣಿಯಾಗಿರಬೇಕು: ಲಕ್ಷ್ಮಿ ಹೆಬ್ಬಾಳ್ಕರ್

    ಯೋಧರಿಗೆ ಇಡೀ ದೇಶವೇ ಋಣಿಯಾಗಿರಬೇಕು: ಲಕ್ಷ್ಮಿ ಹೆಬ್ಬಾಳ್ಕರ್

    ಬೆಳಗಾವಿ: ಯೋಧರಿಗೆ ಇಡೀ ದೇಶವೇ ಋಣಿಯಾಗಿರಬೇಕು ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದ್ದಾರೆ.

    ಬೆಳಗಾವಿ ಗ್ರಾಮೀಣ ಕ್ಷೇತ್ರದ ಮುತ್ನಾಳ ಗ್ರಾಮದಲ್ಲಿ ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಹಾತ್ಮಾ ಗಾಂಧಿ ಮಾಜಿ ಸೈನಿಕರ ಸಂಘವನ್ನು ಬೆಳಗಾವಿ ಗ್ರಾಮೀಣ ಶಾಸಕಿ ಉದ್ಘಾಟಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ಅವರು, ದೇಶ ಸುಭದ್ರ ಸ್ಥಿತಿಯಲ್ಲಿರುವುದಕ್ಕೆ ಸೈನಿಕರೇ ಕಾರಣರಾಗಿದ್ದಾರೆ. ಸೈನಿಕರನ್ನು ಗೌರವಿಸುವುದು ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಬಂಧು-ಬಳಗವನ್ನೆಲ್ಲ ಬಿಟ್ಟು ದೇಶದ ಗಡಿಭಾಗಗಳಲ್ಲಿ ಕರ್ತವ್ಯ ನಿರತರಾಗಿರುವ ಸೈನಿಕರಿಗೆ ಹಾಗೂ ಕರ್ತವ್ಯದಿಂದ ನಿವೃತ್ತಿಯಾಗಿರುವ ಎಲ್ಲ ಸೈನಿಕರಿಗೆ ನಾವೆಲ್ಲ ಋಣಿಯಾಗಿರಬೇಕು ಎಂದು ಹೇಳಿದರು. ಇದನ್ನೂ ಓದಿ: ನೀಟ್ ಪರೀಕ್ಷೆಯಲ್ಲಿ 384ನೇ ರ‍್ಯಾಂಕ್ ಪಡೆದ RLS ವಿದ್ಯಾರ್ಥಿ

    ಈ ವೇಳೆ ದಿವ್ಯ ಸಾನಿಧ್ಯವನ್ನು ಮುತ್ನಾಳ್ ಕೇದಾರಪೀಠದ ಶಿವಾನಂದ್ ಮಹಾಸ್ವಾಮಿಗಳು ವಹಿಸಿದ್ದರು.

  • ಸೈಕಲ್ ರ‍್ಯಾಲಿ ಯೋಧರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

    ಸೈಕಲ್ ರ‍್ಯಾಲಿ ಯೋಧರನ್ನು ಆತ್ಮೀಯವಾಗಿ ಬರಮಾಡಿಕೊಂಡ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ

    ಚಿಕ್ಕಬಳ್ಳಾಪುರ: ಆಜಾದ್ ಕೀ ಅಮೃತ ಮಹೋತ್ಸವದ ಸಂಭ್ರಮದ ಸವಿನೆನಪಿಗಾಗಿ ಯೋಧರು ಕನ್ಯಾಕುಮಾರಿಯಿಂದ ದೆಹಲಿಯ ರಾಜ್ ಘಟ್ ವರೆಗೂ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದ್ದು, ಈ ವೇಳೆ ಯೋಧರನ್ನು ಆತ್ಮೀಯವಾಗಿ ಶಾಸಕರು ಬರಮಾಡಿಕೊಂಡರು.

    ಆಜಾದ್ ಕೀ ಅಮೃತ ಮಹೋತ್ಸವ ಪ್ರಯುಕ್ತ ಕನ್ಯಾಕುಮಾರಿಯಿಂದ ರಾಜ್ ಘಟ್ ವರೆಗೂ ಯೋಧರು ಈ ಸೈಕಲ್ ರ‍್ಯಾಲಿ ಹಮ್ಮಿಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಬೆಂಗಳೂರು ಮೂಲಕ ಚಿಕ್ಕಬಳ್ಳಾಪುರ ಆಂಧ್ರಪ್ರದೇಶದ ಮಾರ್ಗವಾಗಿ ದೆಹಲಿಯ ರಾಜ್ ಘಟ್ ಗೆ ತೆರಳುವಾಗ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ಪಟ್ಟಣಕ್ಕೆ ಯೋಧರು ಆಗಮಿಸಿದ್ದಾರೆ. ಯೋಧರಿಗೆ ಜಿಲ್ಲಾಡಳಿತ ಹಾಗೂ ಸ್ಥಳೀಯ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಆತ್ಮೀಯವಾಗಿ ಬರಮಾಡಿಕೊಂಡರು. ಇದನ್ನೂ ಓದಿ:ಸೆ.5ರಂದು ‘ಗೌರಿ ಲಂಕೇಶ್ ದಿನ’ವನ್ನಾಗಿ ಆಚರಿಸಲಿದೆ ಕೆನಡಾದ ಬರ್ನಾಬಿ ನಗರ

    ಯೋಧ ಮಹಾಂತೇಶ್ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ಉಗ್ರರ ದಾಳಿಯಿಂದ ಅಘ್ಘಾನಿಸ್ತಾನದಲ್ಲಿ ಅರಾಜಕತೆ ಉಂಟಾಗಿದ್ದರೂ, ಭಾರತದಲ್ಲಿ ಜನ ನೆಮ್ಮದಿಯಾಗಿದ್ದಾರೆ. ಇದಕ್ಕೆ ಮತ್ತಷ್ಟು ಆತ್ಮಸ್ಥೈರ್ಯ ತುಂಬುವ ನಿಟ್ಟಿನಲ್ಲಿ ಅಮೃತ ಕಾ ಮಹೋತ್ಸವದ ಕಾರ್ಯಕ್ರಮದಡಿಯಲ್ಲಿ ಕನ್ಯಾಕುಮಾರಿಯಿಂದ ದೆಹಲಿಯ ಮಹಾತ್ಮ ಗಾಂಧಿ ಅವರ ಸಮಾಧಿ ಸ್ಥಳವಾದ ರಾಜ್ ಘಟ್ ಗೆ ಸೈಕಲ್ ರ‍್ಯಾಲಿ ಮೂಲಕ ತೆರಳುತ್ತಿದ್ದು, ಮಾರ್ಗ ಮಧ್ಯೆ ಜನರಿಗೆ ಆತ್ಮಸ್ಥೈರ್ಯ ತುಂಬುವ ಕೆಲಸ ಮಾಡ್ತಿದ್ದೇವೆ ಎಂದು ಸಂತಸ ಹಂಚಿಕೊಂಡರು. ಇದನ್ನೂ ಓದಿ:ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ

    ಇನ್ನೂ ಭಾರತದ ಪ್ರಜೆಗಳೆಲ್ಲ ಒಂದೇ. ಎಲ್ಲರಲ್ಲೂ ಆತ್ಮಸ್ಥೈರ್ಯ ತುಂಬಿ ದೇಶದ ಬಲಿಷ್ಠತೆಗೊಸ್ಕರ ಜನರಲ್ಲಿ ನೈತಿಕ ಸ್ಥೈರ್ಯ ತುಂಬುವ ಸಲುವಾಗಿ 20 ಮಂದಿ ಸೈನಿಕರು ಈ ಕಾರ್ಯವನ್ನು ಹಮ್ಮಿಕೊಂಡಿದ್ದಾರೆ. ಆಗಸ್ಟ್ 22 ರಂದು ಕನ್ಯಾಕುಮಾರಿಯಲ್ಲಿ ಸೈಕಲ್ ರ‍್ಯಾಲಿ ಆರಂಭವಾಗಿದ್ದು, ಅಕ್ಟೋಬರ್ 2 ರಂದು ದೆಹಲಿಯ ರಾಜ್ ಘಟ್ ತಲುಪಲಿದ್ದಾರೆ.

    ಸೈಕಲ್ ರ‍್ಯಾಲಿ ಮುಖಾಂತರ ಚಿಕ್ಕಬಳ್ಳಾಪುರ ಜಿಲ್ಲೆಗೆ ಆಗಮಿಸಿದ ಯೋಧರನ್ನು ಜಿಲ್ಲಾಡಳಿತದಿಂದ ಆತ್ಮೀಯವಾಗಿ ಬರ ಮಾಡಿಕೊಂಡು ಸ್ವಾಗತ ಕೋರಿ ಸತ್ಕರಿಸಲಾಯಿತು. ರಾಷ್ಟ್ರಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಸಂದ ಹಿನ್ನೆಲೆಯಲ್ಲಿ ದೇಶಾದ್ಯಂತ ಅಜಾದ್ ಕೀ ಅಮೃತ ಮಹೋತ್ಸವ ಸಡಗರ ಸಂಭ್ರಮದಿಂದ ಜರುಗುತ್ತಿದ್ದು, ಸಿ.ಆರ್.ಫಿ.ಎಫ್ ಯೋಧರು ಸಹ ಸಂಭ್ರಮದಲ್ಲಿ ತೊಡಗಿದ್ದಾರೆ. ಇದನ್ನೂ ಓದಿ:ಮದುವೆಗೆ ಹಿರಿಯ ಮಗಳು ಒಪ್ಪದ್ದಕ್ಕೆ ಕಿರಿಯ ಮಗಳನ್ನೇ ಕಿಡ್ನಾಪ್‍ಗೈದ್ರು

    ಸಾವಿರಾರು ಕಿಲೋಮೀಟರ್ ದೂರ ಸೈಕಲ್ ಮುಖಾಂತರ ಕ್ರಮಿಸುವ ಸಾಹಸಕ್ಕೆ ಮುಂದಾಗಿದ್ದು, ಈ ನಿಟ್ಟಿನಲ್ಲಿ ಸೈಕಲ್ ಜಾಥ ಕೈಗೊಂಡ ಯೋಧರ ರ‍್ಯಾಲಿ ಬಾಗೇಪಲ್ಲಿ ಪಟ್ಟಣಕ್ಕೆ ಬಂದ ವೇಳೆ ತಾಲೂಕು ಆಡಳಿತ ಪಟ್ಟಣದಲ್ಲಿ ಯೋಧರಿಗೆ ಭಾವಪೂರ್ಣ ಸ್ವಾಗತ ಕೋರಿ ಸೈನಿಕರಿಗೆ ಸಕಲ ವ್ಯವಸ್ಥೆ ಕಲ್ಪಿಸಿತು.

    ಸೈಕಲ್ ಜಾಥದಲ್ಲಿ ಬಂದ ಯೋಧರಿಗೆ ಆತ್ಮೀಯ ಸ್ವಾಗತ ಕೋರಿದ ಬಾಗೇಪಲ್ಲಿ ತಾಲೂಕು ಆಡಳಿತ ರಾತ್ರಿ ತಂಗಲಿಕ್ಕೆ ಸಕಲ ವ್ಯವಸ್ಥೆ ಮಾಡಿದೆ. ಬೆಳಿಗ್ಗೆ ಧ್ವಜಾರೋಹಣ, ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳ ಮೂಲಕ ಸೈನಿಕರ ಬೀಳ್ಕೊಡುಗೆ ಕಾರ್ಯವನ್ನು ನಡೆಸಿಕೊಟ್ಟಿತು. ಇದನ್ನೂ ಓದಿ:ರೋಹಿಣಿ ಸಿಂಧೂರಿಯಿಂದ 6 ಕೋಟಿ ಅಕ್ರಮ: ಸಾರಾ ಮಹೇಶ್ ಆರೋಪ

  • ರಸ್ತೆ ಅಪಘಾತ, ದೇವನಕಟ್ಟಿಯ ಯೋಧ ಮುಂಬೈನಲ್ಲಿ ಸಾವು- ಸ್ವಗ್ರಾಮದಲ್ಲಿ ಅಂತಿಮ ನಮನ

    ರಸ್ತೆ ಅಪಘಾತ, ದೇವನಕಟ್ಟಿಯ ಯೋಧ ಮುಂಬೈನಲ್ಲಿ ಸಾವು- ಸ್ವಗ್ರಾಮದಲ್ಲಿ ಅಂತಿಮ ನಮನ

    – ಸೇವೆಗೆ ಹೊರಟಿರುವಾಗಲೇ ಅಪಘಾತ
    – ಸರ್ಕಾರಿ ಗೌರವದೊಂದಿಗೆ ಯೋಧನಿಗೆ ಅಂತಿಮ ನಮನ

    ಚಿಕ್ಕೋಡಿ: ಸೇವೆಗೆ ಹಾಜರಾಗಲು ಹೊರಟಿರುವಾಗ ಸೆಪ್ಟೆಂಬರ್ 1ರಂದು ಮಾರ್ಗಮಧ್ಯೆ ಮುಂಬಯಿ ನಗರದಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ ರಾಯಭಾಗ ತಾಲೂಕಿನ ಯೋಧ ಯಲ್ಲಪ್ಪಾ ಬಾಲಪ್ಪಾ ನಾಯಿಕ ಅವರ ಅಂತ್ಯಸಂಸ್ಕಾರವನ್ನು ತಾಲೂಕಿನ ದೇವನಕಟ್ಟಿಯಲ್ಲಿ ಗುರುವಾರ ಸರ್ಕಾರಿ ಗೌರವಗಳೊಂದಿಗೆ ನೆರವೇರಿಸಲಾಯಿತು.

    ರಾಯಭಾಗ ತಾಲೂಕು ದೇವನಕಟ್ಟಿ ನಿವಾಸಿಯಾದ ಯಲ್ಲಪ್ಪಾ ಅವರು, ಕಳೆದ 9 ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು. ಮಂಗಳವಾರ ರಾತ್ರಿ ಸೇವೆಗೆ ಹಾಜರಾಗಲು ಸ್ವಗ್ರಾಮದಿಂದ ಜಮ್ಮು-ಕಾಶ್ಮೀರಕ್ಕೆ ಹೊರಟಿರುವಾಗ ಮಾರ್ಗಮಧ್ಯೆ ರಸ್ತೆಯ ಅಪಘಾತದಿಂದ ಸಾವನ್ನಪ್ಪಿದ್ದರು. ಯಲ್ಲಪ್ಪ ಅವರ ಪಾರ್ಥಿವ ಶರೀರವು ಗುರುವಾರ ಬೆಳಗ್ಗೆ 6ಗಂಟೆ ಸುಮಾರಿಗೆ ಬೆಳಗಾವಿಗೆ ಆಗಮಿಸಿತ್ತು. ಮಧ್ಯಾಹ್ನ ರಸ್ತೆಯ ಮೂಲಕ ಬೆಳಗಾವಿಯಿಂದ ಸ್ವಗ್ರಾಮಕ್ಕೆ ತರಲಾಯಿತು. ಮಾಜಿ ಸೈನಿಕರು, ಮತ್ತಿತರರು ಸ್ಥಳಕ್ಕೆ ಬಂದು ಹೂ ಮಾಲೆಗಳನ್ನು ಅರ್ಪಿಸಿ ಅಂತಿಮ ನಮನ ಸಲ್ಲಿಸಿದರು. ಇದನ್ನೂ ಓದಿ: ಬೆಂಗಳೂರಿನಲ್ಲಿ ತಲೆ ಎತ್ತಿರುವ ಅಕ್ರಮ ಕ್ಯಾಸಿನೋ ಅಡ್ಡೆಗಳನ್ನು ಕೂಡಲೇ ನಿಲ್ಲಿಸಿ – ಕೆಜೆ ಜಾರ್ಜ್ ಪತ್ರ

    ತಾಲೂಕು ಆಡಳಿತ ಹಾಗೂ ಜನಪ್ರತಿನಿಧಿಗಳ ವತಿಯಿಂದ ಯೋಧನಿಗೆ ಗೌರವ ಸಲ್ಲಿಸಿದ ಬಳಿಕ ಅಲಂಕೃತ ವಾಹನದಲ್ಲಿ ಬೂದಿಹಾಳ ಕ್ರಾಸ್‍ನಿಂದ ದೇವನಕಟ್ಟೆಯವರೆಗೆ ಮೆರವಣಿಗೆ ಮಾಡಲಾಯಿತು. ಬಳಿಕ ಅದೇ ವಾಹನದಲ್ಲಿ ಶರೀರವನ್ನು ದೇವನಕಟ್ಟೆಗೆ ಒಯ್ದು ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಿ, ಬಳಿಕ ಸರ್ಕಾರಕ್ಕೆ ಸೇರಿದ ಜಮೀನಿನಲ್ಲೇ ಅಂತ್ಯಕ್ರಿಯೆ ನೆರವೇರಿಸಲಾಯಿತು. ಯೋಧ ಯಲ್ಲಪ್ಪನ ಪ್ರಾರ್ಥಿವ ಶರೀರ ಗುರು ರೂಪಿಸಿವಾರ ದೇವನಕಟ್ಟಿಗೆ ಬಂದಾಗ ಸುತ್ತಲಿನ ಗ್ರಾಮಸ್ಥರು, ಜನಪ್ರತಿನಿಧಿಗಳು ಕಂಬನಿ ಗೈದರು.

    ಯೋಧನ ಮಡದಿ, ತಾಯಿ ಬಂಧುಗಳು ಅಂತಿಮ ನಮನ ಸಲ್ಲಿಸಿದರು. ಚಿತೆಗೆ ಅಗ್ನಿ ಸ್ಪರ್ಶ ಮಾಡುವ ಸಂದರ್ಭದಲ್ಲಿ ಮೃತ ಯೋಧನ ಮಗ ಬಾಲಚಂದ್ರ ನನ್ನಪ್ಪನನ್ನು ಮಲಗಿಸಿ ಬೆಂಕಿ ಹಚ್ಚುತ್ತಿದ್ದೀರಿ ಅವರಿಗೆ ನೋವಾಗುತೆ ಎಂದಾಗ ನೆರೆದಿದ್ದವರಲ್ಲಿ ದುಃಖ ಉಮ್ಮಳಿಸಿತ್ತು. ತಹಶೀಲ್ದಾರ್ ರಿಯಾಜುದ್ದಿನ ಬಾಗವಾನ, ಸಿಪಿಐ ಎಚ್.ಡಿ.ಮುಲ್ಲಾ, ಕಂದಾಯ ನಿರೀಕ್ಷಕ ವಿಜಯ ಜೋರೆ, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ ಡವಳಿ, ಇಓ ಡಾ.ಸುರೇಶ ಕದ್ದು ಇತರರು ಅಂತ್ಯಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.

  • ಅಫ್ಘಾನ್‍ನಿಂದ ವಾಪಸಾದ ಚಿಕ್ಕೋಡಿಯ ಯೋಧ- ಕುಟಂಬಸ್ಥರಲ್ಲಿ ಸಂತಸ

    ಅಫ್ಘಾನ್‍ನಿಂದ ವಾಪಸಾದ ಚಿಕ್ಕೋಡಿಯ ಯೋಧ- ಕುಟಂಬಸ್ಥರಲ್ಲಿ ಸಂತಸ

    – ಪತ್ನಿ, ಮಗು ಹಾಗೂ ತಾಯಿಯ ಮೊಗದಲ್ಲಿ ಮಂದಹಾಸ

    ಚಿಕ್ಕೋಡಿ/ಬೆಳಗಾವಿ: ಅಫ್ಘಾನಿಸ್ತಾನದ ರಾಜಧಾನಿ ಕಾಬೂಲ್‍ನ ಭಾರತೀಯ ರಾಯಭಾರಿ ಕಚೇರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಚಿಕ್ಕೋಡಿಯ ಯೋಧ ಸುರಕ್ಷಿತವಾಗಿ ಭಾರತಕ್ಕೆ ಮರಳಿರುವುದಕ್ಕೆ ಯೋಧನ ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ.

    ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಕೇರೂರ ಗ್ರಾಮದ ಯೋಧ ದಸ್ತಗೀರ ಮುಲ್ಲಾ ತವರಿಗೆ ವಾಪಸ್ ಮರಳಿದ್ದು, ಕುಟುಂಬಸ್ಥರು ಸಂತಸ ವ್ಯಕ್ತಪಡಿಸಿದ್ದಾರೆ. ಕಾಬೂಲ್ ನಲ್ಲಿ ಭಾರತೀಯ ರಾಯಭಾರಿ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಯೋಧನನ್ನು ಭಾರತೀಯ ಸೇನೆ ಸುರಕ್ಷಿತವಾಗಿ ವಾಪಸ್ ಕರೆತಂದಿದೆ. ಇದನ್ನೂ ಓದಿ: 107 ಭಾರತೀಯರು ಸೇರಿ ಅಫ್ಘಾನಿಸ್ತಾನದಿಂದ 168 ಜನರ ಆಗಮನ

    ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಅಟ್ಟಹಾಸ ಹಿನ್ನೆಲೆ ದಸ್ತಗೀರ ಕುಟುಂಬಸ್ಥರು ಆತಂಕದಲ್ಲಿದ್ದರು. ಇದೀಗ ಸುರಕ್ಷಿತವಾಗಿ ವಾಪಸಾದ ಹಿನ್ನೆಲೆ ಯೋಧನ ಪತ್ನಿ, ಮಗು ಹಾಗೂ ತಾಯಿ ಸಂತಸ ವ್ಯಕ್ತಪಡಿಸಿದ್ದು, ಕೇರೂರು ಗ್ರಾಮಸ್ಥರಲ್ಲೂ ಹರ್ಷ ಮೂಡಿಸಿದೆ. ಅಗಸ್ಟ್ 16 ರಂದೇ ಅಪಘಾನಿಸ್ತಾನದಿಂದ ಯೋಧರನ್ನು ವಾಪಸ್ ಕರೆ ತರಲಾಗಿದ್ದು, ಸದ್ಯ ದೆಹಲಿಯಲ್ಲಿ ಯೋಧನನ್ನು ಕ್ವಾರಂಟೈನ್ ಮಾಡಲಾಗಿದೆ.

  • ಸೇವಾ ನಿವೃತ್ತಿ ಪಡೆದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..!

    ಸೇವಾ ನಿವೃತ್ತಿ ಪಡೆದ ಯೋಧನಿಗೆ ಗ್ರಾಮಸ್ಥರಿಂದ ಅದ್ಧೂರಿ ಸ್ವಾಗತ..!

    ಹುಬ್ಬಳ್ಳಿ: ಕಳೆದ 18 ವರ್ಷಗಳಿಂದ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ಸೇವಾ ನಿವೃತ್ತಿ ನಂತರ ಸ್ವಗ್ರಾಮಕ್ಕೆ ಆಗಮಿಸಿದ ಯೋಧನಿಗೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮಸ್ಥರು ಅದ್ಧೂರಿಯಾಗಿ ಸ್ವಾಗತಿಸಿದ್ದಾರೆ.

    ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಬಮ್ಮಿಗಟ್ಟಿ ಗ್ರಾಮದ ಯೋಧ ಮೆಹಬೂಬಸಾಬ್ ಬೆಲವಂತರವರು ಆಗಸ್ಟ್ 1ರಂದು ಸೇವಾ ನಿವೃತ್ತಿಯಾಗಿದ್ದು, ಬುಧವಾರ ಸೈನಿಕ ಮೆಹಬೂಬಸಾಬ್ ಸ್ವಗ್ರಾಮಕ್ಕೆ ಆಗಮಿಸಿದರು. ಯೋಧ ಗ್ರಾಮಕ್ಕೆ ಆಗಮಿಸುತ್ತಿರುವ ಮಾಹಿತಿ ತಿಳಿದ ಗ್ರಾಮಸ್ಥರಲ್ಲಿ ಸಂಭ್ರಮ ಮನೆ ಮಾಡಿತ್ತು. ಗ್ರಾಮದ ಮಾಜಿ ಸೈನಿಕರು ಮೆಹಬೂಬಸಾಬ್ ಅವರಿಗೆ ಸೆಲ್ಯೂಟ್ ಹೊಡೆದು ಗೌರವ ಸೂಚಿಸಿದರು. ನಂತರ ಗ್ರಾಮಸ್ಥರು, ಮಾಜಿ ಸೈನಿಕರು ಡೊಳ್ಳಿನ ಮೂಲಕ ಗ್ರಾಮದಲ್ಲಿ ಮೆರವಣಿಗೆ ಮಾಡಿ ಆತ್ಮೀಯವಾಗಿ ಸ್ವಾಗತ ಮಾಡಿದರು.

    ನಿವೃತ್ತ ಯೋಧ ಮೆಹಬೂಬ್ ಸಾಬ್ ಬೆಲವಂತರ ಮಾತನಾಡಿ, ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿದ್ದೇನೆ ಎಂಬ ಹೆಮ್ಮೆ ನನಗಿದೆ 2004 ರಿಂದ ರಾಂಚಿ, ಜಮ್ಮು ಕಾಶ್ಮಿರ, ರಾಜಸ್ಥಾನ, ತಬಾಂಗ್ ಸೇರಿದಂತೆ ವಿವಿಧೆಡೆ 17 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದೇನೆ ಎಂದರು. ನಿವೃತ್ತಿ ನಂತರ ಊರಿಗೆ ಆಗಮಿಸಿದಾಗ ದೇಶಭಕ್ತರು ಸ್ವಾಗತ ನೀಡಿದ್ದು ನಾನು ಸೇನೆಯಲ್ಲಿ ಸೇವೆ ಸಲ್ಲಿಸಿದ್ದಕ್ಕೆ ಧನ್ಯತೆ ಭಾವ ಮೂಡಿಸಿದೆ ಎಂದರು.

    ನಂತರ ಯೋಧನ ಮನೆಯ ಮುಂದೆ ಸ್ವಾಗತ ಕಾರ್ಯಕ್ರಮ ಆಯೋಜಿಸಿ ಮಾಜಿ ಸೈನಿಕರು, ಗ್ರಾಮ ಪಂಚಾಯತಿ ಸದಸ್ಯರು, ಸಂಘದ ಪದಾಧಿಕಾರಿಗಳು, ವಿವಿಧ ಸಂಘ-ಸಂಸ್ಥೆಗಳು, ದೇಶಾಭಿಮಾನಿಗಳು ಯೋಧ ಮೆಹಬೂಬಸಾಬ್ ಅವರನ್ನು ಸನ್ಮಾನಿಸಿದರು.

  • ಹೃದಯಾಘಾತದಿಂದ ಯೋಧ ಸಾವು- ಸಂಜೆ ಬಾದಾಮಿಗೆ ಪಾರ್ಥಿವ ಶರೀರ

    ಹೃದಯಾಘಾತದಿಂದ ಯೋಧ ಸಾವು- ಸಂಜೆ ಬಾದಾಮಿಗೆ ಪಾರ್ಥಿವ ಶರೀರ

    ಬಾಗಲಕೋಟೆ: ಅಮೃತಸರದಲ್ಲಿ ಬಾಗಲಕೋಟೆ ಜಿಲ್ಲೆಯ ಕರ್ತವ್ಯ ನಿರತ ಬಿಎಸ್‍ಎಫ್ ಯೋಧ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಬೇಲೂರು ಗ್ರಾಮದ 53 ವರ್ಷದ ಚಂದ್ರಶೇಖರ ಕಿನ್ನಾಳ ಸೋಮವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ವೇಳೆ ಆಸ್ಪತ್ರೆಗೆ ದಾಖಲಾಗಿಸಿತ್ತು. ಹೃದಯಾಘಾತದಿಂದ ಮೃತಪಟ್ಪಿರುವುದಾಗಿ ವೈದ್ಯರು ತಿಳಿಸಿದ್ದಾರೆ.

    31 ವರ್ಷದಿಂದ ಅವರು ಪಂಜಾಬ್ ರಾಜ್ಯದ ಅಮೃತಸರದ 183ರ ಬಿಎಸ್‍ಎಫ್ ಬಟಾಲಿಯನ್ ನಲ್ಲಿ ಸೇವೆ ಸಲ್ಲಿಸುತ್ತಿದ್ದರು. ಜುಲೈ 26ರಂದು ರಜೆಗೆಂದು ಸ್ವಗ್ರಾಮಕ್ಕೆ ಬಂದು ಕರ್ತವ್ಯಕ್ಕೆ ಮರಳಿದ್ದರು. ತಾಯಿ ಬಸಮ್ಮ, ಪತ್ನಿ ಶಿವಲೀಲಾ, ಪುತ್ರ ಅಭಿಷೇಕ್, ವಿಶ್ವನಾಥ್, ಸಹೋದರಿಯರು ಮೃತ ಯೋಧನಿಗಿದ್ದು, ಗ್ರಾಮಕ್ಕೆ ತಹಶೀಲ್ದಾರ್ ಎಸ್.ಎಸ್.ಇಂಗಳೆ, ಸಿಪಿಐ ರಮೇಶ್ ಹಾನಾಪೂರ, ಪಿಎಸ್‍ಐ ನೇತ್ರಾವತಿ ಪಾಟೀಲ ಭೇಟಿ ನೀಡಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು.

    ಇವತ್ತು ಬೆಳಗ್ಗೆ 9 ಗಂಟೆಗೆ ಬೆಂಗಳೂರಿಗೆ ಮೃತ ಯೋಧನ ಪಾರ್ಥಿವ ಶರೀರ ಆಗಮಿಸಿದ್ದು, ರಾತ್ರಿ ಸ್ವಗ್ರಾಮ ಬೇಲೂರಿಗೆ ಬರಲಿದೆ. ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಆವರಣದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.

  • ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಕಲಬುರಗಿ ಯೋಧ ಹುತಾತ್ಮ

    ಉಗ್ರರೊಂದಿಗಿನ ಗುಂಡಿನ ಕಾಳಗದಲ್ಲಿ ಕಲಬುರಗಿ ಯೋಧ ಹುತಾತ್ಮ

    ಕಲಬುರಗಿ: ಬಾಂಗ್ಲಾ ಗಡಿಯಲ್ಲಿ ಉಗ್ರರೊಂದಿಗೆ ನಡೆದ ಗುಂಡಿನ ಕಾಳಗದಲ್ಲಿ ಜಿಲ್ಲೆಯ ಆಳಂದ ತಾಲೂಕಿನ ಚಿಂಚನಸೂರ ಯೋಧ ರಾಜಕುಮಾರ.ಎಂ.ಮಾವಿನ ಅವರು ಇಂದು ಹುತ್ಮಾತರಾಗಿದ್ದಾರೆ.

    ತ್ರಿಪುರಾ ರಾಜ್ಯದ ಭಾರತ ಮತ್ತು ಬಾಂಗ್ಲಾ ಗಡಿಯಲ್ಲಿರುವ ಧಲಾಯಿ ಪ್ರದೇಶದಲ್ಲಿ ಗಸ್ತು ನಡೆಸುತ್ತಿದ್ದ ಸಮಯದಲ್ಲಿ ಉಗ್ರರು ನಡೆಸಿದ ಗುಂಡಿನ ದಾಳಿ ವೇಳೆ ಎದೆಗೆ ಗುಂಡು ತಾಕಿ ಸ್ಥಳದಲ್ಲಿಯೇ ಹುತಾತ್ಮರಾದರು ಎನ್ನಲಾಗಿದೆ.

    ವೀರ ಯೋಧನ ಸಾವಿನ ಸುದ್ದಿ ತಿಳಿದು ಗ್ರಾಮದಲ್ಲಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಯೋಧನ ಪಾರ್ಥಿವ ಶರೀರ ಗುರುವಾರ ಗ್ರಾಮಕ್ಕೆ ಆಗಮಿಸುವ ಸಾಧ್ಯತೆಯಿದೆ. ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.

  • ಯೋಧರ ನೆನಪಿಗಾಗಿ ಬೆಂಗಳೂರಿನಲ್ಲಿ ಸೈನ್ಯ ವನ – ಯುವಾ ಬ್ರಿಗೇಡ್ ಅಭಿಯಾನ

    ಯೋಧರ ನೆನಪಿಗಾಗಿ ಬೆಂಗಳೂರಿನಲ್ಲಿ ಸೈನ್ಯ ವನ – ಯುವಾ ಬ್ರಿಗೇಡ್ ಅಭಿಯಾನ

    ಬೆಂಗಳೂರು: ರಾಷ್ಟ್ರ ರಕ್ಷಣೆಗಾಗಿ ಪ್ರಾಣ ಕೊಟ್ಟ ಕರ್ನಾಟಕದ ಯೋಧರ ನೆನಪಿಗಾಗಿ ಯುವಾ ಬ್ರಿಗೇಡ್ ಇಂದು ಮೈಲಸಂದ್ರದಲ್ಲಿ ಸಸಿ ನೆಡುವ ಸೈನ್ಯ ವನ ಅಭಿಯಾನ ಪ್ರಾರಂಭಿಸಿದೆ.

    50 ಸೈನಿಕ ದಂಪತಿ ಹಾಗೂ ಯುವಾ ಬ್ರಿಗೇಡ್ ಕಾರ್ಯಕರ್ತರು ಮೈಲಸಂದ್ರದ ಪಿಳೇಕಮ್ಮ ದೇಗುಲದ ಬಳಿ ಸಸಿ ನೆಟ್ಟು ಅಭಿಯಾನಕ್ಕೆ ಚಾಲನೆ ನೀಡಿದರು. ಈ ಸಂದರ್ಭ ಯುವಾ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ಸ್ವಾತಂತ್ರಕ್ಕೆ 75 ವರ್ಷ ತುಂಬುತ್ತಿರುವ ಸಂದರ್ಭದಲ್ಲಿ ಕರ್ನಾಟಕದ ಹುತಾತ್ಮ ಯೋಧರ ಹೆಸರಿನಲ್ಲಿ ಕಾಡೊಂದನ್ನು ನಿರ್ಮಿಸುವ ಯೋಜನೆ ಇದು ಎಂದು ಖುಷಿ ಹಂಚಿಕೊಂಡರು. ಇದನ್ನೂ ಓದಿ: ಸಿಎಂ ಬೊಮ್ಮಾಯಿ 6-7 ತಿಂಗಳು ಅಧಿಕಾರ, 2022ರಲ್ಲಿ ಗಡ್ಡಧಾರಿ ಹೊಸ ಮುಖ್ಯಮಂತ್ರಿ: ಮೈಲಾರ ದೈವವಾಣಿ

    ಸೈನ್ಯ ವನದ ವಿಶೇಷ ಏನೆಂದರೆ ಈ ಕಾಡಿನಲ್ಲಿ ಪ್ರತಿ ಮರಗಳಿಗೂ ಹುತಾತ್ಮ ಯೋಧರ ಹೆಸರಿಡಲಿದ್ದು, ಸ್ಮಾರಕಗಳು ಸೈನ್ಯಕ್ಕೆ ಸೇರಿದ ಮಾಹಿತಿಗಳನ್ನು ಒಳಗೊಂಡಿರಲಿದೆ. ಮುಂದೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಸೈನ್ಯವನವನ್ನು ನಿರ್ಮಿಸುವ ಯೋಜನೆ ಯುವಾ ಬ್ರಿಗೇಡಿನದ್ದಾಗಿದೆ ಎಂದು ಅಭಿಪ್ರಾಯ ಹಂಚಿಕೊಂಡರು.